ಪೂರ್ಣಚಂದ್ರ ತೇಜಸ್ವಿ
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು.[೧] ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಿನಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು.[೨]
ಕುಪ್ಪಳ್ಳಿ ಪುಟ್ಟಪ್ಪ ಪೂರ್ಣ ಚಂದ್ರ ತೇಜಸ್ವಿ | |
---|---|
![]() ಕೆ.ಪಿ.ಪೂರ್ಣಚಂದ್ರ ತೇಜಸ್ವಿ | |
ಜನನ | ಸೆಪ್ಟೆಂಬರ್ ೮ ೧೯೩೮ ಕುಪ್ಪಳ್ಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ |
ಮರಣ | ಏಪ್ರಿಲ್ ೫ ೨೦೦೭ ಮೂಡಿಗೆರೆ |
ಅಂತ್ಯ ಸಂಸ್ಕಾರ ಸ್ಥಳ | ಕುಪ್ಪಳಿ, ಶಿವಮೊಗ್ಗ ಜಿಲ್ಲೆ |
ಕಾವ್ಯನಾಮ | ಪೂಚಂತೇ |
ವೃತ್ತಿ | ಕೃಷಿಕ, ಲೇಖಕ, ಛಾಯಚಿತ್ರಗಾರ |
ರಾಷ್ಟ್ರೀಯತೆ | ಭಾರತೀಯ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಮೈಸೂರು ವಿಶ್ವವಿದ್ಯಾನಿಲಯ |
ಕಾಲ | 20ನೆಯ ಶತಮಾನ |
ಪ್ರಕಾರ/ಶೈಲಿ | ಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ, ಜನಪ್ರಿಯ ವಿಜ್ಞಾನ |
ವಿಷಯ | ಪರಿಸರ, ವಿಜ್ಞಾನ |
ಸಾಹಿತ್ಯ ಚಳುವಳಿ | [[ನವ್ಯ ಯುಗ ]] |
ಪ್ರಮುಖ ಪ್ರಶಸ್ತಿ(ಗಳು) | ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ |
ಬಾಳ ಸಂಗಾತಿ | ರಾಜೇಶ್ವರಿ ತೇಜಸ್ವಿ |
ಮಕ್ಕಳು | ಸುಶ್ಮೀತಾ, ಈಶಾನ್ಯೆ |
ಪ್ರಭಾವಗಳು | |
nammatejaswi |
ಜೀವನ ಸಂಪಾದಿಸಿ
ಜನನ ಸಂಪಾದಿಸಿ
ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ. ಅವರ ತಾಯಿ ಹೇಮಾವತಿ. ಇವರು ೧೯೩೮ ಸೆಪ್ಟೆಂಬರ್ ೮ ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳಿಯಲ್ಲಿ ಜನಿಸಿದರು.
ಶಿಕ್ಷಣ ಸಂಪಾದಿಸಿ
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದರು.
ವೃತ್ತಿ-ಪ್ರವೃತ್ತಿ ಸಂಪಾದಿಸಿ
ಇವರ ಮೊದಲ ಕಥೆ ಲಿಂಗ ಬಂದ. ಈ ಕಥೆಗಾಗಿ ಅವರು ರಾಜ್ಯೋತ್ಸವ ಪ್ರಶಸ್ತಿ ಪಡೆದರು. ಸ್ನಾತಕೋತ್ತರ ಪದವಿಯ ನಂತರ ಓರಗೆ ಇತರೆ ಬರಹಗಾರರಂತೆ ಅಧ್ಯಾಪಕ ವೃತ್ತಿಯನ್ನು ಬಯಸದೆ ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿಯನ್ನು ಮಾಡುವ ಮಹತ್ವದ ನಿರ್ಧಾರವನ್ನು ಮಾಡಿದರು. ಕೃಷಿಯ ಜತೆಜತೆಗೆ ಅಗಾದವಾದ ಸಾಹಿತ್ಯದ ಕೃಷಿ ಮಾಡಿದರು. ಸಾಹಿತ್ಯದ ಜೊತೆಗೆ ಇವರಿಗೆ ವ್ಯವಸಾಯ,ಛಾಯಾಚಿತ್ರಗ್ರಹಣ ಹಾಗು ಬೇಟೆಯಲ್ಲಿ ಆಸಕ್ತಿಯಿತ್ತು. ಇವರು ರೈತ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ವೈವಾಹಿಕ ಬದುಕು ಸಂಪಾದಿಸಿ
ಇವರ ಪತ್ನಿ ರಾಜೇಶ್ವರಿ. ಇವರು ತೇಜಸ್ವಿಯವರ ಪ್ರೀತಿಯ ಮನೆ ಮೂಡಿಗೆರೆಯ 'ನಿರುತ್ತರ'ದಲ್ಲಿ ವಾಸಿಸುತ್ತಿದ್ದರು, ಈಗ ಮರಣಿಸಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಸುಸ್ಮಿತಾ ಹಾಗು ಈಶಾನ್ಯ. ಇವರಿಬ್ಬರೂ ಸಾಫ್ಟ್ ವೇರ್ ಪರಿಣತರು.
