ನೆಲ್ಸನ್ ಮಂಡೇಲಾ

ದಕ್ಷಿಣ ಆಫ್ರಿಕಾದ ಮಾಜಿ ರಾಷ್ಟ್ರಪತಿ, ವರ್ಣಭೇದ ನೀತಿಯ ವಿರೋಧಿ

ನೆಲ್ಸನ್ ಮಂಡೇಲಾ ಅವರು ಜುಲೈ ೧೮, ೧೯೧೮ ರಂದು ದಕ್ಷಿಣ ಆಫ್ರಿಕಾದ ಟ್ರಾನ್‍ಸ್ಕೈ ಪಟ್ಟಣದಲ್ಲಿ ಜನಿಸಿದರು. ಅವರ ತಂದೆ ಟೆಂಬೂ ಬುಡಕಟ್ಟಿನ ನಾಯಕರಾಗಿದ್ದರು. ಮಂಡೇಲಾ ಅವರು ವಿಟ್ವಾಟರ್ಸ್ರಾಂಡ್ ವಿಶ್ವವಿದ್ಯಾನಿಲಯದಲ್ಲಿ ೧೯೪೨ರಲ್ಲಿ ಕಾನೂನು ಪದವಿಯನ್ನು ಪಡೆದರು. ೧೯೪೪ರಲ್ಲಿ ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್ ಸೇರಿ 'ನ್ಯಾಷನಲ್ ಪಾರ್ಟಿ' ಸರ್ಕಾರದ ವರ್ಣಬೇಧ ನೀತಿಗಳ ವಿರುದ್ಧ ಹೋರಾಡಿದರು. ಸರ್ಕಾರವನ್ನು ಟೀಕಿಸಿದ ಅಪರಾಧಕ್ಕೆ ಅವರನ್ನು ೧೯೫೬ರಿಂದ ೧೯೬೧ರವರೆಗೆ ಸರ್ಕಾರದ ವಿರುದ್ಧ ಕಾನೂನು ಸಮರ ನಡೆಸಿ, ೧೯೬೧ರಲ್ಲಿ ಜಯಗಳಿಸಿದರು.

ನೆಲ್ಸನ್ ಮಂಡೇಲಾ
ನೆಲ್ಸನ್ ಮಂಡೇಲಾ

ಅಧಿಕಾರದ ಅವಧಿ
ಏಪ್ರಿಲ್ ೨೭, ೧೯೯೪ – ೧೯೯೯
ಉಪ ರಾಷ್ಟ್ರಪತಿ   ಫ್ರೆಡೆರಿಕ್ ವಿಲ್ಲೆಮ್ ಡೆ ಕ್ಲೆರ್ಕ್
ಥಾಬೊ ಮ್‍ಬೇಕಿ
ಪೂರ್ವಾಧಿಕಾರಿ ಫ್ರೆಡೆರಿಕ್ ವಿಲ್ಲೆಮ್ ಡೆ ಕ್ಲೆರ್ಕ್ (State President of South Africa)
ಉತ್ತರಾಧಿಕಾರಿ ಥಾಬೊ ಮ್‍ಬೇಕಿ

ಜನನ ಜುಲೈ ೧೮, ೧೯೧೮
ಕೂನು, ಮ್‍ಥಾಥ, ಟ್ರಾನ್ಸ್ಕೀ
ರಾಜಕೀಯ ಪಕ್ಷ ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್
ಯುವಕ ನೆಲ್ಸನ್ ಮಂಡೇಲಾ

ಮೊದಲಿಗೆ 'ಅಹಿಂಸಾ ನೀತಿ'ಯನ್ನು ಆಚರಿಸಿದರೂ ನಂತರ ಗೆರಿಲ್ಲಾ ತಂತ್ರಗಳನ್ನು ಅನುಸರಿಸಿ ವಿಶ್ವಾದ್ಯಂತ ಟೀಕೆಗೊಳಗಾದರು. ಆದರೆ ಶೀಘ್ರವಾಗಿ ಜನಪ್ರಿಯರಾದ ಮಂಡೇಲಾ ಅವರು ಜನಾಂಗೀಯ ದ್ವೇಷ'ಕ್ಕೆ ಹೆಸರಾದ ಸರ್ಕಾರದ ವಿರುದ್ದ ಪ್ರಬಲ ಎದುರಾಳಿಯಾದರು. ೧೯೯೦ರವರೆಗಿನ ಅವರ ೨೭ ವರ್ಷದ ಜೀವಾವಧಿ ಸಜೆಯು ಪ್ರಪಂಚದಾದ್ಯಂತ ಜನಜಾಗೃತಿಯನ್ನುಂಟುಮಾಡಿ, ಆಫ್ರಿಕಾದ ಶಾಂತ ಪ್ರಜಾಪ್ರಭುತ್ವಕ್ಕೆ ಕಾರಣವಾಗಿದೆ.

ಮಂಡೇಲಾರ ಜೀವನ

ಬದಲಾಯಿಸಿ

ಬಾಲ್ಯ ಜೀವನ

ಬದಲಾಯಿಸಿ

ವೈವಾಹಿಕ ಜೀವನ

ಬದಲಾಯಿಸಿ
 
ನೆಲ್ಸನ್ ಮಂಡೇಲಾ (೨೦೦೮)

ಮಂಡೇಲಾ ಅವರು ಮೂರು ಬಾರಿ ಮದುವೆಯಾಗಿದ್ದಾರೆ. ಅವರಿಗೆ ಒಟ್ಟು ಆರು ಜನ ಮಕ್ಕಳು. ಇಪ್ಪತ್ತು ವೊಮ್ಮಕ್ಕಳು ಹಾಗೂ ಹಲವಾರು ಮರಿಮಕ್ಕಳನ್ನು ಹೊಂದಿದ ತುಂಬು ಸಂಸಾರ. ಇವೆಲಾಯಿನ್ ನಟೊಕೊ ಮಸೇ ನೆಲ್ಸನ್‌ರ ವೊದಲ ಹೆಂಡತಿ ದಕ್ಷಿಣ ಆಫ್ರಿಕಾದ ಟ್ರಾನ್ಸ್‌ಕೆಯವರು. ಇವಳು ವೊಟ್ಟ ವೊದಲಿಗೆ ಜೊಹಾನ್ಸ್ ಬರ್ಗ್‌ನಲ್ಲಿ ಮಂಡೇಲಾ ಅವರನ್ನು ಭೇಟಿ ಆಗಿದ್ದಳು. ಪರಿಚಯವು ಪ್ರಣಯದೊಂದಿಗೆ ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ಅವರಿಬ್ಬರಿಗೂ ಮದುವೆಯಾಯಿತು. ನೆಲ್ಸನ್ ಮಂಡೇಲಾರು ಸತತವಾಗಿ ಹಲವಾರು ವರ್ಷಗಳ ಕಾಲ ಸ್ವಾತಂತ್ರ್ಯ ಹೋರಾಟದಲ್ಲಿಯೇ ತಮ್ಮನ್ನು ತೊಡಗಿಸಿ ಕೊಂಡಿದ್ದರಿಂದ ಕುಟುಂಬವನ್ನು ಸರಿಯಾಗಿ ನಿರ್ವಹಿಸಲಾಗದೆ ಸುಮಾರು ೧೩ ವರ್ಷಗಳ ದಾಂಪತ್ಯದ ೧೯೫೭ರಲ್ಲಿ ಸಂಬಂಧ ಮುರಿದು ಬಿತ್ತು. ಈ ಕಾರಣದಿಂದ ಅವರಿಬ್ಬರ ಮಧ್ಯೆ ಯಾವ ಸಂಬಂಧಗಳು ಉಳಿದು ಕೊಳ್ಳಲಿಲ್ಲ. ರಾಜಕೀಯ ತಾಟಸ್ಥ್ಯವನ್ನು ತಾಳುವಂತೆ ಅವರ ಹೆಂಡತಿಯು ಮಂಡೇಲಾ ಅವರಿಗೆ ಹಲವಾರು ಬಾರಿ ಕೇಳಿದರೂ ಅವರು ಹೆಂಡತಿಯನ್ನೇ ಬಿಟ್ಟರೇ ಹೊರತು ತಾವು ನಿಶ್ಚಿಯಿಸಿಕೊಂಡಿದ್ದ ಹೋರಾಟವನ್ನು ಬಿಡಲಿಲ್ಲ. ಇದು ಒಬ್ಬ ನಿಜವಾದ ಹೋರಾಟಗಾರನ ಖಾಸಗಿಯ ಬದುಕು ದುರಂತದಲ್ಲಿ ಪರಿಸಮಾಪ್ತಿಗೊಳ್ಳುವ ನೋವಿನ ಸಂಗತಿಯಾಗಿ ನಿಲ್ಲುತ್ತದೆ. ಮೊದಲ ಹೆಂಡತಿ ಇವೆಲಾಯಿನ್ ನಟೊಕೊ ಮಸೇ ಅವರು ೨೦೦೪ರಲ್ಲಿ ಅನಾರೋಗ್ಯದಿಂದ ತೀರಿಕೊಂಡರು. ಇವರಿಗೆ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದರು. ಇವರೆಲ್ಲರೂ ಸಹ ತೀರಿ ಹೋಗಿದ್ದಾರೆ.

ಕಪ್ಪು ವರ್ಣೀಯ ಸಾಮಾಜಿಕ ಕಾರ್ಯಕರ್ತೆಯಾದ ವಿನ್ನಿ ಮಡಿಕಿಜೇಲಾ ಅವರು ನೆಲ್ಸನ್ ಮಂಡೇಲಾ ಅವರನ್ನು ೧೯೫೭ರಲ್ಲಿ ಮದುವೆಯಾದರು. ಇವರು ಈ ವೊದಲು ಜೋಹಾನ್ಸ್‌ಬರ್ಗ್ ನಗರದ ವೊಟ್ಟಮೊದಲ ಮಹಿಳಾ ಹೋರಾಟಗಾರ್ತಿಯಾಗಿ ನಿರೂಪಿತಗೊಂಡವರು. ಇಬ್ಬರು ಒಂದೇ ಮನೋಭಾವನೆ ಹಾಗೂ ಗುರಿಯನ್ನಿಟ್ಟುಕೊಂಡಿದ್ದರಿಂದ ಈ ವೊದಲಿನಂತೆ ಹೋರಾಟವು ಅವರ ದಾಂಪತ್ಯಕ್ಕೆ ಅಡ್ಡಿಯಾಗಲಿಲ್ಲ. ಇವರಿಗೂ ಸಹ ಎರಡು ಮಕ್ಕಳಿದ್ದೂ ಇವರನ್ನೆಲ್ಲಾ ವಿನ್ನಿ ಮಂಡೇಲಾ ಅವರೇ ಸಾಕಿ ಸಲುಹಿದರು. ಕಾರಣ ಮಕ್ಕಳಿಬ್ಬರ ಬಾಲ್ಯ ಮತ್ತು ಯೌವನದ ಅವಧಿಯಲ್ಲಿ ನೆಲ್ಸನ್ ಮಂಡೇಲಾ ಅವರು ಇಡೀ ತಮ್ಮ ಬದುಕನ್ನು ಜೈಲಿನಲ್ಲಿ ಕಳೆಯುತ್ತಿದ್ದರು. ಇಂಥ ಕಷ್ಟದ ಏಕಾಂಗಿತನವು ಅವರಿಗೆ ಬಹಳ ದೊಡ್ಡ ಅಡೆತಡೆಯಾಗಲಿಲ್ಲ. ಟ್ರಾನ್ಸ್‌ಕೆ ಪ್ರಾಂತದವರಾದ ವಿನ್ನಿ ಮಂಡೇಲಾರ ತಂದೆ ಅಲ್ಲಿನ ಸ್ಥಳೀಯ ಸರಕಾರದಲ್ಲಿ ಕೃಷಿ ಮಂತ್ರಿಯಾಗಿದ್ದರು. ಹೋರಾಟದ ಕಠಿಣ ದಿನಗಳಲ್ಲಿ ಒಂದಾಗಿದ್ದ ವಿನ್ನಿ ಮಂಡೇಲಾ ಹಾಗೂ ನೆಲ್ಸನ್ ಮಂಡೇಲಾರ ಮಧ್ಯೆ ಉಂಟಾಗಿದ್ದ ಮನಸ್ತಾಪಗಳನ್ನು ಸರಿಪಡಿಸಿಕೊಳ್ಳಲಾರದೆ ಅವರು ಕೆಲವು ಕಾರಣಗಳಿಂದ ೧೯೯೨ರಲ್ಲಿ ದಾಂಪತ್ಯ ಬಂಧನದಿಂದ ಬಿಡುಗಡೆಗೊಳ್ಳಲು ನಿರ್ಧರಿಸಿದ್ದು , ೧೯೯೬ರಲ್ಲಿ ವಿವಾಹ ವಿಚ್ಛೇದನ ಪಡೆದರು. ಇವರಿಬ್ಬರಿಗೂ ಹುಟ್ಟಿದ ಝೆಂನನಿಯನ್ನು ಸ್ವಾಜಿಲ್ಯಾಂಡ್‌ನ ರಾಜಕುಮಾರ ಥುಮಾಂಭುಜಿ ದ್ಲಮಿನಿಗೆ ೧೯೭೩ರಲ್ಲಿಯೇ ಮದುವೆ ಮಾಡಿಕೊಡಲಾಗಿತ್ತು. ಇವಳಿಗೂ ಸಹ ತಂದೆಯ ಯಾವ ನೆನಪುಗಳು ಇರಲಿಲ್ಲ. ಹಾಗೂ ಪ್ರಿಟೋರಿಯಾ ಸರಕಾರವು ಸಹ ಈ ಹಿಂದೆ ತಮ್ಮ ತಂದೆಯ್ನನು ಭೇಟಿ ಮಾಡಲು ಯಾವ ಅವಕಾಶ ಕೊಟ್ಟಿರಲಿಲ್ಲ. ದ್ಲಮಿನಿ ದಂಪತಿಗಳು ಪಿಕ್ ಬೋಥೋ ಸರಕಾರದ ಕಿರುಕುಳಕ್ಕೆ ಹೆದರಿ ಅಮೆರಿಕಾ ದೇಶದಲ್ಲಿರುವ ಬೋಸ್ಟನ್ ಪಟ್ಟಣಕ್ಕೆ ಪಲಾಯನಗೈಯುವಂತೆ ಮಾಡಿತು. ಇವರಿಬ್ಬರಿಗೆ ಹುಟ್ಟಿದ ಪ್ರಿನ್ಸ್ ಸೆಡ್ಜಾದ್ಲಮಿನಿಯು ಸಹ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಹಿತರಕ್ಷಣಾ ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಇವರ ಇನ್ನೊಬ್ಬ ಮಗಳಾದ ಜಿಂದಜಿಯು, ಪ್ರಿಟೋರಿಯಾ ಸರಕಾರವು ಮಂಡೇಲಾ ಅವರನ್ನು ಬಿಡುಗಡೆ ಮಾಡುವ ಷರತ್ತು ಬದ್ಧ ವಿಷಯಗಳಿಗೆ ಸಂಬಂಧಿಸಿದಂತೆ ೧೯೮೫ರಲ್ಲಿ ಹೇಳಿಕೆ ನೀಡುವುದರ ಮೂಲಕ ಜಗತ್ಪ್ರಸಿದ್ದಿ ಆದವಳು. ಈವರೆಗೂ ಜೀವಂತವಾಗಿರುವ ಇವರು ತಮ್ಮ ಬದುಕು ನಿರ್ವಹಣೆಗಾಗಿ ವ್ಯಾಪಾರದಲ್ಲಿ ತೊಡಗಿದ್ದಾರೆ.

