ಚಿದಂಬರ ರಹಸ್ಯ
ಚಿದಂಬರ ರಹಸ್ಯ[೧] [೨] ಪೂರ್ಣಚಂದ್ರ ತೇಜಸ್ವಿಯವರ[೩] ಒಂದು ಕೃತಿ. ೧೯೮೫ರಲ್ಲಿ ಪ್ರಕಟವಾದದ್ದು. ೨೦೦೯: ಹತ್ತೊಂಭತ್ತನೆಯ ಮುದ್ರಣ. ಪ್ರಕಾಶಕರು: ಪುಸ್ತಕ ಪ್ರಕಾಶನ.ಪತ್ತೇದಾರಿ ವಿಧಾನದ ವಸ್ತು ಹೊಂದಿದ್ದ ಚಿದಂಬರ ರಹಸ್ಯ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಾಪ್ತವಾಗಿತ್ತು[೪]. ತಮ್ಮ ವಿಶಿಷ್ಟ ಶೈಲಿಯ ಬರವಣಿಗೆಗಳ ಮೂಲಕ ಕನ್ನಡಿಗರನ್ನು ಬೇರೊಂದು ಮಾಯಾಲೋಕಕ್ಕೆ ಕರೆದೊಯ್ದ ಸಾಹಿತಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ[೫]. ಅವರ ಬರಹ, ಕೃತಿಗಳನ್ನು ಆಸ್ವಾದಿಸದವರು ವಿರಳ.
ಲೇಖಕರು | ಪೂರ್ಣಚಂದ್ರ ತೇಜಸ್ವಿ |
---|---|
ದೇಶ | ಭಾರತ |
ಭಾಷೆ | ಕನ್ನಡ |
ವಿಷಯ | ಮನಃಶಾಸ್ತ್ರ, ತತ್ವ್ತಶಾಸ್ತ್ರ, Triller |
ಪ್ರಕಾರ | fiction |
ಪ್ರಕಟವಾದದ್ದು | 1985 ಸಾಹಿತ್ಯ ಭಂಡಾರ |
ಮಾಧ್ಯಮ ಪ್ರಕಾರ | Print (Hardcover) |
ನಂತರದ | ಬೆಳಕು ಮೂಡಿತು |
ಪರಿಚಯ
ಬದಲಾಯಿಸಿ- ಪೂರ್ಣಚಂದ್ರ ತೇಜಸ್ವಿ[೬] ಅವರು ಬರೆದಂಥ ‘ಚಿದಂಬರ ರಹಸ್ಯ’ ಕಾದಂಬರಿಯಲ್ಲಿ ಕೆಸರೂರು ೧೯೮೦ ರ ದಶಕದಲ್ಲಿ ಕರ್ನಾಟಕದ ಚಿಕ್ಕಮಗಳೂರಿನಲ್ಲಿದ್ದ ಒಂದು ಗ್ರಾಮ. ಏಲಕ್ಕಿ ಬೆಳೆಗೆ ಹೆಸರು ಮಾಡಿದ್ದ ಜಾಗ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡುಕಳ್ಳರ ಮನೆಹಾಳು ಕೆಲಸಗಳ ಮಧ್ಯೆ, ಏಲಕ್ಕಿಯ ಮಾರಾಟ ದರ, ಗುಣಮಟ್ಟ, ಮತ್ತು ಇಳುವರಿ ಎಲ್ಲವೂ ಕುಸಿದಿರುತ್ತದೆ.
- “ಕೆಸರೂರಿನ ಹೊಟ್ಟೆಯೊಳಗಿನ ಟಾರು ಜಾತಿ ದ್ವೇಷದ ದಳ್ಳುರಿಯಲ್ಲಿ ಮೆಲ್ಲನೆ ಕರಗ[ತೊಡಗಿರುತ್ತದೆ]“ (ಪುಟ 179) ಇಂಥ ವಿಷಮ ಪರಿಸ್ಥಿತಿಯಲ್ಲಿ ಕೆಸರೂರಿನ ಏಲಕ್ಕಿ ಸಂಶೋಧನಾ ಕೇಂದ್ರದ ಸಸ್ಯ/ಕೃಷಿ ವಿಜ್ಞಾನಿ ಡಾ ಜೋಗೀಹಾಳ್ ಅವರು ಸಂಶಯಾಸ್ಪದವಾಗಿ ಸಾವನ್ನಪ್ಪಿರುತ್ತಾರೆ.
