ಅಬಚೂರಿನ ಪೋಸ್ಟಾಫೀಸು (ಚಲನಚಿತ್ರ)
ಅಬಚೂರಿನ ಪೋಸ್ಟಾಫೀಸು ಎಂಬುದು ಪೂರ್ಣಚಂದ್ರ ತೇಜಸ್ವಿಯವರ ಕಥಾಸಂಕಲನ. ಈ ಕೃತಿಯನ್ನಾರಿಸಿ ಅದೇ ಹೆಸರಿನ ಕನ್ನಡ ಚಲನಚಿತ್ರವನ್ನು ನಿರ್ಮಿಸಲಾಗಿತ್ತು. ಈ ಕಥಾಸಂಕಲನದಲ್ಲಿ ೭ ಕಥೆಗಳಿವೆ.
ಅಬಚೂರಿನ ಪೋಸ್ಟಾಫೀಸು (ಚಲನಚಿತ್ರ) | |
---|---|
ಅಬಚೂರಿನ ಪೋಸ್ಟಾಫೀಸ್ | |
ನಿರ್ದೇಶನ | ಎನ್.ಲಕ್ಷ್ಮೀನಾರಾಯಣ್ |
ನಿರ್ಮಾಪಕ | ಪತ್ರೆ ಸಿ. ವಿನಾಯಕ್ |
ಪಾತ್ರವರ್ಗ | ನಾನಿ ಗಿರಿಜಾ ಸೀತಾರಾಮ್, ಬಿ.ಎಸ್.ರಾಮರಾವ್, ಶಾಂತ, ದಾಶರಥಿ ದೀಕ್ಷಿತ್ |
ಸಂಗೀತ | ವಿಜಯಭಾಸ್ಕರ್ |
ಛಾಯಾಗ್ರಹಣ | ಎನ್.ಜಿ.ರಾವ್ |
ಬಿಡುಗಡೆಯಾಗಿದ್ದು | ೧೯೭೩ |
ಚಿತ್ರ ನಿರ್ಮಾಣ ಸಂಸ್ಥೆ | ಚಿತ್ರಶಿಲ್ಪಿ |
ಇತರೆ ಮಾಹಿತಿ | ಪೂರ್ಣಚಂದ್ರ ತೇಜಸ್ವಿ ಅವರ ಕೃತಿ ಆಧಾರಿತ ಚಿತ್ರ. |
ಅಬಚೂರಿನ ಪೋಸ್ಟಾಫೀಸು
ಬದಲಾಯಿಸಿಅಬಚೂರೆಂಬ ಪುಟ್ಟ ಹಳ್ಳಿಗೂ, ದೂರದ ದಿಲ್ಲಿಗೂ ನಡುವೆ ಏಕೈಕ ಸಂಪರ್ಕ ಮಾಧ್ಯಮವೆನಿಸಿಕೊಂಡಿದ್ದ ಪೋಸ್ಟಾಫೀಸ್ ಹೇಗೆ ಬೋಬಣ್ಣನ ಅವಿವೇಕತನದಿಂದ ಮುಚ್ಚಿ ಹೋಯಿತು ಎಂಬುದು ಇಲ್ಲಿ ಚಿತ್ರಿತವಾಗಿದೆ. ಔದ್ಯೊಗಿಕ ನೈತಿಕತೆ ಇಲ್ಲದಿದ್ದರೆ ಏನಾಗುತ್ತದೆಂಬುದಕ್ಕೆ ಈ ಕಥೆ ಉತ್ತಮ ಉದಾಹರಣೆ.
ಅವನತಿ
ಬದಲಾಯಿಸಿಕಲೆಯನ್ನು ಗುರುತಿಸುವ ಹಾಗೂ ಆಸ್ವಾದಿಸುವ ಶಕ್ತಿ ಇಲ್ಲದಿರುವ ಹಳ್ಳಿಗರ ನಡುವೆ ಗೌರಿಯ ಸೌಂದರ್ಯ ಮತ್ತು ಸೂರಾಚಾರಿಯ ಕಲೆಯು ಅವನತಿ ಹೊಂದುವುದರ ಬಗ್ಗೆ ಈ ಕಥೆಯನ್ನು ಹೆಣೆಯಲಾಗಿದೆ.
ಕುಬಿ ಮತ್ತು ಇಯಾಲ
ಬದಲಾಯಿಸಿಜನರ ಮೂಢನಂಬಿಕೆ, ದುಷ್ಟ ರಾಜಕೀಯ ಇವುಗಳ ನಡುವೆ ಹೇಗೆ ಡಾ. ಕುಬೇರ ನಿಸ್ಸಹಾಯಕ ಮೂಕ ಪ್ರೇಕ್ಷಕನಾಗುತ್ತಾನೆ ಎಂಬುದನ್ನು ಚಿತ್ರಿಸಿದ್ದಾರೆ.
ತುಕ್ಕೋಜಿ
ಬದಲಾಯಿಸಿಈ ಕಥೆಯು, ಗಂಡ-ಹೆಂಡತಿಯರು ತಮ್ಮ ಜಗಳಕ್ಕಾಗಿ ಮಗುವನ್ನು ಮಾಧ್ಯಮವನ್ನಾಗಿ ಮಾಡಿಕೊಂಡು, ತಮ್ಮ ತಪ್ಪುಗಳಿಗಾಗಿ ಪರಸ್ಪರ ಆರೊಪ-ಪ್ರತ್ಯಾರೋಪಗಳಲ್ಲಿ ತೊಡಗಿ ಕೆಲಸದ ಬಗ್ಗೆ ಆಸಕ್ತಿ ಕಳೆದುಕೊಂಡು ಜನರಿಂದ ನಿಂದನೆಗೆ ಒಳಗಾಗಿ ಅದರಿಂದ ಪಾಠ ಕಲಿಯುವುದಾಗಿದೆ.
ಡೇರ್ ಡೆವಿಲ್ ಮುಸ್ತಾಫ
ಬದಲಾಯಿಸಿಇದೊಂದು ಲಘು ಹಾಸ್ಯ ಮಿಶ್ರಿತ ಕಥೆಯಾಗಿದೆ.
ತಬರನ ಕಥೆ
ಬದಲಾಯಿಸಿಈ ಕಥೆಯು ನಮ್ಮ ಆಡಳಿತ ವ್ಯವಸ್ತೆಯ ವೈಪರಿತ್ಯ, ರಾಜಕೀಯ ಪುಡಾರಿಗಳ ಸಮಯಸಾಧಕತನ ಮತ್ತು ಬ್ರಿಟಿಷ್ ಕಾಲದ ಆಡಳಿತ ವ್ಯವಸ್ಥೆಗೂ ಹಾಗೂ ನಂತರದ ಆಡಳಿತ ವ್ಯವಸ್ಥೆಗೂ ಹಿಡಿದ ಕೈಗನ್ನಡಿಯಾಗಿದೆ.
ತ್ಯಕ್ತ
ಬದಲಾಯಿಸಿವಿಭಿನ್ನ ಆಲೋಚನೆ ಹೊಂದಿರುವ ವ್ಯಕ್ತಿಯ ಬಗ್ಗೆ ಈ ಕಥೆಯನ್ನು ಹೆಣೆಯಲಾಗಿದೆ.