೧೯೯೬ರಲ್ಲಿ ವಿನ್ನಿಮಂಡೇಲಾ ಅವರಿಂದ ವಿಚ್ಛೇದನ ಪಡೆದಿದ್ದ ನೆಲ್ಸನ್ ಮಂಡೇಲಾ ಅವರು ತಮ್ಮ ೮೦ನೇ ವರ್ಷದಲ್ಲಿ ಗ್ರಾಕ್ ಮಾಕೆಲ್ ನೀ ಸಿಂಬಿನಿ(ಅವಳನ್ನು ಮಂಡೇಲಾ ಅವರು)ಯನ್ನು ವಿವಾಹವಾದರು. ಇವರು ಮೊಜಾಂಬಿಕ್ ದೇಶದ ಮಾಜಿ ಅಧ್ಯಕ್ಷರಾಗಿದ್ದ ಹಾಗೂ ವಿಮಾನ ಅಪಘಾತದಲ್ಲಿ ಮರಣ ಹೊಂದಿದ ಸಮೊರಾ ಮಾಕೆಲ್ ಅವರ ಪತ್ನಿ ಆಗಿದ್ದಳು. ೧೯೯೮ರಲ್ಲಿ ತಮ್ಮ ಇಳಿ ವಯಸ್ಸಿನಲ್ಲಿ ಇವರಿಬ್ಬರ ನಡುವೆ ಮದುವೆ ಜರುಗಿತು. ಆ ದಿನ ನೆಲ್ಸನ್ ಮಂಡೇಲಾರ ಹುಟ್ಟುಹಬ್ಬವೂ ಆಗಿತ್ತು. ಇಳಿ ವಯಸ್ಸಿನಲ್ಲಿ ಮದುವೆಯಾದ ಈ ಸಂಗತಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ರಸವತ್ತಾದ ಚರ್ಚೆಗೆ ಗ್ರಾಸವಾಯಿತು. ಜೋಹಾನ್ಸ್‌ಬರ್ಗ್ ಸಮೀಪದ ಕ್ವಿನುನಲ್ಲಿ ಇವರಿಬ್ಬರೂ ದಂಪತಿಗಳಾಗಿ ಈಗಲೂ ವಾಸವಾಗಿದ್ದಾರೆ.

ಹೋರಾಟದ ಜೀವನ

ಬದಲಾಯಿಸಿ

ನೈಲ್ಸನ್ ಮಂಡೇಲಾ ಜೈಲುವಾಸದ ೨೭ ವರ್ಷಗಳ ಶಿಕ್ಷೆಯಲ್ಲಿ ೧೮ ವರ್ಷಗಳ ಕಾಲ ರಾಬೆನ್ ಐಸ್‌ಲ್ಯಾಂಡ್‌ನ ಕಾರಾಗೃಹದಲ್ಲಿ ಕಳೆದರು. ಅವರು ಅನುಭವಿಸಿದ ಶಿಕ್ಷೆ ಹಾಗೂ ಆ ಸಂದರ್ಭದಲ್ಲಿ ಅವರು ತಳೆದ ಅಭಿಪ್ರಾಯಗಳಿಂದ ಇಡೀ ದಕ್ಷಿಣ ಆಫ್ರಿಕಾದ ಕಪ್ಪು ಜನಾಂಗದ ಅದ್ವಿತೀಯ ಮೇರು ನಾಯಕನಾಗಿ ಪ್ರಸಿದ್ದಿಗೆ ಬಂದರು. ಪ್ರಿಟೋರಿಯಾ ಜೈಲಿನಲ್ಲಿ ಜೈಲಿನ ಕ್ರೂರ ಅಧಿಕಾರಿಗಳು ಕೊಡುವ ಅತೀ ಕಷ್ಟದ ಕೆಲಸವನ್ನು ಅವರು ಮಾಡಬೇಕಿತ್ತು. ಕಠೋರವಾದ ಶಿಕ್ಷೆಗೆ ಒಳಪಡಿಸುತ್ತಿದ್ದುದಲ್ಲದೇ ಜೈಲಿನಲ್ಲಿ ಜನಾಂಗ ಹಾಗೂ ವರ್ಣದ ನೀತಿಗಳ ಮೇಲೆ ತಾರತಮ್ಯವನ್ನು ಅಧಿಕಾರಿಗಳು ಅವ್ಯಾಹತವಾಗಿ ಮಾಡುತ್ತಿದ್ದರು. ಕಪ್ಪು ಜನಾಂಗದವರಿಗೆ ಮಾತ್ರ ಅತೀ ಕಡಿಮೆ ಆಹಾರವನ್ನು ಕೊಡುತ್ತಿದ್ದರು. ಅತೀ ಕಷ್ಟದ ಹಾಗೂ ಹೆಚ್ಚಿನ ಕೆಲಸವನ್ನು ಕಪ್ಪು ಕೈದಿಗಳಿಂದ ಮಾತ್ರ ತೆಗೆದುಕೊಳ್ಳುತ್ತಿದ್ದರು. ಸಾಮಾನ್ಯವಾಗಿ ರಾಜಕೀಯ ಕೈದಿಗಳಿಗೆ ಮತ್ತು ಇತರ ಕೈದಿಗಳಿಗೆ ಪ್ರತ್ಯೇಕ ಸೆಲ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ನೆಲ್ಸನ್ ಮಂಡೇಲಾ ಅವರಿಗೆ "ಡಿ" ದರ್ಜೆಯ ಕೈದಿಗಳಿಗೆ ಕೊಡುವ ಸವಲತ್ತನ್ನು ಮಾತ್ರ ನೀಡಲಾಗಿತ್ತು. ಸರ್ಕಾರ ಬಯಸಿದ್ದಲ್ಲಿ ಒಬ್ಬರು ಮಾತ್ರ ಅವರನ್ನೂ ಭೇಟಿ ಮಾಡಬಹುದಾಗಿತ್ತು. ಹಾಗೂ ಆರು ತಿಂಗಳಿಗೊಮ್ಮೆ ಮಾತ್ರ ಅವರಿಗೆ ಬಂದಿರುವ ಪತ್ರವನ್ನು ಒಟ್ಟಾಗಿ ನೀಡಲಾಗುತ್ತಿತ್ತು. ಅಂಥಹದರಲ್ಲಿಯೂ ಸಹ ಅವರಿಗೆ ಬಂದಿರುವ ಪತ್ರಗಳೆಲ್ಲವುಗಳು ಎಲ್ಲ ಹಂತದಲ್ಲಿಯೂ ವಿಚಾರಣೆಗೊಳಗಾಗುತ್ತಿದ್ದವು.

ರಾಬಿನ್ ಐಸ್‌ಲ್ಯಾಂಡ್ ಸೆರೆಮನೆಯಿಂದ ಪಾಲ್ಸ್ ಮೂರ್ ಕಾರಾವಾಸಕ್ಕೆ ನೆಲ್ಸನ್ ಮಂಡೇಲಾ ಅವರನ್ನು ಒಳಗೊಂಡಂತೆ ಎಲ್ಲ ಪ್ರಮುಖ ನಾಯಕರನ್ನು ಸ್ಥಳಾಂತರಿಸಲಾಯಿತು. ಕಾರಣ ವರ್ಣಭೇದ ನೀತಿ ವಿರುದ್ಧದ ಹೋರಾಟದ ಸಂಬಂಧವಾಗಿ ಬಂಧಿಸಲ್ಪಟ್ಟು ಲಕ್ಷಾನು ಸಂಖ್ಯೆಯಲ್ಲಿ ಸಾಗರೋಪಾದಿಯಾಗಿ ಬರುತ್ತಿದ್ದ ಯುವ ಆಫ್ರಿಕಾ ಶಕ್ತಿಯ ಸಂಪರ್ಕದಿಂದ ಜೈಲಿನಲ್ಲಿರುವ ಕ್ರಾಂತಿಕಾರಿಗಳನ್ನು ಬೇರ್ಪಡಿಸುವ ಉದ್ದೇಶವನ್ನು ಸರಕಾರ ಹೊಂದಿತ್ತು. ಈ ಜೈಲಿನ ಕೈದಿಗಳ ಪ್ರಭಾವದಿಂದ ಪ್ರೇರಿತವಾಗಿ ಆಫ್ರಿಕಾ ದೇಶದ ಎಲ್ಲ ಜನಸಾಮಾನ್ಯರು ಹೋರಾಟವನ್ನು ಜೀವಂತವಾಗಿ ಸದಾ ಕಾಪಾಡಿಕೊಂಡು ಬಂದಿರುವ ಸಾಕ್ಷಿಗಳಿದ್ದವು. ಈ ಕಾರಣಕ್ಕಾಗಿ ರಾಬಿನ್ ಐಸ್‌ಲ್ಯಾಂಡ್ ಕಾರಾವಾಸವನ್ನು ‘ಮಂಡೇಲಾ ಯುನಿವರ್‌ಸಿಟಿ’ ಎಂದು ಕರೆಯಲಾಗುತಿತ್ತು. ಅಂದರೆ ರಾಬಿನ್ ಐಸ್‌ಲ್ಯಾಂಡ್ ಕಾರಗೃಹವು ಎಷ್ಟೊಂದು ಪರಿಣಾಮವನ್ನು ಅಲ್ಲಿಯ ಸ್ವಾತಂತ್ರ್ಯ ಹೋರಾಟದ ಮೇಲೆ ಮಾಡಿದ್ದಿರಬಹುದೆಂದು ಊಹಿಸಬಹುದಾಗಿದೆ. ಇಂಥ ಆರೋಪದಿಂದ ಮುಕ್ತಗೊಳ್ಳಲು ಸರಕಾರವು ಬೇರೆ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿತು. ಮಂಡೇಲಾರನ್ನು ಒಳಗೊಂಡು ಇನ್ನಿತರ ಪ್ರಮುಖ ಕೈದಿಗಳ ಸ್ಥಳಾಂತರವು ನ್ಯಾಷನಲ್ ಪಾರ್ಟಿಯ ಸರಕಾರ ಹಾಗೂ ಕಪ್ಪು ಜನಾಂಗದ ಮುಖಂಡರ ನಡುವೆ ರಹಸ್ಯವಾಗಿ ಮಾತುಕತೆ ನಡೆಯುವ ಸಲುವಾಗಿ ಮಾಡಲಾಗಿತ್ತು ವಿನಹ ಮತ್ತಾವ ಉದ್ದೇಶವನ್ನು ಸರ್ಕಾರ ಹೊಂದಿರಲಿಲ್ಲ ಎಂದು ಮಂತ್ರಿಯೊಬ್ಬರು ಅಭಿಪ್ರಾಯಿಸುವ ಮೂಲಕ ತೇಪೆ ಹಚ್ಚುವ ಕೆಲಸ ಮಾಡಲಾಯಿತು.

