ಕರಡು:ಬಿ.ಆರ್.ಮಂಜುನಾಥ್

(ಡಾ.ಬಿ.ಆರ್.ಮಂಜುನಾಥ್ ಇಂದ ಪುನರ್ನಿರ್ದೇಶಿತ)
ಡಾ. ಬಿ.ಆರ್. ಮಂಜುನಾಥ್
ಬಿಳಿಗೆರೆ ರಾಮಚಂದ್ರರಾವ್ ಮಂಜುನಾಥ್
Born
ಮಂಜುನಾಥ.
Nationalityಭಾರತೀಯ.
EducationPh.D.(Physics), MBA,(UCLA)
Occupation(s)’ಬಾಂಬೆ ಟೆಕ್ಸ್ ಟೈಲ್ ರಿಸರ್ಚ್ ಅಸೋಸಿಯೇಷನ್’(BTRA) ನಲ್ಲಿ ವಿಜ್ಞಾನಿಯಾಗಿದ್ದರು. ನಂತರ ಖಾಸಗಿ ಸಂಸ್ಥೆಯ ನಿರ್ದೇಶಕರಾಗಿ ದುಡಿದು, ನಿವೃತ್ತರಾಗಿದ್ದಾರೆ. ಕನ್ನಡ ನಾಟಕಗಳನ್ನು ರಚಿಸುವುದು, ನಿರ್ದೇಶನ, ಮಂಜುನಾಥರಿಗೆ ಅತ್ಯಂತ ಪ್ರಿಯ ವಿಷಯಗಳಲ್ಲಿ ಪ್ರಮುಖವಾದುದು. ಸಂಸ್ಥೆಗಳನ್ನು ಕಟ್ಟುವುದು, ಅವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸುವುದರಲ್ಲಿ ಅವರು ಮಾಹಿರರು. ಅದಕ್ಕಾಗಿ ಒಂದು ಸುವ್ಯವಸ್ಥಿತ ತಂಡವನ್ನು ಕಟ್ಟಿ ಬೆಳೆಸುತ್ತಾ ಬಂದಿದ್ದಾರೆ.
Known forಬರೆದು ನಿರ್ದೇಶಿಸಿದ ನಾಟಕಗಳು : * ಬೆಳ್ಳಿಬಯಲು, * ಬೆಂದಕಾಳೂರು, * ಬಿಸಿಲ್ಗುದುರೆ, * ಹೀರಾ,* ಹೂಗಿಡದಲ್ಲಿ ಹೂ ಅರಳಿಹುದು, * ನಾ ದ್ಯಾವ್ರನ್ನ್ ಕಾಣ್ಬೇಕು, * ಸಾಕಾರ. ಪ್ರಶಸ್ತಿಗಳು : ವರ್ಷ ೨೦೧೨ ರ, ಮಾರ್ಚ್ ತಿಂಗಳ ೨೪ ಶನಿವಾರ ಮತ್ತು ೨೫ ರ ಭಾನುವಾರ 'ಮುಂಬಯಿನ ಕರ್ನಾಟಕ ಸಂಘದ ಡಾ.ವಿಶ್ವೇಶ್ವರಯ್ಯ ಸಭಾಂಗಣ'ದಲ್ಲಿ 'ಸಾಧನಶಿಖರ ಪ್ರಶಸ್ತಿ' ಗಳಿಸಿದರು.
Website(SVIMS) SirM Visvesvaraya Institute of Management Studies & Research

'ಡಾ.ಬಿ.ಆರ್.ಮಂಜುನಾಥ್,'ಎಂದೇ ಅವರ ಗೆಳೆಯರಿಗೆ ಮತ್ತು ಮುಂಬೈ ನಿವಾಸಿಗಳಿಗೆ ಪರಿಚಿತರಾಗಿರುವ ಬಿಳಿಗೆರೆ []ರಾಮಚಂದ್ರರಾವ್ ಮಂಜುನಾಥ್, ಮುಂಬಯಿನಗರದ ಒಬ್ಬ, ನಾಟಕ ಕರ್ತೃ, ನಿರ್ದೇಶಕ, ನಟ,ನಿರ್ವಾಹಕರು, ಮತ್ತು ಚಿತ್ರಕಲೆಯಲ್ಲಿ ಆಸಕ್ತರು. [] ಸುಮಾರು ೪ ದಶಕಗಳಿಗಿಂತ ಹೆಚ್ಚು ಸಮಯ ಮುಂಬಯಿಯ ಕನ್ನಡ ರಂಗಭೂಮಿಯನ್ನು ಕಟ್ಟುವ ಕೆಲಸದಲ್ಲಿ ಹಿರಿಯ ರಂಗಕರ್ಮಿಗಳ ಜೊತೆ ಕೆಲಸಮಾಡಿ ಹಲವಾರು ನಾಟಕ ಪ್ರದರ್ಶನಗಳನ್ನು ಕೊಟ್ಟಿರುತ್ತಾರೆ. ಅವರು ಬರೆದು ನಿರ್ದೇಶಿಸಿದ 'ಬಿತ್ತಿ ಬೆಳೆದವರು' ನಾಟಕ ಬಹಳ ಜನಪ್ರಿಯತೆಯನ್ನು ಗಳಿಸಿತು.

