ಎಮ್. ಜಿ. ರಾಮಚಂದ್ರನ್

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ


'ಎಮ್ ಜಿ ರಾಮಚಂದ್ರನ್'(೧೯೧೭-೧೯೮೭) ತಮಿಳು ಭಾಷೆಯ ಖ್ಯಾತ ನಟ,ರಾಜಕಾರಣಿ. ಇವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ರಾಜ್ಯವಾಳಿದವರು.ಎಮ್.ಜಿ.ಆರ್.ಎಂದೇ ಪ್ರಖ್ಯಾತರಾದವರು.ಇವರಿಗೆ ೧೯೮೮ರಲ್ಲಿ ಮರಣೋತ್ತರವಾಗಿ ಭಾರತ ರತ್ನಪ್ರಶಸ್ತಿ ದೊರೆಯಿತು. ಎಮ್.ಜಿ.ಆರ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಮಧುರನ್ ಗೋಪಾಲನ್ ರಾಮಚಂದ್ರನ್ (17 ಜನವರಿ 1917-24 ಡಿಸೆಂಬರ್ 1987 ), 1977 ಮತ್ತು 1987 ರ ನಡುವೆ ಹತ್ತು ವರ್ಷಗಳ ಕಾಲ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಭಾರತೀಯ ನಟ, ಚಿತ್ರ ನಿರ್ಮಾಪಕ ಹಾಗೂ ರಾಜಕಾರಣಿ. ಎಮ್.ಜಿ.ಆರ್ ತಮಿಳುನಾಡು ರಾಜ್ಯ ಮತ್ತು ತಮಿಳು ಚಿತ್ರೋದ್ಯಮದ ಅತ್ಯಂತ ಪ್ರಭಾವಿ ನಟ. ಜನಸಾಮಾನ್ಯರೊಂದಿಗೆ ಜನಪ್ರಿಯವಾಗಿದ್ದ ಅವರನ್ನು ಪ್ರೀತಿ, ಅಭಿಮಾನದಿಂದ “ಮಕಲ್ ತಿಲಗಮ್” (ಪೀಪಲ್ಸ್ ಕಿಂಗ್) ಎಂದು ಕರೆಯುತ್ತಾರೆ. ತಮ್ಮ ಯೌವನ ಕಾಲದಲ್ಲಿ ಹಿರಿಯ ಸಹೋದರ ಎಮ್.ಜಿ ಚಕ್ರಪಾಣಿ ಜೊತೆ ಕುಟುಂಬಕ್ಕೆ ಬೆಂಬಲವಾಗಿದ್ದ ನಾಟಕ ತಂಡದ ಸದಸ್ಯರಾಗಿದ್ದರು. ಗಾಂದೀಜಿಯ ಆದರ್ಶಗಳಿಂದ ಪ್ರಭಾವಿತರಾಗಿದ್ದ ಎಮ್.ಜಿ.ಆರ್. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್‍ಗೆ ಸೇರಿದರು. ಕೆಲವು ವರ್ಷಗಳ ಕಾಲ ನಾಟಕದಲ್ಲಿ ಅಭಿನಯಿಸಿದ ನಂತರ, 1936ರಲ್ಲಿ ಸತಿ ಲೀಲಾವತಿ ಚಿತ್ರದ ಮೂಲಕ ಅಭಿನಯಕ್ಕೆ ಕಾಲಿಟ್ಟರು. 1940ರ ದಶಕದ ಅಂತ್ಯದ ವೇಳೆಗೆ,ಪಾತ್ರ ನಿರ್ವಹಿಸಲು ಪದವಿ ಪಡೆದು ಮುಂದಿನ ಮೂರು ದಶಕಗಳಲ್ಲಿ ತಮಿಳು ಚಿತ್ರೋದ್ಯಮದಲ್ಲಿ ಪ್ರಾಭಲ್ಯ ಸಾಧಿಸಿದರು. ಅಲ್ಲದೇ ಸಿ.ಎನ್ ಅಣ್ಣಾದೊರೈ ಅವರ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ ಪಕ್ಷ)ದ ಸದಸ್ಯರಾಗಿದ್ದರು. ಮತ್ತು ರಾಜಕೀಯ ಕ್ಷೇತ್ರದಲ್ಲಿ ದೊಡ್ಡ ನೆಲೆಯೊಂದನ್ನು ಸ್ಥಾಪಿಸಲು ಚಲನಚಿತ್ರ ತಾರೆಯಾಗಿ ತಮ್ಮ ಅಗಾಧ ಜನಪ್ರಿಯತೆಯನ್ನು ಬಳಸಿಕೊಂಡು ವೇಗವಾಗಿ ತಮ್ಮ ಶ್ರೇಣಿಯನ್ನು ತಲುಪಿದರು. ಅಣ್ಣಾ ದೊರೈ ಮರಣಾನಂತರ ಮೂರು ವರ್ಷಗಳ ನಂತರ. 1972ರಲ್ಲಿ ಡಿಎಂಕೆಯನ್ನು ತೊರೆದು, ತನ್ನ ಸ್ನೇಹಿತ ಹಾಗೂ ಪ್ರತಿಸ್ಪರ್ಧಿ ಕರುಣಾನಿಧಿಯವರ ಪಕ್ಷವಾದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಮ್ (ಎಐಡಿಎಂಕೆ) ರಚನೆಗೆ ನೇತೃತ್ವ ವಹಿಸಿದರು. ಐದು ವರ್ಷಗಳ ನಂತರ ಎಐಡಿಎಂಕೆ ನೇತೃತ್ವದ ಮೈತ್ರಿಕೂಟವನ್ನು 1977ರ ಚುನಾವಣೆಯಲ್ಲಿ ಗೆದ್ದರು. ಎಮ್.ಜಿ.ಆರ್ ತಮಿಳುನಾಡಿನ ಮುಖ್ಯಮಂತ್ರಿಯಾದರು. ಭಾರತದಲ್ಲಿ ಮುಖ್ಯಮಂತ್ರಿಯಾದ ಮೊದಲ ಚಿತ್ರನಟನೆಂಬ ಹೆಮ್ಮೆ ಇವರದ್ದು. 1980ರಲ್ಲಿ ಆರು ತಿಂಗಳುಗಳ ಮಧ್ಯಪ್ರವೇಶವನ್ನು ಹೊರತುಪಡಿಸಿ, ಅವರ ಸರ್ಕಾರವು ಕೇಂದ್ರ ಸರ್ಕಾರದಿಂದ ಪದಚ್ಯುತಗೊಂಡಿತ್ತು. ಎಐಡಿಎಂಕೆ ಪಕ್ಷವು 1980 ಮತ್ತು 1984ರ ಚುನಾವಣೆಯಲ್ಲಿ ವಿಜಯಕಂಡಿತು. ಎಮ್.ಜಿ.ಆರ್ ಆತ್ಮಚರಿತ್ರೆಯೊಂದನ್ನು ಬರೆದಿದ್ದು ಅದರ ಹೆಸರು “ನಾನ್ ಯಾನ್ ಪಿರಂಥೈನ್” (ನಾನು ಜನಿಸಿದ ಕಾರಣ). ಇದು 2003ರಲ್ಲಿ ಎರಡು ಸಂಪುಟಗಳಲ್ಲಿ ಪ್ರಕಟವಾಯಿತು.

