ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬರಹಗಾರ ಡಿ.ಎಸ್.ನಾಗಭೂಷಣ (ಡಿ. ಎಸ್. ಎನ್) ಹಿರಿಯ ಸಮಾಜವಾದಿ ಲೇಖಕ-ವಿಮರ್ಶಕರಾಗಿ ಲೋಹಿಯಾವಾದಿಯಾಗಿ ಗುರುತಿಸಿಕೊಂಡಿದ್ದರು.

ಜೀವನ ಬದಲಾಯಿಸಿ

ಡಿ. ಎಸ್. ಎನ್‌‌.ರವರು ೧೯೫೨ ಫೆಬ್ರುವರಿ ೧ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ತಿಮ್ಮಸಂದ್ರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಮಗನಾಗಿ ಜನಿಸಿದರು. ಬೆಂಗಳೂರು ವಿವಿಯಿಂದ ೧೯೭೩ರಲ್ಲಿ ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ನಿವೃತ್ತಿ ನಂತರ ತಮ್ಮ ಪತ್ನಿ ಸವಿತಾ ನಾಗಭೂಷಣರೊಂದಿಗೆ ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ ನೆಲೆಸಿದ್ದ ಡಿ. ಎಸ್. ಎನ್ ರವರು ೨೦೨೨ ಮೇ ೧೯ರಂದು ನಿಧನ ಹೊಂದಿದರು.[೧]

ವೃತ್ತಿ ಬದಲಾಯಿಸಿ

೧೯೭೫ ರಿಂದ ೧೯೮೧ರವರೆಗೆ ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ ಸೇವೆಸಲ್ಲಿಸಿ ೭ ವರ್ಷಗಳ ಕಾಲ ಸಹಾಯಕ ನಿಲಯ ನಿರ್ದೇಶಕರಾಗಿದ್ದರು. ೨೦೦೫ರವರೆಗೆ ಆಕಾಶವಾಣಿಯಲ್ಲಿಯೇ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಹೊಂದಿದರು.

ಲೇಖಕರಾಗಿ ಬದಲಾಯಿಸಿ

ಕೃತಿಗಳು[೨] ಬದಲಾಯಿಸಿ

  • ಗಾಂಧಿ ಕಥನ (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೨೦೨೧)
  • ಗಮನ (ಸಾಹಿತ್ಯ ವಿಮರ್ಶೆ-ವಿಚಾರ)
  • ಅನೇಕ (ಸಾಹಿತ್ಯ ವಿಮರ್ಶೆ-ವಿಚಾರ)
  • ಕುವೆಂಪು ಸಾಹಿತ್ಯ ದರ್ಶನ (ಕುವೆಂಪು ಸಹಿತ್ಯಾವಲೋಕನ)
  • ಈ ಭೂಮಿಯಿಂದ ಆಕಾಶದವರೆಗೆ (ಸಾಹಿತ್ಯ ವಿಮರ್ಶೆ-ವಿಚಾರ)
  • ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ (ವ್ಯಕ್ತಿ ಹಾಗೂ ಸಾಹಿತ್ಯ ಪರಿಚಯ)
  • ರೂಪ ರೂಪಗಳನು ಧಾಟಿ (ಸಾಹಿತ್ಯ ವಿಮರ್ಶೆಗಳ ಸಂಗ್ರಹ)
  • ಲೋಹಿಯಾ ಸಮಾಜವಾದ ದರ್ಶನ
  • ಮರಳಿ ಬರಲಿದೆ ಸಮಾಜವಾದ!
  • ಬೇರು ಬಿಳಲು (ಸಮಾಜವಾದಿ ಸಂಕಲನಗಳು - ೧)
  • ಇದು ಭಾರತ ಇದು ಭಾರತ! (ಸಮಾಜವಾದಿ ಸಂಕಲನಗಳು - ೨)
  • ಇಲ್ಲಿ ಯಾವುದೂ ಅಮುಖ್ಯವಲ್ಲ (ಸಮಾಜವಾದಿ ಸಂಕಲನಗಳು - ೪)
  • ಕಂಡದ್ದು ಕಾಡಿದ್ದು (ಸಮಾಜವಾದಿ ಸಂಕಲನಗಳು - ೫)
  • ಲೋಹಿಯಾ ಜೊತೆಯಲ್ಲಿ
  • ರೈತ ಭಾರತ: ಅವಸಾನದ ಅಂಚಿನಲ್ಲಿ (ರೈತರ ಆತ್ಮಹತ್ಯೆಗಳ ಕುರಿತು)
  • ಒಂದನೇ ತರಗತಿಯಿಂದ ಇಂಗ್ಲಿಷ್ ಏಕೆ ಬೇಡ? (ಭಾಷಾ ನೀತಿ)
  • ಕನ್ನಡ-ಕರ್ನಾಟಕ ಸಂಕಥನಗಳು
  • ಕನ್ನಡದ ಮನಸ್ಸು ಮತ್ತು ಇತರ ಲೇಖನಗಳು (ಸಮಕಾಲೀನ)
  • ಇಂದಿಗೆ ಬೇಕಾದ ಗಾಂಧಿ
  • ವಸಿಷ್ಠರು ಮತ್ತು ವಾಲ್ಮೀಕಿಯರು
  • ಲೋಹಿಯಾ ಕೈಪಿಡಿ
  • ಲೋಹಿಯಾ ವಾಣಿ
  • ಜೆಪಿ ಕೈಪಿಡಿ
  • ವಿಧವಿಧ

