ಭಾರತದಲ್ಲಿ ಸ್ತ್ರೀ ರಕ್ಷಣಾ ಕಾನೂನು

ದಂಡ ಸಂಹಿತೆಯಲ್ಲಿ ತಿದ್ದುಪಡಿಸಂಪಾದಿಸಿ

 • ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 498ಕ್ಕೆ ತಿದ್ದು­ಪಡಿ ತಂದು 498ಎ ಸೇರ್ಪಡೆ ಮಾಡಿರುವುದು ಮಹಿಳೆ­ಯರ ರಕ್ಷಣೆ ಗಾಗಿ. ದುರದೃಷ್ಟವಶಾತ್‌, ಎಷ್ಟೋ ಸಂದರ್ಭ­ಗಳಲ್ಲಿ ಈ ತಿದ್ದುಪಡಿಯಿಂದ ಆಕೆಯ ಜೀವನವೇ ಅಲ್ಲೋಲ ಕಲ್ಲೋಲ­ವಾಗುತ್ತಿದೆ. ಪತಿ ಹಾಗೂ ಆತನ ಮನೆಯವರ ವಿರುದ್ಧ ದೂರು ದಾಖಲು ಮಾಡುವುದರಿಂದ, ಅವರ ಜೀವನ ಹಾಳು ಆಗು­ವುದು ಮಾತ್ರವಲ್ಲದೇ, ದಂಪತಿ ನಡುವೆ ವೈಷಮ್ಯದ ಬೀಜ ಮೊಳಕೆ ಒಡೆದು, ಅದು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿದೆ. ಇದ­ರಿಂದ ಮಕ್ಕಳ ಭವಿಷ್ಯಕ್ಕೂ ಕುತ್ತು. ಮಹಿಳೆಯ ಪರ ಮಾಡಿರುವ ಕಾನೂನು ಆಕೆಯ ದಾಂಪತ್ಯ ಜೀವನಕ್ಕೇ ಮುಳುವಾಗುತ್ತಿದೆ!
 • ಇವೆಲ್ಲ ಮನಗಂಡು ತಿದ್ದುಪಡಿ ಬಗ್ಗೆ ಚಿಂತಿಸಲು 2000ನೇ ಸಾಲಿನಲ್ಲಿ ನ್ಯಾ. ವಿ.ಎಸ್‌. ಮಳೀಮಠನೇತೃತ್ವದ ಸಮಿತಿ ರಚನೆಯಾಗಿತ್ತು. 2003ರಲ್ಲಿ ಸಮಿತಿ ವರದಿ ನೀಡಿದೆ. ಅದರಲ್ಲಿ ಈ ಕಾಯ್ದೆಯ ಅದರಲ್ಲಿ ಈ ಕಾಯ್ದೆಯ ದುರುಪಯೋಗದ ಬಗ್ಗೆ ಸವಿಸ್ತಾರವಾಗಿ ವಿವರಿಸ­ಲಾ­­ಗಿದೆ. ಪೊಲೀಸರು ಏಕಾ­ಏಕಿ ಎಲ್ಲ ಆರೋಪಿಗಳನ್ನು ಬಂಧಿಸ­ಬಾ­­ರದು, ಇದನ್ನು ಜಾಮೀ­ನು­ರಹಿತ ಅಪರಾಧ ಎಂದು ಪರಿಗಣಿಸ­ಬಾರದು ಹಾಗೂ ದೂರು ದಾಖಲಾದ ನಂತರ ಒಂದು ವೇಳೆ ಪತ್ನಿ ರಾಜಿ ಮಾಡಿ­ಕೊ­ಳ್ಳಲು ಇಷ್ಟಪಟ್ಟರೆ, ಅದಕ್ಕೆ ಅವಕಾಶ ನೀಡಬೇಕು ಎಂದು ವರದಿ­ಯಲ್ಲಿ ತಿಳಿಸಲಾಗಿದೆ. ಆದರೆ ವರದಿ ಸಲ್ಲಿಸಿ ದಶಕ ಕಳೆದರೂ ಇದನ್ನು ಸಂಸತ್ತಿನ ಮುಂದಿಟ್ಟು ಕಾನೂನು ರೂಪಿಸಲು ಕೇಂದ್ರ ಸರ್ಕಾರ ಮೀನಮೇಷ ಎಣಿಸುತ್ತಿದೆ
 • ಈ ಕಾನೂನಿನ ತಿದ್ದುಪಡಿ ಕುರಿತು ಸುಪ್ರೀಂಕೋರ್ಟ್ ಹೇಳಿರು­ವುದು ಇದೇ ಮೊದಲಲ್ಲ. ತಿದ್ದುಪಡಿ ಕುರಿ­ತಾಗಿ ಅನೇಕ ಪ್ರಕರಣಗಳಲ್ಲಿ ಕೇಂದ್ರಕ್ಕೆ ಸೂಚನೆ ನೀಡುತ್ತಲೇ ಬಂದಿದೆ. ‘ನ್ಯಾಯಮೂರ್ತಿ ವಿ.ಎಸ್‌.ಮಳೀಮಠ ನೇತೃತ್ವದ ಸಮಿತಿ ನೀಡಿ­ರುವ ವರದಿಯ ಅನುಷ್ಠಾನ ಮಾಡಬೇಕು’ ಎಂದು ಎಷ್ಟೋ ಪ್ರಕರಣಗಳಲ್ಲಿ ತಿಳಿಸಿದೆ. ಆದರೆ ಏನೂ ಆಗಲಿಲ್ಲ. ಕಾನೂನು ತಿದ್ದುಪಡಿ ಮಾಡಬೇಕಿದೆ.

ಮಹಿಳೆಯ ಮೇಲೆ ದೌರ್ಜನ್ಯ ಪ್ರಕರಣ ಮತ್ತು ಶಿಕ್ಷೆಸಂಪಾದಿಸಿ

ಮಹಿಳೆಯ ಮೇಲೆ ದೌರ್ಜನ್ಯ ಪ್ರಕರಣ
ವರದಕ್ಷಣೆ ಸಾವು
ಮಹಿಳೆಯ ಮೇಲೆ ದೌರ್ಜನ್ಯ ಅಪರಾಧ ಪ್ರಕರಣ
 • ಐ ಪಿ ಸಿ ಕಾಯಿದೆ 498 a-ಬಂಧಿತರು :197762;
 • ಅದರಲ್ಲಿ ಬಂಧಿತ ಮಹಿಳೆಯರು :47951 ;
 • ಆರೋಪ ಪಟ್ಟಿ ಪ್ರಮಾಣ : 93.6pc
 • ಶಿಕ್ಷೆಯ ಪ್ರಮಾಣ :15pc
ದೇಶದಲ್ಲಿ ದಾಖಲಾದ ವರದಕ್ಷಣೆ ಸಾವು
 • ವರ್ಷ-----ಸಂಖ್ಯೆ
 • 2008–8,172
 • 2009–8,383
 • 2010–8,391
 • 2011–9,618
 • 2012–8,233
 • 2013–8,083
 • ಆಧಾರ :ರಾಷ್ಟ್ರೀಯ ಅಪರಾಧಗಳ ದಾಖಲೆಗಳ ಬ್ಯೂರೊ- 2012ಮತ್ತು--2013

(ಸಂಗ್ರಹಕಾರರು :ಡಾ.ಮೈತ್ರೇಯಣಿ ಮತ್ತು ಕೆ.ಎಸ್.ವಿಮಲಾ :ಅಂತರಾಳ :ಪ್ರಜಾವಾಣಿ 12-7-2014)

ನೋಡಿಸಂಪಾದಿಸಿ

ಪೂರಕ ಓದಿಗೆಸಂಪಾದಿಸಿ

ಆಧಾರಸಂಪಾದಿಸಿ

 • ನ್ಯಾ.ಮಳೀಮಠ್ ಸಮಿತಿ ವರದಿ.
 • ನ್ಯಾ. ವಿ.ಎಸ್‌. ಮಳೀಮಠ ಸಂದರ್ಶನ- ನಿರೂಪಣೆ: ಸುಚೇತನಾ ನಾಯ್ಕ (ಪ್ರಜಾವಾಣಿ ೧೨೭-೨೦೧೪)