ಎಮ್.ಜಿ.ರಾಮಚಂದ್ರನ್
ಜನನ
ಮರತ್ತೂರ್ ಗೋಪಾಲನ್ ರಾಮಚಂದ್ರನ್

(೧೯೧೭-೦೧-೧೭)೧೭ ಜನವರಿ ೧೯೧೭
ಮರಣ24 December 1987(1987-12-24) (aged 70)
Chennai, India
ಇತರೆ ಹೆಸರುಗಳುM. G. R., Puratchi Thalaivar, Makkal Thilagam
ಉದ್ಯೋಗನಟ, ರಾಜಕಾರಣಿ, ನಿರ್ಮಾಪಕ
ಸಕ್ರಿಯ ವರ್ಷಗಳು1936-1978 (Actor)
1953-1987 (Politician)
ಜೀವನ ಸಂಗಾತಿThangamani (deceased)
Sathanandavathi (deceased)
V. N. Janaki (died in 1996)
ಪ್ರಶಸ್ತಿಗಳುಭಾರತ ರತ್ನ
in 1988 (ಮರಣೋತ್ತರ)

ಆರಂಭಿಕ ಜೀವನ ಮತ್ತು ಹಿನ್ನಲೆ ಬದಲಾಯಿಸಿ

ಎಮ್.ಜಿ.ಆರ್ ಶ್ರೀಲಂಕಾದ ಕ್ಯಾಂಡಿಯಲ್ಲಿ ಜನಿಸಿದರು. ಕೇರಳದ ಪಾಲಕ್ಕಾಡ್‍ನ ಮೆಲಕ್ಕತ್ ಗೋಪಾಲ ಮೆನನ್ ಮತ್ತು ಮಾರುತೂರ್ ಸತ್ಯಭಾಮ ದಂಪತಿಗೆ ಜನಿಸಿದ ಎಮ್.ಜಿ.ಆರ್ ಹಿಂದೂ ಮಲಯಾಳಂ ಕುಟುಂಬದವರು. ನಂಬೂದರಿ ವಿಧವೆಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಎಮ್.ಜಿ.ಆರ್ ತಂದೆಗೆ ಬಹಿಷ್ಕಾರ ಮಾಡಲಾಯಿತು. ಇರಿಂಜಲಕುಡಾದಿಂದ ಬಹಿಷ್ಕøತಗೊಂಡ ನಂತರ ಎಂ.ಜಿ.ಆರ್‍ರ ತಾಯಿಯನ್ನು ಭೇಟಿಯಾದರು. ಎಂ.ಜಿ.ಆರ್ ಪೋಷಕರದ್ದು ಅಂತರ್ ಜಾತಿ ವಿವಾಹವಾಗಿತ್ತು. ಸತ್ಯಭಾಮ ಇಜ್ಞಾವ ಮತ್ತು ಗೋಪಾಲ್ ಮೆನನ್ ನಾಯರ್ ಆಗಿದ್ದರು. ಎಮ್.ಜಿ.ಆರ್ ಓರ್ವ ಮುರುಗನ್ ದೇವರ ಭಕ್ತ, ಅವರ ತಾಯಿಯ ಅಚ್ಚು ಮೆಚ್ಚಿನ ದೇವರು ಶ್ರೀ ಗುರುವಾಯೂರಪ್ಪನ್. ಎಮ್.ಜಿ.ಆರ್ ಮೊದಲು ಚಿತಾರಿಕುಲಂ ಭಾರ್ಗವಿಯೊಂದಿಗೆ ಸಪ್ತಪದಿ ತುಳಿದರು, ಅವರ ಹೆಸರು ಥಂಗಮಣಿ ಎಂದೂ ಕರೆಯಲಾಗುತ್ತಿತ್ತು. ಅನಾರೋಗ್ಯದ ಕಾರಣದಿಂದ ಆಕೆ ಮೃತಪಟ್ಟ ನಂತರ ಎರಡನೇಯದಾಗಿ ಅವರ ಮದುವೆ ಸತ್ಯಾನಂದವತಿಯೊಂದಿಗೆ ನಡೆಯಿತು. ಆಕೆಯೂ ಸಹ ಕ್ಷಯರೋಗದಿಂದ ಮದುವೆಯ ನಂತರ ತೀರಿಕೊಂಡರು. 1965ರಲ್ಲಿ ಮೂರನೇ ಬಾರಿ ಮಾಜಿ ತಮಿಳು ಚಿತ್ರನಟಿ ವಿ.ಎನ್ ಜಾನಕಿಯೊಂದಿಗೆ ವಿವಾಹವಾದರು. ಇವರು ಎಮ್.ಜಿ.ಆರ್‍ನನ್ನು ವಿವಾಹವಾಗಲು ಪತಿ ಗಣಪತಿಯವರಿಗೆ ವಿಚ್ಛೇದನ ನೀಡಿದ್ದರು.

