ಒಲಂಪಿಕ್ ಕ್ರೀಡಾಕೂಟ
ಒಲಿಂಪಿಕ್ ಕ್ರೀಡಾಕೂಟ ಒಂದು ಅಂತರರಾಷ್ಟ್ರೀಯ ಕ್ರೀಡಾಕೂಟ. ಇದು ಅನೇಕ ಕ್ರೀಡೆಗಳನ್ನು ಒಳಗೊಂಡಿದೆ. ಈ ಕ್ರೀಡಾಕೂಟವನ್ನು ಬೇಸಗೆಯ ಕ್ರೀಡಾಕೂಟ ಹಾಗೂ ಚಳಿಗಾಲದ ಕ್ರೀಡಾಕೂಟಗಳೆಂದು ವರ್ಗೀಕರಿಸಲಾಗಿದೆ. ಎರಡೂ ಕೂಟಗಳನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುವುದು. ೧೯೯೨ರವರೆಗೆ ಎರಡೂ ಕ್ರೀಡಾಕೂಟಗಳನ್ನು ಒಂದೇ ವರ್ಷದಲ್ಲಿ ನಡೆಸಲಾಗುತ್ತಿತ್ತು. ನಂತರ ಇವುಗಳ ಮಧ್ಯೆ ಎರಡು ವರ್ಷಗಳ ಅಂತರವಿರಿಸಲಾಗಿದೆ. ಕ್ರಿ.ಪೂ. ೭೭೬ರಲ್ಲಿ ಗ್ರೀಸ್ ದೇಶದ ಒಲಿಂಪಿಯಾದಲ್ಲಿ ಮೂಲ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ನಂತರ ಕ್ರಿ.ಶ. ೩೯೩ರವರೆಗೆ ಇದು ಮುಂದುವರೆಯಿತು. ಕಾರಣಾಂತರಗಳಿಂದ ನಿಂತುಹೋದ ಈ ಕ್ರೀಡಾಕೂಟವನ್ನು ಮತ್ತೆ ಪುನರಾರಂಭಿಸುವುದರಲ್ಲಿ ಆಸಕ್ತಿ ತೋರಿದವನು ಗ್ರೀಸ್ ದೇಶದ ಕವಿ ಹಾಗೂ ಪತ್ರಿಕಾ ಸಂಪಾದಕನಾಗಿದ್ದ ಪನಾಜಿಯೋಟಿಸ್ ಸೌಟ್ಸಾಸ್ ಎಂಬವನು. ಮುಂದೆ ೧೮೫೯ರಲ್ಲಿ ಇವಾಂಜೆಲಾಸ್ ಝಪ್ಪಾಸ್ ಎಂಬುವವನು ನವೀನಕಾಲದ ಪ್ರಪ್ರಥಮ ಅಂತರರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟ ವನ್ನು ಪ್ರಾಯೋಜಿಸಿದನು. ೧೮೯೪ರಲ್ಲಿ ಫ್ರಾನ್ಸ್ ದೇಶದ ಗಣ್ಯನಾದ ಬ್ಯಾರನ್ ಪಿಯರಿ ದ ಕೂಬರ್ತಿಯು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ಹುಟ್ಟುಹಾಕಿದನು. ಈ ಸಂಸ್ಥೆಯ ವತಿಯಿಂದ ಮೊದಲನೆಯ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟವನ್ನು ಗ್ರೀಸ್ ದೇಶದ ಅಥೆನ್ಸ್ ನಗರದಲ್ಲಿ ೧೮೯೬ರಲ್ಲಿ ನಡೆಸಲಾಯಿತು.https://www.penn.museum/sites/olympics/olympicorigins.shtml ಅಂದು ಕೆಲವೇ ರಾಷ್ಟ್ರಗಳು ಪಾಲ್ಗೊಂಡಿದ್ದ ಒಲಿಂಪಿಕ್ ಕ್ರೀಡಾಕೂಟ ಇಂದು ಹೆಚ್ಚೊಕಡಿಮೆ ವಿಶ್ವದ ಎಲ್ಲಾ ದೇಶಗಳೂ ಭಾಗವಹಿಸುವಷ್ಟರ ಮಟ್ಟಿಗೆ ಅಗಾಧವಾಗಿ ಬೆಳೆದಿದೆ. ಉಪಗ್ರಹ ಸಂಪರ್ಕದ ವ್ಯವಸ್ಥೆಯಿಂದಾಗಿ ಜಗತ್ತಿನ ಮೂಲೆಮೂಲೆಗಳಿಗೂ ಈ ಕೂಟದ ನೇರಪ್ರಸಾರ ಸಾಧ್ಯವಾಗಿದ್ದು ಒಲಿಂಪಿಕ್ ಕ್ರೀಡಾಕೂಟ ಇಂದು ಅಪಾರಪ್ರಮಾಣದ ಜನಪ್ರಿಯತೆ ಗಳಿಸಿಕೊಂಡಿದೆ. ಅತ್ಯಂತ ಇತ್ತೀಚಿನ ಬೇಸಗೆಯ ಒಲಿಂಪಿಕ್ ಕ್ರೀಡಾಕೂಟ ೨೦೧೨ರಲ್ಲಿ ಲಂಡನ್ ನಗರದಲ್ಲಿ ಹಾಗೂ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟ ೨೦೧೦ರಲ್ಲಿ ಕೆನಡಾ ದ ವೆನ್‌ಕೂವರ್ ನಗರದಲ್ಲಿ ಆಯೂಜಿಸಲ್ಪಟ್ಟಿದ್ದವು. ಮುಂದಿನ ಬೇಸಗೆ ಕ್ರೀಡಾಕೂಟ ೨೦೧೬ ರಲ್ಲಿ ಬ್ರೆಜಿಲ್ ದೇಶದ ರಿಯೊ ಡಿ ಜನೈರೊ ನಲ್ಲಿ ನಡೆಯಲಿದೆ. ಮುಂದಿನ ಚಳಿಗಾಲದ ಕ್ರೀಡಾಕೂಟ ರಷ್ಯಾ ದೇಶದ ಸೋಚಿ ಯಲ್ಲಿ ೨೦೧೪ ರಲ್ಲಿ ನಡೆಯಲಿದೆ.