ಜನನ,ವಿದ್ಯಾಭ್ಯಾಸ

ಬದಲಾಯಿಸಿ

ಮಂಜುನಾಥ್, ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕು 'ಬಿಳಿಗೆರೆ' ಗ್ರಾಮದ ಲಾಯರ್ ರಾಮಚಂದ್ರ ರಾಯರು, ಮತ್ತು ಸೀತಮ್ಮ ದಂಪತಿಗಳ ಮಗನಾಗಿ, ೨೧-೧೨-೧೯೪೦ ರಲ್ಲಿ ಜನಿಸಿದರು. ರಾಮಚಂದ್ರರಾಯರ ೭ ಮಕ್ಕಳಲ್ಲಿ ೪ ಹೆಣ್ಣು, ೩ ಗಂಡು ಹುಡುಗರಲ್ಲಿ ಮಂಜುನಾಥ್ ಎರಡನೆಯವರು. ಅವರ ಅಕ್ಕಂದಿರೂ ಮೆಡಿಕಲ್ ಕಾಲೇಜ್ ವಿದ್ಯಾಭ್ಯಾಸ, ಅಣ್ಣ, ಇಂಜಿನಿಯರ್ ಹಾಗೂ ಕ್ರೀಡಾಪಟು. ಮನೆಯ ಹಿರಿಯರು ಸಂಗೀತ, ಸಾಹಿತ್ಯ, ನೃತ್ಯ,ಕಲೆಗಳಲ್ಲಿ ಆಸಕ್ತರು. ವಂಶಪಾರಂಪರ್ಯವಾಗಿ ಬಂದ ಶ್ಯಾನುಭೋಗಿಕೆ ಇದ್ದರೂ, ತಂದೆಯವರು ವಕೀಲರಾಗಲು ಇಷ್ಟಪಟ್ಟು ಮೈಸೂರಿನ ಮಹಾರಾಜ ಕಾಲೇಜಿನ ಬಿ.ಎ ಪದವಿಗಳಿಸಿದರು. ಮದ್ರಾಸ್ ಪಟ್ಟಣಕ್ಕೆ ಹೋಗಿ ಬಿ.ಎಲ್.ಪರೀಕ್ಷೆ ಪಾಸುಮಾಡಿ ತುಮಕೂರಿನಲ್ಲೇ ಲಾಯರ್ ಆದರು. ತಾತ (ತಾಯಿವರ ತಂದೆ) ಹೊಸಕೆರೆ ನಾಗಪ್ಪ ಶಾಸ್ತ್ರಿಗಳು, [] ಶೃಂಗೇರಿ ಶಾರದಾ ಮಠದಲ್ಲಿ ಸಂಸ್ಕೃತ ವೇದಾಧ್ಯಯನ ಮಾಡಿದರು. ಅವರೂ ಪ್ಲೀಡರ್ ಪರೀಕ್ಷೆ ಪಾಸುಮಾಡಿ ನರಸಿಂಹರಾಜ ಪುರದಲ್ಲಿ ವಕೀಲಿವೃತ್ತಿ ಹಿಡಿದರು. ಭಾರತದ ಸಂವಿಧಾನ ಕರ್ತೃ, ಡಾ.ಬಿ.ಆರ್.ಅಂಬೇಡ್ಕರ್[] ರ ಸಂಸ್ಕೃತದ ಗುರುಗಳಾಗಿದ್ದ ಅವರು ಅಂಬೇಡ್ಕರ್ ರ ಕೋರಿಕೆಯ ಮೇರೆಗೆ ಬೊಂಬಾಯಿಗೆ ಬಂದು 'ಖಲ್ಸಾ ಕಾಲೇಜಿನಲ್ಲಿ ಸಂಸ್ಕೃತ ಮತ್ತು ಕನ್ನಡದ ಪ್ರಾಧ್ಯಾಪಕ'ರಾಗಿ ಕೆಲಸಮಾಡಿದರು. ಶಾಸ್ತ್ರಿಗಳು ಬೊಂಬಾಯಿನ ಖಲ್ಸಾಕಾಲೇಜಿನಲ್ಲಿ[] ಕೆಲಸಮಾಡಿದ ಪ್ರಥಮ ಸಂಸ್ಕೃತ/ಕನ್ನಡ ಭಾಷಾ ಕನ್ನಡ ಪ್ರಾಧ್ಯಾಪಕರೆಂದು ಹೆಸರುಗಳಿಸಿದ್ದಾರೆ. ಮಹಾತ್ಮ ಗಾಂಧಿಜಿಯವರ 'The story of my experiments with truth,'ಎಂಬ ಪುಸ್ತಕವನ್ನು ಸಂಸ್ಕೃತದಲ್ಲಿ (सत्यशोधन) [] ಬರೆದು ಪ್ರಕಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸೀತಮ್ಮನವರು ಹಿಂದಿಯಲ್ಲಿ ವಿಶಾರದ ಪರೀಕ್ಷೆಗೆ ಕಟ್ಟಿದ್ದರು. ಪರಿವಾರದ ಪ್ರಭಾವ ಮಂಜುನಾಥರಿಗೆ ಸಂಗೀತ, ನೃತ್ಯ, ಮತ್ತು ನಾಟಕ ಕಲೆಯಲ್ಲಿ ಆಸಕ್ತಿ ಬಂದಿದೆ. ಮನೆಯಲ್ಲಿ ದೊಡ್ಡ ಪುಸ್ತಕ ಭಂಡಾರವಿತ್ತು. ೩ ನೇ ಈಯತ್ತೆಯಲ್ಲಿ ನಾರಾಯಣರಾವ್ ಗುರುಗಳ. ಪ್ರೇರಣೆಯಿಂದ 'ನನ್ನಗೋಪಾಲ' ಎಂಬ ನಾಟಕದಲ್ಲಿ ಮೊಟ್ಟಮೊದಲು ಅಭಿನಯಿಸಿದರು. ಕೆ.ಎಸ್.ಶಂಕರ್ ಎಂಬ ಮತ್ತೊಬ್ಬ ಉಪಾಧ್ಯಾಯರು ಎಚ್ಚೆಮನಾಯಕ, ನಳದಮಯಂತಿ, ಕಾಶಿಯಯಾತ್ರೆ, ಕಾಮ ದಹನ, ಮೊದಲಾದ ನಾಟಕಗಳನ್ನು ಆಡಿಸಿ ಪ್ರೋತ್ಸಾಹಿಸಿದರು. ಅಜ್ಜಂಪುರದಲ್ಲಿ ನಡೆದ ನಾಟಕ ಸ್ಪರ್ಧೆಯಲ್ಲಿ ಎಚ್ಚೆಮನಾಯಕ ನಾಟಕದ 'ಚಾಂದ್ ಖಾನ್' ಪಾತ್ರಕ್ಕೆ ಮಂಜುನಾಥ್ 'ಬೆಳ್ಳಿ ಪದಕ' ಗಳಿಸಿದರು.