ನಟನಾ ವೃತ್ತಿ ಬದಲಾಯಿಸಿ

ರಾಮಚಂದ್ರನ್ 1936ರಲ್ಲಿ ಅಮೇರಿಕಾದ ಚಲನಚಿತ್ರ ನಿರ್ದೇಶಕ ಎಲ್ಲಿಸ್ ಡುಂಗನ್ ನಿರ್ದೇಶಿಸಿದ ಸತೀ ಲೀಲಾವತಿ ಚಿತ್ರದಲ್ಲಿ ಅಭಿನಯಿಸಿದರು. ಸಾಮಾನ್ಯವಾಗಿ ರೊಮಾನ್ಸ್ ಅಥವಾ ಆ್ಯಕ್ಷನ್ ಚಿತ್ರಗಳಲ್ಲಿ ನಟಿಸಿದ ಎಮ್.ಜಿ.ಆರ್ 1950ರಲ್ಲಿ ಎಂ.ಕರುಣಾನಿಧಿಯವರು ಬರೆದ ಮೃತಿರಿ ಕುಮಾರಿ ಚಿತ್ರದಲ್ಲಿ ದೊಡ್ಡ ಪ್ರಗತಿಯನ್ನು ಪಡೆದರು. ಶೀಘ್ರದಲ್ಲೇ 1954ರ ಚಲನಚಿತ್ರ ಮಾಳಕಲ್ಲನ್ ಅವರ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿತು. ತಮಿಳು ಚಿತ್ರೋದ್ಯಮದಲ್ಲಿ ಮೊಟ್ಟಮೊದಲ ಗೆವಾಲಕರ್ ಚಿತ್ರವಾದ ಅಲಿಬಾಬಾವುಮ್ 40 ತಿರುಡಾರ್ಗಲೂಮ್‍ನಲ್ಲಿ ಅವರು ನಾಯಕನಾಗಿ ಅಭಿನಯಿಸಿದ್ದಾರೆ. ನಂತರದ ದಿನಗಳಲ್ಲಿ ಎಮ್.ಜಿ.ಆರ್ ತಿರುದಾಡೆ, ಎಂಗಾ ವೆಟ್ಟು ಪಿಳ್ಳೈ, ಆಯಿರಥಿಲ್ ಒರುವಾನ್, ಅನ್ಬೆ ವಾ, ಮಹಾದೇವಿ, ಪಣ ಪಡಿತವನ್, ಉಲಗಮ್ ಸೂತ್ರಂ ವಾಲಿಭನ್ ಮುಂತಾದ ಚಲನಚಿತ್ರಗಳಲ್ಲಿ ನಟಿಸಿ ಲಕ್ಷಾಂತರ ತಮಿಳರ ಹೃದಯವನ್ನು ಗೆದ್ದುಕೊಂಡರು. ರಿಕ್ಷಾಕಾರನ್ ಚಿತ್ರಕ್ಕಾಗಿ ಅವರು ಅತ್ಯುತ್ತಮ ನಟನಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು. 1973ರ ಬ್ಲಾಕ್ಬಾಸ್ಟರ್ ಉಲಗಮ್ ಸಟ್ರಮ್ ವಾಲಿಬಿನ್ ಚಿತ್ರ ಅವರ ಹಳೇಯ ಬಾಕ್ಸ್ ಆಫೀಸ್ ದಾಖಲೆಗಳನ್ನೆಲ್ಲಾ ಮುರಿದು ಹಾಕಿತು. ಆ ದಿನಗಳಲ್ಲಿ ವಿದೇಶದಲ್ಲಿ ಚಿತ್ರಿಸಿದ ಕೆಲವು ಚಿತ್ರಗಳಲ್ಲಿ ಇದೂ ಒಂದಾಗಿದೆ. ಇದನ್ನು ಸಿಂಗಪೂರ್, ಮಲೇಷ್ಯಾ, ಥೈಲ್ಯಾಂಡ್, ಹಾಂಗ್ಕಾಂಗ್ ಮತ್ತು ಜಪಾನ್‍ನಲ್ಲಿ ಚಿತ್ರೀಕರಿಸಲಾಗಿತ್ತು. ಈ ಚಿತ್ರಕ್ಕಾಗಿ ಎಂ.ಜಿ.ಆರ್ ತುಂಬಾ ಕಠಿಣ ಪರಿಶ್ರಮ ಪಟ್ಟಿದ್ದಾರೆ. ಆದರೆ ಅವರ ಪ್ರಯತ್ನ ಅಂತಿಮವಾಗಿ ವಿಫಲವಾಯಿತು. ಅವರ ನಟನಾ ವೃತ್ತಿಜೀವನದಲ್ಲಿ ಕೊನೇಯ ಚಿತ್ರವಾಗಿ 1987ರಲ್ಲಿ ಕೊನೆಗೊಂಡ ಉಳ್ಳಗಮ್ ಸಿಥಿ ಪರು ಚಿತ್ರ ಉಳಿದುಕೊಂಡಿತು. ಮೂತ್ರಪಿಂಡದ ವೈಫಲ್ಯ ಅವರಿಗೆ ಸಾವನ್ನು ತಂದುಕೊಟ್ಟಿತು.

