ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್
(ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಇಂದ ಪುನರ್ನಿರ್ದೇಶಿತ)
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಥವಾ ವಿಶ್ವ ಮಹಿಳೆಯರ ದಿನ ಪ್ರತಿ ವರ್ಷ ಮಾರ್ಚ್ ೮ ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ.
ಅಂತರ್ರಾಷ್ಟ್ರೀಯ ಮಹಿಳಾ ದಿನ | |
ಮಾರ್ಚ್ , ೮ , ೧೯೧೪ ರ ಮಹಿಳಾ ದಿನದ ಚಿತ್ರ | |
ಅಧಿಕೃತ ಹೆಸರು | {{{official_name}}} |
ಇತರ ಹೆಸರುಗಳು | {{{nickname}}} |
ಆಚರಿಸುವವರು | ಅಲ್ಬೇನಿಯ, ಅಲ್ಜೀರಿಯ, ಅರ್ಮೇನಿಯ, ಅಜರ್ಬೈಜಾನ್, ಬಾಂಗ್ಲಾದೇಶ,ಬೆಲಾರುಸ್, ಬ್ರೆಜಿಲ್, ಬಲ್ಗೇರಿಯ, ಕ್ಯಾಮರೂನ್, ಚಿಲಿ, ಚೀನ, ಕೊಲಂಬಿಯ, ಕ್ರೊಯೇಷಿಯ, ಕ್ಯೂಬಾ, ಸಿಪ್ರಸ್, ಡೆನ್ಮಾರ್ಕ್, ಫಿನ್ಲ್ಯಾಂಡ್, ಗ್ರೀಸ್, ಹಂಗರಿ, ಭಾರತ, ಇಟಲಿ, ಇಸ್ರೇಲ್, ಲಾವೋಸ್, ಲ್ಯಾಟ್ವಿಯ, ಕಝಕ್ ಸ್ತಾನ್, ಕಿರ್ಗಿಸ್ತಾನ್, ಮಾಲ್ಟ, ಮೆಕ್ಸಿಕೊ, ಮೋಲ್ಡೋವಾ, ಮಂಗೋಲಿಯ, ನೇಪಾಳ, ನಾರ್ವೇ, ಪೊಲ್ಯಾಂಡ್, ಪೋರ್ಚುಗಲ್, ರೊಮೇನಿಯ, ರಷ್ಯ, ಸರ್ಬಿಯ, ಸ್ಲೊವಾಕಿಯ, ಸ್ಲೊವೇನಿಯ, ಸ್ವೀಡನ್, ಸಿರಿಯ, ತಾಜಿಕಿಸ್ತಾನ್, ಟರ್ಕಿ, ಟುರ್ಕ್ಮೆನಿಸ್ತಾನ್, ಯುಕ್ರೇನ್, ಉಜ್ಬೇಕಿಸ್ತಾನ್, ವಿಯೆಟ್ನಾಂ, ಝಾಂಬಿಯ |
ರಜಾ ಪ್ರಕಾರ | |
ಪ್ರಾಮುಖ್ಯತೆ | {{{significance}}} |
ಆರಂಭ | {{{begins}}} |
ಮುಕ್ತಾಯ | {{{ends}}} |
ಆಚರಣೆ ದಿನ | ಮಾರ್ಚ್ ೮ |
೨೦೦೬ರಲ್ಲಿ ದಿನಾಂಕ | {{{date2006}}} |
ಆಚರಣೆಗಳು | {{{celebrations}}} |
ಆಚರಣೆ ವಿಧಿಗಳು | {{{observances}}} |
ಸಂಭಂದಿತ ಹಬ್ಬಗಳು | ತಾಯಿಯರ ದಿನ, ಅಂತರ್ರಾಷ್ಟ್ರೀಯ ಗಂಡಸರ ದಿನ |
ಅಂತರಾಷ್ಟ್ರೀಯ ಮಹಿಳೆಯರ ದಿನ- ಹಿನ್ನೋಟ