- ಇದೆಲ್ಲದರ ಮಧ್ಯೆ “ಮುದಿಯಾದ ಸಂಸ್ಕೃತಿಯ ಕೆಸರೂರಿನ ಮನೆ ಮನೆಯೊಳಗಿನ ಎಳೆಯ ಜೀವಗಳಿಗೆ ವಿಕಾಸಗೊಳ್ಳಲು ಅನುವು ಮಾಡಿಕೊಡುವುದರ ಬದಲು ಮುದಿಯರೆಲ್ಲಾ ಎಳೆ ಹೃಯದೊಳ ಹೊಕ್ಕು ಪರಕಾಯ ಪ್ರವೇಶ ಮಾಡಲು ಹವಣಿಸುತ್ತಾ ಕೆಸರೂರನ್ನು ಒಂದು ಬೆಂತರ ಲೋಕ ಮಾಡಿರುತ್ತಾರೆ.
- ಮೇಲೆ ಏನೂ ಸಂಭವಿಸದಂತೆ ನಟಿಸುತ್ತಾ ಬಸ್ಸು ಕಾಯುವವರು ಬಸ್ಸು ಕಾಯುತ್ತಿರುತ್ತಾರೆ. ಗದ್ದೆ ಉಳುತ್ತಾ ಮಳೆ ಬರಲಿಲ್ಲೆಂದು ಗೊಣಗುವವರು ಗೊಣಗುತ್ತಾ [ಇರುತ್ತಾರೆ]. ಆದರೆ, ಜ್ವಾಲಾಮುಖಿಯೊಂದು ಒಳಗೇ ಭಯಂಕರ ಒತ್ತಡ ನಿರ್ಮಿಸುತ್ತಿರುತ್ತದೆ” (ಪುಟ 141) ಪೂರ್ಣಚಂದ್ರ ತೇಜಸ್ವಿ ಅವರ “ಚಿದಂಬರ ರಹಸ್ಯ” “ಜುಗಾರಿ ಕ್ರಾಸ್”ಕಾದಂಬರಿಗಳನ್ನು ಓದಿದರೆ ಕರ್ನಾಟಕದ ಮತ್ತು ಹೊರ ರಾಜ್ಯದ ಯಾವ ಯಾವ “ಖದೀಮರು” ಭೈರಾಪುರ–ಶಿಶಿಲ ರಸ್ತೆಗಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ಗೊತ್ತಾಗುತ್ತದೆ.
ಕಥಾ ಹಂದರ
ಬದಲಾಯಿಸಿ- ಏಲಕ್ಕಿ ಬೆಳೆ ಕುಸಿದಿರುವುದರ ಪರಿಣಾಮವಾಗಿ ಎಚ್ಚೆತ್ತ ಕೇಂದ್ರ ಸರ್ಕಾರ 'ಶಾಮನಂದನ ಅಂಗಾಡಿ' ಎಂಬ ಆಫಿಸರನ್ನು ತನಿಖೆಗೆಂದು ಕೆಸರೂರಿಗೆ ಕಳುಹಿಸಿದಾಗ ಅಲ್ಲಿನ ವಾತಾವರಣ ರಂಗೇರುತ್ತದೆ. ಸಮಾಜದ ಕೆಟ್ಟ ಆಗುಹೋಗುಗಳಿಂದ ಒಳಗೊಳಗೇ ಕುದಿಯುತ್ತಿದ್ದ ಕೆಸರೂರು, ಅಂಗಾಡಿ, ವಿಚಾರವಾದಿಗಳ ಸಂಘ, ಬೇರಿಯ ಕಳ್ಳಸಾಗಾಣಿಕೆದಾರರ ಸೈನ್ಯ, ವೆಂಕಟರಮಣನ ಭಕ್ತರ ಸೈನ್ಯದ ನಡುವೆ ನಲುಗುತ್ತಿರಲು ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿಯಾಗಿದ್ದ ಜೋಗಿಹಾಳರ ನಿಗೂಢ ಸಾವಿನ, ಏಲಕ್ಕಿ ಬೆಳೆಯ ಅವಸಾನದ, ಮತ್ತಿತರೆ ಬೆಳವಣಿಗೆಗಳ ಹಿಂದಿರುವ ಚಿದಂಬರ ರಹಸ್ಯವನ್ನು ಕಂಡುಹಿಡಿಯಲು ಕೆಲ ಬುದ್ಧಿ ಜೀವಿಗಳು ಹೂಡುವ ಪ್ರಯತ್ನವೇ ಇದರ ಕಥಾವಸ್ತು.
