ಅಮೃತ ಸೋಮೇಶ್ವರ[೧] (Amruta Someshvara) ತುಳುನಾಡಿನ ಒರ್ವ ಸಾಹಿತಿ[೨]. ಹಿರಿಯ ಜಾನಪದ ವಿದ್ವಾಂಸ.[೩] ಕಾವ್ಯ, ಸಣ್ಣಕತೆ,[೪] ನಾಟಕ, ಯಕ್ಷಗಾನ, ವಿಮರ್ಶೆ ಮತ್ತು ಜಾನಪದ ಕ್ಷೇತ್ರದಲ್ಲಿ ವಿಶೇಷವಾಗಿ ಕೆಲಸ ಮಾಡಿದವರು[೫].

ಅಮೃತ ಸೋಮೇಶ್ವರ

ಪರಿಚಯಸಂಪಾದಿಸಿ

ಹುಟ್ಟುಸಂಪಾದಿಸಿ

 1. ಅಮ್ರತ ಸೋಮೇಶ್ವರರು ಮಂಗಳೂರು ಸಮೀಪದ ಕೋಟೆಕಾರು ಗ್ರಾಮದ ಅಡ್ಕ ಹುಟ್ಟಿರುವರು.

ವಿದ್ಯಾಭ್ಯಾಸಸಂಪಾದಿಸಿ

 1. ಕೇಟೆಕಾರಿನ ಸ್ಟೆಲ್ಲ ಮೇರಿಸ್ ಕಾನ್ವೆಂಟ್ ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಅನಂತರ ಇಲ್ಲಿನ ಆನಂದಾಶ್ರಮದಲ್ಲಿ ಪ್ರೌಢಶಾಲೆ ವಿಧ್ಯಾಭ್ಯಾಸ ಮಾಡಿದರು. [ಅಲೋಶಿಯಸ್ ಕಾಲೇಜಿ]ನಲ್ಲಿ ಪದವಿ ಅಭ್ಯಾಸ ಮಾಡಿದರು. ಖಾಸಗಿಯಾಗಿ ಓದಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ. ಎ. ಪದವಿ ಪಡೆದರು. ಆರಂಭದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಅನಂತರ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಎರಡು ವರ್ಷ ಕೆಲಸ ಮಾಡಿದರು. ೧೯೬೭ರಿಂದ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯವನ್ನು ನಿರ್ವಹಿಸಿ ೧೯೯೩ರಲ್ಲಿ ನಿವ್ರತ್ತರಾದರು. ನಿವ್ರತ್ತಿಯ ನಂತರ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಆಹ್ವಾನಿತ ಪ್ರಾಧ್ಯಾಪಕರಾಗಿ ಕೆಲವು ಕಾಲ ಕಾರ್ಯನಿರ್ವಹಿಸಿದ್ದಾರೆ.

ಸಾಹಿತ್ಯ ಸೇವೆಸಂಪಾದಿಸಿ

 1. ಕನ್ನಡ ಸಂಘ, ಯಕ್ಷಗಾನ ಸಂಘ ಇಂತಹ ಕೂಟಗಳನ್ನು ಆರಂಭಿಸಿ ತುಳು ಭಾಷೆಯ ಬೆಳವಣಿಗೆಗಾಗಿ ಶ್ರಮಿಸಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದ ಅಮ್ರತರು ತುಳುನಾಡಿನ ಸಂಸ್ಕ್ರತಿ ಮತ್ತು ಕಲೆಯ ಬಗೆಗೆ ವಿಶೇಷ ಒಲವುಳ್ಳವರು. ಅವರ ಮೊದಲ ಕ್ರತಿ 'ಎಲೆಗಿಳಿ' ಎಂಬ ಸಣ್ಣಕತೆಗಳ ಸಕಲನ ೧೯೫೭ರಲ್ಲಿ ಪ್ರಕಟವಾಯಿತು. ರುದ್ರಶಿಲೆ ಸಾಕ್ಷಿ , ಕೆಂಪು ನೆನಪು ಅವರ ಇನ್ನೆರಡು ಸಂಕಲನಗಳು ಪ್ರಕಟವಾದವು. ವನಮಾಲೆ, ಭ್ರಮಣ ಉಪ್ಪು ಗಾಳಿ ಮೊದಲಾದ ಕವನ ಸಂಕಲನ, ತೀರದ ತೆರೆ ಕಾದಂಬರಿ, ಯಕ್ಷಗಾನ ಕ್ರತಿ ಸಂಪುಟ, ತುಳು ಪಾಡ್ದನದ ಕಥೆಗಳು, ಅವಿಲು, ತುಳು ಬದುಕು, ಯಕ್ಷಗಾನ ಹೆಜ್ಜೆಗುರುತು, ಭಗವತಿ ಆರಾಧನೆ, ಮೋಯ-ಮಲೆಯಾಳ ನಿಘಟು ಮೊದಲಾದ ಕ್ರತಿಗನ್ನು ಪ್ರಕಟಿಸಿದ್ದಾರೆ. ತುಳುವಿನಲ್ಲೂ ಬರೆಯಬಲ್ಲ ಅಮೃತರು 'ತಂಬಿಲ', 'ರಂಗಿತ' ಕವನ ಸಂಗ್ರಹ, 'ಗೋಂದೋಳು', 'ರಾಯ ರಾವುತೆ' ಮೊದಲಾದ ನಾಟಕಗಳನ್ನು ಪ್ರಕಟಿಸಿದವರು. ಸಾಕಷ್ಟು ಧ್ವನಿಸುರುಳಿಗಳಿಗೆ ಸಾಹಿತ್ಯವನ್ನು ಒದಗಿಸಿದ ಹಿರಿಮೆ ಇವರದು.