ರಾಜಕೀಯ ವೃತ್ತಿಜೀವನ ಬದಲಾಯಿಸಿ

ಎಮ್.ಜಿ.ಆರ್ 1953ರ ವರೆಗೂ ಕಾಂಗ್ರೇಸ್ ಪಕ್ಷದ ಸದಸ್ಯರಾಗಿದ್ದರು. ಅವರು ಖಾದಿ ಬಟ್ಟೆಗಳನ್ನೇ ಹೆಚ್ಚಾಗಿ ಧರಿಸುತ್ತಿದ್ದರು. 1953ರಲ್ಲಿ ಎಮ್.ಜಿ.ಆರ್ ಡಿಎಂಕೆ ಪಕ್ಷದ ಸಂಸ್ಥಾಪಕ ಅಣ್ಣಾದೊರೈ ಒತ್ತಾಯದ ಮೇರೆಗೆ ದ್ರಾವಿಡ ಮುತ್ತೇತ್ರ ಕಳಗಂ (ಡಿಎಂಕೆ)ಗೆ ಸೇರಿದರು. ಅವರು ಸ್ಮಾರಕ ತಮಿಳು ಮತ್ತು ದ್ರಾವಿಡ ರಾಷ್ಟ್ರೀಯತಾವಾದಿ ಮತ್ತು ಡಿಎಂಕೆಯ ಪ್ರಮುಖ ಸದಸ್ಯರಾಗಿದ್ದರು. ( ದ್ರಾವಿಡ ಮುನ್ನೇತ್ರ ಕಳಗಮ್ ಅಥವಾ ದ್ರಾವಿಡ ಪ್ರಗತಿಪರ ಒಕ್ಕೂಟ). 1962ರಲ್ಲಿ ರಾಜ್ಯ ಶಾಸಕಾಂಗ ಕೌನ್ಸಿಲ್‍ನ ಸದಸ್ಯರಾದರು. ತನ್ನ 50ನೇ ವಯಸ್ಸಿನಲ್ಲಿ 1967ರಲ್ಲಿ ತಮಿಳುನಾಡು ವಿಧಾನಸಭೆಗೆ ಚುನಾಯಿತರಾದರು. ಅವರ ಗುರು. ಅಣ್ಣಾದೊರೈ ಮರಣಾನಂತರ ಎಂ.ಜಿ.ಆರ್ 1969ರಲ್ಲಿ ಡಿಎಂಕೆಯ ಖಜಾಂಚಿಯಾದರು. ಆಗ ಕರುಣಾನಿಧಿ ಮುಖ್ಯಮಂತ್ರಿಯಾಗಿದ್ದರು. 1967 ಹತ್ಯೆ ಪ್ರಯತ್ನ ನಟಿ ಮತ್ತು ರಾಜಕಾರಣಿ ಎಮ್.ಆರ್ ರಾಧಾ ಮತ್ತು ಎಮ್.ಜಿ.ಆರ್ ಅವರು 25 ಚಿತ್ರಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಜನವರಿ 12, 1967 ರಂದು ರಾಧಾ ಮತ್ತು ನಿರ್ಮಾಪಕರೋರ್ವರು ಮುಂದಿನ ಚಲನಚಿತ್ರ ಯೋಜನೆ ಬಗ್ಗೆ ಮಾತನಾಡಲು ಎಮ್.ಜಿ.ಆರ್‍ನ್ನು ಭೇಟಿ ಮಾಡಿದರು. ಸಂಭಾಷಣೆಯ ಸಮಯದಲ್ಲಿ ಎಮ್.ಆರ್ ರಾಧಾ ಎದ್ದು ನಿಂತು ಎಂ.ಜಿ.ಆರ್‍ರ ಎಡ ಕಿವಿಯ ಬಳಿ ಗುಂಡು ಹಾರಿಸಿ ನಂತರ ಸ್ವತಃ ಶೂಟ್ ಮಾಡಿಕೊಳ್ಳಲು ಪ್ರಯತ್ನಿಸಿದರು. ಶಸ್ತ್ರಚಿಕಿತ್ಸೆಯ ನಂತರ ಎಮ್.ಜಿ.ಆರ್‍ನ ಧ್ವನಿ ಬದಲಾಯಿತು. ಅವರ ಕಿವಿಯಲ್ಲಿ ಗುಂಡಿಕ್ಕಿದ ಕಾರಣ, ಎಂ.ಜಿ.ಆರ್ ತನ್ನ ಎಡ ಕಿವಿಯಲ್ಲಿ ಕೇಳುವಿಕೆಯನ್ನು ಕಳೆದುಕೊಂಡರು. ಅವರು ಮೂತ್ರ ಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. 1983ರಲ್ಲಿ ಮತ್ತಷ್ಟು ಈ ಸಮಸ್ಯೆ ಕಾಡತೊಡಗಿತು. ಶೂಟಿಂಗ್ ಘಟನೆಯ ನಂತರ ಸಿನ್ನಪ್ಪ ದೇವಾರ್ ಮೊದಲ ಬಾರಿಗೆ ಎಮ್.ಜಿ.ಆರ್ ರನ್ನು ನೋಡಲು ಆಸ್ಪತ್ರೆಗೆ ಭೇಟಿ ನೀಡಿದಾಗ ಅವರೊಂದಿಗಿನ ಮುಂದಿನ ಚಿತ್ರಕ್ಕೆ ಮುಂಗಡ ನೀಡಿದರು. ಆಸ್ಪತ್ರೆಯಿಂದ ಬಿಡುಗಡೆಗೊಂಡು ಅರಸಕತ್ತಲೈ ಮುಗಿಸಿದ ನಂತರ, ಎಂ.ಜಿ.ಆರ್ ದೇವಾರ್ ಅವರ ಚಲನಚಿತ್ರ ವಿವಾಸಾಯಿಯಲ್ಲಿ ವೈದ್ಯರ ಸಲಹೆಯ ವಿರುದ್ಧ ಅಭಿನಯಿಸಿದರು. ಶಸ್ತ್ರಚಿಕಿತ್ಸೆಯ ಕಾರಣ, ಕಾವಲ್ಕಾರನ್ ಚಿತ್ರದಲ್ಲಿ ಎಮ್.ಜಿ.ಆರ್ ಮಾತನಾಡಲು ತೊಂದರೆ ಪಡುವಂತಾಯಿತು. ಗುಂಡು ಶಾಶ್ವತವಾಗಿ ಅವರ ಕುತ್ತಿಗೆಯಲ್ಲಿ ಇದ್ದ ಕಾರಣ ಅವರ ಧ್ವನಿ ಹಾನಿಗೊಳಗಾಯಿತು. ಕಾವಲ್ಕಾರನ್ ಚಿತ್ರದಲ್ಲಿ 1967ರಲ್ಲಿ ಜಯಲಲಿತಾ ಜೊತೆ ನಟಿಸಿದ್ದಾರೆ. ಪೆಟ್ರಾಥಾನ್ ಪಿಳ್ಳಾಯ ಎಮ್.ಜಿ.ಆರ್-ಎಮ್.ಆರ್ ರಾಧಾÀವರ ಕೊನೇಯ ಚಿತ್ರ. ಎಮ್.ಜಿ.ಆರ್ ಶೂಟೌಟ್‍ಗೆ ಗುರಿಯಾಗುವ ಕೆಲವೇ ದಿನಗಳ ಮುಂಚೆ ಚಿತ್ರೀಕರಣವು ಕೊನೆಗೊಂಡಿತ್ತು. ಚಿತ್ರೀ ಕರಣದ ಕೆಲವೇ ಗಂಟೆಗಳಲ್ಲಿ ಸುಮಾರು 50000 ಅಭಿಮಾನಿಗಳು ಎಂ.ಜಿ.ಆರ್‍ರನ್ನು ಆಸ್ಪತ್ರೆಗೆ ಸೇರಿಸಿದರು. ಜನರು ಬೀದಿ ಬೀದಿಗಳಲ್ಲಿ ಘೋಷಣೆಗಳನ್ನು ಕೂಗಿದರು,

