ಪುರುಷೋತ್ತಮ್ ದಾಸ್ ತಂಡನ್

ಭಾರತದ ಸ್ವಾತಂತ್ರ್ಯ ಹೋರಾಟಗಾರ

[][][]ಪುರುಷೋತ್ತಮ್ ದಾಸ್ ತಂಡನ್,(ಆಗಸ್ಟ್ ೧, ೧೮೮೨ – ಜುಲೈ ೧,೧೯೬೨), ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಇವರು ಮೂಲತಃ ಉತ್ತರ ಪ್ರದೇಶದವರು. ಹಿಂದಿ ಭಾಷೆಯನ್ನು ಅಧಿಕೃತ ರಾಷ್ಟ್ರ ಭಾಷೆಯನ್ನಾಗಿಸುವಲ್ಲಿ ಶ್ರಮಿಸಿದವರು. ಇವರಿಗೆ ೧೯೬೧ ರಲ್ಲಿ ಭಾರತ ರತ್ನ .[] ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಯಿತು.

ಇವರು ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಪ್ರತಿನಿದಿಯಾಗಿದ್ದರು
ಜವಹರ್ ಲಾಲ್ ನೆಹರುರವರ ಜೊತೆ ಹೊರಾಡಿದರು

ಬಾಲ್ಯ ಮತ್ತು ಶಿಕ್ಷಣ

ಬದಲಾಯಿಸಿ

ಪುರುಷೋತ್ತಮ್ ದಾಸ್ ತಂಡನ್ ರವರ ಜನನ ಆಗಸ್ಟ್ ೧, ೧೮೮೨ ರಲ್ಲಿ ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಆಯಿತು.[]ಅವರ ಪ್ರಾರಂಬಿಕ ಶಿಕ್ಷಣ ಸ್ಥಳೀಯ ಸಿಟಿ ಎಂಗಲೋ ವರ್ನಕ್ಯುಲಸ್ ವಿದ್ಯಾಲಯದಲ್ಲಿ ಆಯಿತು.೧೮೯೪ ರಲ್ಲಿ ಅವರು ಇದೇ ವಿಶ್ವವಿದ್ಯಾಲಯದಲ್ಲಿ ಮಿಡಲ್ ಪರೀಕ್ಷೆ ಉತ್ತೀರ್ಣರಾದರು.ಹೈಸ್ಕೂಲ್ ನ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಅವರ ಮದುವೆ ಮುರಾಬಾದಿನ ನಿವಾಸಿ ನರೋತ್ತಮಖನ್ನ ರವರ ಮಗಳು ಚಂದ್ರಮುಖೀದೇವಿಯವರ ಜೊತೆಯಲ್ಲಿ ಆಯಿತು.೧೮೯೯ ರಲ್ಲಿ ಕಾಂಗ್ರೆಸ್ ನ ಸ್ವಯಂ ಸೇವಕರಾದರು,೧೮೯೯ ರಲ್ಲಿ ಇಂಟರ್ ಮೀಡಿಯೇಟರ್ ನ ಪರೀಕ್ಷೆಯನ್ನು ಪಾಸುಮಾಡಿದರು ಮತ್ತು ೧೯೦೦ ನಲ್ಲಿ ಅವರು ಒಂದು ಹೆಣ್ಣು ಮಗುವಿನ ತಂದೆಯಾದರು.ಇದರ ನಡುವೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ದುಮುಕಿದರು.ಮುಂದಿನ ಓದಿಗಾಗಿ ಆವರು ಅಲಹಾಬಾದಿನ ವಿಶ್ವವಿದ್ಯಾಲಯದ ಮ್ಯೆರ್ ಸೆಂಟ್ರಲ್ ಕಾಲೇಜ್ ನಲ್ಲಿ ಪ್ರವೇಶವನ್ನು ಪಡೆದರು, ಆದರೆ ಅವರು ಕ್ರಾಂತಿಕಾರಿ ಕಾರ್ಯಾಕಲಾಪಗಳ ಕಾರಣದಿಂದ ಅವನ್ನು ೧೯೦೧ ರಲ್ಲಿ ಹೊರದೂಡಿದರು. ೧೯೦೩ ರಲ್ಲಿ ಅವರ ತಂದೆಯವರು ಸ್ವರ್ಗಾಸೀನರಾದರು. ಈ ಎಲ್ಲಾ ತೊಂದರೆಗಳನ್ನು ನಿಭಾಯಿಸಿಕೊಂಡು ಅವರು ೧೯೦೪ ರಲ್ಲಿ ಬಿ.ಎ ಮಾಡಿದರು