ವಿದ್ಯಾಭ್ಯಾಸ

ಬದಲಾಯಿಸಿ

ಪ್ರಾಥಮಿಕ ಶಾಲೆಯಿಂದ ಮಾಧ್ಯಮಿಕ,ಹಾಗೂ ಪ್ರೌಢಶಾಲಾ ಅಧ್ಯಯನ ತಿಪಟೂರಿನಲ್ಲಿ ನಡೆಯಿತು. ಭೋಜರಾವ್ ಬೋಳಾರ್ ಎಂಬ ಕಥಕ್ ನೃತ್ಯ ಅಧ್ಯಾಪಕರು, ಭರತನಾಟ್ಯವನ್ನೂ ಕಲಿಸಿದರು. ಮುಂದೆ ರಾಜಾರಾಂ ಗುರುಗಳಿಂದ ಭಾರತ ನಾಟ್ಯವನ್ನು ಕಲಿತರು. ತಂದೆಯವರು ಬೆಂಗಳೂರಿನಲ್ಲಿ ತಮ್ಮ ವಕೀಲಿ ವೃತ್ತಿಯಿಯನ್ನು ಮುಂದುವರೆಸಿದರು. ಮಂಜುನಾಥ್ ೧೯೫೮ ರಲ್ಲಿ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಬಿ.ಎಸ್ಸಿ ಆನರ್ಸ್ ಪದವಿಯನ್ನು ಗಳಿಸಿ,೧೯೬೧ ರಲ್ಲಿ ಸೆಂಟ್ರೆಲ್ ಕಾಲೇಜಿನಲ್ಲಿ ಎಂ.ಎಸ್ಸಿ.ಪದವಿಗೆ ಗಳಿಸಿದರು.

ವೃತ್ತಿ

ಬದಲಾಯಿಸಿ

ಪದವಿ ಗಳಿಸಿದ ಬಳಿಕ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಬೌತಶಾಸ್ತ್ರದ ಅಧ್ಯಾಪಕರಾಗಿ ಸೇರಿ ೪ ತಿಂಗಳು ಕೆಲಸಮಾಡಿದರು. ತಂದೆಯವರು ಸಂಶೋದನೆಯಲ್ಲಿ ಆಸಕ್ತನಾದ ಮಗನನ್ನು ಮುಂಬಯಿನಲ್ಲಿ ಪ್ರಯತ್ನಿಸಲು ಕಳಿಸಿಕೊಟ್ಟರು.

ಮುಂಬಯಿಗೆ

ಬದಲಾಯಿಸಿ

ಮುಂಬಯಿನ ಬಿ.ಟಿ.ಆರ್.ಎ.(BTRA)[] ಸಂಶೋಧನಾಲಯದಲ್ಲಿ ಜೂನಿಯರ್ ಸೈಂಟಿಫಿಕ್ ಆಫ್ಸರ್ ಆಗಿ ಸೇರಿದರು. ಹೊಸದಾಗಿ ಸ್ಥಾಪನೆಯಾಗಿದ್ದ ಬಿ.ಟಿ.ಆರ್.ಎ. ಮದ್ರಾಸ್ ವಿಶ್ವವಿದ್ಯಾಲಯ ಮತ್ತು ಮುಂಬಯಿನ 'ಭಾಭಾ ಅಣು ವಿಜ್ಞಾನ ಕೇಂದ್ರ'ದಲ್ಲಿ ಟ್ರೇನಿಂಗ್ ಗಾಗಿ ಕಳಿಸುತ್ತಿದ್ದರು. ವಿದೇಶಗಳಲ್ಲೂ ಹೆಚ್ಚಿನ ಶಿಕ್ಷಣ, ತರಪೇತಿಗಳಿಗಾಗಿ ಕಳಿಸಿಕೊಡುವ 'ಸ್ಕೀಮ್' ನಲ್ಲಿ ಮಂಜುನಾಥರನ್ನು 'ಸ್ಕಾಟ್ಲೆಂಡ್' (scotland) ದೇಶದ ಪ್ರತಿಷ್ಠಿತ ಕಾಲೇಜಿನಲ್ಲಿ Studies of polymer & X-ray diffraction ವಿಷಯದಲ್ಲಿ ೨ ವರ್ಷ ಡಾ.ಮೆರಿಡಿತ್ ರವರ ವಿದ್ಯಾರ್ಥಿಯಾಗಿ ಕೆಲಸಮಾಡಿ, ಪಿ.ಎಚ್.ಡಿ.ಪದವಿ ಗಳಿಸಿದರು. ಮುಂಬಯಿಗೆ ವಾಪಸ್ಸಾದ ಡಾ.ಮಂಜುನಾಥ್ ಬಿ.ಟಿ.ಆರ್.ಎ ಸಂಸ್ಥೆಯಲ್ಲಿ ೩ ವರ್ಷ ಸಂಶೋಧನೆ ನಡೆಸಿ, ೩೫ ಪೇಪರ್ ಗಳನ್ನು ಪ್ರಕಟಿಸಿದರು. ನಂತರ, ಮುಂಬಯಿನ ಟೆಕ್ಸ್ ಟೈಲ್ಸ್ ಕಮಿಟಿಯಲ್ಲಿ (Textiles Committee) 'ಡೈರೆಕ್ಟರ್ ಆಫ್ ಲ್ಯಾಬ್' ಆಗಿ ಆಯ್ಕೆಯಾದರು. ಮುಂದೆ 'ಡೈರೆಕ್ಟರ್ ಆಫ್ ವಿಜಿಲೆನ್ಸ್',ಮತ್ತು ಇನ್ಸ್ಪೆಕ್ಷನ್ ವಿಭಾಗದಲ್ಲಿ ಕೆಲಸ ಮಾಡಿದರು.

ಮೈಸೂರು ಅಸೋಸಿಯೇಷನ್ ನಲ್ಲಿ

ಬದಲಾಯಿಸಿ

'ವೃತ್ತಿಯಲ್ಲಿ ’ಬಾಂಬೆ ಟೆಕ್ಸ್ ಟೈಲ್ ರಿಸರ್ಚ್ ಅಸೋಸಿಯೇಷನ್’(BTRA) ನಲ್ಲಿ ವಿಜ್ಞಾನಿಯಾಗಿದ್ದರು. ನಂತರ ಖಾಸಗಿ ಸಂಸ್ಥೆಯ ನಿರ್ದೇಶಕರಾಗಿ ದುಡಿದು, ನಿವೃತ್ತರಾಗಿದ್ದಾರೆ. ಕನ್ನಡ ಪರ ಚಟುವಟಿಕೆಗಳಲ್ಲಿ ಅತಿಯಾದ ಆಸಕ್ತಿ.'ಮೈಸೂರ್ ಅಸೋಸಿಯೇಷನ್ ಮುಂಬಯಿ' ಸಂಸ್ಥೆಯ ಲಲಿತಕಲಾವಿಭಾಗದ ಹಲವು ದಿಗ್ಗಜರಾದ, 'ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ', ವಿ.ಕೆ.ಮೂರ್ತಿ, ಮತ್ತು ದಿವಂಗತ,'ಆರ್.ನಾಗೇಂದ್ರರಾವ್' ರಂತಹ 'ಮುತ್ಸದ್ಧಿ'ಗಳಿಂದ ಪ್ರಭಾವಿತರಾಗಿ, ತಾವೂ ತಮ್ಮದೇ ರೀತಿಯಲ್ಲಿ, ಸಮರ್ಥವಾಗಿ ಯೋಗದಾನ ಮಾಡುತ್ತಿದ್ದಾರೆ. ೧೯೭೨-೯೩ಸುಮಾರು ೮೦ ನಾಟಕಗಳನ್ನು ನಿರ್ದೇಶಿಸಿ ಅಭಿನಯಿಸಿದ್ದರು. ೧೬ ನಿರ್ದೇಶನ ನೇಸರು, ಕಸ್ತೂರಿ, ಉದಯವಾಣಿ ಮೊದಲಾದ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಿದ್ದಾರೆ.

೧೯೮೨-೧೯೯೨

ಬದಲಾಯಿಸಿ

(೧೯೮೪-೧೯೯೨, ೮ ವರ್ಷ) 'ಇಂಟೆಕ್ಸಾ' ಎಂಬ ಎಕ್ಸ್ ಪೋರ್ಟ್ಸ್, ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ರಷಿಯನ್ (ಭಾರತ) ಕಂಪೆನಿಯ ಶಾಖೆಗಳನ್ನು ಮುಂಬಯಿ ಮತ್ತು ಇತರ ಪ್ರಮುಖ ನಗರಗಳಲ್ಲಿ ಸ್ಥಾಪಿಸಿ,ಅಲ್ಲಿನ ಸಿಬ್ಬಂದಿಯನ್ನು ತರಪೇತಿ ಮಾಡಿ, ಪರಿಕ್ಷಾವಿಧಿಗಳನ್ನು ಅಭಿವೃದ್ಧಿ ಪಡಿಸಿದರು.

೧೯೯೩ ರಲ್ಲಿ

ಬದಲಾಯಿಸಿ

೧೯೯೩ ರಷ್ಯಾದೇಶದ'ಇಂಚಿಪ್ ಟೆಸ್ಟಿಂಗ್ ಲ್ಯಾಬ್' ಮುಂಬಯಿನಲ್ಲಿ ಶುರುವಾಯಿತು. ೧೯೯೨-೨೦೦೫ ಅದರ ಆಫೀಸು, ಮೈಸೂರ್ ಅಸೋಸಿಯೇಷನ್ ಕಟ್ಟಡದಲ್ಲಿತ್ತು. ೧೯೯೦ ಏನ್.ಕೆ.ಇ.ಸ್. ಸ್ಕೂಲಿನ ಬಂಗಾರದ ಹಬ್ಬದ ವರ್ಷವಾಗಿತ್ತು. ಸುಬ್ರಮಣಿ ಅಯ್ಯರ್, ಶಾಲೆಯ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ಸುಬ್ರಮಣಿಯವರ ಆಕಸ್ಮಿಕ ನಿಧನದಿಂದ ಏನ್.ಕೆ.ಇ.ಎಸ್ ಶಾಲೆಯ ಅಭಿವೃದ್ಧಿ ಯೋಜನೆಗಳನ್ನು ಮುನ್ನಡೆಸುವ ಸಮರ್ಥವ್ಯವಸ್ಥಾಪಕರು ಮುಂದೆ ಬರದೆ,

  1. ಡಾ.ಎಚ್.ಎಸ್.ಶ್ರೀನಿವಾಸ್,
  2. ಎಸ್.ಕೆ.ಅಯ್ಯಂಗಾರ್,
  3. ಪಿ.ಕೆ.ಸಾಲಿಯಾನ್,
  4. ಬಿ.ಎಸ್.ಸುರೇಶ್,
  5. ಡಾ.ವೈ.ಡಿ.ವೆಂಕಟೇಶ್,
  6. ಎಚ್.ಆರ್.ವಸಂತ್,
  7. ಡಾ.ಬಿ.ಆರ್.ಮಂಜುನಾಥ್,
  8. ಡಾ.ಪಿ.ವಿ.ಪರಮೇಶ್ವರನ್,
  9. ಡಾ.ಜಿ.ಎಸ್.ಶಂಕರ್ ಲಿಂಗ್,
  10. ಕೆ.ಮಂಜುನಾಥಯ್ಯ,
  11. ಕೆ.ಏನ್.ಕೀರ್ತಿ,
  12. ಮಹೇಶ್ ಕುಮಾರ್ ಶರ್ಮಾ,
  13. ಭವಾನಿ ಭಾರ್ಗವ್,
  14. ಡಾ.ಅರವಿಂದ್ ಧೋಂಡ್,