ನಿಧನ ಸಂಪಾದಿಸಿ
ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಮನೆ 'ನಿರುತ್ತರ'ದಲ್ಲಿ ೨೦೦೭ರ ಏಪ್ರಿಲ್ ೫ರ ಮಧ್ಯಾಹ್ನ ೨ ಘಂಟೆಗೆ, ಹೃದಯಾಘಾತದಿಂದ ನಿಧನ ಹೊಂದಿದರು. ಆಗ ಇವರ ವಯಸ್ಸು ೬೯ ವರ್ಷ.
ಸಾಹಿತ್ಯ ಕೃಷಿ ಸಂಪಾದಿಸಿ
ಕವಿತೆ, ನಾಟಕ, ಕಾದಂಬರಿ, ಕತೆ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ಬರೆದಿದ್ದಾರೆ. ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ನಾಲ್ಕು ದಶಕಗಳ ಕಾಲ ಕಥೆ, ಕಾದಂಬರಿಗಳ ಮೂಲಕ, ವಿಜ್ಞಾನದ ವಿಸ್ಮಯಗಳ ಮೂಲಕ ತೇಜಸ್ವಿಯವರು ಕನ್ನಡ ಸಾಹಿತ್ಯಕ್ಕೆ ಆನೇಕ ಮಹತ್ವಪೂರ್ಣ ಕೃತಿಗಳನ್ನು ನೀಡಿದ್ದಾರೆ. ಇದರಲ್ಲಿ ಕೀಟಗಳು, ಪ್ರಾಣಿಗಳು, ನದಿ-ಕೊಳ್ಳಗಳು, ಕಾಡುಗಳು, ಬೇಟೆಯ ವೈವಿಧ್ಯತೆಯ ಬಗ್ಗೆ ಹಲವಾರು ಕೃತಿಗಳನ್ನು ನೀಡಿದ್ದಾರೆ. "ಕರ್ವಾಲೋ" ಕೃತಿಯಲ್ಲಿ, ಜೀವವಿಕಾಸ ಪಥದಲ್ಲಿ ಎಲ್ಲವೂ ಬದಲಾಗುತ್ತ ರೂಪಾಂತರ ಹೊಂದುತ್ತಾ ಬಂದಿರುವಾಗ ಹಾರುವ ಓತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೇಶಗಳು ಮೂಡಿ ಬಂದಿವೆ.
