ಸಹೋದರರ ಸವಾಲ್ (ಚಲನಚಿತ್ರ)
1977ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ
ಸಹೋದರರ ಸವಾಲ್ 1977 ರ ಭಾರತೀಯ ಕನ್ನಡ ಭಾಷೆಯ ಚಲನಚಿತ್ರವಾಗಿದ್ದು, ಇದನ್ನು ಕೆ. ಎಸ್. ಆರ್. ದಾಸ್ ನಿರ್ದೇಶಿಸಿದ್ದಾರೆ. ಇದರಲ್ಲಿ ವಿಷ್ಣುವರ್ಧನ್ ಮತ್ತು ರಜನಿಕಾಂತ್ ನಟಿಸಿದ್ದಾರೆ.[೧] ಕನ್ನಡದಲ್ಲಿ ರಜನಿಕಾಂತ್ ನಟಿಸಿದ ಕೆಲವೇ ಚಿತ್ರಗಳಲ್ಲಿ ಇದೂ ಒಂದು.[೨] ಈ ಚಲನಚಿತ್ರವನ್ನು ತೆಲುಗಿನಲ್ಲಿ ಅನ್ನದಮ್ಮುಲ ಸವಾಲ್ ಮತ್ತು ಹಿಂದಿಯಲ್ಲಿ ಚೋರ್ ಕಾ ಭಾಯಿ ಚೋರ್ (1978) ಎಂದು ಮರುನಿರ್ಮಾಣ ಮಾಡಲಾಯಿತು. ಇದನ್ನು ತಮಿಳಿಗೆ ಸಹೋದರ ಸಪಥಂ ಮತ್ತು ಹಿಂದಿಗೆ ದಿಲೇರ್ (1979) ಎಂದು ಡಬ್ ಮಾಡಲಾಯಿತು.[೩]
ಸಹೋದರರ ಸವಾಲ್ (ಚಲನಚಿತ್ರ) | |
---|---|
ಸಹೋದರರ ಸವಾಲ್ | |
ನಿರ್ದೇಶನ | ಕೆ.ಎಸ್.ಆರ್.ದಾಸ್ |
ನಿರ್ಮಾಪಕ | ಎ.ಆರ್.ರಾಜು |
ಪಾತ್ರವರ್ಗ | ವಿಷ್ಣುವರ್ಧನ್, ರಜನೀಕಾಂತ್ ಭವಾನಿ ಕವಿತ, ಲೀಲಾವತಿ |
ಸಂಗೀತ | ಸತ್ಯಂ |
ಛಾಯಾಗ್ರಹಣ | ಎಸ್.ಎಸ್.ಲಾಲ್ |
ಬಿಡುಗಡೆಯಾಗಿದ್ದು | ೧೯೭೭ |
ಚಿತ್ರ ನಿರ್ಮಾಣ ಸಂಸ್ಥೆ | ಅಜಂತಾ ಕಂಬೈನ್ಸ್ |
ಪಾತ್ರವರ್ಗ
ಬದಲಾಯಿಸಿ- ಕಿರಣ್ ಆಗಿ ವಿಷ್ಣುವರ್ಧನ್[೪]
- ಶೇಖರ್ ಆಗಿ ರಜನಿಕಾಂತ್[೪]
- ಕೃಷ್ಣಪ್ಪನ ಪಾತ್ರದಲ್ಲಿ ಬಾಲಕೃಷ್ಣ
- ಪಾರ್ವತಿಯಾಗಿ ಜಯಮಾಲಿನಿ
- ಲೀಲಾವತಿ
- ಜ್ಯೋತಿಯಾಗಿ ಕವಿತಾ
- ಲಕ್ಷ್ಮಿಯಾಗಿ ಭವಾನಿ
- ರಾಜನಾಗಿ ದ್ವಾರಕೀಶ್
ಧ್ವನಿಮುದ್ರಿಕೆ
ಬದಲಾಯಿಸಿಸಹೋದರರ ಸವಾಲ್ ಸಂಗೀತವನ್ನು ಚೆಲ್ಲಪಿಳ್ಳ ಸತ್ಯಂ ಸಂಯೋಜಿಸಿದ್ದಾರೆ. "ಹೇ ನನಗಾಗಿಯೇ" ಹಾಡು ಜನಪ್ರಿಯವಾಯಿತು. 'ಹೇ ನನಗಾಗಿಯೇ' ಹಾಡನ್ನು ತೆಲುಗು ಆವೃತ್ತಿಯಲ್ಲಿ "ನಾಕೋಸಮೇ ನೀವುನ್ನಧಿ" ಎಂದು ಉಳಿಸಿಕೊಳ್ಳಲಾಗಿದೆ.
ಹಾಡುಗಳ ಪಟ್ಟಿ | ||||
---|---|---|---|---|
ಸಂ. | ಹಾಡು | संगीतकार | ಹಾಡುಗಾರರು | ಸಮಯ |
1. | "ಓ ನಲ್ಲನೆ ಸವಿ ಮಾತೊಂದ" | ಸತ್ಯಂ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಪಿ. ಸುಶೀಲ | |
2. | "ಹೇ ನನಗಾಗಿಯೇ" | ಸತ್ಯಂ | ಎಸ್.ಪಿ.ಬಾಲಸುಬ್ರಹ್ಮಣ್ಯಂ | 4:12 |
3. | "ಏಕೆ ನೋಡುವೆ ಹಾಗೆ" | ಸತ್ಯಂ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ | |
4. | "ಮಾತೊಂದ" | ಸತ್ಯಂ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ |
ಉಲ್ಲೇಖಗಳು
ಬದಲಾಯಿಸಿ- ↑ "Rajinikanth's Kannada movies one must watch on his birthday, today". The Times of India. 12 December 2020.
- ↑
- ↑ "Diler (1979) Super Hit Action Movie | Rajnikant, Vishnu Vardhan".
- ↑ ೪.೦ ೪.೧ Ramachandran 2014, p. 68.
<ref>
tag with name "FOOTNOTERamachandran201474" defined in <references>
is not used in prior text.