ಮೊದಲಾದವರು ಮುಂದೆಬಂದು, ಮಹತ್ವದ ಜವಾಬ್ದಾರಿಯುತ ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ. ಡಾ.ಮಂಜುನಾಥ್, ಅದಕ್ಕಾಗಿ ಸಮಿತಿಗಳನ್ನು ರಚಿಸಿ ನಿರ್ವಹಣೆಯ ಜವಾಬ್ದಾರಿಗಳನ್ನು ವಹಿಸಿಕೊಟ್ಟು ಮೇಲ್ವಿಚಾರಣೆಗಳನ್ನು ಸಮರ್ಪಕವಾಗಿ ನೋಡಿಕೊಳ್ಳುತ್ತಿದ್ದಾರೆ.

SVIMS ವಿದ್ಯಾ ಸಂಸ್ಥೆಯ ಡೈರೆಕ್ಟರ್ ಜನರಲ್, ಮತ್ತು ಸಲಹೆಗಾರ

ಬದಲಾಯಿಸಿ

ಡಾ.ಬಿ.ಆರ್.ಮಂಜುನಾಥ್, 'ಸರ್.ಎಂ.ವಿಶ್ವೇಶ್ವರಯ್ಯ ಇನ್ಸ್ಟಿ ಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಮತ್ತು ರಿಸರ್ಚ್, ಮುಂಬಯಿಯ', [] ೮ ಜನ "ಕೋರ್ ಮೆಂಟರ್ಸ್ ಪಟ್ಟಿ" ಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಎನ್.ಕೆ.ಇ.ಎಸ್.ವಿದ್ಯಾಸಂಸ್ಥೆ,ವಡಾಲದ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯರಾಗಿ ದುಡಿಯುತ್ತಿದ್ದಾರೆ. []

ಪದವಿಗಳು

ಬದಲಾಯಿಸಿ
  • ಪಿ.ಎಚ್.ಡಿ ಪದವಿಯನ್ನು ಯುನೈಟೆಡ್ ಕಿಂಗ್ಡಮ್ ನ 'ಸ್ಟ್ರಾಥ್ ಕ್ಲೈಡ್ ವಿಶ್ವವಿದ್ಯಾಲಯ'ದಿಂದ (Strathclyde), ಪಡೆದರು.
  • ಎಂ.ಬಿ.ಎ. ಪದವಿಯನ್ನು, ಯುಸಿಎಲ್.ಎ ನಿಂದ,(UCLA),ಗಳಿಸಿದರು.

ಪಿ.ಎಚ್.ಡಿ.ಗೆ ಆಯ್ದುಕೊಂಡ ವಿಷಯ

ಬದಲಾಯಿಸಿ
  • "Structure of cellulose and modified cellulose fibres".

ಬಿಜಿನೆಸ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಹೆಚ್ಚಿನ ಗಮನಕೊಟ್ಟು, ಕಾರ್ಯಮಗ್ನರಾಗಿದ್ದಾರೆ.ಮುಂದೆ ವಿದ್ಯಾಪ್ರಸಾರ ವಲಯದಲ್ಲಿ ಪರಮಾಸಕ್ತಿಯನ್ನು ಬೆಳೆಸಿಕೊಂಡರು.

  • ೩೫ ಕ್ಕಿಂತ ಹೆಚ್ಚು ಅನುಸಂಧಾನ ಪ್ರಬಂಧಗಳನ್ನು ಮಂಡಿಸಿದ್ದಾರೆ.[೧೦]
  • ೨ ಪೇಟೆಂಟ್ ಗಳನ್ನು ಸ್ಥಾಪಿಸಿದ್ದಾರೆ.
  • ಇಂಟೆಕ್ಸ ಇಂಡಿಯ (INTEXA INDIA) ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಪ್ರಮುಖಪಾತ್ರವನ್ನು ವಹಿಸಿದರು.

ಹೀಗೆಯೇ ಮುಂದುವರೆಯುತ್ತಾ, ಒಂದು ಭಾರತೀಯ ಕಂಪೆನಿಯನ್ನು ಹುಟ್ಟುಹಾಕಿದರು. 'ಬಹುರಾಷ್ಟೀಯ ಇಂಟರ್ಟೆಕ್' (Intertek)ಎಂಬ ಕಂಪೆನಿಗೆ ಸೇರಿಸಿ, ಅದರ ಬಿಜಿನೆಸ್ಸನ್ನು ಅಭಿವೃದ್ಧಿಪಡಿಸಿಗೊಳಿಸಿ,ಅದರ ಸೇವೆಗಳನ್ನು ಭಾರತದ ನೆರೆಯ ರಾಷ್ಟ್ರಗಳಾದ,

  • ಶ್ರೀಲಂಕ,
  • ಬಂಗ್ಲಾದೇಶ್,
  • ಮಾರಿಷಸ್,ಗಳಿಗೂ ಹಬ್ಬುವಂತೆ ವ್ಯವಸ್ಥೆಮಾಡಿದರು.

ಯುವ ನಿರ್ವಾಹಕರ ತರಪೇತಿ ಕಾರ್ಯಕ್ರಮ

ಬದಲಾಯಿಸಿ

ಪ್ರಸ್ತುತದಲ್ಲಿ ಡಾ.ಮಂಜುನಾಥರು, ವಿದ್ಯಾ ಪ್ರಸಾರ, ಹಾಗೂ ಬಿಸಿನೆಸ್ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ಉದಯೋನ್ಮುಖ, ಪ್ರತಿಭಾನ್ವಿತ ಯುವ ಕಂಪೆನಿ ನಿರ್ವಾಹಕರಿಗೆ ಒಳ್ಳೆಯ ಪ್ರಶಿಕ್ಷಣ ಕೊಡುವ ನಿಟ್ಟಿನಲ್ಲಿ ಬಹಳ ಮಹತ್ವದ ಕೆಲಸಗಳನ್ನು ಮಾಡುತ್ತಿದ್ದಾರೆ.