ಬದಲಾಯಿಸಿ- 1910ರ ಆಗಸ್ಟ್‌ನಲ್ಲಿ ಡೆನ್ಮಾರ್ಕ್ನ ಕೋಪೆನ್ಹೇಗನ್ನಲ್ಲಿ ಎರಡನೆಯ ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನ ನಡೆಯಿತು. ಅಲ್ಲಿನ ಕಾರ್ಮಿಕರ ಪ್ರತಿನಿಧಿ ಸಭೆಯ ಸಭಾಂಗಣದಲ್ಲಿ 17 ದೇಶಗಳ ಪ್ರತಿನಿಧಿಗಳು ಸೇರಿದ್ದರು. ಅಮೆರಿಕೆಯ ಹಲವಾರು ಕಾರ್ಮಿಕ ಸಂಘಟನೆಗಳ ನಾಯಕಿಯರು ಬಂದಿದ್ದರು. ಈ ಸಮ್ಮೇಳನಕ್ಕೆ ಅಂತರರಾಷ್ಟ್ರೀಯ ಮಹಿಳಾ ಸೆಕ್ರೆಟೇರಿಯೆಟ್‌ನ ಮುಖ್ಯಸ್ಥೆಯಾಗಿದ್ದ ಕ್ಲಾರಾ ಜೆಟ್‌ಕಿನ್ ಅಧ್ಯಕ್ಷೆಯಾಗಿದ್ದಳು. ಈ ಸಮ್ಮೇಳನದಲ್ಲಿ ಚರ್ಚಿತವಾದ ಎರಡು ವಿಷಯಗಳೆಂದರೆ ಸಾರ್ವತ್ರಿಕ ಮತದಾನದ ಹಕ್ಕು ಮತ್ತು ಮಹಿಳೆಯರ ಹೆರಿಗೆ ಭತ್ಯೆ ಮತ್ತು ಇತರ ಸೌಕರ್ಯಗಳು.
- ಕ್ಲಾರಾ ಜೆಟ್‌ಕಿನ್ ಈ ಸಮ್ಮೇಳನದಲ್ಲಿ ಮಾರ್ಚ್ 8ನ್ನು ಮಹಿಳಾ ದಿನವನ್ನಾಗಿ ಆಚರಿಸಬೇಕೆಂದು ೧೯೧೧ರಲ್ಲಿ ನಿರ್ಣಯ ಮಂಡಿಸಿದರು. ಅಲ್ಲಿ ನೆರೆದಿದ್ದ ವಿವಿಧ ರಾಷ್ಟ್ರಗಳ ಸದಸ್ಯ ಪ್ರತಿನಿಧಿಗಳು ಸರ್ವಾನುಮತದಿಂದ ಸಮ್ಮತಿಸಿದರು. ಈ ಸಮ್ಮೇಳನದಲ್ಲಿ ಫಿನ್ಲೆಂಡ್‌ನಲ್ಲಿ ಆಗಷ್ಟೇ ಚುನಾಯಿತರಾಗಿದ್ದ ಮೂವರು ಮಹಿಳೆಯರಿದ್ದು, ಅವರು ಜೆಟ್‌ಕಿನ್ ಸಲಹೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಹೀಗೆ ಅಂತರರಾಷ್ಟ್ರೀಯ ಮಹಿಳಾ ದಿನವೆನ್ನುವುದು ಪ್ರತಿಭಟನೆ ಮತ್ತು ರಾಜಕೀಯ ಕ್ರಿಯಾಶೀಲತೆಯ ದಿನವಾಗಿ ಅಸ್ತಿತ್ವಕ್ಕೆ ಬಂದಿತು.
- 1911ರಲ್ಲಿ ಮತದಾನದ ಹಕ್ಕನ್ನು ಬೇಡಿಕೆಯಾಗಿಟ್ಟುಕೊಂಡು ಮೊದಲ ಬಾರಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಇದಕ್ಕೂ ಮೊದಲು 1903ರಲ್ಲಿ ಅಮೆರಿಕೆಯಲ್ಲಿ ಮತದಾನದ ಹಕ್ಕಿಗಾಗಿ ಹೋರಾಟ ನಡೆಸಿದ್ದ ಮಹಿಳಾ ಕಾರ್ಮಿಕ ಸಂಘಟನೆಗಳು ‘ಮಹಿಳೆಯರ ಟ್ರೇಡ್ ಯೂನಿಯನ್ ಲೀಗ್’ ಸ್ಥಾಪಿಸಿ ರಾಜಕೀಯ ಮತ್ತು ಆರ್ಥಿಕ ಕಲ್ಯಾಣವನ್ನು ತಮ್ಮ ಸಂಘಟನೆಯ ಮುಖ್ಯ ಧ್ಯೇಯವನ್ನಾಗಿಸಿಕೊಂಡವು.
