ಅಮೆರಿಕ

ಉತ್ತರ ಅಮೆರಿಕ, ಮಧ್ಯ ಅಮೆರಿಕ ಮತ್ತು ದಕ್ಷಿಣ ಅಮೆರಿಕ ಪ್ರದೇಶಗಳನ್ನು ಒಳಗೊಂಡ ಭೂಭಾಗ
(ಅಮೆರೀಕ ಇಂದ ಪುನರ್ನಿರ್ದೇಶಿತ)

ಅಮೆರಿಕಸ್ ಅಥವಾ ಅಮೆರಿಕ ವು,[][]ಸ್ಪ್ಯಾನಿಷ್: Américaಪೋರ್ಚುಗೀಸ್:AméricaFrench: AmériqueDutch: [Amerika] Error: {{Lang}}: text has italic markup (help) ಪಶ್ಚಿಮ ಗೋಳಾರ್ಧದಲ್ಲಿರುವ ಭೂಪ್ರದೇಶ. ಅದು ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಖಂಡಗಳು, ದ್ವೀಪ ಪ್ರದೇಶಗಳು ಮತ್ತು ಪ್ರಾಂತ್ಯಗಳನ್ನು ಒಳಗೊಂಡ ಹೊಸ ಜಗತ್ತಾಗಿ ರೂಪುಗೊಂಡಿದೆ. ಅಮೆರಿಕ ಎಂಬ ಪದವು ಆಂಗ್ಲಭಾಷೆಯಲ್ಲಿ ವಿಭಿನ್ನಾರ್ಥ ನೀಡುತ್ತದೆಯಾದರೂ, ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಈ ಪದದಿಂದ ಹೆಚ್ಚಾಗಿ ಮತ್ತು ಸಾಮಾನ್ಯವಾಗಿ ಪ್ರಬೋಧಿಸುತ್ತಾರೆ.[][] ಪೃಥ್ವಿಯ ಒಟ್ಟು ಮೇಲ್ಮೈಯ ಶೇಕಡ 8.3 ರಷ್ಟು ಪ್ರದೇಶವನ್ನು ಅಮೆರಿಕ ಆವರಿಸಿಕೊಂಡಿದೆ ( ಶೇಕಡ 28.4 ರಷ್ಟೂ ಭೂಭಾಗ) ಮತ್ತು ಒಟ್ಟು ಜನಸಂಖ್ಯೆಯ ಶೇಕಡ 13.5 ರಷ್ಹ್ಟು ಜನಸಾಂದ್ರತೆಯನ್ನು ಹೊಂದಿದೆ(ಸುಮಾರು 900 ಮಿಲಿಯನ್ ಜನಸಂಖ್ಯೆ). ಅಮೇರಿಕಾ ದೇಶವನ್ನು ಕೊಲಂಬಸ್ ಸಮುದ್ರದ ಮೂಲಕ ಅನ್ವೇಷಿಸಿದ್ದರು.

Area42,549,000 km2
Population910,720,588 (July 2008 est.)
Population density21 km2 (55/sq mi)
DemonymAmerican
Countries35
Dependencies23
List of countries and territories in the Americas
LanguagesSpanish, English, Portuguese, ಫ್ರೆಂಚ್, and many others
Time zonesUTC-10 to UTC
ಸಿಐಎ ರಾಜಕೀಯ ನಕ್ಷೆ ಮೂಲಕ ಅಮೆರಿಕಾದಲ್ಲಿನ ಸಮಾನಾಂತರ-ಪ್ರದೇಶಗಳ ಭವಿಷ್ಯದ ಅಂದಾಜು

ಇತಿಹಾಸ

ಬದಲಾಯಿಸಿ

ಗೊಂಡ್ವಾನಾಲ್ಯಾಂಡ್ ಬೃಹತ್ ಖಂಡದಲ್ಲಿದ್ದ ದಕ್ಷಿಣ ಅಮೆರಿಕವು 135 [[ಮಿಲಿಯನ್ ವರ್ಷಗಳ ಹಿಂದೆ (ಎಂಎ)|ಮಿಲಿಯನ್ ವರ್ಷಗಳ ಹಿಂದೆ (ಎಂಎ)]]ವಿಭಜನೆಯಾಗಿ, ಸ್ವತಂತ್ರ ಖಂಡವಾಗಿ ರೂಪುಗೊಂಡಿತು.[] 15 ಮಿಲಿಯನ್ ವರ್ಷಗಳ ಆರಂಭದಲ್ಲಿ, ವೆಸ್ಟ್ ಇಂಡೀಸ್ ದ್ವೀಪ ಮತ್ತು ಪೆಸಿಫಿಕ್ ಸಾಗರದ ನಡುವಿನ ಅಪ್ಪಳಿಕೆಯ ಪರಿಣಾಮವಾಗಿ ಈ ಭಾಗದ ಗಡಿಯುದ್ಧಕ್ಕೂ ಸರಣಿ ಜ್ವಾಲಾಮುಖಿಗಳು ಸಂಭವಿಸಿ, ಹಲವಾರು ದ್ವೀಪಪ್ರದೇಶಗಳು ಸೃಷ್ಟಿಯಾದವು. ಮಧ್ಯ ಅಮೆರಿಕದ ದ್ವೀಪ ಸಮುದಾಯದ ಕಣಿವೆಗಳಲ್ಲಿ ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕ ಅಳಿದುಳಿದ ಭೂಭಾಗ ಆವೃತಗೊಂಡಿದೆ. ಜೊತೆಗೆ ನಿರಂತರ ಜ್ವಾಲಾಮುಖಿಯಿಂದ ಹೊಸ ಭೂಭಾಗ ಸೃಷ್ಟಿಯಾಗಿದೆ. 3 ಮಿಲಿಯನ್ ವರ್ಷಗಳಲ್ಲಿ, ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕವನ್ನು ಪನಾಮಾ ಭೂಸಂಧಿಗೆ ಜೋಡಿಸಿದ ತರುವಾಯ, ಏಕೈಕ ಅಮೆರಿಕ ಭೂಪ್ರದೇಶವನ್ನು ರೂಪಿಸಲಾಯಿತು.[]

ವಸಾಹತು

ಬದಲಾಯಿಸಿ

ಶಿಲಾಯುಗದ ಭಾರತೀಯರು ಅಮೆರಿಕ ಮತ್ತು ಅಲ್ಲಿನ ಎಲ್ಲಾ ಭಾಗಗಳಿಗೆ ವಲಸೆ ಹೋಗಿರುವ ನಿಖರ ದಿನಾಂಕ ಮತ್ತು ಸಂಚರಿಸಿರುವ ಮಾರ್ಗಗಳ ಕುರಿತು ಸಂಶೋಧನೆ ಮತ್ತು ಸಮಾಲೋಚನೆ ನಡೆಯುತ್ತಿದೆ.[] 17 ಸಾವಿರ ವರ್ಷಗಳ ಹಿಂದೆ, ಶಾಶ್ವತ ಹಿಮ ಪದರ ಆವೃತವಾದ ಪರಿಣಾಮವಾಗಿ, ಅಮೆರಿಕದ ಸಾಗರ ಮಟ್ಟ ಗಣನೀಯವಾಗಿ ಕುಸಿದಿತ್ತು. ಆ ಸಂದರ್ಭದಲ್ಲಿ, ಸುಮಾರು ೪೦ ಸಾವಿರದಷ್ಟಿದ್ದ ಭಾರತೀಯ ಮೂಲದ ಈ ಪೂರ್ವಜರು, ಪೂರ್ವ ಸೈಬೀರಿಯಾ ಮತ್ತು ಈಗಿನ ಅಲಸ್ಕಾ ನಡುವೆ ಇರುವ ಬೆರಿಂಜಿಯಾ ಭೂಸೇತುವೆಯ ಕಡೆಗೆ ವಲಸೆ ಹೋಗಿದ್ದರು ಎಂಬ ಸಾಂಪ್ರದಾಯಿಕ ನಂಬಿಕೆ ಅಥವಾ ಸಿದ್ಧಾಂತ ಇದೆ.[][] ಅಲ್ಲದೆ, ಇವರು ಲಾರೆಂಟೈಡ್ ಮತ್ತು ಕಾರ್ಡಿಲ್ಲೆರನ್ ಹಿಮ ಪದರಗಳ ಮಧ್ಯೆ ಹಾದು ಹೋಗಿರುವ ಹಿಮಮುಕ್ತ ಮಾರ್ಗಗಳಲ್ಲಿ ಸಂಚರಿಸಲು ಪ್ಲೆಸ್ಟೊಸಿನ್ ಮೆಗಾಫಾನ ಸಸ್ತನಿಯಂತಹ ದೊಡ್ಡ ದೊಡ್ಡ ಪ್ರಾಣಿಗಳನ್ನು ಅವಲಂಬಿಸುತ್ತಿದ್ದರು ಎಂದು ನಂಬಲಾಗಿದೆ.[] ಪ್ರಸ್ತಾಪಿಸಲಾಗಿರುವ ಮತ್ತೊಂದು ಮಾರ್ಗವೆಂದರೆ, ಅವರು ಕಾಲ್ನಡಿಗೆ ಅಥವಾ ಪ್ರಾಚೀನ ದೋಣಿಗಳನ್ನು ಬಳಸಿ, ಪೆಸಿಫಿಕ್ ವಾಯವ್ಯ ಕರಾವಳಿಯಿಂದ ದಕ್ಷಿಣ ಅಮೆರಿಕಕ್ಕೆ ವಲಸೆ ಹೋಗಿದ್ದರು.[] ಕೊನೆಯಲ್ಲಿ ಪ್ರಸ್ತಾಪಿಸಲಾಗಿರುವ ಮಾರ್ಗಕ್ಕೆ ಸಂಬಂಧಿಸಿದ ಪುರಾವೆಗಳನ್ನು, ಕೊನೆಯ ಹಿಮಯುಗದಲ್ಲಿ ನೂರಾರು ಮೀಟರ್‍ನಷ್ಟು ಏರಿಕೆಯಾದಸಮುದ್ರ ಮಟ್ಟದ ಆಧಾರದ ಮೇಲೆ ಒದಗಿಸಲಾಗಿದೆ.[೧೦] ಸುಮಾರು 16,500 ವರ್ಷಗಳ ಹಿಂದೆ ಬೆರಿಂಜಿಯಾ (ಪೂರ್ವ ಅಲಸ್ಕಾ)ಕ್ಕೆ ವಲಸೆ ಹೋದ ಶಿಲಾಯುಗದ ಭಾರತೀಯರ ಸಂಖ್ಯೆ 40,000 ಪ್ರಮಾಣದಲ್ಲಿ ಇದ್ದಿರಬಹುದು ಎಂಬುದು ಪುರಾತನವಸ್ತು ಶಾಸ್ತ್ರಜ್ಞರ ತರ್ಕ.[೧೧][೧೨][೧೩] ವಲಸೆಯ ಕಾಲದ ಬಗ್ಗೆ ಸುದೀರ್ಘ ಚರ್ಚೆಗಳು ನಡೆಯುತ್ತಿದ್ದು, ಇದರ ಬಗ್ಗೆ ನಿಖರ ಮಾಹಿತಿ ಹೊರಬೀಳಲು ಹಲವು ವರ್ಷಗಳೇ ಬೇಕಾಗಬಹುದು. ಮಧ್ಯ ಏಷ್ಯಾದ ಹುಟ್ಟು ಅಥವಾ ವಿಕಾಸ ಮತ್ತು ಕೊನೆಯ ಹಿಮಯುಗದ ಅಂತ್ಯಭಾಗದ ಅವಧಿಯಲ್ಲಿ ಅಮೆರಿಕದ ವ್ಯಾಪಕ ನೆಲೆಯ ಕಾಲಮಾನ ಕುರಿತು ಕೆಲವು ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ, ಸುಮಾರು 16,000 — 13,000 ವರ್ಷಗಳ ಅವಧಿಗೆ ತಡ ಗರಿಷ್ಟ ಹಿಮಯುಗ ಎಂದು ಉಲ್ಲೇಖಿಸಲಾಗಿದೆ.[೧೩][೧೪] ಎಸ್ಕಿಮೊ ಜನರು ಉತ್ತರ ಅಮೆರಿಕದ ಶೀತ ವಲಯ ಅಥವಾ ಆರ್ಕ್ಟಿಕ್ ಭಾಗಕ್ಕೆ ವಲಸೆ ಹೋಗಿದ್ದರು. ಕ್ರಿಸ್ತಶಕ 1000 ಇಸವಿ (Common Era) ಯಲ್ಲಿ ನಡೆದ ಮತ್ತೊಂದು ವಲಸೆ ಇದಾಗಿದೆ.[೧೫] ಉತ್ತರ ಅಮೆರಿಕಕ್ಕೆ ಎಸ್ಕಿಮೊ ಜನರು ವಲಸೆ ಬಂದ ಸಮಯದಲ್ಲೇ, ಸ್ಕಾಂಡಿನೇವಿಯಾದ ವಸಾಹತುಗಾರರು(ವೈಕಿಂಗ್ ಸೆಟ್ಲರ್ಸ್) 982 ರಲ್ಲಿ ಗ್ರೀನ್ ಲ್ಯಾಂಡ್ ಮತ್ತು ವಿನ್ ಲ್ಯಾಂಡ್ಗೆ ಬರಲಾರಂಭಿಸಿದರು.[೧೬] ನಂತರ ಈ ವಸಾಹತುಗಾರರು ಕ್ರಿಸ್ತಶಕ 1500ರ ವೇಳೆಗೆ ವಿನ್ ಲ್ಯಾಂಡ್ ತೊರೆದು, ಗ್ರೀನ್ ಲ್ಯಾಂಡ್ ನಿಂದಲೂ ನಾಪತ್ತೆಯಾದರು.[೧೭]

ಪೂರ್ವ-ಕೊಲಂಬಿಯಾ ಯುಗ

ಬದಲಾಯಿಸಿ
 
ಆರ್ಕಾನ್ಸಾಸ್‌ನಿಂದ ಮೆಸ್ಸೆಸಿಪ್ಪಿಯಾದ ಸ್ಥಳ,ಪಾರ್ಕಿನ್ ಸ್ಥಳ,ಸಿರ್ಕಾ 1539.ಹರ್ಬ್ ರೋಯ್‌ನಿಂದ ವಿವರಣೆ.

ಅಮೆರಿಕ ಖಂಡಗಳ ಮೇಲೆ ಮಹತ್ವಪೂರ್ಣ ಎನ್ನಲಾದ ಐರೋಪ್ಯ ಪ್ರಭಾವ ಮತ್ತು ಸಂಸ್ಕೃತಿ ಕಾಣಿಸಿಕೊಳ್ಳುವ ಮುನ್ನವೇ, ಅಮೆರಿಕ ಇತಿಹಾಸ ಮತ್ತು ಪೂರ್ವ ಇತಿಹಾಸದ ಎಲ್ಲಾಕಾಲಮಾನಗಳನ್ನು ಪೂರ್ವ ಕೊಲಂಬಿಯಾ ಯುಗ ಒಳಗೊಂಡಿತ್ತು. ಪೂರ್ವ ಆಧುನಿಕ ಕಾಲದಲ್ಲಿ ಪೂರ್ವ ಶಿಲಾಯುಗದಿಂದ ಹಿಡಿದು ಐರೋಪ್ಯ ವಸಾಹತು ಕಾಲದವರೆಗಿನ ಮೂಲ ನೆಲೆಯನ್ನೂ ಇದು ಒಳಗೊಂಡಿದೆ. ಅಮೆರಿಕದ ಸ್ಥಳೀಯ ಮಹಾನ್ ನಾಗರಿಕತೆಯನ್ನು ಬಣ್ಣಿಸುವ ಅರ್ಥದಲ್ಲಿ ಸಾಮಾನ್ಯವಾಗಿ ಪೂರ್ವ ಕೊಲಂಬಿಯಾ ಯುಗದ ಪದವನ್ನು ವಿಶೇಷವಾಗಿ, ಪದೇಪದೇ ಬಳಸುತ್ತಾರೆ. ಅವುಗಳೆಂದರೆ, ಮೆಸೊಅಮೆರಿಕ (ಮೆಸೋಅಮೇರಿಕಾ) ಅಂದರೆ ಮೆಕ್ಸಿಕೊ ಮತ್ತು ಸೆಂಟ್ರಲ್ ಅಮೆರಿಕ ಒಳಗೊಂಡ ಸಾಂಸ್ಕೃತಿಕ ಪ್ರಾಂತ್ಯ (ದ ಓಲ್ಮ್ಯಾಕ್, ದ ಟಾಲ್ಟೆಕ್, ದ ಟಿಯೋಟಿಹುಅಕ್ಯಾನೊ, ದ ಝಾಪೊಟೆಕ್, ದ ಮಿಕ್ಸ್‌ಟೆಕ್, ದ ಆಝ್‌ಟೆಕ್, ಮತ್ತು ದ ಮಾಯಾ) ಮತ್ತು ದಕ್ಷಿಣ ಅಮೆರಿಕದ ಪರ್ವತ ಪ್ರಾಂತ್ಯ ಆಂಡೆಸ್ (ಇಂಕಾ, ಮೊಚೆ, ಚಿಬ್‌ಚಾ, ಕೇನರೀಸ್). ಪೂರ್ವ ಕೊಲಂಬಿಯಾದ ಬಹಳಷ್ಟು ನಾಗರಿಕತೆಗಳು ಅರ್ಥಪೂರ್ಣವಾದ ಗುಣಲಕ್ಷಣಗಳು ಮತ್ತು ವಿಶೇಷತೆಗಳನ್ನು ಹುಟ್ಟುಹಾಕಿವೆ. ಶಾಶ್ವತ ನಗರ ವಾಸ ಅಥವಾ ವಸಾಹತು, ಕೃಷಿ, ನಾಗರಿಕ ಮತ್ತು ಸ್ಮಾರಕ ವಾಸ್ತುಶಿಲ್ಪ ಮತ್ತು ಸಮುದಾಯದ ಸಂಕೀರ್ಣ ವರ್ಗಶ್ರೇಣಿ ಪದ್ಧತಿ ಅವುಗಳಲ್ಲಿ ಮುಖ್ಯವಾದವು. ಕಾಯಂ ಆಗಿ ನೆಲಸಲು ಮೊದಲು ಬಂದ ಯೂರೋಪಿಯನ್ನರ ಆಗಮನದ ಸಂದರ್ಭದಲ್ಲೇ (15ನೇ ಶತಮಾನದ ಅಂತ್ಯ ಮತ್ತು 16ನೇ ಶತಮಾನದ ಆರಂಭ) ಬಹಳಷ್ಟು ಈ ನಾಗರಿಕತೆಗಳು ಸಂಪೂರ್ಣ ನಶಿಸಿಹೋದವು. ಈ ನಾಗರಿಕತೆಗಳನ್ನು ಪುರಾತನ ವಸ್ತು ಶಾಸ್ತ್ರದ ಮೂಲಕ ಮಾತ್ರ ತಿಳಿಯಬಹುದಾಗಿದೆ. ಪ್ರಸ್ತುತ ಸಂದರ್ಭಕ್ಕೆ ಸಮಕಾಲೀನವಾಗಿರುವ ಉಳಿದ ನಾಗರಿಕತೆಗಳನ್ನು ಇತಿಹಾಸದಲ್ಲಿ ದಾಖಲಾಗಿರುವ ಕಾಲಮಾನಗಳಿಂದ ತಿಳಿಯಬಹುದಾಗಿದೆ. ಕೆಲವೊಂದು, ಉದಾಹರಣೆಗೆ ಮಾಯಾ ನಾಗರಿಕತೆಯು, ಸ್ವಂತ ಲಿಖಿತ ದಾಖಲೆಗಳನ್ನು ಹೊಂದಿದೆ. ಆದಾಗ್ಯೂ, ಈ ದಾಖಲೆಗಳನ್ನು ಗಮನಿಸಿದ ಬಹುಪಾಲು ಯೂರೋಪಿಯನ್ನರು, ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಬಹುಪಾಲು ದಾಖಲೆಗಳನ್ನು ಕ್ರೈಸ್ತರ ಚಿತೆಗೆ ಎಸೆದು ನಾಶಪಡಿಸಿದ್ದಾರೆ. ಬಚ್ಚಿಟ್ಟಿದ್ದ ಕೆಲವೇ ಕೆಲವು ದಾಖಲೆ ಪತ್ರಗಳು ಮಾತ್ರ ಈಗ ಲಭ್ಯವಿವೆ. ಪುರಾತನ ಸಂಸ್ಕೃತಿ ಮತ್ತು ಜೀವನ ಕ್ರಮದ ಬಗ್ಗೆ ಅಧ್ಯಯನ ನಡೆಸುವ ಆಧುನಿಕ ಇತಿಹಾಸಕಾರರಿಗೆ ಈ ದಾಖಲೆಗಳೇ ಈಗ ಮೂಲ ಪರಿಕರಗಳಾಗಿವೆ.[೧೮] ಅಮೇರಿಕ ಮತ್ತು ಯೂರೋಪಿನ ಸ್ಥಳೀಯ ದಾಖಲೆಗಳು ಮತ್ತು ಲೆಕ್ಕಪತ್ರಗಳ ಪ್ರಕಾರ, ಯೂರೋಪ್ ಯುದ್ಧ ಅಥವಾ ಕದನದ ಸಂದರ್ಭದಲ್ಲಿನ ಅಮೆರಿಕ ನಾಗರಿಕತೆಯು ಹಲವು ಹೃದಯಸ್ಪರ್ಶಿ ಸಾಧನೆಯ ಸಿದ್ಧಿಗಳನ್ನು ಹೊಂದಿತ್ತು. ಉದಾಹರಣೆಗೆ, ಆಝ್ ಟೆಕ್ ( ಸೆಂಟ್ರಲ್ ಮೆಕ್ಸಿಕೊದಲ್ಲಿ ಆಝ್‌ಟೆಕ್ ಜನಾಂಗೀಯರು ಹೊಂದಿದ್ದ ನಾಗರೀಕತೆ) ಜನಾಂಗೀಯರು ಟೆನೊಕ್ ಟಿಟ್ಲನ್ ಹೆಸರಿನಲ್ಲಿ ಸುಂದರ ನಗರವನ್ನು ನಿರ್ಮಿಸಿದ್ದರು. ಅದೀಗ ಮೆಕ್ಸಿಕೊ ನಗರದಲ್ಲಿ ಅಂದಾಜು 2 ಲಕ್ಷ ಜನಸಂಖ್ಯೆ ಹೊಂದಿರುವ ವಿಶ್ವದ ಅತ್ಯಂತ ಆಕರ್ಷಕ ಪುರಾತನ ತಾಣವಾಗಿ ಗಮನ ಸೆಳೆದಿದೆ. ಅಮೆರಿಕ ನಾಗರಿಕತೆಯು ಖಗೋಳಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲೂ ತನ್ನದೇ ಆದ ವಿಶೇಷ ಛಾಪು ಹೊತ್ತಿದೆ.[೧೯]

