ಅಹಲ್ಯ ಬಲ್ಲಾಳ್,[] ಕನ್ನಡದ ರಂಗಭೂಮಿ ನಟಿ ಮತ್ತು ನಿರ್ದೇಶಕಿ. ಮುಂಬಯಿ ನಗರದಲ್ಲಿ ಕನ್ನಡದ ಹಲವಾರು ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅಹಲ್ಯ, ಭರತನಾಟ್ಯ ಕಲಾವಿದೆ, ಲೇಖಕಿ ಮತ್ತು ಅನುವಾದಕಿಯೂ ಆಗಿದ್ದಾರೆ.[][][]

ಅಹಲ್ಯ ಬಲ್ಲಾಳ್
Born
ಅಹಲ್ಯ

(1963-12-01) ೧ ಡಿಸೆಂಬರ್ ೧೯೬೩ (ವಯಸ್ಸು ೬೧)
Alma materಮಂಗಳೂರು ವಿಶ್ವವಿದ್ಯಾಲಯ ಮತ್ತು ಮುಂಬಯಿ ವಿಶ್ವವಿದ್ಯಾಲಯ.
Occupation(s)ನಟಿ, ಕಂಠದಾನ ಕಲಾವಿದೆ, ಅನುವಾದಕಿ, ಭರತನಾಟ್ಯ ಕಲಾವಿದೆ, ಲೇಖಕಿ ಮತ್ತು ನಾಟಕ ನಿರ್ದೇಶಕಿ
Known forನಾಟಕ ನಿರ್ದೇಶನ, ಅಭಿನಯ
Parent(s)ಪಿ.ಎನ್.ವೆಂಕಟ್‍ರಾವ್
ಜಾನಕಿ

ಜನನ,ವಿದ್ಯಾಭ್ಯಾಸ, ಕುಟುಂಬ

ಬದಲಾಯಿಸಿ

ಅಹಲ್ಯ[] ಹುಟ್ಟಿದ್ದು ಡಿಸೆಂಬರ್ ೦೧, ೧೯೬೩ರಲ್ಲಿ[ಸಾಕ್ಷ್ಯಾಧಾರ ಬೇಕಾಗಿದೆ]. ತಂದೆ ಪಿ. ಎನ್. ವೆಂಕಟ್‍ರಾವ್, ತಾಯಿಯ ಹೆಸರು ಜಾನಕಿ. ಚಲನಚಿತ್ರ ನಿರ್ದೇಶಕರಾದ ರಾಮಚಂದ್ರ ಪಿ. ಎನ್. ಅಹಲ್ಯಾರ ತಮ್ಮ. ಉಡುಪಿ, ಕುಂದಾಪುರ, ಧಾರವಾಡ, ಬೆಂಗಳೂರು ಮತ್ತು ಮುಂಬಯಿ ಯಲ್ಲಿ ವಿದ್ಯಾಭ್ಯಾಸ ಮಾಡಿದ ಅಹಲ್ಯ, ವಿಜ್ಞಾನ ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪಡೆದಿದ್ದಾರೆ.[]

ಸಂತೋಷ ಬಲ್ಲಾಳರನ್ನು ಮದುವೆಯಾದ ಅಹಲ್ಯ ಅವರಿಗೆ ಇಬ್ಬರು ಗಂಡುಮಕ್ಕಳಿದ್ದಾರೆ.

ಭರತನಾಟ್ಯ ರಂಗಪ್ರವೇಶ

ಬದಲಾಯಿಸಿ

೧೯೮೮ರಲ್ಲಿ ಬೆಂಗಳೂರಿನ ’ಯವನಿಕಾ’ ಸಭಾಂಗಣದಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಿದರು. ಕರ್ನಾಟಕ, ಮುಂಬಯಿ ಹಾಗೂ ಇತರೆ ನಗರಗಳಲ್ಲಿ ಹಲವಾರು ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ್ದಾರೆ. ಅನೇಕ ನೃತ್ಯನಾಟಕಗಳಲ್ಲಿ ಭಾಗವಹಿಸಿದ್ದಾರೆ.

ನಾಟಕಗಳಲ್ಲಿ ಅಭಿನಯ

ಬದಲಾಯಿಸಿ

ಮುಂಬಯಿನ ಕನ್ನಡ ಕಲಾಕೇಂದ್ರ, ಮೈಸೂರ್ ಅಸೋಸಿಯೇಷನ್, ಮುಂಬಯಿ, ’ದೃಶ್ಯ’ ತಂಡ ಮತ್ತು ಮಾತುಂಗ ಕರ್ನಾಟಕ ಸಂಘದ ಕಲಾಭಾರತಿ ತಂಡಗಳ ಕನ್ನಡ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಅಭಿನಯಿಸಿದ ನಾಟಕಗಳು

ಬದಲಾಯಿಸಿ

[ಸಾಕ್ಷ್ಯಾಧಾರ ಬೇಕಾಗಿದೆ]

  • ಪದ್ಮಶ್ರೀ ದುಂಢೀರಾಜ್ (ನಿರ್ದೇಶನ: ಕಿಶೋರಿ ಬಲ್ಲಾಳ)
  • ಸಹ್ಯಾದ್ರಿಯ ಸ್ವಾಭಿಮಾನ (ರಚನೆ: ಆರ್.ಡಿ.ಕಾಮತ, ನಿ: ಶ್ರೀಪತಿ ಬಲ್ಲಾಳ)
  • ತರುಣ ದುರ್ದಂಡ ಮುದುಕ ಮಾರ್ತಾಂಡ (ಮರಾಠಿ ಮೂಲದ ಕನ್ನಡ ರೂಪಾಂತರ ಮತ್ತು ನಿರ್ದೇಶನ: ಶ್ರೀಪತಿ ಬಲ್ಲಾಳ)
  • ನಮ್ಮ ನಮ್ಮಲ್ಲಿ ( ಮರಾಠಿಯ ’ಚಾರ್ ಚೌಗಿಯ’ ನಾಟಕದ ರೂಪಾಂತರ ಮತ್ತು ನಿರ್ದೇಶನ: ಸಂತೋಷ ಬಲ್ಲಾಳ)
  • ಬಾಕಿ ಇತಿಹಾಸ (ಮೂಲ ಕೃತಿ:ಬಾದಲ್ ಸರ್ಕಾರ್, ನಿ: ರಮೇಶ್ ಶಿವಪುರ)
  • ಬೆಂದಕಾಳೂರು (ರಚನೆ ಮತ್ತು ನಿರ್ದೇಶನ: ಡಾ.ಬಿ.ಆರ್.ಮಂಜುನಾಥ್)
  • ಪುಷ್ಪರಾಣಿ (ರಚನೆ: ಚಂದ್ರಶೇಖರ ಕಂಬಾರ, ನಿ: ಜಯಲಕ್ಷ್ಮೀ ಪಾಟೀಲ್)
  • ಮಂಥರಾ (ರಚನೆ: ಡಾ.ಹೆಚ್.ಎಸ್.ವೆಂಕಟೇಶಮೂರ್ತಿ, ನಿ: ಜಯಲಕ್ಷ್ಮೀ ಪಾಟೀಲ್)
  • ಎಲ್ಲಮ್ಮ (ಮೂಲ ನಾಟಕ: ಲೋರ್ಕಾ, ರೂಪಾಂತರ ಮತ್ತು ನಿರ್ದೇಶನ: ಬಿ. ಬಾಲಚಂದ್ರ ರಾವ್)
  • ಅಂಬೆ (ಕನ್ನಡಕ್ಕೆ: ಸರಜೂ ಕಾಟ್ಕರ್, ನಿರ್ದೇಶನ:ಭರತ್ ಕುಮಾರ್ ಪೊಲಿಪು)
  • ಅಂಬೆ [ತುಳು] (ನಿ: ಭರತ್ ಕುಮಾರ್ ಪೊಲಿಪು)
  • ಕುವೆಂಪು ಕಂಡ ಮಂಥರೆ (ಮೂಲ : ಕುವೆಂಪು, ರಂಗರೂಪ ಮತ್ತು ನಿರ್ದೇಶನ ಸಾ ದಯಾ[ದಯಾನಂದ ಸಾಲ್ಯಾನ])
  • ಮಾಯಾವಿ ಸರೋವರ.[]
  • ಚೌಕಟ್ಟಿನಾಚೆಯ ಚಿತ್ರಗಳು.[]

ನಿರ್ದೇಶಿಸಿದ ನಾಟಕಗಳು

ಬದಲಾಯಿಸಿ

[ಸಾಕ್ಷ್ಯಾಧಾರ ಬೇಕಾಗಿದೆ]

