ಬಿಧಾನ್‌ ಚಂದ್ರ ರಾಯ್‌

ಪಶ್ಚಿಮ ಬಂಗಾಳದ ಮೊದಲನೆ ಮುಖ್ಯಮಂತ್ರಿ

ಭಾರತ ರತ್ನ ಪುರಸ್ಕೃತ ಬಿಧಾನ್‌ ಚಂದ್ರ ರಾಯ್‌ M.R.C.P., F.R.C.S.ಬಂಗಾಳಿ:বিধান চন্দ্র রায় (೧ ಜುಲೈ ೧೮೮೨–೧ ಜುಲೈ ೧೯೬೨) ಇವರು ಭಾರತದಲ್ಲಿನ ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದಾರೆ. ಇವರು ಈ ಹುದ್ದೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರತಿನಿಧಿಯಾಗಿ ಹದಿನಾಲ್ಕು ವರ್ಷಗಳ ಕಾಲ ೧೯೪೮ ರಿಂದ ೧೯೬೨ರಲ್ಲಿನ ಮರಣದವರೆಗೂ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ಅತ್ಯಂತ ಗೌರವಾನ್ವಿತ ವೈದ್ಯರಾಗಿದ್ದರು ಮತ್ತು ಪ್ರಖ್ಯಾತ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇವರನ್ನು ಪಶ್ಚಿಮ ಬಂಗಾಳದ ಶ್ರೇಷ್ಟ ಶಿಲ್ಪಿಯೆಂದು ಕರೆಯಲಾಗಿದ್ದು ಇವರು ಕಲ್ಯಾಣಿ ಮತ್ತು ಬಿಧಾನ್‌ ನಗರ ಎಂಬ ಎರಡು ದೊಡ್ಡ ನಗರಗಳ ಹುಟ್ಟಿಗೆ ಕಾರಣರಾಗಿದ್ದಾರೆ. ಇವರು ಕಲ್ಕತ್ತಾ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನ ಹಳೆಯ ವಿಧ್ಯಾರ್ಥಿಯಾಗಿದ್ದಾರೆ. F.R.C.S. ಮತ್ತು M.R.C.P ಯನ್ನು ಜೊತೆಜೊತೆಯಾಗಿ ಎರಡು ವರ್ಷ ಮೂರು ತಿಂಗಳಲ್ಲಿ ಪೂರೈಸಿದ ಭಾರತದಲ್ಲಿನ ಅತೀ ವಿರಳ ಜನರಲ್ಲಿ ಇವರೂ ಒಬ್ಬರಾಗಿದ್ದಾರೆ. ಇವರ ಹುಟ್ಟಿದ (ಮತ್ತು ಮರಣಿಸಿದ) ದಿನವಾದ ಜುಲೈ ೧ನ್ನು ಪ್ರತೀ ವರ್ಷ ರಾಷ್ಟ್ರೀಯ ವೈದ್ಯರ ದಿನ ವೆಂದು ಆಚರಿಸಲಾಗುತ್ತದೆ. ಡಾ.ಬಿಧಾನ್‌ ಚಂದ್ರ ರಾಯ್‌ ಅವರು ಪಾಟ್ನಾದಲ್ಲಿರುವ ತಮ್ಮ ಆಸ್ತಿಯನ್ನು ಆಧಾರಿಸಿ ಒಂದು ಸಂಸ್ಥೆಯನ್ನು(trust) ತಮ್ಮ ಸಾಮಾಜಿಕ ಕೆಲಸಕಾರ್ಯಗಳಿಗಾಗಿ ನಿರ್ಮಿಸಿದ್ದಾರೆ ಈ ಸಂಸ್ಥೆಗೆ ಶ್ರೇಷ್ಠ ರಾಜನೀತಿಜ್ಞರಾದ ಗಂಗಾ ಶರಮ್‌ ಸಿಂಗ್‌(ಸಿನ್ಹಾ) ಅವರನ್ನು ನೇಮಿಸಿದ್ದಾರೆ.[] ಇವರು ಭಾರತದ ಅತ್ಯಂತ ಶ್ರೇಷ್ಠ ನಾಗರೀಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು ೪ ಫೇಬ್ರುವರಿ ೧೯೬೧ರಲ್ಲಿ ಪಡೆದರು.[] ಅವರು ಬ್ರಮ್ಹೋ ಸಮಾಜದ ಓರ್ವ ಸದಸ್ಯರೂ ಆಗಿದ್ದಾರೆ.

