ಬಾವುಟ

(ಧ್ವಜ ಇಂದ ಪುನರ್ನಿರ್ದೇಶಿತ)

ಬಾವುಟ ಸಂಕೇತ ಸೂಚಿಸಲು ಅಥವಾ ಸಂವಹನ ಮೂಡಿಸಲು ಬಳಸಲಾಗುವ ಬಟ್ಟೆಯ ತುಂಡು. ಬಾವುಟವನ್ನು ಕಂಬಕ್ಕೆ ಕಟ್ಟಿ ಅಥವಾ ಕೋಲಿಗೆ ಕಟ್ಟಿ ಹಾರಿಸಲಾಗುತ್ತದೆ. ಬಾವುಟಗಳನ್ನು ಮೊದಲು ಸಂಕೇತ ರವಾನಿಸಲು ಬಳಸಲಾಗುತ್ತಿತ್ತು, ಬಾವುಟವನ್ನು ಹಿಡಿದವರ ಗುರುತಿಗಾಗಿ ಬಳಸಲಾಗುತ್ತಿತ್ತು. ಈಗಲೂ‌ ಇದೇ ಬಳಕೆಗಳಲ್ಲಿ ಬಾವುಟಗಳನ್ನು ನಾವು ಕಾಣುತ್ತೇವೆ. ಬಾವುಟಗಳನ್ನು ಸಂದೇಶ ರವಾನಿಸಲು ಅಥವಾ ಜಾಹೀರಾತಿಗಾಗಿ, ಅಥವಾ ಅಲಂಕಾರ ಕಾರ್ಯಗಳಿಗೆ ಕೂಡ ಬಳಸಲಾಗುತ್ತದೆ.

ಬಾವುಟಗಳು

ಧ್ವಜಗಳನ್ನು ಸಂವಹನ, ಗುರುತಿಸುವಿಕೆ ಮತ್ತು ಅಲಂಕಾರದ ಸಾಧನವಾಗಿ ಶತಮಾನಗಳಿಂದ ಬಳಸಲಾಗಿದೆ. ಅವು ವಿವಿಧ ಆಕಾರಗಳು, ಗಾತ್ರಗಳು ಮತ್ತು ಬಣ್ಣಗಳಲ್ಲಿ ಬರುತ್ತವೆ ಮತ್ತು ದೇಶಗಳು, ಸಂಸ್ಥೆಗಳು ಅಥವಾ ಚಳುವಳಿಗಳನ್ನು ಪ್ರತಿನಿಧಿಸಲು ಹೆಚ್ಚಾಗಿ ಬಳಸಲಾಗುತ್ತದೆ. ವೆಕ್ಸಿಲಾಲಜಿ ಎಂದು ಕರೆಯಲ್ಪಡುವ ಧ್ವಜಗಳ ಅಧ್ಯಯನವು ಧ್ವಜಗಳ ಇತಿಹಾಸ, ಸಂಕೇತ ಮತ್ತು ವಿನ್ಯಾಸವನ್ನು ಪರಿಶೋಧಿಸುತ್ತದೆ. ಧ್ವಜಗಳ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆ ಮತ್ತು ಕಾಲಾನಂತರದಲ್ಲಿ ಅವು ಹೇಗೆ ವಿಕಸನಗೊಂಡಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ವೆಕ್ಸಿಲಾಲಜಿ ಸಹಾಯ ಮಾಡುತ್ತದೆ. ಧ್ವಜಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನೀವು ಆಸಕ್ತಿ ಹೊಂದಿದ್ದರೆ, ವೆಕ್ಸಿಲಾಲಜಿ ಅನ್ವೇಷಿಸಲು ಆಕರ್ಷಕ ಕ್ಷೇತ್ರವಾಗಿದೆ.

ಬಾವುಟಗಳ ಬಗ್ಗೆ ನಡೆಯುವ ಅಧ್ಯಯನವನ್ನು ಆಂಗ್ಲದಲ್ಲಿ ವೆಕ್ಸಿಲ್ಲಾಲಜಿ ಎಂದು ಕರೆಯುತ್ತಾರೆ. ಲ್ಯಾಟಿನ್ ಭಾಷೆಯಲ್ಲಿ ವೆಕ್ಸಿಲ್ಲಮ್ ಎಂದರೆ ಬಾವುಟ ಎಂದರ್ಥ.

ಮಂತ್ರಾಲಯ ಕಟ್ಟಡದ ಮೇಲೆ ಇರುವ ಬಾವುಟ ಭಾರತದಲ್ಲೇ‌ ಅತಿ ದೊಡ್ಡ ಬಾವುಟವಂತೆ!


"https://kn.wikipedia.org/w/index.php?title=ಬಾವುಟ&oldid=1246397" ಇಂದ ಪಡೆಯಲ್ಪಟ್ಟಿದೆ