- 1908ರ ಫೆಬ್ರುವರಿ ಕೊನೆಯ ಭಾನುವಾರ ಅಮೆರಿಕೆಯಲ್ಲಿ ಮತದಾನದ ಹಕ್ಕಿಗಾಗಿ ಬೃಹತ್ ಪ್ರತಿಭಟನಾ ಪ್ರದರ್ಶನಗಳು ನಡೆದಿದ್ದವು. ನಂತರ 1909ರಲ್ಲಿ ಸಿದ್ಧ ಉಡುಪುಗಳ ಕಾರ್ಖಾನೆಗಳಲ್ಲಿ 20,000ದಿಂದ 30,000ದಷ್ಟು ಮಹಿಳೆಯರು ಚಳಿಗಾಲದಲ್ಲಿ 13 ವಾರಗಳ ಕಾಲ ಮುಷ್ಕರ ನಡೆಸಿ ದಸ್ತಗಿರಿಯಾದರು. ಮಹಿಳೆಯರ ಟ್ರೇಡ್ ಯೂನಿ ಯನ್ ಲೀಗ್‌ನವರು ಜಾಮೀನು ನೀಡಿ ಬಂಧಿತ ಕೆಲಸ ಗಾರರನ್ನು ಬಿಡಿಸಿಕೊಂಡರು. ಈ ಅಮೆರಿಕದ ಮಹಿಳೆಯರ ಹೋರಾಟದಿಂದ ಸ್ಫೂರ್ತಿಗೊಂಡ ಕ್ಲಾರಾ ಜೆಟ್‌ಕಿನ್ ಸೋಷಿಯಲಿಸ್ಟ್ ಮಹಿಳೆಯರ ಸಮ್ಮೇಳನದಲ್ಲಿ ವರ್ಷಕ್ಕೊಮ್ಮೆ ದಿನವನ್ನು ನಿಗದಿಪಡಿಸಿ ಮಹಿಳೆಯರು ತಮ್ಮ ಬೇಡಿಕೆಗಳನ್ನು ಒತ್ತಾಯಿಸಲು ಅನುವಾಗುವಂತಹ ವ್ಯವಸ್ಥೆಗಾಗಿ ಸಲಹೆ ನೀಡಿ ಕಾರ್ಯರೂಪಕ್ಕೆ ತರಲು ಶ್ರಮಿಸಿದಳು.೧
ಪೀಠಿಕೆ
ಬದಲಾಯಿಸಿ- ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ "ಅಂತರಾಷ್ಟ್ರೀಯ ಮಹಿಳೆಯರ ದಿನ" ವನ್ನು ಆಚರಿಸುತ್ತಾರೆ. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ , ಅದು ರಾಷ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ, ಎಲ್ಲಾದರಲ್ಲೂ ತಮ್ಮದೇ ಆದ ಛಾಪನ್ನ ಮೂಡಿಸಿದ್ದಾರೆ. ಮಹಿಳೆಯರ ಈ ಪ್ರಗತಿಯನ್ನು ಗುರುತಿಸಿ ಈ ದಿನವನ್ನು ಅವರಿಗೆ ಅರ್ಪಿಸಲಾಗಿದೆ. ೧೯೭೫ರ "ಅಂತರಾಷ್ಟ್ರೀಯ ಮಹಿಳೆಯರ ದಿನ"ದ ಸಮಯದಲ್ಲಿ, ಮಾರ್ಚ್ ೮ ರಂದು ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನ ಆಚರಿಸಲು ಆರಂಭಿಸಿದವು.