ಅಮೆರಿಕದಲ್ಲಿ ಯೂರೋಪಿಯನ್ನರ ವಸಾಹತು

ಬದಲಾಯಿಸಿ

1492 ರಲ್ಲಿ ಕ್ರಿಸ್ಟೋಫರ್ ಕೊಲಂಬಸ್ ಯಾತ್ರೆ ಕೈಗೊಂಡ ಸ್ವಲ್ಪ ದಿನಗಳ ತರುವಾಯ, ಬೃಹತ್ ಪ್ರಮಾಣದಲ್ಲಿ ಅಮೆರಿಕಕ್ಕೆ ಯೂರೋಪಿಯನ್ನರ ವಸಾಹತು ಆರಂಭವಾಯಿತು. ಯೂರೋಪಿಯನ್ನರು ಮತ್ತು ಆಫ್ರಿಕನ್ನರು ತಮ್ಮ ಜೊತೆ ಹೊಸಹೊಸ ರೋಗಗಳನ್ನು ತಂದ ಪರಿಣಾಮವಾಗಿ, ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕದ ಹಲವು ನಿವಾಸಿಗಳು ಸಾವನ್ನಪ್ಪಿದರು,[೨೦][೨೧] ಇದರಿಂದಾಗಿ ಹದಿನಾರನೇ ಶತಮಾನದ ಮಧ್ಯಭಾಗದಲ್ಲಿ ಮೂಲ ಅಮೆರಿಕನ್ನರ ಜನಸಂಖ್ಯೆ ಗಣನೀಯವಾಗಿ ಕುಸಿಯಿತು, ಆದಾಗ್ಯೂ ಯೂರೋಪಿಯನ್ನರ ಸಂಪರ್ಕ ಉತ್ತಮವಾಗೇ ಇತ್ತು.[೨೨] ಅಮೆರಿಕ ಮೂಲನಿವಾಸಿಗಳು ಮತ್ತು ಯೂರೋಪಿನ ವಸಾಹತುದಾರರ ನಡುವೆ ವ್ಯಾಪಕ ಸಂಘರ್ಷವೇ ಉಂಟಾಯಿತು. ಇದರ ಪರಿಣಾಮವಾಗಿ, ಡೇವಿಡ್ ಸ್ಟಾನರ್ಡ್ ಎಂಬಾತ ಸ್ಥಳೀಯ ಜನರ ನರಮೇಧಕ್ಕೆ ಕರೆ ನೀಡಿದ.[೨೩] ಪೂರ್ವ ಯೂರೋಪಿಯನ್ ವಲಸೆಗಾರರು ಅಮೆರಿಕದಲ್ಲಿ ಕಾಲೋನಿಗಳನ್ನು ಸ್ಥಾಪಿಸುವ ಸರ್ಕಾರದ ಪ್ರಾಯೋಜಕತ್ವದ ಪ್ರಯತ್ನಗಳಲ್ಲಿ ಪದೇಪದೇ ಭಾಗಿಯಾಗಿದ್ದರು. ಧಾರ್ಮಿಕ ಕಿರುಕುಳ ತಾಳಲಾರದೆ ಊರು ಬಿಟ್ಟು ಓಡಿ ಬರುವವರು ಮತ್ತು ಆರ್ಥಿಕ ಅವಕಾಶ ಅರಸಿ ಬರುವವರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ವಲಸೆ ಬರುವವರ ಸಂಖ್ಯೆಯೂ ಹೆಚ್ಚತೊಡಗಿತು. ಮಿಲಿಯನ್ ಗಟ್ಟಲೆ ಜನರನ್ನು ಅಮೆರಿಕಕ್ಕೆ ಬಲತ್ಕಾರವಾಗಿ ಸಾಗಿಸಲಾಯಿತು. ಅವರನ್ನು ಅಮೆರಿಕದಲ್ಲಿ ಗುಲಾಮರು, ಕೈದಿಗಳು ಮತ್ತು ಕರಾರಿನ ಸೇವಕರ ಕೆಲಸಗಳಿಗೆ ದೂಡಲಾಯಿತು.

ಅಭಿದಾನ

ಬದಲಾಯಿಸಿ
 
ಅಮೆರಿಕಾವನ್ನು ಮೊದಲು ಹೆಸರಿಸಿದ ವಾಲ್ಡ್‌ಸೀಮುಲ್ಲರ್‌ನ ಜಾಗತಿಕ ನಕಾಶೆ,(ಪರಾಗ್ವೇ ಮೇಲಿನ ಮ್ಯಾಪ್‌ನಲ್ಲಿ), ಜರ್ಮನಿ, 1507

ಈ ಭೂಭಾಗಕ್ಕೆ ಅಮೆರಿಕ ಹೆಸರಿನ ಮೊಟ್ಟಮೊದಲ ಬಳಕೆ ಆಗಿದ್ದು ೧೫೦೭ ಏಪ್ರಿಲ್ 25ರಂದು. ಹನ್ನೆರಡು ವಲಯಗಳನ್ನು ಒಳಗೊಂಡ ಅಮೆರಿಕ ನಕ್ಷೆಯು ಮೊದಲು ಸಣ್ಣ ಭೂಪಟದಲ್ಲಿ ಕಾಣಿಸಿಕೊಂಡಿತು. ನಂತರ, ಜರ್ಮನ್ ನಕ್ಷೆಗಾರ ಮಾರ್ಟಿನ್ ವಾಲ್ಡ್ ಸೀಮುಲ್ಲರ್, ಫ್ರಾನ್ಸ್ ನ ಸೈಂಟ್-ಡೆಸ್-ವೊಗಸ್ ನಲ್ಲಿ ಬೃಹತ್ ಗೋಡೆಯ ಮೇಲೆ ರಚಿಸಿದ ಭೂಪಟದಲ್ಲಿ ಅದು ವಿಜೃಂಭಿಸಿತು. ಇದಕ್ಕೆ ಪೂರಕವಾಗಿ Cosmographiae Introductio ಕೃತಿ ಉಲ್ಲೇಖಿಸಿರುವಂತೆ, ಬುದ್ಧಿವಂತ ಎಂದು ಗುರುತಿಸಿಕೊಂಡಿದ್ದ ’ಅಮೆರಿಕಸ್ ’ ಎಂಬ ವ್ಯಕ್ತಿ ಈ ಭೂಪ್ರದೇಶವನ್ನು ಕಂಡು ಹಿಡಿದ ನಂತರ, ಅಮೆರಿಜ್, ಲ್ಯಾಂಡ್ ಆಫ್ ಅಮೆರಿಕಸ್ ಅಥವಾ ಅಮೆರಿಕಾ ಬಗ್ಗೆ ಆಕ್ಷೇಪಿಸಲು ಯಾರಿಗೂ ಹಕ್ಕಿಲ್ಲ. ಯೂರೋಪ್ ಮತ್ತು ಏಷ್ಯಾ ಖಂಡಗಳೆರಡಕ್ಕೂ ಮಹಿಳೆಯಿಂದ ಹೆಸರು ಬಂದಿದೆ. ಫ್ಲೋರಂಟೈನ್ ಸಂಶೋಧಕ ಅಮೇರಿಗೋ ವೆಸ್‌ಪುಸಿಯ ಹೆಸರಿನ ಲ್ಯಾಟಿನ್ ರೂಪವೇ ಅಮೇರಿಕಸ್ ವೆಸ್ಪುಸಿಯಸ್ , ಮತ್ತು ಅಮೆರಿಕಸ್ ಪದದ ಸ್ತ್ರೀಲಿಂಗವೇ ಅಮೆರಿಕ .[೨೪][೨೫] ಯುವರಾಜ ಅಮಲರಿಕ್ (*Amalareiks) ಎಂಬಾತನ ಹೆಸರಿನ ಇಟಲಿ ರೂಪವೇ ಅಮೆರಿಗೊ , ಇದರರ್ಥ ಅಮಾಲಿಯ ಆಡಳಿತಗಾರ ಎಂಬುದು. ದಕ್ಷಿಣ ಅಮೆರಿಕದ ಕರಾವಳಿ ಭಾಗದಲ್ಲಿ ವೆಸ್ಪುಸ್ಸಿ ಸಮುದ್ರಯಾನ ನಡೆಸಿದ್ದ ಹಾಗೆಯೇ ಹೆಸರಿಡುವ ವಿಷಯದಲ್ಲಿ ಆತನ ಪಾತ್ರ ಏನು ಎಂಬುದು ಇನ್ನೂ ಅಸ್ಪಷ್ಟವಾಗಿದೆ. ಈ ನೂತನ ಭೂಭಾಗಕ್ಕೆ ಅವನ ಹೆಸರು ಇಡಲು ವ್ಯಾಪಕ ಸೂಚನೆಗಳು ಪ್ರಸ್ತಾಪವಾದ ಬಗ್ಗೆ ಆತನಿಗೆ ತಿಳಿದಿರಲಿಲ್ಲ ಎಂದು ಕೆಲವು ಮೂಲಗಳು ಹೇಳುತ್ತವೆ. ಕೆಲವರು ಸುಳ್ಳುಪತ್ರ ಎಂದು ಪ್ರತಿಪಾದಿಸಿದ್ದ ಸೊಡೆರಿನಿ ಪತ್ರದಿಂದ ವಾಲ್ಡ್ ಸೀ ಮುಲ್ಲರ್ ತಪ್ಪು ಅಭಿಪ್ರಾಯ ಹೊಂದಿದ್ದಿರಲೂಬಹುದು. ಇದರ ಪರಿಣಾಮವಾಗಿ, ಈ ಭೂಭಾಗವನ್ನು ಮೊಟ್ಟಮೊದಲು ಅಮೆರಿಗೊ ವೆಸ್ಪುಸ್ಸಿ ಕಂಡುಹಿಡಿದ. ಈ ಭೂಭಾಗದ ಅಸ್ತಿತ್ವ ಇರುವುದನ್ನು ಮೊಟ್ಟಮೊದಲ ಬಾರಿಗೆ ನವೋದಯ ಯುಗದ ಯಾತ್ರಿಕರ ಗಮನ ಸೆಳೆದ ಕ್ರಿಸ್ಟೋಫರ್ ಕೊಲಂಬಸ್, 1506 ರಲ್ಲಿ ಕೊನೆಯುಸಿರೆಳೆದ (ಕೊನೆಯಲ್ಲಿ ಆತ ತಾನು ಅಂದುಕೊಂಡು ಹೊರಟಂತೆ ಇಂಡೀಸ್ ಅನ್ನು ಕಂಡುಹಿಡಿದೆ ಮತ್ತು ಕಾಲನಿಯಾಗಿ ಮಾಡಿಕೊಂಡೆ ಎಂದು ನಂಬಿದ್ದ), ಮತ್ತು ಆತ ವಾಲ್ಡ್ ಸೀ ಮುಲ್ಲರ್ ತೀರ್ಮಾನಗಳನ್ನು ವಿರೋಧಿಸಲಿಲ್ಲ.[೨೬]

 
ಜಂಗ್‌ಹೆ,ಸಿ‌ನಿಂದ ಅಮೆರಿಕಾ ನಕಾಶೆ1770

ವಿಸ್ತೀರ್ಣ

ಬದಲಾಯಿಸಿ

ಅಮೆರಿಕದ ಉತ್ತರ ಬಿಂದುವಿನಲ್ಲಿ ಕಫೆಕ್ ಲುಬೆನ್ ದ್ವೀಪ ಪ್ರದೇಶವಿದೆ. ಅದು ಪೃಥ್ವಿಯ ಉತ್ತರ ದಿಕ್ಕಿನ ತುದಿಯಲ್ಲಿರುವ ಭೂಭಾಗವಾಗಿದೆ.[೨೭] ದಕ್ಷಿಣ ದಿಕ್ಕಿನ ತುದಿಯಲ್ಲಿ ದಕ್ಷಿಣ ಥುಲೆ ದ್ವೀಪ ಪ್ರದೇಶವಿದೆ, ಆದಾಗ್ಯೂ ಕೆಲವು ಸಮಯ ಅದನ್ನು ಅಂಟಾರ್ಕ್ಟಿಕಾದ ಭಾಗ ಎಂದು ಪರಿಗಣಿಸಲಾಗಿತ್ತು.[೨೮] ಪೂರ್ವ ದಿಕ್ಕಿನ ತುದಿಯಲ್ಲಿ ನಾರ್ಡೊಸ್ಟ್ರಂಡಿಜನ್ ಪ್ರಮುಖ ಭೂಭಾಗವಿದೆ. ಪಶ್ಚಿಮ ದಿಕ್ಕಿನ ತುದಿ ಭಾಗದಲ್ಲಿ ಅಟ್ಟು ದ್ವೀಪ ಪ್ರದೇಶವಿದೆ. ಅಮೆರಿಕದ ಮುಖ್ಯ ಭೂಭಾಗವು ಉತ್ತರದಿಂದ ದಕ್ಷಿಣ ದಿಕ್ಕಿಗೆ ಉದ್ದವಾಗಿ ಚಾಚಿರುವ ಪೃಥ್ವಿಯ ವಿಶಾಲವಾದ ಭೂಪ್ರದೇಶವಾಗಿದೆ. ಅದು, ಉತ್ತರ ಕೆನಡಾದ ಬೂಥಿಯಾ ಪರ್ಯಾಯ ದ್ವೀಪದಿಂದ ಚಿಲಿ ಪೆಟೊಗೊನಿಯಾದ ಕೇಪ್ ಫ್ರೊವರ್ಡ್ ವರೆಗೆ ಸುಮಾರು 14 ಸಾವಿರ ಕಿಲೋಮೀಟರ್ (ಸುಮಾರು 8700 ಮೈಲುಗಳು) ವರೆಗೆ ವ್ಯಾಪಿಸಿದೆ. ಅಮೆರಿಕದ ಪಶ್ಚಿಮ ದಿಕ್ಕಿನ ಪ್ರಮುಖ ಭೂಪ್ರದೇಶವು ಅಲಸ್ಕಾಗೆ ಸೇರಿದ ಸಿವರ್ಡ್ ಪರ್ಯಾಯ ದ್ವೀಪ ಪ್ರದೇಶದ ಕೊನೆಯ ಭಾಗವನ್ನು ಹೊಂದಿದೆ. ಪೂರ್ವ ದಿಕ್ಕಿನ ತುತ್ತತುದಿಯಲ್ಲಿ ಈಶಾನ್ಯ ಬ್ರೆಜಿಲ್ ನ ಪೊಂಟಾ ಡೊ ಸಿಕ್ಸಾಸ್ ಭೂಪ್ರದೇಶ ಇದೆ.[೨೯]