ಭಾರತ ರತ್ನ ಬಿಧಾನ್ ಚಂದ್ರ ರಾಯ್

ಪಶ್ಚಿಮ ಬಂಗಾಳದ 2ನೇ ಮುಖ್ಯಮಂತ್ರಿ
ಅಧಿಕಾರ ಅವಧಿ
14 ಜನವರಿ 1948 – 1 ಜುಲೈ 1962
ಪೂರ್ವಾಧಿಕಾರಿ ಪ್ರಫುಲ್ಲ ಚಂದ್ರ ಘೋಷ್
ಉತ್ತರಾಧಿಕಾರಿ ಪ್ರಫುಲ್ಲ ಚಂದ್ರ ಸೇನ್
ವೈಯಕ್ತಿಕ ಮಾಹಿತಿ
ಜನನ (೧೮೮೨-೦೭-೦೧)೧ ಜುಲೈ ೧೮೮೨
ಬಂಕಿಪೂರ್, ಪಟ್ನಾ, ಬಿಹಾರ್
ಮರಣ 1 July 1962(1962-07-01) (aged 80)
ಕೋಲ್ಕಟಾ, ಪಶ್ಚಿಮ ಬಂಗಾಳ
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸಂಗಾತಿ(ಗಳು) ಅವಿವಾಹಿತ
ವಾಸಸ್ಥಾನ ಕೋಲ್ಕಟಾ, ಪಶ್ಚಿಮ ಬಂಗಾಳ, ಭಾರತ
ಅಭ್ಯಸಿಸಿದ ವಿದ್ಯಾಪೀಠ ಪ್ರೆಸಿಡೆನ್ಸಿ ಕಾಲೇಜ್, ಕಲಕತ್ತಾ
ಪಟ್ನಾ ಕಾಲೇಜ್
ಎಮ್.ಆರ್.ಸಿ.ಪಿ.
ಎಫ಼್.ಆರ್.ಸಿ.ಎಸ್.
ಉದ್ಯೋಗ ವೈದ್ಯ
ಸ್ವಾತಂತ್ರ ಸೇನಾನಿ
ರಾಜಕಾರಣಿ
ಧರ್ಮ ಹಿಂದೂ ಧರ್ಮ

ಬಾಲ್ಯ ಜೀವನ

ಬದಲಾಯಿಸಿ

ಬಿಧಾನ್‌ ಚಂದ್ರರಾಯ್‌ ಅವರು ಜುಲೈ ೧, ೧೮೮೨ರಂದು ಬಿಹಾರದ ಪಾಟ್ನಾದಲ್ಲಿನ ಬಿ.ಎಮ್‌.ದಾಸ್‌ ರಸ್ತೆ, ಬಂಕಿಪುರದಲ್ಲಿ ಜನಿಸಿದರು. ಅವರ ತಂದೆಯವರಾದ ಪ್ರಕಾಶಚಂದ್ರ ಅವರು ಓರ್ವ ಸುಂಕಾಧಿಕಾರಿಯಾಗಿದ್ದರು. ಇವರು ಇವರ ತಂದೆಯವರ ಐದು ಮಕ್ಕಳಲ್ಲಿ ಕಿರಿಯವರಾಗಿದ್ದು, ತನ್ನ ಪಾಲಕರ ಸರಳತೆ, ಶಿಸ್ತು ಮತ್ತು ಕಾರುಣ್ಯತೆಯಿಂದ ಪ್ರಭಾವಿತರಾಗಿದ್ದರು. ಇವರ ಪಾಲಕರು ಇವರಲ್ಲಿ ತನ್ನ ಸಂಬಂಧಿಕರಲ್ಲಿ ಮಾತ್ರ ಕರುಣೆ ಮತ್ತು ವಾತ್ಸಲ್ಯವನ್ನು ಹೊಂದದೇ ಎಲ್ಲ ಜನರಲ್ಲೂ ದಯಾಪರನಾಗಿರುವ ಬುದ್ದಿ ಮೂಡುವಂತೆ ಪ್ರೆರೇಪಣೆ ನೀಡಿದರು. ಇವರು ತಮ್ಮ ಹದಿನಾಲ್ಕನೇ ವರ್ಷದಲ್ಲಿರುವಾಗ ಅವರ ತಾಯಿಯವರನ್ನು ಕಳೆದುಕೊಂಡರು. ಇವರ ತಂದೆಯವರು ಅವರ ಐದು ಮಕ್ಕಳಿಗೆ ತಾಯಿಯಾಗಿ, ತಂದೆಯಾಗಿ ಕರ್ತವ್ಯ ನಿರ್ವಹಿಸಿದರು. ಅವರು ಯಾರಿಗೂ ಕೆಲಸ ಮಾಡುವಂತೆ ಒತ್ತಾಯಿಸಲಿಲ್ಲ ಆದರೆ ಗುರಿಯನ್ನು ಸಾಧಿಸಲು ದಾರಿಯನ್ನು ಮಾತ್ರ ತೋರಿಸಿಕೊಟ್ಟರು. ಎಲ್ಲ ಐದು ಮಕ್ಕಳೂ ತಮ್ಮ ತಮ್ಮ ಮನೆಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕಾಗಿತ್ತು. ಅವು ಬಿಧಾನ್‌ ಅವರ ಕಾಲೇಜು ದಿನಗಳಲ್ಲಿ ಅವರಿಗೆ ತುಂಬ ಸಹಾಯಕವಾದ ಅಂಶಗಳಾದವು. ಬಿಧಾನ್‌ ಅವರು ತಮ್ಮ I.A.ಯನ್ನು ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಮತ್ತು ಬಿ.ಎ ಪದವಿಯನ್ನು ಪಾಟ್ನಾ ಕಾಲೇಜಿನಲ್ಲಿ ಗಣಿತದಲ್ಲಿ ಅಗ್ರಗಣ್ಯರಾಗಿ ಪುರೈಸಿದರು. ನಂತರ ಪ್ರವೇಶಕ್ಕಾಗಿ ಬೆಂಗಾಲ್‌ ಇಂಜಿನಿಯರಿಂಗ್‌ ಕಾಲೇಜ್‌ ಮತ್ತು ಕಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಅರ್ಜಿ ಸಲ್ಲಿಸಿದರು. ಎರಡೂ ಕಡೆಯಲ್ಲಿಯೂ ಅವಕಾಶಗಳು ದೊರೆಯಾಗಿಯೂ ಅವರು ವೈದ್ಯಕೀಯ ಕಾಲೇಜಿಗೆ ಹೋಗುವ ಆಯ್ಕೆಯನ್ನೇ ಆಯ್ಕೆ ಮಾಡಿಕೊಂಡರು. ಬಿಧಾನ್‌ ಅವರು ೧೯೦೧ ಜೂನ್‌ರಲ್ಲಿ ಕಲ್ಕತ್ತಾಗೆ ಆಗಮಿಸಿದರು. ಅವರು ಅಲ್ಲಿ ಬರೆದ "Whatever thy hands findeth to do, do it with thy might." ಎಂಬ ವಾಕ್ಯದಿಂದ ತುಂಬ ಪ್ರಭಾವಿತರಾದರು. ಮತ್ತು ಈ ವಾಕ್ಯವು ಅವರ ಜೀವನದ ಪಥದ ಪರಿವರ್ತನೆಗೆ ಮತ್ತು ಜಿವನದುದ್ದಕ್ಕೂ ಅವರು ನಡೆದ ದಾರಿಗೆ ಕಾರಣವಾದ ಮುಖ್ಯ ಅಂಶವಾಯಿತು.