ಮಂಜುನಾಥರ ಇತರ ಆಸಕ್ತಿಗಳು

ಬದಲಾಯಿಸಿ
  1. ರಂಗಭೂಮಿ,
  2. ನೃತ್ಯ,
  3. ಸಂಗೀತ,
  4. ಚಿತ್ರಕಲೆ,
  5. ಗಗನ ಭೌತ ಶಾಸ್ತ್ರ,
  6. ಭಾಷಾ ಶಾಸ್ತ್ರ,
  7. ಮಾನವ ವಿಜ್ಞಾನ ಶಾಸ್ತ್ರ,
  8. ಅಧ್ಯಾತ್ಮವಿದ್ಯೆ, ಮೊದಲಾದವುಗಳು

ಬೆಂಗಳೂರಿನಲ್ಲಿ ನಾಟಕ ಪ್ರದರ್ಶನ

ಬದಲಾಯಿಸಿ

ಸನ್.೨೦೧೩ ರಲ್ಲಿ, ’ಬೆಂಗಳೂರು ಕಲಾಪ್ರೇಮಿ ಫೌಂಡೇಶನ್’ ಹಾಗೂ ’ಮುಂಬಯಿನ ಮೈಸೂರ್ ಅಸೋಸಿಯೇಷನ್’ ಹಮ್ಮಿಕೊಂಡ ’೩ ದಿನಗಳ ಕನ್ನಡ ನಾಟಕೋತ್ಸವ ಕಾರ್ಯಕ್ರಮ’ ಬೆಂಗಳೂರಿನ ರಸಿಕರನ್ನು ರಂಜಿಸಿತು. (ಜೂನ್,೧,೨,೩) ಜೂನ್ ೧ ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ’ಬೆಳ್ಳಿಬೈಲು ನಾಟಕ ಪ್ರದರ್ಶನ ನಡೆಯಿತು.'[೧೧] ಹಣವಂತವ್ಯಕ್ತಿಯೊಬ್ಬ ತಾನೊಬ್ಬ ಪ್ರತಿಷ್ಠಿತವ್ಯಕ್ತಿಯೆಂದು ಸೋಗುಹಾಕಿಕೊಂಡು ಸಮಾಜದಲ್ಲಿ ತನ್ನ ಪ್ರಯೋಜನಕ್ಕಾಗಿ ಬಡಜನರ ಪ್ರಾಣತೆಗೆಯಲೂ ಹೇಸದ ವ್ಯಕ್ತಿಯೊಬ್ಬ ಜೀವನಚಿತ್ರಣವಾಗಿತ್ತು. ಜೂನ್ ೨ ರಂದು, 'ಮಲ್ಲೇಶ್ವರದ ಸೇವಾಸದನ ಸಭಾಂಗಣ'ದಲ್ಲಿ ’ಸಾಕಾರ’ ವೆಂಬ ಸಂಗೀತ ನಾಟಕ ಪ್ರದರ್ಶನ ನಡೆಯಿತು. ಇಬ್ಬರು ಗೆಳೆಯರು; ಒಬ್ಬ ಬಡವ, ಮತ್ತೊಬ್ಬ ಶ್ರೀಮಂತ. ಪಂಢರಾಪುರಕ್ಕೆ ವಿಠಲನ ದರ್ಶಕಾಂಕ್ಷಿಗಳಾಗಿ ಹೋಗುತ್ತಾರೆ. ದೇವರು ಎಲ್ಲರ ಹೃದಯದಲ್ಲಿ ನೆಲೆಸಿದ್ದಾನೆ. ನಮ್ಮೊಳಗೆ ಕೆದಕಿ ನೋಡಿದಾಗ ಅದು ಅರಿವಾಗುವುದು; ಬೇರೆಲ್ಲಿಯೂ ಅರಸುತ್ತಾ ಹೋಗುವ ಅವಶ್ಯಕತೆ ಇಲ್ಲ.ಎನ್ನುವ ಸಂದೇಶ ಸಿಗುವ ನಾಟಕಕ್ಕೆ ಸಮಯೋಚಿತವಾಗಿ ಅಳವಡಿಸಿದ್ದ ದಾಸರ ಕೀರ್ತನೆಗಳು ನಾಟಕಕ್ಕೆ ಮೆರುಗನ್ನು ಕೊಟ್ಟಿತ್ತು.ನಾಟಕದ ಬಳಿಕ, ಹೆಸರಾಂತ ನಾಟಕ ವಿಮರ್ಶಕ, ವೈ.ವಿ. ಗುಂಡೂರಾವ್ ರವರಿಂದ ನವಿರಾದ ಹಾಸ್ಯ ಕಾರ್ಯಕ್ರಮವಿತ್ತು. ಜೂನ್ ೩ ರಂದು 'ಎಚ್.ಎನ್.ಕಲಾಕ್ಷೇತ್ರ'ದಲ್ಲಿ 'ಅಂತರಂಗ ಏರ್ಪಡಿಸಿದ್ದ ವ್ಯವಸ್ಥೆಯಲ್ಲಿ 'ಬೆಳ್ಳಿಬೈಲು ನಾಟಕವನ್ನು ಮತ್ತೊಮ್ಮೆ ಪ್ರದರ್ಶಿಸಲಾಯಿತು. ಈಗ ತಿಳಿಸಿದ ೩ ಪ್ರಾಯೋಗಿಕ ನಾಟಕಗಳನ್ನು 'ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ' ಪ್ರಾಯೋಜಿಸಿತ್ತು.