Añu | Eventu | See | |||||||
---|---|---|---|---|---|---|---|---|---|
Xuegos Olímpicos de Branu | |||||||||
1896 | I edición | Atenes | Grecia | ||||||
1900 | II edición | París | Francia | ||||||
1904 | III edición | Saint Louis | Estaos Xuníos d'América | ||||||
1906 | Xuegos Intercalaos | Atenes | Grecia | ||||||
1908 | IV edición | Londres | Reinu Xuníu | ||||||
1912 | V edición | Estocolmu | Suecia | ||||||
1916 | VI edición | Berlín | Alemaña | ||||||
Suspendíos pola Primer Guerra Mundial | Añu | Eventu | See | ||||||
1920 | VII edición | Amberes | Bélxica | Xuegos Olímpicos d'Iviernu | |||||
1924 | VIII edición | París | Francia | 1924 | I edición | Chamonix | Francia | ||
1928 | IX edición | Ámsterdam | Países Baxos | 1928 | II edición | Sankt Moritz | Suiza | ||
1932 | X edición | Los Angeles | Estaos Xuníos d'América | 1932 | III edición | Lake Placid | Estaos Xuníos d'América | ||
1936 | XI edición | Berlín | Alemaña | 1936 | IV edición | Garmisch-Partenkirchen | Alemaña | ||
1940 | XII edición | Ḥélsinki | Finlandia | 1940 | V edición | Garmisch-Partenkirchen | Alemaña | ||
Suspendíos pola Segunda Guerra Mundial | |||||||||
1944 | XIII edición | Londres | Reinu Xuníu | 1944 | VI edición | Cortina d'Ampezzo | Italia | ||
Suspendíos pola Segunda Guerra Mundial | |||||||||
1948 | XIV edición | Londres | Reinu Xuníu | 1948 | VII edición | Sankt Moritz | Suiza | ||
1952 | XV edición | Ḥélsinki | Finlandia | 1952 | VIII edición | Oslu | Noruega | ||
1956 | XVI edición | Melbourne | Australia | 1956 | IX edición | Cortina d'Ampezzo | Italia | ||
1960 | XVII edición | Roma | Italia | 1960 | X edición | Squaw Valley | Estaos Xuníos d'América | ||
1964 | XVIII edición | Tokiu | Xapón | 1964 | XI edición | Innsbruck | Austria | ||
1968 | XIX edición | Ciudá de Méxicu | Méxicu | 1968 | XII edición | Grenoble | Francia | ||
1972 | XX edición | Múnich | Alemaña | 1972 | XIII edición | Sapporo | Xapón | ||
1976 | XXI edición | Montréal | Canadá | 1976 | XIV edición | Innsbruck | Austria | ||
1980 | XXII edición | Moscú | XRSS | 1980 | XV edición | Lake Placid | Estaos Xuníos d'América | ||
