ಬೊಳುವಾರು ಮಹಮದ್ ಕುಂಞಿ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಬೊಳುವಾರು ಮಹಮದ್ ಕುಂಞ್ ಕನ್ನಡದ ಇವರು ಬೆಂಗಳೂರಿನಲ್ಲಿರುವ ಖ್ಯಾತ ಲೇಖಕರು. ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ವೃತ್ತಿಯ ಜೊತೆಗೆ, ಕನ್ನಡ ಗದ್ಯ ಸಾಹಿತ್ಯಕ್ಕೆ ಮುಸ್ಲಿಂ ಬದುಕನ್ನು ಮೊತ್ತ ಮೊದಲು ಪರಿಚಯಿಸಿದ ( ೧೯೭೩) ಇವರು ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ ಎಂಬ ಚರ್ಚೆಗೆ ನಾಂದಿ ಹಾಡಿದರು. ಭೂಮಿಯ ಮೇಲೆ ಒಡೆತನ ಮತ್ತು ಅಧಿಕಾರಕ್ಕಾಗಿ ಕಣ್ಣು ಕಿವಿಗಳನಷ್ಟೇ ಪ್ರಮಾಣವಾಗಿರಿಸಿಕೊಂಡು ನಿನ್ನ ದಿವ್ಯವಾಣಿಯನ್ನು ಅವಿವೇಕದಿಂದ ವಿಚಾರರಹಿತವಾಗಿ ಉದ್ಧರಿಸುವವರನ್ನು ನರಕದ ಕೆಂಡದ ರಾಶಿಯ ಮೇಲೆ ನಿಲಿಸು' ಎಂಬ ಹಕ್ಕೊತ್ತಾಯದ ಮೂಲಕ ಕನ್ನಡ ಕಥಾಲೋಕಕ್ಕೆ ಅಡಿಯಿತ್ತಿದ್ದ ಇವರ ಇನ್ನೂರಕ್ಕೂ ಮಿಕ್ಕಿದ ಕತೆಗಳು ಕನ್ನಡದ ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.
ಬೊಳುವಾರು ಮಹಮ್ಮದ ಕುಂಞ್ | |
---|---|
ಜನನ | 22 ಅಕ್ಟೋಬರ್ 1951 ಪುತ್ತೂರು, ದಕ್ಷಿಣ ಕನ್ನಡ, ಕರ್ನಾಟಕ |
ಕಾವ್ಯನಾಮ | ಬೊಳುವಾರು |
ವೃತ್ತಿ | ನಿವೃತ್ತ ಮುಖ್ಯ ನಿರ್ವಾಹಕ, ಸಿಂಡಿಕೇಟ್ ಬ್ಯಾಂಕ್ (ಡಿಸೆಂಬರ್ ೧೯೭೨ ರಿಂದ ಅಕ್ಟೋಬರ್ ೨೦೧೧), ಲೇಖಕ, ನಾಟಕಕಾರ |
ರಾಷ್ಟ್ರೀಯತೆ | ಭಾರತ |
ಪ್ರಕಾರ/ಶೈಲಿ | ಸಣ್ಣಕಥೆಗಳು, ಕಾದಂಬರಿಗಳು, ನಾಟಕಗಳು, ಜೀವನ ಚರಿತ್ರೆಗಳು |
ಪ್ರಭಾವಗಳು
|
ಕಾದಂಬರಿಗಳು
ಬದಲಾಯಿಸಿ೧• ಸ್ವಾತಂತ್ರ್ಯದ ಓಟ.
೨• ಓದಿರಿ.
೩• ಉಮ್ಮಾ
.
ಪ್ರಶಸ್ತಿಗಳು
ಬದಲಾಯಿಸಿ- ೧೯೮೩ ರಲ್ಲಿ ಕಲ್ಕತ್ತಾದ ಭಾಷಾ ಸಂಸ್ಥಾನ ದಿಂದ ಪ್ರಶಸ್ತಿ ಪಡೆದಿದ್ದ ಇವರಿಗೆ,
- ೧೯೯೧ ರಲ್ಲಿ ಆರ್ಯಭಟ, ೧೯೯೨ ರಲ್ಲಿ ಪರಶುರಾಮ, ೧೯೯೪ ರಲ್ಲಿ ದೆಹಲಿಯ ಕಥಾ ಪ್ರಶಸ್ತಿ, ೨೦೧೦ ರಲ್ಲಿ ತೌಳವ ಪ್ರಶಸ್ತಿಗಳೂ ಲಭಿಸಿದ್ದವು. *೨೦೦೧ ಮತ್ತು ೨೦೦೨ ಹೀಗೆ ಎರಡು ಬಾರಿ ಇವರ ಸಿನೆಮಾ(ಮುನ್ನುಡಿ ಹಾಗೂ ಅತಿಥಿ )ಗಳಿಗೆ ರಾಷ್ಟ ಪ್ರಶಸ್ತಿಯೂ ದಕ್ಕಿತ್ತು. ಇವರು ಸಂಪಾದಿಸಿದ ತಟ್ಟು ಚಪ್ಪಾಳೆ ಪುಟ್ಟ ಮಗು- ಎಂಬ ಮಕ್ಕಳ ಪದ್ಯಗಳ ಸಂಕಲನದಿಂದಾಗಿ ಇವರು ಕನ್ನಡ ಮಕ್ಕಳ ಸಾಹಿತ್ಯದಲ್ಲೂ ಗಟ್ಟಿ ಜಾಗ ಪಡೆದಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದ ಇವರ ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ ( ಇದು ಪ್ರಕಟವಾದ ಎರಡು ವರ್ಷಗಳಲ್ಲಿ ನಾಲ್ಕು ಮುದ್ರಣ ಕಂಡಿದೆ) ಕನ್ನಡದ ಮಕ್ಕಳಿಗೆ ಮಹಾತ್ಮ ಗಾಂಧಿಯನ್ನು ಹೊಸದಾಗಿ ಪರಿಚಯಿಸಿದೆ.ಈ ಕೃತಿ ೨೦೧೦ ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿದೆ.
ಉಲ್ಲೇಖಗಳು
ಬದಲಾಯಿಸಿ