ಏಷ್ಯಾ ಖಂಡ
ಏಷ್ಯಾ ಖಂಡವು ಪ್ರಪಂಚದ ಅತೀ ದೊಡ್ಡ ಖಂಡವಾಗಿದ್ದು, ೪೪,೦೦೦,೦೦೦ ಚ.ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ. ಇದು ನಮ್ಮ ಭೂಮಂಡಲದ ಮೂರನೇ ಒಂದು ಭಾಗದಷ್ಟಿದೆ. ಆಫ್ರಿಕಾ ಮತ್ತು ಯೂರೋಪ್ ಖಂಡಗಳನ್ನು ಏಷ್ಯಾದೊಳಗಿಟ್ಟರೂ, ನಮಗಿನ್ನೂ ಹದಿನೈದು ಲಕ್ಷ ಕಿ.ಮೀ.ಗಳಷ್ಟು ಸ್ಥಳಾವಕಾಶ ಇರುತ್ತದೆ ಮತ್ತು ಅತೀ ಹೆಚ್ಚು ದೇಶಗಳನ್ನು ಹೊಂದಿರುವ ಎರಡನೇ ದೊಡ್ದ ಖಂಡವಾಗಿದೆ. ಪೂರ್ವದಲ್ಲಿ ಯೂರೋಪಿನಿಂದ ಫೆಸಿಫಿಕ್ ಸಾಗರದವರೆಗೆ ಮತ್ತು ಪಶ್ಚಿಮದಲ್ಲಿ ಆಫ್ರಿಕಾದವರೆಗೆ ಹರಡಿದೆ. ಉತ್ತರದಲ್ಲಿ ಉರಾಲ್ಸ್ ಮತ್ತು ಕಾಕಸಸ್ ಪರ್ವತ ಶ್ರೇಣಿಯನ್ನು ಮತ್ತು ದಕ್ಷಿಣದಲ್ಲಿ ಹಿಂದೂ ಮಹಾಸಾಗರದವರೆಗೂ ಹಬ್ಬಿದ್ದೂ, ಅನೇಕ ದ್ವೀಪಗಳನ್ನು ಒಳಗೊಂಡಿದೆ. ಪ್ರಪಂಚದ ಅತೀ ದೊಡ್ಡ ಪರ್ವತ ಶ್ರೇಣಿಗಳಾದ ಹಿಮಾಲಯ ಹಾಗೂ ಕಾರಾಕೊರಮ್ ಅನ್ನು ಹೊಂದಿದೆ. ಹಿಮಾಲಯದ ಎವರೆಸ್ಟ್ ಶಿಖರ ಪ್ರಪಂಚದ ಅತೀ ದೊಡ್ಡ ಶಿಖರವಾಗಿದೆ. ಹಿಮದಿಂದ ಕೂಡಿರುವ ಹಿಮಾಲಯ ಪರ್ವತವು ಹಲವು ನದಿಗಳಿಗೆ ಉಗಮಸ್ಥಾನವಾಗಿದೆ. ಈ ನದಿಗಳು ಹಿಮಾಲಯದ ತಪ್ಪಲಿನ ಮೈದಾನದಲ್ಲಿ ಹರಿಯುತ್ತದೆ. ಟಿಬೆಟ್ ಪ್ರಪಂಚದಲ್ಲಿ ಅತೀ ಎತ್ತರವಾದ ಪ್ರಸ್ಥಭೂಮಿ ಮತ್ತು ಅತೀ ದೊಡ್ಡ ಮರುಭೂಮಿಯಾದ ಗೋಬಿ ಮರುಭೂಮಿಯನ್ನು ಹೊಂದಿದೆ. ದಕ್ಷಿಣದಲ್ಲಿ ಉಷ್ಣ ವಲಯದ ವಾತಾವರಣವಿದ್ದು ಉತ್ತರದಲ್ಲಿ ಅತೀ ಚಳಿಯಿರುವ ಪ್ರದೇಶಗಳಿಂದ ಕೂಡಿದೆ. ಎಲ್ಲಾ ಬಗೆಯ ಹವಾಗುಣಗಳನ್ನು