ಬಿಧಾನ್‌ ಅವರ ವೈದ್ಯಕೀಯ ಶಿಕ್ಷಣವನ್ನು ಪಡೆಯುತ್ತಿರುವಾಗಿನ ಜೀವನವು ಅತ್ಯಂತ ಪರಿಶ್ರಮದಯಕವಾಗಿತ್ತು. ಮೊದಲ ವರ್ಷದಲ್ಲಿಯೇ ತಂದೆಯವರು ಉಪ ಜಿಲ್ಲಾಧಿಕಾರಿಯಾಗಿ ನಿವೃತ್ತಿಯನ್ನು ಪಡೆದರು. ಆದ್ದರಿಂದ ಅವರು ಬಿಧಾನ್‌ ಅವರಿಗೆ ಬಹಳ ದಿನಗಳ ಕಾಲ ಹಣವನ್ನು ಕಳುಹಿಸಿಕೊಡಲು ಅಶಕ್ತರಾದರು. ಬಿಧಾನ್‌ ಅವರು ಸ್ಕಾಲರ್‌ಶಿಫ್‌ಗಳನ್ನು ಪಡೆಯುತ್ತಿದ್ದರು ಮತ್ತು ತಮ್ಮ ಖರ್ಚುವೆಚ್ಚಗಳನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸುತ್ತಿದ್ದರು. ತಮ್ಮ ಪುಸ್ತಕಳನ್ನು ಸಹ ಖರೀದಿಸದೇ ಗ್ರಂಥಾಲಯಗಳಿಂದ ಪಡೆಯುವುದು ಮತ್ತು ಕಲಿಸುತ್ತಿರುವಾಗ ಬರೆದುಕೊಳ್ಳುವುದರ ಮೂಲಕ ಉಳಿಸುತ್ತಿದ್ದರು.[ಸೂಕ್ತ ಉಲ್ಲೇಖನ ಬೇಕು]

ಬಿಧಾನ್‌ ಅವರು ಕಾಲೇಜಿನಲ್ಲಿರುವಾಗಲೇ ಬಂಗಾಳವಿಭಜನೆಯನ್ನು ಘೋಷಿಸಲಾಯಿತು. ಬಂಗಾಳ ವಿಭಜನೆಯ ವಿರುದ್ಧ ರಾಷ್ಟ್ರೀಯ ನಾಯಕರಾದ ಲಾಲಾ ಲಜಪತ್‌ರಾಯ್‌, ಅರವಿಂದ ಘೋಷ್‌, ತಿಲಕ ಮತ್ತು ಬಿಪಿನ್‌ ಚಂದ್ರಪಾಲ್‌ ಇವರ ಮುಂದಾಳತ್ವದಲ್ಲಿ ಹೋರಾಟಗಳು ಪ್ರಾರಂಭವಾದವು. ಬಿಧಾನ್‌ ಅವರು ಪೂರ್ಣ ಪ್ರಮಾಣದಲ್ಲಿ ಈ ಚಳುವಳಿಯಲ್ಲಿ ಪಾಲ್ಗೊಳ್ಳಲು ಮನಸ್ಸು ಮಾಡಿದರೂ ತಮ್ಮ ಆವೇಶವನ್ನು ಹಿಡಿತದಲ್ಲಿಟ್ಟುಕೊಂಡು ತಾನು ಕಲಿತು ತನ್ನ ಉದ್ಯೋಗದ ಮೂಲಕ ತನ್ನ ದೇಶವನ್ನು ಇನ್ನು ಹೆಚ್ಚು ಒಳ್ಳೆಯ ರೀತಿಯಲ್ಲಿ ಸೇವೆ ಮಾಡುವ ಮನಸ್ಸು ಮಾಡಿ ತಮ್ಮ ಅಭ್ಯಾಸದಲ್ಲಿ ಮನಸ್ಸನ್ನು ಕೆಂದ್ರೀಕರಿಸಿದರು.[ಸೂಕ್ತ ಉಲ್ಲೇಖನ ಬೇಕು]

