ಡಿಸೆಂಬರ್ ೧
ದಿನಾಂಕ
(ಡಿಸೆಂಬರ್ ೦೧ ಇಂದ ಪುನರ್ನಿರ್ದೇಶಿತ)
ಡಿಸೆಂಬರ್ ೧ - ಡಿಸೆಂಬರ್ ತಿಂಗಳಿನ ಮೊದಲನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೩೫ನೇ(ಅಧಿಕ ವರ್ಷದಲ್ಲಿ ೩೩೬ನೇ ದಿನ) ದಿನ. ಡಿಸೆಂಬರ್ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೬೪೦ - ಪೋರ್ಚುಗಲ್ ಸ್ಪೇನ್ ಇಂದ ಸ್ವಾತಂತ್ರ್ಯ ಪಡೆದು ನಾಲ್ಕನೇ ಜೊಆಒ ಅದರ ರಾಜನಾದನು.
- ೧೮೨೧ - ಕೋಸ್ಟಾ ರಿಕದ ಮೊದಲ ಸಂವಿಧಾನ ಜಾರಿಗೆ ಬಂದಿತು.
- ೧೯೫೮ - ಮಧ್ಯ ಆಫ್ರಿಕಾ ಗಣರಾಜ್ಯವು ಫ್ರಾನ್ಸ್ ಇಂದ ಸ್ವಾತಂತ್ರ್ಯ ಪಡೆಯಿತು.
- ೧೯೬೩ - ನಾಗಾಲ್ಯಾಂಡ್ ಭಾರತದ ೧೬ನೇ ರಾಜ್ಯವಾಯಿತು.
- ೧೯೬೫ - ಭಾರತದ ಗಡಿ ರಕ್ಷಣಾ ಪಡೆ ಸ್ಥಾಪನೆ.
- ೧೯೮೨ - ಅಮೇರಿಕ ದೇಶದ ಯುಟಾದಲ್ಲಿ ವಿಶ್ವದ ಪ್ರಥಮ ಕೃತಕ ಹೃದಯ ಯಶಸ್ವಿಯಾಗಿ ಅಳವಡಿಸಲಾಯಿತು.
- ೧೯೮೮ - ಬೆನಾಜೀರ್ ಭುಟ್ಟೊ ಪಾಕಿಸ್ತಾನದ ಪ್ರಧಾನಮಂತ್ರಿಯಾದಳು.
- ೧೯೯೮ - ಪ್ರಪಂಚದ ಅತ್ಯಂತ ದೊಡ್ಡ ಉದ್ಯಮವಾದ ಎಕ್ಸೊನ್-ಮೊಬಿಲ್ ಸಂಘಟನೆಯಿಂದ ಸ್ಥಾಪನೆ.
ಜನನ
ಬದಲಾಯಿಸಿ- ೧೭೬೧ - ಮದಾಮ್ ತುಸ್ಸಾದ್ಸ್ ಮೇಣ ಶಿಲ್ಪ ಸಂಗ್ರಹಾಲಯದ ಸ್ಥಾಪಕಿ ಮೇರಿ ತುಸ್ಸಾದ್.
- ೧೮೯೪ - ಭೀಮ್ ಸೇನ್ ಸಾಚಾರ್, ಸ್ವಾತಂತ್ರ್ಯ ಹೋರಾಟಗಾರ ಮತ್ತು ಪಂಜಾಬ್ ರಾಜ್ಯದ ಮಾಜಿ ಮುಖ್ಯಮಂತ್ರಿ.
- ೧೯೨೩ - ವ್ಯಾಸರಾಯ ಬಲ್ಲಾಳ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿ.
- ೧೯೪೯ - ಪಾಬ್ಲೊ ಎಸ್ಕೊಬಾರ್, ಕೊಲಂಬಿಯದ ಮಾದಕ ಪದಾರ್ಥಗಳ ಮಾರಾಟಗಾರ.
- ೧೯೬೩ - ಅರ್ಜುನ ರಣತುಂಗ, ಶ್ರೀ ಲಂಕಾದ ಕ್ರಿಕೆಟ್ ಆಟಗಾರ.
- ೧೯೬೩ = ಅಹಲ್ಯ ಬಲ್ಲಾಳ್. ಮುಂಬಯಿ ಕನ್ನಡ ರಂಗಭೂಮಿಯ ಶ್ರೇಷ್ಠ ಅಭಿನೇತ್ರಿ
ಮರಣ
ಬದಲಾಯಿಸಿ- ೧೧೩೫ - ಇಂಗ್ಲೆಂಡ್ನ ಮೊದಲನೇ ಹೆನ್ರಿ.
- ೧೮೬೬ - ಜಾರ್ಜ್ ಎವರೆಸ್ಟ್, ವೇಲ್ಸ್ನ ಸಮೀಕ್ಷಕ ಮತ್ತು ಮೌಂಟ್ ಎವರೆಸ್ಟ್ ಪರ್ವತದ ಹೆಸರಿನ ಮೂಲ.
- ೧೯೪೭ - ಜಿ.ಎಚ್. ಹಾರ್ಡಿ, ಇಂಗ್ಲೆಂಡ್ನ ಗಣಿತಜ್ಞ.
- ೧೯೬೪ - ಜೆ.ಬಿ.ಎಸ್. ಹಾಲ್ಡೇನ್, ಸ್ಕಾಟ್ಲೆಂಡ್ನ ಜೀವಶಾಸ್ತ್ರ ತಜ್ಞ.
ದಿನಾಚರಣೆಗಳು
ಬದಲಾಯಿಸಿ- ವಿಶ್ವ ಏಡ್ಸ್ ದಿನ.
- ರೊಮೇನಿಯದ ರಾಷ್ಟ್ರೀಯ ದಿನ.
ಹೊರಗಿನ ಸಂಪರ್ಕಗಳು
ಬದಲಾಯಿಸಿ- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |