ಉಮಾನಾಗಭೂಷಣ

(ವಿದುಷಿ ಉಮಾ ನಾಗಭೂಷಣ ಇಂದ ಪುನರ್ನಿರ್ದೇಶಿತ)

ವಿದುಷಿ. ಉಮಾನಾಗಭೂಷಣ್,ಮಹಾರಾಷ್ಟ್ರದಲ್ಲಿ ಕರ್ನಾಟಕ ಸಂಗೀತ ಶಿಕ್ಷಣವನ್ನು ಕಲಿಸುವುದರ ಜೊತೆಗೆ ಜನಪ್ರಿಯಮಾಡಲುಮೈಸೂರು ಸಂಗೀತ ವಿದ್ಯಾಲಯ, ಡೊಂಬಿವಲಿ ಎನ್ನುವ ಹೆಸರಿನ ಸಂಸ್ಥೆಯನ್ನು ಹುಟ್ಟುಹಾಕಿ ದಶಕಗಳ ಕಾಲ ಕಾರ್ಯನಿರ್ವಹಿಸುತ್ತಾ ಬಂದಿದ್ದರು. ಈ ಹಿರಿಯ ಸಂಗೀತ ಶಿಕ್ಷಣ ಸಂಸ್ಥೆಯ ಪ್ರಾರಂಭಿಕ ಪ್ರಾಂಶುಪಾಲೆಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು. ಇಲ್ಲಿಂದ ತರಪೇತಾದ ನೂರಾರು ಯಾವುದೇ ವಯೋಮಾನದ ಶಾಸ್ತ್ರೀಯ ಸಂಗೀತ ಶಿಕ್ಷಣಾರ್ಥಿಗಳು, ಈಗ ದೇಶದ ಹಲವಾರು ಸ್ಥಳಗಳಲ್ಲಿ ಕರ್ನಾಟಕ ಸಂಗೀತ ಪ್ರಸಾರಮಾಡುತ್ತಿದ್ದಾರೆ. ಉಮಾ ದಂಪತಿಗಳಿಗೆ ತಮ್ಮ ವೈಯಕ್ತಿಕ ಸಮಸ್ಯೆಗಳಿಂದ ಮೈಸೂರು ಸಂಗೀತ ಶಿಕ್ಷಣಾಲಯವನ್ನು ಮುಚ್ಚಬೇಕಾದ ಪರಿಸ್ಥಿತಿ ಒದಗಿಬಂತು. ಹಾಗಾಗಿ ಉಮಾನಾಗಭೂಷಣ ದಂಪತಿಗಳು ಬೆಂಗಳೂರಿನಲ್ಲಿ ನೆಲಸಿ, ಅಲ್ಲಿಯೇ ಒಂದು ಸಂಗೀತದ ಶಿಕ್ಷಣಾಲಯವನ್ನು ನಿರ್ಮಿಸಿ, ಹೊಸ ಪೀಳಿಗೆಯ ಯುವಕರನ್ನು ತರಪೇತುಮಾಡುತ್ತಿದ್ದಾರೆ. []

ವಿದುಷಿ.ಉಮಾ ನಾಗಭೂಷಣ
Born
ಉಮ.

ಹುಟ್ಟಿದ ಸ್ಥಳ :ಮೈಸೂರು,ಭಾರತ
Educationಬಿ.ಎ. (ಮೈಸೂರು ವಿಶ್ವವಿದ್ಯಾಲಯ) ಸೀನಿಯರ್ ದರ್ಜೆ ಕಾಲೇಜಿನ ಸಂಗೀತ ಪರೀಕ್ಷೆಯಲ್ಲಿ ಮೈಸೂರು ರಾಜ್ಯಕ್ಕೆ ಪ್ರಥಮ ರ‍್ಯಾಂಕ್,
Years activeಇದುವರೆವಿಗೂ ಸಮರ್ಥವಾಗಿ ಕಾರ್ಯೋನ್ಮುಖರಾಗಿದ್ದಾರೆ.
Spouseಮಹಾರಾಷ್ಟ್ರ ಸರಕಾರದಲ್ಲಿ ಅಧಿಕಾರಿಯಾಗಿರುವ ನಾಗಭೂಷಣರನ್ನು ಮದುವೆಯಾದರು
Awardsಡೊಂಬಿವಲಿಯ ರೋಟರಿ ಕ್ಲಬ್, ಬೆಂಗಳೂರಿನ ಹೆಸರಾಂತ ಸಂಗೀತ ಸಂಸ್ಥೆಗಳು ಉಮಾನಾಗಭೂಷಣ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿವೆ.

ವಿದುಷಿ. ಉಮಾರವರ ಪರಿಚಯ

ಬದಲಾಯಿಸಿ

ಉಮಾ ನಾಗಭೂಷಣ, []ಮೂಲತಃ ಮೈಸೂರು ವಿಶ್ವ ವಿದ್ಯಾಲಯದ ಬಿ. ಎ. ಪರೀಕ್ಷೆಯಲ್ಲಿ ಸೀನಿಯರ್ ದರ್ಜೆ ಕಾಲೇಜಿನ ಸಂಗೀತ ಪರೀಕ್ಷೆಯಲ್ಲಿ ಮೈಸೂರು ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಗಳಿಸಿ ತೆರ್ಗಡೆಯಾದರು. ಶಾಸ್ತ್ರೀಯ ಸಂಗೀತಾಸಕ್ತರಿಂದ ಮತ್ತು ಪತ್ರಿಕಾ ವಿಮರ್ಶಕರಿಂದ ಅಪಾರ ಪ್ರಶಂಸೆಗೆ ಪಾತ್ರರಾದ ಉಮಾದಂಪತಿಗಳು ೧೯೮೨ ರಿಂದ ಮುಂಬೈನಲ್ಲಿ ನೆಲೆಸಿ, ಡೊಂಬಿವಲಿಯಲ್ಲಿ ಮೈಸೂರು ಸಂಗೀತ ಸಂಗೀತ ಕಲಿಕಾ ಶಾಲೆಯನ್ನು ಸ್ಥಾಪಿಸಿ, ಅದರ ಸ್ಥಾಪಕ ಪ್ರಾಂಶುಪಾಲರಾದರು. ಈ ವಿದ್ಯಾಲಯದ ಶಂಕುಸ್ಥಾಪನೆಯನ್ನು ಮುಂಬಯಿಯ ಹಿರಿಯ ಹಾಗೂ ಸುಪ್ರಸಿದ್ಧ ವೈಣಿಕ, ಸಿ. ಕೆ. ಶಂಕರನಾರಾಯಣ ರಾವ್ ರವರ ಹಸ್ತದಿಂದ ನೆರವೆರಿಸಲಾಗಿತ್ತು. ಆದಿನವೇ ಪ್ರಥಮ ಬ್ಯಾಚಿನ ಶ್ರೀಗಣೇಶಮಾಡಿದರು. ತಮ್ಮ ವಿದ್ವತ್, ಮತ್ತು ಅಪಾರ ಪರಿಶ್ರಮದಿಂದ ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಹೇಳಿಕೊಟ್ಟು ಅವರನ್ನು ಪ್ರತಿವರ್ಷ ಕರ್ನಾಟಕ ಸರ್ಕಾರ ಆಯೋಜಿಸುವ ಸಂಗೀತ ಪರೀಕ್ಷೆಗೆ ಸಿದ್ಧಪಡಿಸುತ್ತಿದ್ದರು.ಇದಾದ ಬಳಿಕ ಆ ವಿದ್ಯಾರ್ಥಿಗಳನ್ನು ಬೆಂಗಳೂರಿನಲ್ಲಿ ಜರುಗುವ ಪರೀಕ್ಷೆಯಲ್ಲಿ ಭಾಗವಹಿಸಲು ಕರೆದುಕೊಂಡು ಹೋಗಿ ಪರೀಕ್ಷೆಯ ಬಳಿಕ ಮುಂಬಯಿಗೆ ವಾಪಸ್ ಕರೆದುಕೊಂಡು ಬರುತ್ತಿದ್ದರು.

೨೦೧೦ ರಲ್ಲಿ ಉಮಾಭೂಷಣ ದಂಪತಿಗಳು ಬೆಂಗಳೂರಿನಲ್ಲಿ ಸೆಲೆಸಿದರು

ಬದಲಾಯಿಸಿ

ಉಮಾಭೂಷಣ ದಂಪತಿಗಳಿಗೆ ಬೆಂಗಳೂರಿಗೆ ಹೋಗಿ ನೆಲೆಸಲು ಮನಸ್ಸಾಗಿ ಅವರು ತಮ್ಮ ಸಂಗೀತ ವಿದ್ಯಾಲಯವನ್ನು ಮುಚ್ಚಿ ಬೆಂಗಳೂರಿಗೆ ಹೋಗಿ ನೆಲೆಸಿದರು.

ಪ್ರಶಸ್ತಿಗಳು

ಬದಲಾಯಿಸಿ
  1. ೨೦೧೨ ರಲ್ಲಿ ಪ್ರದಾನಮಾಡಿದ ೩ ಸಾಧಕರ ಜೊತೆಯಲ್ಲಿ ಉಮಾನಾಗಭೂಷಣರಿಗೆ ಸಾಧನ ಶಿಖರ ಪ್ರಶಸ್ತಿ ಕೊಡಲಾಯಿತು. []
  2. ೨೦೧೨ ರಲ್ಲಿ ಮಹಾರಾಷ್ಟ್ರದ ಡೊಂಬಿವಿಲಿಯಲ್ಲಿರುವ ಮೈಸೂರು ಸಂಗೀತ ವಿದ್ಯಾಲಯದ ಪ್ರಾಂಶುಪಾಲೆ, ಉಮಾ ನಾಗಭೂಷಣ ಅವರು, ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಗಳಿದ್ದಾರೆ. []

ನಾಗಭೂಷಣ ಅವರ ನಿಧನ

ಬದಲಾಯಿಸಿ

ವಿದುಷಿ ಉಮಾ ನಾಗಭೂಷಣರವರ ಪತಿ, ನಾಗಭೂಷಣ ಅವರು, ಸ್ವಲ್ಪದಿನ ಅಸ್ವಸ್ಥರಾಗಿದ್ದರು. ಅವರು ಬೆಂಗಳೂರಿನಲ್ಲಿ ೧೦-೦೮-೨೦೧೬ ರಂದು ನಿಧನರಾದರು.[]

ಉಲ್ಲೇಖಗಳು

ಬದಲಾಯಿಸಿ
  1. ಬಿ. ನಾಗಭೂಷಣ ದಂಪತಿಗಳು
  2. 'ಮೈಸೂರು ಸಂಗೀತ ವಿದ್ಯಾಲಯ',ಡೊಂಬಿವಲಿ
  3. 27,march, 2012 sampada, ಮುಂಬೈನಗರದ ಮೂರು ಶ್ರೇಷ್ಠ ಕನ್ನಡ ಪರಿಚಾರಕರಿಗೆ, 'ಸಾಧನ ಶಿಖರ ಗೌರವ ಪ್ರಶಸ್ತಿ' ಸಂದಿದೆ
  4. ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ. ಪ್ರಜಾವಾಣಿ, 12 Oct, 2012
  5. ಮುಂಬಯಿಯ ಮೈಸೂರ್ ಸಂಗೀತ ವಿದ್ಯಾಲಯ, ಡೊಂಬಿವಲಿಯ ಆಡಳಿತಾಧಿಕಾರಿ ನಾಗಭೂಷಣ ಇನ್ನಿಲ್ಲ