ವೃತ್ತಿಜೀವನ

ಬದಲಾಯಿಸಿ
 
ಬಿಧಾನ್ ಚಂದ್ರ ರಾಯ್ ತಾಂತ್ರಿಕ ಆಸ್ಪತ್ರೆ

ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ ಕೂಡಲೇ, ಬಿ.ಸಿ. ರಾಯ್‌ ಅವರು ಪ್ರಾಂತೀಯ ಆರೋಗ್ಯ ಸೇವಾ ಕೇಂದ್ರವನ್ನು ಸೇರಿಕೊಂಡರು. ಇವರು ಅಲ್ಲಿ ಪರಿಶ್ರಮದಿಂದ ಮತ್ತು ಅಗಾಧವಾಗಿ ಕೆಲಸಮಾಡಿದರು. ಇವರು ಅಲ್ಲಿ ಔಷಧಗಳನ್ನು ಶಿಫಾರಸು ಮಾಡುವುದನ್ನು ಕಲಿತರು ಕೆಲವು ವೇಳೆ ದಾದಿಯರಂತೆ ಅವಶ್ಯಕತೆ ಇದ್ದಾಗ ಸೇವೆ ಸಲ್ಲಿಸಲು ಹೋಗುತ್ತಿದ್ದರು. ಅವರು ತಮ್ಮ ಬಿಡುವಿನ ವೇಳೆಯಲ್ಲಿ ತಾವು ಸ್ವತಂತ್ರವಾಗಿ ಸೇವೆ ಸಲ್ಲಿಸುತ್ತಿದ್ದರು.ಮತ್ತು ಇದಕ್ಕೆ ಪ್ರತಿಯಾಗಿ ರೂ.೨ ಮಾತ್ರ ಚಿಕಿತ್ಸಾ ಶುಲ್ಕವೆಂದು ತೆಗೆದುಕೊಳ್ಳುತ್ತಿದ್ದರು.

ಬಿಧಾನ್‌ ಅವರು ಕೇವಲ ರೂ.೧,೨೦೦ನ್ನು ಮಾತ್ರ ತೆಗೆದುಕೊಂಡು ಫೇಬ್ರುವರಿ ೧೯೦೯ರಲ್ಲಿ ಸೆಂಟ್‌ ಬಾರ್ಥೊಲೊಮೆವ್ಸ್‌ ಆಸ್ಪತ್ರೆಗೆ ಮುಂದಿನ ಶಿಕ್ಷಣಕ್ಕಾಗಿ ತನ್ನ ಹೆಸರನ್ನು ನೊಂದಾಯಿಸಲು ತೆರಳಿದರು. ಅಲ್ಲಿನ ಮುಖ್ಯಸ್ಥರು ಏಷ್ಯಾದಿಂದ ಅವರನ್ನು ವಿಧ್ಯಾರ್ಥಿಯಾಗಿ ಆಯ್ಕೆ ಮಾಡುವ ನಿರ್ಧಾರನ್ನು ಕೈಬಿಡುವ ಮೂಲಕ ಬಿಧಾನ್‌ ಅವರ ಅರ್ಜಿಯನ್ನು ತಿರಸ್ಕರಿಸಲಾಯಿತು. ಡಾ.ರಾಯ್‌ ಅವರು ಧೃತಿಗೆಡಲಿಲ್ಲ. ಅವರು ಮೇಲಿಂದ ಮೇಲೆ ಮೂವತ್ತು ಬಾರಿ ಅರ್ಜಿಯನ್ನು ಸಲ್ಲಿಸಿದ ನಂತರ ಮುಖ್ಯಾಧಿಕಾರಿಗೆ ಬಿಧಾನ್‌ ಅವರನ್ನು ಕಾಲೇಜಿಗೆ ವಿಧ್ಯಾರ್ಥಿಯಾಗಿ ತೆಗೆದುಕೊಳ್ಳಲೇ ಬೇಕಾಯಿತು. ಕೇವಲ ಎರಡು ವರ್ಷ ಮೂರು ತಿಂಗಳ ಅವಧಿಯಲ್ಲಿ M.R.C.P. ಮತ್ತು F.R.C.S. ನ್ನು ಪೂರೈಸಿ ಇಂಗ್ಲೆಂಡ್‌ನಿಂದ ೧೯೧೧ರಲ್ಲಿ ಸ್ವದೇಶಕ್ಕೆ ವಾಪಸಾದರು. ಸ್ವದೇಶಕ್ಕೆ ವಾಪಸಾದ ನಂತರ ಕಲ್ಕತ್ತಾ ಮೆಡಿಕಲ್‌ ಕಾಲೇಜಿನಲ್ಲಿ ಮತ್ತು ಕ್ಯಾಂಪ್‌ಬೆಲ್‌ ಮೆಡಿಕಲ್‌ ಸ್ಕೂಲ್‌ ಮತ್ತು ನಂತರ ಕಾರ್ಮಿಕಲ್‌ ಮೆಡಿಕಲ್‌ ಕಾಲೇಜಿನಲ್ಲಿ ಕಲಿಸುವ ವೃತ್ತಿಯನ್ನು ಪ್ರಾರಂಭಿಸಿದರು.[ಸೂಕ್ತ ಉಲ್ಲೇಖನ ಬೇಕು]