ಅಮೃತರು ಬರೆದ ಕನ್ನಡ ಕೃತಿಗಳುಸಂಪಾದಿಸಿ

ಸಣ್ಣ ಕಥಾ ಸಂಕಲನಸಂಪಾದಿಸಿ

 1. ರುದ್ರಶಿಲೆ ಸಾಕ್ಷಿ
 2. ಕೆಂಪು ನೆನಪು
 3. ಎಲೆಗಿಳಿ
 4. ಮಾನವತೆ ಗೆದ್ದಾಗ ಮತ್ತು ಇತರ ಕಥೆಗಳು.

ಕವನ ಸಂಕಲನಸಂಪಾದಿಸಿ

 1. ವನಮಾಲೆ(೧೯೭೫)
 2. ಭ್ರಮಣ(೧೯೭೪)
 3. ಜ್ಯೋತಿ ದರ್ಶನವಾಯಿತು(೧೯೮೯)
 4. ಉಪ್ಪುಗಾಳಿ(೧೯೯೨)
 5. ಕರೆಗಾಳಿ

ಕಾದಂಬರಿಸಂಪಾದಿಸಿ

 1. ತೀರದ ತೆರೆ(೧೯೭೪)

ರೇಡಿಯೋ ರೂಪಕಸಂಪಾದಿಸಿ

 1. ವಿಶ್ವರೂಪ(೧೯೮೨)

ನಾಟಕ ಕೃತಿಗಳುಸಂಪಾದಿಸಿ

 1. ಕೋಟಿ ಚೆನ್ನಯ್ಯ(೧೯೮೨)
 2. ವೀರರಾಣಿ ಅಬ್ಬಕ್ಕದೇವಿ(೨೦೧೫)
 3. ಗೋಂದೋಳು(೧೯೮೨)

ನೃತ್ಯರೂಪಕಸಂಪಾದಿಸಿ

 1. ಸಪ್ತ ಮಾತೃಕೆಯರು(೧೯೯೦)
 2. ಬಲಿ ಚಕ್ರವರ್ತಿ(೧೯೯೦)
 3. ನಿಸರ್ಗ ವಿಜಯ(೧೯೯೨)
 4. ಸಂಭವಾಮಿ ಯುಗೇಯುಗೇ(೧೯೯೨)
 5. ಸಹನಾ ಸಂದೇಶ(೧೯೯೫)
 6. ನಾಟ್ಯವೇದ
 7. ಕರ್ಣವೇದ
 8. ಛಲದಂಕೆ ಅಂಬೆ
 9. ಭರತಾಗಾಥಾ

ವ್ಯಕ್ತಿಚಿತ್ರಸಂಪಾದಿಸಿ

 1. ಬಡೆಕ್ಕಿಲ ವೆಂಕಟರಮಣ ಭಟ್ಟರ ಜೀವನ ಮತ್ತು ಕೃತಿಗಳು.
 2. ಮಹನೀಯ ಚೇತನಗಳು.