ಇಲ್ಲಿ ಕಾಣಬಹುದಾಗಿದೆ. ಮಾನ್ಸೂನ್ ಮಾರುತಗಳು ಇಲ್ಲಿ ಹೇರಳವಾಗಿ ಮಳೆ ಸುರಿಸುತ್ತವೆ. ವಿಶ್ವದಲ್ಲೇ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶಗಳಾದ ಚೀನಾ ಮತ್ತು ಭಾರತವನ್ನು ಒಳಗೊಂಡಿರುವುದರಿಂದ ಹೆಚ್ಚಿನ ಜನಸ್ಂಖ್ಯೆಯನ್ನು ನಾವಿಲ್ಲಿ ಕಾಣಬಹುದಾಗಿದೆ. ಏಷ್ಯಾದ ಉತ್ತರ ದಕ್ಶಿಣ ಪೂರ್ವಗಳಲ್ಲಿ ಸಮುದ್ರಗಳಿದ್ದು, ಪಶ್ಚಿಮದಲ್ಲಿ ಯೂರೋಪ್ ಖಂಡಗಳನ್ನು ಬೇರ್ಪಡಿಸುವ ಉರಾಲ್ಸ್ ಪರ್ವತ ಮತ್ತು ಕ್ಯಾಸ್ಪಿಯನ್ ಸಮುದ್ರವಿದೆ.
ವಿಶ್ವದ ಮೊಟ್ಟ ಮೊದಲ ನಾಗರೀಕತೆಗಳು ಇಲ್ಲಿಯೇ ಹುಟ್ಟಿವೆ ಎಂದು ಹೇಳಲಾಗಿದೆ. ಮಂಗೋಲರು ಮತ್ತು ಟರ್ಕರು ಇಲ್ಲಿ ತಮ್ಮ ದೊಡ್ಡ ಸಾಮ್ರಾಜ್ಯವನ್ನು ನಿರ್ಮಿಸಿದ್ದರೆಂದು ಹೇಳಲಾಗಿದೆ. ನೈಸರ್ಗಿಕ ಸಂಪತ್ತು ಇಲ್ಲಿ ಹೇರಳವಾಗಿರುವ ಕಾರಣ ಯೂರೋಪ್ ದೇಶಗಳು ಒಂಭತ್ತನೇ ಶತಮಾನದಲ್ಲಿ ಎಷ್ಯಾವನ್ನು ವಶಪದಿಸಿಕೊಂಡು ಸುಮಾರು ಎರಡೂವರೆ ಶತಮಾನಗಳ ಕಾಲ ಆಳ್ವಿಕೆ ಮಾಡಿದರು. ಇಪ್ಪತ್ತನೇ ಶತಮಾನದಲ್ಲಿ ಇವರ ಆಳ್ವಿಕೆ ಅಂತ್ಯಗೊಂಡು ಸ್ವಾತಂತ್ರ್ಯ ರಾಷ್ಟ್ರಗಳು ಉದಿಸಿದವು. ರಷ್ಯಾ ಈ ಖಂಡದ ಅತೀ ದೊಡ್ಡ ದೇಶವಾಗಿದ್ದು, ೧೨,೭೭೬,೦೦೦ ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಪ್ರಪಂಚದ ಮುಖ್ಯ ಧರ್ಮಗಳಾದ ಹಿಂದೂ ಧರ್ಮ, ಬೌದ್ದ ಜೈನ ಧರ್ಮಗಳು, ಯಹೂದಿ, ಇಸ್ಲಾಮ್, ಜೊರಾಷ್ಟ್ರೀಯ ಧರ್ಮಗಳು ಎಲ್ಲಾ ಏಷ್ಯಾ ಖಂಡದಲ್ಲೇ ಉದಿಸಿವೆ. ಸಿಖ್ ಮತ ಮತ್ತು ಶಿಂಟೊ ಮತ, ಕನ್ಫ್ಯೋಶಿಯಸ್ಗಳಿಗೂ ಕೂಡ ಈಖಂಡವೇ ಮೂಲ ಸ್ಥಾನ. ಒಟ್ಟಿನಲ್ಲಿ ಎಲ್ಲಾ ಧರ್ಮಗಳನ್ನೂ ಇಲ್ಲಿ ಕಾಣಬಹುದು. ವೈವಿದ್ಯಮಯವಾದ ಪ್ರಾಣಿ ಸಂಕುಲ ಮತ್ತು ಸಸ್ಯ ವರ್ಗವನ್ನು ಹೊಂದಿದೆ. ಹುಲಿ, ಚಿರತೆ, ಬ್ಯಾಕ್ಟೀರಿಯನ್ ಒಂಟೆ, ಪಾಂಡ, ನವಿಲು ಮೊದಲಾದವುಗಳನ್ನು ಹೇರಳವಾಗಿ ಕಾಣಬಹುದಾಗಿದೆ. ಶ್ರೀಗಂಧ, ಕೊಕೊ, ಪೈ, ನೀಲಗಿರಿ ಮರಗಳು ಬೆಳೆಯಲು ಅನುಕೂಲಕರವಾದ ವಾತಾವರಣ ಇಲ್ಲಿ ಇದೆ. ಇಲ್ಲಿನ ಚೀನಾ ಕಮ್ಯೂನಿಸ್ಟ್ ರಾಜಕಾರಣವನ್ನು ಹೊಂದಿದ್ದರೆ, ಭಾರತ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ತ್ರವಾಗಿದೆ.
ಏಷ್ಯಾ ಖಂಡದ ಕೆಲವು ಪ್ರಮುಖ ರಾಷ್ಟ್ರಗಳು
ಬದಲಾಯಿಸಿರಷ್ಯಾ
ಬದಲಾಯಿಸಿರಷ್ಯಾ ಜಗತ್ತಿನ ಅತೀ ದೊಡ್ಡ ರಾಷ್ಟ್ರವಾಗಿದ್ದೂ, ಯೂರೋಪ್ ಖಂಡದ ಈಶಾನ್ಯ ಭಾಗ ಮತ್ತು ಏಷ್ಯಾ ಖಂಡದ ಉತ್ತರ ಭಾಗವನ್ನು ವ್ಯಾಪಿಸಿಕೊಂಡಿದೆ. ಪಶ್ಚಿಮದಲ್ಲಿ ನದಿಗಳಿಂದ ಕೂಡಿದ್ದು ಪೂರ್ವ ಭಾಗದಲ್ಲಿ ಪರ್ವತ ಶ್ರೇಣಿಗಳಿಂದ ಕೂದಿದೆ. ಓಲ್ಗಾ, ಡಾನ್, ಲೇನಾ ನದಿಗಳಿದ್ದು ಕ್ಯಾಸ್ಪಿಯನ್ ಸಮುದ್ರವನ್ನು ಒಳಗೊಂಡಿದೆ. ಇಲ್ಲಿ ಬೈಕಾಲ್ ಸರೋವರವಿದ್ದು, ಇದು ಸಿಹಿ ನೀರಿನಿಂದ ಕೂಡಿದ ಆಳವಾದ ಸರೋವರವಾಗಿದೆ. ಅತೀ ಎತ್ತರವಾದ ಕಾಕಸಸ್ ಪರ್ವತ ಶ್ರೇಣಿಯಿದ್ದು, ತಪ್ಪಲಿನಲ್ಲಿ ಕಬ್ಬಿಣ ಮತ್ತು ತಾಮ್ರದ ಅದಿರನ್ನು ಕಾಣಬಹುದಾಗಿದೆ. ರಷ್ಯಾ ಸುಮಾರು ೧,೭೦,೭೫,೦೦೦ ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದ್ದು ಭೂಬಳಕೆಯ ಶೇ.