ರಾಜಕೀಯ

ಬದಲಾಯಿಸಿ

೧೯೦೫ ರಿಂದ ಅವರು ರಾಜನೀತಿಕ ಜೀವನ ಪ್ರಾರಂಭವಾಯಿತು.[]೧೯೦೫ ರಲ್ಲಿ ಅವರು "ವಂಗಭಂಗ" ಆಂದೋಲನದಿಂದ ಪ್ರಭಾವಿತರಾಗಿ "ಸ್ವದೇಶ"ದ ವ್ರತವನ್ನು ಹಿಡಿದರು, ವಿದೇಶೀ ವಸ್ತುಗಳನ್ನು ಬಹಿಷ್ಕರಿಸುವ ರೂಪದಲ್ಲಿ ಮೆಣಸನ್ನು ತಿನ್ನುವುದನ್ನು ಬಿಟ್ಟುಬಿಟ್ಟರು ಹಾಗೂ ಗೋಪಾಲಕೃಷ್ಣ ಗೋಖಲೆಯ ಅಂಗರಕ್ಷಕನ ರೂಪದಲ್ಲಿ ಕಾಂಗ್ರೆಸ್ ನ ಅಧಿವೇಶನದಲ್ಲಿ ಭಾಗವಹಿಸಿದರು. ೧೯೦೬ ರಲ್ಲಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಪ್ರತಿನಿಧಿಯಾಗಿ ಚುನಾಯಿತರಾದರು.ಈನಡುವೆ ಅವರ ಬರವಣಿಗೆಯೂ ಪ್ರರಂಭವಾಗಿತ್ತು ಹಾಗೂ ಅನೇಕ ಪತ್ರಿಕೆಗಳಲ್ಲಿ ಅವರ ರಚನೆಗಳು ಪ್ರಕಾಶಿತವಾಗತೊಡಗಿತ್ತು.ಇದೇ ಸಮಯದಲ್ಲಿ ಅವರ ಪ್ರಸಿದ್ದ ಕಾವ್ಯ "ಹಿಂದಿ ಪ್ರದೀಪ್" ಪ್ರಕಾಶಿತವಾಯಿತು. ಈ ಎಲ್ಲಾ ಕೆಲಸಗಳ ನಡುವೆ ಅವರು ತಮ್ಮ ಓದನ್ನು ಮುಂದುವರಿಸಿದರು ಮತ್ತು ೧೯೦೬ ರಲ್ಲಿ ಎಲ್.ಎಲ್.ಬಿ.ಯ ಪದವಿಯನ್ನು ಪಡೆದನಂತರ ವಕಾಲತ್ತನ್ನು ಪ್ರರಂಭಂಮಾಡಿದರು.ಓದನ್ನು ಮುಂದುವರಿಸಿದರು.ಅವರು ೧೯೦೭ ರಲ್ಲಿ "ಇತಿಹಾಸ" ದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು ಹಾಗೂ ಅಲಹಾಬಾದಿನ ಉಚ್ಚನ್ಯಾಯಾಲಯದಲ್ಲಿ ಆ ಸಮಯದ ಹೆಸರಾಂತ ವಕೀಲ ತೇಜಬಹಾದ್ದೂರ್ ಸಪ್ರೂರವರ ಜ್ಯೂನಿಯರ್ ಆದರು, ಅವರು ಅತ್ಯಂತ ಮೇಧಾವಿ, ಬಹುಮುಖ ಪ್ರತಿಭೆಯುಳ್ಳವರಗಿದ್ದರು.ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಂಡನ್ ರವರು ಒಬ್ಬ ಯೋಧನ ತರಹ ಕಾರ್ಯವನ್ನು ನಿರ್ವಹಿಸಿದ್ದಾರೆ. ಅವರು ವಿದ್ಯರ್ಥಿ ಜೀವದ ೧೮೯೯ ರಿಂದಲೇ ಕಾಂಗ್ರೆಸ್ ಪಾರ್ಟಿಯ ಸದಸ್ಯರಾಗಿದ್ದರು.೧೯೦೬ ರಲ್ಲಿ ಅಲಹಾಬಾದಿನಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರತಿನಿಧಿಯಾಗಿದ್ದರು. ೧೯೩೦ ರಲ್ಲಿ ಜಲಿಯನ್ ವಾಲಾಬಾಗ್ ನ ಹತ್ಯಾಕಾಂಡದ ಅಧ್ಯಯನ ಮಾಡುವ ಸಮಿತಿಯ ಜೊತೆ ಸಂಬಂಧವನ್ನು ಹೊಂದಿದ್ದರು. ೧೯೩೦ ರಲ್ಲಿ ಅಸಹಯೋಗ ಆಂದೋಲನ ಪ್ರರಂಭವಾಯಿತು.