ಡಾ.ರಾಯ್‌ ಸ್ವರಾಜ್ಯ ಕಲ್ಪನೆಯು ಸಾಕಾರವಾಗಲು ಪ್ರಜೆಗಳಲ್ಲಿ ಮಾನಸಿಕವಾದ ಮತ್ತು ದೈಹಿಕ ದೃಢತೆಯನ್ನು ತುಂಬುವುದುದರ ವಿನಹ ಸಾಧ್ಯವಾಗುವುದಿಲ್ಲ ಎಂದು ನಂಬಿದ್ದರು. ಅವರು ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಈ ನಿಟ್ಟಿನಲ್ಲಿ ತಮ್ಮ ಕೊಡುಗೆಯನ್ನು ನೀಡಿದರು. ಅವರು ಈ ನಿಟ್ಟಿನಲ್ಲಿ ಜಾದವಪುರ ಟಿ.ಬಿ ಆಸ್ಪತ್ರೆ, ಚಿತ್ತರಂಜನ್‌ ಸೇವಾ ಸದನ್‌, ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು. ಕಮಲಾ ನೆಹರು ಆಸ್ಪತ್ರೆ, ವಿಕ್ಟೊರಿಯಾ ಸಂಸ್ಥೆ, ಮತ್ತು ಚಿತ್ತರಂಜನ್‌ ಕ್ಯಾನ್ಸರ್‌ ಆಸ್ಪತ್ರೆಗಳನ್ನು ಕಟ್ಟಿಸಿದರು. ಚಿತ್ತರಂಜನ್‌ ಸೇವಾ ಸದನ್‌ ಇದು ಮಹಿಳೆಯರಿಗಾಗಿ ಮತ್ತು ಮಕ್ಕಳಿಗಾಗಿ ೧೯೨೬ರಲ್ಲಿ ಪ್ರಾರಂಭವಾಯಿತು. ಹೆಂಗಸರು ಮೊದಮೊದಲು ಆಸ್ಪತ್ರೆಗೆ ಬರಲು ಹಿಂಜರಿಯುತ್ತಿದ್ದರು. ಆದರೆ ಡಾ. ರಾಯ್‌ ಮತ್ತು ಅವರ ತಂಡದವರಿಗೆ ಧನ್ಯವಾದಗಳನ್ನು ಅರ್ಪಿಸಬೇಕು ಏಕೆಂದರೆ ಅವರ ಪ್ರಯತ್ನದಿಂದ ಎಲ್ಲ ವರ್ಗಗಳ ಮತ್ತು ಜನಾಂಗದ ಮಹಿಳೆಯರು ಆಸ್ಟತ್ರೆಗೆ ಬರತೊಡಗಿದರು. ಅವರು ಮಹಿಳೆಯರಿಗಾಗಿ ನರ್ಸಿಂಗ್‌ ಮತ್ತು ಸಾಮಾಜಿಕ ಸೇವೆಗಳಿಗಾಗಿನ ಕೇಂದ್ರವನ್ನು ಸ್ಥಾಪಿಸಿದರು.

೧೯೪೨ರಲ್ಲಿ ರಂಗೂನ್‌ ಜಪಾನಿಯರ ಬಾಂಬ್‌ ದಾಳಿಗೆ ತುತ್ತಾಯಿತು ಮತ್ತು ಕಲ್ಕತ್ತಾವು ಜಪಾನಿಯ ದಂಗೆಯಿಂದ ಸಂಪೂರ್ಣ ನಿರ್ನಾಮವಾಗಬಹುದೆಂಬ ಭಯಕ್ಕೆ ಒಳಗಾಯಿತು. ಆ ಸಂದರ್ಭದಲ್ಲಿ ಡಾ.ರಾಯ್‌ ಅವರು ಕಲ್ಕತ್ತಾ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ವಿಶ್ವವಿದ್ಯಾಲಯದಲ್ಲಿ ಕಲಿಸಲು ಮತ್ತು ಕಲಿಯಲು ತೊಂದರೆಯಾಗದಂತೆ ಮಾಡುವ ಉದ್ದೇಶದಿಂದ ವೈಮಾನಿಕ ದಾಳಿಗಳಿಂದ ರಕ್ಷಿಸಿಕೊಳ್ಳಬಲ್ಲ ಮೇಲ್ಚಾವಣಿಗಳನ್ನು ರೂಪಿಸುವಂತೆ ಯೋಜನೆಯನ್ನು ಹಾಕಿಕೊಟ್ಟರು. ಇಂತಹ ಮಹತ್ತರವಾದ ಸಾಧನೆಯನ್ನು ಗುರುತಿಸಿ ೧೯೪೪ರಲ್ಲಿ ಡಾಕ್ಟರೇಟ್‌ ಆಪ್‌ ಸೈನ್ಸ್‌ ಪದವಿಯನ್ನು ನೀಡಿ ಪುರಸ್ಕರಿಸಲಾಯಿತು.

ಡಾ.ರಾಯ್‌ ಯುವಕರೇ ದೇಶವನ್ನು ರೂಪಿಸಬಲ್ಲವರಾಗಿದ್ದಾರೆ ಎಂಬುದನ್ನು ನಂಬಿದ್ದರು. ಯುವಕರು ಹಿಂದಿನದನ್ನು ಅನುಸರಿಸುತ್ತಾ ಕುಳ್ಳದೇ ಮತ್ತು ದೊಂಬಿ ಗಲಾಟೆಗಳಲ್ಲಿ ಪಾಲ್ಗೊಳ್ಳದೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತಾಗಬೇಕೆಂದು ಆಶಿಸುತ್ತಿದ್ದರು. ಡಿಸೆಂಬರ್‌ ೧೫, ೧೯೫೬ರಲ್ಲಿ ಲಕ್ನೋ ವಿಶ್ವವಿದ್ಯಾಲಯದಲ್ಲಿ ಸಭೆಯನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು "ನನ್ನ ಯುವ ಮಿತ್ರರೇ, ನೀವು ಸ್ವತಂತ್ರ- ಹೋರಾಟದ ಸೈನಿಕರಾಗಿದ್ದೀರಿ. ಹೋರಾಟವು ಬೇಡಿಕೆಗಾಗಿ, ಹೆದರಿಗೆ, ಕೀಳರಿಮೆ ಮತ್ತು ಹತಾಶೆಗಳನ್ನು ಹೋಗಲಾಡಿಸುವುದಕ್ಕಾಗಿದೆ. ಪರಿಶ್ರವಿಲ್ಲದೇ ಫಲವಿಲ್ಲ, ದೇಶಕ್ಕಾಗಿ ಸ್ವಾರ್ಥವನ್ನು ತ್ಯಜಿಸಿ ಹೋರಾಡೊಣ, ನೀವು ದೃಢವಾದ ವಿಶ್ವಾಸ ಮತ್ತು ದೈರ್ಯದಿಂದ ಮುನ್ನುಗ್ಗುತ್ತಿರೆಂದು ನಂಬಿದ್ದೇನೆ..." ಎಂದು ಹೇಳಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]

