ಕವಿತೆ ಭಾಷೆಯ ಉಪಯೋಗದ ಒಂದು ಕಲೆ. ಭಾಷೆಯ ಉಪಯೋಗದಲ್ಲಿ ಭಾಷೆಯ ಅರ್ಥದೊಂದಿಗೆ ಅಥವಾ ಅರ್ಥದ ಬದಲು ಸೌಂದರ್ಯ ಮತ್ತು ಭಾವನಾತ್ಮಕತೆಯನ್ನು ಹೊರತರುವ ಪ್ರಕಾರ ಇದು. ಕವಿತೆಯು ಸ್ವತಂತ್ರವಾಗಿ ರಚಿತವಾಗಿರಬಹುದು ಅಥವಾ ಸಂಗೀತ, ನಾಟಕ ಮುಂತಾದ ಕಲೆಗಳೊಂದಿಗೆ ಉಪಯೋಗಿಸಲ್ಪಡಬಹುದು.

  • ಇದರಲ್ಲಿ ನಾಲ್ಕು ಅಥವಾ ಆರು ಸಾಲಿನ ಚೌಕಟ್ಟಿರುತ್ತದೆ.
  • ಕವನದಲ್ಲಿ ಶೃಂಗಾರವನ್ನು ಬಿಂಬಿಸುವ ರಮಣೀಯ ಪದಗಳು ಹೆಚ್ಚಾಗಿರುತ್ತವೆ.
  • ಪ್ರತಿ ಪದಗಳ ಬಳಕೆ ಓದುಗನಿಗೆ ಮುದ ನೀಡುವಂತೆ ರಚಿತವಾಗಿರುತ್ತದೆ.
  • ನವ, ನವೀನವಾದ ಪದಗಳ ಬಳಕೆಗೆ ಹೆಚ್ಚಿನ ಆಧ್ಯತೆ ಇರುತ್ತದೆ.
  • ಇದರಲ್ಲಿನ ವಿಷಯವಸ್ತು ಶೃಂಗಾರ ಹಾಸ್ಯದಿಂದ ಹಿಡಿದು ಎಲ್ಲವನ್ನು ಸೂಕ್ಷ್ಮವಾಗಿ ಪ್ರತಿಪಾದಿಸಲಾಗಿರುತ್ತದೆ.
  • ಆಧುನಿಕತೆಗೆ ಒತ್ತು ನೀಡಿ ರಚಿಸಲಾಗುತ್ತದೆ.
  • ಸರಳ ಹಾಗೂ ಸುಂದರವಾದ ಪದಬಳಕೆಯಿಂದ ಕೂಡಿರುತ್ತದೆ.
  • ಕೆಲವುಕಡೆ ವಿವಿಧ ರೀತಿಯ ಪ್ರಾಸಕ್ಕೆ ತುಂಬಾ ಪ್ರಾಮುಖ್ಯತೆ ನೀಡಿ ರಚಿಸಲಾಗುತ್ತದೆ.
  • ಎರಡು ಅಥವಾ ಮೂರು ಸಾಲಿನಿಂದ ರಚಿತವಾದ ಕವನಗಳಿಗೆ ಹೈಕು/ಹನಿಗವನ/ಚುಟುಕು ಎಂದು ಕರೆಯಲಾಗಿದ್ದು, ಇದನ್ನು ಮನೋಹರವಾಗಿ, ಲಘುವಾಗಿ ರಚಿಸಬಹುದಾಗಿದೆ.
  • ವರ್ಣರಂಜಿತ ಪದಗಳಿಂದ ತುಂಬಿದ್ದು ಸಕಾರ ಮತ್ತು ವಿರಾಳ ಭಾವವನ್ನು ಮೂಡಿಸುವುದರಲ್ಲಿ ಸಫಲತೆಯನ್ನು ಕಂಡುಕೊಂಡಿರುತ್ತದೆ.

ಉಲ್ಲೇಖ

"https://kn.wikipedia.org/w/index.php?title=ಕವನ&oldid=1150563" ಇಂದ ಪಡೆಯಲ್ಪಟ್ಟಿದೆ