- ಕರ್ನಾಟಕ ಕ೦ಡ ಸಾಹಿತಿಗಳ ಪೈಕಿ ತೇಜಸ್ವಿಯವರು ರಚಿಸಿದ ಚಿದ೦ಬರ ರಹಸ್ಯ ಸಾಹಿತ್ಯದ ಸೊಬಗನ್ನು ಬಿ೦ಬಿಸುವಲ್ಲಿ ಯಶಸ್ವಿಯಾಗಿದೆ ಎ೦ಬುದು ಈ ಬರಹದಷ್ಟೇ ಸತ್ಯ ಮಲೆನಾಡಿನ ಸೊಬಗಿನ ಸೌದರ್ಯದ ಬಿ೦ಬದ ಪ್ರತೀಕ, ಕೆಸರೂರಿನ ಪರಿಸ್ಠಿತಿಯು ಹದಗೆಟ್ಟಿದ್ದ ಸ೦ದರ್ಭದಲ್ಲಿ ಅ೦ಗಾಡಿಯ ಪತ್ತೆದಾರಿ ಕೆಲಸ ಜೋಗಿಹಾಳರ ಸಾವಿನೊಡನೆ ಪ್ರಾರ೦ಭವಾದ ಸಮಸ್ಯೆಗಳು ಎರಡು ಧರ್ಮಗಳ ನಡುವಿನ ಬಿನ್ನಹಗಳ ಆಗರವಾಗುವ ಕೆಸರೂರಿನ ಚರಿತ್ರೆ ನಿಜಕ್ಕೂ ಮರುಕ ಹುಟ್ಟಿಸುವುದರಲ್ಲಿ ಸಂದೇಹವಿಲ್ಲ.
- ಪೂರ್ಣಚಂದ್ರ ತೇಜಸ್ವಿಯವರ ಕೃತಿಯಲ್ಲಿ ಚಿದಂಬರ ರಹಸ್ಯ ಮಹತ್ವದ ಸ್ಠಾನವನ್ನು ಗಳಿಸಿದೆ.ಗೋಸಾಯಿಗಳು ಮಸೀದಿಯ ಬಳಿ ಕಾಡು ಹ೦ದಿಯನ್ನು ಹಿಡಿಯಲು ಇರಿಸಿದ್ದ ಮದ್ದಿನಿ೦ದ ಗಾಯಗೊ೦ಡ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿಯಾಗಿದ್ದ ಜೋಗಿಹಾಳರ ನಿಗೂಢ ಸಾವಿನಿ೦ದ ಕ್ರೊಧಗೊ೦ಡ ಹಿ೦ದುಗಳು (ಹಗೆಯೆ ಮುಸಲ್ಮನರು ನಮಾಜಿಗೆ೦ದು ಬ೦ದ ಮುಸಲ್ಮಾನರು ಸಾಯಲೆ೦ದು ಮದ್ದು ಇರಿಸಿದ್ದಾರೆ೦ದು ತಿಳಿದಿದ್ದು ಮಹಾ ಪ್ರಮಾದಕ್ಕೆ ಕಾರಣವಾಯಿತು)
