ಹೂಸ್ಟನ್‌ ನಗರವು ಟೆಕ್ಸಸ್‌ ರಾಜ್ಯದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ. ಜನಸಂಖ್ಯೆ ಆಧಾರದ ಮೇಲೆ ಇದು ಯುಎಸ್ ನ ನಾಲ್ಕನೇ ಅತಿ ದೊಡ್ಡ ನಗರ ಮತ್ತು ಉತ್ತರ ಅಮೇರಿಕ ಖಂಡದ ಆರನೇ ಅತಿ ದೊಡ್ಡ ನಗರವಾಗಿದೆ. ವಿಸ್ತೀರ್ಣದ ಆಧಾರದ ಮೇಲೆ ಇದು ಯುಎಸ್ ಅತಿ ದೊಡ್ಡ ನಗರ

ಇದು ಹ್ಯಾರಿಸ್‌ ಕೌಂಟಿಗೆ ಸೇರುತ್ತದೆ ಮತ್ತು ಟೆಕ್ಸಸ್ ನ ದಕ್ಷಿಣ ಪೂರ್ವ ದಿಕ್ಕಿನಲ್ಲಿ ಬರುತ್ತದೆ

ಹೂಸ್ಟನ್‌ ನಗರವು ಟೆಕ್ಸಸ್‌ ರಾಜಧಾನಿಯಾದ ಆಸ್ಟಿನ್ ನಗರದಿಂದ ೧೬೫ ಮೈಲಿ ದೂರದಲ್ಲಿದೆ ಮತ್ತು ಇನ್ನೊಂದು ಪ್ರಮುಖ ನಗರವಾದ ಡಲ್ಲಾಸ್ ನಿಂದ ೨೫೦ ಮೈಲಿ ದೂರದಲ್ಲಿದೆ

ಹವಾಮಾನ ಬದಲಾಯಿಸಿ

ಬೇಸಿಗೆಯಲ್ಲಿ ಕಾವಳತೆ ೩೨ ಡಿಗ್ರಿ ಸೆಲ್ಸಿಯಸ್ ದಾಟುತ್ತದೆ ಮತ್ತು ಚಳಿಗಾಲದಲ್ಲಿ ಕೆಲವೊಮ್ಮೆ ೦ ಡಿಗ್ರಿ ಸೆಲ್ಸಿಯಸ್ ಕಡಿಮೆಯಿರುತ್ತದೆ

ವ್ಯಾಪಾರ ಬದಲಾಯಿಸಿ

ಕಲ್ಲೆಣ್ಣೆ ಮತ್ತು ನೈಸರ್ಗಿಕ ಅನಿಲ ಉತ್ಪಾದನೆ, ಸಂಸ್ಕರಣೆ ಮತ್ತು ಮಾರಾಟ ಇಲ್ಲಿನ ಪ್ರಮುಖ ಉದ್ಯಮ. ಇದಲ್ಲದೆ ವೈದ್ಯಕೀಯ ಸಲಕರಣೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ.

ಸಂಚಾರ ವ್ಯವಸ್ಥೆ ಬದಲಾಯಿಸಿ

ನಗರದ ವ್ಯಾಪಾರಿ ಕೇಂದ್ರದ ಸುತ್ತ ಮುತ್ತಲಿನ ಪ್ರದೇಶ ಸಂಚರಿಸಲು ಮೆಟ್ರೊ ವ್ಯವಸ್ಥೆ ಇದೆ. ಮೆಟ್ರೊ ಸಂಸ್ಥೆಯೆ ಫೀಡರ್‌ ಬಸ್ಸುಗಳ ವ್ಯವಸ್ಥೆಯನ್ನು ಕಲ್ಪಿಸುತ್ತೆ. ಹೆಚ್ಚಾಗಿ ಜನರು ಸಂಚಾರಕ್ಕೆ ಕಾರುಗಳ ಮೇಲೆ ಅವಲಂಬಿತರಾಗಿದ್ದಾರೆ

ಪ್ರವಾಸಿ ತಾಣ ಬದಲಾಯಿಸಿ

ನಾಸ ಸಂಸ್ಥೆಯ ಜಾನ್ಸನ್ ಸ್ಪೇನ್ ಸೆಂಟರ್ ಹೂಸ್ಟನ್ ನ ಪ್ರಮುಖ ಪ್ರವಾಸಿ ತಾಣ. ಇದು ಕ್ಲಿಯರ್‌ ಲೇಕ್‌ ಪ್ರದೇಶದಲ್ಲಿದೆ

ಉಲ್ಲೇಖಗಳು ಬದಲಾಯಿಸಿ

https://en.wikipedia.org/wiki/Houston

"https://kn.wikipedia.org/w/index.php?title=ಹೂಸ್ಟನ್&oldid=1168705" ಇಂದ ಪಡೆಯಲ್ಪಟ್ಟಿದೆ