ಡಾ.ರಾಯ್‌ ಗಾಂಧೀಜಿಯವರ ಮಿತ್ರರೂ ಮತ್ತು ವೈದ್ಯರೂ ಆಗಿದ್ದರು. ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಗಾಂಧೀಜಿಯವರು ೧೯೩೩ರಲ್ಲಿ ಪೂನಾದಲ್ಲಿ ಪರ್ಣಕುಟಿವಿನ್‌ನಲ್ಲಿ ಚಿಕಿತ್ಸೆಗೊಳಗಾಗುತ್ತಿದ್ದಾಗ ಡಾ. ರಾಯ್‌ ಅವರೇ ಅವರನ್ನು ಆರೈಕೆ ಮಾಡುತ್ತಿದ್ದರು. ಆದರೆ ಗಾಂಧೀಜಿಯವರು ಆ ಔಷಧಗಳು ವಿದೇಶದಲ್ಲಿ ತಯಾರಾದವುಗಳಾಗಿದ್ದರಿಂದ ತೆಗೆದುಕೊಳ್ಳಲು ನಿರಾಕರಿಸಿದರು. ಗಾಂಧೀಜಿಯವರು ಡಾ.ರಾಯ್‌ ಅವರನ್ನುದ್ದೇಶಿಸಿ " ಡಾ.ರಾಯ್‌ ಅವರೇ ನಾನೇಕೆ ನಿಮ್ಮ ಸೇವೆಯನ್ನು ಸ್ವೀಕರಿಸಬೇಕು? ನನ್ನ ದೇಶವಾಸಿಗಳಾದ ನಾಲ್ಕು ದಶಲಕ್ಷ ಜನರಿಗೆ ನಿಮ್ಮಿಂದ ಉಚಿತವಾಗಿ ಸೇವೆ ನೀಡಲು ಸಾಧ್ಯವೇ?" ಎಂದು ಕೇಳಿದರು. ಅದಕ್ಕೆ ಡಾ. ರಾಯ್‌ ಅವರು ಉತ್ತರಿಸುತ್ತಾ" ಇಲ್ಲ ಗಾಂಧೀಜಿಯವರೇ ನಾನು ಮೋಹನದಾಸ ಕರಮಚಂದ ಗಾಂಧಿಯನ್ನು ಉಪಚರಿಸಲು ಬರಲಿಲ್ಲ. ಮತ್ತು ನನ್ನಿಂದ ನಾಲ್ಕು ದಶಲಕ್ಷ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಸಾಧ್ಯವೂ ಇಲ್ಲ. ಆದರೆ ನಾನು ಬಂದಿರುವುದು ನಾಲ್ಕು ದಶಲಕ್ಷ ಜನರ ಮುಖಂಡನನ್ನು ಉಪಚರಿಸಲು ಬಂದಿದ್ದೇನಷ್ಟೇ" ಎಂದು ನುಡಿದರು. ಗಾಂಧೀಜಿ ಮರುಮಾತಾಡದೇ ಔಷಧವನ್ನು ತೆಗೆದುಕೊಳ್ಳಲೇಬೇಕಾಯಿತು.

ಡಾ.ರಾಯ್‌ ಅವರು ೧೯೨೫ರಲ್ಲಿ ರಾಜಕೀಯವನ್ನು ಪ್ರವೇಶಿಸಿದರು. ಬಂಗಾಳದ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಬಾರಕ್‌ಪುರ ಕ್ಷೇತ್ರದಲ್ಲಿ ಅಲೆದಾಡಿದರು ಮತ್ತು ನಡೆದ ಚುನಾವಣೆಯಲ್ಲಿ ಬಂಗಾಳದ ಅತ್ಯಂತ ಹಿರಿಯ "ಗ್ರ್ಯಾಂಡ್ ಓಲ್ಡ್ ಮ್ಯಾನ್ ಆಫ್ ಬೆಂಗಾಲ್," ಎಂಬ ಖ್ಯಾತಿಯ ಸುರೇಂದ್ರನಾಥ ಬ್ಯಾನರ್ಜಿ ಅವರನ್ನು ಸೋಲಿಸಿದರು. ಪಕ್ಷೇತರವಾಗಿ ನಿಂತಿದ್ದರೂ ಕೂಡ ಸ್ವರಾಜ್‌ ಪಾರ್ಟಿ(ಕಾಂಗ್ರೆಸ್‌ ನ ಒಂದು ಅಂಗಪಕ್ಷ)ದಿಂದ ಬೆಂಬಲಿಸಲ್ಪಟ್ಟವರಾಗಿದ್ದರು. ೧೯೨೫ನಂತರ ಸಧ್ಯದಲ್ಲಿಯೇ ರಾಯ್‌ ಅವರು ಹೂಗ್ಲಿ ನದಿಯಲ್ಲಿ ನಡೆಯುತ್ತಿರುವ ಮಾಲಿನ್ಯಗಳು ಮತ್ತು ಮುಂದಿನ ದಿನಗಳಲ್ಲಿ ಅದನ್ನು ತಡೆಗಟ್ಟುವ ವಿಧಾನಗಳನ್ನು ಮಂಡಿಸಿದರು.