ಸಹ ಸಂಪಾದನೆಸಂಪಾದಿಸಿ

 1. ನಾಟ್ಯಮೋಹನ
 2. ಆಮ್ಮೇಂಬಳ ಆರುವತ್ತು.
 3. ಉಳ್ಳಾಲ ಇತಿ ಆದಿ

ಸಂಪಾದನೆಸಂಪಾದಿಸಿ

 1. ಸುಂದರಕಾಂಡ
 2. ಅಬ್ಬಕ್ಕ ಸಂಕಥನ
 3. ವಜ್ರಕಾಯ
 4. ಯಕ್ಷಗಾನಗಂಗೋತ್ರಿ

ಸ್ವತಂತ್ರ ಗಾದೆಗಳುಸಂಪಾದಿಸಿ

 1. ಸಿಂಗಾರ ಗಾದೆಗಳು(೧೯೮೭)

ಕುಚೋದ್ಯ ಕೋಶಸಂಪಾದಿಸಿ

 1. ಆಪಾರ್ಥಿನೀ(೧೯೮೭)

ನವಸಾಕ್ಷರರಿಗಾಗಿಸಂಪಾದಿಸಿ

 1. ಕಲ್ಲುರ್ಟಿ ಕಲ್ಕುಡ
 2. ಉತ್ಸವಗಳು
 3. ಯಕ್ಷಗಾನಗಳು

ಸಂಸ್ಕೃತಿ ಚಿಂತನೆಸಂಪಾದಿಸಿ

ಭಗವತಿ ಆರಾಧನೆ

ಅಂಕಣ ಲೇಖನ ಸಂಕಲನಸಂಪಾದಿಸಿ

 1. ದೀಪದ ಕೆಳಗೆ.

ಶಬ್ದಕೋಶಸಂಪಾದಿಸಿ

 1. ಮೋಯ ಮಲಯಾಳ ಕನ್ನಡ ಪದಕೋಶ.

ವಚನ ಸಾಹಿತ್ಯಸಂಪಾದಿಸಿ

 1. ಹೃದಯ ವಚನಗಳು.

ಯಕ್ಷಗಾನಗಳುಸಂಪಾದಿಸಿ

 1. ಅಮರಶಿಲ್ಪ(೧೯೭೮)
 2. ಸಹಸ್ರ ಕವಚ ಮೋಕ್ಷ(೧೯೮೧)
 3. ಕಾಯಕಲ್ಪ(೧೯೮೨)
 4. ಮಹಾಶೂರ ಭೌಮಾಸುರ
 5. ಮಹಾಕಲಿ ಮಗದೇಂದ್ರ
 6. ತ್ರೀಪುರ ದಹನ
 7. ಪೌಂಡ್ರಕ ವಾಸುದೇವ
 8. ಆಚಾರ್ಯ ವಿಶ್ವರೂಪ
 9. ಶಬ್ಧವೇದಿ
 10. ಆದಿಕವಿ ವಾಲ್ಮೀಕಿ
 11. ದಂಭದಮನ
 12. ಗುರುತೇಜ
 13. ಅಂಧಕಮೋಕ್ಷ
 14. ಘೋರಮಾರಕ
 15. ವೀರಕಲ್ಕುಡ
 16. ಕಾಯಕಲ್ಪ
 17. ಗಂಗಾವತರಣ.
 18. ಭುವನಭಾಗ್ಯ
 19. ವಾತಾಪಿ ಜೀರ್ಣೋಭವ
 20. ವಂಶವಾಹಿನಿ
 21. ಚಂದ್ರಮತಿ ಸ್ವಯಂವರ
 22. ಪಾದುರ ಪ್ರದಾನ

ಧ‍್ವನಿ ಸುರುಳಿಸಂಪಾದಿಸಿ

 1. ಶ್ರೀ ಭಗವತಿ ಭಕ್ತಿ ಗೀತೆಗಳು.
 2. ಧರ್ಮಜ್ಯೋತಿ.
 3. ಶರಣು ಶಭರೀಶ
 4. ಕದಳೀವನ
 5. ಗೀತಜ್ಯೋತಿ.
 6. ಪ್ರಮೋದ ಪ್ರಸಾದ
 7. ಶ್ರೀ ನಾರಾಯಣ ಗುರು ಸ್ತವನಾಂಜಲಿ.
 8. ಶ್ರೀ ಭಗವತಿ ಭಕ್ತಿಸುಮಾಂಜಲಿ.
 9. ಶ್ರೀ ವೈಷ್ಣೋದೇವಿ ದಿವ್ಯಾಂಜಲಿ.

