ಮೆಕ್ಸಿಕೋ

ಉತ್ತರ ಅಮೆರಿಕ್ಕಯಲ್ಲಿರುವ ಫೆಡರಲ್ ಗಣರಾಜ್ಯ
(ಮೆಕ್ಸಿಕೊ ಇಂದ ಪುನರ್ನಿರ್ದೇಶಿತ)

ಸಂಯುಕ್ತ ಮೆಕ್ಸಿಕನ್ ಸಂಸ್ಥಾನಗಳು ಅಥವಾ ಮೆಕ್ಸಿಕೋ (ಸ್ಪ್ಯಾನಿಷ್ ನಲ್ಲಿ ಮೆಹಿಕೋ) ಉತ್ತರ ಅಮೆರಿಕಾದ ಒಂದು ರಾಷ್ಟ್ರವಾಗಿದೆ. ಇದರ ಉತ್ತರಕ್ಕೆ ಯು.ಎಸ್.ಎ, ದಕ್ಷಿಣ ಮತ್ತು ಪಶ್ಚಿಮಕ್ಕೆ ಉತ್ತರ ಶಾಂತಸಾಗರ, ಪೂರ್ವದಲ್ಲಿ ಮೆಕ್ಸಿಕೋ ಕೊಲ್ಲಿ, ಆಗ್ನೇಯಕ್ಕೆ ಗ್ವಾಟೆಮಾಲಾ, ಬೆಲಿಝ್ ಮತ್ತು ಕೆರಿಬ್ಬಿಯನ್ ಸಮುದ್ರಗಳಿವೆ. ಮೆಕ್ಸಿಕೋ ರಾಷ್ಟ್ರವು ಮೆಕ್ಸಿಕೋ ನಗರವುಳ್ಳ ಜಿಲ್ಲೆ ಮತ್ತು ೩೧ ಸಂಸ್ಥಾನಗಳನ್ನೊಳಗೊಂಡ ಒಂದು ಸಾಂವಿಧಾನಿಕ ಒಕ್ಕೂಟ ಗಣರಾಜ್ಯವಾಗಿದೆ. ಮೆಕ್ಸಿಕೋದ ರಾಜಧಾನಿಯಾಗಿರುವ ಮೆಕ್ಸಿಕೋ ನಗರವು ವಿಶ್ವದಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಒಂದು. ಸುಮಾರು ೨೦ ಲಕ್ಷ ಚ.ಕಿ.ಮೀ. ವಿಸ್ತಾರವಾಗಿರುವ ಮೆಕ್ಸಿಕೋ ಅಮೆರಿಕಾ ಖಂಡಗಳಲ್ಲಿ ಆರನೆಯ ದೊಡ್ಡ ದೇಶ ಮತ್ತು ವಿಶ್ವದಲ್ಲಿ ೧೩ ನೆಯದು. ೧೧ ಕೋಟಿ ಜನರುಳ್ಳ ಈ ರಾಷ್ಟ್ರವು ಜಗತ್ತಿನಲ್ಲಿ ೧೧ನೆಯ ಅತಿ ಜನಬಾಹುಳ್ಯವಿರುವದಾಗಿದ್ದು ವಿಶ್ವದಲ್ಲಿಯೇ ಅತಿ ಹೆಚ್ಚು ಸ್ಪಾನಿಷ್ ಭಾಷಿಕರು ನೆಲೆಸಿರುವ ದೇಶವಾಗಿದೆ.ಮೆಕ್ಸಿಕೋ ಬೆಳ್ಳಿಯ ಕೆರೆನ್ಸಿ ಹೊಂದಿರುವ ವಿಶ್ವದ ಏಕೈಕ ರಾಷ್ಟ್ರವಾಗಿದೆ. ಮೆಕ್ಸಿಕನ್ ಕರೆನ್ಸಿಯ ಹೆಸರು ಪಿಸೋ. ಮೆಕ್ಸಿಕೋದ ಇತರ ಪ್ರಮುಖ ನಗರಗಳೆಂದರೆ ಗ್ವಾದಲಹರ(Guadalajara), ನಿಯೋ ಲಿಯೋನ್(Neo León), ನಿಯೋ ಲಿಯೋನ್ ಜಿಲ್ಲೆಯಲ್ಲಿ ಬರುವ ಮಾಂಟೆರರಿ, ಪ್ಯುಬ್ಲೋ(Puebla), ಟೊಲುಕ(Toluca), ತುಜಾನ(Tijuana) .
೧ ಅಮೇರಿಕನ್ ಡಾಲರ್ = ೧೮.೧೯ ಮೆಕ್ಸಿಕನ್ ಪಿಸೋ.
೧ ಮೆಕ್ಸಿಕನ್ ಪಿಸೋ =೪.೮೮೩ ಭಾರತೀಯ ರೂಪಾಯಿ