ಕವನ ಸಂಕಲನ ಸಂಪಾದಿಸಿ
ಕಾದಂಬರಿಗಳು ಸಂಪಾದಿಸಿ
- ಕರ್ವಾಲೋ (೧೯೮೦)
- ಚಿದಂಬರ ರಹಸ್ಯ (೧೯೮೫)
- ಜುಗಾರಿ ಕ್ರಾಸ್ (೧೯೯೪)
- ಮಾಯಾಲೋಕ (೨೦೦೫)
- ಕಾಡು ಮತ್ತು ಕ್ರೌರ್ಯ (೨೦೧೩)
ನೀಳ್ಗತೆಗಳು ಸಂಪಾದಿಸಿ
- ಸ್ವರೂಪ (೧೯೬೬)
- ನಿಗೂಢ ಮನುಷ್ಯರು (೧೯೭೩)
ಕಥಾಸಂಕಲನ ಸಂಪಾದಿಸಿ
- ಹುಲಿಯೂರಿನ ಸರಹದ್ದು (೧೯೬೨)
- ಅಬಚೂರಿನ ಪೋಸ್ಟಾಫೀಸು (೧೯೭೩)
- ಕಿರಗೂರಿನ ಗಯ್ಯಾಳಿಗಳು (೧೯೯೧)
- ಪಾಕಕ್ರಾಂತಿ ಮತ್ತು ಇತರ ಕತೆಗಳು
ನಾಟಕ ಸಂಪಾದಿಸಿ
- ಯಮಳ ಪ್ರಶ್ನೆ (೧೯೬೪)
ಆತ್ಮ ಚರಿತ್ರೆ ಸಂಪಾದಿಸಿ
- ಅಣ್ಣನ ನೆನಪು. (೧೯೯೬) ಕುವೆಂಪು ಅವರ ಕುರಿತು.
ಪ್ರವಾಸ ಕಥನ ಸಂಪಾದಿಸಿ
ವಿಮರ್ಶಾ ಕೃತಿಗಳು ಸಂಪಾದಿಸಿ
ವಿಜ್ಞಾನ ಹಾಗೂ ಪರಿಸರ ಕುರಿತ ಕೃತಿಗಳು ಸಂಪಾದಿಸಿ
- ಪರಿಸರದ ಕತೆ (೧೯೯೧)
- ಮಿಸ್ಸಿಂಗ್ ಲಿಂಕ್ (೧೯೯೧)
- ಸಹಜ ಕೃಷಿ (೧೯೯೨)
- ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು (೧೯೯೩)
- ಹಕ್ಕಿ ಪುಕ್ಕ
- ಮಿಂಚುಳ್ಳಿ-ಕನ್ನಡ ನಾಡಿನ ಹಕ್ಕಿಗಳು-ಭಾಗ ೧
- ಹೆಜ್ಜೆ ಮೂಡದ ಹಾದಿ - ಕನ್ನಡ ನಾಡಿನ ಹಕ್ಕಿಗಳು-ಭಾಗ ೨
- ವಿಸ್ಮಯ -೧,೨,೩ (೧೯೯೩)
- ಫ್ಲೈಯಿಂಗ್ ಸಾಸರ್-ಭಾಗ ೧ ಮತ್ತು ೨ (೧೯೯೩)
- ನಡೆಯುವ ಕಡ್ಡಿ, ಹಾರುವ ಎಲೆ
- ಮನಸೋಬು ಪೂಕೋವೋಕ ಅವರ "ಒಂದು ಹುಲ್ಲಿನ ಕ್ರಾಂತಿ " ಪುಸ್ತಕದ ವಿವರಣಾತ್ಮಕ ಕೃತಿ
ವೈಜ್ಞಾನಿಕ ಹಾಗೂ ಐತಿಹಾಸಿಕ ಲೇಖನಗಳ ಸಂಕಲನ ಸಂಪಾದಿಸಿ
ಶುಧ್ಧ ಸಾಹಿತ್ಯಿಕ ಮೌಲ್ಯ ಉಳ್ಳ ಕಥೆ ಕಾದಂಬರಿಗಳ ಸಂಗಡ ತೇಜಸ್ವಿಯವರು ಹಲವಾರು ವೈಜ್ಞಾನಿಕ ಮತ್ತು ಐತಿಹಾಸಿಕ ಲೇಖನ ಸಂಕಲನಗಳನ್ನು ಕನ್ನಡಕ್ಕೆ ತಂದಿದ್ದಾರೆ.
- ಮಹಾಯುಧ್ಧ,
- ಹಾರುವ ತಟ್ಟೆಗಳು,
- ಮಹಾನದಿ ನೈಲ್ ಇತ್ಯಾದಿ.