ಇಂಥ ಅನೇಕ ಕಷ್ಟಕಾರ್ಣ್ಯಗಳ ಮಧ್ಯೆ ಅರ್ಧಕ್ಕೆ ನಿಂತು ಹೋಗಿದ್ದ ತಮ್ಮ ವಿದ್ಯಾಭ್ಯಾಸವನ್ನು ಜೈಲಿನಲ್ಲಿದ್ದ ಮುಂದುವರೆಸಿ ಲಂಡನ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಪೂರೈಸಿದರು. ಜೈಲಿನಲ್ಲಿದ್ದಾಗ ನೆಲ್ಸನ್ ಮಂಡೇಲಾ ಅವರಿಗೆ ತಪ್ಪಿಸಿಕೊಳ್ಳುವ ಅವಕಾಶವನ್ನು ಜೈಲು ಅಧಿಕಾರಿಗಳೇ ಸ್ವತಃ ಸೃಷ್ಟಿಸಿದ್ದರು. ಕಾರಣ ಅವರು ಉತ್ತೇಜನಗೊಂಡು ತಪ್ಪಿಸಿಕೊಳ್ಳುವ ಸಮಯದಲ್ಲಿ ಕುತಂತ್ರದಿಂದ ಶೂಟ್ ಮಾಡಿ ಸಾಯಿಸುವ ತಂತ್ರವನ್ನು ಪ್ರಿಟೋರಿಯ ಆಡಳಿತ ರೂಪಿಸಿತ್ತು ಎಂದು ಗುಪ್ತವರದಿಗಳು ತಿಳಿಯಪಡಿಸಿದವು. ಸಶಸ್ತ್ರ ಹೋರಾಟವನ್ನು ಹಿಂತೆಗೆದುಕೊಳ್ಳುವ ಷರತ್ತಿನ ಮೇಲೆ ನೆಲ್ಸನ್ ಮಂಡೇಲಾ ಅವರನ್ನು ಸೆರೆ ವಾಸದಿಂದ ಮುಕ್ತಗೊಳಿಸಲು ಅಧ್ಯಕ್ಷ ಪಿಕ್ ಡಬ್ಲು ಬೋಥೋ ಒಪ್ಪಿದ್ದರು. ಆದರೆ ಈ ಕೊಡಕೊಳ್ಳುವಿಕೆಯ ಒಪ್ಪಂದದ ಮುಂದಿನ ಪರಿಣಾಮಗಳ ಬಗೆಗೆ ಸರಕಾರ ಹಾಗೂ ಎಎನ್‌ಸಿ ಮಧ್ಯೆ ವಾಗ್ವಾದವಾಗಿ ಮತ್ತೆ ಹೆಚ್ಚಿನ ಬಿರುಕು ಉಂಟು ಮಾಡಿತು. ಸ್ವತಃ ಮಂಡೇಲಾ ಅವರೇ ಇದರ ಬಗೆಗೆ ಹೇಳಿಕೆ ನೀಡುತ್ತಾ, ಯಾವುದೇ ಒಬ್ಬ ವ್ಯಕ್ತಿ ‘ವ್ಯಕ್ತಿ ಸ್ವಾತಂತ್ರ್ಯ’ವನ್ನು ಪಡೆಯುವರೆಗೆ ಬಿಡುಗಡೆ ಹಾಗೂ ಸಂಘಟನೆ ಎಂಬ ಒಪ್ಪಂದದ ಮಾತುಗಳೇ ಇಲ್ಲ ಎಂದು ಖಂಡತುಂಡಾಗಿ ಅಭಿಪ್ರಾಯಸಿದರು. ಹೀಗಾಗಿ ತಾತ್ಕಾಲಿಕವಾಗಿ ಹುಟ್ಟಿಕೊಂಡಿದ್ದ ಗೊಂದಲಗಳಿಗೆ ಸ್ವತಹ ಮಂಡೇಲಾ ಅವರೇ ಹೇಳಿಕೆ ನೀಡುವುದರ ಮೂಲಕ ಪೂರ್ಣ ವಿರಾಮ ಹಾಕಿದರು.

ಅನಾರೋಗ್ಯದ ಕಾರಣ ೧೯೮೫ರಲ್ಲಿ ತಾತ್ಕಾಲಿಕ ಬಿಡುಗಡೆಗೆ ಸರಕಾರ ಒಪ್ಪಿತು. ಕೇಪ್ ಟೌನ್‌ನ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಪಡೆಯುತ್ತಿದ್ದ ನೆಲ್ಸನ್ ಮಂಡೇಲಾ ಅವರನ್ನು ರಾಷ್ಟ್ರೀಯ ಪಕ್ಷದ ಸರಕಾರದಲ್ಲಿದ್ದ ಮಂತ್ರಿ ಕೊಬಿ ಕೊಟ್ಸೇ ಮೊಟ್ಟ ಮೊದಲಿಗೆ ಭೇಟಿ ಮಾಡಿದರು. ಇಂಥ ಬೆಳವಣಿಗೆಯು ಮುಂದಿನ ಮಾತುಕತೆಗಳಿಗೆ ದಾರಿ ಮಾಡಿಕೊಟ್ಟಿತು. ಸುಮಾರು ನಾಲ್ಕು ವರ್ಷಗಳ ಕಾಲ ಗಂಭೀರವಾದ ಚರ್ಚೆಗಳು ಎಎನ್‌ಸಿ ಮತ್ತು ಪ್ರಿಟೋರಿಯಾ ಸರಕಾರದ ನಡುವೆ ನಡೆದವು. ಮಂಡೇಲಾ ಅವರನ್ನು ಸೆರೆವಾಸಕ್ಕೆ ದೂಡಿದ ದಿನದಿಂದ ಹಿಡಿದೂ ೧೯೮೫ರ ವರೆಗಿನ ಕಾಲಾವಧಿಯಲ್ಲಿ ಸ್ಥಳೀಯವಾಗಿ, ಆಫ್ರಿಕಾ ಖಂಡದಲ್ಲಿರುವ ರಾಷ್ಟ್ರಗಳಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಬಿಡುಗಡೆಗಾಗಿ ಅನೇಕ ತರಹದ ತೀವ್ರತರ ಒತ್ತಡಗಳು ಹಾಗೂ ಹೋರಾಟಗಳು ಜೋರಾಗಿ ನಡೆದವು. ೧೯೮೯ರ ಹೊತ್ತಿಗೆ ಮಾನವಹಕ್ಕುಗಳು ಹಾಗೂ ಸ್ವಾತಂತ್ರ್ಯದ ಬಗೆಗೆ ಸಂಬಂಧಿಸಿದ ವಿಷಯಗಳಲ್ಲಿ ಹೊಣೆಗಾರಿಕೆಯಿಂದ ವರ್ತಿಸುತ್ತಿದ್ದ ಅಂತಾರಾಷ್ಟ್ರೀಯ ಸಂಘಟನೆಗಳು ಹಾಗೂ ಬೇರೆ ಬೇರೆ ದೇಶಗಳ ಪ್ರಜ್ಞಾವಂತರು ಅಧ್ಯಕ್ಷ ಪಿ.ಡಬ್ಲ್ಯೂ.ಬೋಥಾ ಮೇಲೆ ತೀವ್ರವಾದ ಒತ್ತಡ ಹೇರಿದರು. ಈ ಹಿನ್ನೆಲೆಯಲ್ಲಿ ನ್ಯಾಷನಲ್ ಪಾರ್ಟಿ ಸರಕಾರ ವಿಧಿಯಿಲ್ಲದೆ ಮಂಡೇಲಾ ಬಿಡುಗಡೆ ಬಗೆಗಿನ ಮಾತುಕತೆಗಳಿಗೆ ಬಗ್ಗಲೇ ಬೇಕಾಯಿತು. ಆದರೆ ದುರದೃಷ್ಟವಶಾತ್ ಇದೇ ವೇಳೆಗೆ ಅಧ್ಯಕ್ಷ ಬೋಥೊ ಅವರು ಪಾರ್ಶ್ವವಾಯು ಹೊಡೆತದಿಂದ ಅಧಿಕಾರ ತ್ಯಜಿಸಬೇಕಾಯಿತು. ಹೀಗಾಗಿ ಆಫ್ರಿಕಾದ ಹೋರಾಟಗಾರರ ಬಗೆಗೆ ಮೃದು ಧೋರಣೆ ತಾಳಿದ್ದ ನ್ಯಾಷನಲ್ ಪಾರ್ಟಿ ಸರಕಾರ ತನ್ನ ನಿಲುವುಗಳಲ್ಲಿನ ಬದಲಾವಣೆಗೆ ಹಿಂದೇಟು ಹಾಕಿತು. ಆದ್ದರಿಂದ ಬಿಡುಗಡೆಯ ನಿರ್ಧಾರ ಮತ್ತೆ ಒಂದು ವರ್ಷ ಕಾಲ ಮುಂದೊಡಿತು. ಆದರೆ ಬಿಡುಗಡೆಗೆ ಸಂಬಂಧಿಸಿದ ಹೋರಾಟಗಳು ವ್ಯಾಪಕಗೊಂಡು ಪರಿಸ್ಥಿತಿ ತುಂಬ ಬಿಗಡಾಯಿಸಿತು. ತೆರವಾದ ಸ್ಥಾನಕ್ಕೆ ಬಂದ ಎಫ್.ಡಬ್ಲ್ಯೂ.ಡಿ.ಕ್ಲರ್ಕ್ (Frederik willem de Klerlc) ಅವರು ೧೯೯೦ರಲ್ಲಿ ನೆಲ್ಸನ್ ಮಂಡೇಲಾ ಅವರನ್ನು ಬಂಧಮುಕ್ತಗೊಳಿಸುವುದಾಗಿ ಘೋಷಿಸಿದರು. ಕಾರಣ ಸರಕಾರಕ್ಕೆ ಇದು ಅನಿವಾರ್ಯವಾಗಿತ್ತು.

ಅಧ್ಯಕ್ಷ ಕ್ಲರ್ಕ್ ಅವರು ೨ನೇ ಫೆಬ್ರವರಿ ೧೯೯೦ರಲ್ಲಿ ಎಎನ್‌ಸಿ ಹಾಗೂ ಉಳಿದ ಎಲ್ಲ ಸಂಘಟನೆಗಳ ಮೇಲೆ ಹೇರಿದ್ದ ದಿಗ್ಬಂಧನವನ್ನು ತೆರವುಗೊಳಿಸಿದರು. ಅಲ್ಲದೇ ೧೯೯೦ನೆಯ ಫೆಬ್ರವರಿ ೧೧ರಂದು ಕಾರಾಗ್ರಹ ವಾಸದಿಂದ ನೆಲ್ಸನ್ ಮಂಡೇಲಾ ಅವರಿಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವ ಅವಕಾಶ ನೀಡಲಾಯಿತು. ಈ ಸಂದರ್ಭದಲ್ಲಿ ಅವರು ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡುತ್ತಾ ನಮ್ಮ ಸಶಸ್ತ್ರ ಹೋರಾಟ ಬಿಳಿಯ ಸರಕಾರ ಮಾಡುತ್ತಿರುವ ವರ್ಣಭೇದ ತಾರತಮ್ಯಗೋಸ್ಕರ ನಿಲುವಿಗೆ ವಿರುದ್ಧವಾಗಿ ಹೊರತು ದೇಶದಲ್ಲಿ ಅಶಾಂತಿ ಹಾಗೂ ಭಯವನ್ನು ಹುಟ್ಟಿಸುವುದಲ್ಲವೆಂದು ಮತ್ತೆ ಪ್ರತಿಪಾದಿಸಿದರು. ಇಂಥ ಆಯ್ಕೆಯ ಹೊರತು ನಮಗೆ ಬೇರೆ ಯಾವ ದಾರಿಗಳಿಲ್ಲ. ಇದನ್ನು ತಪ್ಪಿಸಲು(ಹಿಂಸಾತ್ಮಕ ಹೋರಾಟ) ಬಹುಮತದಿಂದ ಆಯ್ಕೆಗೊಂಡ ಸರಕಾರ ದೇಶದ ಆಡಳಿತವನ್ನು ನಿರ್ವಹಿಸಬೇಕಾಗಿರುವುದು ಅತ್ಯಾವಶ್ಯಕವೆಂದು ದಿಟವಾಗಿ ನುಡಿದರು. ಇದೇ ವೇಳೆಗೆ ಕಪ್ಪು ಜನಾಂಗ ಮಾಡುತ್ತಿದ್ದ ಹೋರಾಟ ಕುರಿತು ಶಾಂತಿಯಿಂದ ಇರುವಂತೆ ಮನವಿ ಮಾಡಿಕೊಂಡರು. ಅಲ್ಲದೇ ಮುಂದಿನ ದಿನಗಳಲ್ಲಿ ನಡೆಯಬಹುದಾದ ಚುನಾವಣೆಗಳಲ್ಲಿ ಎಲ್ಲ ಜನರಿಗೂ ಯಾವ ಭೇದವಿಲ್ಲದೇ ಮತದಾನದ ಪರಮಾಧಿಕಾರ ನೀಡಬೇಕೆಂದು ಒತ್ತಾಯ ಪೂರ್ವಕ ಆಗ್ರಹ ಮಾಡಿದರು.

ವೈಯಕ್ತಿಯ ಜೀವನ

ಬದಲಾಯಿಸಿ

ಕೊನೆಯ ದಿನಗಳು

ಬದಲಾಯಿಸಿ

ಪ್ರಶಸ್ತಿಗಳು

ಬದಲಾಯಿಸಿ
 
ನೆಲ್ಸನ್ ಮಂಡೇಲಾರ ಒಂದು ಪ್ರಶಸ್ತಿ ಪತ್ರ.