ಸ್ವಾತಂತ್ರ್ಯ ಸಂಗ್ರಾಮ ಹೋರಾಟ

ಬದಲಾಯಿಸಿ

ಗಾಂಧೀಜಿಯವರ ಆಹ್ವಾನದ ಮೇರೆಗೆ ಅವರ ಉನ್ನತಸ್ಥಾನಕ್ಕೆ ಏರುತ್ತಿದ್ದ ವಕೀಲಿ ವೃತ್ತಿಯನ್ನು ಬಿಟ್ಟು ಸ್ವಾತಂತ್ರ್ಯ ಸಂಗ್ರಾಮ ಹೋರಾಟಕ್ಕೆ ದುಮುಕಿದರು. ೧೯೩೧ ರಲ್ಲಿ ಲಂಡನ್ ನಲ್ಲಿ ಆಯೋಜಿಸಲಾದ ದುಂಡುಮೇಜಿನ ಸಮ್ಮೇಳನದಿಂದ ಗಾಂಧೀಜಿಯವರು ಹಿಂದಿರುಗುವ ಮೊದಲು ಕೆಲವು ಸ್ವಾತಂತ್ರ ಸೇನಾನಿಗಳನ್ನು ಬಂದಿಸಿದ್ದರು. ಅವರಲ್ಲಿ ಜವಹರಲಾಲ್ ನೆಹರು ರವರ ಜೊತೆಯಲ್ಲಿ ಪುರುಷೋತ್ತಮ ದಾಸ್ ತಂಡನ್ ರವರು ಇದ್ದರು. ೧೯೩೪ ರಲ್ಲಿ ಅವರು ಬಿಹಾರದ ಪ್ರದೇಶಿಕ ಕಿಸಾನ್ ಸಭೆಯ ಅಧ್ಯಕ್ಷ ಪದವಿಯನ್ನು ಅಲಂಕರಿಸಿದರು ಹಾಗೂ ಬಿಹಾರ ಕಿಸಾನ್ ಆಂದೋಲನದ ಅಭಿವೃದ್ದಿಗೆ ಅನೇಕ ಕೆಲಸಗಳನ್ನು ಮಾಡಿದರು.[]