ಡಾ.ರಾಯ್‌ ಅವರು ಆಲ್‌ ಇಂಡಿಯಾ ಕಾಂಗ್ರೆಸ್‌ ಕಮಿಟಿಗೆ ೧೯೨೮ರಲ್ಲಿ ಆಯ್ಕೆಯಾದರು. ಅವರು ಮೇಲ್ದರ್ಜೆಗೆ ಹೋಗಬೇಕೆಂಬ ಪ್ರಯತ್ನ ಅಥವಾ ವಿವಾದಗಳಿಂದ ದೂರವೇ ಉಳಿದರು. ೧೯೨೯ರಲ್ಲಿ ಡಾ.ರಾಯ್‌ ಅವರು ಬಂಗಾಳದಲ್ಲಿ ಸಾಮಾಜಿಕ ಕ್ರಾಂತಿಯೊಂದನ್ನು ಮಾಡಿದರು ಮತ್ತು ೧೯೩೦ರಲ್ಲಿ ಪಂಡಿತ್‌ ಮೊತಿಲಾನ್‌ ನೆಹರುರವರು (CWC) ಕಾರ್ಯಕಾರಿ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡಿದರು. ಸಿ.ಡಬ್ಲೂ.ಸಿ.ಯು ವಿಧಾನಮಂಡಳವನ್ನು ಕಾನೂನು ಬಾಹಿರವೆಂದು ಜರಿಯಿತು ಮತ್ತು ಇತರ ಸದಸ್ಯರ ಜೊತೆಯಲ್ಲಿಯೇ ಡಾ.ರಾಯ್‌ ಅವರು ೨೬ ಅಗಸ್ಟ್‌ ೧೯೩೦ರಂದು ಬಂದನಕ್ಕೊಳಗಾಗಿ ಸೆಂಟ್ರಲ್‌ ಅಲಿಪುರ್‌ ಕಾರಾಗೃಹಕ್ಕೆ ತಳ್ಳಲ್ಪಟ್ಟರು.

೧೯೩೧ರಲ್ಲಿ ನಡೆದ ದಂಡಿ ಸತ್ಯಾಗ್ರಹದಲ್ಲಿ ಕಲ್ಕತ್ತಾ ಸಂಘಟನೆಯ ಹಲವಾರು ಕಾರ್ಯಕರ್ತರು ಜೈಲು ಸೇರಿದರು. ಕಾಂಗ್ರೆಸ್‌ ಡಾ.ರಾಯ್‌ ಅವರನ್ನು ಜೈಲಿಗೆ ಹೋಗದೇ ಹೊರಗುಳಿದು ಸಂಘದ ಕಾರ್ಯಗಳನ್ನು ನೋಡಿಕೊಳ್ಳುವಂತೆ ಸೂಚಿಸಿತು. ಅವರು ೧೯೩೦–೩೧ರಲ್ಲಿ ಊರ ಪ್ರಮುಖರಾಗಿ ಕಾರ್ಯ ನಿರ್ವಹಿಸಿದರು ಮತ್ತು ೧೯೩೩ರಲ್ಲಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದರು. ಇವರ ಆಳ್ವಿಕೆಯಲ್ಲಿ ಸಂಘಟನೆಯು ಉಚಿತ ಶಿಕ್ಷಣ, ಉಚಿತ ಆರೋಗ್ಯ ವ್ಯವಸ್ತೆ, ಉತ್ತಮ ರಸ್ತೆ ಸೌಲಭ್ಯ, ವಿದ್ಯುತ್‌ ವ್ಯವಸ್ತೆ, ಮತ್ತು ನೀರು ಸರಬರಾಜುಗಳನ್ನು ಉತ್ತಮಗೊಳಿಸಿತು. ಅವರು ಆಸ್ಪತ್ರೆಗಳಿಗೆ ಮತ್ತು ಉಳಿದ ಸೇವಾ ಉದ್ದೇಶಗಳಿಗೆ ಮಾಡಬೇಕಾದ ಹಣದ ಹಂಚಿಕೆಯ ಯೋಜನೆಗಳನ್ನು ರೂಪಿಸುತ್ತಿದ್ದರು ಮತ್ತು ಆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.