1984 | XXIII edición | Los Angeles | Estaos Xuníos d'América | 1984 | XVI edición | Sarayevu | Bosnia y Herzegovina | ||
1988 | XXIV edición | Seúl | Corea del Sur | 1988 | XVII edición | Calgary | Canadá | ||
1992 | XXV edición | Barcelona | España | 1992 | XVIII edición | Albertville | Francia | ||
1996 | XXVI edición | Atlanta | Estaos Xuníos d'América | 1994 | XIX edición | Lillehammer | Noruega | ||
2000 | XXVII edición | Sydney | Australia | 1998 | XX edición | Nagano | Xapón | ||
2004 | XXVIII edición | Atenes | Grecia | 2002 | XXI edición | Salt Lake City | Estaos Xuníos d'América | ||
2008 | XXIX edición | Beixín | China | 2006 | XXII edición | Torino | Italia | ||
2012 | XXX edición | Londres | Reinu Xuníu | 2010 | XXIII edición | Vancouver | Canadá | ||
2016 | XXXI edición | Rio de Janeiro | Brasil | 2014 | XXIV edición | Sochi | Rusia | ||
2020 | XXXII edición | Tokiu | Xapón |
ಪ್ರಾಚೀನ ಒಲಿಂಪಿಕ್ಸ್ ಬದಲಾಯಿಸಿ
ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟದ ಬಗ್ಗೆ ಹಲವಷ್ಟು ದಂತಕಥೆಗಳು ಹಾಗೂ ಊಹಾಪೋಹಗಳಿವೆ. ಇವುಗಳ ಪೈಕಿ ಅತಿ ಜನಪ್ರಿಯವಾದ ಕತೆಯೊಂದರ ಪ್ರಕಾರ - ಹೆರಾಕ್ಲಿಸ್ ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟದ ಸೃಷ್ಟಿಕರ್ತನು[೧]. ಇವನು ತನ್ನ ತಂದೆ ಸ್ಯೂಸ್ ನ ಗೌರವಾರ್ಥವಾಗಿ ೧೨ ಕ್ರೀಡಾಂಗಣಗಳನ್ನು ನಿರ್ಮಿಸಿ ಕೂಟವನ್ನು ನಡೆಸಿದನು. ಈ ಕತೆಯ ಪ್ರಕಾರ ಈತನು ನೇರದಾರಿಯಲ್ಲಿ ೪೦೦ ಬಾರಿ ದಾಪುಗಾಲನ್ನಿಟ್ಟು ಕ್ರಮಿಸಿ ಆ ದೂರವನ್ನು ಒಂದು ಸ್ಟೇಡಿಯಸ್ ಎಂದು ಕರೆದನು. ಈ ದೂರವನ್ನೇ ರೋಮನ್ನರು ಸ್ಟೇಡಿಯಮ್ ಹಾಗೂ ಆಂಗ್ಲರು ಸ್ಟೇಜ್ ಎಂದು ಹೆಸರಿಸಿದರು. ಇಂದು ಕೂಡಾ ಆಧುನಿಕ ಕ್ರೀಡಾಂಗಣದ ಟ್ರ್ಯಾಕ್ ನ ಸುತ್ತಳತೆ ೪೦೦ ಮೀ. ಇರುವುದು. ಕ್ರಿ. ಪೂ. ೭೭೬ರ ಮೊದಲನೆಯ ಕ್ರೀಡಾಕೂಟದ ನಂತರ ಗ್ರೀಸ್ ದೇಶದಲ್ಲಿ ಒಲಿಂಪಿಕ್ಸ್ ಜನಪ್ರಿಯತೆ ಹೆಚ್ಚಿಸಿಕೊಂಡು ಕ್ರಿ.ಪೂ. ೬ ನೆಯ ಹಾಗೂ ೫ನೆಯ ಶತಮಾನದಲ್ಲಿ ಉಚ್ಛ್ರಾಯಸ್ಥಿತಿಯನ್ನು ತಲುಪಿದ್ದಿತು. ಮೊದಲಿಗೆ ಕೆಲವೇ ಕ್ರೀಡೆಗಳನ್ನೊಳಗೊಂಡು ಒಂದು ದಿನದಲ್ಲಿಯೇ ಮುಗಿಯುತ್ತಿದ್ದ ಕೂಟವು ಮುಂದೆ ೨೦ರಷ್ಟು ಸ್ಪರ್ಧೆಗಳೊಂದಿಗೆ ಹಲವು ದಿನಗಳವರೆಗೆ ನಡೆಯುತ್ತಿತ್ತು. ಕ್ರೀಡೆಗಳಲ್ಲಿ ವಿಜಯ ಸಾಧಿಸಿದ ಸ್ಪರ್ಧಾಳುಗಳನ್ನು ನಾಡು ಅತ್ಯಭಿಮಾನ ಹಾಗೂ ಆದರದಿಂದ ಕಾಣುತ್ತಿತ್ತು. ಕವನಗಳ ಮತ್ತು ಪ್ರತಿಮೆಗಳ ಮೂಲಕ ಇವರನ್ನು ಅಮರರನ್ನಾಗಿಸಲಾಗುತ್ತಿತ್ತು. ಕ್ರಿ.ಪೂ. ೬ನೆಯ ಶತಮಾನದಲ್ಲಿದ್ದ ಮಿಲೋ ಎಂಬ ಕುಸ್ತಿಪಟುವು ಸತತ ೬ ಒಲಿಂಪಿಕ್ ಕ್ರೀಡಾಕೂಟ ಗಳಲ್ಲಿ ವಿಜಯ ಸಾಧಿಸಿದ್ದನು. ಈ ದಾಖಲೆಯನ್ನು ಇಂದಿನವರೆಗೂ ಸರಿಗಟ್ಟಲಾಗಿಲ್ಲ. ಗ್ರೀಸ್ ದೇಶದ ಮೇಲೆ ರೋಮನ್ನರ ಅಧಿಪತ್ಯವುಂಟಾದ ಮೇಲೆ ಒಲಿಂಪಿಕ್ ಕ್ರೀಡಾಕೂಟವು ಕ್ರಮೇಣ ಅವನತಿಯತ್ತ ಸಾಗಲಾರಂಭಿಸಿತು. ಕ್ರಿಶ್ಚಿಯನ್ ಧರ್ಮವು ರೋಮ್ ಸಾಮ್ರಾಜ್ಯದ ಅಧಿಕೃತ ಧರ್ಮವೆಂದು ಘೋಷಿಸಲ್ಪಟ್ಟ ಮೇಲೆ ಒಲಿಂಪಿಕ್ ಕ್ರೀಡಾಕೂಟವು ಆ ಧರ್ಮದ ನಡವಳಿಕೆಗಳಿಗೆ ಅನುಗುಣವಾಗಿಲ್ಲವೆಂದು ಪರಿಗಣಿಸಲ್ಪಟ್ಟಿತು. ತರುವಾಯ ಕ್ರಿ.