- ಮುಸಲ್ಮಾನರ ಕಾಲೊನಿಗೆ ಬೆ೦ಕಿ ಹಚ್ಚಲಾಯಿತದರು ಯಾರಿಗೊ ತಪ್ಪಿನ ಅರಿವಿಗೆ ಬರದಿದ್ದುದ್ದು ನಿಜಕ್ಕು ಶೊಚನಿಯ ಸ೦ಗತಿಯೆ ಸರಿ. ಇಲ್ಲಿನ ಸನ್ನಿವೇಶಗಳು ಒ೦ದಕ್ಕೊ೦ದು ಪೂರಕವಾದ೦ತಿದ್ದು ಕೆಸರೂರಿನ ಪರಿಸರಕ್ಕೆ ತಕ್ಕ೦ತೆ ಬದಲಾಗುವುದನ್ನು ಮನಗಾಣಬಹುದಾಗಿದೆ ಕೆಸ್ತೂರಿನ ಪರಿಸರವನ್ನು ಬರಹದಲ್ಲಿಯೇ ಬಿ೦ಬಿಸುವ ಬರಹ ಚಾತುರ್ಯತೆಯನ್ನು ತೇಜಸ್ವಿಯವರಿಗೆ ಪ್ರಕೃತಿಯು ಕರುಣಿಸಿತ್ತು ಎನ್ನುವುದಕ್ಕಿ೦ತ ತೇಜಸ್ವಿಯವರೇ ಕರಗತ ಮಾಡಿಕೊ೦ಡಿದ್ದಾರೆ೦ಬುದು ಅಕ್ಷರಶಃ ಸತ್ಯ.
- ಸನ್ನಿವೇಶದ ದಾಸರಾಗುವ ಮ೦ದಿ ಕೆಸ್ತೂರಿನ ಜನರ ಪರಿಸ್ಥಿತಿಯ ಉಲ್ಲೇಖ ಸಹಜ ಮತ್ತು ಸರಳವಾಗಿರುವುಲ್ಲದೆ ಭಾಶೆಯ ಮೇಲಿನ ಹಿಡಿತವನ್ನು ಸಾದಿಸುವಲ್ಲಿ ಯಶಸ್ಸಿನ ಹೆಜ್ಜೆಯಿಟ್ಟಿದ್ದಾರೆ ಗೌಡರ ಪ೦ಚೆಹರುಕುತನದಿ೦ದ ಗೋಸಾಯಿಗಳ ಬೇಟೆಗೆ೦ದು ಇರಿಸಲಾಗಿದ್ದ ಸಿಡಿಮದ್ದು ಮುಸಲ್ಮಾನರೊಬ್ಬರ ಜೀವಹರಣಕ್ಕೆ ಕಾರಣವಾಗಿದ್ದುದ್ದೇ ಕೆಸ್ತೂರಿನ ಜನರ ದುರ೦ತವಾಗಿದೆ.
- ಕ್ರಾಂತಿ, ಜಾತಿ ವೈಷಮ್ಯ, ಪ್ರೀತಿ, ಸ್ನೇಹ, ರಾಜಕೀಯ, ವಿದ್ಯೆ, ಸಾಮಾಜಿಕ ಅಸಮತೋಲನ ಮತ್ತು ವೈರುತ್ವ ಈ ಎಲ್ಲವನ್ನು ಒಂದು ಕಾದಂಬರಿಯಲ್ಲಿ ನೋಡಬೇಕಾದರೆ ಚಿದಂಬರ ರಹಸ್ಯವನ್ನು ಓದಲೇಬೇಕು. ಎಲ್ಲಾ ವಿಷಯಗಳನ್ನು ಎಲ್ಲೂ ಜಾಸ್ತಿ ಕಮ್ಮಿ ಆಗದಂತೆ ಅರ್ಥಗರ್ಬಿತವಾಗಿ ಸೊಗಸಾಗಿ ಪ್ರಕೃತಿಯ ಮಧ್ಯದಲ್ಲಿ ನಡೆಯುವ ಘಟನೆ, ದುರ್ಗಟನೆಗಳನ್ನು ಈ ಕಾದಂಬರಿಯಲ್ಲಿ ಕಣ್ಣಿಗೆ ಕಟ್ಟಿದಹಾಗೆ ಹೇಳುತ್ತಾರೆ.