ಡಿಎಂಕೆ ಮತ್ತು ಎಐಡಿಎಂಕೆ ರಚನೆಯಿಂದ ವಿಭಜನೆ ಬದಲಾಯಿಸಿ

1972ರಲ್ಲಿ ಡಿಎಂಕೆ ಪಕ್ಷದ ನಾಯಕ ಕರುಣಾನಿಧಿ ಅವರ ಮೊದಲ ಮಗ ಎಂ.ಕೆ ಮುತ್ತು ಚಿತ್ರರಂಗ ಮತ್ತು ರಾಜಕೀಯದಲ್ಲಿ ದೊಡ್ಡ ರೀತಿಯಲ್ಲಿ ಯೋಜಿಸಲು ಪ್ರಾರಂಭಿಸಿದರು. ಎಮ್.ಜಿ.ಆರ್ ಅಣ್ಣಾದೊರೈ ನಿಧನದ ಬಳಿಕ ಪಕ್ಷದಲ್ಲಿ ಭ್ರಷ್ಟಾಚಾರ ಬೆಳೆದಿದೆ ಎಂದು ಹೇಳಲು ಆರಂಭಿಸಿದರು. ಡಿಎಂಕೆಯಿಂದ ಹೊರಹಾಕಲ್ಪಟ್ಟ ನಂತರ, ಅವರ ಸ್ವಯಂಸೇವಕ ಅನಕಪುತ್ತೂರ್ ರಾಮಲಿಂಗಂ ಅವರು ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಎಂಬ ಹೊಸ ಪಕ್ಷವನ್ನು ಪ್ರಾರಂಭಿಸಿದರು, ಆ ಪಕ್ಷದ ಸದಸ್ಯರಾಗಿ ಸೇರಿಕೊಂಡರು ಮತ್ತು ಅದರ ನಾಯಕ ಮತ್ತು ಪ್ರಧಾನ ಕಾರ್ಯದರ್ಶಿಯಾದರು.. ಡಿ.ಎಮ್.ಕೆಯಿಂದ ಹೊರಗುಳಿದ ನಂತರ ರಾಮಚಂದ್ರನ್ ಅವರು ಹೊಸ ಪಕ್ಷವೊಂದನ್ನು ಹುಟ್ಟುಹಾಕಿದರು. ಅದಕ್ಕೆ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಮ್ ಎಂದು ನಾಮಕರಣ ಮಾಡಿದರು. ನಂತರ ಡಿಎಂಕೆಯ ಏಕೈಕ ಪ್ರಭಲ ಎದುರಾಳಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ(ಎಐಡಿಎಂಕೆ) ಎಂದು ಮರುನಾಮಕರಣ ಮಾಡಿದರು. 1963 ಮತ್ತು 1977ರ ನಡುವೆ ನೇತ್ರು ಇಂದರು ನಾಲೈ (1974), ಇಥಾಯಕನಿ (1975), ಇಂಡ್ರೋ ಪೋಲ್ ಎಂಡ್ರುಮ್ ವಝ್ಗಾ (1977) ಮುಂತಾದ ಚಲನಚಿತ್ರಗಳೊಂದಿಗೆ ಅವರ ಪಕ್ಷದ ಮಹತ್ವಾಕಾಂಕ್ಷೆಯನ್ನು ಹರಡಲು ಮತ್ತು ಬೋಧಿಸಲು ತೊಡಗಿದರು. ಟಿ.ಎಮ್ ಅಸ್ಸೆಂಬ್ಲಿಯಲ್ಲಿ ಸತತ ಯಶಸ್ಸು