ಚುನಾವಣೆ ಪ್ರಚಾರ

ಬದಲಾಯಿಸಿ

ಅವರು ೩೨ ಜುಲೈ ೧೯೩೭ ರಿಂದ ೧೦ ಆಗಸ್ಟ್ ೧೯೫೦ ರವರೆಗೆ ಉತ್ತರ ಪ್ರದೇಶದ ವಿಧಾನ ಸಭೆಯ ಪ್ರವಕ್ತರಾಗಿ ಕೆಲಸಮಾಡಿದ್ದರು.[]೧೯೩೭ ಧಾರ ಸಭೆಗಳಲ್ಲಿ ಚುನಾವಣೆ ನಡೆಯಿತು ಆಗ ೧೧ ಪ್ರಾಂತ್ಯಗಳಲ್ಲಿ ೭ ಪ್ರಂತ್ಯಗಳು ಕಾಂಗ್ರೆಸ್ ನ ಪಾಲಾಗಿದ್ದವು. ಉತ್ತರ ಪ್ರದೇಶದಲ್ಲೂ ಕಾಂಗ್ರೆಸ್ ಗೆ ದೊಡ್ಡ ಗೆಲುವು ದೊರಕಿತು ಹಾಗೂ ಇದರ ಪೂರ್ತಿ ಯಶಸ್ಸು ತಂಡನ್ ರವರದ್ದೇ ಆಗಿತ್ತು.ಶ್ರೀಲಾಲ್ ಬಹದ್ದೂರ್ ಶಾಸ್ತ್ರಿಯವರು ಬರೆದಿರುವುದು ಏನೆಂದರೆ ೧೯೩೬-೩೭ ರಲ್ಲಿ ಹೊಸ ಪ್ರಾಂತೀಯ ದಾರಾ ಸಭೆಗಳಲ್ಲಿ ಆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಪೂರ್ತಿ ಶಕ್ತಿಯಿಂದ ಭಾಗವಹಿಸಿದೆ. "ಉತ್ತರಪ್ರದೇಶ"ದಲ್ಲೂ ಕಾಂಗ್ರೆಸ್ ಗೆ ಭಾರಿ ಗೆಲುವು ದೊರೆತಿದೆ.ಇದರ ಪೂರ್ತಿಯಶಸ್ಸು ತಂಡನ್ ರವರಿಗೆ ದೊರೆಯುತ್ತದೆ.ಅವರು ಪೂರ್ತಿಪ್ರದೇಶಗಳನ್ನು ಸುತ್ತಾಡಿ ಸ್ವತಃ ಪ್ರಯಾಗನಗರದ ವಿಧಾನ ಸಭೆಯಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು.ಇದು ಅವರ ಅಪರೂಪವಾದ ಯಶಸ್ಸಾಗಿತ್ತು.ಕೆಲವು ಸಮಯದ ಬಳಿಕ ಆದ ಮಂತ್ರಿಮಂಡಲದಲ್ಲಿ ದಾರಾ ಸಭೆಯ ಸರ್ವಸಮ್ಮತ ಅದ್ಯಕ್ಷರಾಗಿ ಚುನಾಯಿತರಾದರು.ತಂಡನ್ ರವರು ಇದೇ ಕೆಲಸದಲ್ಲಿ ೧೯೪೦ ರಲ್ಲಿ ಇವರನ್ನು ಕಣ್ಣಿಗೆ ಕಾಣದಂತೆ ಜೈಲಿನಲ್ಲಿ ಒಂದು ವರ್ಷ ಇಟ್ಟಿದ್ದರು.ಆಗಸ್ಟ್ ೧೯೪೧ ರಲ್ಲಿ ಅಲಹಾಬಾದಿನಲ್ಲಿ ಮತ್ತೆ ಅರೆಸ್ಟ್ ಆದರು ಮತ್ತು ೧೯೪೪ ರಲ್ಲಿ ಜೈಲಿನಿಂದ ಬಿಡುಗಡೆಯಾದರು ಇದು ಅವರ ಅಂತಿಮ ಹಾಗೂ ೭ನೆಯ ಜೈಲಿನ ಯಾತ್ರೆಯಾಯಿತು.ಅವರು ಸಂಘರ್ಷ ಹಾಗೂ ತ್ಯಾಗ ಜೀವನವನ್ನು ಉಲ್ಲೇಖಿಸುತ್ತಾ ಕಿಶೋರದಾಸ ವಾಜಪೇಯರವರು ಹೀಗೆ ಬರೆಯುತ್ತಾರೆ "ಯಾವಾಗ ರಾಷ್ಟ್ರೀಯ ಸಂಘರ್ಷಗಳು ಆಗುತ್ತವೆ ಆಗೆಲ್ಲಾ ತಂಡನ್ ರವರು ಎಲ್ಲರಿಗಿಂತ ಮುಂದೆ ಇರುತ್ತಾರೆ.ಅವರಿಗೆ ಸುಮ್ಮನೆ ಕೂರುವುದೇ ಗೋತ್ತಿಲ್ಲ".೧೯೪೨ ರಲ್ಲಿ ಜೈಲಿನಿಂದ ಬಿಡುಗಡೆಯಾದಾಗ ಅವರಿಗೆ ಭಾರತೀಯ ಸಮಾಜದಲ್ಲಿ ನಿರಾಶೆ ಹರಡಿರುವಂತೆ ಎಲ್ಲರೂ ಹತಾಶರಾದಂತೆ ಕಂಡರು.ಆಗ ಅವರು ಕಾಂಗ್ರೆಸ್ ಪ್ರತಿನಿಧಿ ಅಸಂಬ್ಲೀ ಹೆಸರಿನ ಸಂಸ್ಥೆಯನ್ನು ಸ್ಥಾಪನೆ ಮಾಡಿ ಪುನಃ ಹೊಸ ಚೇತನದ ಸಂಚಾರ ಮಾಡಿದರು.ಅಲಹಾಬಾದಿನ ನಗರ ಪಾಲಿಕೆಯ ಅಧ್ಯಕ್ಷರಾಗಿದ್ದರು ಹಾಗೂ ಅನೇಕ ಸಾಹಸ ಹಾಗೂ ಐತಿಹಾಸಿಕ ಕಾರ್ಯಗಳನ್ನು ಮಾಡಿದರು.