ಶ. ೩೯೩ರಲ್ಲಿ ರೋಮನ್ ಸಮ್ರಾಟ ಮೊದಲನೆಯ ಥಿಯೋಡೋರಸ್ ಒಲಿಂಪಿಕ್ ಕ್ರೀಡಾಕೂಟವನ್ನು ಧರ್ಮಬಾಹಿರವೆಂದು ಘೋಷಿಸಿದನು. ಹೀಗೆ ಸುಮಾರು ೧೦೦೦ ವರ್ಷಗಳ ಪರಂಪರೆಯೊಂದು ಕೊನೆಗೊಂಡಿತು. ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಕೇವಲ ಯುವಕರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶವಿದ್ದಿತು. ಕ್ರೀಡಾಕೂಟವು ಮಾನವಶರೀರದ ಸಾಧನೆಯ ದ್ಯೋತಕವೆಂದು ಪರಿಗಣಿಸಲಾಗುತ್ತಿದ್ದುದರಿಂದ ಸ್ಪರ್ಧಾಳುಗಳು ನಗ್ನರಾಗಿಯೇ ಪಾಲ್ಗೊಳ್ಳುತ್ತಿದ್ದರು. ವಿಜಯೀ ಸ್ಪರ್ಧಾಳುಗಳಿಗೆ ಆಲಿವ್ ಎಲೆಗಳಿಂದ ಮಾಡಿದ ಕಿರೀಟವನ್ನು ಉಡುಗೊರೆಯಾಗಿ ನೀಡಲಾಗುತ್ತಿತ್ತು. ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಒಲಿಂಪಿಕ್ ಜ್ಯೋತಿಯಾಗಲೀ ಒಲಿಂಪಿಕ್ ವರ್ತುಲಗಳಾಗಲೀ ಬಳಕೆಯಲ್ಲಿರಲಿಲ್ಲ. ಇವು ಮುಂದೆ ಆಧುನಿಕ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಸೇರಿಕೊಂಡವು.
ಪುನರುತ್ಥಾನ ಬದಲಾಯಿಸಿ
ಓರ್ವ ಸಿರಿವಂತ ಗ್ರೀಕ್ ದಾನಿ ಇವಾಂಜೆಲಾಸ್ ಝಪ್ಪಾಸನು ಪ್ರಥಮ ಆಧುನಿಕ ಅಂತರರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟವನ್ನು ಪ್ರಾಯೋಜಿಸಿದನು. ೧೮೭೦ ಹಾಗೂ ೧೮೭೫ರಲ್ಲಿ ಒಲಿಂಪಿಕ್ ಕ್ರೀಡಾಕೂಟಗಳಿಗೆ ಬಳಸಲಾದ ಪಾನ್ ಅಥೀನಿಯನ್ ಕ್ರೀಡಾಂಗಣವನ್ನು ಈತನು ದುರಸ್ತಿಗೊಳಿಸಿದನು. ಅಲದೆ ಒಲಿಂಪಿಕ್ ಗ್ರಾಮವೊಂದನ್ನು ಸಹ ಇವನು ವ್ಯವಸ್ಥೆಗೊಳಿಸಿದನು. ಮುಂದೆ ಬ್ಯಾರನ್ ಪಿಯರಿ ದ ಕೂಬರ್ತಿಯು ೧೮೯೪ರಲ್ಲಿ ಪ್ಯಾರಿಸ್ ನಗರದಲ್ಲಿ ಜರಗಿದ ಸಮಾವೇಶವೊಂದರಲ್ಲಿ ಒಲಿಂಪಿಕ್ ಕ್ರೀಡಾಕೂಟವನ್ನು ಪುನರಾರಂಭಿಸುವುದರ ಬಗ್ಗೆ ತನ್ನ ಅಭಿಪ್ರಾಯಗಳನ್ನು ಮುಂದಿಕ್ಕಿದನು. ಈ ಸಮಾವೇಶದ ಕೊನೆಯಲ್ಲಿ ಪ್ರಥಮ ಆಧುನಿಕ ಒಲಿಂಪಿಕ್ ಕ್ರೀಡಾಕೂಟವನ್ನು ಅಥೆನ್ಸ್ ನಗರದಲ್ಲಿ ೧೮೯೬ರಲ್ಲಿ ನಡೆಸುವುದೆಂದು ನಿರ್ಣಯಿಸಲಾಯಿತು. ಇದನ್ನು ಆಯೋಜಿಸುವುದರ ಸಲುವಾಗಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ಹುಟ್ಟುಹಾಕಲಾಯಿತು. ಗ್ರೀಸ್ ದೇಶದ ಡಿಮೆಟ್ರಿಯಸ್ ವಿಕೆಲಾಸ್ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮೊಟ್ಟಮೊದಲ ಅಧ್ಯಕ್ಷನಾದನು. ಹೀಗೆ ಪ್ರಪ್ರಥಮ ಆಧುನಿಕ ಒಲಿಂಪಿಕ್ ಕ್ರೀಡಾಕೂಟ ಅಥೆನ್ಸ್ ನಗರದ ಪಾನ್ ಅಥೀನಿಯನ್ ಕ್ರೀಡಾಂಗಣದಲ್ಲಿ ೧೮೯೬ರಲ್ಲಿ ನಡೆಯಿತು. ಈ ಕೂಟದಲ್ಲಿ ಕೇವಲ ೧೪ ದೇಶಗಳ ೨೪೧ ಪುರುಷ ಕ್ರೀಡಾಳುಗಳು ಮಾತ್ರ ಪಾಲ್ಗೊಂಡಿದ್ದರು. ಆದರೆ ಆ ಕಾಲದ ಮಟ್ಟಿಗೆ ಇದು ಜಗತ್ತಿನ ಅತಿ ದೊಡ್ಡ ಅಂತರರಾಷ್ಟ್ರೀಯ ಕ್ರೀಡಾಕೂಟವೆಂದು ಪರಿಗಣಿಸಲ್ಪಟ್ಟಿತ್ತು. ನಾಲ್ಕು ವರ್ಷಗಳ ನಂತರ ೧೯೦೦ರಲ್ಲಿ ಪ್ಯಾರಿಸ್ ನಗರದಲ್ಲಿ ನಡೆದ ಕ್ರೀಡಾಕೂಟದಲ್ಲಿ ಮಹಿಳಾ ಕ್ರೀಡಾಪಟುಗಳೂ ಪಾಲ್ಗೊಂಡರು. ಹೀಗೆ ಸಣ್ಣ ಪ್ರಮಾಣದಲ್ಲಿ ಆರಂಭವಾದ ಒಲಿಂಪಿಕ್ ಕ್ರೀಡಾಕೂಟ ೨೦೦೪ರಲ್ಲಿ ಅಥೆನ್ಸ್ ನಲ್ಲಿ ನಡೆದ ಕೂಟದಲ್ಲಿ ೨೦೨ ರಾಷ್ಟ್ರಗಳ ಸುಮಾರು ೧೧೦೦೦ ಕ್ರೀಡಾಳುಗಳು ಪಾಲ್ಗೊಳ್ಳುವ ಮಟ್ಟಿಗೆ ಬೆಳೆಯಿತು.