- ಇದು ಪತ್ತೇದಾರಿ ಕಾದಂಬರಿ ರೀತಿ ಎಂದು ಮೊದ ಮೊದಲು ಅನಿಸಿದರು ಇದು ಪತ್ತೇದಾರಿ ಕಾದಂಬರಿಯಲ್ಲ. ಸ್ವಲ್ಪ ಹಾಳೆಗಳನ್ನು ತಿರುವಿದ ಮೇಲೆ ಇದು ಜನರ ಜಾತಿ ವೈಷಮ್ಯ ಕಾದಂಬರಿ ಅನಿಸಿದರು ಇದು ಆ ರೀತಿಯ ಕಾದಂಬರಿಯಲ್ಲ. ಮತ್ತೆ ಮೂಡನಂಬಿಕೆ, ಅಂತರ ಜಾತಿಯಾ ಪ್ರೀತಿ, ಸ್ನೇಹ ಅಂತ ಒಂದೊಂದು ಹಂತದಲ್ಲಿ ಅನಿಸಿದರು ಕೊನೆಯಲ್ಲಿ ನಮಗೆ ಅನಿಸುವುದು ಇದು ಇವೆಲ್ಲ ವಿಷಯಗಳನ್ನು ಒಳಗೊಂಡ ಒಂದು ಸಮಗ್ರ ಸಂಗ್ರಹ ಪುಸ್ತಕ.
- ಚಿದಂಬರ ರಹಸ್ಯ ನಾಲ್ಕು ಸ್ನೇಹಿತರ(ರಫಿ , ಚಂದ್ರ, ರಮೇಶ ಮತ್ತು ಜೋಸೆಫ್ ಅಂಗಾರ ) ಕ್ರಾಂತಿಯಿಂದ ಶುರುವಾಗಿ, ಅಂಗಾಡಿ ಯಾಲಕ್ಕಿ ಕೃಷಿ ಉತ್ಪಾದನೆಯ ಕುಸಿತದ ಕಾರಣಗಳನ್ನು ಪತ್ತೆಹಚ್ಚಲು ಶುರುಮಾಡಿ ಜೋಗಿಹಾಳ್ರವರ ಸಾವಿನ ಸುತ್ತ ಇರುವ ಸಂಶಯಗಳನ್ನು ಹುಡುಕುತ್ತಾ ಸಾಗುತ್ತದೆ.
- ಕೃಷ್ಣೇಗೌಡರ ಮನೆ ಮೇಲೆ ಬೀಳುವ ಕಲ್ಲುಗಳನ್ನು ಯಾರಿಂದ ಅಥವಾ ಅವರ ಆಳುಗಳು ಹೇಳುವಂತೆ ದೆವ್ವ ಬೂತಗಳಿಂದ ಅಂತನಾ ಎಂದು ತಲೆ ಬಿಸಿಲಲ್ಲಿದ್ದರೆ, ಊರಿನಲ್ಲಿ ಜಾಸ್ತಿಯಾಗುತ್ತಿರುವ ಮರಗಳ ಕಳ್ಳ ಸಾಗಣೆ ಮತ್ತು ಮುಸಲ್ಮಾನರ ಜನಸಂಖ್ಯೆ, ಸುಲೇಮಾನ್ ಬೇರಿಂದ ಅಂದಕ್ಕೆ ಅವನ್ನನ್ನು ಮಟ್ಟಾ ಹಾಕಬೇಕೆಂದು ರೂಪುರೇಷೆಗಳನ್ನು ರಚಿಸುತ್ತಿರುವ ಆಚಾರಿ, ಕಾಲೇಜಿನ ಅವಾಂತರಗಳು, ಪಟೇಲರ ನಾಸ್ತಿಕತೆ ಮತ್ತು ಅವರ ಯಲ್ಲಕ್ಕಿ ಹ್ಯಬ್ರಿಡಿನ ಹುಡುಕಾಟ, ಇವೆಲ್ಲದುರ ಮಧ್ಯೆ ರಫಿ ಮತ್ತು ಜಯಂತಿಯರ ಪ್ರೀತಿ.
