ರವಿ ದತ್ತಾತ್ರೇಯ. ಇವರು ಅನಿವಾಸಿ ಕನ್ನಡಿಗರು. ಅಮೆರಿಕಾದ ನ್ಯೂ ಯಾರ್ಕ್‌ನಲ್ಲಿ ವಾಸ ಮಾಡುತ್ತಾರೆ. ಆದರೆ ಬಹು ಸಮಯವನ್ನು ಜಗತ್ತನ್ನು ಸುತ್ತುವುದರಲ್ಲೆ ಕಳೆಯುತ್ತಾರೆ. ಇವರು ಮೊಟ್ಟ ಮೊದಲ ಬಾರಿಗೆ "ಮಿಸ್ ಕ್ಯಾಲಿಫೋರ್ನಿಯಾ" ಎಂಬ ಚಿತ್ರಕ್ಕೆ ಸಂಗೀತವನ್ನು ನೀಡಿದ್ದರು. ಈ ಚಿತ್ರದ ನಿರ್ಮಾಪಕರೂ ಕೂಡ ಅವರೇ. ಈ ಚಿತ್ರದ ನಿರ್ದೇಶಕರು ಕೋಡ್ಲು ರಾಮಕೃಷ್ಣ.

ನಂತರ ಮಾಸ್ಟರ್ ಕಿಶನ್ ನಿರ್ದೇಶನದ "ಕೇರ್ ಆಫ್ ಫುಟ್‌ಪಾತ್" ಚಿತ್ರಕ್ಕೆ ಸಂಗೀತ ನೀಡಿದ್ದಾರೆ.