ಮೇಲ್ಮೈ ಲಕ್ಷಣ

ಬದಲಾಯಿಸಿ

ಅಮೆರಿಕದ ಭೌಗೋಳಿಕ ಹಿನ್ನೆಲೆ ಅಥವಾ ಮೇಲ್ಮೈಲಕ್ಷಣವು ಅಲ್ಲಿನ ಕರಾವಳಿಯಲ್ಲಿರುವ ಪರ್ವತ ಶ್ರೇಣಿ ಮತ್ತು ಬೆಟ್ಟಗುಡ್ಡಗಳಿಂದ ಪ್ರಭಾವಿತವಾಗಿದೆ. ಆಂಡೆಸ್ (Andes) ಪರ್ವತ ಪ್ರದೇಶವು ದಕ್ಷಿಣ ಅಮೆರಿಕದ ಪಶ್ಚಿಮ ಕರಾವಳಿಯುದ್ದಕ್ಕೂ ವ್ಯಾಪಿಸಿದೆ,[೩೦] ಅಲ್ಲದೆ, ಪಶ್ಚಿಮ ಘಟ್ಟದ ಪರ್ವತ ಶ್ರೇಣಿ ಮತ್ತು ಬೆಟ್ಟಗುಡ್ಡಗಳು ಉತ್ತರ ಅಮೆರಿಕದ ಪಶ್ಚಿಮ ಭಾಗದಲ್ಲಿ ಹರಡಿಕೊಡಿವೆ.[೩೧] 2300 ಕಿಲೋಮೀಟರ್ ಉದ್ದ(1429 ಮೈಲು)ದ ಅಪ್ಪಲಚಿಯಾನ್ ಪರ್ವತ ಶ್ರೇಣಿಯು ಉತ್ತರ ಅಮೆರಿಕದ ಪೂರ್ವ ಕರಾವಳಿಯಲ್ಲಿರುವ ಅಲಬಾಮಾದಿಂದ ನ್ಯೂಫೌಂಡ್ ಲ್ಯಾಂಡ್ ವರೆಗೆ ಚಾಚಿಕೊಂಡಿದೆ.[೩೨] ಅಪ್ಪಲಚಿಯಾನ್ ಪರ್ವತ ಶ್ರೇಣಿಯ ಉತ್ತರ ದಿಕ್ಕಿನಲ್ಲಿ, ಆರ್ಕ್ಟಿಕ್ ಪರ್ವತ ಪ್ರದೇಶವು ಕೆನಡಾದ ಪೂರ್ವ ಕರಾವಳಿಯುದ್ದಕ್ಕೂ ವ್ಯಾಪಿಸಿದೆ.[೩೩] ಕರಾವಳಿ ಪರ್ವತ ಶ್ರೇಣಿಯ ನಡುವೆಯೂ, ಉತ್ತರ ಅಮೆರಿಕ ಸಮತಟ್ಟಾದ ಭೂಪ್ರದೇಶವನ್ನು ಹೊಂದಿದೆ. ಆಂತರಿಕ ಭೂಪ್ರದೇಶ(ಭೌತಿಕ ಗುಣಲಕ್ಷಣ ಹೊಂದಿರುವ ಭೂಮಿಯ ಮೇಲ್ಮೈ)ವು ಉತ್ತರ ಅಮೆರಿಕ ಖಂಡದ ಬಹುಪಾಲು ಭಾಗವನ್ನು ಆವರಿಸಿದೆ.[೩೪] ಕೆನಾಡಾ ಪ್ರಸ್ಥಭೂಮಿಯು ಉತ್ತರ ಅಮೆರಿಕದ 5 ಮಿಲಿಯನ್ ಕಿ.ಮೀ ಸ್ಕ್ವೇರ್ (km²) ಭೂಭಾಗವನ್ನು ಆವರಿಸಿದೆ ಮತ್ತು ಅದು ಸಹಜವಾಗಿ ಸಮತಟ್ಟಾಗಿದೆ.[೩೫] ಅಂತೆಯೇ, ದಕ್ಷಿಣ ಅಮೆರಿಕದ ಈಶಾನ್ಯ ಭಾಗವು ಸಮತಟ್ಟಾದ ಅಮೆಜಾನ್ ನದಿಯನ್ನು ಆವರಿಸಿಕೊಂಡಿದೆ.[೩೬]

ಪೂರ್ವ ಕರಾವಳಿಯಲ್ಲಿನ ಬ್ರೆಜಿಲ್ ಪ್ರಸ್ಥಭೂಮಿ ಚಪ್ಪಟ್ಟೆಯಾಗಿ ಕಂಡುಬಂದರೂ, ಭೂ ಮೇಲ್ಮೈ ಆಕಾರದಲ್ಲಿ ತುಸು ಬದಲಾವಣೆಗಳನ್ನು ತೋರುತ್ತದೆ. ದಕ್ಷಿಣ ಕರಾವಳಿಯ ಗ್ರನ್ ಚಕೊ ಮತ್ತು ಪಂಪಸ್ ಭಾಗಗಳು ವಿಶಾಲವಾದ ತಗ್ಗು ಭೂ ಪ್ರದೇಶಗಳನ್ನು ಹೊಂದಿವೆ.[೩೭]

ಜಲಶಾಸ್ತ್ರ

ಬದಲಾಯಿಸಿ

ಕರಾವಳಿ ಪರ್ವತ ಶ್ರೇಣಿ ಮತ್ತು ಆಂತರಿಕ ಭೂಪ್ರದೇಶದ ಜೊತೆಗೆ, ಅಮೆರಿಕವು ಹಲವಾರು ನದಿ, ಜಲಾಶಯಗಳನ್ನು ಹೊಂದಿದೆ. ದಕ್ಷಿಣ ಅಮೆರಿಕದಲ್ಲಿ ಅಮೆಜಾನ್ ಅತಿದೊಡ್ಡ ನದಿ ಎಂದು ಹೆಸರುವಾಸಿಯಾಗಿದೆ. ಅತಿ ಹೆಚ್ಚು ನೀರು ಹರಿಸುವ ವಿಶ್ವದ ಏಕೈಕ ಅತಿದೊಡ್ಡ ನದಿ ಎಂಬ ಖ್ಯಾತಿಯೂ ಅದಕ್ಕಿದೆ.[೩೮] ಮಿಸ್ಸಿಸ್ಸಿಪ್ಪಿ ನದಿ ಉತ್ತರ ಅಮೆರಿಕದ ಅತಿದೊಡ್ಡ ನದಿ. ಇದು ವಿಶ್ವದ ಎರಡನೇ ಅತಿದೊಡ್ಡ ಜಲಾನಯನ ಪ್ರದೇಶ ಎಂಬ ಖ್ಯಾತಿ ಹೊಂದಿದೆ.[೩೯] ದಕ್ಶಿಣ ಅಮೆರಿಕದ ಎರಡನೇ ಅತಿದೊಡ್ಡ ಜಲಾನಯನ ಪ್ರದೇಶ ಎನಿಸಿರುವ ಪರಾನ ನದಿಯು 2.5 ಮಿಲಿಯನ್ ಚದುರ ಕಿಲೋಮೀಟರ್ ಪ್ರದೇಶವನ್ನು ಆವರಿಸಿಕೊಂಡಿದೆ.[೪೦]

ಜನಸಾಂದ್ರತೆ

ಬದಲಾಯಿಸಿ

ಜನಸಂಖ್ಯೆ

ಬದಲಾಯಿಸಿ
ಚಿತ್ರ:Santa feconj.jpg
ಮೆಕ್ಸಿಕೊ ನಗರ, ಮೆಕ್ಸಿಕೊ
 
ನ್ಯೂಯಾರ್ಕ್ ನಗರ,ಯುನೈಟೆಡ್ ಸ್ಟೇಟ್ಸ್
 
ಸಯೊ ಪೌಲೊ,ಬ್ರೆಜಿಲ್

ಅಮೆರಿಕದ ಒಟ್ಟು ಜನಸಂಖ್ಯೆಯು ಸುಮಾರು 85 ಕೋಟಿ 90 ಲಕ್ಶದಷ್ಟಿದೆ. ಈ ಜನಸಂಖ್ಯೆಯನ್ನು ಕೆಳಗಿನಂತೆ ವಿಂಗಡಿಸಲಾಗಿದೆ.

  • ಉತ್ತರ ಅಮೆರಿಕ : 2001 ರಲ್ಲಿ 495 ಮಿಲಿಯನ್ ಮತ್ತು 2002 ರಲ್ಲಿ 501 ಮಿಲಿಯನ್ ( ಸೆಂಟ್ರಲ್ ಅಮೆರಿಕ ಮತ್ತು ಹವಾಯಿ ಸೇರಿ)
  • ಉತ್ತರ ಅಮೆರಿಕ : 2001 ರಲ್ಲಿ 352 ಮಿಲಿಯನ್ ಮತ್ತು 2002 ರಲ್ಲಿ 357 ಮಿಲಿಯನ್

ಇವನ್ನೂ ಗಮನಿಸಿ

ಬೃಹತ್ ನಗರ ಕೇಂದ್ರಗಳು

ಬದಲಾಯಿಸಿ

ಅಮೆರಿಕದ ಅತ್ಯಂತ ಜನಪ್ರಿಯ ನಗರಗಳೆಂದರೆ ಮೆಕ್ಸಿಕೊ ರಾಜಧಾನಿ ಮೆಕ್ಸಿಕೊ ಸಿಟಿ, ಅಮೆರಿಕ ಸಂಯುಕ್ತ ಸಂಸ್ಥಾನದ ಪೂರ್ವ ಕರಾವಳಿಯಲ್ಲಿ ನೆಲೆ ನಿಂತಿರುವ ನ್ಯೂಯಾರ್ಕ್ ನಗರ, ಬ್ರೆಜಿಲ್ ರಾಜಧಾನಿ ಸಾವ್ ಪಾಲೊ. ಈ ಮೇಲಿನ ಯಾವ ನಗರ ಕೇಂದ್ರ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿದೆ ಎಂಬ ಪರಿಗಣನೆಯು, ಜನಸಂಖ್ಯೆ ಕಂಡು ಹಿಡಿಯಲು ಬಳಸುವ ಮಾನದಂಡವನ್ನು ಆಧರಿಸಿದೆ.

ನಗರ ದೇಶ ನಗರ ಯುಕ್ತ ಜನಸಂಖ್ಯೆ ಶ್ರೇಣಿ ನಗರ ಪ್ರದೇಶ ಜನಸಂಖ್ಯೆ ಶ್ರೇಣಿ ಮೆಟ್ರೋನಗರ ಪ್ರದೇಶದ ಜನಸಂಖ್ಯೆ ಶ್ರೇಣಿ
ಸಾವೊ ಪೌಲೊ   Brazil 11,037,593 1st 19,505,000 2nd 18,850,000 3ನೇ
ಮೆಕ್ಸಿಕೋ ನಗರ   ಮೆಕ್ಸಿಕೋ 8,841,916 2nd 18,585,000 3rd 20,450,000 1ನೇ
ನ್ಯೂಯಾರ್ಕ್ ನಗರ   ಅಮೇರಿಕ ಸಂಯುಕ್ತ ಸಂಸ್ಥಾನ 8,363,710 3rd 21,295,000 1st 19,750,000 2ನೇ

ಮಾನವ ವಂಶಶಾಸ್ತ್ರ

ಬದಲಾಯಿಸಿ

ಅಮೆರಿಕದ ಜನಸಂಖ್ಯೆಯು ಅಲ್ಲಿನ ಏಳು ಬೃಹತ್ ಜನಾಂಗೀಯ ಗುಂಪುಗಳ ಸಂತತಿ ಮತ್ತು ಅವುಗಳ ಸಂಯೋಗದಿಂದ ಸೃಷ್ಟಿಯಾಗಿದೆ.

ಬಹುಸಂಖ್ಯಾತ ಜನರು ಲ್ಯಾಟಿನ್ ಅಮೆರಿಕದಲ್ಲಿ ನೆಲೆಸಿದ್ದಾರೆ, ಪ್ರಭಾವಶಾಲಿ ಸಂಸ್ಕೃತಿ ಹೊಂದಿರುವ ಲ್ಯಾಟಿನ್ ಅಮೆರಿಕದ ಮೂಲಬೇರು ಲ್ಯಾಟಿನ್ ಯೂರೋಪ್ ನಲ್ಲಿದೆ (ಎರಡು ಪ್ರಭಾವಶಾಲಿ ಸ್ಪಾನಿಷ್ ಮತ್ತು ಪೋರ್ಚುಗೀಸ್ ಭಾಷೆಗಳೂ ಸೇರಿವೆ. ಈ ಭಾಷೆಗಳಿಗೆ ನಿಯೋಲ್ಯಾಟಿನ್ ಎಂದೂ ಕರೆಯುತ್ತಾರೆ), ಇನ್ನೂ ನಿರ್ದಿಷ್ಟವಾಗಿ ಇಬೆರಿಯಾ ರಾಷ್ಟ್ರಗಳಾದ ಪೋರ್ಚುಗಲ್ ಮತ್ತು ಸ್ಪೇನ್ (ಇಬೆರೊ ಅಮೆರಿಕ ಎಂಬ ಸಮಾನಾರ್ಥಕ ಪದ ಬಳಕೆಯೂ ಇದೆ)ನಲ್ಲೂ ಈ ಮೂಲಬೇರು ನೆಲೆಸಿದೆ. ಲ್ಯಾಟಿನ್ ಅಮೆರಿಕವು ಆಂಗ್ಲೊ ಅಮೆರಿಕದೊಂದಿಗೆ ಗುಣಲಕ್ಷಣಗಳಲ್ಲಿ ಹಲವು ವೈರುಧ್ಯಗಳನ್ನು (ಜರ್ಮನ್ನರ ಭಾಷೆ ಇಂಗ್ಲಿಷ್, ಇಲ್ಲಿ ಹೆಚ್ಚು ಬಳಕೆಯಲ್ಲಿದೆ) ಹೊಂದಿದೆ. ಅದು ಕೆನಡಾ (ಫ್ರೆಂಚ್ ಭಾಷಿಕರನ್ನು ಹೊರತುಪಡಿಸಿದ ಕೆನಡಾದ ಮೂಲಬೇರು ಲ್ಯಾಟಿನ್ ಯೂರೋಪ್ (ಫ್ರಾನ್ಸ್)ನಲ್ಲಿದೆ : Québec and Acadia ನೋಡಿ) ಮತ್ತು ಸಂಯುಕ್ತ ಸಂಸ್ಥಾನಗಳನ್ನು ಒಳಗೊಂಡಿದೆ. ಇವೆರದೂ ಪ್ರದೇಶಗಳು ಉತ್ತರ ಅಮೆರಿಕದಲ್ಲಿ ನೆಲೆಗೊಂಡಿದ್ದು, ಅಲ್ಲಿ ಹೆಚ್ಚಾಗಿ ಆಂಗ್ಲೊ-ಸಕ್ಸನ್ ಮತ್ತು ಜರ್ಮನ್ ಬೇರುಗಳು ಇವೆ.

ಅಮೆರಿಕದಲ್ಲಿ ಹೆಚ್ಚಾಗಿ ರೂಢಿಯಲ್ಲಿರುವ ಪ್ರಮುಖ ಧರ್ಮ ಮತ್ತು ನಂಬಿಕೆಗಳು ಕೆಳಕಂಡಂತಿವೆ:

  • ಕ್ರೈಸ್ತ ಧರ್ಮ (ಉತ್ತರ ಅಮೆರಿಕ: 85 ಶೇಕಡ ; ದಕ್ಷಿಣ ಅಮೆರಿಕ 93 ಶೇಕಡ[೪೧]
    • ರೋಮನ್ ಕೆಥೊಲಿಕ್ ಧರ್ಮ: ( ಮೆಕ್ಸಿಕೊದ ಶೇಕಡ 89 ರಷ್ಟು ಜನರು[೪೨][೪೩], ಬ್ರೆಜಿಲ್ ನ ಸುಮಾರು ಶೇಕಡ 74 ರಷ್ಟು ಜನರು, ಬ್ರೆಜಿಲ್ ನಲ್ಲಿ ವಿಶ್ವದಲ್ಲೇ ಅತಿಹೆಚ್ಚು ಅಂದರೆ, 182 ಮಿಲಿಯನ್ ರೋಮನ್ ಕೆಥೋಲಿಕ್ ಧರ್ಮದವರಿದ್ದಾರೆ[೪೪], ಸಂಯುಕ್ತ ಸಂಸ್ಥಾನದ ಜನಸಂಖ್ಯೆಯ ಶೇಕಡ ೨೪ ರಷ್ಟು ಜನ[೪೫], ಮತ್ತು ಶೇಕಡ ೪೦ ಕ್ಕೂ ಅಧಿಕ ಮಂದಿ ಕೆನಡಾದ ಜನ ಅನುಸರಿಸುತ್ತಿದ್ದಾರೆ.[೪೬]
    • ಪ್ರೊಟೆಸ್ಟಾಂಟ್ ಧರ್ಮ (ಪೋಪನ ಧರ್ಮಕ್ಕೆ ವಿರೋಧಿಯಾದ ಧರ್ಮ) : ( ಸಂಯುಕ್ತ ಸಂಸ್ಥಾನದಲ್ಲಿ ಹೆಚ್ಚು ರೂಢಿಯಲ್ಲಿದೆ, ಅರ್ಧಕ್ಕಿಂತೆ ಹೆಚ್ಚು ಜನರು ಪ್ರೊಟೆಸ್ಟಾಂಟ್ ಧರ್ಮದವರಾಗಿದ್ದಾರೆ, ಮತ್ತು ಕೆನಡಾದಲ್ಲಿ, ಕಾನು ಭಾಗಕ್ಕಿಂತ ಹೆಚ್ಚಿನ ಮಂದಿ ; ಕೆಥೋಲಿಕ್ ಸಮುದಾಯ ಹೆಚ್ಚಿರುವ ಲ್ಯಾಟಿನ್ ಅಮೆರಿಕದಲ್ಲಿ ಕ್ರೈಸ್ತ ಮತ ಪ್ರಚಾರ ಮತ್ತು ಧರ್ಮೋಪದೇಶ ಆಂದೋಲನಗಳು ಹೆಚ್ಚಾಗುವ ಅನಿಶ್ಚಿತತೆಗಳಿವೆ.[೪೭])
    • ಪೂರ್ವ ಭಾಗದ ಸಂಪ್ರದಾಯಬದ್ಧ ಕ್ರೈಸ್ತರು : (ಸಂಯುಕ್ತ ಸಂಸ್ಥಾನ ಮತ್ತು ಕೆನಡಾದಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ ಮತ್ತು ಅಮೆರಿಕ ಒಟ್ಟು ನಾಗರಿಕರ ಶೇಕಡ 1 ರಷ್ಟು ಮಂದಿ ಇದ್ದಾರೆ ; ಈ ಸಮುದಾಯವು ಕೆನಡಾದಲ್ಲಿ ಇತರೆ ಸಮುದಾಯಕ್ಕಿಂತ ಅತಿವೇಗದಲ್ಲಿ ಬೆಳೆಯುತ್ತಿದೆ ಮತ್ತು ಕೆನಡಾ ಜನಸಂಖ್ಯೆಯ ಸಮಾರು ಶೇಕಡ 3 ರಷ್ಟು ಜನಸಾಂದ್ರತೆಯನ್ನು ಪ್ರತಿನಿಧಿಸುತ್ತಿದೆ.[ಸಾಕ್ಷ್ಯಾಧಾರ ಬೇಕಾಗಿದೆ]
    • ಅಪಂಥೀಯ ಕ್ರೈಸ್ತರು (Non-denominational Christians) ಮತ್ತು ಇತರೆ ಕ್ರೈಸ್ತರು ( ಸುಮಾರು ೧,೦೦೦ ವಿವಿಧ ಕ್ರೈಸ್ತ ಪಂಥೀಯರು ಮತ್ತು ಪಂಗಡಗಳು ಅಮೆರಿಕದಲ್ಲಿ ರೂಢಿಯಲ್ಲಿವೆ.
  • ನಾಸ್ತಿಕರು : ( ನಿರೀಶ್ವರವಾದಿಗಳು ಮತ್ತು ಆಜ್ಞೇಯತಾವಾದಿಗಳು ಈ ಗುಂಪಿನಲ್ಲಿ ಸೇರಿದ್ದಾರೆ, ಅಲ್ಲದೆ, ಕೆಲವು ರೂಪದ ಆಧ್ಯಾತ್ಮಿಕತೆ ಪ್ರದರ್ಶಿಸುವ ಅಥವಾ ತೋರುವ ಹಾಗೂ ಯಾವುದೇ ಸಂಘಟಿತ ಧರ್ಮದಲ್ಲಿ ಸದಸ್ಯರಾಗಿ ಗುರುತಿಸಿಕೊಳ್ಳದ ಗುಂಪು ಸಹ ಇದರಲ್ಲಿ ಸೇರಿದೆ).
  • ಇಸ್ಲಾಂ ಧರ್ಮ : ( ಕೆನಾಡಾದ ಶೇಕಡ 2 ರಷ್ಟು ಮಂದಿ (580,000 ಜನರು)[೪೮] ಅನುಸರಿಸುತ್ತಿದ್ದಾರೆ, ಅಮೇರಿಕ ಜನಸಂಖ್ಯೆಯ ಶೇಕಡ 0.6 ರಿಂದ 2 ರಷ್ಟು (1,820,೦೦೦[೪೫] ರಿಂದ 5,000,000+[೪೯] ಮಂದಿ), ಮತ್ತು ಶೇಕಡ 0.2 ರಷ್ಟು ಮೆಕ್ಸಿಕನ್ನರು (250,೦೦೦ ಮಂದಿ)[೫೦], ಜೊತೆಗೆ, ಉತ್ತರ ಅಮೆರಿಕದ ಒಟ್ಟು ಜನಸಂಖ್ಯೆಯ ಶೇಕಡ 2.5 ರಷ್ಟು ಮಂದಿ ಮುಸ್ಲಿಮರಿದ್ದಾರೆ. ಅತಿಹೆಚ್ಚು ಮುಸ್ಲಿಂ ಸಾಂದ್ರತೆ ಹೊಂದಿರುವ ಉತ್ತರ ಅಮೆರಿಕದ ನಗರಗಳೆಂದರೆ, ಟೊರಂಟೊ, ಲಾಸ್ ಏಂಜಲೀಸ್, ನ್ಯೂಯಾರ್ಕ್, ಡೆಟ್ರಾಯ್ಟ್, ಹೂಸ್ಟನ್, ಚಿಕಾಗೊ, ಫಿಲಡೆಲ್ಫಿಯಾ ಮತ್ತು ವಾಷಿಂಗ್ಟನ್ ಡಿ.ಸಿ. ಹಾಗೂ ಲ್ಯಾಟಿನ್ ಅಮೆರಿಕದ ಎಲ್ಲಾ ನಗರಗಳಲ್ಲಿ ಶೇಕಡ 0.3 ರಷ್ಟು ಮುಸ್ಲಿಮರಿದ್ದಾರೆ. ಲ್ಯಾಟಿನ್ ಅಮೆರಿಕದಲ್ಲಿ ಅತಿಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ಸ್ಥಳವೆಂದರೆ ಅರ್ಜೆಂಟೈನಾ. ಅಲ್ಲಿ 6 ಲಕ್ಷದವರೆಗೆ, ಅಂದರೆ, ಒಟ್ಟು ಜನಸಂಖ್ಯೆಯ ಶೇಕಡ 1.9 ರಷ್ಟು ಮಂದಿ ನೆಲೆಸಿದ್ದಾರೆ.[೫೧]
  • ಯೆಹೂದಿ ಧರ್ಮ : (ಉತ್ತರ ಅಮೆರಿಕದ ಶೇಕಡ 2 ರಷ್ಟು ಮಂದಿ ಅನುಸರಿಸುತ್ತಿದ್ದಾರೆ - ಅಮೆರಿಕ ಜನಸಂಖ್ಯೆಯ ಅಂದಾಜು ಶೇಕಡ 2.5 ರಷ್ಟು ಮತ್ತು ಕೆನಡಿಯನ್ನರ ಶೇಕಡ 1.2 ರಷ್ಟು [೫೨]- ಮತ್ತು ಲ್ಯಾಟಿನ್ ಅಮೆರಿಕನ್ನರ ಶೇಕಡ 0.23 ರಷ್ಟು ಮಂದಿ - ಲ್ಯಾಟಿನ್ ಅಮೆರಿಕದಲ್ಲಿ ಅರ್ಜೆಂಟೈನಾವು ಅತಿಹೆಚ್ಚು ಯೆಹೂದಿ ಜನಸಂಖ್ಯೆಯನ್ನು ಹೊಂದಿದೆ, ಅಲ್ಲಿ 200,000 ಮಂದಿ ಯೆಹೂದಿಗಳಿದ್ದಾರೆ.[೫೩]

ಅಮೆರಿಕದಲ್ಲಿರುವ ಇತರೆ ಧರ್ಮಗಳೆಂದರೆ, ಸಿಖ್, ಬುದ್ಧ, ಹಿಂದು, ಬಹಾಯ್, ಸ್ಥಳೀಯವಾಗಿ ರೂಪುಗೊಂಡಿರುವ ವೈವಿಧ್ಯಪೂರ್ಣವಾದ ಹಲವು ಧರ್ಮಗಳು, ಅವುಗಳಲ್ಲಿ ಬಹಳಷ್ಟು ಧರ್ಮಗಳನ್ನು ಸರ್ವ ಚೇತನ ವಾದ, ಮತ್ತೆ ಕೆಲವನ್ನು ಆಫ್ರಿಕಾ ಮತ್ತು ಆಫ್ರಿಕಾ ಮೂಲದಿಂದ ಪಡೆದ ಧರ್ಮಗಳೆಂದು ವರ್ಗೀಕರಿಸಲಾಗಿದೆ. ವಿವಿಧ ಮತ ಪಂಗಡಗಳ ನಂಬಿಕೆಗಳು ಖಂಡದುದ್ದಕ್ಕೂ ರೂಢಿಯಲ್ಲಿರುವುದನ್ನು ಕಾಣಬಹುದಾಗಿದೆ.

ಭಾಷೆಗಳು

ಬದಲಾಯಿಸಿ
 
ಅಮೆರಿಕಾದಲ್ಲಿ ಮಾತನಾಡುವ ಭಾಷೆಗಳು.

ಅಮೆರಿಕದಲ್ಲಿ ಹಲವು ಭಾಷೆಗಳನ್ನು ಮಾತನ್ನಾಡಲಾಗುತ್ತದೆ. ಅವುಗಳಲ್ಲಿ ಕೆಲವು ಐರೋಪ್ಯ ಮೂಲದಿಂದ ಬಂದವಾದರೆ, ಮತ್ತೆ ಕೆಲವನ್ನು ಸ್ಥಳೀಯ ಜನರು ಮಾತನ್ನಾಡುತ್ತಾರೆ ಅಥವಾ ಹಲವು ನುಡಿಗಟ್ಟುಗಳ ಸಂಯೋಗದಿಂದ ಸೃಷ್ಟಿಯಾದ ಭಾಷೆ, ಉದಾಹರಣೆಗೆ ವಿವಿಧ ನೀಗ್ರೊ ಅಥವಾ ಕ್ರಿಯೋಲ ಸಂತತಿ ಉಪಯೋಗಿಸುವ ಭಾಷೆ ಇಲ್ಲಿ ಬಳಕೆಯಲ್ಲಿವೆ. ಲ್ಯಾಟಿನ್ ಅಮೆರಿಕದ ಪ್ರಭಾವಿಶಾಲಿ ಭಾಷೆ ಎಂದರೆ ಸ್ಪಾನಿಷ್, ಆದಾಗ್ಯೂ, ಲ್ಯಾಟಿನ್ ಅಮೆರಿಕದ ಬೃಹತ್ ರಾಷ್ಟ್ರವೆನಿಸಿರುವ ಬ್ರೆಜಿಲ್ ನಲ್ಲಿ ಮಾತ್ರ ಪೋರ್ಚುಗೀಸನ್ನು ಹೆಚ್ಚಾಗಿ ಮಾತನ್ನಾಡುತ್ತಾರೆ. ಫ್ರೆಂಚ್ ಮತ್ತು ಇಂಗ್ಲಿಷ್ ಮಾತನಾಡುವ ಜನರಿಂದಲೇ ಸುತ್ತುವರಿದಿರುವ ಸಣ್ಣ ಪ್ರದೇಶಗಳು ಲ್ಯಾಟಿನ್ ಅಮೆರಿಕದಲ್ಲಿವೆ, ಅದರಲ್ಲೂ ಬಹುಮುಖ್ಯವಾದವು ಅಂದರೆ ಫ್ರೆಂಚ್ ಗಯಾನಾ ಮತ್ತು ಬೆಲಿಝೆ, ಮತ್ತು ಫ್ರೆಂಚ್ ಮೂಲದ ಹೈಟಿ ಕ್ರಿಯೋಲ ಭಾಷೆ ಅಥವಾ ನೀಗ್ರೊ ಭಾಷೆ ಹೈಟಿ ರಾಷ್ಟ್ರದಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿದೆ.

ಆಂಗ್ಲೊ ಅಮೆರಿಕಗಿಂತ ಲ್ಯಾಟಿನ್ ಅಮೆರಿಕದಲ್ಲಿ ದೇಶಿಯ ಭಾಷೆಗಳು ಹೆಚ್ಚಿನ ಪ್ರಾಬಲ್ಯ ಹೊಂದಿವೆ, Nahuatl, Quechua, Aymara, ಮತ್ತು Guaraní ಭಾಷೆಗಳು ಅವುಗಳಲ್ಲಿ ಪ್ರಮುಖವಾದವು. ಇತರೆ ಹಲವು ದೇಶಿಯ ಭಾಷೆಗಳನ್ನು ಆಂಗ್ಲೊ-ಅಮೆರಿಕ ಮತ್ತು ಲ್ಯಾಟಿನ್ ಅಮೆರಿಕಗಳೆರಡರ ಉದ್ದಗಲಕ್ಕೂ ಅಪರೂಪವಾಗಿ ಮಾತನ್ನಾಡುತ್ತಾರೆ ಹೈಟಿ ಕ್ರಿಯೋಲ ಹೊರತುಪಡಿಸಿದ ಸಾಮಾನ್ಯ ಕ್ರಿಯೋಲ ಭಾಷೆಯನ್ನು ಲ್ಯಾಟಿನ್ ಅಮೆರಿಕದ ವಿವಿಧ ಭಾಗಗಳಲ್ಲಿ ಮಾತನ್ನಾಡುತ್ತಾರೆ.

ಹೆಸರೇ ಸೂಚಿಸುವಂತೆ, ಆಂಗ್ಲೊ ಅಮೆರಿಕದ ಪ್ರಬಲ ಭಾಷೆ ಇಂಗ್ಲಿಷ್. ಕೆನಡಾದಲ್ಲಿ ಫ್ರೆಂಚ್ ಸಹ ಅಧಿಕೃತ ಭಾಷೆ, ಕ್ಯುಬೆಕ್ (Québec)ನಲ್ಲಿ ಪ್ರಬಲ ಭಾಷೆಯಾಗಿರುವ ಇದು, ನ್ಯೂ ಬ್ರನ್ ಸ್ವಿಕ್ (New Brunswick)ನಲ್ಲಿ ಇಂಗ್ಲಿಷ್ ಜೊತೆ ಅಧಿಕೃತ ಭಾಷೆಯಾಗಿದೆ. ಅಮೆರಿಕದ ರಾಜ್ಯ ಲೂಸಿಯಾನಾದಲ್ಲಿ ಇದು ಅತಿಮುಖ್ಯ ಭಾಷೆಯಾಗಿದೆ. ನೈಋತ್ಯ ಸಂಯುಕ್ತ ಸಂಸ್ಥಾನದಲ್ಲಿ ಸ್ಪಾನಿಷ್, ತನ್ನ ಅಸ್ತಿತ್ವವನ್ನು ಮುಂದುವರೆಸಿಕೊಂಡು ಬಂದಿದೆ. ಇದು ನ್ಯೂ ಸ್ಪೇನ್ ನ ಪ್ರಾಂತ್ಯದ (Viceroyalty) ಪ್ರತ್ಯೇಕ ಭಾಗದ ರಚನೆಗೆ ಕಾರಣವಾಗಿದೆ, ಅದರಲ್ಲೂ ವಿಶೇಷವಾಗಿ ಕ್ಯಾಲಿಫೋರ್ನಿಯಾ ಮತ್ತು ನ್ಯೂ ಮೆಕ್ಸಿಕೊದಲ್ಲಿ ಅದು ತನ್ನ ಅಸ್ತಿತ್ವ ಮುಂದುಬರೆಸಿಕೊಂಡು ಬಂದಿದೆ. 17 ನೇ ಶತಮಾನದ ತರುವಾಯ ಅಲ್ಲಿ ವಿಭಿನ್ನ ಸ್ಪಾನಿಷ್ ಭಾಷೆಯ ಬಳಕೆಯಾಗುತ್ತಾ ಬಂದಿದೆ. ಲ್ಯಾಟಿನ್ ಅಮೆರಿಕದಿಂದ ವಲಸೆ ಬರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚಿನವರೆಗೆ ಸಂಯುಕ್ತ ಸಂಸ್ಥಾನದ ಉಳಿದ ಭಾಗಗಳಲ್ಲೂ ಸ್ಪಾನಿಷ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಅತ್ಯದಿಕ ಪ್ರಮಾಣದ ವಲಸೆಯಿಂದಾಗಿ ಆಂಗ್ಲೊ ಅಮೆರಿಕದಲ್ಲಿ ಮಹತ್ವದ ಭಾಷಾ ವೈವಿಧ್ಯತೆ ಕಾಣಿಸಿಕೊಂಡಿದೆ, ಸಂಯುಕ್ತ ಸಂಸ್ಥಾನವೊಂದರಲ್ಲೇ 300 ಕ್ಕೂ ಅಧಿಕ ಭಾಷೆಗಳನ್ನು ಮಾತನ್ನಾಡುತ್ತಿರುವುದು ತಿಳಿದು ಬಂದಿದೆ, ಆದರೆ ಬಹುಪಾಲು ಭಾಷೆಗಳನ್ನು ಚಿಕ್ಕ ಪ್ರಾಂತ್ಯಗಳಲ್ಲಿ ಸಣ್ಣ ಸಣ್ಣ ವಲಸೆ ಗುಂಪುಗಳು ಮಾತ್ರ ಬಳಸುತ್ತಿವೆ. ಗಯಾನಾ, ಸುರಿನಾಮೆ ಮತ್ತು ಬೆಲಿಝೆ ರಾಷ್ಟ್ರಗಳು ಆಂಗ್ಲೊ ಅಮೆರಿಕಕ್ಕಾಗಲಿ ಅಥವಾ ಲ್ಯಾಟಿನ್ ಅಮೆರಿಕಕ್ಕಾಗಲಿ ಒಳಪಟ್ಟಿಲ್ಲ ಎಂದು ಸಾಮಾನ್ಯವಾಗಿ ಪರಿಗಣಿಸಲಾಗಿದೆ. ಏಕೆಂದರೆ, ಉಭಯ ರಾಷ್ಟ್ರಗಳ ನಡುವೆ ಮಹತ್ವದ ಭಾಷಾವಾರು ವ್ಯತ್ಯಾಸ, ಭೌಗೋಳಿಕ ಭಿನ್ನತೆ ಮತ್ತು ಸಂಸ್ಕೃತಿ ಹಾಗೂ ಚಾರಿತ್ರಿಕ ವ್ಯತ್ಯಾಸಗಳಿವೆ. ಗಯಾನಾ ಮತ್ತು ಬೆಲಿಝೆಯಲ್ಲಿ ಇಂಗ್ಲಿಷ್ ಪ್ರಾಥಮಿಕ ಭಾಷೆ, ಸುರಿನಾಮೆಯಲ್ಲಿ ಡಚ್ ಅಧಿಕೃತ ಮತ್ತು ಲಿಖಿತ ಭಾಷೆ.

  • ಸ್ಪಾನಿಷ್ - ಸುಮಾರು 310 ಮಿಲಿಯನ್ ಜನರು ಖಂಡದ ಹಲವು ರಾಷ್ಟ್ರಗಳ ಉದ್ದಗಲಕ್ಕೂ ಮಾತನ್ನಾಡುತ್ತಾರೆ.
  • ಇಂಗ್ಲಿಷ್ - ಸಂಯುಕ್ತ ಸಂಸ್ಥಾನ, ಕೆನಡಾ, ಜಮೈಕ, ಟ್ರಿನಿಡಾಡ್ ಮತ್ತು ಟೊಬಾಗೊ, ಬಹಮಸ್, ಬರ್ಮುಡಾ, ಬೆಲಿಝೆ, ಗಯಾನಾ, ಫಾಕ್ ಲ್ಯಾಂಡ್ಸ್ ಮತ್ತು ವೆಸ್ಟ್ ಇಂಡೀಸ್ ದ್ವೀಪ ಪ್ರದೇಶದ ಹಲವೆಡೆ ಅಂದಾಜು 300 ಮಿಲಿಯನ್ ಜನರು ಈ ಭಾಷೆ ಮಾತನಾಡುತ್ತಾರೆ.
  • ಪೋರ್ಚುಗೀಸ್ - ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ನಲ್ಲಿ ಸುಮಾರು 185 ಮಿಲಿಯನ್ ಜನರು ಈ ಭಾಷೆ ಮಾತನ್ನಾಡುತ್ತಾರೆ.[೫೪]
  • ಫ್ರೆಂಚ್ - ಕೆನಡಾ ( ಕ್ಯುಬೆಕ್ ನ ಬಹುಸಂಖ್ಯಾತ 7 ಮಿಲಿಯನ್ ಜನರು - ಕ್ಯುಬೆಕ್ ಫ್ರೆಂಚ್ ನೋಡಿ - ನ್ಯೂ ಬ್ರನ್ಸ್ ವಿಕ್ ಮತ್ತು ನೊವ ಸ್ಕಾಟಿಯಅಕಾಡಿಯ ಸಮುದಾಯ), ವೆಸ್ಟ್ ಇಂಡೀಸ್ ದ್ವೀಪ ಪ್ರದೇಶ (ಹೈಟಿ, ಗಾಡೆಲೊಪ್, ಮಾರ್ಟಿನಿಕ್), ಫ್ರೆಂಚ್ ಗಯಾನಾ, ಫ್ರೆಂಚ್ ದ್ವೀಪ ಪ್ರದೇಶದ ಸೈಂಟ್ ಪಿಯರ್ ಮತ್ತು ಮಿಕೆಲಾನ್, ಮತ್ತು ಅಕಾಡಿಯಾನ ( ದಕ್ಷಿಣ ಲೂಸಿಯಾನಾದ ಫ್ರಾಂಕೊಫೋನ್ ಪ್ರದೇಶ, ಸಂಯುಕ್ತ ಸಂಸ್ಥಾನ) ದಲ್ಲಿ ಸುಮಾರು 12 ಮಿಲಿಯನ್ ಜನರು ಈ ಭಾಷೆ ಮಾತನ್ನಾಡುತ್ತಾರೆ.
  • ಕೆಚುವಾ - ಈಕ್ವೆಡರ್, ಪೆರು, ಬೊಲಿವಿಯಾ, ಉತ್ತರ ಚಿಲಿ ಮತ್ತು ವಾಯವ್ಯ ಅರ್ಜೆಂಟೈನಾದ ಸುಮಾರು 10–13 ಮಿಲಿಯನ್ ಜನರು ಸ್ಥಳೀಯ ಭಾಷೆ ಮಾತನ್ನಾಡುತ್ತಾರೆ.
  • ಹೈಟಿ ಕ್ರಿಯೋಲ - ಕ್ರಿಯೋಲ ಭಾಷೆ, ಫ್ರೆಂಚ್ ಮತ್ತು ಆಫ್ರಿಕಾದ ಹಲವು ಹಾಷೆಗಳಲ್ಲಿ ನೆಲೆಸಿದೆ, ಹೈಟಿ ಹಾಗೂ ಕೆನಡಾದಲ್ಲಿ ಚದುರಿರುವ ಹೈಟಿ ಭಾಷಿಕರು ಮತ್ತು ಸಂಯುಕ್ತ ಸಂಸ್ಥಾನದಲ್ಲಿ 6 ಮಿಲಿಯನ್ ಜನರು ಈ ಭಾಷೆ ಆಡುತ್ತಾರೆ.[೫೫]
  • ಗರಾನಿ (avañe'ẽ)- ಪರಾಗ್ವೆ ಮತ್ತು ಅರ್ಜೆಂಟೈನಾ, ಬೊಲಿವಿಯಾ ಮತ್ತು ಬ್ರೆಜಿಲ್ ನ ಆಯಾ ಪ್ರದೇಶಗಳಲ್ಲಿ ಈ ಸ್ಥ ಳೀಯ ಭಾಷೆಯನ್ನು ಮಾತನ್ನಾಡುತ್ತಾರೆ.
  • ಚೀನಿ ಭಾಷೆ - ಇದನ್ನು ಸಂಯುಕ್ತ ಸಂಸ್ಥಾನ, ಕೆನಾಡಾ, ಪೆರು ಮತ್ತು ಪನಾಮಾದಲ್ಲಿ ನೆಲೆಸಿರುವ 5 ಮಿಲಿಯನ್ ಜನರು ಆಡುತ್ತಾರೆ.
  • ಇಟಲಿ ಭಾಷೆ - ಸಂಯುಕ್ತ ಸಂಸ್ಥಾನದಲ್ಲಿರುವ ನ್ಯೂ ಇಂಗ್ಲೆಂಡ್/ಮಿಡ್ ಅಟ್ಲಾಂಟಿಕ್, ಕೆನಾಡಾದ ದಕ್ಷಿಣ ಆಂಟಾರಿಯೊ ಮತ್ತು ಕ್ಯುಬೆಕ್, ಅರ್ಜೆಂಟೈನಾ, ಉರುಗ್ವೆ ಮತ್ತು ಬ್ರೆಜಿಲ್ ಮತ್ತು ಇಟಲಿಯ ಪ್ರಾದೇಶಿಕ ಭಾಷೆಗಳು ಸೇರಿದಂತೆ, ಅವುಗಳೆಂದರೆ, ಟಲಿಯಾ (ಬ್ರೆಜಿಲ್) ಮತ್ತು ಚಿಪಿಲೊ (ಮೆಕ್ಸಿಕೊ)ದ ಸುಮಾರು ೪ ಮಿಲಿಯನ್ ಜನರು ಈ ಭಾಷೆ ಆಡುತ್ತಾರೆ.
  • ಜರ್ಮನ್ - ಸುಮಾರು 2.2 ಮಿಲಿಯನ್ ಜನ. ಸಂಯುಕ್ತ ಸಂಸ್ಥಾನದಲ್ಲೇ 1.1 ಮಿಲಿಯನ್ ಜನರು ಹಾಗೂ ಲ್ಯಾಟಿನ್ ಅಮೆರಿಕದ ಮೆಕ್ಸಿಕೊ, ಬ್ರೆಜಿಲ್, ಅರ್ಜೆಂಟೈನಾ, ಚಿಲಿ ಮತ್ತು ಪರಾಗ್ವೆಯ ಭಾಗಗಳಲ್ಲಿ ಮಾತ್ತೊಂದು ಮಿಲಿಯನ್ ಜನ ಈ ಭಾಷೆಯನ್ನು ಆಡುತ್ತಾರೆ.
  • ಆಯ್ಮರ - ಆಂಡೇಸ್, ಬೊಲಿವಿಯಾ, ಪೆರು ಮತ್ತು ಚಿಲಿಯ ಸುಮಾರು 2.2 ಮಿಲಿಯನ್ ಜನರು ಈ ಸ್ಥಳೀಯ ಭಾಷೆಯನ್ನು ಆಡುತ್ತಾರೆ.[೫೬][೫೭]
  • ಕ್ವಿಂಚೆ ಮತ್ತು ಇತರೆ ಮಾಯಾ ಭಾಷೆಗಳು - ಗ್ವಾಟೆಮಾಲಾ ಮತ್ತು ದಕ್ಷಿಣ ಮೆಕ್ಸಿಕೊದ ಸುಮಾರು 1.9 ಮಿಲಿಯನ್ ಮಂದಿ ಈ ಸ್ಥಳೀಯ ಭಾಷೆ ಆಡುತ್ತಾರೆ.
  • ನಹುತಾಲ್ - ಸೆಂಟ್ರಲ್ ಮೆಕ್ಸಿಕೊದ 1.5 ಮಿಲಿಯನ್ ಮಂದಿಯ ಸ್ಥಳೀಯ ಭಾಷೆ ಇದಾಗಿದೆ. ಅಲ್ಲದೆ, ಮೆಕ್ಸಿಕೊದ ಅಝ್ಟೆಕ್ ಜನರ ಭಾಷೆಯೂ ಇದಾಗಿತ್ತು.
  • ದ್ವೀಪ ಪ್ರದೇಶದ ಕ್ರಯೋಲ - ಪೂರ್ವ ವೆಸ್ಟ್ ಇಂಡೀಸ್ ದ್ವೀಪ ಪ್ರದೇಶ (ಗಾಡೆಲೊಪ್, ಮಾರ್ಟಿನಿಕ್, ಡೊಮಿನಿಕ, ಸೈಂಟ್ ಲೂಸಿಯಾ) ಮತ್ತು ಫ್ರೆಂಚ್ ಗಯಾನಾದ ಸುಮಾರು 1.2 ಮಿಲಿಯನ್ ಜನರು ಈ ಭಾಷೆ ಆಡುತ್ತಾರೆ.
  • ಜವನೀಸ್ ಭಾಷೆ - ಸುರಿನಾಮೆಯಲ್ಲಿ ಹೆಚ್ಚು ಬಳಕೆಯಲ್ಲಿರುವ ಭಾಷೆ.
  • ಟಗಲಾಗ್ ಭಾಷೆ - ಸ್ಪಾನಿಷ್ ಸಾಮ್ರಾಜ್ಯ ಇದ್ದಾಗಿನಿಂದಲೂ ಈ ಭಾಷೆ ಚಾಲ್ತಿಯಲ್ಲಿದೆ. ಇದನ್ನು ಈಗ ಸಂಯುಕ್ತ ಸಂಸ್ಥಾನ ಮತ್ತು ಕೆನಡಾದಲ್ಲಿ ನೆಲೆಸಿರುವ 1.5 ಮಿಲಿಯನ್ ಜನರು ಆಡುತ್ತಾರೆ.
  • ವಿಯಾಟ್ನಾಮೀಸ್ ಭಾಷೆ - ಇತ್ತೀಚೆಗೆ ಸಂಯುಕ್ತ ಸಂಸ್ಥಾನಕ್ಕೆ ವಲಸೆ ಬಂದಿರುವ 1 ಮಿಲಿಯನ್ ಜನರು ಈ ಭಾಷೆಯನ್ನು ಆಡುತ್ತಾರೆ.
  • ಹಲವು ಭಾರತೀಯ ಭಾಷೆಗಳಾದ ಹಿಂದಿ, ಪಂಜಾಬಿಯನ್ನು ಇಂಡೋ-ಕೆರಿಬಿಯನ್ ಜನರು ಹೆಚ್ಚಾಗಿ ಆಡುತ್ತಾರೆ ಮತ್ತು ಕೆನಡಾ, ಸಂಯುಕ್ತ ಸಂಸ್ಥಾನದಲ್ಲಿ ಇವರು ಹೆಚ್ಚಾಗಿ ನೆಲೆಸಿದ್ದಾರೆ.
  • ಕೊರಿಯನ್ ಭಾಷೆ - ಇತ್ತೀಚೆಗೆ ಇದು ಸಂಯುಕ್ತ ಸಂಸ್ಥಾನದಲ್ಲಿ ಪ್ರಧಾನ ಭಾಷೆಯಾಗಿದೆ. ಈ ಭಾಷೆಯನ್ನು 1 ಮಿಲಿಯನ್ ಜನರು ಮಾತನ್ನಾಡುತ್ತಾರೆ.
  • ಜಪಾನೀಸ್ ಭಾಷೆ - ಸಂಯುಕ್ತ ಸಂಸ್ಥಾನದಲ್ಲಿ ಒಂದು ಕಾಲದಲ್ಲಿ ಬಳಕೆಯಲ್ಲಿದ್ದ ಪ್ರಮುಖ ಅಲ್ಪಸಂಖ್ಯಾತ ಭಾಷೆ, ಆದರೆ ಇತ್ತೀಚೆಗೆ ಅಲ್ಲಿ ಜನಸಂಖ್ಯೆ ವಿಮುಖವಾಗಿದೆ. ಬ್ರೆಜಿಲ್ ಮತ್ತು ಪೆರುವಿನಲ್ಲಿ ಇದು ಬಳಕೆಯಲ್ಲಿತ್ತು.
  • ಹಮೊಂಗ್ - ಆಗ್ನೇಯ ಏಷ್ಯಾದ ದೇಶಿ ಭಾಷೆ, ಈ ಭಾಷೆಯನ್ನು ಏಷ್ಯಾದ ಹೊರಗೆ ಅತಿಹೆಚ್ಚು ಮಾತನ್ನಾಡುವವರ ಸಂಖ್ಯೆ ಸಂಯುಕ್ತ ಸಂಸ್ಥಾನದಲ್ಲಿದ್ದಾರೆ.
  • ಅಮೆರಿಕ ಸನ್ನೆ ಭಾಷೆ - ಇದು ಅಮೆರಿಕದ ಕ್ಗ್ರುಡರ ಭಾಷೆ. ಅಲ್ಲಿನ ಸುಮಾರು 1 ಲಕ್ಷದಿಂದ 5 ಲಕ್ಷ ಮಂದಿ ಈ ಭಾಷೆಯನ್ನು ಬಳಸುತ್ತಾರೆ. ಸಂಯುಕ್ತ ಸಂಸ್ಥಾನ ಮತ್ತು ಕೆನಡಾದಲ್ಲಿ ಬಳಕೆಯಲ್ಲಿರುವ ಪ್ರಾಥಮಿಕ ಭಾಷೆ ಇದಾಗಿದೆ.[೫೮]
  • ಮಪುಡುಂಗನ್ (ಅಥವಾ ಮಪುಚೆ) - ಚಿಲಿ ಮತ್ತು ಅರ್ಜೆಂಟೈನಾದ ಸುಮಾರು 440,000 ಜನರು ಈ ಸ್ಥಳೀಯ ಭಾಷೆ ಆಡುತ್ತಾರೆ.
  • ನವಜೊ - ನೈಋತ್ಯ ಅಮೆರಿಕದಲ್ಲಿರುವ ನವಜೊ ರಾಷ್ಟ್ರ(ಭಾರತದ ಪರಿಮಿತಿ)ದ ಸುಮಾರು 178,೦೦೦ ಮಂದಿ ಈ ಸ್ಥಳೀಯ ಭಾಷೆಯನ್ನು ಆಡುತ್ತಾರೆ.[೫೯] ಕ್ರಿಸ್ತಶಕ 1900ರ ಆರಂಭದಲ್ಲಿ ಕಂಡುಬಂದ ಬುಡಕಟ್ಟು ಜನಾಂಗದ ಪ್ರತ್ಯೇಕತೆಯ ಸಂದರ್ಭದಲ್ಲಿ ಭಾಷೆಯನ್ನು ಎರಡನೇ ವಿಶ್ವಯುದ್ಧದಲ್ಲಿ ಸೇನೆಯ ಸಂಕೇತ ಭಾಷೆಯಾಗಿ ಬಳಸಲಾಗಿತ್ತು.
  • ಡಚ್ - ನೆದರ್ ಲ್ಯಾಂಡ್ಸ್ ದ್ವೀಪ ಪ್ರದೇಶ, ಅರುಬ ಮತ್ತು ಸುರಿನಾಮೆಯಲ್ಲಿ ಅಂದಾಜು 210,೦೦೦ ಜನರು ಈ ಭಾಷೆಯನ್ನು ಬಳಸುತ್ತಾರೆ.
  • ಮಿಸ್ಕಿಟೊ - 180,000 ಕ್ಕೂ ಅಧಿಕ ಮಿಸ್ಕಿಟೊ ಜನರು ಇದನ್ನು ಮಾತನ್ನಾಡುತ್ತಾರೆ. ಅವರು ವೆಸ್ಟ್ ಇಂಡೀಸ್ ದ್ವೀಪ ಕರಾವಳಿಯ ನಿಕರಗುವಾ ಮತ್ತು ಹೊಂಡುರಸ್ ಪೂರ್ವ ದಿಕ್ಕಿನಲ್ಲಿ ನೆಲೆಸಿರುವ ಮೂಲನಿವಾಸಿಗಳಾಗಿದ್ದಾರೆ.
  • ಪೆನ್ಸಿಲ್ವೇನಿಯಾ ಡಚ್ - ಹದಿನೇಳು ಮತ್ತು ಹದಿನೆಂಟನೇ ಶತಮಾನದಲ್ಲಿ ಈಶಾನ್ಯ ಅಮೆರಿಕದ ಪೆನ್ಸಿಲ್ವೇನಿಯಾ ಡಚ್ಚರ ಕೆಲವು ಜನ (ಸಂತತಿ) ಜರ್ಮನ್ ಭಾಷೆಯನ್ನು ಗ್ರಾಮ್ಯ ರೂಪದಲ್ಲಿ ಬಳಸುತ್ತಿದ್ದ ಭಾಷೆಯನ್ನು ಈಗಲೂ ಆಡುತ್ತಾರೆ. ಪೆನ್ಸಿಲ್ವೇನಿಯಾ ಡಚ್ಚರ ಸಂಖ್ಯೆ ಸುಮಾರು 85,000 ಇದೆ.
  • ಇನುಕ್ಟಿಟಟ್ ಮತ್ತು ಇತರೆ ಎಸ್ಕಿಮೊ ಭಾಷೆಗಳು - ಉತ್ತರ ಅಮೆರಿಕದ ಧ್ರುವ ಭಾಗ (ಶೀತ ವಲಯ)ಮತ್ತು ಲಬ್ರೊಡಾರ್ ಉಪಶೀತವಲಯದ ಕೆಲವು ಪ್ರದೇಶಗಳಲ್ಲಿ ಸುಮಾರು 75,೦೦೦ ಮಂದಿ, ಈ ಸ್ಥಳೀಯ ಭಾಷೆಯನ್ನು ಮಾತನ್ನಾಡುತ್ತಾರೆ.
  • ಡ್ಯಾನಿಷ್ - ಮತ್ತು ಗ್ರೀನ್ ಲ್ಯಾಂಡಿಕ್ (ಎಸ್ಕಿಮೊ) - ಇವು ಗ್ರೀನ್ ಲ್ಯಾಂಡ್ ನ ಅಧಿಕೃತ ಭಾಷೆಗಳು, ಬಹುಪಾಲು ಜನರು ಇವೆರದೂ ಭಾಷೆಗಳನ್ನು ಮಾತನ್ನಾಡುತ್ತಾರೆ ( ಅಂದಾಜು 50,೦೦೦ ಮಂದಿ). ಎಸ್ಕಿಮೊ ಪೀಳಿಗೆಗೆ ಸೇರದ ಡ್ಯಾನಿಷ್ ಅಲ್ಪಸಂಖ್ಯಾತ ವಲಸೆಗಾರರು ಡ್ಯಾನಿಷ್ ಭಾಷೆಯನ್ನು ಮೊದಲ ಮತ್ತು ಏಕೈಕ ಭಾಷೆಯಾಗಿ ಬಳಸುತ್ತಾರೆ.
  • ಕ್ರೀ - ಅಲ್ಗೊಂಕ್ವಿ ಭಾಷೆಗಳಿಗೆ ಪರಸ್ಪರ ಸಂಬಂಧಿಸಿದ ಗುಂಪಿನ ಭಾಷೆಗಳಿಗೆ ಕ್ರೀ ಎಂದು ಹೆಸರಿಸಲಾಗಿದೆ, ಕ್ರೀ ಭಾಷೆಯನ್ನು ಕೆನಡಾದಲ್ಲಿ ಸುಮಾರು 50,೦೦೦ ಮಂದಿ ಮಾತನ್ನಾಡುತ್ತಾರೆ.
  • ನಿಕರಾಗುವಾ ಕ್ರಯೋಲ - ನಿಕರಗುವಾದ 30,೦೦೦ ಜನ ಈ ಭಾಷೆ ಮಾತನ್ನಾಡುತ್ತಾರೆ. ಕೆರಿಬಿಯನ್ ಕರಾವಳಿಯಲ್ಲಿ ನೆಲೆಸಿರುವ ಆಫ್ರಿಕನ್ನರು, ಅಮೆರಿಂಡಿಯನ್ನರು ಮತ್ತು ಯೂರೋಪಿಯನ್ನರು ಮೂಲತಃ ಈ ಭಾಷೆಯನ್ನು ಬಳಸುತ್ತಾರೆ.
  • ಗರಿಫುನ (ಅಥವಾ ಗರಿನಗು) - ಕೆರಿಬಿಯನ್ (ವೆಸ್ಟ್ ಇಂಡೀಸ್ ದ್ವೀಪ ಪ್ರದೇಶ) ಕರಾವಳಿಯ ಬೆಲಿಝೆ, ಗ್ವಾಟೆಮಾಲಾ, ಹೊಂಡುರಸ್ ಮತ್ತು ನಿಕರಾಗುವಾದ ಭಾಗಗಳಲ್ಲಿ ನೆಲೆಸಿರುವ ಗರಿಫುನ ಜನರು, ಈ ಸ್ಥಳೀಯ ಭಾಷೆಯನ್ನು ಆಡುತ್ತಾರೆ. ಬಹುಸಂಖ್ಯಾತ ಜನರು ಹೊಂಡುರಸ್ ನಲ್ಲಿ ಜೀವನ ನಡೆಸುತ್ತಿದ್ದಾರೆ.
  • ವೇಲ್ಸ್ - ಅರ್ಜೆಂಟೈನಾದ ಎರಡು ಪಟ್ಟಣಗಳಾದ ಟ್ರೆಲಿ ಮತ್ತು ರಾ(ವ್)ಸನ್ ಗಳಿಗೆ 19ನೇ ಶತಮಾನದ ಅಂತ್ಯದಲ್ಲಿ ವಲಸೆ ಬಂದ ವೇಲ್ಸ್ ಸಮುದಾಯದ 25,೦೦೦ ಜನರು ಮತ್ತು ಪಟ್ಟಣದ ಹಿರಿಯ ನಾಗರಿಕರು ಈ ಭಾಷೆಯನ್ನು ಮಾತನ್ನಾಡುತ್ತಾರೆ.
  • ಚೆರೋಕಿ - ಅಮೆರಿಕದ ಒಕ್ಲಹಾಮಾದ ಒಂದು ಭಾಗದಲ್ಲಿ ಸುಮಾರು 19,000 ಜನರು ಈ ಆಡುಭಾಷೆಯನ್ನು ಬಳಸುತ್ತಾರೆ. ಇಪ್ಪತ್ತನೇ ಶತಮಾನದ ಅಂತ್ಯಭಾಗದಿಂದ ಈ ಭಾಷೆಯು ಮತ್ತೆ ಬಳಕೆಗೆ ಬಂದಿದೆ. ಚೆರೋಕಿ ಭಾಷೆಗೆ ತನ್ನದೇ ಆದ ಅಕ್ಷರಮಾಲೆ ಇದೆ, ಚೆರೋಕಿ ಲಿಖಿತ ಕ್ರಮವನ್ನು ಹೊಂದಿದೆ.
  • ಗುಲ್ಲ್ಹಾ - ಪಶ್ಚಿಮ ಮತ್ತು ಸೆಂಟ್ರಲ್ ಆಫ್ರಿಕಾ ಭಾಷೆಗಳಿಂದ ಹೆಚ್ಚು ಪ್ರಭಾವಿತವಾದ, ಇಂಗ್ಲಿಷ್ ಆಧರಿತ ಗುಲ್ಲ್ಹಾ ಕ್ರಯೋಲ ಭಾಷೆಯನ್ನು ಗುಲ್ಲ್ಹಾ ಜನರು ಮಾತನ್ನಾಡುತ್ತಾರೆ. ಅಮೆರಿಕ ಕರಾವಳಿ ತೀರದಲ್ಲಿರುವ ದಕ್ಷಿಣ ಕರೋಲಿನಾ ಮತ್ತು ಜಾರ್ಜಿಯಾದಲ್ಲಿ ಆಫ್ರಿಕಾ-ಅಮೆರಿಕನ್ನರಾದ ಈ ಜನರು ನೆಲೆಸಿದ್ದಾರೆ.
  • ಸ್ರನನ್ ಟೊಂಗೊ - ಟಕಿಟಕಿ ಎಂದು ಕರೆಯಲ್ಪಡುವ ಈ ಆಡು ಭಾಷೆಯನ್ನು ಹೆಚ್ಚಾಗಿ ಸುರಿನಾಮೆಯಲ್ಲಿ ಉಪಯೋಗಿಸುತ್ತಾರೆ. ಬರವಣಿಗೆಗೆ ಸಾಮಾನ್ಯವಾಗಿ ಈ ಭಾಷೆಯನ್ನು ಬಳಸುವುದಿಲ್ಲ. ಸ್ಪಾನಿಷ್, ಇಂಗ್ಲಿಷ್, ಡಚ್, ಹಿಂದೂಸ್ತಾನಿ ಮತ್ತು ಇತರೆ ಹಲವಾರು ಭಾಷೆಗಳನ್ನು ಆಧರಿಸಿದ ಕ್ರಯೋಲ ಭಾಷೆ ಇದಾಗಿದೆ.

