ಸತ್ಯಂ
ಸತ್ಯಂ - ಮಾಹಿತಿ ತಂತ್ರಜ್ಞಾನ ಕಂಪನಿಯ ಬಗ್ಗೆ ಮಾಹಿತಿಗೆ ಈ ಲೇಖನವನ್ನು ಓದಿ.
ಸತ್ಯಂ - ಕನ್ನಡ ಚಿತ್ರರಂಗದಲ್ಲಿ ಖ್ಯಾತ ಸಂಗೀತ ನಿರ್ದೇಶಕರಾಗಿದ್ದರು.(ಜನನ ೧೭-೫-೧೯೩೫ ನಿಧನ೧೨-೧-೧೯೮೯)

ಹಾರ್ಮೋನಿಯಂನಿಂದ ಸಂಗೀತ ನೀಡಿದವರಿದ್ದಾರೆ,ವೀಣೆಯಿಂದ ಸಂಗೀತ ನೀಡಿದವರಿದ್ದಾರೆ,ಗಿಟಾರದಿಂದಲೂ ಸಂಗೀತ ನೀಡಿದವರಿದ್ದಾರೆ.ಆದರೆ "ಡೋಲಕ್" ನಿಂದ ಸಂಗೀತ ನಿರ್ದೇಶನ ಮಾಡಿದ ಏಕೈಕ ಸಂಗೀತ ನಿರ್ದೇಶಕರೆಂದರೆ "ಸತ್ಯಂ".
ಸತ್ಯಂ ಮೂಲತ: ತೆಲುಗಿನವರು.ಸತ್ಯಂ ಅವರ ಪೂರ್ಣ ಹೆಸರು"ಚೌಳ್ಳ ಪಿಳ್ಳೆ ಸತ್ಯ ನಾರಾಯಣ ಶಾಸ್ತ್ರಿ " ಜನಿಸಿದ್ದು ೧೯೩೫ ಮೇ ೧೭ ರಂದು ಆಂದ್ರ ಪ್ರದೇಶದ ವಿಜಯ ನಗರ ಜಿಲ್ಲೆಯ ಗಾದೆವಲಪ ಗ್ರಾಮದಲ್ಲಿ.ತಾಯಿ ಕಾಂತಮ್ಮ ಉತ್ತಮ ಹಾಡುಗಾರ್ತಿ,ತಂದೆ ಹನುಮಂತ ಶಾಸ್ತ್ರಿಗಳು ಕೂಡಾ ಭಾಗವತ ಮೇಳಗಳಿಗೆ ಪ್ರಸಿದ್ಧರಾದವರು.ಅವರ ಹಾಡೆಂದರೆ ಜನ ಕಿಕ್ಕಿರಿದು ಸೇರುತ್ತಿದ್ದರು.ತಂದೆ ಹತೂರುಗಳ ಜಹಗೀರುದಾರರು.ವೈಭವದ ಬಾಲ್ಯವನ್ನು ಕಂಡ ಸತ್ಯಂ ಅವರಿಗೆ ಸಂಗೀತದ ಹುಚ್ಚ್ಚು ಎಳವೆಯಿಂದಲೇ ಹಿಡಿಯಿತು.ತಂದೆಗಾದರೂ ಮಗ ಉನ್ನತ ಸರ್ಕಾರಿ ಅಧಿಕಾರಿಯಾಗಬೇಕೆಂಬ ಕನಸು.ಅದ್ದರೆ ಸತ್ಯಂ ತಲೆಗೆ ವಿದ್ಯೆ ಹತ್ತಲಿಲ್ಲ,ತಂದೆ ಬಿಡಲಿಲ್ಲ.ಪ್ರೌಡಶಾಲೆಯ ಎರಡನೇ ವಷ೯ದಲ್ಲಿ ನಪಾಸಾದಾಗ ತಂದೆಯ ಉಗ್ರ ಶಿಕ್ಷೆಯ ಅನುಭವಗಳನ್ನು ಪಡೆದಿದ್ದ ಬಾಲಕ ಸತ್ಯಂ ಮನೆಬಿಟ್ಟು ಓಡಿದ.ಸಕಲ ಐಶ್ವರ್ಯದ ಬದುಕಿಗೆ ತಿಲಾಂಜಲಿ ನೀಡಿ ಸೇರಿದ್ದು ಕಾಕಿನಾಡದ "ಹ್ಯಾಪಿ ಹೋಂ" ಅನ್ನು.