ಮಂಡೇಲಾರು ತಮ್ಮ ಜೀವನದಲ್ಲಿ ಪಡೆದ ಪ್ರಶಸ್ತಿಗಳು

 1. -೧೯೯೧ರಲ್ಲಿ ಭಾರತ ರತ್ನ ಪ್ರಶಸ್ತಿ
 2. -೧೯೯೩ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ
 3. -೨೦೦೧ರಲ್ಲಿ ಅಂತರ ರಾಷ್ಟ್ರೀಯ ಗಾಂಧಿ ಶಾಂತಿ ಪುರಸ್ಕಾರ

ನೆಲ್ಸನ್ ಮಂಡೇಲಾ ನೆಲ್ಸನ್ ಮಂಡೇಲಾ ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾದ ೧೧ನೇ ರಾಷ್ಟ್ರಪತಿ ಅಧಿಕಾರದ ಅವಧಿ ಏಪ್ರಿಲ್ ೨೭, ೧೯೯೪ – ೧೯೯೯ ಉಪ ರಾಷ್ಟ್ರಪತಿ ಫ್ರೆಡೆರಿಕ್ ವಿಲ್ಲೆಮ್ ಡೆ ಕ್ಲೆರ್ಕ್ ಥಾಬೊ ಮ್‍ಬೇಕಿ ಪೂರ್ವಾಧಿಕಾರಿ ಫ್ರೆಡೆರಿಕ್ ವಿಲ್ಲೆಮ್ ಡೆ ಕ್ಲೆರ್ಕ್ (State President of South Africa) ಉತ್ತರಾಧಿಕಾರಿ ಥಾಬೊ ಮ್‍ಬೇಕಿ ಜನನ ಜುಲೈ ೧೮, ೧೯೧೮ ಕೂನು, ಮ್‍ಥಾಥ, ಟ್ರಾನ್ಸ್ಕೀ ರಾಜಕೀಯ ಪಕ್ಷ ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್

ಯುವಕ ನೆಲ್ಸನ್ ಮಂಡೇಲಾ ನೆಲ್ಸನ್ ಮಂಡೇಲಾ ಅವರು ಜುಲೈ ೧೮, ೧೯೧೮ ರಂದು ದಕ್ಷಿಣ ಆಫ್ರಿಕಾದ ಟ್ರಾನ್‍ಸ್ಕೈ ಪಟ್ಟಣದಲ್ಲಿ ಜನಿಸಿದರು. ಅವರ ತಂದೆ ಟೆಂಬೂ ಬುಡಕಟ್ಟಿನ ನಾಯಕರಾಗಿದ್ದರು. ಮಂಡೇಲಾ ಅವರು ವಿಟ್ವಾಟರ್ಸ್ರಾಂಡ್ ವಿಶ್ವವಿದ್ಯಾನಿಲಯದಲ್ಲಿ ೧೯೪೨ರಲ್ಲಿ ಕಾನೂನು ಪದವಿಯನ್ನು ಪಡೆದರು. ೧೯೪೪ರಲ್ಲಿ ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್ ಸೇರಿ 'ನ್ಯಾಷನಲ್ ಪಾರ್ಟಿ' ಸರ್ಕಾರದ ವರ್ಣಬೇಧ ನೀತಿಗಳ ವಿರುದ್ಧ ಹೋರಾಡಿದರು. ಸರ್ಕಾರವನ್ನು ಟೀಕಿಸಿದ ಅಪರಾಧಕ್ಕೆ ಅವರನ್ನು ೧೯೫೬ರಿಂದ ೧೯೬೧ರವರೆಗೆ ಸರ್ಕಾರದ ವಿರುದ್ಧ ಕಾನೂನು ಸಮರ ನಡೆಸಿ, ೧೯೬೧ರಲ್ಲಿ ಜಯಗಳಿಸಿದರು.

ಮೊದಲಿಗೆ 'ಅಹಿಂಸಾ ನೀತಿ'ಯನ್ನು ಆಚರಿಸಿದರೂ ನಂತರ ಗೆರಿಲ್ಲಾ ತಂತ್ರಗಳನ್ನು ಅನುಸರಿಸಿ ವಿಶ್ವಾದ್ಯಂತ ಟೀಕೆಗೊಳಗಾದರು. ಆದರೆ ಶೀಘ್ರವಾಗಿ ಜನಪ್ರಿಯರಾದ ಮಂಡೇಲಾ ಅವರು ಜನಾಂಗೀಯ ದ್ವೇಷ'ಕ್ಕೆ ಹೆಸರಾದ ಸರ್ಕಾರದ ವಿರುದ್ದ ಪ್ರಬಲ ಎದುರಾಳಿಯಾದರು. ೧೯೯೦ರವರೆಗಿನ ಅವರ ೨೭ ವರ್ಷದ ಜೀವಾವಧಿ ಸಜೆಯು ಪ್ರಪಂಚದಾದ್ಯಂತ ಜನಜಾಗೃತಿಯನ್ನುಂಟುಮಾಡಿ, ಆಫ್ರಿಕಾದ ಶಾಂತ ಪ್ರಜಾಪ್ರಭುತ್ವಕ್ಕೆ ಕಾರಣವಾಗಿದೆ.

ಪರಿವಿಡಿ [ಅಡಗಿಸು] ೧ ಮಂಡೇಲಾರ ಜೀವನ ೧.೧ ಬಾಲ್ಯ ಜೀವನ ೧.೨ ವೈವಾಹಿಕ ಜೀವನ ೧.೩ ಹೋರಾಟದ ಜೀವನ ೧.೪ ವೈಯಕ್ತಿಯ ಜೀವನ ೧.೫ ಕೊನೆಯ ದಿನಗಳು ೨ ಪ್ರಶಸ್ತಿಗಳು ೩ ಮಂಡೇಲಾರ ನುಡಿಗಳು ೪ ಮಂಡೇಲಾರ ಬಗ್ಗೆ ಮಾಹಿತಿ ೫ ಲಾಂಗ್ ವಾಕ್ ಟು ಫ್ರೀಡಮ್ ೬ ಮಂಡೇಲಾರ ನಿಧನಕ್ಕೆ ಗಣ್ಯರ ಕಂಬನಿ ೭ ನೆಲ್ಸನ್ ಮಂಡೇಲಾರ ಚಿತ್ರಗಳು ಮಂಡೇಲಾರ ಜೀವನ[ಬದಲಾಯಿಸಿ] ಬಾಲ್ಯ ಜೀವನ[ಬದಲಾಯಿಸಿ] ವೈವಾಹಿಕ ಜೀವನ[ಬದಲಾಯಿಸಿ] ಮಂಡೇಲಾ ಅವರು ಮೂರು ಬಾರಿ ಮದುವೆಯಾಗಿದ್ದಾರೆ. ಅವರಿಗೆ ಒಟ್ಟು ಆರು ಜನ ಮಕ್ಕಳು. ಇಪ್ಪತ್ತು ವೊಮ್ಮಕ್ಕಳು ಹಾಗೂ ಹಲವಾರು ಮರಿಮಕ್ಕಳನ್ನು ಹೊಂದಿದ ತುಂಬು ಸಂಸಾರ. ಇವೆಲಾಯಿನ್ ನಟೊಕೊ ಮಸೇ ನೆಲ್ಸನ್‌ರ ವೊದಲ ಹೆಂಡತಿ ದಕ್ಷಿಣ ಆಫ್ರಿಕಾದ ಟ್ರಾನ್ಸ್‌ಕೆಯವರು. ಇವಳು ವೊಟ್ಟ ವೊದಲಿಗೆ ಜೊಹಾನ್ಸ್ ಬರ್ಗ್‌ನಲ್ಲಿ ಮಂಡೇಲಾ ಅವರನ್ನು ಭೇಟಿ ಆಗಿದ್ದಳು. ಪರಿಚಯವು ಪ್ರಣಯದೊಂದಿಗೆ ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ಅವರಿಬ್ಬರಿಗೂ ಮದುವೆಯಾಯಿತು. ನೆಲ್ಸನ್ ಮಂಡೇಲಾರು ಸತತವಾಗಿ ಹಲವಾರು ವರ್ಷಗಳ ಕಾಲ ಸ್ವಾತಂತ್ರ್ಯ ಹೋರಾಟದಲ್ಲಿಯೇ ತಮ್ಮನ್ನು ತೊಡಗಿಸಿ ಕೊಂಡಿದ್ದರಿಂದ ಕುಟುಂಬವನ್ನು ಸರಿಯಾಗಿ ನಿರ್ವಹಿಸಲಾಗದೆ ಸುಮಾರು ೧೩ ವರ್ಷಗಳ ದಾಂಪತ್ಯದ ೧೯೫೭ರಲ್ಲಿ ಸಂಬಂಧ ಮುರಿದು ಬಿತ್ತು. ಈ ಕಾರಣದಿಂದ ಅವರಿಬ್ಬರ ಮಧ್ಯೆ ಯಾವ ಸಂಬಂಧಗಳು ಉಳಿದು ಕೊಳ್ಳಲಿಲ್ಲ. ರಾಜಕೀಯ ತಾಟಸ್ಥ್ಯವನ್ನು ತಾಳುವಂತೆ ಅವರ ಹೆಂಡತಿಯು ಮಂಡೇಲಾ ಅವರಿಗೆ ಹಲವಾರು ಬಾರಿ ಕೇಳಿದರೂ ಅವರು ಹೆಂಡತಿಯನ್ನೇ ಬಿಟ್ಟರೇ ಹೊರತು ತಾವು ನಿಶ್ಚಿಯಿಸಿಕೊಂಡಿದ್ದ ಹೋರಾಟವನ್ನು ಬಿಡಲಿಲ್ಲ. ಇದು ಒಬ್ಬ ನಿಜವಾದ ಹೋರಾಟಗಾರನ ಖಾಸಗಿಯ ಬದುಕು ದುರಂತದಲ್ಲಿ ಪರಿಸಮಾಪ್ತಿಗೊಳ್ಳುವ ನೋವಿನ ಸಂಗತಿಯಾಗಿ ನಿಲ್ಲುತ್ತದೆ. ವೊದಲ ಹೆಂಡತಿ ಇವೆಲಾಯಿನ್ ನಟೊಕೊ ಮಸೇ ಅವರು ೨೦೦೪ರಲ್ಲಿ ಅನಾರೋಗ್ಯದಿಂದ ತೀರಿಕೊಂಡರು. ಇವರಿಗೆ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದರು. ಇವರೆಲ್ಲರೂ ಸಹ ತೀರಿ ಹೋಗಿದ್ದಾರೆ.

ಕಪ್ಪು ವರ್ಣೀಯ ಸಾಮಾಜಿಕ ಕಾರ್ಯಕರ್ತೆಯಾದ ವಿನ್ನಿ ಮಡಿಕಿಜೇಲಾ ಅವರು ನೆಲ್ಸನ್ ಮಂಡೇಲಾ ಅವರನ್ನು ೧೯೫೭ರಲ್ಲಿ ಮದುವೆಯಾದರು. ಇವರು ಈ ವೊದಲು ಜೋಹಾನ್ಸ್‌ಬರ್ಗ್ ನಗರದ ವೊಟ್ಟಮೊದಲ ಮಹಿಳಾ ಹೋರಾಟಗಾರ್ತಿಯಾಗಿ ನಿರೂಪಿತಗೊಂಡವರು. ಇಬ್ಬರು ಒಂದೇ ಮನೋಭಾವನೆ ಹಾಗೂ ಗುರಿಯನ್ನಿಟ್ಟುಕೊಂಡಿದ್ದರಿಂದ ಈ ವೊದಲಿನಂತೆ ಹೋರಾಟವು ಅವರ ದಾಂಪತ್ಯಕ್ಕೆ ಅಡ್ಡಿಯಾಗಲಿಲ್ಲ. ಇವರಿಗೂ ಸಹ ಎರಡು ಮಕ್ಕಳಿದ್ದೂ ಇವರನ್ನೆಲ್ಲಾ ವಿನ್ನಿ ಮಂಡೇಲಾ ಅವರೇ ಸಾಕಿ ಸಲುಹಿದರು. ಕಾರಣ ಮಕ್ಕಳಿಬ್ಬರ ಬಾಲ್ಯ ಮತ್ತು ಯೌವನದ ಅವಧಿಯಲ್ಲಿ ನೆಲ್ಸನ್ ಮಂಡೇಲಾ ಅವರು ಇಡೀ ತಮ್ಮ ಬದುಕನ್ನು ಜೈಲಿನಲ್ಲಿ ಕಳೆಯುತ್ತಿದ್ದರು. ಇಂಥ ಕಷ್ಟದ ಏಕಾಂಗಿತನವು ಅವರಿಗೆ ಬಹಳ ದೊಡ್ಡ ಅಡೆತಡೆಯಾಗಲಿಲ್ಲ. ಟ್ರಾನ್ಸ್‌ಕೆ ಪ್ರಾಂತದವರಾದ ವಿನ್ನಿ ಮಂಡೇಲಾರ ತಂದೆ ಅಲ್ಲಿನ ಸ್ಥಳೀಯ ಸರಕಾರದಲ್ಲಿ ಕೃಷಿ ಮಂತ್ರಿಯಾಗಿದ್ದರು. ಹೋರಾಟದ ಕಠಿಣ ದಿನಗಳಲ್ಲಿ ಒಂದಾಗಿದ್ದ ವಿನ್ನಿ ಮಂಡೇಲಾ ಹಾಗೂ ನೆಲ್ಸನ್ ಮಂಡೇಲಾರ ಮಧ್ಯೆ ಉಂಟಾಗಿದ್ದ ಮನಸ್ತಾಪಗಳನ್ನು ಸರಿಪಡಿಸಿಕೊಳ್ಳಲಾರದೆ ಅವರು ಕೆಲವು ಕಾರಣಗಳಿಂದ ೧೯೯೨ರಲ್ಲಿ ದಾಂಪತ್ಯ ಬಂಧನದಿಂದ ಬಿಡುಗಡೆಗೊಳ್ಳಲು ನಿರ್ಧರಿಸಿದ್ದು , ೧೯೯೬ರಲ್ಲಿ ವಿವಾಹ ವಿಚ್ಛೇದನ ಪಡೆದರು. ಇವರಿಬ್ಬರಿಗೂ ಹುಟ್ಟಿದ ಝೆಂನನಿಯನ್ನು ಸ್ವಾಜಿಲ್ಯಾಂಡ್‌ನ ರಾಜಕುಮಾರ ಥುಮಾಂಭುಜಿ ದ್ಲಮಿನಿಗೆ ೧೯೭೩ರಲ್ಲಿಯೇ ಮದುವೆ ಮಾಡಿಕೊಡಲಾಗಿತ್ತು. ಇವಳಿಗೂ ಸಹ ತಂದೆಯ ಯಾವ ನೆನಪುಗಳು ಇರಲಿಲ್ಲ. ಹಾಗೂ ಪ್ರಿಟೋರಿಯಾ ಸರಕಾರವು ಸಹ ಈ ಹಿಂದೆ ತಮ್ಮ ತಂದೆಯ್ನನು ಭೇಟಿ ಮಾಡಲು ಯಾವ ಅವಕಾಶ ಕೊಟ್ಟಿರಲಿಲ್ಲ. ದ್ಲಮಿನಿ ದಂಪತಿಗಳು ಪಿಕ್ ಬೋಥೋ ಸರಕಾರದ ಕಿರುಕುಳಕ್ಕೆ ಹೆದರಿ ಅಮೆರಿಕಾ ದೇಶದಲ್ಲಿರುವ ಬೋಸ್ಟನ್ ಪಟ್ಟಣಕ್ಕೆ ಪಲಾಯನಗೈಯುವಂತೆ ಮಾಡಿತು. ಇವರಿಬ್ಬರಿಗೆ ಹುಟ್ಟಿದ ಪ್ರಿನ್ಸ್ ಸೆಡ್ಜಾದ್ಲಮಿನಿಯು ಸಹ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಹಿತರಕ್ಷಣಾ ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಇವರ ಇನ್ನೊಬ್ಬ ಮಗಳಾದ ಜಿಂದಜಿಯು, ಪ್ರಿಟೋರಿಯಾ ಸರಕಾರವು ಮಂಡೇಲಾ ಅವರನ್ನು ಬಿಡುಗಡೆ ಮಾಡುವ ಷರತ್ತು ಬದ್ಧ ವಿಷಯಗಳಿಗೆ ಸಂಬಂಧಿಸಿದಂತೆ ೧೯೮೫ರಲ್ಲಿ ಹೇಳಿಕೆ ನೀಡುವುದರ ಮೂಲಕ ಜಗತ್ಪ್ರಸಿದ್ದಿ ಆದವಳು. ಈವರೆಗೂ ಜೀವಂತವಾಗಿರುವ ಇವರು ತಮ್ಮ ಬದುಕು ನಿರ್ವಹಣೆಗಾಗಿ ವ್ಯಾಪಾರದಲ್ಲಿ ತೊಡಗಿದ್ದಾರೆ.