ಸ್ಥಳೀಯವಲ್ಲದ ಬಹುಪಾಲು ಭಾಷೆಗಳು ವಿವಿಧ ಪದ ಬಳಕೆ ಮತ್ತು ಭಾಷಾ ಪ್ರಯೋಗಗಳನ್ನು ಹೊಂದಿರುತ್ತವೆ, ಮಾತೃ ರಾಷ್ಟ್ರಕ್ಕಿಂತ ವಿಭಿನ್ನ ಬಳಕೆಯ ಕ್ರಮ ಹೊಂದಿರುತ್ತವೆ, ಆದರೂ ಸಾಮಾನ್ಯವಾಗಿ ಅವುಗಳನ್ನು ಗ್ರಹಿಸಲು ಸಾಧ್ಯ. ಕೆಲವು ಭಾಷೆಗಳು ಸಂಯೋಜನೆಗೊಂಡು, ಅದರ ಪರಿಣಾಮವಾಗಿ ಪರಿಪೂರ್ಣ ಹೊಸ ಭಾಷೆಗಳೇ ಸೃಷ್ಟಿಯಾಗಿವೆ. ಅವುಗಳಲ್ಲಿ ಪಪಿಯಾಮೆಂಟು ಭಾಷೆ ಮುಖ್ಯವಾದುದು. ಇದು ಪೋರ್ಚುಗೀಸ್, ಸ್ಪಾನಿಷ್, ಡಚ್, ಅರವಕ್ ಸ್ಥಳೀಯ ಭಾಷೆ, ಹಲವಾರು ಆಫ್ರಿಕಾ ಭಾಷೆಗಳು ಮತ್ತು ಇತ್ತೀಚಿಗೆ ಇಂಗ್ಲಿಷ್ ಭಾಷೆಗಳ (ಈ ಪ್ರದೇಶಗಳ ವಸಾಹತುಗಾರರನ್ನು ಇದು ಪ್ರತಿನಿಧಿಸುತ್ತದೆ) ಸಂಯೋಜನೆಯಿಂದ ಈ ಭಾಷೆ ಸೃಷ್ಟಿಯಾಗಿದೆ. ವಲಸೆಯ ಏಕೈಕ ಕಾರಣದಿಂದಾಗಿ, ಹಲವಾರು ಸಮುದಾಯಗಳು ವಿಶ್ವದ ಎಲ್ಲಾ ಭಾಗಗಳಲ್ಲಿ ವಿವಿಧ ಭಾಷೆಗಳನ್ನು ಮಾತನ್ನಾಡುತ್ತಿದ್ದಾರೆ, ಅದರಲ್ಲೂ ವಿಶೇಷವಾಗಿ ಸಂಯುಕ್ತ ಸಂಸ್ಥಾನ, ಬ್ರೆಜಿಲ್, ಅರ್ಜೆಂಟೈನಾ ಮತ್ತಿ ಕೆನಡಾ ರಾಷ್ಟ್ರಗಳು ವಲಸೆಗಾರರ ಪ್ರಮುಖ ತಾಣಗಳಾಗಿವೆ.

 
ಮಾಂಟ್ರೆಯಲ್,ಉತ್ತರ ಅಮೆರಿಕಾದ ಅತಿ ದೊಡ್ಡ ಫ್ರೆಂಚ್ ಮಾತನಾಡುವ ದೊಡ್ಡ ನಗರ

ಶಾಬ್ದಿಕ ನಿರ್ದಿಷ್ಟಾರ್ಥ[ಪರಿಭಾಷಾ ಶಾಸ್ತ್ರ]

ಬದಲಾಯಿಸಿ
Subdivisions of the Americas
Map Legend
 
  North America (NA)
  South America (SA)
  May be included in
       either NA or SA
 
  North America (NA)
  May be included in NA
  Central America
  Caribbean
  South America
 
  North America (NA)
  May be included in NA

       Northern America

  Middle America (MA)
  Caribbean (may be
        included in MA)
  South America (SA)
  May be included
        in MA or SA
 
  Anglo-America (A-A)
  May be included in A-A
  Latin America (LA)
  May be included in LA
 
ಅವರ ಹೆಚ್ಚು ವಿಸ್ತಾರದಲ್ಲಿ ಸ್ಪಾನಿಷ ಅಮೆರಿಕದ ವಸಾಹತುಗಳು (ಪೀಸ್ ಆಫ್ ಪ್ಯಾರಿಸ್ ನಂತರ ೧೭೮೩)

ಅಮೆರಿಕ/ಅಮೆರಿಕಸ್

ಬದಲಾಯಿಸಿ

ವಿಶ್ವದ ಹಲವು ಭಾಗಗಳಲ್ಲಿ, ಸಂಯುಕ್ತ ಸಂಸ್ಥಾನಕ್ಕೆ ಸಾಮಾನ್ಯವಾಗಿ ಅಮೆರಿಕ ಎಂಬ ಏಕವಾಚಕ ಪದವನ್ನು ಬಳಸುತ್ತಾರೆ, ಆದಾಗ್ಯೂ, ಅಮೆರಿಕಸ್ ಎಂಬ s ಜೊತೆಗಿನ ಬಹುವಾಚಕ ನಿರ್ದಿಷ್ಟ ಉಪಪದವನ್ನು ಪಶ್ಚಿಮ ಗೋಳಾರ್ಧದ ಭೂಪ್ರದೇಶ ಮತ್ತು ಪ್ರಾಂತ್ಯವನ್ನು ಉಲ್ಲೇಖಿಸಲು ಬಳಸುತ್ತಾರೆ. ಅಮೆರಿಕ ಹೆಸರನ್ನು ಒಟ್ಟಾರೆಯಾಗಿ ಮೇಲಿನಂತೆ ಬಳಸುವುದು ಸರ್ವೇಸಾಮಾನ್ಯ[೬೦]; ಉದಾಹರಣೆಗೆ, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಐದು ಖಂಡಗಳಿಗೂ ಒಟ್ಟಾರೆಯಾಗಿ ಅಮೆರಿಕ ಹೆಸರನ್ನೇ ಪರಿಗಣಿಸಿದೆ, ಅಲ್ಲದೆ, ಒಲಿಂಪಿಕ್ ಚಿಹ್ನೆಯಲ್ಲೂ ಚಿತ್ರಿಸಿದೆ.[೬೧] ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಬೇರೆ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ದೇಶಕ್ಕೆ ಅಮೆರಿಕ ಮತ್ತು ಪ್ರಜೆ ಅಥವಾ ನಾಗರಿಕರಿಗೆ ಅಮೆರಿಕನ್ನರು ಎಂದು ಉಲ್ಲೇಖಿಸುತ್ತಾರೆ[೬೨], ಮೇಲಿನ ಸಂದರ್ಭಗಳಲ್ಲಿ ವಿವಿಧ ಜನರು ಉಪಯೋಗಿಸಿರುವ ಇಂತಹ ಪದಗಳ ದುರ್ಬಳಕೆಗೆ[೬೩] ಅಮೆರಿಕದ ಹಲವು ಮಂದಿ ತಮ್ಮ ಅತೃಪ್ತಿ ವ್ಯಕ್ತಪಡಿಸಿದ್ದಾರೆ, ಅಲ್ಲದೆ, ಈ ರೀತಿಯ ಪದಗಳ ಬಳಕೆಯಾಗುವುದನ್ನು ಆದಷ್ಟು ತಡೆಯಲಾಗುತ್ತಿದೆ.[೬೪][೬೫][೬೬] ಕೆನಡಾದಲ್ಲಿ, ಅಲ್ಲಿನ ದಕ್ಷಿಣ ಭಾಗದ ಜನರು ಅಪರೂಪವಾಗಿ ಅಮೆರಿಕ ಪದವನ್ನು ಸಾಮಾನ್ಯವಾಗಿ ಯುನೈಟೆಡ್ ಸ್ಟೇಟ್ಸ್ , ಯು.ಎಸ್. , ಅಥವಾ (ಔಪಚಾರಿಕವಾಗಿ) ಸ್ಟೇಟ್ಸ್ ಪರ್ಯಾಯ ಪದಗಳಿಂದಲೂ ಉಲ್ಲೇಖಿಸುತ್ತಾರೆ.[೬೫] ಇಂಗ್ಲಿಷ್ ಅರ್ಥಕೋಶ ಮತ್ತು ಗ್ರಂಥಗಳಲ್ಲಿ ಅಮೆರಿಕ ಪದ ಬಳಕೆ ಮತ್ತು ಉಚ್ಚಾರಣೆಯಲ್ಲಿ ವ್ಯತ್ಯಾಸಗಳಿವೆ.[೬೭][೬೮][೬೯]

ಅಮೆರಿಕನ್

ಬದಲಾಯಿಸಿ

ಇಂಗ್ಲಿಷ್ ಬಳಕೆ

ಬದಲಾಯಿಸಿ

ಅಮೆರಿಕ ಅಥವಾ ಅಮೆರಿಕಸ್ ಪದಗಳಲ್ಲಿ ಯಾವ ಪದ ಬಳಕೆ ಆಗುತ್ತಿದೆ ಎಂಬದಕ್ಕಿಂತ ಅಮೆರಿಕದಲ್ಲಿ ವಾಸಿಸುತ್ತಿರುವ ಹಲವಾರು ಜನರನ್ನು ವ್ಯಕ್ತಿಗತವಾಗಿ ಗುರುತಿಸಲು ಅಮೆರಿಕನ್ ಪದ ಹೆಚ್ಚಾಗಿ ಬಳಕೆಯಾಗುತ್ತಿದೆ. ಆದಾಗ್ಯೂ, ಅಮೆರಿಕ ಸಂಯುಕ್ತ ಸಂಸ್ಥಾನದ ನಾಗರಿಕರು, ನಿವಾಸಿಗಳು ಅಥವಾ ರಾಷ್ಟ್ರೀಯರನ್ನು ಪರಿಪೂರ್ಣವಾಗಿ ಉಲ್ಲೇಖಿಸಲು ಇಂಗ್ಲಿಷ್ ಮಾತನಾಡುವ ಬಹುಪಾಲು ಭಾಗಗಳಲ್ಲಿ ಅಮೆರಿಕನ್ ಪದ ಬಳಕೆ ಇದೆ. ಇದರ ಜೊತೆಗೆ, ಅಮೆರಿಕನ್ನರು ಎಂದು ಕರೆಸಿಕೊಳ್ಳಲು ಹಲವು ಕೆನಡಿಯನ್ನರು ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೆನಡಿಯನ್ನರು ಯು.ಎಸ್. ನಾಗರಿಕರು ಎಂಬ ತಪ್ಪು ಗ್ರಹಿಕೆ ಇದಕ್ಕೆ ಕಾರಣ, ಹಾಗೂ ಕೆನಡಿಯನ್ ಇಂಗ್ಲಿಷ್ ಮತ್ತು ಅಮೆರಿಕನ್ ಇಂಗ್ಲಿಷ್ ಪದ ಪ್ರಯೋಗದ ವ್ಯತ್ಯಾಸ ಅರಿಯದ ಹೊರದೇಶದ ಜನರ ತಪ್ಪು ಗ್ರಹಿಕೆಯೂ ಹೌದು.[೬೫]

ಸ್ಪಾನಿಷ್ ಬಳಕೆ

ಬದಲಾಯಿಸಿ

ಸ್ಪಾನಿಷ್ ನಲ್ಲಿ, ಅಮೆರಿಕ ಎಂದರೆ ಒಂದು ಖಂಡದ ಹೆಸರು. ಈ ಖಂಡವು ಸುಡಾಮೆರಿಕ ಮತ್ತು ನಾರ್ಟೆಅಮೆರಿಕ ಉಪಖಂಡಗಳಿಂದ ರೂಪುಗೊಂಡಿದ್ದು, ಸೆಂಟ್ರೊಅಮೆರಿಕ ಭೂಭಾಗ ಮತ್ತು ಆಂಟಿಲ್ಲಾಸ್ ದ್ವೀಪ ಪ್ರದೇಶವನ್ನೂ ಒಳಗೊಂಡಿದೆ. ಅಮೆರಿಕ ದ ವ್ಯಕ್ತಿಗೆ ಸ್ಪಾನಿಷ್ ನಲ್ಲಿ Americano/a ಎಂಬ ಪದ ಬಳಕೆಯಲ್ಲಿದೆ. ಅಂತೆಯೇ, Europa ದೇಶದ ವ್ಯಕ್ಟಿಗೆ europeo or europea ಎಂಬ ಪದ ಬಳಸುತ್ತಾರೆ. sudamericano/a , centroamericano/a , antillano/a and norteamericano/a ಪದಗಳನ್ನು ವಿಶೇಷವಾಗಿ ವ್ಯಕ್ತಿಯು ವಾಸಿಸುವ ಸ್ಥಳಗಳನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನದ ನಾಗರಿಕರು americano ಅಥವಾ americana ಪದಕ್ಕೆ ಬದಲಾಗಿ ಸಾಮಾನ್ಯವಾಗಿ estadounidense ಪದವನ್ನು (ಅದರ ಅಕ್ಷರ ಅನುವಾದ ರೂಪ "United-Staten" ಎಂಬುದು) ಬಳಸುತ್ತಾರೆ, ಮತ್ತು ರಾಷ್ಟ್ರದ ಹೆಸರನ್ನು Estados Unidos de Norteamérica ಎಂದು ಅನುವಾದಿಸಲಾಗುತ್ತದೆ. ಜೊತೆಗೆ, norteamericano ಪದವನ್ನು ಸಂಯುಕ್ತ ಸಂಸ್ಥಾನದ ನಾಗರಿಕರನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಈ ಪದವನ್ನು ಮೂಲತ: ಸಂಯುಕ್ತ ಸಂಸ್ಥಾನದ ನಾಗರಿಕರಿಗೆ ಪ್ರಾಥಮಿಕವಾಗಿ, ಉತ್ತರ ಅಮೆರಿಕದ ಇತರೆ ರಾಷ್ಟ್ರಗಳಿಗೆ ಅಪರೂಪವಾಗಿ ಬಳಸಲಾಗುತ್ತಿದೆ.[೭೦]