ಸಂಯುಕ್ತ ಮೆಕ್ಸಿಕನ್ ಸಂಸ್ಥಾನಗಳು
Estados Unidos Mexicanos
Flag of ಮೆಕ್ಸಿಕೋ
Flag
Coat of arms of ಮೆಕ್ಸಿಕೋ
Coat of arms
Anthem: ಹಿಮ್ನೋ ನ್ಯಾಶನಲ್ ಮೆಕ್ಸಿಕಾನೋ
Location of ಮೆಕ್ಸಿಕೋ
Capitalಮೆಕ್ಸಿಕೋ ನಗರ
Largest cityರಾಜಧಾನಿ
Official languagesಸ್ಪಾನಿಷ್
Demonym(s)Mexican
Governmentಅಧ್ಯಕ್ಷೀಯ ಒಕ್ಕೂಟ ಗಣರಾಜ್ಯ
ಫೆಲಿಪ್ ಕಾಲ್ಡೆರಾನ್
ಸ್ವಾತಂತ್ರ್ಯ 
• ಘೋಷಣೆಯ ದಿನಾಂಕ
ಸೆಪ್ಟೆಂಬರ್ 16 1810
• ಮಾನ್ಯತೆ ಪಡೆದ ದಿನಾಂಕ
ಸೆಪ್ಟೆಂಬರ್ 27 1821
• Water (%)
2.5
Population
• 2007 estimate
108,700,891 (11ನೆಯದು)
• 2005 census
103,263,388
GDP (PPP)2006 estimate
• Total
$1.149 trillion (12ನೆಯದು)
• Per capita
$11,249 (63ನೆಯದು)
GDP (nominal)2006 estimate
• Total
$840.012 billion (short scale) (14ನೆಯದು)
• Per capita
$8,066 (55ನೆಯದು)
Gini (2006)47.3
high
HDI (2004)0.821
Error: Invalid HDI value · 53ನೆಯದು
Currencyಪೆಸೋ (MXN)
Time zoneUTC-8 to -6
• Summer (DST)
varies
Calling code52
Internet TLD.mx