೧೯೯೬ರಲ್ಲಿ ವಿನ್ನಿಮಂಡೇಲಾ ಅವರಿಂದ ವಿಚ್ಛೇದನ ಪಡೆದಿದ್ದ ನೆಲ್ಸನ್ ಮಂಡೇಲಾ ಅವರು ತಮ್ಮ ೮೦ನೇ ವರ್ಷದಲ್ಲಿ ಗ್ರಾಕ್ ಮಾಕೆಲ್ ನೀ ಸಿಂಬಿನಿ(ಅವಳನ್ನು ಮಂಡೇಲಾ ಅವರು)ಯನ್ನು ವಿವಾಹವಾದರು. ಇವರು ಮೊಜಾಂಬಿಕ್ ದೇಶದ ಮಾಜಿ ಅಧ್ಯಕ್ಷರಾಗಿದ್ದ ಹಾಗೂ ವಿಮಾನ ಅಪಘಾತದಲ್ಲಿ ಮರಣ ಹೊಂದಿದ ಸಮೊರಾ ಮಾಕೆಲ್ ಅವರ ಪತ್ನಿ ಆಗಿದ್ದಳು. ೧೯೯೮ರಲ್ಲಿ ತಮ್ಮ ಇಳಿ ವಯಸ್ಸಿನಲ್ಲಿ ಇವರಿಬ್ಬರ ನಡುವೆ ಮದುವೆ ಜರುಗಿತು. ಆ ದಿನ ನೆಲ್ಸನ್ ಮಂಡೇಲಾರ ಹುಟ್ಟುಹಬ್ಬವೂ ಆಗಿತ್ತು. ಇಳಿ ವಯಸ್ಸಿನಲ್ಲಿ ಮದುವೆಯಾದ ಈ ಸಂಗತಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ರಸವತ್ತಾದ ಚರ್ಚೆಗೆ ಗ್ರಾಸವಾಯಿತು. ಜೋಹಾನ್ಸ್‌ಬರ್ಗ್ ಸಮೀಪದ ಕ್ವಿನುನಲ್ಲಿ ಇವರಿಬ್ಬರೂ ದಂಪತಿಗಳಾಗಿ ಈಗಲೂ ವಾಸವಾಗಿದ್ದಾರೆ.

ಹೋರಾಟದ ಜೀವನ[ಬದಲಾಯಿಸಿ] ನೈಲ್ಸನ್ ಮಂಡೇಲಾ ಜೈಲುವಾಸದ ೨೭ ವರ್ಷಗಳ ಶಿಕ್ಷೆಯಲ್ಲಿ ೧೮ ವರ್ಷಗಳ ಕಾಲ ರಾಬೆನ್ ಐಸ್‌ಲ್ಯಾಂಡ್‌ನ ಕಾರಾಗೃಹದಲ್ಲಿ ಕಳೆದರು. ಅವರು ಅನುಭವಿಸಿದ ಶಿಕ್ಷೆ ಹಾಗೂ ಆ ಸಂದರ್ಭದಲ್ಲಿ ಅವರು ತಳೆದ ಅಭಿಪ್ರಾಯಗಳಿಂದ ಇಡೀ ದಕ್ಷಿಣ ಆಫ್ರಿಕಾದ ಕಪ್ಪು ಜನಾಂಗದ ಅದ್ವಿತೀಯ ಮೇರು ನಾಯಕನಾಗಿ ಪ್ರಸಿದ್ದಿಗೆ ಬಂದರು. ಪ್ರಿಟೋರಿಯಾ ಜೈಲಿನಲ್ಲಿ ಜೈಲಿನ ಕ್ರೂರ ಅಧಿಕಾರಿಗಳು ಕೊಡುವ ಅತೀ ಕಷ್ಟದ ಕೆಲಸವನ್ನು ಅವರು ಮಾಡಬೇಕಿತ್ತು. ಕಠೋರವಾದ ಶಿಕ್ಷೆಗೆ ಒಳಪಡಿಸುತ್ತಿದ್ದುದಲ್ಲದೇ ಜೈಲಿನಲ್ಲಿ ಜನಾಂಗ ಹಾಗೂ ವರ್ಣದ ನೀತಿಗಳ ಮೇಲೆ ತಾರತಮ್ಯವನ್ನು ಅಧಿಕಾರಿಗಳು ಅವ್ಯಾಹತವಾಗಿ ಮಾಡುತ್ತಿದ್ದರು. ಕಪ್ಪು ಜನಾಂಗದವರಿಗೆ ಮಾತ್ರ ಅತೀ ಕಡಿಮೆ ಆಹಾರವನ್ನು ಕೊಡುತ್ತಿದ್ದರು. ಅತೀ ಕಷ್ಟದ ಹಾಗೂ ಹೆಚ್ಚಿನ ಕೆಲಸವನ್ನು ಕಪ್ಪು ಕೈದಿಗಳಿಂದ ಮಾತ್ರ ತೆಗೆದುಕೊಳ್ಳುತ್ತಿದ್ದರು. ಸಾಮಾನ್ಯವಾಗಿ ರಾಜಕೀಯ ಕೈದಿಗಳಿಗೆ ಮತ್ತು ಇತರ ಕೈದಿಗಳಿಗೆ ಪ್ರತ್ಯೇಕ ಸೆಲ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ನೆಲ್ಸನ್ ಮಂಡೇಲಾ ಅವರಿಗೆ "ಡಿ" ದರ್ಜೆಯ ಕೈದಿಗಳಿಗೆ ಕೊಡುವ ಸವಲತ್ತನ್ನು ಮಾತ್ರ ನೀಡಲಾಗಿತ್ತು. ಸರ್ಕಾರ ಬಯಸಿದ್ದಲ್ಲಿ ಒಬ್ಬರು ಮಾತ್ರ ಅವರನ್ನೂ ಭೇಟಿ ಮಾಡಬಹುದಾಗಿತ್ತು. ಹಾಗೂ ಆರು ತಿಂಗಳಿಗೊಮ್ಮೆ ಮಾತ್ರ ಅವರಿಗೆ ಬಂದಿರುವ ಪತ್ರವನ್ನು ಒಟ್ಟಾಗಿ ನೀಡಲಾಗುತ್ತಿತ್ತು. ಅಂಥಹದರಲ್ಲಿಯೂ ಸಹ ಅವರಿಗೆ ಬಂದಿರುವ ಪತ್ರಗಳೆಲ್ಲವುಗಳು ಎಲ್ಲ ಹಂತದಲ್ಲಿಯೂ ವಿಚಾರಣೆಗೊಳಗಾಗುತ್ತಿದ್ದವು.

ರಾಬಿನ್ ಐಸ್‌ಲ್ಯಾಂಡ್ ಸೆರೆಮನೆಯಿಂದ ಪಾಲ್ಸ್ ಮೂರ್ ಕಾರಾವಾಸಕ್ಕೆ ನೆಲ್ಸನ್ ಮಂಡೇಲಾ ಅವರನ್ನು ಒಳಗೊಂಡಂತೆ ಎಲ್ಲ ಪ್ರಮುಖ ನಾಯಕರನ್ನು ಸ್ಥಳಾಂತರಿಸಲಾಯಿತು. ಕಾರಣ ವರ್ಣಭೇದ ನೀತಿ ವಿರುದ್ಧದ ಹೋರಾಟದ ಸಂಬಂಧವಾಗಿ ಬಂಧಿಸಲ್ಪಟ್ಟು ಲಕ್ಷಾನು ಸಂಖ್ಯೆಯಲ್ಲಿ ಸಾಗರೋಪಾದಿಯಾಗಿ ಬರುತ್ತಿದ್ದ ಯುವ ಆಫ್ರಿಕಾ ಶಕ್ತಿಯ ಸಂಪರ್ಕದಿಂದ ಜೈಲಿನಲ್ಲಿರುವ ಕ್ರಾಂತಿಕಾರಿಗಳನ್ನು ಬೇರ್ಪಡಿಸುವ ಉದ್ದೇಶವನ್ನು ಸರಕಾರ ಹೊಂದಿತ್ತು. ಈ ಜೈಲಿನ ಕೈದಿಗಳ ಪ್ರಭಾವದಿಂದ ಪ್ರೇರಿತವಾಗಿ ಆಫ್ರಿಕಾ ದೇಶದ ಎಲ್ಲ ಜನಸಾಮಾನ್ಯರು ಹೋರಾಟವನ್ನು ಜೀವಂತವಾಗಿ ಸದಾ ಕಾಪಾಡಿಕೊಂಡು ಬಂದಿರುವ ಸಾಕ್ಷಿಗಳಿದ್ದವು. ಈ ಕಾರಣಕ್ಕಾಗಿ ರಾಬಿನ್ ಐಸ್‌ಲ್ಯಾಂಡ್ ಕಾರಾವಾಸವನ್ನು ‘ಮಂಡೇಲಾ ಯುನಿವರ್‌ಸಿಟಿ’ ಎಂದು ಕರೆಯಲಾಗುತಿತ್ತು. ಅಂದರೆ ರಾಬಿನ್ ಐಸ್‌ಲ್ಯಾಂಡ್ ಕಾರಗೃಹವು ಎಷ್ಟೊಂದು ಪರಿಣಾಮವನ್ನು ಅಲ್ಲಿಯ ಸ್ವಾತಂತ್ರ್ಯ ಹೋರಾಟದ ಮೇಲೆ ಮಾಡಿದ್ದಿರಬಹುದೆಂದು ಊಹಿಸಬಹುದಾಗಿದೆ. ಇಂಥ ಆರೋಪದಿಂದ ಮುಕ್ತಗೊಳ್ಳಲು ಸರಕಾರವು ಬೇರೆ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿತು. ಮಂಡೇಲಾರನ್ನು ಒಳಗೊಂಡು ಇನ್ನಿತರ ಪ್ರಮುಖ ಕೈದಿಗಳ ಸ್ಥಳಾಂತರವು ನ್ಯಾಷನಲ್ ಪಾರ್ಟಿಯ ಸರಕಾರ ಹಾಗೂ ಕಪ್ಪು ಜನಾಂಗದ ಮುಖಂಡರ ನಡುವೆ ರಹಸ್ಯವಾಗಿ ಮಾತುಕತೆ ನಡೆಯುವ ಸಲುವಾಗಿ ಮಾಡಲಾಗಿತ್ತು ವಿನಹ ಮತ್ತಾವ ಉದ್ದೇಶವನ್ನು ಸರ್ಕಾರ ಹೊಂದಿರಲಿಲ್ಲ ಎಂದು ಮಂತ್ರಿಯೊಬ್ಬರು ಅಭಿಪ್ರಾಯಿಸುವ ಮೂಲಕ ತೇಪೆ ಹಚ್ಚುವ ಕೆಲಸ ಮಾಡಲಾಯಿತು.