ಸಭೆಗಳಿಗೆ ಅಯ್ಕೆ

ಬದಲಾಯಿಸಿ
  • ೧೯೪೬ ರಲ್ಲಿ ಭಾರತದ ಸಂವಿದಾನ ಸಭೆಗೆ ಅಯ್ಕೆ.
  • ೧೯೫೨ ರಲ್ಲಿ ಲೋಕಸಭೆ ಸದಸ್ಯ
  • ೧೯೫೭ ರಲ್ಲಿ ರಾಜ್ಯಸಭೆಗೆ ಅಯ್ಕೆ.

ಈ ರೀತಿಯಾಗಿ ಅವರು ಭಾರತೀಯ ರಾಜನೀತಿಯಲ್ಲಿ ಸಕ್ರಿಯರಾಗಿದ್ದು ಅದನ್ನು ಒಳ್ಳೆಯ ರೀತಿಯಲ್ಲಿ ನಡೆಸುತ್ತಿದ್ದರು.ಇವರಿಗೆ "ಭಾರತರತ್ನ" ಪ್ರಶಸ್ತಿ ದೊರೆತಿದೆ.[]

ಇವರು ೧ ಜುಲೈ ೧೯೬೨ ರಲ್ಲಿ ಮರಣ ಹೊಂದಿದರು.

ಉಲ್ಲೇಖಗಳು

ಬದಲಾಯಿಸಿ
  1. https://en.wikipedia.org/wiki/Purushottam_Das_Tandon
  2. http://indianexpress.com/article/opinion/columns/faults-and-lines/99/
  3. https://en.wikipedia.org/wiki/Purushottam_Das_Tandon
  4. "Padma Awards Directory (1954-2007)" (PDF). Ministry of Home Affairs accessdate 26 November 2010. Archived from the original (PDF) on 10 ಏಪ್ರಿಲ್ 2009. Retrieved 19 ನವೆಂಬರ್ 2013.
  5. https://en.wikipedia.org/wiki/Purushottam_Das_Tandon
  6. https://hi.wikipedia.org/wiki/पुरुषोत्तम_दास_टंडन
  7. Grover, Verinder (1993). Political Thinkers of Modern India: Lala Lajpat Rai. Deep & Deep Publications isbn 978-81-7100-426-3. pp. 547–.
  8.  
    ಜವಹರ್ ಲಾಲ್ ನೆಹರುರವರ ಜೊತೆ ಹೊರಾಡಿದರು
  9. ಭಾರತ ರತ್ನ ಪ್ರಶಸ್ತಿಯನ್ನು ಪಡೆದವರ ಪಟ್ಟಿ