ಜಿ.ಎಚ್.ನಾಯಕ ಎಂದು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿರುವ ವಿಮರ್ಶಕರಾದ ಗೋವಿಂದರಾಯ ಹಮ್ಮಣ್ಣ ನಾಯಕ . ಅವರು ೧೯೩೫ ಸೆಪ್ಟಂಬರ ೧೮ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸೂರ್ವೆ ಗ್ರಾಮದಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಮುಂದೆ ಪ್ರಾಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಜೀವನದಲ್ಲಿರುವ ಇವರು ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದ ನಾಯಕರು ದಿನಾಂಕ ೨೬ ಮೇ ೨೦೨೩ರಂದು ನಿಧನ ಹೊಂದಿದರು.

ಜಿ.ಎಚ್.ನಾಯಕ
ಜಿ.ಎಚ್.ನಾಯಕ'
ಜನನಸೆಪ್ಟಂಬರ್ 18, 1935
ಸೂರ್ವೆ,ಅಂಕೋಲ.
ಮರಣಮೇ ೨೬, ೨೦೨೩
ಮೈಸೂರು
ವೃತ್ತಿಕವಿ, ಬರಹಗಾರ, ವಿಮರ್ಶಕರು , ಪ್ರಾಧ್ಯಾಪಕ.
ರಾಷ್ಟ್ರೀಯತೆಕರ್ನಾಟಕ ,ಭಾರತೀಯ.
ಕಾಲ೨೦-೨೧ನೆಯ ಶತಮಾನ
ವಿಷಯಕನ್ನಡ ಭಾಷೆ

ಕೃತಿಗಳು ಬದಲಾಯಿಸಿ

 1. ಸಮಕಾಲೀನ (೧೯೭೩)
 2. ಅನಿವಾರ್ಯ (೧೯೮೦)
 3. ನಿರಪೇಕ್ಷೆ (೧೯೮೪)
 4. ನಿಜದನಿ (೧೯೮೮)
 5. ವಿನಯ ವಿಮರ್ಶೆ (೧೯೯೧)
 6. ಸಕಾಲಿಕ (೧೯೯೫)
 7. ಗುಣ ಗೌರವ (೨೦೦೨)
 8. ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ (೨೦೦೨)
 9. ಕೃತಿ ಸಾಕ್ಷಿ (೨೦೦೬)
 10. ಸ್ಥಿತಿ ಪ್ರಜ್ಞೆ (೨೦೦೭)
 11. ಮತ್ತೆ ಮತ್ತೆ ಪಂಪ (೨೦೦೮)
 12. ಸಾಹಿತ್ಯ ಸಮೀಕ್ಷೆ (೨೦೦೯)
 13. ಉತ್ತರಾರ್ಧ (೨೦೧೧)

ಸಂಪಾದನೆ ಬದಲಾಯಿಸಿ

 1. ಕನ್ನಡ ಸಣ್ಣಕಥೆಗಳು
 2. ಹೊಸಗನ್ನಡ ಕವಿತೆಗಳು
 3. ಸಂವೇದನೆ (ಅಡಿಗರ ಗೌರವ ಗ್ರಂಥ)
 4. ಶ್ರೀ ರಾಮಾಯಣ ದರ್ಶನಂ ಕುವೆಂಪು ಸ್ವಹಸ್ತಾಕ್ಷರ ಪ್ರತಿ
 5. ಶತಮಾನದ ಕನ್ನಡ ಸಾಹಿತ್ಯ (ಸಂಪುಟ - ೧.೨)

ಆತ್ಮಕಥನ ಬದಲಾಯಿಸಿ

 • ಬಾಳು

ಪ್ರಶಸ್ತಿಗಳು ಬದಲಾಯಿಸಿ

 • ಉತ್ತರಾರ್ಧ ಕೃತಿಗೆ ೨೦೧೪ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ .[೧]
 • ನಿರಪೇಕ್ಷ ವಿಮರ್ಶಾ ಕೃತಿಗೆ 'ಕರ್ನಾಟಕ ಸಾಹಿತ್ಯ ಅಕಾಡೆಮಿ'ಯ ಪ್ರಶಸ್ತಿ.
 • ನಿಜದನಿ ವಿಮರ್ಶಾ ಕೃತಿಗೆ 'ವಿ.ಎಂ.ಇನಾಂದಾರ ಸ್ಮಾರಕ ಬಹುಮಾನ' ಲಭಿಸಿವೆ.
 • ಪಂಪ ಪ್ರಶಸ್ತಿ .[೨]

ಉಲ್ಲೇಖಗಳು ಬದಲಾಯಿಸಿ