ಬಹಿಷ್ಕಾರಗಳು ಬದಲಾಯಿಸಿ
ಖೇದದ ಸಂಗತಿಯೆಂದರೆ ಮಾನವಭ್ರಾತೃವ್ಯದ ಸಂಕೇತವಾದ ಒಲಿಂಪಿಕ್ ಕ್ರೀಡಾಕೂಟಗಳು ಕೂಡಾ ರಾಜಕೀಯದಿಂದ ಹೊರಗುಳಿಯಲಿಲ್ಲ. ವಿವಿಧ ರಾಜಕೀಯ ಕಾರಣಗಳಿಂದಾಗಿ ಈವರೆವಿಗೆ ಹಲವು ಒಲಿಂಪಿಕ್ ಕ್ರೀಡಾಕೂಟಗಳು ನಾನಾ ದೇಶಗಳಿಂದ ಬಹಿಷ್ಕರಿಸಲ್ಪಟ್ಟವು. ೧೯೫೬ರ ಮೆಲ್ಬರ್ನ್ ಕೂಟ , ೧೯೭೨ರ ಮ್ಯೂನಿಖ್ ಕೂಟ , ೧೯೭೬ರ ಮಾಂಟ್ರಿಯಲ್ ಕ್ರೀಡಾಕೂಟ, ೧೯೮೦ರ ಮಾಸ್ಕೋ ಕೂಟ ಮತ್ತು ೧೯೮೪ರ ಲಾಸ್ ಎಂಜಲಿಸ್ ಒಲಿಂಪಿಕ್ ಕ್ರೀಡಾಕೂಟಗಳು ಈ ರೀತಿಯ ಬಹಿಷ್ಕಾರದ ಕಹಿಯನ್ನು ಅನುಭವಿಸಿದವು.
ಉದ್ದೀಪನವಸ್ತುಗಳ ದುರುಪಯೋಗ ಬದಲಾಯಿಸಿ
ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಜಯ ಸಾಧಿಸುವುದು ಒಂದು ಭಾರೀ ಪ್ರತಿಷ್ಠೆಯ ಸಂಗತಿ. ಹೀಗಾಗಿ ನಾನಾ ದೇಶಗಳ ಹಲವಷ್ಟು ಕ್ರೀಡಾಳುಗಳು ಒಲಿಂಪಿಕ್ ಕ್ರೀಡಾಕೂಟದಲ್ಲಿ ಗೆಲ್ಲಲು ಅಡ್ಡದಾರಿಗಳನ್ನು ಬಳಸುವರು. ಇವುಗಳಲ್ಲಿ ಉದ್ದೀಪನವಸ್ತುಗಳ ಬಳಕೆ ಇಂದು ಒಲಿಂಪಿಕ್ಸ್ ಗೆ ಒಂದು ದೊಡ್ಡ ಸವಾಲೆನಿಸಿದೆ. ಇತ್ತೀಚಿನ ವರ್ಷಗಳಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಸಹ ಉದ್ದೀಪನವಸ್ತುಗಳ ಬಳಕೆ ನಡೆಯುತ್ತಲೇ ಇದೆ. ೧೯೮೮ರ ಸಿಯೋಲ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕೆನಡದ ಬೆನ್ ಜಾನ್ಸನ್ ಪುರುಷರ ೧೦೦ ಮೀ. ಓಟದಲ್ಲಿ ವಿಶ್ವದಾಖಲೆಯೊಂದಿಗೆ ಸ್ವರ್ಣಪದಕವನ್ನು ಗೆದ್ದನು. ನಂತರ ಈತನು ಉದ್ದೀಪನವಸ್ತುಗಳನ್ನು ಬಳಸಿದುದು ಪರೀಕ್ಷೆಯಲ್ಲಿ ಸ್ಥಾಪಿತವಾಗಿ ಆತನ ಸ್ವರ್ಣಪದಕವನ್ನು ಹಿಂಪಡೆದುಕೊಂಡು ಆತನನ್ನು ಕ್ರೀಡಾಸ್ಪರ್ಧೆಗಳಿಂದ ನಿಷೇಧಿಸಲಾಯಿತು. ವಿಷಾದದ ಸಂಗತಿಯೆಂದರೆ ಭಾರತದ ಕ್ರೀಡಾಪಟುಗಳೂ ಈ ವಿಷಯದಲ್ಲಿ ಶುದ್ಧರಾಗಿಲ್ಲದಿರುವುದು.