- ಎರಡು ವರ್ಷದ ನಂತರ,೧೯೭೭ ರಲ್ಲಿ, "ದಿ ಜನರಲ್ ಅಸ್ಸೆಂಬ್ಲಿ" ಮಹಿಳೆಯರ ಹಕ್ಕು ಮತ್ತು ಶಾಂತಿ ಸ್ಥಾಪನೆಯನ್ನ ಆಯಾ ದೇಶದ ಸದಸ್ಯರು ಗಮನಿಸಿ ತಮ್ಮ ದೇಶದ ಐತಿಹಾಸಿಕ ಮತ್ತು ರಾಷ್ಟ್ರೀಯ ಸಂಪ್ರದಾಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವಂತೆ ಕರೆ ನೀಡಿತು. ಹೀಗೆ ಕರೆನೀಡುವಾಗ ಮಹಿಳೆಯ ಪಾತ್ರ ಹಾಗು ಅವರ ಮೇಲೆ ನಡೆಯುತ್ತಿರುವ ಪಕ್ಷಪಾತವನ್ನ ಗಮನಿಸಿ ಅವರಿಗೆ ಸ್ಪರ್ಧಿಸುವ ಪೂರ್ತಿ ಅವಕಾಶವನ್ನು ನೀಡುವಂತೆ ಘೋಷಿಸಿತು.[೧]
ಇತಿಹಾಸ
ಬದಲಾಯಿಸಿ- "ಅಂತರಾಷ್ಟ್ರೀಯ ಮಹಿಳೆಯರ ದಿನ" ಮೊದಲ ಬಾರಿಗೆ ಹೊರ ಹೊಮ್ಮಿದ್ದು ಕೂಲಿ ಚಳುವಳಿ(ಲೇಬರ್ ಮೊವ್ಮೆಂಟ್ಸ್) ಚಟುವಟಿಕೆ ಉತ್ತರ ಅಮೆರಿಕಮತ್ತು ಯೂರೋಪ್ ಪ್ರದೇಶಗಳಲ್ಲಿ ನಡೆದಾಗ. ೧೯೦೯: ಸಂಯುಕ್ತ ಸಂಸ್ಥಾನಗಳಲ್ಲಿ ಮೊದಲ "ಅಂತರಾಷ್ಟ್ರೀ ಯ ಮಹಿಳೆಯರ ದಿನ"ಫೆಬ್ರವರಿ ೨೮ ರಂದು ಕಂಡು ಬಂತು. ಅಮೇರಿಕಾದ ಸಾಮಾಜವಾದಿ ಪಕ್ಷ ಈ ದಿನವನ್ನ ಕೆಲಸದ ಪರಿಸ್ಥಿತಿಯನ್ನ ವಿರೋಧಿಸಿ ನ್ಯೂಯಾರ್ಕ್ ನಗರದಲ್ಲಿ ನಡೆದ "ಸರ್ಕಾರಿ ಕಾರ್ಮಿಕರ ಚಳುವಳಿ" ಯಲ್ಲಿ ಪ್ರತಿಭಟಿಸಿದ ಮಹಿಳೆಯರಿಗೆ ಅರ್ಪಿಸಲಾಯಿತು.
- ೧೯೧೦: ಅಂತರಾಷ್ಟ್ರೀಯ ಸಮಾಜವಾದಿ ಕೊಪೆಂಹಗೆನ್‍ನಲ್ಲಿ ನಡೆದ ಚರ್ಚೆಯಲ್ಲಿ ಅದಿಷ್ಟಿತಗೊಳಿಸಲಾಯಿತು. ಈ ಪ್ರಸ್ಥಾಪವನ್ನು ಅವಿರೋಧವಾಗಿ ೧೦೦ ಮಹಿಳೆಯರು ೧೭ ದೇಶಗಳಿಂದ ಸಹಕರಿಸಿದರು. ಇದು ಫಿನ್ನಿಷ್ ಪಾರ್ಲಿಮೆಂಟ್‍ಗೆ ಆಯ್ಕೆಯಾದ ಮೊದಲ ಮೂವರು ಮಹಿಳೆಯರನ್ನೂ ಸಹ ಒಳಗೊಂಡಿತ್ತು.
- ೧೯೧೧: ಕೊಪೆಂಹಗೆನ್‍ನ ಮೊದಲ ಹೆಜ್ಜೆಯ ಫಲಿತಾಂಶವಾಗಿ, ಅಂತರಾಷ್ಟ್ರೀಯ ಮಹಿಳೆಯರ ದಿನವನ್ನು ಮೊದಲ ಬಾರಿಗೆ ಮಾರ್ಚ್ ೧೯ ರಂದು ಆಸ್ಟ್ರೇಲಿಯ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಡ್ಜರ್ಲ್ಯಾಂಡ್ ದೇಶಗಳು ಗುರುತಿಸಿದವು. ಅಂದು ಒಂದು ಮಿಲಿಯನ್‍ಗಿಂತಲು ಹೆಚ್ಹು ಮಹಿಳೆಯರು ಹಾಗು ಪುರುಷರು ಈ ಚಳುವಳಿಯಲ್ಲಿ ಭಾಗವಹಿಸಿದರು.