ಪೋರ್ಚುಗೀಸ್ ಬಳಕೆ

ಬದಲಾಯಿಸಿ

ಪೋರ್ಚುಗೀಸ್ ನಲ್ಲಿ, ಅಖಂಡ ಅಮೆರಿಕ ವನ್ನು ಪ್ರಸ್ತಾಪಿಸುವಾಗ americano ಪದವನ್ನು ಬಳಸುತ್ತಾರೆ. ಆದರೆ, ಬ್ರೆಜಿಲ್ ಮತ್ತು ಪೋರ್ಚುಗಲ್ ನಲ್ಲಿ, ಇದನ್ನು ಸಂಯುಕ್ತ ಸಂಸ್ಥಾನದ ನಾಗರಿಕರನ್ನು ಉಲ್ಲೇಖಿಸಲು ಉಪಯೋಗಿಸುತ್ತಾರೆ. ಅತ್ಯಲ್ಪ ವಿಭಿನ್ನಾರ್ಥ ನೀಡುವ ಪದ, estadunidense (ಬ್ರೆಜಿಲ್‌ನಲ್ಲಿ ಬಳಸುತ್ತಾರೆ), "United Statian" ನಂತಹ ಪದ ( ಅಥವಾ ಸ್ಪಾನಿಷ್ ಭಾಷೆಯಲ್ಲಿ "estadounidense"), ಮತ್ತು "ianque" - "Yankee" ಪದದ ಪೋರ್ಚುಗೀಸ್ ರೂಪ - ಈ ಪದಗಳನ್ನು ಅಪರೂಪವಾಗಿ ಬಳಸಲಾಗುತ್ತದೆ. ಆದಾಗ್ಯೂ, ದೇಶಕ್ಕೆ ಅಮೆರಿಕ ಪದವನ್ನು ಅಪರೂಪವಾಗಿ ಸಮಾನಾರ್ಥಕ ಪದವಾಗಿ ಬಳಸಲಾಗುತ್ತಿದೆ, ಆದರೆ ಮುದ್ರಣ ಸಂದರ್ಭಗಳನ್ನು ಹೊರತುಪಡಿಸಿದ ಔಪಚಾರಿಕ ಸಂದರ್ಭಗಳಲ್ಲಿ ಅಮೆರಿಕವನ್ನು Estados Unidos da América (ಅಂದರೆ ಅಮೆರಿಕ ಸಂಯುಕ್ತ ಸಂಸ್ಥಾನ ಎಂದರ್ಥ) ಅಥವಾ ಇನ್ನೂ ಸರಳವಾಗಿ, Estados Unidos (ಅಂದರೆ ಸಂಯುಕ್ತ ಸಂಸ್ಥಾನ) ಎಂದು ಕರೆಯುತ್ತಾರೆ. ಪೋರ್ಚುಗಲ್ ಮತ್ತು ಬ್ರೆಜಿಲ್ ನಲ್ಲಿ ಈ ಪದಗಳ ಬಳಕೆಯಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ, ಪೋರ್ಚುಗೀಸರು ಅಮೆರಿಕ ಪದವನ್ನು ರಾಷ್ಟ್ರಕ್ಕೆ ಬಳಸಲು ಹೆಚ್ಚು ಒಲವು ಹೊಂದಿದ್ದಾರೆ.

ಫ್ರೆಂಚ್ ಬಳಕೆ

ಬದಲಾಯಿಸಿ

américain ಪದವನ್ನು ಸಂಯುಕ್ತ ಸಂಸ್ಥಾನಕ್ಕೆ ಬಳಸಬೇಕೇ ಅಥವಾ ಅಮೆರಿಕನ್ ಖಂಡಗಳಿಗೆ ಬಳಸಬೇಕೇ ಎಂಬ ಗೊಂದಲ ಇಂಗ್ಲಿಷ್‍ನಲ್ಲಿ ಇರುವಂತೆ, ಫ್ರೆಂಚ್‍ನಲ್ಲೂ ಇದೆ. Amérique ನಾಮಪದವನ್ನು ಕೆಲವು ವೇಳೆ ಒಂದು ಸಂಪೂರ್ಣ ಖಂಡಕ್ಕೆ ಉಲ್ಲೇಖಿಸಲಾಗುತ್ತದೆ, ಮತ್ತೆ ಕೆಲವು ಸಂದರ್ಭಗಳಲ್ಲಿ ಎರಡು ಖಂಡಗಳಿಗೆ, ದಕ್ಷಿಣ ಮತ್ತು ಉತ್ತರ; ಸಂಯುಕ್ತ ಸಂಸ್ಥಾನವನ್ನು ಸಾಮಾನ್ಯವಾಗಿ les États-Unis d'Amérique , les États-Unis , ಅಥವಾ les USA ಎಂದು ಉಲ್ಲೇಖಿಸಲಾಗುತ್ತದೆ. ಸಂಯುಕ್ತ ಸಂಸ್ಥಾನ ಮತ್ತು ಅಮೆರಿಕ ಖಂಡಗಳಿಗೆ ಸಂಬಂಧಿಸಿದ ಹಲವಾರು ವಿಷಯಗಳ ಬಹುಪಾಲು ಸಂದರ್ಭಗಳಲ್ಲಿ américain ಗುಣವಾಚಕವನ್ನು ಬಳಸಲಾಗುತ್ತದೆ. ಸಂಯುಕ್ತ ಸಂಸ್ಥಾನದ ಅನೇಕ ಲೇಖಕರು ಹೊರತಂದಿರುವ ಇಂಗ್ಲಿಷ್ ಅನುವಾದಿತ ಕೃತಿಗಳಲ್ಲಿ ಪದೇಪದೇ "traduit de l'américain" ಪದವನ್ನು ಬಳಸಿದ್ದಾರೆ. ಸಂಯುಕ್ತ ಸಂಸ್ಥಾನಕ್ಕೆ ಸಂಬಂಧಿಸಿದಂತೆ ಯಾವುದೇ ವಿಭಿನ್ನಾರ್ಥ ನೀಡದ états-unien , étasunien , ಅಥವಾ étatsunien ಪದಗಳನ್ನು ಅಪರೂಪವಾಗಿ ಬಳಸಲಾಗುತ್ತದೆ.

ಡಚ್ ಬಳಕೆ

ಬದಲಾಯಿಸಿ

ಡಚ್ ನಲ್ಲಿ ಸಂಯುಕ್ತ ಸಂಸ್ಥಾನಕ್ಕೆ ನಿರ್ದಿಷ್ಟವಾಗಿ Amerika ಪದವನ್ನು ಬಳಸುತ್ತಾರೆ. ಸಂಯುಕ್ತ ಸಂಸ್ಥಾನಕ್ಕೆ ಸಮಾನಾರ್ಥ ನೀಡುವ de Verenigde Staten or de VS ಪದ ಬಳಕೆಯೂ ಇದೆ, Amerika ಪದವನ್ನು ಅಪರೂಪವಾಗಿ Americas ಎಂದು ಪ್ರಸ್ತಾಪಿಸುತ್ತಾರೆ. ಆದರೆ, ಅಮೆರಿಕಸ್ ಗೆ ಈ ಡಚ್ ಪದವೇ (Amerika) ಎಲ್ಲೆಡೆ ಸಾಮಾನ್ಯ ಬಳಕೆಯಲ್ಲಿದೆ. ಇದು ಆಗಾಗ ವಿಭಿನ್ನಾರ್ಥಕ್ಕೆ ಎಡೆಮಾಡುತ್ತದೆ ಮತ್ತು ಅಮೆರಿಕಸ್ ನ ಹಲವು ಆತಂಕಗಳಿಗೆ ಒತ್ತು ನೀಡಿದೆ. ಉತ್ತರ ಮತ್ತು ದಕ್ಷಿಣ ಅಮೆರಿಕಕ್ಕೆ ಡಚ್ಚರು Noord- en Zuid Amerika ಪದವನ್ನು ಬಳಸುತ್ತಾರೆ.ಲ್ಯಾಟಿನ್ ಅಮೆರಿಕವನ್ನು ಸಾಮಾನ್ಯವಾಗಿ Latijns Amerika ಎಂದು, ದಕ್ಷಿಣ ಅಮೆರಿಕವನ್ನು ಆಗಿಂದಾಗ್ಗೆ Zuid Amerika ಎಂದು ಉಲ್ಲೇಖಿಸುತ್ತಾರೆ. amerikaans ಗುಣವಾಚಕವನ್ನು ಸಂಯುಕ್ತ ಸಂಸ್ಥಾನದ ಜನರು ಮತ್ತು ವಿಷಯಗಳಿಗೆ ಹೆಚ್ಚಾಗಿ ಬಳಸಲಾಗುತ್ತದೆ. ಸಂಯುಕ್ತ ಸಂಸ್ಥಾನ ಅಥವಾ ಅಮೆರಿಕಸ್ ಗೆ ಸಂಬಂಧಿಸಿದ ವಿಷಯಗಳನ್ನು ಪ್ರತ್ಯೇಕವಾಗಿ ಹೇಳಲು ಯಾವುದೇ ಪರ್ಯಾಯ ಪದಗಳಿಲ್ಲ. ಡಚ್ಚರು ಅಮೆರಿಕಸ್ ಗೆ ಪರ್ಯಾಯವಾದ ಸ್ಥಳೀಯ ಪದವನ್ನು ಬಳಸುತ್ತಾರೆ, ಉದಾಹರಣೆಗೆ Argentinian ಪದಕ್ಕೆ ಅವರು Argentijns ಪದವನ್ನು ಬಳಸುತ್ತಾರೆ.

ರಷ್ಯನ್ನರ ಬಳಕೆ

ಬದಲಾಯಿಸಿ

19ನೇ ಶತಮಾನದಲ್ಲಿ, ರಷ್ಯಾದಲ್ಲಿ "America" ಪದವನ್ನು ಯೂರೋಪ ಮತ್ತು ಏಷ್ಯಾ ಖಂಡಗಳಿಗೆ ಬಳಸುತ್ತಿದ್ದರು. 20ನೇ ಶತಮಾನದಲ್ಲಿ, ಈ ಸಾಂಪ್ರದಾಯಿಕ ಖಂಡಗಳು ವಿಶ್ವದ ಪ್ರಮುಖ ಭಾಗಗಳಾಗಿ ಗುರುತಿಸಿಕೊಂದವು. ವಿಶಾಲ ಭೂರಾಶಿ ಹೊಂದಿರುವ ಯಾವುದೇ ಆರು ಬೃಹತ್ ಪ್ರದೇಶಗಳನ್ನು ಈಗ "ಖಂಡ" ಎಂಬ ಪದದಿಂದ ವ್ಯಾಖ್ಯಾನಿಸಲಾಗುತ್ತಿದೆ (ಯೂರಾಸಿಯಾ, ಆಫ್ರಿಕಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಅಂಟಾರ್ಕ್ಟಿಕಾ ಮತ್ತು ಆಸ್ಟ್ರೇಲಿಯಾ). ಈಗ ಅಮೆರಿಕ ಪದವನ್ನು ಸಂಯುಕ್ತ ಸಂಸ್ಥಾನಕ್ಕೆ ಹೆಚ್ಚಾಗಿ ಬಳಸಲಾಗುತ್ತಿದೆ. ರಷ್ಯಾದಲ್ಲಿ ಅಮೆರಿಕಸ್‍ಗೆ ಸಮನಾದ ಬೇರೆ ಯಾವುದೇ ಪದ ಇಲ್ಲ.

ದೇಶಗಳು ಮತ್ತು ಪ್ರಾಂತ್ಯಗಳು

ಬದಲಾಯಿಸಿ
 
ನಕಾಶೆಯು ಅಮೆರಿಕಾ ದೇಶಗಳ ಸ್ವಾತಂತ್ರ್ಯದ ದಿನಾಂಕಗಳನ್ನು ತೋರಿಸುತ್ತದೆ.ಕಪ್ಪು ಬಣ್ಣದಲ್ಲಿ ಕಾಣುವ ಪ್ರದೇಶಗಳು ಇನ್ನೂ ಸ್ವತಂತ್ರವಾಗಿಲ್ಲ ಎಂದು ತೋರಿಸುತ್ತದೆ.

ಸಾರ್ವಭೌಮ ರಾಜ್ಯಗಳು

ಬದಲಾಯಿಸಿ

ಅಮೇರಿಕದಲ್ಲಿ 35 ಸಾರ್ವಭೌಮ ರಾಜ್ಯಗಳಿದ್ದು, ಅದರಲ್ಲಿ 23 ಉತ್ತರ ಅಮೇರಿಕಾದಲ್ಲಿ ಮತ್ತು 12 ದಕ್ಷಿಣ ಅಮೇರಿಕಾದಲ್ಲಿ ಇವೆ:

  •   ಆಂಟಿಗುವ ಮತ್ತು ಬಾರ್ಬುಡ
  •   ಅರ್ಜೆಂಟೀನ
  •   ಬಹಾಮಾಸ್
  •   ಬಾರ್ಬಡೋಸ್
  •   ಬೆಲೀಜ್
  •   ಬೊಲಿವಿಯ
  •   Brazil
  •   ಕೆನಡಾ
  •   Chile
  •   Colombia
  •   ಕೋಸ್ಟಾ ರಿಕ
  •   ಕ್ಯೂಬಾ
width="20" valign=top
  •   ಡೊಮಿನಿಕ
  •   ಡೊಮಿನಿಕ ಗಣರಾಜ್ಯ
  •   ಈಕ್ವಡಾರ್
  •   ಎಲ್ ಸಾಲ್ವಡಾರ್
  •   ಗ್ರೆನಾಡ
  •   ಗ್ವಾಟೆಮಾಲ
  •   ಗಯಾನ
  •   ಹೈತಿ
  •   ಹೊಂಡುರಾಸ್
  •   Jamaica
  •   ಮೆಕ್ಸಿಕೋ
  •   ನಿಕರಾಗುವ
width="20" valign=top
  •   ಪನಾಮಾ
  •   ಪೆರಗ್ವೆ
  •   ಪೆರು
  •   ಸೇಂಟ್ ಕಿಟ್ಸ್ ಮತ್ತು ನೆವಿಸ್
  •   ಸೇಂಟ್ ಲೂಷಿಯ
  •   ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್
  •   ಸುರಿನಾಮ್
  •   ಟ್ರಿನಿಡಾಡ್ ಮತ್ತು ಟೊಬೆಗೊ
  •   ಅಮೇರಿಕ ಸಂಯುಕ್ತ ಸಂಸ್ಥಾನ
  •   ಉರುಗ್ವೆ
  •   ವೆನೆಜುವೆಲಾ

ಕಡಲಾಚೆಯ ಪ್ರದೇಶಗಳು, ಅದೀನ ಪ್ರದೇಶಗಳು, ವಸಾಹತುಗಳು

ಬದಲಾಯಿಸಿ

ಈ ಮುಂದಿನ ಪಟ್ಟಿಯು ಅಮೇರಿಕದ "ಸಾರ್ವಭೌಮ ರಾಜ್ಯಗಳ" ಪಟ್ಟಿಯಲ್ಲಿ ಬರದ ಕಡಲಾಚೆಯ ಪ್ರದೇಶಗಳು, ಅದೀನ ಪ್ರದೇಶಗಳು ಮತ್ತು ಇತರ ರಾಜ್ಯಾಡಳಿತ ವ್ಯವಸ್ಥೆಯನ್ನು ತೋರಿಸುತ್ತದೆ. ಅವುಗಳನ್ನು ನಿರ್ವಹಿಸುತ್ತಿರುವ ರಾಜ್ಯಗಳ ಹೆಸರಿನಲ್ಲಿ ಅವುಗಳನ್ನು ಗುಂಪುಗೊಳಿಸಲಾಗಿದೆ.

  France
  •   Guadeloupe
  •   French Guiana
  •   Martinique
  •   Saint Barthélemy
  •   Collectivity of Saint Martin
  •   Saint Pierre and Miquelon
  ಯುನೈಟೆಡ್ ಕಿಂಗ್ಡಂ
  •   Anguilla
  •   ಬರ್ಮುಡಾ
  •   British Virgin Islands
  •   Cayman Islands
  •   Falkland Islands
  •   Montserrat
  •   South Georgia and the South Sandwich Islands
  •   Turks and Caicos Islands
  ನೆದರ್ಲ್ಯಾಂಡ್ಸ್
  •   Aruba
  •   Netherlands Antilles

  ಅಮೇರಿಕ ಸಂಯುಕ್ತ ಸಂಸ್ಥಾನ
  •   Navassa Island
  •   ಪೋರ್ಟೊ ರಿಕೊ
  •   United States Virgin Islands