ಹಿಂಸಾಚಾರಗಳು ಬದಲಾಯಿಸಿ
ಈವರೆವಿಗೆ ಹಲವು ಒಲಿಂಪಿಕ್ ಕ್ರೀಡಾಕೂಟಗಳು ಹಿಂಸಾಚಾರವನ್ನು ಕಂಡಿವೆ. ಅಮಾನವೀಯ ಘಟನೆಯೊಂದು ೧೯೭೨ರ ಮ್ಯೂನಿಖ್ ಕ್ರೀಡಾಕೂಟದಲ್ಲಿ ಸಂಭವಿಸಿತು. ಇಸ್ರೇಲ್ ದೇಶದ ೧೧ ಕ್ರೀಡಾಳುಗಳನ್ನು ಪ್ಯಾಲೆಸ್ಟಿನ್ ಉಗ್ರಗಾಮಿಗಳು ಒತ್ತೆಯಾಳುಗಳಾಗಿರಿಸಿಕೊಂಡರು. ಇವರನ್ನು ಬಿಡಿಸಿಕೊಳ್ಳಲು ನಡೆಸಲಾದ ವಿಫಲ ಕಾರ್ಯಾಚರಣೆಯಲ್ಲಿ ೯ ಮಂದಿ ಕ್ರೀಡಾಳುಗಳೂ ಸೇರಿದಂತೆ ಒಟ್ಟು ೧೫ ಮಂದಿ ಸಾವನ್ನಪ್ಪಿದರು. ೧೯೯೬ರ ಅಟ್ಲಾಂಟ ಕೂಟದಲ್ಲಿ ಸಂಭವಿಸಿದ ಬಾಂಬ್ ಸ್ಫೋಟವೊಂದರಲ್ಲಿ ಇಬ್ಬರು ಮರಣಿಸಿದರು.
ಟೀಕೆಗಳು ಬದಲಾಯಿಸಿ
ಗಮನಿಸಬೇಕಾದ ಸಂಗತಿಯೆಂದರೆ ಈವರೆವಿಗೆನ ಹೆಚ್ಚಿನ ಒಲಿಂಪಿಕ್ ಕ್ರೀಡಾಕೂಟಗಳು ಉತ್ತರ ಅಮೆರಿಕ ಅಥವಾ ಯುರೋಪ್ ನಲ್ಲಿಯೇ ಆಯೋಜಿಸಲ್ಪಟ್ಟಿವೆ. ಕೇವಲ ಕೆಲವು ಬಾರಿ ಮಾತ್ರ ವಿಶ್ವದ ಇತರ ಭಾಗಗಳಿಗೆ ಒಲಿಂಪಿಕ್ ಕ್ರೀಡಾಕೂಟವನ್ನು ನಡೆಸುವ ಅವಕಾಶ ಒದಗಿದೆ. ದಕ್ಷಿಣ ಅಮೆರಿಕ ಮತ್ತು ಆಫ್ರಿಕಾ ಖಂಡಗಳಲ್ಲಿ ಇದುವರೆಗೆ ಒಂದು ಬಾರಿಯೂ ಒಲಿಂಪಿಕ್ ಕ್ರೀಡಾಕೂಟವನ್ನು ನಡೆಸಲಾಗಿಲ್ಲ. ಹೀಗಾಗಿ ಒಲಿಂಪಿಕ್ ಕ್ರೀಡಾಕೂಟಗಳು ಕೇವಲ ಉಳ್ಳವರ ಪ್ರತಿಷ್ಠೆ ಮೆರೆಸುವ ಸಲುವಾಗಿಯೇ ಇವೆ ಎಂಬ ಟೀಕೆ ಸಾಕಷ್ಟು ವ್ಯಾಪಕವಾಗಿದೆ.
ಒಲಿಂಪಿಕ್ ಧ್ವಜ ಬದಲಾಯಿಸಿ
ಒಂದಕ್ಕೊಂದು ಹೆಣೆದುಕೊಂಡಿರುವ ಐದು ವರ್ತುಲಗಳು ಒಲಿಂಪಿಕ್ ಚಿಹ್ನೆ. ಈ ಐದು ವರ್ತುಲಗಳು ಪ್ರಪಂಚದ ಐದು ಜನವಸತಿಯುಳ್ಳ ಭೂಖಂಡಗಳನ್ನು ಪ್ರತಿನಿಧಿಸುತ್ತವೆ. ( ಉತ್ತರ ಹಾಗೂ ದಕ್ಷಿಣ ಅಮೆರಿಕ ಖಂಡಗಳನ್ನು ಒಂದಾಗಿ ಪರಿಗಣಿಸಲಾಗಿದೆ). ಶ್ವೇತವರ್ಣದ ಒಲಿಂಪಿಕ್ ಧ್ವಜದಲ್ಲಿ ಈ ೫ ವರ್ತುಲಗಳು ೫ ವರ್ಣಗಳಲ್ಲಿ ಗೋಚರಿಸುತ್ತವೆ. ಕೆಂಪು,ನೀಲಿ,ಹಸಿರು,ಹಳದಿ ಹಾಗೂ ಕಪ್ಪು ಇವೇ ಆ ಐದು ವರ್ಣಗಳು.https://www.quora.com/What-do-the-colors-on-the-Olympics-symbol-mean ಅತಿ ವಿಶಿಷ್ಟ ಸಂಗತಿಯೆಂದರೆ ವಿಶ್ವದ ಪ್ರತಿಯೊಂದು ರಾ9ಷ್ಟ್ರದ ಧ್ವಜದಲ್ಲಿ ಈ ಆರು ವರ್ಣಗಳಲ್ಲಿ ( ಮೇಲಿನ ೫ ಮತ್ತು ಧ್ವಜದ ಬಿಳಿ ವರ್ಣ) ಕನಿಷ್ಠ ಒಂದಾದರೂ ಇದ್ದೇ ಇದೆ.