ಅಲ್ಲಿ ಬಡ ವಿದ್ಯಾರ್ಥಿಗಳಿಗೆ ಊಟ ಬಟ್ಟೆ ನೀಡಿ ಸಂಗೀತ ಕಲಿಸಲಾಗುತಿತ್ತು.ಅನಾಥ ಎಂದು ಹೇಳಿ ಸತ್ಯಂ ಅಲ್ಲಿ ಪ್ರವೇಶ ಪಡೆದಿದ್ದರು.ಇದೇ ಸಂಸ್ಥೆಯಲ್ಲಿ ಎಸ್.ವಿ.ರಂಗರಾವ್,ಅಂಜಲೀ ದೇವಿ,ರೇಲಂಗಿ ಮೊದಲಾದವರಿದ್ದರು.ಅವರಲ್ಲರ ಒಡನಾಟ ಸತ್ಯಂ ಕಲಾಭಿರುಚಿ ವಿಕಸಿತವಾಗಲು ಕಾರಣವಾಯಿತು.ಅಲ್ಲಿ ಪರಿಚಿತರಾದ ಒಬ್ಬ ಮಹನೀಯರೆಂದರೆ ಆದಿನಾರಾಯಣರಾವ್.ಅವರಾಗಲೇ "ಅಂಜಲಿ"ಚಿತ್ರದ 'ಕುಹೂ ಕುಹೂ ಬೋಲೆ ಕೊಯಲಿಯಾ' ಅಮರಗೀತೆಯಿಂದ ಪ್ರಸಿದ್ದರಾಗಿದ್ದರು.ಅವರು ಮುಂದೆ "ಮಯಾಲಮಾರಿ"ಸ್ವಂತ ಚಿತ್ರ ತಯಾರಿಸಲು ನಿರ್ದರಿಸಿದಾಗ ಸತ್ಯಂ ಅವರನ್ನು ಕರೆಸಿಕೊಂಡರು,ಆ ಚಿತ್ರದಲ್ಲಿ ಅವರದು ಸಹಾಯಕ ನಿರ್ದೇಶಕನಿಂದ ಹಿಡಿದು ವಾದ್ಯಗೋಷ್ಠಿ ನಿರ್ವಹಣೆಯವರೆಗೆ ದಶವಾತರ. ಒಮ್ಮೆ ಢೋಲಕ್ ವಾದಕ ಬಾರದಾಗ ಸತ್ಯಂ ತಾವೇ ನುಡಿಸಿದರು.ಅದಕ್ಕೆ ಪ್ರಸಿದ್ದರೂ ಆದರು.ಹಲವು ಹಿಂದಿ ಚಿತ್ರಗಳಿಗೆ ಢೋಲಕ್ ನುಡಿಸಿದರು. ಆದಿನಾರಾಯಣರಾವ್ ಅವರ "ಸ್ವರ್ಣ ಸುಂದರಿ"ಯಲ್ಲಂತೂ ಅವರ ಢೋಲಕ್ ವಾದನ ಪರಿಣಾಮಕಾರಿಯಾಗಿತ್ತು.
ಮದರಾಸಿನಲ್ಲಿನ "ಫಿಲಂ ಸೆಂಟರ್" ಕಲಾಪ್ರೇಮಿಗಳ ನೆಚ್ಹಿನ ತಾಣವಾಗಿತ್ತು.ಎಲ್ಲಾ ಬಾಷೆಯ ಚಿತ್ರ ನಿರ್ಮಾತೃಗಳು ಅಲ್ಲಿ ಸೇರುತ್ತಿದ್ದರು.ಅಲ್ಲಿಗೆ ಬಂದಿದ್ದ ಹೋಟೆಲ್ ಉದ್ಯಮಿ ಎಂ.ಎಸ್.ನಾಯಕ್ ಅವರಿಗೆ ಸತ್ಯಂ ಖ್ಯಾತಿ ತಿಳಿಯಿತು.ಅವರಾಗ ಕನ್ನಡ ಚಿತ್ರಗಳ ನಿರ್ಮಾಣದಲ್ಲಿ ತೊಡಗಿದ್ದರು.ಅದಕ್ಕೇ ಸತ್ಯಂ ಅವರನ್ನೇ ಏಕೆ ಸಂಗೀತ ನಿರ್ದೇಶಕನಾಗಿ ಬಳಸಬಾರದು ಎಂದು ಯೋಚಿಸಿದರು.