  • ನಕ್ಕಳಾ ರಾಜಕುಮಾರಿ (ರಚನೆ: ಪಾಷಾ)
  • ಗುಮ್ಮ (ರಚನೆ: ಎ.ಎಸ್. ಮೂರ್ತಿ)
  • ಸೂರ್ಯ ಬಂದ (ರಚನೆ: ವೈದೇಹಿ)
  • ಯಾರು ಶ್ರೇಷ್ಠರು (ಇಂಗ್ಲೀಷ್ ಮೂಲದ ನಾಟಕ, ಕನ್ನಡ ರೂಪಾಂತರ: ಅಹಲ್ಯ ಬಲ್ಲಾಳ್)
  • ಹಕ್ಕಿ ಹಾಡು (ರಚನೆ: ವೈದೇಹಿ)

ಕೈಲಾಸಂ ಸ್ಮರಣೆಯ ದಿನದಂದು ನಾಟಕ ಪ್ರದರ್ಶನ

ಬದಲಾಯಿಸಿ

ಮೈಸೂರು ಅಸೋಸಿಯೇಷನ್, ಮುಂಬಯಿನಲ್ಲಿ ಏಕ-ವ್ಯಕ್ತಿ ಪ್ರಧಾನವಾದ ನಾಟಕ "ಅವಳ ಕಾಗದ" ವನ್ನು ಅಹಲ್ಯಾ ಬಲ್ಲಾಳ್ ರವರಿಂದ ೨೮,ಆಗಸ್ಟ್, ೨೦೨೨ ರಂದು ಪ್ರದರ್ಶಿಸಲಾಯಿತು. ಈ ಕಿರು-ಬೆಂಗಾಲಿ ನಾಟಕ,'ಸ್ತ್ರೀರ್ ಪತ್ರ'ದ ಕನ್ನಡ ರೂಪಾಂತರವೇ 'ಅವಳ ಕಾಗದ'. []

ಪ್ರಶಸ್ತಿ ಹಾಗೂ ಪುರಸ್ಕಾರಗಳು

ಬದಲಾಯಿಸಿ

ಚಿತ್ರಗಳು

ಬದಲಾಯಿಸಿ

|

ಉಲ್ಲೇಖಗಳು

ಬದಲಾಯಿಸಿ
  1. ಸೊಬಗು, 'ಕನ್ನಡನಾಡಿನ ಸಿರಿವಂತಿಕೆ'-ಅಹಲ್ಯ ಬಲ್ಲಾಳ್
  2. Mumbai: Dramas convey social and cultural message; Ahalya Ballal, 17 Jan 2014
  3. Ahalya Ballal, thorough and good
  4. 10 ಏಪ್ರಿಲ್ 2015, vArtabharati, ಅಂಕಣ - ಮುಂಬಯಿ ಮೇರಿ ಜಾನ್‌ ಯಶಸ್ವಿ ರಂಗ ಪ್ರಯೋಗ ನೀಡುವ ಆತ್ಮೋಲ್ಲಾಸ ಬುಧವಾರ - ಫೆಬ್ರವರಿ -08-2012
  5. Science Graph
  6. ಅಹಲ್ಯಾ ಬಲ್ಲಾಳ್ ಒಂದೊಂದೂ ನೆನಪು ಪುಟಗಳ ನಡುವಿನ ನವಿಲುಗರಿ: ಅಹಲ್ಯಾಬಲ್ಲಾಳ್, Wednesday, 22 May,
  7. one India kannada, June 19, 2014, ಜೂ. 21ರಂದು ಮಾಯಾವಿ ಸರೋವರ ನಾಟಕ
  8. kannada ranga bhumi, facebook, `ಮುಂಬಯಿ ಚುಕ್ಕಿ ಸಂಕುಲ’ ತಂಡದಿಂದ, ‘ಚೌಕಟ್ಟಿನಾಚೆಯ ಚಿತ್ರಗಳು’
  9.  
    ಅಭಿನೇತ್ರಿ ಅಹಲ್ಯ ಬಲ್ಲಾಳರನ್ನು ಅಧ್ಯಕ್ಷೆ ಕಮಲ ಕಾಂತರಾಜ್, ಪುಷ್ಪಗುಚ್ಛದಿಂದ ಗೌರವಿಸುತ್ತಿದ್ದಾರೆ. ಜೊತೆಯಲ್ಲಿ ಲಕ್ಷ್ಮಿಸೀತಾರಾಂ ಸಹ ಇದ್ದಾರೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
  1. ಅವಧಿ,ಕ್ವಿಜ಼್ :'ಬಂತು ಸರಿ ಉತ್ತರ, ಕನ್ಗ್ರಾಟ್ಸ್, ಅಹಲ್ಯ ಬಲ್ಲಾಳ್',ಮಾರ್ಚ್,೨೨,೨೦೧೦