ಈ ಲೇಖನ ಪೂರ್ಣಚಂದ್ರ ತೇಜಸ್ವಿಯವರ ಕೃತಿಯೊಂದನ್ನು ಕುರಿತದ್ದು

ಕರ್ವಾಲೋ ಪೂರ್ಣಚಂದ್ರ ತೇಜಸ್ವಿಯವರ ಒಂದು ಪ್ರಮುಖ ಕಾದಂಬರಿ. ಇದು ಒಂದು ಹಾರುವ ಓತಿಯ ಬೆನ್ನು ಹತ್ತಿದ ವಿಜ್ಞಾನಿಯ ಕಥೆ. ಇದರಲ್ಲಿ ತೇಜಸ್ವಿಯವರೂ ಒಂದು ಪಾತ್ರ. ಲೇಖಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡದ ಕತೆಗಾರ ಹಾಗೂ ಕಾದಂಬರಿಕಾರ. ಅವರು ಮಹಾಕವಿ ಕುವೆಂಪು ಅವರ ಮಗ. ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಪಂಪ ಪ್ರಶಸ್ತಿ ಪುರಸ್ಕೃತರು.That is Manjanna, who recently saw the 'Flying Lizard' in the forests of Norway, which a priest saw in the forests of Africa in 1817. When Curvalori was informed of this matter, he had corresponded with Professor Ruavsky of Romania and the American Research Institute. Immediately several global organizations offered to grant funding for this research. Then, including the author, the word does not leave everyone's mouth.

After making all necessary preparations for the search of that 'flying Oti' in the forest, Carvalho, Manjanna, the author, Sheenappa, Prabhakara along with Kiwi, leave for the forest of Norway. After a very long swim, traversing the forest, Oti's search begins. In the meantime, Engta from Hawadiga also joins their team in the forest. After several days, the author was sitting alone when suddenly a 'flying book' caught his eye. Authors have to go to great lengths to show this to others. Because when it was sitting on a tree, having the color of the tree bark, there was no difference between the tree and the Kinchit. In the end, despite the efforts of Mandanna, Sheenappa and Engta, the flying Oti escaped from their hands and got lost in the infinity of the forest. Prabhakar will only benefit from taking a few photos on his camera.