ಇತಿಹಾಸ ಬದಲಾಯಿಸಿ

ಕೊಲಂಬಿಯಾ ಪೂರ್ವ ನಾಗರಿಕತೆ ಅಥವಾ ಮೆಸೋ ಅಮೇರಿಕನ್ ನಾಗರೀಕತೆಗಳಾದ ಒಲೆಮಿಕ್, ಟೊಟ್ಲೆಕ್, ಟಿಯೋಟಿಹುಕನ್, ಜಪೋಟಿಕ್, ಮಾಯನ್ ಮತ್ತು ಅಜ್ಟೆಕ್ ನಾಗರೀಕತೆಗಳ ಅವಶೇಷಗಳನ್ನು ಮೆಕ್ಸಿಕೋದಲ್ಲಿ ಕಾಣಬಹುದು. ೧೫೨೧ರಲ್ಲಿ ಸ್ಪಾನಿಷ್ ಸಾಮ್ರಾಜ್ಯವು ಮೆಕ್ಸಿಕೋವನ್ನು ವಶಪಡಿಸಿಕೊಂಡು ಅದನ್ನು ತಮ್ಮ ವಸಾಹಸುವನ್ನಾಗಿ ಮಾಡಿಕೊಂಡಿತು. ಮೆಕ್ಸಿಕೋ-ಟೆನೊಕ್ಟಿಲಾನ್ ಎಂದು ಕರೆಯಲಾದ ಈ ವಸಾಹುತನ್ನು ಸ್ಪೇನಿನಲ್ಲಿದ್ದ ವೈಸರಾಯನ ಮುಖಾಂತರ ಆಳಲಾಗುತ್ತಿತ್ತು. ೧೮೨೧ರಲ್ಲಿ ನಡೆದ ಮೆಕ್ಸಿಕೋ ಸ್ವಾತಂತ್ರ್ಯ ಸಮರದಲ್ಲಿ ಮೆಕ್ಸಿಕೋಗೆ ಸ್ವಾಯುತ್ತತೆ ದೊರಕಿತು. ಸ್ವಾತಂತ್ರ್ಯಾನಂತರದ ಕೆಲವು ವರ್ಷಗಳು ಹಲವು ರಾಜಕೀಯ ಬದಲಾವಣೆಗಳು ಮತ್ತು ಆರ್ಥಿಕ ಕುಸಿತಗಳನ್ನು ಕಂಡವು. ೧೮೪೬ ರಿಂದ ೪೮ರವರೆಗೆ ನಡೆದ ಮೆಕ್ಸಿಕೋ ಅಮೇರಿಕನ್ ಯುದ್ದದಲ್ಲಿ ಮೆಕ್ಸಿಕೋ ಸೋತ ಕಾರಣ ಮೆಕ್ಸಿಕೋದ ಕೆಲವು ಉತ್ತರ ಭಾಗಗಳು ಅಮೇರಿಕಾದ ಪಾಲಾದವು. ೧೯ನೇ ಶತಮಾನದಲ್ಲಿನ ಮೆಕ್ಸಿಕೋ ಪಾಸ್ತ್ರಿ ಯುದ್ದ, ಫ್ರೆಂಚ್- ಮೆಕ್ಸಿಕನ್ ಯುದ್ದ, ಅಂತರ್ಯುದ್ದಗಳ ಜೊತೆಗೆ ಸರ್ವಾಧಿಕಾರಿಗಳ ಆಡಳಿತಕ್ಕೂ ಒಳಪಟ್ಟಿತು. ೧೯೧೦ರಲ್ಲಿ ನಡೆದ ಮೆಕ್ಸಿಕೋ ಕ್ರಾಂತಿಯಲ್ಲಿ ಸರ್ವಾಧಿಕಾರಿಯ ಪತನವಾಯಿತು. ೧೯೧೭ರಲ್ಲಿ ಮೆಕ್ಸಿಕೋ ಸಂವಿಧಾನದ ರಚನೆಯಾಗುವುದರೊಂದಿಗೆ ಮೆಕ್ಸಿಕೋದ ಇಂದಿನ ರಾಜಕೀಯ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿದೆ.