ಡೋಲು ವಾದನಕ್ಕೇ ಸೀಮಿತರಾಗಿದ್ದ ಸತ್ಯಂ ಅವರಿಗೂ ಬದಲಾವಣೆ ಬೇಕಾಗಿತ್ತು.ಹೀಗೆ ೧೯೬೩ರಲ್ಲಿ ತೆರೆಕಂಡ"ಶ್ರೀ ರಾಮಾಂಜನೇಯ ಯುದ್ದ " ಚಿತ್ರದ ಮೂಲಕ ಅವರು ಸ್ವತಂತ್ರ ಸಂಗೀತ ನಿರ್ದೇಶಕರಾದರು.ಈ ಚಿತ್ರದ 'ಹನುಮನ ಪ್ರಾಣ",ಜಗದೀಶನಾಡುವ ಜಗವೇ ನಾಟಕ ರಂಗ","ಜಯ ಜಯ ರಾಮ ಜಯ ಘನ ಶ್ಯಾಮ "ಮೊದಲಾದ ಗೀತೆಗಳು ಪ್ರಸಿದ್ದವಾದವು. ಮುಂದೆ ಸತ್ಯಂ ಕನ್ನಡದಲ್ಲಿ ಗಟ್ಟಿ ಸಂಗೀತ ನಿರ್ದೇಶಕರಾಗಿ ನೆಲೆ ನಿಂತರು."ಒಂದೇ ಬಳ್ಳಿಯ ಹೂವುಗಳು " ಚಿತ್ರದಲ್ಲಿ ಸತ್ಯಂ ತಮ್ಮ ಹಿಂದಿ ಚಿತ್ರರಂಗದ ನಂಟನ್ನು ಬಳಸಿ "ಮಹಮದ್ ರಫಿ " ಅವರಿಂದ "ನೀನೆಲ್ಲಿ ನಡೆವೆ ದೂರ "ಗೀತೆಯನ್ನು ಹಾಡಿಸಿದರು.ಗಾಂದಿ ನಗರ ಚಿತ್ರದ "ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ " ಹಾಡು ಅತ್ಯಂತ ಜನಪ್ರಿಯವಾಯಿತು.
ಕನ್ನಡಕ್ಕೆ ಬಂದು ಐದು ವರ್ಷದ ನಂತರ ೧೯೬೮ ರಲ್ಲಿ ಸತ್ಯಂ "ಪಾಲ ಮನಸಲು"ಚಿತ್ರಕ್ಕೆ ಸಂಗೀತ ನೀಡುವ ಮೂಲಕ ತೆಲುಗು ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು.ಆದರೆ ಅಲ್ಲಿ ಬಹು ಬೇಡಿಕೆಯ ಸಂಗೀತ ನಿರ್ದೇಶಕರಾದರು. ೩೬ ವರ್ಷಗಳಲ್ಲಿ ೩೧೨ ತೆಲುಗು,೧೩೧ ಕನ್ನಡ ,೧೦ ತಮಿಳು,ತಲಾ ಒಂದೊಂದು ಮಲಯಾಳಿ ಮತ್ತು ಹಿಂದಿ ಚಿತ್ರಗಳಿಗೆ ಸಂಗೀತ ನೀಡಿದ್ದ ಸತ್ಯಂ ಬಡ ನಿರ್ಮಾಪಕರ ಪಾಲಿಗೆ ಕಾಮಧೇನುವಾಗುತಿದ್ದರು.ಹಣ ಎಷ್ಟೇ ಕಡಿಮೆ ಕೊಟ್ಟರೂ ಅವರ ಸಂಗೀತದಲ್ಲಿನ ತಾಜಾತನ ಬದಲಾಗುತ್ತಿರಲಿಲ್ಲ.