ಜನಾಂಗ ಪರಿಚಯಸಂಪಾದಿಸಿ

 1. ಕೊರಗರು

ತುಳು ಕೃತಿಗಳುಸಂಪಾದಿಸಿ

ಕವನ ಸಂಗ್ರಹಸಂಪಾದಿಸಿ

 1. ತಂಬಿಲ(೧೯೮೪)
 2. ರಂಗೀತ(೧೯೮೨)

ತುಳು ನಾಟಕ ಸಂಪುಟಗಳುಸಂಪಾದಿಸಿ

 1. ತಂಬಿಲ
 2. ರಂಗೀತ
 3. ಗೋಂದೊಲು
 4. ರಾಯರಾವುತೆ
 5. ತುಳು ನಾಟಕ ಸಂಪುಟ
 6. ಕೊಡಿಮರ
 7. ತುಳುನಾಡ ಕಲ್ಕುಡೆ
 8. ಆಟೊ ಮುಗಿಂಡ್
 9. ಪ್ರೇಮ ಪ್ರಸಾದ.
 10. ಉಳ‍್ಳಾಲೊದ ವೀರ ರಾಣಿ ಅಬ್ಬಕ್ಕಾ ದೇವಿ.

ಅನುವಾದಸಂಪಾದಿಸಿ

 1. ಕಲೇವಾಲ.

ಪಾಡ್ದನ ಸಂಗ್ರಹಸಂಪಾದಿಸಿ

 1. ಬಾಮಕುಮಾರ ಸಂದಿ.
 2. ತುಳುಪಾಡ್ದನ ಸಂಗ್ರಹ.

ಸ್ವತಂತ್ರ ಗಾದೆಗಳುಸಂಪಾದಿಸಿ

 1. ಪೊಸಗಾದೆಲು

ನೃತ್ಯರೂಪಕಸಂಪಾದಿಸಿ

 1. ಎಳುವೇರ್ ದೆಯ್ಯಾರ್
 2. ತುಳುವಾಲ ಬಲಿಯೇಂದ್ರ

ರೇಡಿಯೊ ರೂಪಕಸಂಪಾದಿಸಿ

 1. ಮದನಗ
 2. ಪರಿಂಜಗುತ್ತು ದೇವಪೂಂಜ
 3. ಕೋಟಿ ಚೆನ್ನಯ್ಯ

ಅಭಿನಂದನಾ ಗ್ರಂಥಸಂಪಾದಿಸಿ

 1. ಸಿರಿ ಪನ್ಪಿ ಅಭಿನಂಧನ ಗ್ರಂತೊನು ಅರೆನ ವಿದ್ಯಾರ್ಥಿಲು, ಅಬಿಮಾನಿಲು ಅರೆಗ್ ಸಮರ್ಪಣೆ ಮಲ್ತ್ ದೆರ್.

ಅನುವಾದಿತ ನಾಟಕಸಂಪಾದಿಸಿ

 1. ಜೋಕುಮಾರಸ್ವಾಮಿ[೬]

ತುಳು ಜಾನಪದೊ ಲೇಖನೊಲೆ ಬೂಕುಲುಸಂಪಾದಿಸಿ

 1. ಅವಿಲು(೧೯೭೮)
 2. ತುಳು ಬದುಕು(೧೯೮೪)
 3. ತುಳು ಪಾಡ್ದನ ಕಥೆಗಳು(೧೯೬೨)
 4. ಬಾಮಾಕುಮಾರ ಸಂದಿ(೧೯೭೮)
 5. ಕೊರಗರು(೧೯೭೮)
 6. ತುಳು ಸಂಸ್ಕೃತಿಯ ಮುಂದಿನ ಸಂಶೋಧನೆ[೭](೧೯೧೯೯೫)
 7. ತುಳುಜಾನಪದದ ಕೆಲವು ನೋಟ(೨೦೦೭)