ಸಂಪಾದನೆ ಬದಲಾಯಿಸಿ

  • ಲೋಹಿಯಾ: ವ್ಯಕ್ತಿ-ವಿಚಾರ-ವಿಮರ್ಶೆ (ಲೋಹಿಯಾ ಅಧ್ಯಯನ)
  • ಕುವೆಂಪು: ಒಂದು ಪುನರನ್ವೇಷಣೆ (ಶತಮಾನೋತ್ಸವ ಸಂಪುಟ)
  • ಈ ಗಣರಾಜ್ಯ ಈ ಕರ್ನಾಟಕ (ಸುವರ್ಣ ಕರ್ನಾಟಕ ಸಂಪುಟ)
  • ಒಲವು (ಅಂತರ್ಜಾತೀಯ ವಿವಾಹಿತರ ಮೊದಲ ಸಮಾವೇಶದ ಸ್ಮರಣ ಸಂಪುಟ)
  • ಹೊಸ ಮನುಷ್ಯ (ಸಮಾಜವಾದಿ ಮಾಸಿಕ ನಿಯತಕಾಲಿಕೆ)

ಸಹ ಸಂಪಾದನೆ ಬದಲಾಯಿಸಿ

  • ಕಾಡಿನ ಹುಡುಗ ಕೃಷ್ಣ (ಶ್ರೀಕೃಷ್ಣ ಆಲನಹಳ್ಳಿ ನೆನಪಿನ ಸಂಪುಟ)
  • ಮಾಸ್ತಿ ಸಾಹಿತ್ಯ ಸಮಗ್ರ ದರ್ಶನ (ಶತಮಾನೋತ್ಸವ ಸಂಪುಟ)
  • ಹಣತೆ (ಜಿ.ಎಸ್.ಎಸ್ ಅಭಿನಂದನ ಗ್ರಂಥ)
  • ಉರಿದ ಪಂಜು (ಕೆ. ರಾಮದಾಸ್ ಸ್ಮರಣ ಸಂಪುಟ)
  • ನಮ್ಮ ಶಾಮಣ್ಣ (ಕಡಿದಾಳು ಶಾಮಣ್ಣ ಗೌರವ ಗ್ರಂಥ)
  • ಸಾಹಿತ್ಯ ಸಂವಾದ (ಸಾಹಿತ್ಯ ದ್ವೈಮಾಸಿಕ)

ಅನುವಾದ: ಬದಲಾಯಿಸಿ

  • ಜೆಪಿ ಸೆರೆಮನೆ ದಿನಚರಿ
  1. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಸಾಹಿತಿ ಡಿ.ಎಸ್.ನಾಗಭೂಷಣ ನಿಧನ Archived 2022-10-01 ವೇಬ್ಯಾಕ್ ಮೆಷಿನ್ ನಲ್ಲಿ., ೧೯ ಮೇ ೨೦೨೨, ಕನ್ನಡಪ್ರಭ
  2. ಭೂಮಿಯನ್ನು ಹಂಚಿಕೊಳ್ಳುವ ಬಗೆಗಳು - ಡಿ.ಎಸ್‌.ನಾಗಭೂಷಣ, ೨೦೧೬