ಕರ್ವಾಲೋ ಕಾದಂಬರಿಯಾಗಿ ಸಂಪಾದಿಸಿ

  • ಈ ಕತೆಯ ನಿರೂಪಕ, ಮಂದಣ್ಣ ಮತ್ತು ಕರ್ವಾಲೋ ಎಂಬ ಸಂಶೋಧಕ.
ಈ ಮೂವರು ತಮ್ಮ ಪರಿಸರದಲ್ಲಿ ಕಂಡುಕೊಂಡ ವಿಸ್ಮಯಕರ ಸಂಗತಿಗಳೇ ‘ಕರ್ವಾಲೋ’ ಕಾದಂಬರಿಯ ವಸ್ತು; ಇದರ ಸರಳ ಸುಂದರ ಹಂದರ. ಈ ಕೃತಿಯನ್ನು ಓದುತ್ತಿದ್ದರೆ ಕಣ್ಣಮುಂದೆ ಒಂದು ಚಿತ್ರದಂತೆ ಬರುತ್ತದೆ. ವಿಶೇಷವಾಗಿ ಮಂದಣ್ಣ ಮತ್ತು ಅವನ ಮದುವೆಯ ಸನ್ನಿವೇಶಗಳು ಹಾಸ್ಯದ ಹೊನಲನ್ನೇ ಹರಿಸುತ್ತವೆ. 
  • ಅಕಸ್ಮಾತ್ತಾಗಿ ಪರಿಚಯವಾದ ಮಂದಣ್ಣ ಎಂಬ ಹಳ್ಳಿಗನ ಬದುಕು ಮತ್ತು ಅವನಲ್ಲಿ ಹುದುಗಿರುವ ಪ್ರತಿಭೆ ಈ ಕಾದಂಬರಿಯ ತಳಪಾಯ; ಈತನ ಗೆಳೆತನದಿಂದ ಮತ್ತು ಕರ್ವಾಲೋ ಅವರ ಮಾರ್ಗದರ್ಶನದಿಂದ ಕತೆಗಾರರು ಕಂಡುಕೊಂಡ ಅರಣ್ಯ ಮಧ್ಯದ ಜೀವರಾಶಿಯ ನಿಗೂಢ ಬದುಕು ಈ ಕಾದಂಬರಿಯ ಇನ್ನೊಂದು ಸ್ತರ.
  • ಅತ್ಯಂತ ಸ್ಪಷ್ಟ ಭಾಷೆಯಲ್ಲಿ ಮುಗ್ಧ ಕುತೂಹಲದಿಂದ ಹೇಳಲಾಗಿರುವ ಈ ಕತೆ ಸಮಾಜದ ನಿರ್ಲಕ್ಷ್ಯದಿಂದ ನಾಶವಾಗುತ್ತಿರುವ ಮಂದಣ್ಣರು, ಕ್ರಮೇಣ ಇಲ್ಲವಾಗುತ್ತಿರುವ ಸೃಜನಶೀಲ ಕರ್ವಾಲೋಗಳು ಮತ್ತು ನಾಗರಿಕತೆಯ ತುಳಿತಕ್ಕೆ ಧ್ವಂಸಗೊಂಡು ಮಾಯವಾಗುತ್ತಿರುವ ಅರಣ್ಯ ಮತ್ತು ಜೀವರಾಶಿ - ಈ ಎಲ್ಲವನ್ನೂ, ಎಲ್ಲರನ್ನೂ ಕುರಿತದ್ದು.
  • ಈ ಕೃತಿ ಎಷ್ಟು ಚೆನ್ನಾಗಿದೆ ಎಂದರೆ ಇದರೊಳಗಿರುವ ಹಾಸ್ಯದಿಂದ ಓದುಗರು ನಕ್ಕು ನಕ್ಕು ಸಾಕಾಗುತ್ತಾರೆ. ಪ್ಯಾರ, ಕಿವಿ, ಮಂದಣ್ಣ, ಕರಿಯಪ್ಪ, ಎಂಗ್ಟ , ಪ್ರಭಾಕರ ನಿಮ್ಮನ್ನು ನಗಿಸಿ ನಗಿಸಿ ಇಡುತ್ತಾರೆ. ಕೆಲವು ಸನ್ನಿವೇಶಗಳಾದ ಮಂದಣ್ಣನ ಬ್ಯಾಂಡ್ ಬಾರಿಸುವಿಕೆ, ಮಂದಣ್ಣನ ಮದುವೆ, ಎಂಗ್ಟ - ಕರಿಯಪ್ಪನ ಜಗಳ, ಕೋರ್ಟ್ ಕೇಸು ಮುಂತಾದವು ಎಂದಿಗೂ ಮರೆಯಲಾಗದಂತದ್ದು.
  • ನೀವು ದಟ್ಟ ಕಾಡು ನೋಡಿಲ್ಲವೇ? ಹಾಗಾದರೆ 'ಕರ್ವಾಲೋ' ಪುಸ್ತಕ ಕೈಗೆತ್ತಿಕೊಳ್ಳಿ. ದಟ್ಟ ಕಾಡಿನೊಳಕ್ಕೆ ತೇಜಸ್ವಿ ನಿಮ್ಮನ್ನು ಎಳೆದೊಯ್ಯುತ್ತಾರೆ.ಮೊದಲನೇ ಪುಟದಿಂದ ಕೊನೆಯ ಪುಟದವರೆಗೆ ಓದಿಸಿಕೊಂಡು ಹೋಗುತ್ತದೆ. ಈ ಕೃತಿಯ ಕೊನೆಯನ್ನು ಓದುವಾಗ ಓದುಗರು ಅನುಭವಿಸುವ ರೋಮಾಂಚನ ವರ್ಣಿಸಲಾಗದ್ದು. ಎಷ್ಟು ಸಾರಿ ಓದಿದರೂ ಬೇಸರವೆನಿಸದ ಅದ್ಭುತ ಪುಸ್ತಕ ಇದು.
  • ಜೇನು ತುಪ್ಪದ ಪ್ರಕರಣ, ಜೇನುಹುಳಗಳ ಧಾಳಿ, ಪ್ಯಾರನ ಕೆಟ್ಟಕನ್ನಡ, ಕಿವಿಯ ಬೇಟೆಯ ಉತ್ಸಾಹ, ಒಂದಷ್ಟು ರಸಿಕತೆ, ಮಂದಣ್ಣನ ಹೆಂಡತಿಯ ನಡವಳಿಕೆ, ನಿರೂಪಕರ ಸಹಜ ಭಾಷೆ, ಜನಪದ ವೈದ್ಯ, ಕುಡಿತ, ಆಹಾರ ಕ್ರಮ, ಜೇನುಸಾಕಣೆ, ಕೋರ್ಟು, ಕಛೇರಿ ವ್ಯವಹಾರ ಇತ್ಯಾದಿಗಳ ವಿವರ ತಿಳಿಯಲು ಇಡೀ ಕಾದಂಬರಿಯನ್ನೇ ಓದಬೇಕು.
  • ಕರ್ವಾಲೋ ಕಾದಂಬರಿ ಲೇಖಕರು ಬದುಕಿರುವಾಗಲೇ, ಕರ್ನಾಟಕದ ಹಲವಾರು ವಿಶ್ವವಿದ್ಯಾನಿಲಯಗಳಿಗೆ ಪಠ್ಯಪುಸ್ತಕವಾಗಿಯು ಜನಪ್ರಿಯಗೊಂಡಿದೆ. ಇದೊಂದು ಬಹುಮುಖ ಕಾದಂಬರಿಯಾಗಿ ಹಲವು ವಿಶಿಷ್ಟತೆಗಳನ್ನು ಒಳಗೊಂಡಿದೆ.
"https://kn.wikipedia.org/w/index.php?title=ಕರ್ವಾಲೋ&oldid=1113269" ಇಂದ ಪಡೆಯಲ್ಪಟ್ಟಿದೆ