ಆರ್ಥಿಕತೆ ಬದಲಾಯಿಸಿ

ಮೆಕ್ಸಿಕೋ ರಾಷ್ಟ್ರವು ಹೆಚ್ಚು ಜಿ.ಡಿ.ಪಿ ಇರುವ ರಾಷ್ಟ್ರಗಳ ಪಟ್ಟಿಯಲ್ಲಿ ೧೫ನೇ ಸ್ಥಾನದಲ್ಲೂ , ಕೊಳ್ಳುವಿಕೆಯ ಆಧಾರದ ಮೇಲಿನ ರಾಷ್ಟ್ರಗಳ ಪಟ್ಟಿಯಲ್ಲಿ ೧೧ನೇ ಸ್ಥಾನದಲ್ಲೂ ಇದೆ. ಮೆಕ್ಸಿಕೋ ಉತ್ತರ ಅಮೇರಿಕನ್ ರಾಷ್ಟ್ರಗಳ ಜೊತೆಗೆ ನಾಫ್ತಾ ( North American Free Trade Agreement (NAFTA)) ಎನ್ನುವ ಒಪ್ಪಂದವನ್ನು ಹೊಂದಿದೆ. ಈ ಒಪ್ಪಂದದ ಸಲುವಾಗಿಯೇ ಮೆಕ್ಸಿಕೋದ ಆರ್ಥಿಕತೆ ಸ್ಥಿರವಾಗಿದೆ. ೧೯೯೪ರಲ್ಲಿ ಒ.ಇ.ಸಿ.ಡಿ Economic Co-operation and Development (OECD) ಒಕ್ಕೂಟ ಸೇರಿದ ಮೊದಲನೆಯ ಲ್ಯಾಟಿನ್ ಅಮೇರಿಕನ್ ರಾಷ್ಟ್ರ ಮೆಕ್ಸಿಕೋ ಆಯಿತು.ವಿಶ್ವಬ್ಯಾಂಕಿನಲ್ಲಿನ ರಾಷ್ಟ್ರಗಳ ಪಟ್ಟಿಯಲ್ಲಿ ಮೆಕ್ಸಿಕೋಗೆ ಮಧ್ಯಮೋತ್ತಮ ಆದಾಯ ಹೊಂದಿರುವ ರಾಷ್ಟ್ರದ ಸ್ಥಾನ ನೀಡಲಾಗಿದೆ.

ಪ್ರವಾಸೋದ್ಯಮ ಬದಲಾಯಿಸಿ

ಯುನೆಸ್ಕೋದ ಸಂರಕ್ಷಿತ ತಾಣಗಳ ಪಟ್ಟಿಯಲ್ಲಿ ಹೆಚ್ಚು ತಾಣಗಳನ್ನು ಹೊಂದಿರುವ ಅಮೇರಿಕನ್ ರಾಷ್ಟ್ರಗಳಲ್ಲಿ ಮೊದಲನೆಯ ಸ್ಥಾನ ಮೆಕ್ಸಿಕೋದ್ದಾಗಿದೆ ವಿಶ್ವದಲ್ಲೇ ಇಂತಹ ಹೆಚ್ಚಿನ ತಾಣಗಳನ್ನು ಹೊಂದಿರುವ ಐದನೇ ರಾಷ್ಟ್ರವಾಗಿದೆ. ಜೀವ ವೈವಿಧ್ಯತೆಯಲ್ಲಿ ವಿಶ್ವದಲ್ಲೇ ನಾಲ್ಕನೆಯ ಸ್ಥಾನವನ್ನು ಮೆಕ್ಸಿಕೋ ಹೊಂದಿದೆ. ೨೦೧೬ರಲ್ಲಿ ೩.೫ ಕೋಟಿ ವಿದೇಶಿಯರ ಆಗಮನದೊಂದಿಗೆ ವಿಶ್ವದಲ್ಲೇ ಅತೀ ಹೆಚ್ಚು ವಿದೇಶೀಯರ ಆಗಮನ ಹೊಂದೋ ರಾಷ್ಟ್ರಗಳ ಪಟ್ಟಿಯಲ್ಲಿ ೮ನೇ ಸ್ಥಾನ ಪಡೆದಿದೆ.

ಒಕ್ಕೂಟಗಳು ಬದಲಾಯಿಸಿ

ಮೆಕ್ಸಿಕೋ ವಿಶ್ವಸಂಸ್ಥೆ, ವಿಶ್ವ ವ್ಯಾಪಾರ ಒಕ್ಕೂಟ, ಜಿ-೫, ಜಿ-೮, ಜಿ-೨೦ ಒಕ್ಕೂಟಗಳ ಸದಸ್ಯ ರಾಷ್ಟ್ರವಾಗಿದೆ.