ಯಕ್ಷಗಾನ ಗ್ರಂಥಗಳುಸಂಪಾದಿಸಿ

 1. ಯಕ್ಷಗಾನ ಕೃತಿ ಸಂಪುಟ
 2. ಘೋರ ಮಾರಕ (ಏಡ್ಸ್ ಸಂಬಂಧಿ ಯಕ್ಷಗಾನ)
 3. ಯಕ್ಷಾಂದೋಳ
 4. ಯಕ್ಷತರು
 5. ಯಕ್ಷಗಾನ ಸಹಸ್ರಕವಚಮೋಕ್ಷ
 6. ಯಕ್ಷಗಾನ ಕಾಯಲ್ಪ
 7. ಯಕ್ಷಗಾನ ಅಮರವಾಹಿನಿ
 8. ಯಕ್ಷಗಾನ ತ್ರಿಪುರ ಮಥನ
 9. ಅರುಣಸಾರಥ್ಯ ಮತ್ತು ಇತರ ಯಕ್ಷಗಾನ ಪ್ರಸಂಗಗಳು
 10. ಯಕ್ಷಗಾನ ಛಾಯಾವತರಣ ಮತ್ತು ಇತರ ಪ್ರಸಂಗಗಳು
 11. ಯಕ್ಷಗಾನ ಅಮರವೀರದ್ವಯ ಕೋಟಿ ಚೆನ್ನಯ
 12. ಮಾರಿಷಾ ಕಲ್ಯಾಣ(೨೦೦೦)
 13. ಯಕ್ಷಗಾನದ ಹೆಜ್ಜೆಗುರುತುಗಳು
 14. ಯಕ್ಷಗಾನ ರಂಗಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಕೊಡುಗೆ
 15. ಮಹಾಕಲಿ ಮಗಧೇಂದ್ರ

ಯಕ್ಷಗಾನ ಪ್ರಸಂಗಗಳುಸಂಪಾದಿಸಿ

 1. ಅಮರಶಿಲ್ಪಿ ವೀರಕಲ್ಕುಡ(೧೯೭೮)
 2. ಸಹಸ್ತ ಕವಚ ಮೋಕ್ಷ(೧೯೮೧)
 3. ಕಾಯಕಲ್ಪ(೧೯೮೨)
 4. ಅಮರವಾಹಿನಿ(೧೯೮೩)#

ತುಳುಭಾವಗೀತೆಸಂಪಾದಿಸಿ

 1. ಪನ್ನೀರ್
 2. ಸಿಂಗಾರ
 3. ಆಟಿಕಳೆಂಜ

ಭಕ್ತಿಗೀತೆಗಳುಸಂಪಾದಿಸಿ

 1. ಮಾಯೊದಪುರಲ್
 2. ಮಲೆತ ತುಡರ್
 3. ಕ್ಷೇತ್ರ ದರ್ಶನ
 4. ಸುಗಿಪು ದುನಿಪು
 5. ರಂಗನ್ ತೂಯನದೆ
 6. ಪೂಪೂಜನೆ
 7. ಪೂ ಪರಂದ್

ಇತರ ಪುಸ್ತಕಗಳುಸಂಪಾದಿಸಿ

 1. ಎಳುವೆರ್ ದೆಯ್ಯಾರ್ ಬೊಕ್ಕ ಇತರ ನೃತ್ಯ ರೂಪಕೊ
 2. ಅಪಾರ್ಥಿನಿ ಅರ್ಥಕೋಶ
 3. ಅಮೃತ ಸೋಮೇಶ್ವರರಿಗೆ ಮಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನು ಅವರ ಸಾಹಿತ್ಯದ ಕೆಲಸಕ್ಕಾಗಿ ನೀಡಿದೆ.

ಪ್ರಶಸ್ತಿಗಳುಸಂಪಾದಿಸಿ

ಅಮೃತರಿಗೆ ಅನೇಕ ಪ್ರಶಸ್ತಿಗಳು ಸಂದಿವೆ.

 1. ಕರ್ನಾಟಕ ಸಾಹಿತ್ಯ ಅಕಾಡೆಮಿ
 2. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ
 3. ರಾಜ್ಯೋತ್ಸವ ಪ್ರಶಸ್ತಿ
 4. ಕರ್ನಾಟಕ ಜಾನಪದ ಹಾಗೂ ಯಕ್ಷಾನ ಅಕಾಡೆಮಿ ಪ್ರಶಸ್ತಿಪುರಸ್ಕ್ರತರು.
 5. ತಲ್ಲೂರು ಕನಕಾ -ಅಣ್ಣಯ್ಯ ಶೆಟ್ಟಿ ಪ್ರಶಸ್ತಿ[೮]
 6. ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಪ್ರಶಸ್ತಿ[೯] [೧೦]
 7. ಹಲಸಂಗಿ ಗೆಳೆಯರ ಪ್ರತಿಷ್ಠಾನ ಪ್ರಶಸಿ[೧೧]
 8. ಕೇಂದ್ರ ಸಾಹಿತ್ಯ ಅಕಾಡೆಮಿಯ 2016ನೇ ಸಾಲಿನ ‘ಭಾಷಾ ಸಮ್ಮಾನ್‌’ ಪ್ರಶಸ್ತಿಗೆ ಭಾಜನರಾಗಿದ್ದಾರೆ[೧೨].[೧೩] ಪ್ರಶಸ್ತಿಯು ರೂ.1 ಲಕ್ಷ ನಗದು ಹಾಗೂ ತಾಮ್ರ ಪದಕ ಒಳಗೊಂಡಿದೆ. [೧೪]
 9. ಕೀರಿಕ್ಕಾಡು ಪ್ರಶಸ್ತಿ[೧೫]
 10. ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಶಸ್ತಿ.[೧೬]