1977ರ ವಿಧಾನಸಭೆ ಚುನಾವಣೆಗಳು ಬದಲಾಯಿಸಿ

ಎಐಡಿಎಂಕೆ ತಮಿಳುನಾಡಿನ 1977 ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿತು. ಎಡಿಎಂಕೆ, ಡಿಎಂಕೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಐಎನ್‍ಸಿ) ಮತ್ತು ಜನತಾ ಪಾರ್ಟಿ ಹೀಗೆ ನಾಲ್ಕು ಪಕ್ಷಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. ಎಡಿಎಂಕೆ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದೊಂದೊಗೆ ಮೈತ್ರಿ ಮಾಡಿಕೊಂಡರು. ಆದರೆ ಐಎನ್‍ಸಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಸಿಪಿಐ) ಮಿತ್ರರಾಷ್ಟ್ರಗಳಾಗಿ ಸ್ಪರ್ಧಿಸಿತು. ಡಿಎಂಕೆ ಮತ್ತು ಜನತಾಪಕ್ಷ ಮಾತ್ರ ಚುನಾವಣೆಯಲ್ಲಿ ಸ್ಪರ್ಥಿಸಿತು. ಈ ಚುನಾವಣೆಗಳಿಗೆ ಕೇವಲ ಮೂರು ತಿಂಗಳುಗಳ ಮುನ್ನ ಸಂಸತ್ತಿನ ಚುನಾವಣೆಗಳಲ್ಲಿ ಎರಡು ಮುಖ್ಯ ಮೈತ್ರಿಗಳು ನಡೆದಿವೆ. ಎಡಿಎಂಕೆ ನೇತೃತ್ವದ ಎಡಿಎಂಕೆ-ಐಎನ್‍ಸಿ-ಸಿಪಿಐ ಒಕ್ಕೂಟ ಮತ್ತು ಡಿಎಂಕೆ ನೇತೃತ್ವದ ಡಿಎಂಕೆ-ಎನ್‍ಸಿಒ-ಜೆಎನ್‍ಪಿ-ಸಿಪಿಎಂ ಒಕ್ಕೂಟಗಳು ಮುನ್ನಡೆಸಿತು. ಆದರೆ ಸಂಸತ್ತಿನ ಚುನಾವಣೆಯ ನಂತರದ ತಿಂಗಳುಗಳಲ್ಲಿ ಈ ಒಕ್ಕೂಟಗಳು ಒಡೆದುಹೋದವು. ಎಐಡಿಎಂಕೆ ಮೈತ್ರಿ 234ರಲ್ಲಿ 144 ಸ್ಥಾನಗಳನ್ನು ಗೆಲ್ಲುವ ಮೂಲಕ ಎಂ.ಜಿ.ಆರ್ ತಮಿಳುನಾಡಿನ ಮುಖ್ಯಮಂತ್ರಿಯಾದರು. 1977ರ ರಾಜ್ಯ ಚುನಾವಣೆಯನ್ನು ಯಶಸ್ವಿಯಾಗಿ ಗೆದ್ದ ನಂತರ ಎಂ.ಜಿ.ರಾಮಚಂದ್ರನ್ 1977ರ ಜೂನ್ 30ರಂದು ತಮಿಳುನಾಡಿನ ಮುಖ್ಯಮಂತ್ರಿಯಾದರು. 1987ರ ವರೆಗೆ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದರು. ಎಂ.ಜಿ.ಆರ್ ಜೀವಂತವಾಗಿ ಇರುವವರೆಗೆ ಎಐಡಿಎಂಕೆ ಪಕ್ಷ ಪ್ರತೀ ರಾಜ್ಯ ಸಭೆಯ ಚುನಾವಣೆಯಲ್ಲಿ ಜಯಗಳಿಸಿತ್ತು. ಮುಖ್ಯಮಂತ್ರಿಯಾಗುವ ಮೊದಲು ಎಂ.ಜಿ.ಆರ್ ಭಾರತದ ಮುಖ್ಯಮಂತ್ರಿಯಾಗಿದ್ದ ಮೊದಲ ಜನಪ್ರಿಯ ನಟ.

ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸಾಧನೆಗಳು ಬದಲಾಯಿಸಿ

ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸಾಮಾಜಿಕ ಅಭಿವೃದ್ಧಿ, ವಿಶೇಷವಾಗಿ ಶಿಕ್ಷಣಕ್ಕೆ ಮಹತ್ತರ ಒತ್ತು ನೀಡಿದರು. ಅವರ ಅತ್ಯಂತ ಯಶಸ್ವಿ ನೀತಿಗಳಲ್ಲಿ ಒಂದಾದ “ಮಧ್ಯಾಹ್ನ ಮೀಲ್ ಸ್ಕೀಮ್” ಪರಿವತನೆಗೊಂಡಿದ್ದು, ಜನಪ್ರಿಯ ಕಾಂಗ್ರೇಸ್ ಮುಖ್ಯಮಂತ್ರಿ ಮತ್ತು ರಾಜಕಾರಣಿ ಕೆ.ಕಾಮರಾಜರಿಂದ ಪರಿಚಯಿಸಲ್ಪಟ್ಟಿತು. ಇದು ಬಡ ಮಕ್ಕಳನ್ನೂ ಸಹ ಶಾಲೆ ಕಡೆಗೆ ತಲೆ ಹಾಕುವಂತೆ ಮಾಡಿದೆ. ಸರ್ಕಾರದಲ್ಲಿ “ಎಂ.ಜಿ.ಆರ್‍ನ ಪೌಷ್ಟಿಕ ಆಹಾರ ಯೋಜನೆ” ಹೆಚ್ಚಿನ ಪೌಷ್ಟಿಕಾಂಶವನ್ನು ನೀಡುವ ಮೂಲಕ ಅನುದಾನಿತ ಶಾಲಾ ಮಕ್ಕಳಿಗೂ ಲಭ್ಯವಾಗುವಂತೆ ಮಾಡಿದ್ದಾರೆ. ಈ ಯೋಜನೆಯು 1982ರಲ್ಲಿ 1 ಶತಕೋಟಿ ವೆಚ್ಚದಲ್ಲಿ ಮಾಡಲಾಯಿತು. ರಾಜ್ಯದ 120,000 ಮಕ್ಕಳು ಇದರ ಪ್ರಯೋಜನ ಪಡೆದರು. ಅಲ್ಲದೇ ಮಹಿಳೆಯರಿಗಾಗಿ ವಿಶೇಷ ಬಸ್‍ಗಳನ್ನು ಪರಿಚಯಿಸಿದರು. ಜೊತೆಗೆ ರಾಜ್ಯದಲ್ಲಿ ಮದ್ಯ ನಿಷೇಧ ಕಾರ್ಯರೂಪಕ್ಕೆ ತಂದರು. ಹಳೆಯ ದೇವಾಲಯ ಹಾಗೂ ಸ್ಮಾರಕಗಳ ಸಂರಕ್ಷಣೆ ಜೊತೆಗೆ ರಾಜ್ಯದ ಪ್ರವಾಸಿ ಆದಾಯವನ್ನು ಹೆಚ್ಚಿಸಿದರು. 1950ರ ಉಚಿತ ಮಿಡ್-ಡೇ ಊಟವನ್ನು ಒದಗಿಸಿದ ಎಮ್.ಜಿ.ಆರ್ ಕೊಡಂಬಾಕಂನ ಉನ್ನತ ಮಾಧ್ಯಮಿಕ ಶಾಲೆ ಎಂಬ ಉಚಿತ ಶಾಲೆಯನ್ನು ಸಿನಿಮಾ ತಂತ್ರಜ್ಞರ ಮಕ್ಕಳಿಗೆ ಸ್ಥಾಪಿಸಿದರು. ಮತ ಪ್ರಚಾರದಲ್ಲಿ ಭಾಗವಹಿಸದೇ ಇದ್ದರೂ 1984ರ ವಿಧಾನ ಸಭಾ ಚುಮಾವಣೆಯಲ್ಲಿ ಗೆಲುವು ಸಾಧಿಸಿದರು. ಆ ಸಮಯದಲ್ಲಿ ಅಮೇರಿಕಾದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಕಾರಣದಿಂದ ಮತ ಪ್ರಚಾರದಲ್ಲಿ ಪಾಲ್ಗೊಂಡಿರಲಿಲ್ಲ. ಆದರೂ 56% ನಷ್ಟು ಶಾಸನ ಸಭೆ ಸ್ಥಾನಗಳಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಇದು ಅವರ ಜನಪ್ರಿಯ ಬೆಂಬಲದ ಆಳವನ್ನು ತೋರಿಸುತ್ತದೆ. ಒಂದು ದಶಕಕ್ಕೂ ಹೆಚ್ಚಿನ ಅವಧಿಯ ಮುಖ್ಯಮಂತ್ರಿಯಾಗಿದ್ದಾರೆಂಬ ದಾಖಲೆಯನ್ನು ಎಂ.ಜಿ.ಆರ್ ಹೊಂದಿದ್ದಾರೆ. ಭಾರತ ರತ್ನ ಭಾರತ ರತ್ನ ಪ್ರಶಸ್ತಿ ಪಡೆದವರಲ್ಲಿ ಇವರು ತಮಿಳುನಾಡಿನ ಎರಡನೇ ಮುಖ್ಯಮಂತ್ರಿ. 1987ರಲ್ಲಿ ಅವರ ಸಾವಿನ ನಂತರ ಭಾರತ ರತ್ನ ಪ್ರಶಸ್ತಿ ಇವರಿಗೆ ದಕ್ಕಿತು. ಪ್ರಶಸ್ತಿಯ ಸಮಯವು ಸ್ವಲ್ಪ ವಿವಾದಾಸ್ಪದವಾಯಿತಾದರೂ ನಂತರ ಪರಿಹಾರಗೊಂಡು ಪ್ರಶಸ್ತಿ ನೀಡಲಾಯಿತು.