- ಇದಲ್ಲದೇ ಮತಚಲಾಯಿಸುವ ಹಕ್ಕು, ಸಾರ್ವಜನಿಕ ಕಛೇರಿ, ಮಹಿಳೆಯರಿಗೆ ಕೆಲಸ ಮಾಡುವ ಹಕ್ಕು ಹಾಗು ಉದ್ಯೋಗ ತರಬೇತಿಯನ್ನು ಜಾರಿಗೆ ತರಲು ಬೇಡಿಕೆಯಿಟ್ಟಿದ್ದಲ್ಲದೇ ಕೆಲಸದಲ್ಲಿನ ತಾರತಮ್ಯವನ್ನ ವಿರೋಧಿಸಿ ಪ್ರತಿಭಟಿಸಿದರು. ೧೯೧೩-೧೯೧೪ : ಅಂತರಾಷ್ಟ್ರೀಯ ಮಹಿಳೆಯರ ದಿನದ ಆಚರಣೆ "೧ನೇ ವಿಶ್ವ ಯುದ್ಧ"ವನ್ನ ತಡೆಗಟ್ಟುವ ಯಾಂತ್ರಿಕ ಕೌಶಲ್ಯವಾಗಿ ಮಾರ್ಪಟ್ಟಿತು.
- ಇದೇ ವೇಳೆಯಲ್ಲಿ ಶಾಂತಿ ಚಳುವಳಿಯ ಅಂಗವಾಗಿ ರಷ್ಯಾದ ಮಹಿಳೆಯರು ಫೆಬ್ರವರಿಯ ಕೊನೆಯವಾರದಲ್ಲಿ ವಿಶ್ವ ಮಹಿಳಾ ದಿನವನ್ನ ಆಚರಿಸಿ ಗಮನಸೆಳೆದರು. ಅತ್ತ ಯುರೋಪಿನಲ್ಲಿ ಅದೇ ಸಾಲಿನ ಮಾರ್ಚಿ ೮ ರಂದು ಮಹಿಳೆಯರು ಯುದ್ಧನೀತಿಯನ್ನ ವಿರೋಧಿಸಿ, ಐಕ್ಯಮತ ವನ್ನ ಸಹಕರಿಸಿ ಬ್ರುಹತ್ ಚಳುವಳಿ ನಡೆಸಿದರು.
- ೧೯೧೭: ಮತ್ತೆ ಯುದ್ಧ ನೀತಿಯನ್ನ ವಿರೋಧಿಸಿ ರಷ್ಯಾದ ಮಹಿಳೆಯರು ಊಟ ಮತ್ತು ಶಾಂತಿ ಚಳುವಳಿಯನ್ನ ಫೆಬ್ರವರಿ ತಿಂಗಳ ಕೊನೆಯಭಾನುವಾರದಲ್ಲಿಇದು ಗ್ರೆಗೊರಿಯನ್ ಕ್ಯಾಲೆಂಡರಿನ ಪ್ರಕಾರ ಮಾರ್ಚಿ ೮) ನಡೆಸಿದರು. ನಾಲ್ಕು ವಾರಗಳ ನಂತರ ರಾಜ ಮನೆತನದ ಆಳ್ವಿಕೆಯನ್ನು ನಿಲ್ಲಿಸಿ ಮತಚಲಾಯಿಸುವ ಅಧಿಕಾರವನ್ನ ಸರ್ಕಾರ ನೀಡಿತು.
- ಅಂದಿನ ದಿನಗಳಲ್ಲಿ ಮಹಿಳಾ ದಿನಾಚರಣೆ ಮುಂದುವರೆದ ಮತ್ತು ಮುಂದುವರೆಯುತ್ತಿರುವ ದೇಶಗಳಲ್ಲಿ ಹೊಸ ಆಯಾಮವನ್ನು ಪಡೆಯಿತು. ಬೆಳೆಯುತ್ತಿದ್ದ ಅಂತರಾಷ್ಟ್ರೀಯ ಮಹಿಳಾ ಚಳುವಳಿ, ಅವುಗಳ ಸಾಮರ್ಥ್ಯವನ್ನ ಹೆಚ್ಹಿಸಿದ ನಾಲ್ಕು "ಜಾಗತಿಕ ಸಂಯುಕ್ತ ರಾಷ್ಟ್ರೀಯ ಮಹಿಳಾ ಸಮಾಲೋಚನೆ", ಮಹಿಳಾ ಹಕ್ಕು, ರಾಜಕೀಯ ಹಾಗು ಆರ್ಥಿಕ ಕ್ಷೆತ್ರಗಳಲ್ಲಿ ಭಾಗವಹಿಸುವ ಹಕ್ಕನ್ನ ಪಡೆಯಲು ಪೋಷಿಸಿದವು.