ಇಂಥ ಅನೇಕ ಕಷ್ಟಕಾರ್ಣ್ಯಗಳ ಮಧ್ಯೆ ಅರ್ಧಕ್ಕೆ ನಿಂತು ಹೋಗಿದ್ದ ತಮ್ಮ ವಿದ್ಯಾಭ್ಯಾಸವನ್ನು ಜೈಲಿನಲ್ಲಿದ್ದ ಮುಂದುವರೆಸಿ ಲಂಡನ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಪೂರೈಸಿದರು. ಜೈಲಿನಲ್ಲಿದ್ದಾಗ ನೆಲ್ಸನ್ ಮಂಡೇಲಾ ಅವರಿಗೆ ತಪ್ಪಿಸಿಕೊಳ್ಳುವ ಅವಕಾಶವನ್ನು ಜೈಲು ಅಧಿಕಾರಿಗಳೇ ಸ್ವತಃ ಸೃಷ್ಟಿಸಿದ್ದರು. ಕಾರಣ ಅವರು ಉತ್ತೇಜನಗೊಂಡು ತಪ್ಪಿಸಿಕೊಳ್ಳುವ ಸಮಯದಲ್ಲಿ ಕುತಂತ್ರದಿಂದ ಶೂಟ್ ಮಾಡಿ ಸಾಯಿಸುವ ತಂತ್ರವನ್ನು ಪ್ರಿಟೋರಿಯ ಆಡಳಿತ ರೂಪಿಸಿತ್ತು ಎಂದು ಗುಪ್ತವರದಿಗಳು ತಿಳಿಯಪಡಿಸಿದವು. ಸಶಸ್ತ್ರ ಹೋರಾಟವನ್ನು ಹಿಂತೆಗೆದುಕೊಳ್ಳುವ ಷರತ್ತಿನ ಮೇಲೆ ನೆಲ್ಸನ್ ಮಂಡೇಲಾ ಅವರನ್ನು ಸೆರೆ ವಾಸದಿಂದ ಮುಕ್ತಗೊಳಿಸಲು ಅಧ್ಯಕ್ಷ ಪಿಕ್ ಡಬ್ಲು ಬೋಥೋ ಒಪ್ಪಿದ್ದರು. ಆದರೆ ಈ ಕೊಡಕೊಳ್ಳುವಿಕೆಯ ಒಪ್ಪಂದದ ಮುಂದಿನ ಪರಿಣಾಮಗಳ ಬಗೆಗೆ ಸರಕಾರ ಹಾಗೂ ಎಎನ್‌ಸಿ ಮಧ್ಯೆ ವಾಗ್ವಾದವಾಗಿ ಮತ್ತೆ ಹೆಚ್ಚಿನ ಬಿರುಕು ಉಂಟು ಮಾಡಿತು. ಸ್ವತಃ ಮಂಡೇಲಾ ಅವರೇ ಇದರ ಬಗೆಗೆ ಹೇಳಿಕೆ ನೀಡುತ್ತಾ, ಯಾವುದೇ ಒಬ್ಬ ವ್ಯಕ್ತಿ ‘ವ್ಯಕ್ತಿ ಸ್ವಾತಂತ್ರ್ಯ’ವನ್ನು ಪಡೆಯುವರೆಗೆ ಬಿಡುಗಡೆ ಹಾಗೂ ಸಂಘಟನೆ ಎಂಬ ಒಪ್ಪಂದದ ಮಾತುಗಳೇ ಇಲ್ಲ ಎಂದು ಖಂಡತುಂಡಾಗಿ ಅಭಿಪ್ರಾಯಸಿದರು. ಹೀಗಾಗಿ ತಾತ್ಕಾಲಿಕವಾಗಿ ಹುಟ್ಟಿಕೊಂಡಿದ್ದ ಗೊಂದಲಗಳಿಗೆ ಸ್ವತಹ ಮಂಡೇಲಾ ಅವರೇ ಹೇಳಿಕೆ ನೀಡುವುದರ ಮೂಲಕ ಪೂರ್ಣ ವಿರಾಮ ಹಾಕಿದರು.

ಅನಾರೋಗ್ಯದ ಕಾರಣ ೧೯೮೫ರಲ್ಲಿ ತಾತ್ಕಾಲಿಕ ಬಿಡುಗಡೆಗೆ ಸರಕಾರ ಒಪ್ಪಿತು. ಕೇಪ್ ಟೌನ್‌ನ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ಪಡೆಯುತ್ತಿದ್ದ ನೆಲ್ಸನ್ ಮಂಡೇಲಾ ಅವರನ್ನು ರಾಷ್ಟ್ರೀಯ ಪಕ್ಷದ ಸರಕಾರದಲ್ಲಿದ್ದ ಮಂತ್ರಿ ಕೊಬಿ ಕೊಟ್ಸೇ ಮೊಟ್ಟ ಮೊದಲಿಗೆ ಭೇಟಿ ಮಾಡಿದರು. ಇಂಥ ಬೆಳವಣಿಗೆಯು ಮುಂದಿನ ಮಾತುಕತೆಗಳಿಗೆ ದಾರಿ ಮಾಡಿಕೊಟ್ಟಿತು. ಸುಮಾರು ನಾಲ್ಕು ವರ್ಷಗಳ ಕಾಲ ಗಂಭೀರವಾದ ಚರ್ಚೆಗಳು ಎಎನ್‌ಸಿ ಮತ್ತು ಪ್ರಿಟೋರಿಯಾ ಸರಕಾರದ ನಡುವೆ ನಡೆದವು. ಮಂಡೇಲಾ ಅವರನ್ನು ಸೆರೆವಾಸಕ್ಕೆ ದೂಡಿದ ದಿನದಿಂದ ಹಿಡಿದೂ ೧೯೮೫ರ ವರೆಗಿನ ಕಾಲಾವಧಿಯಲ್ಲಿ ಸ್ಥಳೀಯವಾಗಿ, ಆಫ್ರಿಕಾ ಖಂಡದಲ್ಲಿರುವ ರಾಷ್ಟ್ರಗಳಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಬಿಡುಗಡೆಗಾಗಿ ಅನೇಕ ತರಹದ ತೀವ್ರತರ ಒತ್ತಡಗಳು ಹಾಗೂ ಹೋರಾಟಗಳು ಜೋರಾಗಿ ನಡೆದವು. ೧೯೮೯ರ ಹೊತ್ತಿಗೆ ಮಾನವಹಕ್ಕುಗಳು ಹಾಗೂ ಸ್ವಾತಂತ್ರ್ಯದ ಬಗೆಗೆ ಸಂಬಂಧಿಸಿದ ವಿಷಯಗಳಲ್ಲಿ ಹೊಣೆಗಾರಿಕೆಯಿಂದ ವರ್ತಿಸುತ್ತಿದ್ದ ಅಂತಾರಾಷ್ಟ್ರೀಯ ಸಂಘಟನೆಗಳು ಹಾಗೂ ಬೇರೆ ಬೇರೆ ದೇಶಗಳ ಪ್ರಜ್ಞಾವಂತರು ಅಧ್ಯಕ್ಷ ಪಿ.ಡಬ್ಲ್ಯೂ.ಬೋಥಾ ಮೇಲೆ ತೀವ್ರವಾದ ಒತ್ತಡ ಹೇರಿದರು. ಈ ಹಿನ್ನೆಲೆಯಲ್ಲಿ ನ್ಯಾಷನಲ್ ಪಾರ್ಟಿ ಸರಕಾರ ವಿಧಿಯಿಲ್ಲದೆ ಮಂಡೇಲಾ ಬಿಡುಗಡೆ ಬಗೆಗಿನ ಮಾತುಕತೆಗಳಿಗೆ ಬಗ್ಗಲೇ ಬೇಕಾಯಿತು. ಆದರೆ ದುರದೃಷ್ಟವಶಾತ್ ಇದೇ ವೇಳೆಗೆ ಅಧ್ಯಕ್ಷ ಬೋಥೊ ಅವರು ಪಾರ್ಶ್ವವಾಯು ಹೊಡೆತದಿಂದ ಅಧಿಕಾರ ತ್ಯಜಿಸಬೇಕಾಯಿತು. ಹೀಗಾಗಿ ಆಫ್ರಿಕಾದ ಹೋರಾಟಗಾರರ ಬಗೆಗೆ ಮೃದು ಧೋರಣೆ ತಾಳಿದ್ದ ನ್ಯಾಷನಲ್ ಪಾರ್ಟಿ ಸರಕಾರ ತನ್ನ ನಿಲುವುಗಳಲ್ಲಿನ ಬದಲಾವಣೆಗೆ ಹಿಂದೇಟು ಹಾಕಿತು. ಆದ್ದರಿಂದ ಬಿಡುಗಡೆಯ ನಿರ್ಧಾರ ಮತ್ತೆ ಒಂದು ವರ್ಷ ಕಾಲ ಮುಂದೊಡಿತು. ಆದರೆ ಬಿಡುಗಡೆಗೆ ಸಂಬಂಧಿಸಿದ ಹೋರಾಟಗಳು ವ್ಯಾಪಕಗೊಂಡು ಪರಿಸ್ಥಿತಿ ತುಂಬ ಬಿಗಡಾಯಿಸಿತು. ತೆರವಾದ ಸ್ಥಾನಕ್ಕೆ ಬಂದ ಎಫ್.ಡಬ್ಲ್ಯೂ.ಡಿ.ಕ್ಲರ್ಕ್ (Frederik willem de Klerlc) ಅವರು ೧೯೯೦ರಲ್ಲಿ ನೆಲ್ಸನ್ ಮಂಡೇಲಾ ಅವರನ್ನು ಬಂಧಮುಕ್ತಗೊಳಿಸುವುದಾಗಿ ಘೋಷಿಸಿದರು. ಕಾರಣ ಸರಕಾರಕ್ಕೆ ಇದು ಅನಿವಾರ್ಯವಾಗಿತ್ತು.

ಅಧ್ಯಕ್ಷ ಕ್ಲರ್ಕ್ ಅವರು ೨ನೇ ಫೆಬ್ರವರಿ ೧೯೯೦ರಲ್ಲಿ ಎಎನ್‌ಸಿ ಹಾಗೂ ಉಳಿದ ಎಲ್ಲ ಸಂಘಟನೆಗಳ ಮೇಲೆ ಹೇರಿದ್ದ ದಿಗ್ಬಂಧನವನ್ನು ತೆರವುಗೊಳಿಸಿದರು. ಅಲ್ಲದೇ ೧೯೯೦ನೆಯ ಫೆಬ್ರವರಿ ೧೧ರಂದು ಕಾರಾಗ್ರಹ ವಾಸದಿಂದ ನೆಲ್ಸನ್ ಮಂಡೇಲಾ ಅವರಿಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವ ಅವಕಾಶ ನೀಡಲಾಯಿತು. ಈ ಸಂದರ್ಭದಲ್ಲಿ ಅವರು ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡುತ್ತಾ ನಮ್ಮ ಸಶಸ್ತ್ರ ಹೋರಾಟ ಬಿಳಿಯ ಸರಕಾರ ಮಾಡುತ್ತಿರುವ ವರ್ಣಭೇದ ತಾರತಮ್ಯಗೋಸ್ಕರ ನಿಲುವಿಗೆ ವಿರುದ್ಧವಾಗಿ ಹೊರತು ದೇಶದಲ್ಲಿ ಅಶಾಂತಿ ಹಾಗೂ ಭಯವನ್ನು ಹುಟ್ಟಿಸುವುದಲ್ಲವೆಂದು ಮತ್ತೆ ಪ್ರತಿಪಾದಿಸಿದರು. ಇಂಥ ಆಯ್ಕೆಯ ಹೊರತು ನಮಗೆ ಬೇರೆ ಯಾವ ದಾರಿಗಳಿಲ್ಲ. ಇದನ್ನು ತಪ್ಪಿಸಲು(ಹಿಂಸಾತ್ಮಕ ಹೋರಾಟ) ಬಹುಮತದಿಂದ ಆಯ್ಕೆಗೊಂಡ ಸರಕಾರ ದೇಶದ ಆಡಳಿತವನ್ನು ನಿರ್ವಹಿಸಬೇಕಾಗಿರುವುದು ಅತ್ಯಾವಶ್ಯಕವೆಂದು ದಿಟವಾಗಿ ನುಡಿದರು. ಇದೇ ವೇಳೆಗೆ ಕಪ್ಪು ಜನಾಂಗ ಮಾಡುತ್ತಿದ್ದ ಹೋರಾಟ ಕುರಿತು ಶಾಂತಿಯಿಂದ ಇರುವಂತೆ ಮನವಿ ಮಾಡಿಕೊಂಡರು. ಅಲ್ಲದೇ ಮುಂದಿನ ದಿನಗಳಲ್ಲಿ ನಡೆಯಬಹುದಾದ ಚುನಾವಣೆಗಳಲ್ಲಿ ಎಲ್ಲ ಜನರಿಗೂ ಯಾವ ಭೇದವಿಲ್ಲದೇ ಮತದಾನದ ಪರಮಾಧಿಕಾರ ನೀಡಬೇಕೆಂದು ಒತ್ತಾಯ ಪೂರ್ವಕ ಆಗ್ರಹ ಮಾಡಿದರು.

ವೈಯಕ್ತಿಯ ಜೀವನ[ಬದಲಾಯಿಸಿ] ಕೊನೆಯ ದಿನಗಳು[ಬದಲಾಯಿಸಿ] ಪ್ರಶಸ್ತಿಗಳು[ಬದಲಾಯಿಸಿ]