ಹೊರಗಿನ ಕೊಂಡಿಸಂಪಾದಿಸಿ

ಉಲ್ಲೇಖಸಂಪಾದಿಸಿ

 1. https://archive.is/OZUnb
 2. http://tuluacademy.org/kn/1994-1995/
 3. http://kanaja.in/archives/dinamani/
 4. http://yaksharangabykateelusitla.blogspot.com/2016/01/ambrosia-sprinkling-of-da-amrutha.html
 5. https://www.udayavani.com/tags/%E0%B2%AA%E0%B3%8D%E0%B2%B0%E0%B3%8A-%E0%B2%85%E0%B2%AE%E0%B3%83%E0%B2%A4-%E0%B2%B8%E0%B3%8B%E0%B2%AE%E0%B3%87%E0%B2%B6%E0%B3%8D%E0%B2%B5%E0%B2%B0
 6. https://www.udayavani.com/taxonomy/term/5347/1
 7. http://shodhganga.inflibnet.ac.in/bitstream/10603/131897/5/05_chapter%201.pdf
 8. https://www.google.co.in/?gfe_rd=cr&ei=sHh9Vd_TMOTI8Aev7L_wCQ#q=ಅಮೃತ+ಸೋಮೇಶ್ವರರಿಗೆ+ಪ್ರಶಸ್ತಿ
 9. http://kannadigaworld.com/kannada/167977.html
 10. http://v4news.com/ಸಾಹಿತಿ-ಅಮೃತ-ಸೋಮೇಶ್ವರರಿಗೆ/
 11. http://medianine.in/kasaragod.php?id=2767
 12. http://www.kannadaprabha.com/karnataka/sahitya-akademi-bhasha-samman-for-someshwar/301114.html
 13. http://themangaloremirror.in/dr-amrutha-someshwara-award/
 14. ಡಾ.ಅಮೃತ ಸೋಮೇಶ್ವರ್‌ಗೆ ಭಾಷಾ ಸಮ್ಮಾನ್‌;ಪ್ರಜಾವಾಣಿ ವಾರ್ತೆ;31 Aug, 2017
 15. http://www.bayalata.com/?1~427~%E0%B2%AE%E0%B2%BE%E0%B2%82%E0%B2%AC%E0%B2%BE%E0%B2%A1%E0%B2%BF%E0%B2%AF%E0%B2%B5%E0%B2%B0%E0%B2%BF%E0%B2%97%E0%B3%86%20%E0%B2%95%E0%B3%80%E0%B2%B0%E0%B2%BF%E0%B2%95%E0%B3%8D%E0%B2%95%E0%B2%BE%E0%B2%A1%E0%B3%81%20%E0%B2%B6%E0%B2%A4%E0%B2%AE%E0%B2%BE%E0%B2%A8%E0%B3%8B%E0%B2%A4%E0%B3%8D%E0%B2%B8%E0%B2%B5%20%E0%B2%AA%E0%B3%81%E0%B2%B0%E0%B2%B8%E0%B3%8D%E0%B2%95%E0%B2%BE%E0%B2%B0,%20%E0%B2%A1%E0%B2%BE%7C%20%E0%B2%85%E0%B2%AE%E0%B3%83%E0%B2%A4%20%E0%B2%B8%E0%B3%8B%E0%B2%AE%E0%B3%87%E0%B2%B6%E0%B3%8D%E0%B2%B5%E0%B2%B0%20%E0%B2%85%E0%B2%B5%E0%B2%B0%E0%B2%BF%E0%B2%97%E0%B3%86%20%E0%B2%95%E0%B3%80%E0%B2%B0%E0%B2%BF%E0%B2%95%E0%B3%8D%E0%B2%95%E0%B2%BE%E0%B2%A1%E0%B3%81%20%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF%20-&SearchText=
 16. http://avadhimag.com/?p=212120