ಮಾಸ್ಕೋ

ರಾಜಧಾನಿ ನಗರ ಮತ್ತು ರಶಿಯಾದ ದೊಡ್ಡ ನಗರ; ರಶಿಯಾದ ಪ್ರತ್ಯೇಕ ಫೆಡರಲ್ ವಿಷಯ
(ಮಾಸ್ಕೊ ಇಂದ ಪುನರ್ನಿರ್ದೇಶಿತ)

ಮಾಸ್ಕೋ ಇದು ರಷ್ಯಾ ದೇಶದ ರಾಜಧಾನಿ ಮತ್ತು ಅತಿ ದೊಡ್ಡ ನಗರ, ಅಷ್ಟೇ ಅಲ್ಲದೇ ಯುರೋಪ್ ಖಂಡದ ಅತಿ ದೊಡ್ಡ ನಗರ ಮತ್ತು ಜಗತ್ತಿನ ಅತೀ ದೊಡ್ಡ ನಗರದಲ್ಲಿ ಒಂದು ಕೂಡ. ಇದು ರಷ್ಯಾ ದೇಶದ ರಾಜಕೀಯ, ಸಾಮಾಜಿಕ, ಧಾರ್ಮಿಕ, ಹಣಕಾಸು, ಶಿಕ್ಷಣ ಮತ್ತೊ ಸಂಚಾರ ವ್ಯವಸ್ಥೆಯ ಮುಖ್ಯ ಕೇಂದ್ರ ಕೂಡ. ಈ ನಗರವು ಮೋಸ್ಕವಾ ನದಿಯ ದಂಡೆಯ ಮೇಲೆ ಯುರೋಪ್ ಖಂಡದ ಭಾಗದ ರಷ್ಯಾದಲ್ಲಿದೆ. ಐತಿಹಾಸಿಕವಾಗಿ ಮಾಸ್ಕೋ ಹಿಂದಿನ ಸೋವಿಯತ್ ರಷ್ಯಾ ಮತ್ತು ಸೋವಿಯತ್ ರಾಜ ಮನೆತನದ ರಾಜಧಾನಿಯಾಗಿತ್ತು. ಇಲ್ಲಿಯೇ ರಷ್ಯಾದ ರಾಷ್ಟ್ರಾಧ್ಯಕ್ಷರ ಮುಖ್ಯ ನಿವಾಸವಾದ ಕ್ರೆಮ್ಲಿನ್ ಅರಮನೆಯಿದೆ. ಈ ನಗರದಲ್ಲಿ ಜಗತ್ತಿನ ಅತೀ ಹೆಚ್ಚು ಶ್ರೀಮಂತ ಜನರು ವಾಸಿಸುತ್ತಾರೆ. ೨೦೦೭ರಲ್ಲಿ ಸತತ ಎರಡನೇಯ ವರ್ಷ ಜಗತ್ತಿನ ಅತೀ ದುಬಾರಿ ನಗರವೆಂದು ಘೋಷಿಸಲಾಗಿತ್ತು. ಇಲ್ಲಿ ಉನ್ನತ ಶಿಕ್ಷಣದ ಕೇಂದ್ರಗಳು, ವೈಞ್ನಾನಿಕ ಸಂಶೋಧನೆಯ ಕೇಂದ್ರಗಳು ಮತ್ತು ಅನೇಕ ವಿವಿಧ ಬಗೆಯ ಕ್ರೀಡೆಯ ಕೇಂದ್ರಗಳಿವೆ. ಈ ನಗರವು ಸಂಕೀರ್ಣವಾದ ಸಂಚಾರ ವ್ಯವಸ್ಥೆಯನ್ನು ಹೊಂದಿದ್ದು ಅದು ಸಂಚಾರ ವ್ಯವಸ್ಥೆಗಲ್ಲದೇ ಕಲೆ ಮತ್ತು ಕಲಾತ್ಮಕವಾದ ಚಿತ್ರಕಲೆಗಳಿಗೂ ಪ್ರಸಿದ್ಧವಾಗಿದೆ.

ಮಾಸ್ಕೋ
Москва
ಕೆಂಪು ಚೌಕ
ರಷ್ಯಾದ ಭೂಪಟದಲ್ಲಿ ಮಾಸ್ಕೋ
ರಷ್ಯಾದ ಭೂಪಟದಲ್ಲಿ ಮಾಸ್ಕೋ
ದೇಶ ರಷ್ಯಾ
ಸ್ಥಾಪನೆ೧೧೪೭
ಸರ್ಕಾರ
 • ಮೇಯರ್ಯುರಿ ಲುಜ್ಕೋವ್
Area
 • Total೧,೦೮೧ km (೪೧೭ sq mi)
Population
 • Total೧,೦೪,೭೦,೩೧೮
 (೧ನೆಯ ಸ್ಥಾನ)
ಸಮಯದ ವಲಯ
ಜಾಲತಾಣwww.mos.ru
"https://kn.wikipedia.org/w/index.php?title=ಮಾಸ್ಕೋ&oldid=1173636" ಇಂದ ಪಡೆಯಲ್ಪಟ್ಟಿದೆ