ನೆಲ್ಸನ್ ಮಂಡೇಲಾರ ಒಂದು ಪ್ರಶಸ್ತಿ ಪತ್ರ. ಮಂಡೇಲಾರು ತಮ್ಮ ಜೀವನದಲ್ಲಿ ಪಡೆದ ಪ್ರಶಸ್ತಿಗಳು

-೧೯೯೧ರಲ್ಲಿ ಭಾರತ ರತ್ನ ಪ್ರಶಸ್ತಿ -೧೯೯೩ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ -೨೦೦೧ರಲ್ಲಿ ಅಂತರ ರಾಷ್ಟ್ರೀಯ ಗಾಂಧಿ ಶಾಂತಿ ಪುರಸ್ಕಾರ ಮಂಡೇಲಾರ ನುಡಿಗಳು[ಬದಲಾಯಿಸಿ] ಕಷ್ಟಗಳು ಕೆಲವರನ್ನು ನುಚ್ಚುನೂರಾಗಿಸುತ್ತವೆ, ಆದರೆ ಕೆಲವೇ ಕೆಲವರನ್ನು ಗಟ್ಟಿಗೊಳಿಸಿ ಬೆಳಸುತ್ತವೆ-ರೊಬ್ಬನ್ ಐಲ್ಯಾಂಡ್‌ನಿಂದ ಪತ್ನಿ ವಿನ್ನಿ ಮಂಡೇಲಾಗೆ ಬರೆದ ಪತ್ರ ಫೆಬ್ರವರಿ ೧೯೭೫ ಅಸೀಮ ಕೋಪ ಮತ್ತು ಹಿಂಸೆಗಳಿಂದ ದೇಶವೂಂದನ್ನು ಕಟ್ಟಲಾಗದು. ನಾವು ನಮ್ಮೆಲ್ಲ ಜನರೂ, ಕರಿಯರು ಮತ್ತು ಬಿಳಿಯರಿಬ್ಬರೂ ಗೆಲ್ಲಬೇಕು. ಅಂತಹ ಫಲಿತಾಂಶ ಪಡೆಯಲು ಶ್ರಮಿಸುತ್ತಿದ್ದೇವೆ-ಯುರೋಪಿಯನ್ ಸಂಸತ್ತಿನಲ್ಲಿ ಮಾಡಿದ ಭಾಷಣ ೧೯೯೦ ಸ್ವತಂತ್ರವಾಗುವುದೆಂದರೆ ಬರಿ ಸಂಕೋಲೆಗಳನ್ನು ಕಳಚುವುದಲ್ಲ. ಬೇರೆಯವರ ಸ್ವಾತಂತ್ರ್ಯವನ್ನು ಗೌರವಿಸುತ್ತ ಬದುಕುವಂತಾಗಬೇಕು-ಲಾಂಗ್ ವಾಕ್ ಟು ಫ್ರೀಡಂ, ೧೯೯೫ ಶತ್ರುವಿನೊಂದಿಗೆ ಶಾಂತಿ ಸಾಧಿಸಬೇಕಿದ್ದರೆ, ಆತನೊಂದಿಗೆ ಕೆಲಸ ಮಾಡಬೇಕು. ಆಗ ಆತ ನಿಮಗೆ ಸಹವರ್ತಿಯಾಗುತ್ತಾನೆ-ಲಾಂಗ್ ವಾಕ್ ಟು ಫ್ರೀಡಂ, ೧೯೯೫ ಮಾನವನ ಒಳ್ಳೆಯತನ ಜ್ಯೋತಿಯಿದ್ದಂತೆ ಅದನ್ನು ಮರೆಮಾಚಬಹುದು, ಆರಿಸಲಾಗದು-ಲಾಂಗ್ ವಾಕ್ ಟು ಫ್ರೀಡಂ, ೧೯೯೫ ನಿಜವಾದ ನಾಯಕರು ಜನರ ಸ್ವಾತಂತ್ರ್ಯಕ್ಕಾಗಿ ಸರ್ವವನ್ನೂ ತ್ಯಾಗ ಮಾಡಲು ಸಿದ್ಧರಾಗಬೇಕು -ಕ್ವಜುಲು-ನಾಟಲ್, ದಕ್ಷಿಣ ಆಫ್ರಿಕಾ, ಏಪ್ರಿಲ್ ೨೫, ೧೯೯೮ ಪದಗಳನ್ನು ಹಗುರಾಗಿ ಬಳಸುವ ಜಾಯಮಾನ ನನ್ನದಲ್ಲ. ಜೈಲಿನಲ್ಲಿ ಕಳೆದ ೨೭ ವಸಂತಗಳಲ್ಲಿ ಮೌನದ ಸಾಂಗತ್ಯ, ಏಕಾಂತಗಳು ಪದಗಳ ಮೌಲ್ಯವನ್ನು ಅರ್ಥಮಾಡಿಸಿದೆ. ಜನರ ಬದುಕು ಮತ್ತು ಸಾವಿನ ಮೇಲೆ ಮಾತು ಬೀರುವ ಗಾಢ ಪರಿಣಾಮವನ್ನು ತಿಳಿಸಿವೆ-ದಕ್ಷಿಣ ಆಫ್ರಿಕಾ ಜುಲೈ ೧೪,೨೦೦೦ ನಾನು ಮಹಾತ್ಮ ಗಾಂಧಿ ಹಾಕಿಕೊಟ್ಟ ನೈತಿಕತೆ, ಸರಳತೆ ಮತ್ತು ಬಡವರ ಬಗ್ಗೆ ಅವರ ಪ್ರೀತಿಯ ಮಟ್ಟವನ್ನು ಮುಟ್ಟುವುದು ಸಾಧ್ಯವೇ ಇಲ್ಲ. ಗಾಂಧಿ ಯಾವುದೇ ದೌರ್ಬಲ್ಯಗಳಿಲ್ಲದ ಮಾನವ ಜೀವಿ. ನಾನು ಅನೇಕ ದೌರ್ಬಲ್ಯಗಳಿಂದ ಕೂಡಿದ ಮಾನವ- ೧೯೯೫ರ ಅಹ್ಮದಾಬಾದ್‌ನಲ್ಲಿ, ಭಾರತಕ್ಕೆ ಭೇಟಿ ಶಿಕ್ಷಣ ಪ್ರಪಂಚವನ್ನು ಬದಲಿಸುವ ಪ್ರಬಲ ಅಸ್ತ್ರ ಒಂದು ಸಮಾಜದ ಆತ್ಮದ ದರ್ಶನವಾಗುವುದು ಅದು ಮಕ್ಕಳನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದು ತೋರಿಸುತ್ತದೆ ಸೆರೆಮನೆಯಲ್ಲಿ ಕಾಲದೊಂದಿಗೆ ನಿಮ್ಮ ಮುಖಾಮುಖಿಯಾಗುತ್ತದೆ. ಅದಕ್ಕಿಂತಲೂ ದಿಗಿಲು ಹುಟ್ಟಿಸುವ ಸಂಗತಿ ಮತ್ತೊಂದಿಲ್ಲ ಜೈಲಿನಲ್ಲಿನ ಕಡು ಕಷ್ಟದ ದಿನಗಳಲ್ಲೂ ಮುಂದೊಂದು ದಿನ ನಾನು ಸ್ವತಂತ್ರನಾಗಿ ಕಾಲಿಗೆ ಮುತ್ತಿಕ್ಕುವ ಇಬ್ಬನಿಯಿಂದ ತೋಯ್ದ ಹುಲ್ಲಿನ ಸುಖವನ್ನು ಅನುಭವಿಸಲಿದ್ದೇನೆ ಎಂಬ ನಂಬುಗೆ ನನಗಿತ್ತು

ಮಂಡೇಲಾರ ಬಗ್ಗೆ ಮಾಹಿತಿ

ಬದಲಾಯಿಸಿ
 • ದಕ್ಷಿಣ ಆಫ್ರಿಕಾದ ಸ್ಥಳೀಯ ಕರಿಯರ ಕೋಸ್ಸಾ ಭಾಷೆಯಲ್ಲಿ ಮಂಡೇಲಾ ಹೆಸರು ರೋಲಿಹ್ ಲಾಹ್ಲಾ ಎಂದು. ರೋಲಿಹ್ ಲಾಹ್ಲಾ ಎಂದರೆ ಕಷ್ಟಗಳನ್ನು ಕೆದಕುವವ ಎಂದರ್ಥ.
 • ೧೯೫೭ರಲ್ಲಿ ವೈದ್ಯಕೀಯ ಸಮಾಜ ಸೇವಕಿಯಾಗಿದ್ದ ೨೦ ಹರೆಯದ ಕಪ್ಪು ಸುಂದರಿ ವಿನ್ನಿ ನೋಮ್ ಜಾಮೊ ಮಡಿಕಿಜೆಲಾ ಅವರನ್ನು ಮಂಡೇಲಾ ವರಿಸಿದರು. ಆಗ ವಿನ್ನಿ ತಂದೆ, ನೆನಪಿಡು ಮಗಳೇ, ನೀನು ಮದುವೆಯಾಗುತ್ತಿರುವುದು ವ್ಯಕ್ತಿಯನ್ನಲ್ಲ, ಹೋರಾಟವನ್ನು, ಎಂದಿದ್ದರು.
 • ಮಂಡೇಲಾ ಅವರು ಬಹುವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದ ರಾಬ್ಬೆನ್ ನಡುಗಡ್ಡೆ ಜೈಲಿಗೆ ಜನ ಅಭಿಮಾನದಿಂದ ಮಂಡೇಲಾ ವಿಶ್ವವಿದ್ಯಾನಿಲಯ ಎಂದು ಕರೆಯುತ್ತಾರೆ. ಇಲ್ಲಿಗೆ ಬರುವ ಯುವ ಕೈದಿಗಳು ವ್ಯಾಸಂಗ ಮುಂದುವರಿಸಿ ಪದವಿ ಪಡೆಯುವಂತೆ ಮಂಡೇಲಾ ಉತ್ತೇಜಿಸುತ್ತಿದ್ದರಂತೆ. ಅವರಿಗೆ ಸ್ವತಃ ಮಾಸ್ತರಾಗಿ ಪಾಠ ಮಾಡುತ್ತಿದ್ದರಂತೆ.
 • ೧೯೮೦ರ ಮಾರ್ಚ್‌ನಲ್ಲಿ ಜೋಹನ್ಸ್‌ಬರ್ಗ್‌ನಲ್ಲಿ ಮಂಡೇಲಾರ ಬಿಡುಗಡೆ ಕುರಿತು ಅಭಿಪ್ರಾಯ ಸಂಗ್ರಹಿಸಿದಾಗ ಶೇ.58ರಷ್ಟು ಬಿಳಿಯರು ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದರು.

ಲಾಂಗ್ ವಾಕ್ ಟು ಫ್ರೀಡಮ್

ಬದಲಾಯಿಸಿ
 
ಮಂಡೇಲಾರ ಆತ್ಮಕಥನ ಲಾಂಗ್ ವಾಕ್ ಟು ಫ್ರೀಡಮ್ ಪುಸ್ತಕದ ಮುಖಪುಟ.

ನೆಲ್ಸನ್ ಮಂಡೇಲಾ ಸೆರೆವಾಸದ ಸಮಯದಲ್ಲಿ ತಮ್ಮ ಅನುಭವಗಳನ್ನು ಬರೆಯಲು ಪ್ರಾರಂಭಿಸಿದರು. ಲಾಂಗ್ ವಾಕ್ ಟು ಫ್ರೀಡಮ್ ಅವರ ಪ್ರಸಿದ್ಧ ಆತ್ಮಕಥನ. ಆದರೆ ಇದರಲ್ಲಿ ಎಫ್.ಡಬ್ಲ್ಯೂ.ಡಿ. ಕ್ಲರ್ಕ್ ಆಡಳಿತದಲ್ಲಿ ನಡೆದ ಕ್ರೂರ ಹತ್ಯೆಗಳಾಗಲಿ ಹಾಗೂ ಮಂಡೇಲಾ ಮಾಜಿ ಪತ್ನಿ ವಿನಿಮಂಡೇಲಾ ಅವರು ಅನೇಕ ಹಿಂಸಾಕೃತ್ಯಗಳ ಹಿಂದೆ ಹೊಂದಿದ್ದ ಕೈವಾಡಗಳ ಕುರಿತು ಮುಕ್ತವಾಗಿ ಬರೆಯಲಿಲ್ಲ(ಎಂಬತ್ತು, ತೊಂಭತ್ತರ ದಶಕದ ಕಗ್ಗೊಲೆಗಳು).ಇಂಥ ಕೊರತೆಗಳನ್ನು ಬಿಟ್ಟರೆ ಈ ಕೃತಿಯು ನೆಲ್ಸನ್ ಮಂಡೇಲಾರನ್ನು ಪೂರ್ಣವಾಗಿ ಕಟ್ಟಿಕೊಡುವ ಮಹತ್ವದ ಕೃತಿಯಾಗಿದೆ. ಲೇಖಕ ಜೇಮ್ಸ್ ಜಾರ್ಜ(ಮಂಡೇಲಾ ದಿ ಆಥರೈಸ್ಡ್ ಬಯೋಗ್ರಾಫಿ) ಅವರು ನೆಲ್ಸನ್ ಮಂಡೇಲಾ ಅವರ ವೈಯಕ್ತಿಕ ಕುಟುಂಬದ ಬಗೆಗೆ ಆಸಕ್ತಿದಾಯಕ ವಿಷಯಗಳನ್ನು ತಮ್ಮ ಪುಸ್ತಕಗಳಲ್ಲಿ ಮಂಡಿಸಿದ್ದಾರೆ. ಸಾಂಪ್ಸ್‌ನ್ ಎಂಬ ಲೇಖಕ ಸಹ ಮಂಡೇಲಾರ ಸೆರೆವಾಸದ ದಿನಗಳ ಕುರಿತಂತೆ ಬರೆದು ಪ್ರಕಟಿಸಿದ್ದಾರೆ. ಈ ಮೇಲ್ಕಾಣಿಸಿದ ಕೃತಿಗಳು ಮಂಡೇಲಾರ ಕುರಿತು ವಿವರವಾಗಿ ಬೆಳಕು ಚೆಲ್ಲುವ ಮಹತ್ವದ ಗ್ರಂಥಗಳಾಗಿವೆ

ಮಂಡೇಲಾರ ನಿಧನಕ್ಕೆ ಗಣ್ಯರ ಕಂಬನಿ

ಬದಲಾಯಿಸಿ

ಜಾಗತಿಕ ವರ್ಣಬೇಧ ನೀತಿ ವಿರೋಧಿ ಹೋರಾಟಗಾರ, ಕೋಟ್ಯಂತರ ಜನರಿಗೆ ಸ್ಪೂರ್ತಿ, ನಿಜವಾದ ಗಾಂಧಿವಾದಿಯಾಗಿದ್ದ ಮಂಡೇಲಾ ನಿಧನಕ್ಕೆ ಜಗತ್ತಿನಾದ್ಯಂತ ಜನರು ಸೂಚಿಸಿದ ಸಂತಾಪ