ಸ್ವಾತಂತ್ರ್ದ ನಂತರ

ಬದಲಾಯಿಸಿ

ಕಾಂಗ್ರೆಸ್‌ ಪಾರ್ಟಿಯು ಡಾ.ರಾಯ್‌ ಅವರ ಹೆಸರನ್ನು ಬಂಗಾಳದ ಮುಖ್ಯಮಂತ್ರಿ ಹುದ್ದೆಗೆ ಶಿಫಾರಸು ಮಾಡಿತು. ಡಾ.ರಾಯ್‌ ಅವರು ತಮ್ಮ ವೃತ್ತಿಯಲ್ಲೇ ಮುಂದುವರಿಯಲು ಆಶಿಸುತ್ತಿದ್ದರು. ಆದರೆ ಗಾಂಧೀಜಿಯವರ ಸಲಹೆಯ ಮೇರೆಗೆ ಜನವರಿ ೨೩, ೧೯೪೮ರಂದು ಅವರು ತಮ್ಮ ಹುದ್ದೆಯನ್ನಲಂಕರಿಸಿದರು. ಬಂಗಾಳದಲ್ಲಿ ಆ ಸಂದರ್ಭದಲ್ಲಿ ಕೋಮುಗಲಭೆಗಳು, ಆಹಾರ ಕೊರತೆ, ನಿರುದ್ಯೋಗ, ಮತ್ತು ಪೂರ್ವ ಪಾಕಿಸ್ತಾನದಿಂದ ವಲಸೆ ಬರುತ್ತಿರುವ ನಿರಾಶ್ರಿತರ ಸಮಸ್ಯೆಗಳಿಂದ ತುಂಬಿ ಹೋಗಿತ್ತು. ಡಾ.ರಾಯ್‌ ಅವರು ತಮ್ಮ ಪಕ್ಷದಲ್ಲಿ ಏಕತೆ ಮತ್ತು ಶಿಸ್ತನ್ನು ತಂದರು. ನಂತರ ಶಿಸ್ತಿನಿಂದ ತಮ್ಮ ಮುಂದಿರುವ ಸವಾಲುಗಳನ್ನು ಎದುರಿಸುತ್ತಾ ಸಾಗಿದರು. ಕೇವಲ ಮೂರೇ ವರ್ಷದಲ್ಲಿ ಕಾನೂನು ಮತ್ತು ಶಿಸ್ತುಗಳು ಯಾವುದಕ್ಕೂ ಹೊಂದಾಣಿಕೆ ಮಾಡಿಕೊಳ್ಳದೇ ಅವರ ಆಳ್ವಿಕೆಯಲ್ಲಿ ಜನರು ಸಕ್ರಿಯವಾಗಿ ಮತ್ತು ಸಂಯಮದಿಂದ ವರ್ತಿಸುವಂತೆ ಮಾಡುತ್ತೇನೆ ಎಂದು ಜನರಿಗೆ ಭರವಸೆ ನೀಡಿದರು.

We have the ability and if, with faith in our future, we exert ourselves with determination, nothing, I am sure, no obstacles, however formidable or insurmountable they may appear at present, can stop our progress... (if) all work unitedly, keeping our vision clear and with a firm grasp of our problems.

[ಸೂಕ್ತ ಉಲ್ಲೇಖನ ಬೇಕು]}

ದೇಶವು ಅವರನ್ನು ಫೆಬ್ರುವರಿ ೪, ೧೯೬೧ರಲ್ಲಿ ಭಾರತ ರತ್ನ ಎಂದು ಪುರಸ್ಕರಿಸಿತು. ಜುಲೈ ೧, ೧೯೬೨ ರಂದು ಬೆಳಿಗ್ಗೆ ತಮ್ಮ ರೋಗಿಗಳನ್ನು ಶುಶ್ರುಷೆ ಮಾಡಿದ ನಂತರ ರಾಜ್ಯದ ಎಲ್ಲ ಜವಾಬ್ದಾರಿಗಳನ್ನು ಕಳಚಿಕೊಂಡು "ಬ್ರಹ್ಮೋ ಗೀತ್‌"ದ ಪ್ರತಿಯನ್ನು ಓದುತ್ತಾ ಅದರಲ್ಲಿರುವ ಶಾಂತಿ ಸಂದೇಶವನ್ನು ಪಠಿಸತೊಡಗಿದರು. ಅದಾದ ಹನ್ನೊಂದು ಗಂಟೆಯಲ್ಲಿ ಡಾ.ರಾಯ್‌ ಅವರು ಇಹಲೋಕವನ್ನು ತ್ಯಜಿಸಿದರು. ಅವರು ಅವರ ಸಂಸಾರಕ್ಕಾಗಿ ತನ್ನ ತಾಯಿಯ ಹೆಸರಾದ ಅಘೋರಕಾಮಿನಿ ದೇವಿ ಹೆಸರಿನ ಆಸ್ಪತ್ರೆಯನ್ನು ಬಿಟ್ಟು ಹೋಗಿದ್ದಾರೆ. ೧೯೭೬ರಲ್ಲಿ ವೈದ್ಯಕೀಯ, ರಾಜಕೀಯ, ವಿಜ್ಞಾನ, ಮನಶಾಸ್ತ್ರ, ಸಾಹಿತ್ಯ, ಮತ್ತು ಕಲೆಗಳಲ್ಲಿ ಸಾಧನೆ ತೋರಿದವರಿಗಾಗಿ ಬಿ.ಸಿ.ರಾಯ್‌ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಕಟಿಸಲಾಯಿತು. ೧೯೬೭ರಲ್ಲಿ ನವದೆಹಲಿಯಲ್ಲಿ ಡಾ.ಬಿ.ಸಿ.ರಾಯ್‌ ಮೆಮೊರಿಯಲ್‌ ಲೈಬ್ರರಿ ಮತ್ತು ಚಿಕ್ಕ ಮಕ್ಕಳಿಗಾಗಿನ ಓದುವ ಕೊಟಡಿಯನ್ನು ಚಿಲ್ಡ್ರನ್ಸ್‌ ಬುಕ್‌ ಟ್ರಸ್ಟ್‌ನಡಿಯಲ್ಲಿ ಪ್ರಾರಂಭಮಾಡಲಾಯಿತು.

ಉಲ್ಲೇಖಗಳು‌‌

ಬದಲಾಯಿಸಿ
  1. Choudhary, Valmiki (1984). Dr. Rajendra Prasad, Correspondence and Select Documents: 1934-1937. Allied Publishers. pp. 368 (at page 133). ISBN 9788170230021.
  2. "ಆರ್ಕೈವ್ ನಕಲು". Archived from the original on 2009-11-26. Retrieved 2021-08-10.
Political offices
ಪೂರ್ವಾಧಿಕಾರಿ
Prafulla Chandra Ghosh
Chief Minister of West Bengal
1948—1962
ಉತ್ತರಾಧಿಕಾರಿ
Prafulla Chandra Sen