- ದಿನಕಳೆದಂತೆ ಅಂತರಾಷ್ಟ್ರೀಯ ಮಹಿಳೆಯರ ದಿನ ಬೆಳವಣಿಗೆಯ ಪ್ರತಿಬಿಂಬದ ಜೊತೆಗೆ ಸಾಧರಣ ಮಹಿಳೆಯ ಧೀರತನ ಮತ್ತು ಧೃಡತೆ ದೇಶ ಹಾಗು ಸಮುದಾಯದ ಇತಿಹಾಸದಲ್ಲಿ ವಹಿಸಿದ ಅಸಾಧಾರಣ ಪಾತ್ರವನ್ನ ಬಿಂಬಿಸುತ್ತಾ ಬದಲಾವಣೆಯ ಕರೆಯನ್ನ ನೀಡುತ್ತದೆ.
ಸಂಯುಕ್ತ ರಾಷ್ಟ್ರಗಳು ಮತ್ತು ಲಿಂಗ ಸಮಾನತೆ
ಬದಲಾಯಿಸಿ೧೯೪೫ ರಲ್ಲಿ ಸಹಿ ಮಾಡಿದ ಸಂಯುಕ್ತ ರಾಷ್ಟ್ರಗಳ ಅಂತಾರಾಷ್ಟ್ರೀಯ "ಲಿಂಗ ಸಮಾನತಾ ತತ್ವ" ಅಂಗೀಕಾರಕ್ಕೆ ಬಂತು. ಅಲ್ಲಿಯ ನಂತರ ವಿಶ್ವವ್ಯಾಪ್ಯ ಒಪ್ಪಂದ ನೀತಿ, ನಿರ್ದಿಷ್ಟಮಾನ, ಮಹಿಳಾಭಿವೃದ್ಧಿ ಕಾರ್ಯಕ್ರಮ ಹಾಗೂ ಯೋಜನೆಗಳು ಕಾರ್ಯರೂಪಕ್ಕೆ ಬಂದವು. ಕೆಲ ವರ್ಷಗಳ ನಂತರ ಸಂಯುಕ್ತ ರಾಷ್ಟ್ರಗಳು ಮತ್ತು ಅದರ ತಾಂತ್ರಿಕ ಏಜೆನ್ಸ್ಸಿಗಳು ಮಾನವ ಹಕ್ಕುಗಳನ್ನ ಅಭಿನಂದಿಸಿ ಮಹಿಳೆಯರು ಭಾಗವಹಿಸುವುದನ್ನು ಪ್ರೋತ್ಸಾಹಿಸಿದವು. ಮಹಿಳೆಯರನ್ನು ಪ್ರಬಲಗೊಳಿಸುವ ಸಂಯುಕ್ತ ರಾಷ್ಟ್ರಗಳ ಕಾರ್ಯ ವಿಶ್ವದಾದ್ಯಂತ ಮುಂದುವರೆಯಿತು.[೨]
Gallery
ಬದಲಾಯಿಸಿ-
Afghanistan, 2002 ceremony at the Ministry of Women's Affairs, which USAID helped rehabilitate.
-
Bogotà, Colombia, 2009.
-
Warsaw, Poland, 2010.
-
Sydney, Australia, 2011.
-
Maldives, 2012.
-
Arusha, Tanzania, 2012.
-
Brazil, 2013.
ಇವನ್ನೂ ನೋಡಿ
ಬದಲಾಯಿಸಿಹೊರಗಿನ ಸಂಪರ್ಕಗಳು
ಬದಲಾಯಿಸಿ- ೧.:w:prajavani.net/article/ಕ್ಲಾರಾ-ಜೆಟ್‌ಕಿನ್-ಮತ್ತು-ಮಹಿಳಾ-ದಿನ(ಎನ್.ಗಾಯತ್ರಿ-ವಿಶ್ಲೇಷಣೆ)
ಉಲ್ಲೇಖ
ಬದಲಾಯಿಸಿ