 • ವಿಶ್ವ ಒಬ್ಬ ದಾರ್ಶನಿಕ, ನ್ಯಾಯಕ್ಕಾಗಿ ದನಿಯೆತ್ತುವ ನಾಯಕ ಮತ್ತು ನೈತಿಕತೆಯ ನೈಜ ದಿಕ್ಸೂಚಿಯನ್ನು ಕಳೆದುಕೊಂಡಿದೆ.-ಕೋಫಿ ಅನ್ನಾನ್. ವಿಶ್ವ ಸಂಸ್ಥೆಯ ಮಾಜಿ ಮಹಾ ಕಾರ್ಯದರ್ಶಿ
 • ನಮ್ಮ ರಾಷ್ಟ್ರ ಶ್ರೇಷ್ಠ ಪುತ್ರನನ್ನು ಕಳೆದುಕೊಂಡಿದೆ. ಜನತೆ ತಂದೆಯನ್ನೇ ಕಳೆದುಕೊಂಡಿದ್ದಾರೆ.-ಜಾಕೊಬ್ ಜುಮಾ, ದಕ್ಷಿಣ ಆಫ್ರಿಕಾಅಧ್ಯಕ್ಷ
 • ನ್ಯಾಯಕ್ಕಾಗಿ ಅಸಾಧಾರಣ ಹೋರಾಟಗಾರರಾಗಿದ್ದ ಮಂಡೇಲಾ ಜನಾಂಗೀಯ ತಾರತಮ್ಯದ ವಿರುದ್ಧ ಜೀವನವಿಡೀ ತ್ಯಾಗ ಮಾಡಿದ ಶ್ರೇಷ್ಠ ವ್ಯಕ್ತಿ. ಸಾಧನೆ, ಪ್ರತಿಷ್ಠೆಗಳಲ್ಲಿ ಜಗತ್ತಿನಲ್ಲಿ ನಿಲ್ಲುವ ಏಕೈಕ ವ್ಯಕ್ತಿತ್ವ ಅವರದು. ಅವರ ಸಾವು ವಿಷಾದನೀಯ.-ಬಾನ್-ಕಿ-ಮೂನ್, ವಿಶ್ವಸಂಸ್ಥೆ ಪ್ರಧಾನ ಕಾರ‌್ಯದರ್ಶಿ
 • ಜಗತ್ತಿನ ಪ್ರಖರ ಬೆಳಕೊಂದು ಮರೆಯಾಗಿ ಹೋಯಿತು.-ಡೇವಿಡ್ ಕ್ಯಾಮರೂನ್, ಬ್ರಿಟನ್ ಪ್ರಧಾನಿ
 • ನಮ್ಮ ಕಾಲದಲ್ಲಿ ಸ್ವಾತಂತ್ರ್ಯ ಮತ್ತು ಸಮಾನತೆಗಾಗಿ ಹೋರಾಡಿದ ಶ್ರೇಷ್ಠ ಶಕ್ತಿ ಮಂಡೇಲಾ. ಇಂಥ ಶ್ರೇಷ್ಠ ವ್ಯಕ್ತಿಯನ್ನು ನಾವು ಅಗಲಿದ್ದರೂ ಅವರ ಕೊಡುಗೆ ಅವಿನಾಶಿ.-ಜಾರ್ಜ್ ಬುಷ್, ಅಮೆರಿಕದ ಮಾಜಿ ಅಧ್ಯಕ್ಷ
 • ಜಾಗತಿಕ ಶಾಂತಿ ದೂತ, ಪ್ರಮುಖ ನಾಯಕ, ಶ್ರೇಷ್ಠ ಮಾನವನನ್ನು ಜಗತ್ತು ಇಂದು ಕಳೆದುಕೊಂಡಿದೆ.-ಬಿಲ್ ಕ್ಲಿಂಟನ್, ಅಮೆರಿಕದ ಮಾಜಿ ಅಧ್ಯಕ್ಷ
 • ಜಗತ್ತು ಮತ್ತು ದಕ್ಷಿಣ ಆಫ್ರಿಕಾಗೆ ಚಾರಿತ್ರಿಕ ಕೊಡುಗೆ ನೀಡಿದ ಮಂಡೇಲಾ ಚೀನಾ ಜನತೆಯ ಹಿರಿಯ ಸ್ನೇಹಿತ.-ಕ್ಸಿ ಜಿನ್‌ಪಿಂಗ್, ಚೀನಾ ಅಧ್ಯಕ್ಷ
 • ರಾಜಕೀಯ ನಾಯಕ ಅನ್ನುವುದಕ್ಕಿಂತ ನೈತಿಕ ನಾಯಕನಾಗಿ ಮಂಡೇಲಾ ನೆನಪಿಸಿಕೊಳ್ಳಬೇಕಾದ ವ್ಯಕ್ತಿತ್ವ.-ಟೋನಿ ಅಬೊಟ್, ಆಸ್ಟ್ರೇಲಿಯಾ ಪ್ರಧಾನಿ
 • ಹೋರಾಟದಲ್ಲಿ ವಿರಮಿಸದೆ ಮಂಡೇಲಾ ಅವರು ಶೌರ‌್ಯ , ಸಾಧನೆ ಮೂಲಕ ದಕ್ಷಿಣ ಆಫ್ರಿಕಾ ಮತ್ತು ಜಗತ್ತಿನ ಇತಿಹಾಸ ಬರೆದವರು.-ಫ್ರಾಂಕೊಯಿಸ್ ಹಾಲಂಡ್, ಫ್ರಾನ್ಸ್ ಅಧ್ಯಕ್ಷರು
 • ಜಗತ್ತಿನ ಬದಲಾವಣೆಗೆ ಪೇರಕಶಕ್ತಿಯಾಗಿದ್ದ ಮಂಡೇಲಾ ಶ್ರೇಷ್ಠ ಮಾನವತಾವಾದಿ. ಮಾನವ ಹಕ್ಕುಗಳು ಮತ್ತು ಸಮಾನತೆಗೆ ಹೋರಾಡಿದ ಧೀಮಂತ.-ಔನ್ ಸಾನ್ ಸು ಚಿ, ಮ್ಯಾನ್ಮಾರ್ ಹೋರಾಟಗಾರ್ತಿ
 • ಆಧುನಿಕ ಜಗತ್ತಿನ ಅತ್ಯುತ್ತಮ ರಾಜಕಾರಣಿ ಮಂಡೇಲಾ. ದೊಡ್ಡ ನೋವು, ಸಂಕಟದಲ್ಲಿ ಬೆಂದಿದ್ದರೂ ಬದುಕಿನ ಕೊನೆಗಳಿಗೆವರೆಗೂ ಮಾನವತೆ ಹಾಗೂ ನ್ಯಾಯದ ಪರವಾಗಿಯೇ ಹೋರಾಡಿದರು. ಆಫ್ರಿಕಾ ಖಂಡ ಸೇರಿದಂತೆ ಇಡೀ ಜಗತ್ತೇ ಮಂಡೇಲಾ ಚೇತನದ ಜತೆ ಬೆಸೆದುಕೊಂಡಿರುವುದು ಅತಿಶಯೋಕ್ತಿಯಲ್ಲ.-ವ್ಲಾಡಿಮಿರ್ ಪುಟಿನ್, ರಷ್ಯಾ ಅಧ್ಯಕ್ಷ
 • ನಮ್ಮೆಲ್ಲರ ಆಶೆ, ಆಶಯ, ಕನಸು ಮತ್ತು ಅಂತಸ್ಸತ್ವದ ಮೂರ್ತ ರೂಪ ಮಂಡೇಲಾ. ನಮ್ಮೆಲ್ಲರ ಅಗ್ಗಳಿಕೆಯ ಪ್ರತಿಬಿಂಬ. ಅವರ ಧೈರ‌್ಯ, ಬದ್ಧತೆಗಾಗಿಯೇ ಜನ ಅವರನ್ನು ಆರಾಧಿಸುತ್ತಾರೆ.-ಆರ್ಚ್ ಬಿಷಪ್ ಡೆಸ್ಮಂಡ್ ಟುಟು
 • ದೇವರು ಕರುಣಾಮಯಿ ದಕ್ಷಿಣ ಆಫ್ರಿಕ ಇತಿಹಾಸದ ಅತ್ಯಂತ ಮಹತ್ವದ ಕ್ಷಣದಲ್ಲಿ ಮಂಡೇಲಾರನ್ನು ದಯಪಾಲಿಸಿದ. ಮಂಡೇಲಾ ನಮ್ಮನ್ನು ಕ್ಷಮೆ ಮತ್ತು ಹೊಂದಾಣಿಕೆಯ ಮಾರ್ಗದಲ್ಲಿ ಮುನ್ನಡೆಸಿದರು. ಹಾಗಾಗಿಯೇ ಅಂತಹ ಸಂಕಷ್ಟದ ಸಮಯದಲ್ಲೂ ದಕ್ಷಿಣ ಆಫ್ರಿಕಾ ಹೊತ್ತಿ ಉರಿಯಲಿಲ್ಲ.-ಆರ್ಚ್ ಬಿಷಪ್ ಡೆಸ್ಮಂಡ್ ಟುಟು
 • ಮಂಡೇಲಾ ನಮ್ಮವರಾಗಿ ಉಳಿದಿಲ್ಲ. ಇತಿಹಾಸದ ಪುಟಗಳನ್ನು ಸೇರಿದ್ದಾರೆ. ಅವರ ಘನತೆ, ಇಚ್ಛಾಶಕ್ತಿ, ಧ್ಯೇಯ ಸಾಧನೆಗಾಗಿ ತಮ್ಮ ಸ್ವಾತಂತ್ರ್ಯವನ್ನು ಬಲಿಕೊಟ್ಟ ಅವರ ಹಿರಿಮೆ ಅನುಕರಣೀಯ.-ಬರಾಕ್ ಒಬಾಮಾ, ಅಮೆರಿಕ ಅಧ್ಯಕ್ಷ
 • ಮಂಡೇಲಾ ತೋರಿದ ಹಾದಿಯಲ್ಲಿ ಎಷ್ಟು ದೂರ ಸಾಗಿದ್ದೇವೆ ಎನ್ನುವುದಕ್ಕಿಂತ, ನಾವು ಆ ಪಥದಲ್ಲಿ ಇನ್ನೆಷ್ಟು ದೂರ ನಡೆಯಬೇಕಿದೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು.-ಮೋರ್ಗಾನ್ ಫ್ರೀಮನ್, ಇನ್‌ವಿಕ್ಟಸ್ ಚಿತ್ರದಲ್ಲಿ ಮಂಡೇಲಾ ಪಾತ್ರ ನಿರ್ವಹಿಸಿದ ನಟ
 • ನಂಬಿಕೆ ಮತ್ತು ಪರಿಶ್ರಮದ ಮಹಾನ್ ಮೂರ್ತಿ ಮೂರ್ತಿ ಮಂಡೇಲಾ ಅವರು ಇನ್ನಿಲ್ಲ. ಆದರೆ, ಸ್ವಾತಂತ್ರ್ಯಕ್ಕಾಗಿ ಹೋರಾಡುವ ಹುರುಪನ್ನು ವಿಶ್ವಕ್ಕೆ ನೀಡಿ ಅವರು ಇಹ ಲೋಕ ತ್ಯಜಿಸಿದ್ದಾರೆ. ಮಂಡೇಲಾರನ್ನು ಎರಡು ಬಾರಿ ಭೇಟಿ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಪುಣ್ಯ..-ಅಮಿತಾಭ್ ಬಚ್ಚನ್, ಬಾಲಿವುಡ್ ನಟ
 • ಬುದ್ದಿವಂತ ಮಿದುಳು, ಕಷ್ಟಕ್ಕೆ ಮಿಡಿವ ಹೃದಯ ಇವೆರಡೂ ಇರುವ ವ್ಯಕ್ತಿ ತೀರ ವಿರಳ. ಮಂಡೇಲಾ ಆ ಗುಂಪಿಗೆ ಸೇರಿದವರು.-ಅಕ್ಷಯ್ ಕುಮಾರ್, ನಾಯಕ ನಟ
 • ನಂಬಿಕೆ, ಧೈರ್ಯ, ಪ್ರಯಾಸ, ಶಾಂತಿ ಮತ್ತು ಕನಿಕರ ಈ ತಿಳಿಪಡಿಸುವಿಕೆಯ ಒಂದು ಅವಿಭಾಜ್ಯ ಭಾಗವಾಗಿದ್ದ ಮಂಡೇಲಾ ಅವರು ಇಹಲೋಕದೊಂದಿಗೆ ತಮ್ಮ ನಂಟು ಕಳೆದುಕೊಂಡಿದ್ದಾರೆ. ಅವರ ಜೀವನವನ್ನು ಲೋಕೋದ್ಧಾರಕ್ಕಾಗಿ ಮೀಸಲಿಟ್ಟಿದ್ದಕ್ಕೆ ಒಂದು ಥ್ಯಾಂಕ್ಸ್.-ಅನುಪಮ್ ಖೇರ್, ಬಾಲಿವುಡ್ ನಟ
 • ದಕ್ಷಿಣ ಆಫ್ರಿಕಾದಲ್ಲಿ ಮಂಡೇಲಾ ಅವರ ಕುರಿತು ಕಿರುಚಿತ್ರ ತೆಗೆಯುತ್ತಿದ್ದೆ. ನಾನು ತೊಟ್ಟಿದ್ದ ಟಿ-ಶರ್ಟ್‌ನ ಮೇಲೆ 'ವೋಟ್ ಫಾರ್ ಮಂಡೇಲಾ' ಎಂದು ಬರೆದಿತ್ತು. ಅದನ್ನು ನೋಡಿ ಮಂಡೇಲಾ, ಈ ಶರ್ಟ್ ಮೇಲಿರುವ ಸಾಲುಗಳಿಂದ ನೀವು ಬಂಧಿತರಾಗುವ ಸಾಧ್ಯತೆ ಇದೆ ಎಂದು ನಗುತ್ತಲೇ ಹೇಳಿದ್ದರು.-ಕಬೀರ್ ಖಾನ್, ಚಿತ್ರ ನಿರ್ದೇಶಕ

ನೆಲ್ಸನ್ ಮಂಡೇಲಾರ ಚಿತ್ರಗಳು

ಬದಲಾಯಿಸಿ

[೧][೨]

ಬಾಹ್ಯಸಂಪರ್ಕ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
 1. ನೆಲ್ಸನ್ ಮಂಡೇಲಾ-ಜೀವನ ಚಿರಿತ್ರೆ
 2. [೧]