ಸ್ವಾಮಿ ಪೊನ್ನಾಚಿ
ಸ್ವಾಮಿ ಪೊನ್ನಾಚಿ ಎಂದೇ ಗುರುತಿಸಿಕೊಂಡಿರುವ, ಕನ್ನಡ ಭಾಷೆಯಲ್ಲಿ ಬರೆಯುವ ಕಥೆಗಾರ ಮತ್ತು ಕವಿ
ಕೆ. ಎಸ್. ಮಹದೇವಸ್ವಾಮಿ (ಜನನ:೧೯೮೬), ಸ್ವಾಮಿ ಪೊನ್ನಾಚಿ ಎಂದೇ ಗುರುತಿಸಿಕೊಂಡಿರುವ, ಕನ್ನಡ ಭಾಷೆಯಲ್ಲಿ ಬರೆಯುವ ಕಥೆಗಾರ ಮತ್ತು ಕವಿ.[೧] ವೃತ್ತಿಯಲ್ಲಿ ಶಿಕ್ಷಕರಾಗಿರುವ ಸ್ವಾಮಿ ಅವರ ‛ಧೂಪದ ಮಕ್ಕಳು’ ಕಥಾಸಂಕಲನಕ್ಕೆ ೨೦೨೦ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಲಭಿಸಿದೆ.[೨][೩]
ಸ್ವಾಮಿ ಪೊನ್ನಾಚಿ | |
---|---|
ಜನನ | ಮಹದೇವಸ್ವಾಮಿ ಕೆ. ಎಸ್. ೧೯೮೬ ಪೊನ್ನಾಚಿ, ಚಾಮರಾಜನಗರ, ಕರ್ನಾಟಕ |
ವೃತ್ತಿ |
|
ಭಾಷೆ | ಕನ್ನಡ |
ಪ್ರಮುಖ ಪ್ರಶಸ್ತಿ(ಗಳು) | ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ |
ವೈಯಕ್ತಿಕ ಜೀವನ
ಬದಲಾಯಿಸಿಮಹದೇವಸ್ವಾಮಿಯಾಗಿ ಚಾಮರಾಜನಗರದ ಹನೂರು ತಾಲ್ಲೂಕಿನ ಪೊನ್ನಾಚಿ ಹಳ್ಳಿಯಲ್ಲಿ ಶಿವಣ್ಣ ಮತ್ತು ಗೌರಮ್ಮ ದಂಪತಿಗಳ ಹಿರಿಯ ಮಗನಾಗಿ ಜನಿಸಿದ ಸ್ವಾಮಿ, ಶಾಲಾಶಿಕ್ಷಣವನ್ನು ಹುಟ್ಟಿದೂರಿನಲ್ಲಿ ಮುಗಿಸಿ, ಉನ್ನತ ಶಿಕ್ಷಣವನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಪೂರೈಸಿದರು. ಹವ್ಯಾಸಿ ಪತ್ರಕರ್ತರಾಗಿಯೂ ಕೆಲಸ ಮಾಡಿದ ಅವರು ಶಿಕ್ಷಣ ಇಲಾಖೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.[೪]
ಪುಸ್ತಕಗಳು
ಬದಲಾಯಿಸಿಮುಂತಾದವು
ಪ್ರಶಸ್ತಿಗಳು
ಬದಲಾಯಿಸಿಸಾವೊಂದನು ಬಿಟ್ಟು ಕೃತಿಗಾಗಿ -
- ೨೦೧೫ - 'ಕನ್ನಡ ಪುಸ್ತಕ ಪ್ರಾಧಿಕಾರ' ಬಹುಮಾನ
- ೨೦೧೫ - ಬೇಂದ್ರೆ ಗ್ರಂಥ ಬಹುಮಾನ
ಧೂಪದ ಮಕ್ಕಳು ಕೃತಿಗಾಗಿ -
- ೨೦೧೮ - ಪಾಪು ಕಥಾ ಪುರಸ್ಕಾರ
- ೨೦೧೮ - ಛಂದ ಪುಸ್ತಕ ಪುರಸ್ಕಾರ[೭]
- ೨೦೧೯-ಶಾ ಬಾಲುರಾವ್ ಪ್ರಶಸ್ತಿ
- ೨೦೧೯-ಬಸವರಾಜ ಕಟ್ಟೇಮನಿ ಯುವ ಪುರಸ್ಕಾರ
- ೨೦೨೦ - ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ
ಉಲ್ಲೇಖಗಳು
ಬದಲಾಯಿಸಿ- ↑ "ಸ್ವಾಮಿ ಪೊನ್ನಾಚಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ". ಪ್ರಜಾವಾಣಿ. 13 March 2021. Retrieved 11 April 2021.
- ↑ Sridevi Kalasada (13 March 2021). "ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ: ಪ್ರಾಮಾಣಿಕ ಅಭಿವ್ಯಕ್ತಿಯೇ ಸೃಜನಶೀಲತೆ: ಸ್ವಾಮಿ ಪೊನ್ನಾಚಿ". TV9 News. Retrieved 11 April 2021.
- ↑ "Former CM Moily gets Kendra Sahitya Akademi award". Star of Mysore. 14 March 2021. Retrieved 11 April 2021.
- ↑ "ಲೇಖಕ ಕೆ. ಎಸ್. ಮಹದೇವಸ್ವಾಮಿ (ಸ್ವಾಮಿ ಪೊನ್ನಾಚಿ)". BookBrahma. Retrieved 11 April 2021.
- ↑ "ಅವರನ್ನೆಲ್ಲ ಸ್ವಾಮಿ ಪೊನ್ನಾಚಿ ತಮ್ಮ ಪುಸ್ತಕದಲ್ಲಿ ತಂದು ಕೂಡ್ರಿಸಿದ್ದಾರೆ". Avadhi. 19 August 2018. Retrieved 11 April 2021.
- ↑ "ಧೂಪದ ಮಕ್ಕಳು ಪುಸ್ತಕ". MyLang. Retrieved 11 April 2021.
- ↑ "ಸ್ವಾಮಿ ಪೊನ್ನಾಚಿಗೆ ಛಂದ ಪುಸ್ತಕ ಬಹುಮಾನ". ಪ್ರಜಾವಾಣಿ. 24 May 2018. Retrieved 11 April 2021.