- ಇಲ್ಲಿ ತೇಜಸ್ವಿಯವರೇ ಕಥಾ ನಾಯಕರು ಯಾಕೆಂದರೆ ಅವರ ಶಬ್ದ ಪ್ರಯೋಗ, ಪಾತ್ರಗಳ ಸಂಬಂಧ ಜೋಡಣೆ, ಮತ್ತು ಸ್ಥಿತಿಗೆ ಪೂರಕವಾಗಿ ಬಳಸುವ ವಿಚಾರಗಳು ಯಾವ ಕಾದಂಬರಿಕಾರನನ್ನು ನಾಚಿಸುವಂತದ್ದು. ಪ್ರಕೃತಿ ಮತ್ತು ಮನುಷ್ಯ ಪ್ರಾಣಿಯ ತುಚ್ಚ ಕಾರಣಗಳ ಹೊಡೆದಾಟಗಳ ಮಧ್ಯೆ ಪ್ರೀತಿ ಅರಳುವುದನ್ನು ನೋಡಬೇಕಾದರೆ ಈ ಕಾದಂಬರಿಯನ್ನು ಮೊದಲು ಓದಬೇಕು.
ಪ್ರಶಸ್ತಿ,ಗೌರವ
ಬದಲಾಯಿಸಿ- "ಚಿದಂಬರ ರಹಸ್ಯ" ಪತ್ತೇದಾರಿ ಕಾದಂಬರಿಗೆ ವರ್ಷದ ಉತ್ತಮ ಕೃತಿ ಬಹುಮಾನ ದೊರೆತುದಲ್ಲದೆ, ೧೯೮೭ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಾಪ್ತವಾಯಿತು. ಈ ಮೂಲಕ ಕನ್ನಡದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತಂದೆ - ಮಗ ಎಂಬ ಪಟ್ಟಿಗೆ ಕುವೆಂಪು - ತೇಜಸ್ವಿ ಹೆಸರು ಸೇರಿದೆ.
ಉಲ್ಲೇಖ
ಬದಲಾಯಿಸಿ- ↑ https://www.pdflibs.co/book/847ps/%E0%B2%9A%E0%B2%BF%E0%B2%A6%E0%B2%82%E0%B2%AC%E0%B2%B0-%E0%B2%B0%E0%B2%B9%E0%B2%B8%E0%B3%8D%E0%B2%AF-chidambara-rahasya.html[ಶಾಶ್ವತವಾಗಿ ಮಡಿದ ಕೊಂಡಿ]
- ↑ https://wereadthattoo.wordpress.com/2015/04/01/%E0%B2%9A%E0%B2%BF%E0%B2%A6%E0%B2%82%E0%B2%AC%E0%B2%B0-%E0%B2%B0%E0%B2%B9%E0%B2%B8%E0%B3%8D%E0%B2%AF-%E0%B2%B2%E0%B3%87%E0%B2%96%E0%B2%95-%E0%B2%95%E0%B3%86-%E0%B2%AA%E0%B2%BF-%E0%B2%AA%E0%B3%82/
- ↑ https://kannada.oneindia.com/news/2006/07/19/rahasya-tv.html
- ↑ http://www.nammakannadanaadu.com/kavigalu/poornachandra-tejaswi.php
- ↑ "ಆರ್ಕೈವ್ ನಕಲು". Archived from the original on 2018-06-07. Retrieved 2018-05-24.
- ↑ https://manjunathtahir.blogspot.in/2014/11/kannada-novels-and-books-free-download.html