ಫೋಟೋ ಪ್ರದರ್ಶನ

ಬದಲಾಯಿಸಿ

ಮೈಸೂರ್ ಅಸೋಸಿಯೇಷನ್ ಮುಂಬಯಿ ಯ, ಕನ್ನಡ ಕಲಾತಂಡ ತನ್ನ ಅಸ್ತಿತ್ವದಲ್ಲಿ ೭ ದಶಕಗಳ ಕಾಲ,ಅರ್ಪಿಸಿದ 'ನಾಟಕಗಳ ಪಕ್ಷಿನೋಟ'ವನ್ನು ಛಾಯಾ ಚಿತ್ರಗಳ ಮೂಲಕ ತೋರಿಸಲಾಯಿತು. ಮುಂಬಯಿನ ಮೈಸೂರ್ ಅಸೋಸಿಯೇಷನ್ ಗೆ, ವಿಠಲಮೂರ್ತಿಯವರ ಭೇಟಿ.[೧೨]

ಬರೆದು ನಿರ್ದೇಶಿಸಿದ ನಾಟಕಗಳು

ಬದಲಾಯಿಸಿ
  • ಬೆಳ್ಳಿಬಯಲು,
  • ಬೆಂದಕಾಳೂರು,
  • ಬಿಸಿಲ್ಗುದುರೆ,
  • ಹೀರಾ,
  • ಹೂಗಿಡದಲ್ಲಿ ಹೂ ಅರಳಿಹುದು,
  • ನಾ ದ್ಯಾವ್ರನ್ನ್ ಕಾಣ್ಬೇಕು,
  • ಸಾಕಾರ

ಮೊದಲಾದ ನಾಟಕಗಳನ್ನು ರಚಿಸಿ, ಇವರದೇ ನಿರ್ದೇಶನದಲ್ಲಿ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.

ಪ್ರಯೋಗಕಂಡ ನಾಟಕಗಳು

ಬದಲಾಯಿಸಿ
  • ಆ ರಾತ್ರಿ,
  • ಆ ಮನಿ,
  • ಜಾತ್ರೆ,
  • ಕತ್ತಲೆ-ಬೆಳಕು,
  • ಹಯವದನ,
  • ನಾಗಮಂಡಲ,

ಮೊದಲಾದ ಈಗಾಗಲೇ ಮಂಚೂಣಿಯಲ್ಲಿರುವ ಪ್ರಮುಖ ನಾಟಕಕೃತಿಗಳನ್ನು ತಮ್ಮದೇ ಆದ ದೃಷ್ಟಿಕೋನದಲ್ಲಿ ನಿರೂಪಿಸಿ, ನಿರ್ದೇಶಿಸಿ ಹೆಸರುಗಳಿಸಿದ್ದಾರೆ.

ಪ್ರಶಸ್ತಿ ಪುರಸ್ಕಾರಗಳು

ಬದಲಾಯಿಸಿ
  • ಸನ್. ೧೯೯೪ ರಲ್ಲಿ, 'ನಾಟಕ ಅಕಾಡೆಮಿ ಪ್ರಶಸ್ತಿ'ಗೆ ಪಾತ್ರರಾದರು.

ವರ್ಷ ೨೦೧೨ ರ, ಮಾರ್ಚ್ ತಿಂಗಳ ೨೪ ಶನಿವಾರ ಮತ್ತು ೨೫ ರ ಭಾನುವಾರ 'ಮುಂಬಯಿನ ಕರ್ನಾಟಕ ಸಂಘದ ಡಾ.ವಿಶ್ವೇಶ್ವರಯ್ಯ ಸಭಾಂಗಣ'ದಲ್ಲಿ ಮೂರು ಜನ ಸಾಧಕರಿಗೆ 'ಸಾಧನ ಶಿಖರ ಪ್ರಶಸ್ತಿಯನ್ನು ಪ್ರದಾನಮಾಡಿ ಗೌರವ ಸೂಚಿಸಲಾಯಿತು. ಡಾ.ಬಿ.ಆರ್. ಮಂಜುನಾಥ್ [೧೩] ರ ಜೊತೆ, ಇದೇ ಪ್ರಶಸ್ತಿ ಪಡೆದವರು, ಡಾ. ಸಂಜೀವ ಶೆಟ್ಟಿ, ಮತ್ತು ವಿದುಷಿ ಉಮಾ ನಾಗಭೂಷಣ. ಪ್ರಶಸ್ತಿ ವಿಜೇತರಿಗೆ, ಶಾಲು ಹೊದಿಸಿ, ಫಲ ಪುಷ್ಪಗಳನ್ನು ಅರ್ಪಿಸಿ, ಜೊತೆಯಲ್ಲಿ ಸ್ಮರಣಿಕೆ, ಪ್ರಶಸ್ತಿಪತ್ರ, ಹಾಗೂ ೧೦ ಸಾವಿರ ರೂಪಾಯಿಗಳ ನಗದು ಹಣವನ್ನು ಕೊಡಲಾಯಿತು.

ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಶಸ್ತಿ

ಬದಲಾಯಿಸಿ

೨೦೧೭ ರ,ನವೆಂಬರ್ ತಿಂಗಳಿನಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ಡಾ.ಮಂಜುನಾಥರ ಕನ್ನಡನಾಡು,ನುಡಿ, ಸಂಸ್ಕೃತಿಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಸನ್ಮಾನಮಾಡಲಾಯಿತು.[೧೪]

ಮೈಸೂರು ಅಸೋಸಿಯೇಷನ್ ನ ೯೦ ವರ್ಷದ ಜಯಂತಿ

ಬದಲಾಯಿಸಿ

ಮೈಸೂರು ಅಸೋಸಿಯೇಷನ್, ಮುಂಬಯಿ, ಮುಂಬಯಿ ಮಹಾನಗರದ ಹಿರಿಯ ಕನ್ನಡ ಸಾಂಸ್ಕೃತಿಕ ಸಂಘಗಳಲ್ಲೊಂದಾಗಿದ್ದು ೯೦ ವರ್ಷಗಳಿಂದ ಕೆಲಸಮಾಡುತ್ತಿದೆ. ಕೆ.ಮಂಜುನಾಥಯ್ಯ ನವರು, ಮತ್ತು ಡಾ.ಬಿ.ಆರ್.ಮಂಜುನಾಥ್, ಶ್ರೀಮತಿ ಕಮಲ (ಅಸೋಸಿಯೇಷನ್ ನ ಈಗಿನ ಅಧ್ಯಕ್ಷೆ), ಸಕ್ರಿಯವಾಗಿ ಪಾಲ್ಗೊಂಡಿದ್ದರು. [೧೫]