ಮಿಲೇನಿಯಮ್ ಸರಣಿ ಸಂಪಾದಿಸಿ
ಹೊಸ ಮಿಲೇನಿಯಮ್‍ನ ಆರಂಭದಲ್ಲಿ ತೇಜಸ್ವಿಯವರು ೨೦ನೇ ಶತಮಾನದಲ್ಲಿ ಜಗತ್ತಿನಲ್ಲಿ ಮೂಡಿಬಂದ ಅತ್ಯುತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಬೃಹತ್ ಯೋಜನೆಯನ್ನು ಹಮ್ಮಿಕೊಂಡರು. ಇದರ ಫಲವೇ ಮಿಲೇನಿಯಮ್ ಕೃತಿ ಶ್ರೇಣಿ. ಈ ಕೃತಿಶ್ರೇಣಿಯಲ್ಲಿ ಒಟ್ಟು ೧೬ ಪುಸ್ತಕಗಳಿವೆ.
- ಮಿಲೇನಿಯಮ್ ೧ - ಹುಡುಕಾಟ
- ಮಿಲೇನಿಯಮ್ ೨ - ಜೀವನ ಸಂಗ್ರಾಮ
- ಮಿಲೇನಿಯಮ್ ೩ - ಪೆಸಿಫಿಕ್ ದ್ವೀಪಗಳು
- ಮಿಲೇನಿಯಮ್ ೪ - ಚಂದ್ರನ ಚೂರು
- ಮಿಲೇನಿಯಮ್ ೫- ನೆರೆಹೊರೆಯ ಗೆಳೆಯರು
- ಮಿಲೇನಿಯಮ್ ೬ - ಮಹಾಯುದ್ಧ - ೧
- ಮಿಲೇನಿಯಮ್ ೭ - ಮಹಾಯುದ್ಧ - ೨
- ಮಿಲೇನಿಯಮ್ ೮ - ಮಹಾಯುದ್ಧ - ೩
- ಮಿಲೇನಿಯಮ್ ೯- ದೇಶವಿದೇಶ - ೧
- ಮಿಲೇನಿಯಮ್ ೧೦-ದೇಶವಿದೇಶ - ೨
- ಮಿಲೇನಿಯಮ್ ೧೧-ದೇಶವಿದೇಶ - ೩
- ಮಿಲೇನಿಯಮ್ ೧೨ - ದೇಶವಿದೇಶ - ೪
- ಮಿಲೇನಿಯಮ್ ೧೩ - ವಿಸ್ಮಯ ವಿಶ್ವ - ೧
- ಮಿಲೇನಿಯಮ್ ೧೪ - ಮಹಾಪಲಾಯನ
- ಮಿಲೇನಿಯಮ್ ೧೫ - ವಿಸ್ಮಯ ವಿಶ್ವ - ೨
- ಮಿಲೇನಿಯಮ್ ೧೬ - ಅಡ್ವೆಂಚರ್
ಅನುವಾದ ಸಂಪಾದಿಸಿ
- ಬೆಳ್ಳಂದೂರಿನ ನರಭಕ್ಷಕ(ಕಾಡಿನ ಕಥೆಗಳು ಭಾಗ ೧) (೧೯೯೩) - ಕೆನೆತ್ ಅಂಡರ್ಸನ್ ಅನುಭವಗಳ ಸಂಗ್ರಹ ರೂಪಾಂತರ
- ಪೆದ್ದಚೆರುವಿನ ರಾಕ್ಷಸ(ಕಾಡಿನ ಕಥೆಗಳು ಭಾಗ ೨) (೧೯೯೩) - ಕೆನೆತ್ ಅಂಡರ್ಸನ್ ಅನುಭವಗಳ ಸಂಗ್ರಹ ರೂಪಾಂತರ
- ಜಾಲಹಳ್ಳಿಯ ಕುರ್ಕ(ಕಾಡಿನ ಕಥೆಗಳು ಭಾಗ ೩) (೧೯೯೪) - ಕೆನೆತ್ ಅಂಡರ್ಸನ್ ಅನುಭವಗಳ ಸಂಗ್ರಹ ರೂಪಾಂತರ
- ಮುನಿಶಾಮಿ ಮತ್ತು ಮಾಗಡಿ ಚಿರತೆ(ಕಾಡಿನ ಕಥೆಗಳು ಭಾಗ ೪)
- ರುದ್ರಪ್ರಯಾಗದ ಭಯಾನಕ ನರಭಕ್ಷಕ (೧೯೯೫) - ಜಿಮ್ ಕಾರ್ಬೆಟ್‍ರವರ]] 'ಮ್ಯಾನ್ ಈಟಿಂಗ್ ಲೆಪಡ್೯ ಆಫ್ ರುದ್ರಪ್ರಯಾಗ್' ಕೃತಿಯ ಅನುವಾದ.