ಒಲಿಂಪಿಕ್ ಧ್ಯೇಯ ಬದಲಾಯಿಸಿ
ಲ್ಯಾಟಿನ್ ಭಾಷೆಯ " ಸಿಟಿಯಸ್ , ಆಲ್ಟಿಯಸ್ , ಫೋರ್ಟಿಯಸ್ " ಅಂದರೆ "ಕ್ಷಿಪ್ರವಾಗಿ , ಎತ್ತರಕ್ಕೆ ಹಾಗೂ ಬಲಿಷ್ಠ" ಎಂಬುದೇ ಒಲಿಂಪಿಕ್ ಧ್ಯೇಯ. ಮೊದಮೊದಲು ಸ್ಪರ್ಧೆಗಳು ಓಟ, ಜಿಗಿತ ಮತ್ತು ಭಾರ ಎತ್ತುವಿಕೆ ಅಥವಾ ಭಾರ ಎಸೆಯುವಿಕೆಗೇ ಸೀಮಿತವಾಗಿದ್ದುದರಿಂದ ಈ ಧ್ಯೇಯ ರಚಿತವಾಯಿತು. ಕೂಬರ್ತಿಯ ಪ್ರಕಾರ " ಹೇಗೆ ಜೀವನದಲ್ಲಿ ಹೋರಾಡುವುದು ಮುಖ್ಯವೇ ಹೊರತು ಜಯಿಸುವುದಲ್ಲವೋ ಹಾಗೆಯೇ ಒಲಿಂಪಿಕ್ಸ್ ನ ಅತಿಮುಖ್ಯ ಸಂಗತಿಯೆಂದರೆ ಪಾಲ್ಗೊಳ್ಳುವುದೇ ವಿನಹ ಗೆಲ್ಲುವುದಲ್ಲ. ಅವಶ್ಯ ವಿಚಾರವೆಂದರೆ ಉತ್ತಮವಾಗಿ ಹೋರಾಡುವುದು. ವಿಜಯ ಸಾಧಿಸುವುದೇ ಗುರಿ ಅಲ್ಲ."
ಒಲಿಂಪಿಕ್ ಕ್ರೀಡಾಕೂಟ ಅತೀಥೆಯ ನಗರಗಳು ಬದಲಾಯಿಸಿ
ಗಮನಿಸಿ : ಈ ಪಟ್ಟಿಯು ಅಪೂರ್ಣ, ಮುಂದೆ ಇದನ್ನು ಸರಿಪಡಿಸಲಾಗುವುದು
ಒಲಿಂಪಿಕ್ ಜ್ಯೋತಿ ಬದಲಾಯಿಸಿ
ಈಚಿನ ವರ್ಷಗಳಲ್ಲಿ ಒಲಿಂಪಿಕ್ ಜ್ಯೋತಿಯ ಶ್ರೇಷ್ಠ ಪರಂಪರೆಯೊಂದು ಆರಂಭವಾಗಿದೆ. ಪ್ರತಿ ಒಲಿಂಪಿಕ್ ಕ್ರೀಡಾಕೂಟದ ಕೆಲ ಸಮಯದ ಮುನ್ನ ಗ್ರೀಸ್ ದೇಶದ ಒಲಿಂಪಿಯಾದಲ್ಲಿ ಮಸೂರ ಮತ್ತು ಸೂರ್ಯಕಿರಣಗಳ ಸಹಾಯದಿಂದ ದೊಂದಿಯೊಂದನ್ನು ಹಚ್ಚಲಾಗುವುದು. ಇದೇ ಒಲಿಂಪಿಕ್ ಜ್ಯೋತಿ. ಈ ಒಲಿಂಪಿಕ್ ಜ್ಯೋತಿಯನ್ನು ಒಲಿಂಪಿಕ್ ಕ್ರೀಡಾಕೂಟದ ಆತಿಥೇಯ ನಗರದವರೆಗೆ ಭೂಮಿಯ ಬಹುತೇಕ ರಾಷ್ಟ್ರಗಳ ಮೂಲಕ ಹಾಯಿಸಿ ಕೊಂಡೊಯ್ಯಲಾಗುವುದು. ಪ್ರತಿ ರಾಷ್ಟ್ರದ ಮೂಲಕ ಹಾದುಹೋಗುವಾಗ ಆಯಾ ದೇಶದ ಪ್ರಮುಖ ಕ್ರೀಡಾಪಟುಗಳು ಮತ್ತು ಇತರ ಗಣ್ಯರು ರಿಲೇ ಓಟದ ಮೂಲಕ ಜ್ಯೋತಿಯನ್ನು ಸಾಗಿಸುವರು. ಇದರಲ್ಲಿ ಪಾಲ್ಗೊಳ್ಳುವುದು ಒಂದು ಗೌರವದ ಹಾಗೂ ಪ್ರತಿಷ್ಠೆಯ ಸಂಗತಿ. ನಂತರ ಕೂಟದ ಉಧ್ಘಾಟನಾ ಸಮಾರಂಭದಲ್ಲಿ ಮುಖ್ಯ ಕ್ರೀಡಾಂಗಣದಲ್ಲಿ ಒಂದು ದೊಡ್ಡ ಜ್ಯೋತಿಯನ್ನು ಬೆಳಗಲು ಈ ದೊಂದಿಯನ್ನು ಬಳಸಲಾಗುವುದು. ಈ ಮುಖ್ಯ ಜ್ಯೋತಿಯು ಕ್ರೀಡಾಕೂಟವು ಮುಗಿಯವರೆಗೂ ಅವಿರತವಾಗಿ ಬೆಳಗುತ್ತಲೇ ಇರುವುದು. ಒಲಿಂಪಿಕ್ ಕ್ರೀಡಾಕೂಟದ ಮುಕ್ತಾಯ ಸಮಾರಂಭದಲ್ಲಿ ಇದನ್ನು ನಂದಿಸಲಾಗುವುದು.
