ಭಾರತ ರತ್ನ
ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುಚ್ಛ ಪ್ರಶಸ್ತಿ. ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೫೪ ರಲ್ಲಿ ಆರಂಭಿಸಲಾಯಿತು. ಆಗ ಈ ಪ್ರಶಸ್ತಿಯನ್ನು ಯಾರಿಗೂ ಮರಣಾನಂತರ ಪ್ರಧಾನ ಮಾಡುವ ಉದ್ದೇಶವಿರಲಿಲ್ಲ. ಮಹಾತ್ಮ ಗಾಂಧಿಯವರಿಗೆ ಈ ಪ್ರಶಸ್ತಿ ದೊರಕದ್ದಕ್ಕೆ ಪ್ರಮುಖ ಕಾರಣ ಇದೇ ಇದ್ದೀತು. ೧೯೬೬ರ ನಂತರ ಮರಣಾನಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ಸೃಷ್ಟಿಯಾಯಿತು (ಇದುವರೆಗೆ ಒಟ್ಟು ಹದಿನಾಲ್ಕು ವ್ಯಕ್ತಿಗಳಿಗೆ ಅವರ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ). ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿ ಭಾರತೀಯ ನಾಗರಿಕರಾಗಿರಬೇಕೆಂಬ ನಿಯಮವೇನಿಲ್ಲದಿದ್ದರೂ ಸಾಮಾನ್ಯವಾಗಿ ಇದನ್ನು ಪಾಲಿಸಲಾಗುತ್ತದೆ. ಭಾರತೀಯ ನಾಗರಿಕರಲ್ಲದಿದ್ದರೂ ಈ ಪ್ರಶಸ್ತಿಯನ್ನು ಪಡೆದ ಇಬ್ಬರೇ ವ್ಯಕ್ತಿಗಳೆಂದರೆ ನೆಲ್ಸನ್ ಮಂಡೇಲಾ (೧೯೯೦ ರಲ್ಲಿ) ಮತ್ತು ಖಾನ್ ಅಬ್ದುಲ್ ಗಫಾರ್ ಖಾನ್ (೧೯೮೭ ರಲ್ಲಿ). ಪ್ರಶಸ್ತಿ ಪದಕದ ಮೊದಲ ವಿನ್ಯಾಸದಂತೆ ವೃತ್ತಾಕಾರದ ಚಿನ್ನದ ಪದಕದ ಮೇಲೆ ಸೂರ್ಯನ ಚಿತ್ರ ಮತ್ತು ದೇವನಾಗರಿ ಲಿಪಿಯಲ್ಲಿ "ಭಾರತ ರತ್ನ", ಮತ್ತು ಹಿಂಭಾಗದಲ್ಲಿ ಭಾರತದ ರಾಷ್ಟ್ರೀಯ ಚಿಹ್ನೆ ಮತ್ತು "ಸತ್ಯಮೇವ ಜಯತೇ" ಎಂದು ಬರೆಯಬೇಕೆಂದಿದ್ದಿತು. ಈ ವಿನ್ಯಾಸದ ಯಾವುದೇ ಪದಕವನ್ನು ಉಪಯೋಗಿಸಲಾಗಿಲ್ಲ. ಮುಂದಿನ ವರ್ಷವೇ ಪದಕದ ವಿನ್ಯಾಸವನ್ನು ಈಗಿನ ವಿನ್ಯಾಸಕ್ಕೆ ಬದಲಾಯಿಸಲಾಯಿತು.
ಭಾರತ ರತ್ನ | ||
ಪ್ರಶಸ್ತಿಯ ವಿವರ | ||
---|---|---|
ಮಾದರಿ | ನಾಗರೀಕ | |
ವರ್ಗ | ರಾಷ್ಟ್ರೀಯ | |
ಪ್ರಾರಂಭವಾದದ್ದು | ೧೯೫೪ | |
ಕಡೆಯ ಪ್ರಶಸ್ತಿ | ೨೦೧೯ | |
ಒಟ್ಟು ಪ್ರಶಸ್ತಿಗಳು | ೪೮ | |
ಪ್ರಶಸ್ತಿ ನೀಡುವವರು | ಭಾರತ ಸರ್ಕಾರ | |
ವಿವರ | ಸೂರ್ಯನ ಚಿತ್ರ ಮತ್ತು ಅರಳಿ ಎಲೆಯ ಚಿತ್ರದ ಮೇಲೆ ದೇವನಾಗರಿ ಲಿಪಿಯಲ್ಲಿ "ಭಾರತ ರತ್ನ" | |
Ribbon | ||
ಮೊದಲ ಪ್ರಶಸ್ತಿ ಪುರಸ್ಕೃತರು | ೧೯೫೪
• ಸರ್ವೆಪಲ್ಲಿ ರಾಧಾಕೃಷ್ಣನ್ | |
ಕೊನೆಯ ಪ್ರಶಸ್ತಿ ಪುರಸ್ಕೃತರು | ೨೦೧೯ | |
ಪ್ರಶಸ್ತಿಯ ಶ್ರೇಣಿ | ||
ಯಾವುದೂ ಇಲ್ಲ ← ಭಾರತ ರತ್ನ → ಪದ್ಮ ವಿಭೂಷಣ |
ಭಾರತ ರತ್ನ ಪ್ರಶಸ್ತಿಯನ್ನು ಪಡೆದವರ ಪಟ್ಟಿ
ಬದಲಾಯಿಸಿ + ಭಾರತದ ಪೌರತ್ವ ಸ್ವೀಕೃತರು
|
• ವಿದೇಶಿಯರು
|
# ಮರಣೋತ್ತರ ಗೌರವ
|
ಉಲ್ಲೇಖಗಳು
ಬದಲಾಯಿಸಿ- ↑ "List of recipients of Bharat Ratna (1954–2015)" (PDF). Ministry of Home Affairs (India). Archived from the original (PDF) on 9 ಫೆಬ್ರವರಿ 2018. Retrieved 11 ಸೆಪ್ಟೆಂಬರ್ 2015.