ರೌಡಿ ರಂಗಣ್ಣ, ಕ್ರಾಂತಿವೀರ, ನಾಗಕನ್ಯೆ, ಅಪರಾದಿ, ನಾಗರಹೊಳೆ, ಸಹೋದರರ ಸವಾಲ್,ಸೀತಾ ರಾಮು,ಸವತಿಯ ನೆರಳು, ಆರದ ಗಾಯ,ತಾಯಿಯ ಮಡಿಲಲ್ಲಿ,ಕೆರಳಿದ ಸಿಂಹ, ಸಾಹಸಸಿಂಹ, ತಿರುಗು ಬಾಣ,ಗಂಡ ಭೇರುಂಡ, ಮೊದಲಾದ ಚಿತ್ರಗಳಿಗೆ ಅವರು ಕೊಟ್ಟ ಸಂಗೀತ ಇಂದಿಗೂ ಗಮನಾರ್ಹವಾಗಿದೆ,ಅದರ ಗೀತೆಗಳು ಪ್ರಸಿದ್ದವಾಗಿವೆ.೧೯೮೯ರ ಜನವರಿ ೧೨ ರಂದು ತಮ್ಮ ೫೪ ನೇ ವಯಸ್ಸಿನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಶಿವರಂಜಿನಿ,ಕಲ್ಯಾಣಿ,ಮಧ್ಯಮಾವತಿ ರಾಗಗಳನ್ನು ಹೊಸ ನೆಲೆಗೆ ಒಯ್ದಿದ್ದ ಸತ್ಯಂ "ಸೆಕೆಂಡ್ ಫಾಲೋ 'ಎಂಬ ಸಂಗೀತ ಸಂಯೋಜನೆಯ ಹೊಸ ಸಾಧ್ಯತೆಯನ್ನು ಯಶಸ್ವಿಯಾಗಿ ಪ್ರಯೋಗಿಸಿದ್ದರು.ಅನಂತ ಕನಸುಗಳನ್ನು ಹೊತ್ತ,ಹತ್ತಾರು ಯೋಜನೆಗಳನ್ನು ರೂಪಿಸಿದ್ದ ಅವರ ಬದುಕು ಅಪೂರ್ಣವಾದದ್ದು ಭಾರತೀಯ ಚಿತ್ರ ರಂಗಕ್ಕೇ ದೊಡ್ಡ ನಷ್ಟವೆನ್ನ ಬಹುದು. "ನಮನ "
ಸತ್ಯಂ ಸಂಗೀತ ನೀಡಿರುವ ಕನ್ನಡ ಚಿತ್ರಗಳು ಬದಲಾಯಿಸಿ
ಉಲೇಖಗಳು ಬದಲಾಯಿಸಿ
https://www.saregama.com/artist/m-sathyam_26354/albums
https://chiloka.com/celebrity/chellapilla-satyam
https://www.veethi.com/india-people/chellapilla_satyam-profile-9305-24.htm
ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರು ಬದಲಾಯಿಸಿ
ಪಿ.ಶ್ಯಾಮಣ್ಣ | ಪಿ.ಕಾಳಿಂಗರಾಯ | ಜಿ.ಕೆ.ವೆಂಕಟೇಶ್ | ವಿಜಯಭಾಸ್ಕರ್ | ಟಿ.ಜಿ.ಲಿಂಗಪ್ಪ | ಘಂಟಸಾಲ | ರಾಜನ್-ನಾಗೇಂದ್ರ | ಎಂ.ರಂಗರಾವ್ | ಸತ್ಯಂ | ಸಿಂಗೀತಂ ಶ್ರೀನಿವಾಸರಾವ್ | ಉಪೇಂದ್ರಕುಮಾರ್ | ಇಳಯರಾಜ ಮದನ್ ಮಲ್ಲು| ಅಶ್ವಥ್-ವೈದಿ | ಸಿ.ಅಶ್ವಥ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಎಲ್.ವೈದ್ಯನಾಧನ್ | ಶಂಕರ್ ಗಣೇಶ್ | ಹಂಸಲೇಖ | ವಿ. ಮನೋಹರ್ | ಎಂ. ಎಂ. ಕೀರವಾಣಿ | ಮಹೇಶ್ ಪಟೇಲ್| ರಾಜ್-ಕೋಟಿ | ಸಾಧು ಕೋಕಿಲ | ರಾಜೇಶ್ ರಾಮನಾಥ್ | ವಿ.ಹರಿಕೃಷ್ಣ | ಕೆ. ಕಲ್ಯಾಣ್ | ಎಲ್.ಎನ್.ಶಾಸ್ತ್ರಿ | ಗುರುಕಿರಣ್ | ದೇವಾ | ರವಿಚಂದ್ರನ್ | ಎಸ್.ಎ.ರಾಜಕುಮಾರ್ | ಕಾರ್ತಿಕ್ ರಾಜ | ವೆಂಕಟ್-ನಾರಾಯಣ್ | ಮಣಿ ಶರ್ಮ | ಆರ್. ಪಿ. ಪಟ್ನಾಯಕ್ | ಆಲ್ವಿನ್ | ಅರ್ಜುನ್ ಜನ್ಯ | ಎಂ.ಎನ್.ಕೃಪಾಕರ್ | ಭವತಾರಿಣಿ | ಮನೋ ಮೂರ್ತಿ | ರವಿ ದತ್ತಾತ್ರೇಯ | ಎಂ.ವೆಂಕಟರಾಜು|ಉಪಾಸನ ಮೊಹನ |ಯೋಗೀಶ್ ಕುಮಾರ್ ಸಿ