೮ ರಷ್ಟು ಭಾಗವನ್ನು ಕೃಶಿಗಾಗಿ ನಳಸುತ್ತಿದೆ. ರಷ್ಯಾದ ಜನಸಂಖ್ಯೆ ೧೪,೯೫,೨೭,೦೦೦ ಇದ್ದು, ಇದರಲ್ಲಿ ರಷ್ಯನ್ ಆರ್ಥೋಡಾಕ್ಸ್ ಕ್ರಿಶ್ಚ್ಯನ್ನರು ಅಲ್ಪ ಸಂಖ್ಯಾತರಲ್ಲಿ ಮುಸ್ಲಿಮರು, ಯಹೂದಿಗಳು ಇದ್ದಾರೆ. ಇದು ಗಣಿಗಾರಿಕೆ ಮತ್ತು ಸಂಸ್ಕರಣೆ, ಯಂತ್ರೋಪಕರಣಗಳ ತಯಾರಿಕೆ, ಜವಳಿ, ಶಸ್ತ್ರಾಸ್ತ್ರಗಳ ತಯಾರಿಕೆ ಹಾಗೂ ವಾಹನಗಳ ತಯಾರಿಕೆಯಲ್ಲಿ ತೊಡಗಿದೆ. ಇಲ್ಲಿನ ನೈಸರ್ಗಿಕ ಸಂಪತ್ತು ವೈವಿದ್ಯಮಯ ಖನಿಜಗಳಾದ ಮ್ಯಾಂಗನೀಸ್, ಕಲ್ಲಿದ್ದಲು, ತೈಲ, ನೈಸರ್ಗಿಕ ಅನಿಲ, ಬಂಗಾರ, ಮಾಲಿಬ್ದಿನಂ ಮತ್ತು ಕಬ್ಬಿಣಗಳನ್ನು ಒಳಗೊಂಡಿದೆ.
ರಷ್ಯಾದ ರಾಜಧಾನಿ ಮಾಸ್ಕೊ. ಇದರ ಪ್ರಮುಖ ನಗರಗಳೆಂದರೆ ಸೇಂಟ್ ಫೀಟರ್ಸ್ ಬರ್ಗ್, ನೋವೋಸಿಬಿರ್ಸ್ಕಿ,ಎಕತರಿನಬರ್ಗ್, ಚೆಲ್ಯಾಬಿನ್ಸ್ಕ್, ನೊವ್ಗೊರೋಡ್ ಮುಂತಾದವು. ಇಲ್ಲಿನ ಮುಖ್ಯ ಬೆಳೆಗಳೆಂದರೆ ಗೋದಿ, ಹತ್ತಿ, ತಂಬಾಕು, ಸಕ್ಕರೆ ಬೀಟು, ಸೂರ್ಯಕಾಂತಿ, ಆಲೂಗಡ್ಡೆ ಹಾಗೂ ತರಕಾರಿಗಳು. ಈ ದೇಶದ ನಾಣ್ಯ ರೂಬಲ್, ಅಧಿಕ್ರುತ ಭಾಷೆ ರಷ್ಯನ್. ಇಲ್ಲಿ ಶೇ.೯೯ ರಷ್ಟು ಸಾಕ್ಷರತೆ ಇದೆ. ರಷ್ಯಾದ ಚಳಿ ಐತಿಹಾಸಿಕ. ರಷ್ಯಾದ ಹೆಚ್ಚು ಭಾಗ ಚಳಿ ಹಾಗೂ ಹಿಮಪಾತಗಳಿಂದ ಕೂಡಿರುತ್ತದೆ. ದಕ್ಷಿಣದಲ್ಲಿ ಉಪ ಉಷ್ಣವಲಯದ ವಾತಾವರಣ ಮತ್ತು ಶುಷ್ಕ ಹವೆ ಇದೆ. ಈಶಾನ್ಯದಲ್ಲಿರುವ ಸೈಬೀರಿಯಾದಲ್ಲಿ ಶೇ.೬೮ ಡಿಗ್ರಿ.ಸೆಂ. ನಷ್ಟು ಚಳಿ ಇದೆ. ಮಧ್ಯ ಏಷ್ಯಾ ಭಾಗದಲ್ಲಿ ಉಷ್ಣತೆಯ ಅತ್ಯಗ್ರ ಬೇಸಿಗೆ ಇದೆ.