"ಶ್ರೀರಂಗ ರಂಗೋತ್ಸವ ನಾಟಕ ಪ್ರದರ್ಶನ-೨೦೨೨", ಮುಂಬಯಿನ ಮೈಸೂರು ಅಸೋಸಿಯೇಷನ್ ನಲ್ಲಿ

ಬದಲಾಯಿಸಿ

ಹಿಂದಿ ನಾಟಕ, ಪ್ರದರ್ಶನ [೧೬]

ಉಲ್ಲೇಖಗಳು

ಬದಲಾಯಿಸಿ
  1. Biligere/223383
  2. Nesaru, July, 2015, ’ಕಾಯೌ ಶ್ರೀ ಗೌರಿ ಕರುಣಾಲಹರಿ ತೋಯಜಾಕ್ಷಿ ಶಂಕರಿ ಈಶ್ವರಿ’-'Dr. Manjunath's painting at The Mysore Association, Mumbai'
  3. Srimat Buddha bhagawatam 1 edition By Hosakere Nagappa Sastri, Oprn library
  4. ಸಂವಿಧಾನ ಶಿಲ್ಪಿ ಡಾ| ಬಿ.ಆರ್ ಅಂಬೇಡ್ಕರ್೧೨೫ನೇ ಜಯಂತಿ ವರ್ಷಾಚರಣಾ ಕಾರ್ಯಕ್ರಮ latest news production
  5. gnkhalsa.edu.in
  6. (सत्यशोधन),ಹೊಸಕೆರೆ ನಾಗಪ್ಪ ಶಾಸ್ತ್ರಿಗಳು, ಸಂಸ್ಕೃತ ಮತ್ತು ಕನ್ನಡ ಪಂಡಿತರು, ಖಲ್ಸಾ ಕಾಲೇಜ್, ಮಾತುಂಗ, ಮುಂಬಯಿ
  7. BTRA
  8. "(Director General & Mentor SVIMS)". Archived from the original on 2016-08-11. Retrieved 2016-07-29.
  9. ಕಾರ್ಯಕಾರಿ ಸಮಿತಿ ಸದಸ್ಯ್ರರು
  10. A model for the cross linked cotton fibre,The Indian journal of textile research, vol5, june,1980, pp2936, BRM &AV
  11. ಉದಯವಾಣಿ ಇ-ಪತ್ರಿಕೆ, ಪು. ೩, 18-6-2013,'ಬೆಳ್ಳಿ ಬೈಲು-ಸಾರ್ವಕಾಲೀನ ಸಮಸ್ಯೆ ಸಮರ್ಥ ಅಭಿವ್ಯಕ್ತಿ',
  12. 'ನೇಸರು ವಿಠಲಮೂರ್ತಿಯವರ ವಿಶೇಷ ಸಂಚಿಕೆ,' ಸುಹೃದಯ ಮೂರುತಿ, ಡಾ.ಬಿ.ಆರ್.ಮಂಜುನಾಥ್, ಪು.೬,
  13. Mumbai: Karnataka Sangha to Honour Three Prominent Kannadiga Achievers- Rons Bantwal, Daijiworld Media Network, March 23, 2012
  14. ಅಭಿನಂದನೆಗಳು-ಡಾ. ಬಿ.ಆರ್.ಮಂಜುನಾಥರವರಿಗೆ.ಮೈಸೂರು ಅಸೋಸಿಯೇಷನ್ ಆಡಳಿತ ಸಮಿತಿ ಮತ್ತುಸದಸ್ಯರು. ನೇಸರು,ಡಿಸೆಂಬರ್,೨೦೧೭,ಪು.೧೮
  15. 'Ever young at 91', ನೇಸರು, ವಿಶೇಷ ಸಂ‍ಚಿಕೆ,ಏಪ್ರಿಲ್,೨೦೧೬
  16.  
    "ವಾರ್ಷಿಕ ಶ್ರೀರಂಗ ರಂಗೋತ್ಸವ ನಾಟಕ ಪ್ರದರ್ಶನ"ದಲ್ಲಿ ಒಂದು ಹಿಂದಿ ನಾಟಕ,'ಮೈ ಬಾಲ ಗಂಗಾಧರ ತಿಲಕ್ ಹೂ' ಪ್ರದರ್ಶಿಸಲಾಯಿತು. ನಿರ್ದೇಶಕ ಶ್ರೀ ಮುಜೀಬ್ ಖಾನ್ ರಿಗೆ ಡಾ. ಉಷಾ ದೇಸಾಯಿ ಪುಷ್ಪಗುಚ್ಛವನ್ನು ನೀಡಿಗೌರವಿಸುತ್ತಿದ್ದಾರೆ. ಡಾ. ಮಂಜುನಾಥ್ ಸಹ ಅಲ್ಲಿ ಉಪಸ್ಥಿತರಿದ್ದರು

ಬಾಹ್ಯ ಸಂಪರ್ಕಗಳು

ಬದಲಾಯಿಸಿ
  1. Dr.B.R.Manjunath, as I saw him-Dr. Kiran yadav, ನೇಸರು, ಪು.೧೯, ಡಿಸೆಂಬರ್,೨೦೧೭
  2. ಅಸೋಸಿಯೇಷನ್ "ನಡೆದು ಬಂದ ದಾರಿ",ಡಾ. ಬಿ.ಆರ್.ಮಂಜುನಾಥ್,ನೇಸರು, 'Ever young at 91', ಏಪ್ರಿಲ್, ೨೦೧೬, ಪುಟ.೨೨-೨೫,
  3. SVIMS Institute of commerce, Wadala, Mumbai