ಪ್ರಶಸ್ತಿಗಳು ಬದಲಾಯಿಸಿ

ಎಂಗಾ ವೆಟ್ಟು ಪಿಳ್ಳೈ ಚಿತ್ರಕ್ಕಾಗಿ ವಿಶೇಷ ದಕ್ಷಿಣ ಫಿಲ್ಮ್ಫೇರ್ ಪ್ರಶಸ್ತಿ ಅಡೀಮಾಯ್ ಪೆನ್ ಚಿತ್ರಕ್ಕಾಗಿ ಫಿಲ್ಮ್ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ 1971ರಲ್ಲಿ ರಿಕ್ಷಾಕಾರನ್ ಚಿತ್ರಕ್ಕಾಗಿ ಅತ್ಯುತ್ತಮ ನಟ ಎಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ. 1974ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯ ಹಾಗೂ ವಿಶ್ವ ವಿದ್ಯಾಲಯದಿಂದ( ಅರಿಝೋನಾ) ಗೌರವ ಡಾಕ್ಟರೇಟ್ ಪ್ರಶಸ್ತಿ. 1988ರಲ್ಲಿ ಭಾರತ ಸರ್ಕಾರವು ಚಲನಚಿತ್ರ ಮತ್ತು ರಾಜಕೀಯದಲ್ಲಿನ ಕೊಡುಗೆಗಳಿಗಾಗಿ (ಮರಣೋತ್ತರವಾಗಿ) ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು. ಕುಡಿಯಿರುಂಧ ಕೊಯಿಲ್ ಚಿತ್ರಕ್ಕಾಗಿ ಅತ್ಯುತ್ತಮ ನಟ ಎಂದು ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ. ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಚಿತ್ರ-1969ರಲ್ಲಿ ಪ್ರಥಮ ಪ್ರಶಸ್ತಿ. ಲೋಕೋಪಕಾರ ಬೆಂಕಿ, ಪ್ರವಾಹ, ಬರ ಮತ್ತು ಚಂಡಮಾರುತಗಳಂತಹ ವಿಪತ್ತಿನಲ್ಲಿ ಅವರು ವೈಯಕ್ತಿಕವಾಗಿ ಪರಿಹಾರ ನೀಡಿದವರು. 1962ರಲ್ಲಿ ಚೀನಾದೊಂದಿಗೆ ನಡೆದ ಯುದ್ಧಕ್ಕೆ ಮೊದಲ ದಾನಿಯಾಗಿದ್ದರು (ಸೈನೋ-ಇಂಡಿಯನ್ ವಾರ್), ಯುದ್ಧ ನಿಧಿಗಾಗಿ ರೂ 75,000 ನೀಡಿದವರು. ತಮಿಳಿನ ಥಾಯ್ ವಾರಪತ್ರಿಕೆ ಹಾಗೂ ಅಣ್ಣಾ ದಿನ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾಗಿದ್ದರು. ಅವರ ಹಲವು ಚಲನಚಿತ್ರ ನಿರ್ಮಿಸಲ್ಪಟ್ಟ ಸತ್ಯ ಸ್ಟುಡಿಯೋಸ್ ಹಾಗೂ ಎಂಜೆಯಾರ್ ಪಿಕ್ಚರ್ಸ್‍ನ ಮಾಲಿಕರಾಗಿದ್ದರು. ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಅರ್ಥ ಕಿಲೋಗ್ರಾಮ್ ತೂಕದ ಚಿನ್ನದ ಖಡ್ಗವನ್ನು ಕೊಡುಗೆಯಾಗಿ ನೀಡಿದ್ದಾರೆ. ಅನಾರೋಗ್ಯ ಮತ್ತು ಸಾವು ಚೆನೈನ ಮರೀನಾ ಕಡಲತೀರದಲ್ಲಿ ಎಮ್.ಜಿ.ಆರ್‍ನ ಸಮಾಧಿ ಮತ್ತು ಸ್ಮಾರಕ 1984 ಅಕ್ಟೋಬರ್‍ನಲ್ಲಿ ಎಮ್, ಜಿ, ಆರ್‍ಗೆ ಮೂತ್ರಪಿಂಡದ ವೈಫಲ್ಯವಿದೆ ಎಂದು ತಿಳಿದುಬಂತು, ಇದು ಮಧುಮೇಹ, ಲಘು ಹೃದಯಾಘಾತ ಮತ್ತು ಬೃಹತ್ ಸ್ಟ್ರೋಕ್‍ಗಳಿಂದ ಮತ್ತಷ್ಟು ಸಂಕೀರ್ಣಗೊಂಡಿತು. ಅವರು ಯುನೈಟೆಡ್ ಸ್ಟೇಟ್‍ನ ಬ್ರೂಕ್ಲಿನ್‍ನ ಡೌನ್ಸ್ಟೇಟ್ ವೈದ್ಯಕೀಯ ಕೇಂದ್ರಕ್ಕೆ ಮೂತ್ರಪಿಂಡ ಕಸಿಗೆ ಚಿಕಿತ್ಸೆಗಾಗಿ ತೆರಳಿದರು. ನಂತರ ಫೆಬ್ರವರಿ 4, 1985 ರಂದು ಚೆನೈಗೆ ಮರಳಿದರು. ಫೆಬ್ರವರಿ 10, 1985 ರಂದು ಸತತ ಮೂರನೇ ಬಾರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ನಂತರದ ಎರಡು ವರ್ಷ 10 ತಿಂಗಳುಗಳ ಕಾಲ ಯುನೈಟೆಡ್ ಸ್ಟೇಟ್‍ಗೆ ಚಿಕಿತ್ಸೆಗಾಗಿ ವೆಚ್ಚ ಮಾಡಲಾಯಿತು. ಎಮ್.ಜಿ.ಆರ್ ತನ್ನ ಅನಾರೋಗ್ಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲೇ ಇಲ್ಲ. ದೀರ್ಘಕಾಲದ ಅನಾರೋಗದಿಂದ ಡಿಸೆಂಬರ್ 24, 1987ರಂದು ಮನಾಪಕ್ಕಂನ ರಾಮಾವರಾಮ್ ಗಾರ್ಡನ್ಸ್ ನಿವಾಸದಲ್ಲಿ ಬೆಳಗ್ಗೆ 3:30ಕ್ಕೆ ನಿಧನರಾದರು. ಸುಮಾರು 71 ವರ್ಷ ವಯಸ್ಸಿನ ಎಮ್.ಜಿ.ಆರ್‍ರ ಮರಣವು ರಾಜ್ಯದಾದ್ಯಂತ ಗಲಭೆ ಎಬ್ಬಿಸಿತು. ಜನರು ಅಂಗಡಿ, ಚಿತ್ರಮಂದಿರ, ಬಸ್ಸು ಮತ್ತು ಇತರ ಸಾರ್ವಜನಿಕ ಮತ್ತು ಖಾಸಗಿ ವಸುಗಳ ಮೇಲೆ ಹಿಂಸಾಚಾರಗಳು ನಡೆದವು. ಪರಿಸ್ಥಿತಿಯನ್ನು ಹಿಡಿತಕ್ಕೆ ತರಲು ಪೊಲೀಸರು ಶೂಟ್-ಎಟ್-ಸೈಟ್ ಆದೇಶ ಹೊರಡಿಸಬೇಕಾಗಿ ಬಂತು. ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ವರೆಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಅಂತ್ಯಕ್ರಿಯೆಯ ಸಂದರ್ಭದಲ್ಲೂ 29 ಜನ ಮೃತಪಟ್ಟು ಹಾಗೂ 47 ಪೊಲೀಸ್ ಸಿಬ್ಬಂದಿಯನ್ನು ತೀವ್ರವಾಗಿ ಗಾಯಗೊಳಿಸುವಲ್ಲಿಯವರೆಗೆ ಹಿಂಸಾಚಾರ ಮುಂದುವರೆದಿತ್ತು. ತಮಿಳುನಾಡಿನಲ್ಲಿ ಸುಮಾರು ಒಂದು ತಿಂಗಳುಗಳ ಕಾಲ ಈ ಹಿಂಸಾಚಾರ ಮುಂದುವರೆಯಿತು. ಸುಮಾರು ಒಂದು ಮಿಲಿಯನ್ ಜನರು ಎಮ್.ಜಿ.ಆರ್‍ರನ್ನು ಅನುಸರಿಸುತ್ತಿದ್ದವರಾಗಿದ್ದರು. ಸುಮಾರು 30 ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡರು. ಎಮ್.ಜಿ.ಆರ್‍ರ ಮರಣಾನಂತರ ಅವರ ರಾಜಕೀಯ ಪಕ್ಷ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಮ್ ಎಮ್.ಜಿ.ಆರ್ ಪತ್ನಿ ಜಾನಕಿ ರಾಮಚಂದ್ರನ್ ಹಾಗೂ ಜೆ ಜಯಲಲಿತರಿಗೆ ವಿಭಜನೆಯಾಯಿತು. ನಂತರ 1988ರಲ್ಲಿ ಇಬ್ಬರೂ ಜೊತೆಗೊಂಡರು.

ಚಲನಚಿತ್ರಗಳ ಪಟ್ಟಿ ಬದಲಾಯಿಸಿ

ನಿರ್ಮಾಪಕ ಮತ್ತು ನಿರ್ದೇಶಕನಾಗಿ 1958-ನಾಡೋಡಿ ಮನ್ನನ್-ನಿರ್ಮಾಪಕ ಮತ್ತು ನಿರ್ದೇಶಕ 1969-ಅಡಿಮಾಯ್ ಪೆನ್- ನಿರ್ಮಾಪಕ 1973-ಉಲಗಮ್ ಸೂತ್ರಮ್ ವಲಿಬನ್- ನಿರ್ಮಾಪಕ ಮತ್ತು ನಿರ್ದೇಶಕ 1977-ಮಧುರೈಯಿ ಮೀಟ್ಟಾ ಸುಂದರರಾಂಡಿಯನ್-ನಿದೇಶಕ.