ಅಮೆರಿಕಾದಲ್ಲಿನ ಬಹುರಾಷ್ಟ್ರೀಯ ಸಂಸ್ಥೆಗಳು

ಬದಲಾಯಿಸಿ
valign=top width= valign=top

ಇವನ್ನೂ ಗಮನಿಸಿ

ಬದಲಾಯಿಸಿ
valign=top width= valign=top

ಅಡಿಟಿಪ್ಪಣಿಗಳು

ಬದಲಾಯಿಸಿ
  1. ಅಮೆರಿಕಾ - ಮೆರ್ರಿಯಮ್-ವೆಬ್‌ಸ್ಟರ್ ಆನ್‌ಲೈನ್ ನಿಘಂಟಿನಿಂದ ವ್ಯಾಖ್ಯಾನ . ಜನವರಿ 10, 2008ರಲ್ಲಿ ಮರುಸಂಪಾದಿಸಲಾಗಿದೆ.
  2. ೨.೦ ೨.೧ ಅಮೆರಿಕಾ. ಡಿಕ್ಷನರಿ.ಕಾಮ್ ಇಂಗ್ಲೀಶ್ ಭಾಷೆಗೆ ಅಮೆರಿಕನ್ ಹೆರಿಟೇಜ್ ನಿಘಂಟು,ನಾಲ್ಕನೇಯ ಆವೃತ್ತಿ ಹಾಗ್‌ಟನ್ ಮಿಫ್ಲಿನ್, 2004. http://dictionary.reference.com/browse/america (accessed: ಜನವರಿ 27, 2008).
  3. "ಅಮೆರಿಕಾ." ದ ಆಕ್ಸ್‌ಫರ್ಡ್ ಕಂಪಾನಿಯನ್ ಟು ದ ಇಂಗ್ಲೀಶ್ ಲ್ಯಾಂಗ್ವೆಜ್ (ISBN 0-19-214183-X). ಮ್ಯಾಕ್‌ಆರ್ಥರ್, ಟಾಮ್, ಆವೃತ್ತಿ., 1992. ನ್ಯೂಯಾರ್ಕ್: ಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ, ಪು. 33: "[16ಸಿ:ಫ್ರಾಮ್ ದ ಫೆಮಿನೈನ್ ಆಫ್ ಅಮೆರಿಕಸ್ ,ಅಮೆರಿಕಾ ಶೋಧಿಸಿದ ಅಮೆರಿಗೊ ವೆಸ್ಪುಚ್ಚಿಯ ಲ್ಯಾಟಿನಿಕರಣಗೊಂಡ ಮೊದಲ ಹೆಸರು (1454-1512). ರಿಚಾರ್ಡ್ ಅಮೆರಿಕ್,ಬ್ರಿಸ್ಟೋಲ್‌ನ ಶೆರಿಫ್ ,ಮತ್ತು ಆಶ್ರಯದಾತ ಜಾನ್ ಕ್ಯಾಬೊಟ್(ಜಿಯೊವನಿ ಕ್ಯಾಬಿಟೊ),16c ಆಂಗ್ಲೋ-ಇಟಾಲಿಯನ್ ಉತ್ತರ ಅಮೆರಿಕಾದ ಶೋಧಕ ಎನ್ನುವ ಆರೋಪವಿದೆ. ಅಮೆರಿಕಾ ಎನ್ನುವ ಹೆಸರು ಮೊದಲು 1507ರಲ್ಲಿ ಜರ್ಮನ್ ಭೂಪಟ ತಯಾರಕ ಮಾರ್ಟೀನ್ ವಾಲ್ಡ್‌ಸೀಮುಲ್ಲರ‍್ನ ನಕಾಶೆಯಲ್ಲಿ ಕಾಣಿಸಿಕೊಂಡಿತ್ತು.ಈಗ ಅದನ್ನು ಬ್ರೆಜಿಲ್ ಎನ್ನಲಾಗುತ್ತದೆ. ಪಶ್ಚಿಮ ಹೆಮಿಸ್ಪೆರ್ ಹೆಸರನ್ನು,ಹಲವುಬಾರಿ ಬಹುವಚನದಲ್ಲಿ ಅಮೆರಿಕಾ ಮತ್ತು ಹೆಚ್ಚು ಕಡಿಮೆ ಪರ್ಯಾಯವಾಗಿ ನ್ಯೂ ವರ್ಲ್ಡ್ 18ನೇ ಶತಮಾನದಿಂದಲೂ, ಯುನೈಟೆಡ್ ಸ್ಟೇಟ್ ಆಫ್ ಅಮೆರಿಕಾ ಎಂಬ ಹೆಸರಾಗಿದೆ. ಎರಡನೇ ಅರ್ಥವು ಈಗ ಇಂಗ್ಲೀಷ್‌ನಲ್ಲಿ ಪ್ರಾಥಮಿಕವಾಗಿದೆ: ... ಆದಾಗ್ಯೂ, ಶಬ್ದವು ಅನಿಶ್ಚಿತತೆಗೆ ತೆರೆದುಕೊಂಡಿದೆ: ..."
  4. Brian C. Story (28 September 1995). "The role of mantle plumes in continental breakup: case histories from Gondwanaland". Nature. 377: 301–309. doi:10.1038/377301a0.
  5. "Land bridge: How did the formation of a sliver of land result in major changes in biodiversity". Public Broadcasting Corporation.
  6. ೬.೦ ೬.೧ [https://genographic.nationalgeographic.com/genographic/atlas.html?era=e003 2009-10-06 "Atlas of the Human Journey-The Genographic Project"]. National Geographic Society. 1996–2008. {{cite web}}: Check |url= value (help); line feed character in |url= at position 75 (help)CS1 maint: date format (link)
  7. Fitzhugh, Drs. William; Goddard, Ives; Ousley, Steve; Owsley, Doug; Stanford., Dennis. "Paleoamerican". Smithsonian Institution Anthropology Outreach Office. Archived from the original on 2009-01-05. Retrieved 2010-05-24.
  8. "The peopling of the Americas: Genetic ancestry influences health". Scientific American.
  9. "Alternate Migration Corridors for Early Man in North America". American Antiquity, Vol. 44, No. 1 (Jan., 1979), p2. Archived from the original on 2013-08-21. Retrieved 2021-08-09.
  10. "68 Responses to "Sea will rise 'to levels of last Ice Age'"". Center for Climate Systems Research, Columbia University.
  11. "Introduction". Government of Canada. Parks Canada. 2009=2010-01-09. Archived from the original on 2011-04-24. Retrieved 2010-05-24. Canada's oldest known home is a cave in Yukon occupied not 12,000 years ago like the U.S. sites, but at least 20,000 years ago {{cite web}}: Check date values in: |year= (help)CS1 maint: year (link)
  12. "Pleistocene Archaeology of the Old Crow Flats". Vuntut National Park of Canada. 2008=2010-01-10. Archived from the original on 2008-10-22. Retrieved 2010-05-24. However, despite the lack of this conclusive and widespread evidence, there are suggestions of human occupation in the northern Yukon about 24,000 years ago, and hints of the presence of humans in the Old Crow Basin as far back as about 40,000 years ago. {{cite web}}: Check date values in: |year= (help)CS1 maint: year (link)
  13. ೧೩.೦ ೧೩.೧ "Jorney of mankind". Brad Shaw Foundation=2009-11-17.
  14. "A single and early migration for the peopling of the Americas supported by mitochondrial DNA sequence data". The National Academy of Sciences of the US 2009-10-10. National Academy of Sciences.
  15. "Canadian Inuit History". Canadian Museum of Civilization.
  16. "Vinland". Canadian Museum of Civilization.
  17. "The Norse settlers in Greenland - A short history". Greenland Guide - The Official Travel Index. Archived from the original on 2017-08-04. Retrieved 2010-05-24.
  18. Mann, Charles C. (2005). 1491: New Revelations of the Americas Before Columbus. New York: Knopf. ISBN 978-1-4000-4006-3. OCLC 56632601.
  19. Fernández-Armesto, Felipe (1987). Before Columbus: Exploration and Colonisation from the Mediterranean to the Atlantic: 1229-1492. New studies in medieval history series. Basingstoke, Hampshire: Macmillan Education. ISBN 0-333-40382-7. OCLC 20055667.
  20. Russell Thornton (1997). "Aboriginal North American Population and Rates of Decline, c.a. A.D. 1500–1900" (– Scholar search). Current Anthropology. 38 (2): 310–315. doi:10.1086/204615. {{cite journal}}: External link in |format= (help)
  21. Alfred W. Crosby (April 1976). "Virgin Soil Epidemics as a Factor in the Aboriginal Depopulation in America". David and Mary Quarterly. 33 (2): 289–299.
  22. Henry F. Dobyns (1993). "Disease Transfer at Contact". Annual Review of Anthropology. 22 (22): 273–291. doi:10.1146/annurev.an.22.100193.001421.
  23. ಸ್ಟಾಫ್. ಅಮೆರಿಕಾ ಸಾಮೂಹಿಕ ಬಲಿಯ ಒಂದು ಅವಲೋಕನ Archived 2008-05-04 ವೇಬ್ಯಾಕ್ ಮೆಷಿನ್ ನಲ್ಲಿ. : ನವ ಜಗತ್ತನ್ನು ವಶಪಡಿಸಿಕೊಂಡ ಗೆಲುವು ( ಡೇವಿಡ್ ಸ್ಟ್ಯಾನಾರ್ಡ್‌ರಿಂದ ), ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯದ ವೆಬ್‌ಸೈಟ್‌ನಲ್ಲಿ (ಪ್ರಕಾಶಕರು)
  24. ನಕ್ಷೆ ಬರಹಗಾರ ಅಮೆರಿಕಾವನ್ನು ನಕ್ಷೆಯಲ್ಲಿ 500 ವರ್ಷಗಳ ಹಿಂದೆ ಇಟ್ಟಿದ್ದಾನೆ-ಯುಎಸ್‌ಎಟುಡೆ.ಕಾಮ್
  25. "ಆರ್ಕೈವ್ ನಕಲು". Archived from the original on 2013-10-29. Retrieved 2010-05-24.
  26. http://news.bbc.co.uk/1/hi/magazine/8328878.stm
  27. Charles Burress (June 17, 2004). "Romancing the north Berkeley explorer may have stepped on ancient Thule". San Francisco Chronicle.
  28. "South Georgia and the South Sandwich Islands, Antarctica - Travel".
  29. "America". The World Book Encyclopedia. Vol. 1. World Book, Inc. 2006. p. 407. ISBN 0716601060.
  30. "Andes Mountain Range". Archived from the original on 2017-04-29. Retrieved 2010-05-24.
  31. "Rocky Mountains". Archived from the original on 2006-09-27. Retrieved 2010-05-24.
  32. "Appalachian Mountains". Ohio History Central. Archived from the original on 2007-05-01. Retrieved 2010-05-24.
  33. "Arctic Cordillera".
  34. "Interior Plains Region". Archived from the original on 2013-08-09. Retrieved 2010-05-24.
  35. "Natural History of Quebec". Archived from the original on 2011-07-06. Retrieved 2010-05-24.
  36. "Strategy". Amazon Conservation Association. Archived from the original on 2007-04-03. Retrieved 2010-05-24.
  37. "South America images".
  38. "Greatest Places: Notes: Amazonia".
  39. "Mississippi River". Archived from the original on 2005-10-28. Retrieved 2010-05-24.
  40. "Great Rivers Partnership - Paraguay-Parana".
  41. ಸಿಬಿಸಿ ಮೊಂಟ್ರೆಯಲ್-ಧರ್ಮ
  42. "Mexico - MSN Encarta Encyclopedia - Mexico". Archived from the original on 2009-10-31. Retrieved 2010-05-24.
  43. "Religión" (PDF=2009-01-19). Censo Nacional de Población y Vivienda 2000. INEGI. 2000.
  44. ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ವರದಿ, ಯು.ಎಸ್. ರಾಜ್ಯ ಇಲಾಖೆ . 2008-05-05ರಂದು ಮರು ಪರಿಷ್ಕರಿಸಲಾಗಿದೆ.
  45. ೪೫.೦ ೪೫.೧ "CIA - The World Factbook - United States". Archived from the original on 2018-12-26. Retrieved 2010-05-24.
  46. ದ ಡೇಲಿ, ಮಂಗಳವಾರ, ಮೇ 13, 2003. Archived 2008-10-18 ವೇಬ್ಯಾಕ್ ಮೆಷಿನ್ ನಲ್ಲಿ.ಜನಸಂಖ್ಯೆಯ ಗಣತಿ: ವ್ಯಕ್ತಿಗತ ಆದಾಯ,ಕುಟುಂಬಗಳು ಮತ್ತು ಮನೆಜನರು; ಧರ್ಮ Archived 2008-10-18 ವೇಬ್ಯಾಕ್ ಮೆಷಿನ್ ನಲ್ಲಿ.
  47. ದ ವರ್ಲ್ಡ್ ಡೇಲಿ - ಕ್ಯಾಥೋಲಿಕ್ಸ್ ಫೇಸ್ಡ್ ವಿತ್ ರೈಸ್ ಇನ್ ಪ್ರೊಟೆಸ್ಟಂಟಿಸಮ್
  48. "ಧರ್ಮದಿಂದ ಜನಸಂಖ್ಯೆ, ಪ್ರಾಂತ ಮತ್ತು ಪ್ರದೇಶಗಳಿಂದ (2001 ಗಣತಿ)". Archived from the original on 2007-11-05. Retrieved 2010-05-24.
  49. ಸುಸೇನ್ ಹೆಡ್ಡೆನ್‌ರಿಂದ ಅಂಡರ್‌ಸ್ಟಾಂದಿಂಗ್ ಇಸ್ಲಾಮ್ ಯು.ಎಸ್. ನ್ಯೂಸ್ & ವರ್ಲ್ಡ್ ರಿಪೋರ್ಟ್. ಏಪ್ರಿಲ್ 21, 2008
  50. ಇಸ್ಲಾಂ ಮತ್ತು ಕ್ರಿಸ್ಚಿಯಾನಿಟಿ: ಮೆಕ್ಸಿಕೊದಲ್ಲಿ ಇಸ್ಲಾಂ
  51. "Argentina". International Religious Freedom Report. U.S. Department of State. 2006=2009-09-01. {{cite web}}: Check date values in: |year= (help)CS1 maint: year (link)
  52. "ಕೆನೆಡಿಯನ್ ವಿವರಿ ಟುಡೆ: ಪೊಟ್ರೆಟ್ ಆಫ್ ಎ ಕಮ್ಯುನಿಟಿ ಇನ್ ದ ಪ್ರೊಸೆಸ್ ಆಫ್ ಚೇಂಜ್-ಇರಾ ರಾಬಿನ್ಸನ್". Archived from the original on 2009-09-17. Retrieved 2010-05-24.
  53. "ಫಸ್ಟ್ ಪ್ಲೇನ್‌ಲೋಡ್ ಆಫ್ ಜೀವ್ಸ್ ಫ್ಲೀಯಿಂಗ್ ಅರ್ಜೆಂಟೀನಾ ಅರೈವ್ಸ್ ಇನ್ ಇಸ್ರೇಲ್". Archived from the original on 2008-02-01. Retrieved 2010-05-24.
  54. "Portuguese Facts".
  55. Bambi B. Schieffelin; Rachelle Charlier Doucet (February 1994). "The "Real" Haitian Creole: Ideology, Metalinguistics, and Orthographic Choice". American Ethnologist. 21 (1): 176–200. doi:10.1525/ae.1994.21.1.02a00090.{{cite journal}}: CS1 maint: multiple names: authors list (link)
  56. ಚಿಲೆಯ ರಾಷ್ಟ್ರೀಯ ಗಣತಿ 2002, ಅಂಕಿಸಂಖ್ಯೆಯನ್ನು Bilingüismo y el registro matemático aymara Archived 2018-04-02 ವೇಬ್ಯಾಕ್ ಮೆಷಿನ್ ನಲ್ಲಿ. ಯಲ್ಲಿ ಕಾಣಬಹುದು.
  57. ಚಿಲೆ ಫ್ರೊಫೈಲ್, ಎತ್ನೊಲಾಗ್, 10ನೇಯ ಅಕ್ಟೋಬರ್ , ೨೦೦೭ ರಂದು ಪರಿಷ್ಕರಿಸಲಾಗಿದೆ
  58. Mike Gasser. "A3 Languages cited in this book". Archived from the original on 2010-05-24. Retrieved 2010-05-24.
  59. "American Indian & Alaska Native Heritage Month: November 2003". United States' Census Bureau.
  60. ರೀಡರ್ಸ್ ಡೈಜೆಸ್ಟ್ ಆಕ್ಶ್‌ಫರ್ಡ್ ಕಂಪ್ಲಿಟ್ ವರ್ಡ್‌ಪೈಂಡರ್ . 1993. (ISBN 0-276-42101-9) ನ್ಯೂಯಾರ್ಕ್, ಯುಎಸ್‌ಎ: ರೀಡರ್ಸ್ ಡೈಜೆಸ್ಟ್ ಅಸೊಸಿಯೇಷನ್; ಪು. 45.
  61. ದ ಒಲಂಪಿಕ್ ಸಿಂಬಾಲ್ಸ್. ಅಂತರಾಷ್ಟ್ರೀಯ ಒಲಂಪಿಕ್ ಕಮಿಟಿ . 2002. ಲ್ಯಾಸನೆ: ಒಲಂಪಿಕ್ ವಸ್ತುಸಂಗ್ರಹಾಲಯ ಮತ್ತು ಅಧ್ಯಯನ ಕೇಂದ್ರ. ಒಲಂಪಿಕ್‌ನ ಐದು ರಿಂಗುಗಳ ಒಲಂಪಿಕ್ ಧ್ವಜವು ಐದು ವಸಾಹತುಗಳನ್ನು ಪ್ರತಿನಿಧಿಸುತ್ತದೆ,ಭಾಗವಹಿಸುವ ಖಂಡಗಳು(ಆಫ್ರಿಕ,ಅಮೆರಿಕಾ,ಏಷ್ಯಾ,ಯುರೋಪ್,ಮತ್ತು ಓಷಿಯಾನಾ Archived 2009-03-24 ವೇಬ್ಯಾಕ್ ಮೆಷಿನ್ ನಲ್ಲಿ.).
  62. ಬುರ್ಚ್‌ಫೀಲ್ಡ್, ಆರ್.ಡಬ್ಲ್ಯೂ 2004. ಫೌಲರ್ಸ್ ಮಾಡರ್ನ್ ಇಂಗ್ಲೀಶ್ ಯುಸೇಜ್. (ISBN 0-19-861021-1) ಆಕ್ಸ್‌ಫರ್ಡ್, ಯುಕೆ: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ.; ಪು. 48.
  63. "Uso abusivo", numeral 4 http://buscon.rae.es/dpdI/SrvltGUIBusDPD?lema=Estados%20Unidos
  64. "ಅಮೆರಿಕನ್." ದ ಆಕ್ಸ್‌ಫರ್ಡ್ ಕಂಪ್ಯಾನಿಯನ್ ಟು ದ ಇಂಗ್ಲೀಶ್ ಲ್ಯಾಂಗ್ವೇಜ್ (ISBN 0-19-214183-X); ಮ್ಯಾಕ್‌ಆರ್ಥರ್,ಟಾಮ್,ಆವೃತ್ತಿ. 1992. ನ್ಯೂಯಾರ್ಕ್: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ., ಪು. 35.
  65. ೬೫.೦ ೬೫.೧ ೬೫.೨ "ಅಮೆರಿಕ." ಆಕ್ಸ್‌ಫರ್ಡ್ ಗೈಡ್ ಟು ಕೆನೆಡಿಯನ್ ಇಂಗ್ಲೀಶ್ ಯುಸೇಜ್. (ISBN 0-19-541619-8) ಫೀ, ಮಾರ್ಗರಿ ಮತ್ತು ಮ್ಯಾಕ್‌ಆಲ್ಪೈನ್, ಜೆ., ಆವೃತ್ತಿ., 1997. ಟೊರೊಂಟೊ: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ.; ಪು. 36.
  66. "ಅಮೆರಿಕ Archived 2009-09-26 ವೇಬ್ಯಾಕ್ ಮೆಷಿನ್ ನಲ್ಲಿ.." ಮೈಕ್ರೋಸಾಪ್ಟ್ ಎನ್‌ಕಾರ್ಟಾ ಡಿಕ್ಷನರಿ Archived 2009-11-02 ವೇಬ್ಯಾಕ್ ಮೆಷಿನ್ ನಲ್ಲಿ. . 2007. ಮೈಕ್ರೋಸಾಪ್ಟ್. ಆರ್ಚೀವ್ಡ್ 2009-10-31.
  67. ಅಮೆರಿಕ - ಮೆರಿಯಮ್-ಆನ್‌ಲೈನ್ ನಿಘಂಟಿನಿಂದ ವ್ಯಾಖ್ಯಾನ
  68. ಅಮೆರಿಕ -ಡಿಕ್ಷನರಿ.ಕಾಮ್‌ ನಿಂದ ವ್ಯಾಖ್ಯಾನ
  69. [೧]
  70. Diccionario Panhispánico de Dudas:Norteamérica


ಆಕರಗಳು

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ

ಟೆಂಪ್ಲೇಟು:America

"https://kn.wikipedia.org/w/index.php?title=ಅಮೆರಿಕ&oldid=1201489" ಇಂದ ಪಡೆಯಲ್ಪಟ್ಟಿದೆ