- ↑ ಲಾಲ್ ಬಹದ್ದೂರ್ ಶಾಸ್ತ್ರಿಯವರು 11 ಜನವರಿ 1966ರಂದು ತಮ್ಮ 61ನೇ ವಯಸ್ಸಿನಲ್ಲಿ ನಿಧನರಾದರು.
- ↑ ಕೆ. ಕಾಮರಾಜ್ ಅವರು 2 ಅಕ್ಟೋಬರ್ 1975ರಂದು ತಮ್ಮ 72ನೇ ವಯಸ್ಸಿನಲ್ಲಿ ನಿಧನರಾದರು.
- ↑ ವಿನೋಬಾ ಭಾವೆಯವರು 15 ನವೆಂಬರ್ 1982ರಂದು ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು.
- ↑ ಎಂ. ಜಿ. ರಾಮಚಂದ್ರನ್ ಅವರು 24 ಡಿಸೆಂಬರ್ 1987ರಂದು ತಮ್ಮ 70ನೇ ವಯಸ್ಸಿನಲ್ಲಿ ನಿಧನರಾದರು.
- ↑ ಬಿ. ಆರ್. ಅಂಬೇಡ್ಕರರು 6 ಡಿಸೆಂಬರ್ 1956ರಂದು ತಮ್ಮ 65ನೇ ವಯಸ್ಸಿನಲ್ಲಿ ನಿಧನರಾದರು.
- ↑ ರಾಜೀವ್ ಗಾಂಧಿಯವರು 21 ಮೇ 1991ರಂದು ತಮ್ಮ 46ನೇ ವಯಸ್ಸಿನಲ್ಲಿ ನಿಧನರಾದರು.
- ↑ ವಲ್ಲಭಭಾಯಿ ಪಟೇಲರು 15 ಡಿಸೆಂಬರ್ 1950ರಂದು ತಮ್ಮ 75ನೇ ವಯಸ್ಸಿನಲ್ಲಿ ನಿಧನರಾದರು.
- ↑ ಅಬುಲ್ ಕಲಾಂ ಆಜಾದರು 22 ಫೆಬ್ರವರಿ 1958ರಂದು ತಮ್ಮ 69ನೇ ವಯಸ್ಸಿನಲ್ಲಿ ನಿಧನರಾದರು.
- ↑ ಅರುಣಾ ಅಸಫ್ ಅಲಿಯವರು 29 ಜುಲೈ 1996ರಂದು ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು.
- ↑ ಜಯಪ್ರಕಾಶ್ ನಾರಾಯಣ್ ಅವರು 8 ಅಕ್ಟೋಬರ್ 1979ರಂದು ತಮ್ಮ 76ನೇ ವಯಸ್ಸಿನಲ್ಲಿ ನಿಧನರಾದರು.
- ↑ ಗೋಪಿನಾಥ್ ಬೋರ್ಡೊಲೋಯಿಯವರು 5 ಆಗಸ್ಟ್ 1950ರಂದು ತಮ್ಮ 60ನೇ ವಯಸ್ಸಿನಲ್ಲಿ ನಿಧನರಾದರು.
- ↑ ಮದನ್ ಮೋಹನ್ ಮಾಳವೀಯ ಅವರು 12 ನವೆಂಬರ್ 1946ರಂದು ತಮ್ಮ 84ನೇ ವಯಸ್ಸಿನಲ್ಲಿ ನಿಧನರಾದರು.
- ↑ ಭೂಪೇನ್ ಹಜಾರಿಕಾ ಅವರು 5 ನವೆಂಬರ್ 2011ರಂದು ತಮ್ಮ 85ನೇ ವಯಸ್ಸಿನಲ್ಲಿ ನಿಧನರಾದರು.
- ↑ ನಾನಾಜಿ ದೇಶ್‌ಮುಖ್ ಅವರು 27 ಫೆಬ್ರವರಿ 2010ರಂದು ತಮ್ಮ 93ನೇ ವಯಸ್ಸಿನಲ್ಲಿ ನಿಧನರಾದರು.
ಹೊರಸಂಪರ್ಕ ಕೊಂಡಿಗಳು
ಬದಲಾಯಿಸಿ
ಉಲ್ಲೇಖ ದೋಷ: <ref>
tags exist for a group named "lower-alpha", but no corresponding <references group="lower-alpha"/>
tag was found