ಚೀನಾ
ಬದಲಾಯಿಸಿಚೀನಾ ಪ್ರಪಂಚದ ಮೂರನೆ ಅತಿದೊಡ್ಡ ರಾಷ್ಟ್ರ. ಐದನೇ ಒಂದು ಭಾಗದಷ್ಟು ಏಷ್ಯಾ ಖಂಡವನ್ನು ಆಕ್ರಮಿಸಿದೆ. ಜನಸಂಖ್ಯೆಯಲ್ಲಿ ಚೀನಾ ದೇಶವು ಅಗ್ರಸ್ಥಾನದಲ್ಲಿದೆ. ಈ ದೆಶದ ಈಶಾನ್ಯ ಭಾಗದಲ್ಲಿ ಗೊಬಿ ಮರುಭೂಮಿಯಿದ್ದು, ಪೂರ್ವ ಭಾಗದಲ್ಲಿ ಫಲವತ್ತಾದ ಪ್ರದೆಶಗಳಿಂದ ಕೂಡಿದೆ. ಚೀನಾದ ಪಶ್ಚಿಮದಲ್ಲಿ ಪ್ರಪಂಚದ ಛಾವಣಿ ಎಂದು ಪ್ರಸಿದ್ದವಾದ ಟಿಬೆಟ್ ಇದೆ. ದಕ್ಷಿಣದಲ್ಲಿ ಹಿಮಾಲಯ ಪರ್ವತ ಶ್ರೇಣಿ ಇದೆ. ಜಗತ್ತಿನ ಅತಿ ಎತ್ತರವಾದ ಶಿಕರ ಮೌಂಟ್ ಎವರೆಸ್ಟ್ ಶಿಖರ ಚೀನಾದವರೆಗೂ ಹಬ್ಬಿದೆ. ಮಧ್ಯ ಮತ್ತು ಉತ್ತರ ಚೀನಾ ಪ್ರಾಂತ್ಯಗಳಲ್ಲಿ ಹುಲಾಂಗ್ ನದಿ ಹರಿದು ಅಲ್ಲಿನ ಜನರಿಗೆ ಜೀವ ಜಲವಾಗಿದೆ. ಚೀನಾದ ಇನ್ನೊಂದು ಮುಖ್ಯ ನದಿ ಎಂದರೆ ಚಾಂಗ್ ಜಿಯಾಂಗ್ (ಯಾಂಗ್ ಟ್ಸೆ) ಇದು ಚೀನಾದ ಉದ್ದಕ್ಕೂ ಹರಿದು ಪ್ರಪಂಚದ ಮೂರನೆ ಅತಿ ಉದ್ದವಾದ ನದಿಯಾಗಿದೆ. ಪಶ್ಚಿಮದ ಬೆಟ್ಟಗಳಲ್ಲಿ ಹುಟ್ಟಿ ೧೩೦೦ ಕಿ.ಮೀ.ವರೆಗೂ ಹರಿದು ಪೀತಾ ಸಮುದ್ರ ಸೇರುವ ಇದು ಚೀನಾದ ಅತಿ ಮುಖ್ಯ ವಾಣಿಜ್ಯ ನದಿಯಾಗಿದೆ.