- ಪ್ಯಾಪಿಲಾನ್-೧,೨ - ಹೆನ್ರಿ ಷಾರಿಯೇ ರವರ 'Papillon' ಕೃತಿಯ ಅನುವಾದ
ಚಿತ್ರ ಸಂಕಲನ ಸಂಪಾದಿಸಿ
ಪ್ರಶಸ್ತಿಗಳು ಸಂಪಾದಿಸಿ
- ಚಿದಂಬರ ರಹಸ್ಯ ಪತ್ತೇದಾರಿ ವಿಧಾನದ ವಸ್ತು ಹೊಂದಿದ್ದು ಈ ಕಾದಂಬರಿಗೆ ವರ್ಷದ ಉತ್ತಮ ಕೃತಿ ಬಹುಮಾನ ದೊರೆತುದಲ್ಲದೆ, ೧೯೮೭ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಾಪ್ತವಾಯಿತು.
- ಪಂಪ ಪ್ರಶಸ್ತಿ ೨೦೦೧ ರಲ್ಲಿ
- ರಾಜ್ಯೋತ್ಸವ ಪ್ರಶಸ್ತಿ
- ಕರ್ನಾಟಕ ಸಾಹಿತ್ಯ ಅಕಾಡೆಮಿಯೂ ಸಹ ಅದೇ ವರ್ಷ ತೇಜಸ್ವಿ ಅವರಿಗೆ ಗೌರವ ಪ್ರಶಸ್ತಿ ನೀಡಿದೆ.
- ಪೂರ್ಣಚಂದ್ರ ತೇಜಸ್ವಿ ಅವರು ಬರೆದಿರುವ "ಅಬಚೂರಿನ ಪೋಸ್ಟಾಫೀಸು", "ತಬರನ ಕಥೆ" ಕೃತಿಗಳು ಚಲನಚಿತ್ರಗಳಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿವೆ.
- ಕುಬಿ ಮತ್ತು ಇಯಾಲ (ಕಥೆ)ಚಿತ್ರವು ರಾಜ್ಯ ಪ್ರಶಸ್ತಿ ಗಳಿಸಿತು.
- ಕಿರಗೂರಿನ ಗಯ್ಯಾಳಿಗಳು ಕತೆ ಸುಮನ್ ಕಿತ್ತೂರು ಅವರ ನಿರ್ದೇಶನದಲ್ಲಿ ಸಿನೆಮಾ ಆಗಿದೆ.
ಚಲನಚಿತ್ರ ಮಾಧ್ಯಮದಲ್ಲಿ ಸಂಪಾದಿಸಿ
ಪೂರ್ಣಚಂದ್ರ ತೇಜಸ್ವಿಯವರ ಅಬಚೂರಿನ ಪೋಸ್ಟಾಫೀಸು, ತಬರನ ಕಥೆ, ಕುಬಿ ಮತ್ತು ಇಯಾಲ ಹಾಗೂ ಕಿರಗೂರಿನ ಗಯ್ಯಾಳಿಗಳು ಕೃತಿಗಳು ಚಲನಚಿತ್ರಗಳಾಗಿವೆ.
ತೇಜಸ್ವಿ ಬಗ್ಗೆ ಸಂಪಾದಿಸಿ
- ನನ್ನ ತೇಜಸ್ವಿ (ಲೇ: ರಾಜೇಶ್ವರಿ ತೇಜಸ್ವಿ)
- ತೇಜಸ್ವಿ ನಾನು ಕಂಡಷ್ಟು (ಲೇ: ಧನಂಜಯ ಜೀವಾಳ ಬಿ. ಕೆ.)
- ಮತ್ತೆ ಮತ್ತೆ ತೇಜಸ್ವಿ (ಸಿ.ಡಿ.)