ಸರ್ವ ಶ್ರೇಷ್ಠ ಪ್ರದರ್ಷನ ಬದಲಾಯಿಸಿ
The IOC does not keep an official record of individual medal counts, though unofficial medal tallies abound. These provide one method of determining the most successful Olympic athletes of the modern era. Below are the top ten individual medal winners of the modern Olympics (the gender of the athlete is denoted in the "Sport" column):
ಕ್ರೀಡಾಪಟು | ರಾಷ್ಟ್ರ | ಕ್ರೀಡೆ | ಒಲಿಂಪಿಕ್ | ಬಂಗಾರ | ಬೆಳ್ಳಿ | ಕಂಚು | ಒಟ್ಟ |
---|---|---|---|---|---|---|---|
Michael Phelps | United States | Swimming (m) | 2000–2008 | 14 | 0 | 2 | 16 |
Larissa Latynina | ಸೋವಿಯತ್ ಒಕ್ಕೂಟ | Gymnastics (f) | 1956–1964 | 9 | 5 | 4 | 18 |
Paavo Nurmi | Finland | Athletics (m) | 1920–1928 | 9 | 3 | 0 | 12 |
Mark Spitz | United States | Swimming (m) | 1968–1972 | 9 | 1 | 1 | 11 |
Carl Lewis | United States | Athletics (m) | 1984–1996 | 9 | 1 | 0 | 10 |
Bjørn Dæhlie | ನಾರ್ವೇ | Cross-country skiing (m) | 1992–1998 | 8 | 4 | 0 | 12 |
Birgit Fischer | ಪೂರ್ವ ಜರ್ಮನಿ Germany |
Canoeing (flatwater) (f) | 1980–2004 | 8 | 4 | 0 | 12 |
Sawao Kato | ಜಪಾನ್ | Gymnastics (m) | 1968–1976 | 8 | 3 | 1 | 12 |
Jenny Thompson | United States | Swimming (f) | 1992–2004 | 8 | 3 | 1 | 12 |
Matt Biondi | United States | Swimming (m) | 1984–1992 | 8 | 2 | 1 | 11 |
ಇದನ್ನೂ ನೋಡಿ ಬದಲಾಯಿಸಿ
ಉಲ್ಲೇಖ ಬದಲಾಯಿಸಿ
- ↑ https://www.olympic.org/ancient-olympic-games/mythology
- ↑ "Olympic Games" (registration required). Encyclopædia Britannica. Retrieved 2009-04-02.
- ↑ ಮೊದಲು ಚೀಕಾಗೊ ನಗರದಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ನಂತರ ಲೂಸಿಯಾನ ದಲ್ಲಿ ನಡೆದ ವರ್ಲ್ದ್ ಫೇರ್ ಜೊತೆಯಾಗಿ ನಡೆಸಲು ಸೆಂಟ್ ಲೂಯೀಸ್ ಗೆ ಸ್ಥಳಾಂತರಿಸಲಾಯಿತು. Originally awarded to Chicago, but moved to St. Louis to coincide with the World's Fair
- ↑ Not recognized by the IOC
- ↑ Equestrian events were held in Stockholm, Sweden. Stockholm had to bid for the equestrian competition separately; it received its own Olympic flame and had its own formal invitations and opening and closing ceremonies, as with all its previous Games. "Official Report of the Equestrian Games of the XVIth Olympiad (Swedish & English)" (PDF). Los Angeles 1984 Foundation. Retrieved 2008-09-03.
- ↑ Equestrian events were held in China's Hong Kong. Although Hong Kong has an independent National Olympic Committee from China, the equestrian competition was an integral part of the Beijing Games; it was not conducted under a separate bid, flame, etc., as was the 1956 Stockholm equestrian competition. The IOC website lists only Beijing as the host city.
- ↑ "Beijing 2008". The International Olympic Committee. Retrieved 2009-01-30.