ಚೀನಾದ ವಿಸ್ತೀರ್ಣ ಸುಮಾರು ೯೫,೯೬,೯೬೦ ಚ.ಕಿ.ಮೀ ಇದ್ದು ಭೂಬಳಕೆಯ ಶೇ.೧೦ರಷ್ಟು ಭಾಗ ಕೃಷಿಗೆ ಯೋಗ್ಯವಾಗಿದೆ. ಶೇ.೩೧ರಷ್ಟು ಭಾಗದಷ್ಟು ಹುಲ್ಲುಗಾವಲುಗಳು ಇವೆ. ಶೇ.೧೪ರಷ್ಟು ಹದಿನಾಲ್ಕರಷ್ಟು ಅರಣ್ಯ ಪ್ರದೇಶಗಳನ್ನು ಒಳಗೊಂಡಿದೆ. ಚೀನಾದ ಜನಸಂಖ್ಯೆ ೧೧೮,೭೯,೯೭,೦೦೦ ರಷ್ಟು ಇದ್ದು, ಮುಖ್ಯವಾಗಿ ಕನ್ಪೂಶಿಯನ್ನರು, ಬೌದ್ದರು ಹಾಗೂ ಟಾವೋಗಳು ಶೇ.೩ ರಷ್ಟು ಮುಸಲ್ಮಾನರು, ಶೇ.೧ ರಷ್ಟು ಕ್ರಿಶ್ಚಿಯನ್ನರು ಇದ್ದಾರೆ. ಇಲ್ಲಿನ ಜನರ ಪ್ರಮುಖ ಉದ್ಯಮಗಳೆಂದರೆ ಕಾಗದ ತಯಾರಿಕೆ, ರೇಷ್ಮೆ, ಜವಳಿ, ರಾಸಾಯನಿಕ ಲೋಹೋದ್ಯಮಗಳು, ವಾಹನಗಳ ತಯಾರಿಕೆ, ಆಹಾರ ಸಂಸ್ಕರಣೆ, ತೈಲ ಸಂಸ್ಕರಣೆ ಇತ್ಯದಿ. ಇಲ್ಲಿನ ನೈಸರ್ಗಿಕ ಸಂಪತ್ತೆಂದರೆ ಕಲ್ಲಿದ್ದಲು, ಕಬ್ಬಿಣದ ಅದಿರು, ತೈಲ, ಪಾದರಸ, ತವರ ಮುಂತಾದವು. ಇಲ್ಲಿನ ಪ್ರಮುಖ ಬೆಳೆಗಳೆಂದರೆ ಭತ್ತ, ಗೋಧಿ, ಧಾನ್ಯಗಳು, ಎಣ್ಣೆ ಬೀಜಗಳು ಇತ್ಯಾದಿ. ಚೀನಾದ ಮುಖ್ಯ ನಗರಗಳೆಂದರೆ ಷಾಂಘಾಯ್, ತಿಯಾಂಜನ್, ಷೆನ್ಯಂಗ್, ವೂಹಾನ್ ಮತ್ತು ರಜಧಾನಿ ಬೀಜಿಂಗ್. ಚೀನಾದ ಅಧಿಕೃತ ಭಾಷೆ ಚೀನಿ ಅಥವಾ ಮ್ಯಾಂಡರೀನ್. ಚೀನಾದ ನಾಣ್ಯ ಯುವಾನ್. ಇಲ್ಲಿನ ಹವಾಗುಣ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತಿರುತ್ತದೆ. ಈಶಾನ್ಯದಲ್ಲಿ ಕೊರೆಯುವ ಚಳಿ ಇದ್ದು, ಉತ್ತರದಲ್ಲಿ ವಿಪರೀತ ಉಷ್ಣವಿರುತ್ತದೆ. --subbu ೧೨:೦೬, ೩೦ ಜನವರಿ ೨೦೧೪ (UTC)
ಭಾರತ
ಬದಲಾಯಿಸಿಭಾರತ ಪ್ರಪಂಚದ ೭ನೇ ಅತಿ ದೊಡ್ಡ ದೇಶ.ಜನಸಂಖ್ಯೆಯಲ್ಲಿ ಭಾರತ ದೇಶವು ದ್ವಿತೀಯ ಸ್ಥಾನದಲ್ಲಿದೆ. ಇದು ಇಡೀ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ.