ಮಹಿಳೆ ಮತ್ತು ಭಾರತ

women in indian

ಪೀಠಿಕೆ ಬದಲಾಯಿಸಿ

ಈ ಹಿಂದಿಗಿಂತಲೂ ಮಹಿಳೆಯರು . ಹತ್ತು ವರ್ಷದಿಂದೀಚೆ (2004) ಭಾರತೀಯ ಉದ್ಯಮ ಕ್ಷೇತ್ರದಲ್ಲಿ, ರಾಜಕೀಯ, ಕಾನೂನು ಮತ್ತು ಸುವ್ಯವಸ್ಥೆ ಕ್ಷೇತ್ರದಲ್ಲಿ ಗಣನೀಯವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಮಹಿಳೆಯರು ಸಮಾಜದ ಜವಾಬ್ದಾರಿಯುತ ಸ್ಥಾನ ಗಳಲ್ಲಿ ಪಾತ್ರವಹಿಸುವ ಸಂಖ್ಯೆ ಸಾಕಷ್ಟು ಏರಿಕೆಯಾಗಿದೆ. ಉದ್ಯಮಗಳಲ್ಲಿ ಇವರ ಪಾಲು ಅಧಿಕ. ಕಳೆದ ಆರು ವರ್ಷಗಳಲ್ಲಿ ವಿವಿಧ ಕ್ಷೇತ್ರದಲ್ಲಿ ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ಶೇಕಡಾ 50ರಷ್ಟು ಹೆಚ್ಚಾಗಿದೆ ( ‘ಮಾರ್ಕೆಟ್‌ಕಾಲ್ಸ್‌ ಟೆಕ್ನಾಲಜಿ ಸಂಸ್ಥೆ’ ನಡೆಸಿರುವ ಅಧ್ಯಯನ). ಆದರೆ ಮಹಿಳೆಯರನ್ನು ಕುರಿತಂತೆ ಸಮಸ್ಯೆಗಳೂ ಇವೆ.

ಸಮಸ್ಯೆ ಬದಲಾಯಿಸಿ

 
ಭಾರತದಲ್ಲಿ ಬಾಲ್ಯ ವಿವಾಹ:bySDRC
ಬಾಲ್ಯವಿವಾಹವೆಂಬ ತೊಡಕು
ವಿವಾಹವಾಗಲು ಕಾಯ್ದೆ ಪ್ರಕಾರ ಮಹಿಳೆಯರಿಗೆ 18 ವರ್ಷ ಹಾಗೂ ಪುರುಷರಿಗೆ 21 ವರ್ಷ ತುಂಬಿರಬೇಕು.
  • ಮಕ್ಕಳ ಹಕ್ಕುಗಳ ಸಂಸ್ಥೆಯ ಪ್ರಕಾರ ಕರ್ನಾಟಕದಲ್ಲಿ ಪ್ರತಿ ಐದು ಮಕ್ಕಳಲ್ಲಿ ಇಬ್ಬರು ಬಾಲ್ಯ ವಿವಾಹವಾಗುತ್ತಿದ್ದಾರೆ.
೨೦೧೧ರ ಜನಗಣತಿ
  • ರಾಜ್ಯದಲ್ಲಿರುವ 3.4 ಕೋಟಿ ವಿವಾಹಿತರಲ್ಲಿ 8.26 ಲಕ್ಷ ಮಂದಿ ಹತ್ತು ವರ್ಷ ತುಂಬುವ ಮುಂಚೆಯೇ ವಿವಾಹವಾಗಿರುವ ಸಂಗತಿ ಜನಗಣತಿಯಿಂದ ಬೆಳಕಿಗೆ ಬಂದಿದೆ.
  • 18 ವರ್ಷ ತುಂಬುವ ಮುನ್ನ 23.3 ಲಕ್ಷ ಮಂದಿವಿವಾಹವಾಗಿದ್ದಾರೆ. ಜನಗಣತಿ ಆಯೋಗ ಈಚೆಗೆ ಬಿಡುಗಡೆ ಮಾಡಿರುವ 2011ರ ಜನಗಣತಿಗೆ ಸಂಬಂಧಿಸಿದ ‘ಕರ್ನಾಟಕದಲ್ಲಿ ವಿವಾಹಿತರ ಒಟ್ಟು ಸಂಖ್ಯೆ ಹಾಗೂ ಆ ಸಂದರ್ಭದಲ್ಲಿ ಅವರ ವಯಸ್ಸು’ ಎಂಬ ವರದಿಯಲ್ಲಿ ಈ ಅಂಶ ಗೊತ್ತಾಗಿದೆ.
  • 1.86 ಕೋಟಿ ವಿವಾಹಿತ ಮಹಿಳೆಯರಲ್ಲಿ ಇನ್ನೂ 10 ವರ್ಷ ತುಂಬದ 5.75 ಲಕ್ಷ ಮಂದಿ ವಿವಾಹ ಜೀವನಕ್ಕೆ ಕಾಲಿಟ್ಟಿರುವುದು ವರದಿಯಲ್ಲಿ ನಮೂದಾಗಿದೆ. ಕಳೆದ ದಶಕವೊಂದರಲ್ಲೇ 3 ಸಾವಿರ ಬಾಲಕಿಯರು ವಿವಾಹವಾಗಿದ್ದಾರೆ. ಅಭಿಯಾನ ಹಾಗೂ ಜಾಗೃತಿ ಕಾರ್ಯಕ್ರಮಗಳ ಮೂಲಕ ಈ ಪಿಡುಗು ಕ್ರಮೇಣ ಕಡಿಮೆಯಾಗುತ್ತಿದ್ದರೂ ಬಾಲ್ಯ ವಿವಾಹಿತರು ಹೆಚ್ಚಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ರಾಜಸ್ತಾನ ಮೊದಲ ಸ್ಥಾನ ಹೊಂದಿದೆ.

ಮೈಸೂರು ಜಿಲ್ಲೆಯೊಂದರಲ್ಲಿ 12,600 ಸಾವಿರ ಪುರುಷರು ಹಾಗೂ 29,200 ಸಾವಿರ ಮಹಿಳೆಯರು 10 ವರ್ಷ ತುಂಬುವ ಮೊದಲೇ ಮದುವೆಯಾಗಿದ್ದಾರೆ. ಕಳೆದ ದಶಕದಲ್ಲಿ 66 ಬಾಲಕಿಯರು ಹಾಗೂ 8 ಬಾಲಕರು ಮದುವೆಯಾಗಿದ್ದಾರೆ.

  • ರಾಜಧಾನಿ ಬೆಂಗಳೂರಿನಲ್ಲಿಯೇ ಬಾಲ್ಯ ವಿವಾಹಿತರು ಅಧಿಕ. 2011ರ ವರೆಗಿನ ಜನಗಣತಿ ಪ್ರಕಾರ ಇಲ್ಲಿರುವ 55.1 ಲಕ್ಷ ವಿವಾಹಿತರಲ್ಲಿ 1.03 ಲಕ್ಷ ಮಂದಿ ಹತ್ತು ವರ್ಷ ತುಂಬುವ ಮುನ್ನವೇ ವಿವಾಹವಾಗಿರುವುದು ವರದಿಯಲ್ಲಿ ಉಲ್ಲೇಖ ವಾಗಿದೆ.
  • [೧][೨]

[೩]

ಜಿಲ್ಲೆ ಶೇಕಡಾ ಜಿಲ್ಲೆ ಶೇಕಡಾ
ರಾಯಚೂರು 59.4 ಚಿತ್ರದುರ್ಗ 26.6
ಕೊಪ್ಪಳ 51.4 ಕೋಲಾರ 26.3
ವಿಜಯಪುರ 50.1 ತುಮಕೂರು, 25.7
ಕಲಬುರ್ಗಿ 48.9 ಮೈಸೂರು 25.2
ಬಾಗಲಕೋಟೆ 48.3 ಹಾವೇರಿ 20.2
ಬೆಳಗಾವಿ 43, ಹಾಸನ 18. 5
ಬೀದರ್, 44.9 ದಾವಣಗೆರೆ 18.1
ಗದಗ 44.8, ಬೆಂಗಳೂರು ನಗರ, 12.4
ಬಳ್ಳಾರಿ 35.2, ಶಿವಮೊಗ್ಗ 8.9
ಚಾಮರಾಜನಗರ 34.3, ಉತ್ತರ ಕನ್ನಡ 7.8
ಧಾರವಾಡ, 32.4 ಚಿಕ್ಕಮಗಳೂರು 6.8
ಮಂಡ್ಯ 29.9 ದಕ್ಷಿಣ ಕನ್ನಡ 5.5
ಬೆಂಗಳೂರು ಗ್ರಾಮಾಂತರ 28.4 ಕೊಡಗು 2.2

ಕರ್ನಾಟಕದಲ್ಲಿ ಬಾಲ್ಯ ವಿವಾಹ ಬದಲಾಯಿಸಿ

  • ಜಿಲ್ಲೆಯಾದ್ಯಂತ ಎಲ್ಲೇ ಬಾಲ್ಯ ವಿವಾಹ ನಡೆಯುತ್ತಿದ್ದರೂ ಮಾಹಿತಿ ಕಲೆ ಹಾಕುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ, ಡಾನ್ ಬಾಸ್ಕೊ ಹಾಗೂ ಚೈಲ್ಡ್ ಲೈನ್ ಸಂಸ್ಥೆಗಳ ಪದಾಧಿಕಾರಿಗಳು ದಾಳಿ ಮಾಡಿ ಬಾಲ್ಯ ವಿವಾಹಗಳನ್ನು ತಡೆಗಟ್ಟುತ್ತಾರೆ. ಇಷ್ಟೇ ಅಲ್ಲ ಪೋಷಕರಿಂದ ಬಾಲ್ಯ ವಿವಾಹ ಮಾಡುವುದಿಲ್ಲ ಎಂದು ಮುಚ್ಚಳಿಕೆ ಪತ್ರ ಬರೆಸಿಕೊಳ್ಳುತ್ತಾರೆ. ಆದರೆ ಇಂಥ ಪ್ರಕರಣಗಳಲ್ಲಿ ಪೋಷಕರು ಸ್ವಲ್ಪ ದಿನಗಳ ನಂತರ ಗುಟ್ಟಾಗಿ ಮದುವೆ ಮಾಡುತ್ತಿದ್ದಾರೆ.
  • ತಂಡ ರಚನೆ: ಈ ವಿಷಯವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೂ ಆದ ಬಾಲ್ಯ ವಿವಾಹ ನಿಷೇಧ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ತಾಲ್ಲೂಕು ಆರೋಗ್ಯ ಅಧಿಕಾರಿ, ಪೊಲೀಸ್ ಸಬ್ ಇನ್‌ಸ್ಪೆಕ್ಟರ್, ಇಬ್ಬರು ಪುರುಷ ಕಾನ್‌ಸ್ಟೆಬಲ್, ಇಬ್ಬರು ಮಹಿಳಾ ಕಾನ್‌ಸ್ಟೆಬಲ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಒಬ್ಬರು ಸದಸ್ಯರು, ಚೈಲ್ಡ್ ಲೈನ್‌ನ ಇಬ್ಬರು ಸದಸ್ಯರನ್ನು ಒಳಗೊಂಡ ಎಂಟು ಪ್ರತ್ಯೇಕ ತಂಡಗಳನ್ನು ರಚಿಸಿದ್ದಾರೆ.
  • ಈ ತಂಡವು ಸಾಕಷ್ಟು ಅಧ್ಯಯನ ಮಾಡಿ, ಮಂಗಳವಾರ ದಿಢೀರ್‌ ಭೇಟಿ ನೀಡಿ 37 ಪ್ರಕರಣಗಳನ್ನು ಮರು ವಿಚಾರಣೆಗೆ ಒಳಪಡಿಸಿದೆ. ಈ ಪೈಕಿ ಎರಡು ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಿದೆ.
  • ‘2015ರಿಂದ ಇಲ್ಲಿಯವರೆಗೆ ಜಿಲ್ಲೆಯಾದ್ಯಂತ ಒಟ್ಟು 83 ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಗಟ್ಟಲಾಗಿದೆ. ಈ ಪೈಕಿ 37 ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಲಕಿ, ಆಕೆಯ ಪೋಷಕರನ್ನು ಕರೆ ತಂದು ಮರು ವಿಚಾರಣೆಗೆ ಒಳಪಡಿಸಲಾಗಿದೆ. 28 ಪ್ರಕರಣಗಳಲ್ಲಿ ಬಾಲಕಿ ಮತ್ತು ಪೋಷಕರಿಗೆ ತಿಳಿವಳಿಕೆ ನೀಡಿ, ಕೌನ್ಸೆಲಿಂಗ್ ಮಾಡಿ ವಾಪಸು ಕಳುಹಿಸಲಾಗಿದೆ.

ತಪ್ಪದ ‘ಗುಜ್ಜರ್ ಕಿ’ ಶಾದಿ ಬದಲಾಯಿಸಿ

  • ಕಲಬುರ್ಗಿ ತಾಲ್ಲೂಕು ಅಂಕಲಗಾದಲ್ಲಿ ಒಂದೂವರೆ ವರ್ಷದ ಹಿಂದೆ ನಡೆಯುತ್ತಿದ್ದ ‘ಗುಜ್ಜರ್ ಕಿ ಶಾದಿ’ಯನ್ನು ಅಧಿಕಾರಿಗಳ ತಂಡ ತಡೆಗಟ್ಟಿತ್ತು. ಮುಚ್ಚಳಿಕೆ ಪತ್ರ ಬರೆದುಕೊಟ್ಟ ಪೋಷಕರು ಬಾಲಕಿಯನ್ನು ಮನೆಗೆ ಕರೆದೊಯ್ದಿದ್ದರು. ಈಗ ಬೆಳಕಿಗೆ ಬಂದಿರುವ ಸಂಗತಿ ಎಂದರೆ ಆ ಬಾಲಕಿಗೆ ಗುಜ್ಜರ್ ಜತೆಯೇ ಮದುವೆ ಮಾಡಲಾಗಿದ್ದು, ಆಕೆ ಈಗ ಮುಂಬೈನಲ್ಲಿ ನೆಲೆಸಿದ್ದಾಳೆ. ಇಷ್ಟೇ ಅಲ್ಲದೆ ಆಕೆಗೆ ಹೆರಿಗೆಯೂ ಆಗಿದ್ದು, ತಾಯಿ ಬಾಣಂತನಕ್ಕೆ ತೆರಳಿದ್ದಾರೆ. ವಿಷಯ ಅರಿತ ಅಧಿಕಾರಿಗಳು ಸದ್ಯ ಬಾಲಕಿಯ ತಂದೆಯನ್ನು ವಶಕ್ಕೆ ಪಡೆದಿದ್ದಾರೆ.[೪]

ಮಹಿಳೆಯರು ಮತ್ತು ರಾಜಕೀಯ ಬದಲಾಯಿಸಿ

 
ಇಂದಿರಾ ಗಾಂಧಿ:ಭಾರತದ ೩ನೇ ಪ್ರಧಾನಿ
  • ಭಾರತದಲ್ಲಿ ಮೊದಲ ಲೋಕಸಭಾ ಚುನಾವಣೆ ನಡೆದದ್ದು 1951–52ರಲ್ಲಿ, ಕೊನೆಯದಾಗಿ ನಡೆದಿರುವುದು 2014ರಲ್ಲಿ. ಇದುವರೆಗೆ ನಡೆದಿರುವ ಲೋಕಸಭಾ ಚುನಾವಣೆಯ ಸಂಖ್ಯೆ 16. ಆ ಪೈಕಿ ಕೊನೆಯ ಎಂಟು ಲೋಕಸಭಾ ಚುನಾವಣೆಗಳಲ್ಲಿ ಮಹಿಳೆಯರು ಪಡೆದ ಸ್ಥಾನದ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
  • ಈ ಬಾರಿಯ 16ನೇ ಲೋಕಸಭೆಯ 543 ಸದಸ್ಯರ ಪೈಕಿ ಮೊದಲ ಬಾರಿಗೆ 61 ಮಹಿಳೆಯರು ಆಯ್ಕೆಯಾಗಿ ದೇಶದ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯವೊಂದರಿಂದಲೇ 13 ಮಹಿಳೆಯರು ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಹಿಂದಿನ ಚುನಾವಣೆಗಳನ್ನು ಗಮನಿಸಿದರೆ ಈಗ ಮಹಿಳೆಯ ಸಂಖ್ಯೆ ಅಧಿಕವಾಗಿದ್ದರೂ, ಇವರ ಸಂಖ್ಯೆ ಕೇವಲ ಶೇ 11.
ಲೋಕಸಭೆಯಲ್ಲಿ ಮಹಿಳಾ ಶೇಕಡಾ ಪ್ರಾತಿನಿಧ್ಯ
ಇಸವಿ/ಲೋಕಸಭೆ ಮಹಿಳಾ ಶೇಕಡಾ ಪ್ರಾತಿನಿಧ್ಯ
1989 5.48 %
1991 7.30 %
1996 7.37  %
1999 9.02  %
2004 8.29  %
2009 10.87  %
2014 8.29 %(ಶೇ 11.?)

ಪೊಲೀಸ್ ಇಲಾಖೆ ಬದಲಾಯಿಸಿ

  • ಭಾರತದಲ್ಲಿ ಮೊದಲ ಪೊಲೀಸ್‌ ಅಧಿಕಾರಿಯನ್ನು ನೇಮಿಸಿದ್ದು ಕೇರಳದ ತಿರುವಾಂಕೂರು ರಾಯಲ್‌ ಪೊಲೀಸ್‌ ಠಾಣೆಯಲ್ಲಿ. ಅದು 1933ರಲ್ಲಿ. ಮೊದಲ ಐಪಿಎಸ್‌ ಅಧಿಕಾರಿಯಾಗಿ ಕಿರಣ್ ಬೇಡಿ ನೇಮಕಗೊಂಡಿದ್ದು 1972ರಲ್ಲಿ.
 
2014ರಲ್ಲಿ ಮದ್ರಾಸ್ ಐಐಟಿಯಲ್ಲಿ ಬೇಡಿಯವರು ಭಾಷಣ ಮಾಡುತ್ತಿರುವುದು.(Director General of Police In office 1972–2007)
  • 2016
ಒಟ್ಟು ಪೋಲೀಸರ ಸಂಖ್ಯೆ =17,22,766
ಓಟ್ಟು ಮಹಿಳಾ ಪೋಲೀಸರು =1,05,325
ನೇಮಕಾತಿ ವಿವರ
ಇಸವಿ ಮಹಿಳಾ ಪೋಲೀಸರ ಸಂಖ್ಯೆ ಶೇಕಡಾ ಮಹಿಳೆಯರು
2008 57466 3.90%
2009 56667 6%
2010 66153 4.20%
2011 71756 4.60%
2012 84479 5.30%
2013 97516 5.87%
2014 105325 6.11%

ಸಾಕ್ಷರತೆ ಬದಲಾಯಿಸಿ

  • ಜನಗಣತಿಯ ಆಧಾರದಲ್ಲಿ :ಮಹಿಳೆಯರ ಸಾಕ್ಷರತೆ ನಿರೀಕ್ಷೆಗಿಂತ ಕಡಿಮೆ ಇರುವುದು ಎದ್ದು ತೋರುವುದು.
ಸಾಕ್ಷರತೆ ಮತ್ತು ಮಹಿಳೆಯರು
ಗಣತಿ ಇಸವಿ ಪುರುಷರು ಮಹಿಳೆಯರು ಒಟ್ಟು ಸಾಕ್ಷರರು
->>> ಶೇಕಡ ಶೇಕಡ ಶೇಕಡ
1981 54.84 25.68 40.76
1991 61.64 33.73 48.22
2001 73.41 47.84 61.01
2006 73.41 47.84 62.75
2011 78.88 59.28 69.39

ಉದ್ಯಮ ಕ್ಷೇತ್ರದಲ್ಲಿ ಬದಲಾಯಿಸಿ

 
ಸುಧಾ ಮೂರ್ತಿ *(ಸುಧಾ ಕುಲಕರ್ಣಿ) *Chairperson, Infosys Foundation
  • ಉತ್ತರ ಪ್ರದೇಶ, ಕೇರಳ ಮತ್ತ ಗುಜರಾತು ರಾಜ್ಯಗಳಲ್ಲಿ ಮಹಿಳೆಯರ ಉದ್ಯಮ ಬಹಳ ಮುಂದಿದೆ. ಒಟ್ಟು ಉದ್ಯಮಗಳ ಸಂಖ್ಯಯೇ ಕಡಿಮೆ ಇದ್ದಾಗ ಶೇಕಡಾವಾರು ಹೆಚ್ಚು ಕಾಣುವುದು.
ಭಾರತದ ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರು
ರಾಜ್ಯ ನೋಂದಣಿತ ಘಟಕ ಮಹಿಳಾ ಉದ್ಯಮಿಗಳು ಮಹಿಳಾ ಉದ್ಯಮಿಗಳು-ಶೇಕಡಾ ಪ್ರಮಾಣ
ತಮಿಳುನಾಡು 9618 2930 30.36
ಉತ್ತರ ಪ್ರದೇಶ 7980 3180 39.84
ಕೇರಳ 5487 2135 38.91
ಪಂಜಾಬ್ 4791 1618 33.77
ಮಹಾರಾಷ್ಟ್ರ 4339 1394 32.12
ಗುಜರಾತ್ 3872 1538 39.72
ಕರ್ನಾಟಕ 3822 1026 26.14
ಮಧ್ಯಪ್ರದೇಶ 2967 842 28.38

ವಿಭಿನ್ನ ಕ್ಷೇತ್ರಗಳಲ್ಲಿ ಮಹಿಳೆ ಬದಲಾಯಿಸಿ

  • ಅಂದಾಜು:
ಕ್ಷೇತ್ರ/ಉದ್ಯೋಗ ಶೇಕಡಾ ಪ್ರಮಾಣ
ಕೃಷಿ 69
ಉತ್ಪಾದನೆ 10 (11)
ನಿರ್ಮಾಣ 5
ಶಿಕ್ಷಕಿ 4
ಅಂಗಡಿ 2
ಮನೆಕೆಲಸ 2
ಆರೋಗ್ಯ ಸೇವೆ 2
ರಾಜಕೀಯ 1
ಇತರೆ 5

ಭಾರತದಲ್ಲಿ ಗಂಡು ಹೆಣ್ಣು ಅನುಪಾತ ಬದಲಾಯಿಸಿ

2011ರ ಜನಗಣತಿ ಪ್ರಕಾರ ದೇಶದಲ್ಲಿ ಪ್ರತಿ 113 ಗಂಡಿಗೆ 100 ಹೆಣ್ಣು ಮಕ್ಕಳಿದ್ದಾರೆ. ದೇಶದ ಅರ್ಧ ಜನಸಂಖ್ಯೆಯಷ್ಟು 24 ವರ್ಷದೊಳಗಿ ನವರೇ ಇದ್ದಾರೆ. ನಮ್ಮ ದೇಶದಲ್ಲಿ ಶೇ 47ರಷ್ಟು ಹೆಣ್ಣು ಮಕ್ಕಳು 18 ವರ್ಷ ತುಂಬುವುದರೊಳಗೇ ಮದುವೆಯಾಗುತ್ತಿದ್ದಾರೆ.

ಅಕ್ಟೋಬರ್ 11 ಅಂತರರಾಷ್ಟ್ರೀಯ ಬಾಲಕಿಯರ ದಿನಾಚರಣೆ ಬದಲಾಯಿಸಿ

  • ಬಾಲಕಿಯರ ಪ್ರಗತಿ=ಗುರಿಯ ಪ್ರಗತಿ’ ಎಂಬುದು ಈ ಬಾರಿಯ ಘೋಷವಾಖ್ಯೆ
  • ‘ಮಕ್ಕಳ ಲಿಂಗಾನುಪಾತವು ಪ್ರತಿ ಸಾವಿರ ಗಂಡು ಮಕ್ಕಳಿಗೆ ಅನುಗುಣವಾಗಿ ಹೆಣ್ಣು ಮಕ್ಕಳ ಸರಾಸರಿ ಸಂಖ್ಯೆಯನ್ನು ಸೂಚಿಸುತ್ತದೆ. ನಮ್ಮ ಕರ್ನಾಟಕ ರಾಜ್ಯದ 27,397 ಗ್ರಾಮಗಳ ಪೈಕಿ 13,697 ಗ್ರಾಮಗಳಲ್ಲಿ ‘0’ರಿಂದ ‘6’ ವರ್ಷ ವಯೋಮಾನದ ಬಾಲಕಿಯರ ಅನುಪಾತ 950ಕ್ಕಿಂತ ಕಡಿಮೆ ಇದೆ. ಇದು ಕಳವಳಕಾರಿ ವಿಷಯ’ ಎನ್ನುತ್ತಾರೆ ಇಲ್ಲಿಯ ಅರ್ಥಶಾಸ್ತ್ರಜ್ಞೆ ಪ್ರೊ.ಸಂಗೀತಾ ಕಟ್ಟಿಮನಿ ಅವರು. ‘ಪ್ರಸಿದ್ಧ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ ಅವರು ಅನುಸರಿಸುವ ಅಂತರರಾಷ್ಟ್ರೀಯ ಮಾನದಂಡ (ಅಂದರೆ 1000 ಬಾಲಕರಿಗೆ 952 ಬಾಲಕಿಯರು ಇದ್ದಾರೆ ಎಂಬ ಲೆಕ್ಕಾಚಾರ)ದ ಆಧಾರದ ಮೇಲೆ 2011ರ ಜನಗಣತಿಯ ಅಂಕಿ ಅಂಶ ವಿಶ್ಲೇಷಿಸಿದಾಗ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ’ ಎನ್ನುವುದು ಪ್ರೊ.ಸಂಗೀತಾ ಅವರ ವಿವರಣೆ.
  • ತಾಲ್ಲೂಕುಗಳ ಸ್ಥಿತಿಗತಿ: ನಮ್ಮ ರಾಜ್ಯದಲ್ಲಿ 0–6 ವರ್ಷ ವಯೋಮಾನದ ಮಕ್ಕಳ ಸಂಖ್ಯೆ 1991ರಲ್ಲಿ ಶೇ 16.63ರಷ್ಟಿದ್ದರೆ, 2011ರಲ್ಲಿ ಶೇ 11.72ಕ್ಕೆ ಕುಸಿದಿದೆ. ಮೈಸೂರು ವಿಭಾಗವು ಅತ್ಯುತ್ತಮ ಲಿಂಗಾನುಪಾತ ಹೊಂದಿದ್ದರೆ, ಬೆಳಗಾವಿ ವಿಭಾಗ ಕಡಿಮೆ ಲಿಂಗಾನುಪಾತ ಹೊಂದಿದೆ. ಬೆಳಗಾವಿ ವಿಭಾಗದ ಹಲವು ತಾಲ್ಲೂಕುಗಳ ಲಿಂಗಾನುಪಾತದಲ್ಲಿ ಭಾರಿ ಅಂತರವಿದೆ.
  • ನಮ್ಮ ದೇಶದಲ್ಲಿ ಲಿಂಗದ ನೆಲೆಯಲ್ಲಿ ತಾರತಮ್ಯ ಹೆಚ್ಚುತ್ತಿದೆ. 1991ರ ಜನಗಣತಿ ಪ್ರಕಾರ 945ರಷ್ಟಿದ್ದ ಹೆಣ್ಣುಮಕ್ಕಳ ಅನುಪಾತ, 2011ರ ಜನಗಣತಿಯ ಪ್ರಕಾರ 914ಕ್ಕೆ ಕುಸಿದಿದೆ, ಎನ್ನುತ್ತಾರೆ - ಸಂಗೀತಾ ಕಟ್ಟಿಮನಿ, ಅರ್ಥಶಾಸ್ತ್ರಜ್ಞೆ, ಕಲಬುರ್ಗಿ.

ಕರ್ನಾಟಕದಲ್ಲಿ ಅತಿಕಡಿಮೆ ಲಿಂಗಾನುಪಾತದ ಪ್ರದೇಶ ಬದಲಾಯಿಸಿ

  • ಚಿಕ್ಕೋಡಿ (902)[ಅತಿ ಕಡಿಮೆ]
  • 2ನೇ ಸ್ಥಾನ ಅಥಣಿ (910),
  • 3ನೇ ಸ್ಥಾನ ಹುಬ್ಬಳ್ಳಿ (913),
  • ನರಗುಂದ (913),
  • ಸಿಂದಗಿ (921),
  • ಬೀಳಗಿ (921),
  • ಬಾಗಲಕೋಟೆ (921),
  • ಶಿಗ್ಗಾವಿ (924),
  • ಇಂಡಿ (924),
  • ರಾಯಬಾಗ (921),
  • ರಾಣೆಬೆಣ್ಣೂರ (929),
  • ವಿಜಯಪುರ (930),
  • ಕುಂದಗೋಳ (930),
  • ಬೆಳಗಾವಿ (934),
  • ಕುಮಟಾ (935),
  • ನವಲಗುಂದ (939),
  • ಬೆಂ.ವಿ. ಹರಿಹರ (919),
  • ಪಾವಗಡ (928),
  • ತುರುವಕೆರೆ(929),
  • ಕುಣಿಗಲ್ (929),
  • ಬೆಂಗಳೂರು ದಕ್ಷಿಣ (928),
  • ಹೊಸಕೋಟೆ (931)
  • ಮತ್ತು ಚಳ್ಳಕೆರೆ (935).
  • ಮೈಸೂರು ವಿಭಾಗದ ಮದ್ದೂರು(923),
  • ಮಳವಳ್ಳಿ (928)
  • ಪಾಂಡವಪುರ (932) ಕಡಿಮೆ

[೫]

ಲಿಂಗ ಸಮಾನತೆ ಬದಲಾಯಿಸಿ

  • ಲಿಂಗ ಸಮಾನತೆಯ ಪಟ್ಟಿಯಲ್ಲಿ ಭಾರತಕ್ಕೆ ಈ ವರ್ಷ 87ನೆಯ ಸ್ಥಾನ ಲಭಿಸಿದೆ. ಐಸ್‌ಲ್ಯಾಂಡ್‌ ಮೊದಲ ಸ್ಥಾನದಲ್ಲಿದೆ. ಕಳೆದ ವರ್ಷ ಭಾರತವು ಲಿಂಗ ಸಮಾನತೆಯ ಪಟ್ಟಿಯಲ್ಲಿ 108ನೇ ಸ್ಥಾನ ಪಡೆದಿತ್ತು. ಜಿನೀವಾ ಮೂಲದ ‘ವಿಶ್ವ ಆರ್ಥಿಕ ವೇದಿಕೆ’ ಈ ಪಟ್ಟಿ ಸಿದ್ಧಪಡಿಸುತ್ತದೆ. ಅರ್ಥ ವ್ಯವಸ್ಥೆ, ಶಿಕ್ಷಣ, ಆರೋಗ್ಯ ಹಾಗೂ ರಾಜಕೀಯ ಪ್ರಾತಿನಿಧ್ಯ ಕ್ಷೇತ್ರಗಳನ್ನು ಪರಿಶೀಲಿಸಿ ಲಿಂಗ ಸಮಾನತೆಯ ಪ್ರಮಾಣ ಎಷ್ಟಿದೆ ಎಂಬುದನ್ನು ವರದಿ ಹೇಳುತ್ತದೆ.ಶಿಕ್ಷಣ ಕ್ಷೇತ್ರದಲ್ಲಿ ಭಾರತ ಬಹುದೊಡ್ಡ ಪ್ರಮಾಣದಲ್ಲಿ ಸುಧಾರಣೆ ಕಂಡುಕೊಂಡಿದೆ.
  • ‘ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣದಲ್ಲಿ ಭಾರತ ಲಿಂಗ ಸಮಾನತೆಯ ಅಂತರವನ್ನು ಸಂಪೂರ್ಣವಾಗಿ ನಿವಾರಿಸಿದೆ’ ಎಂದು ವರದಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. ಆದರೆ ಅರ್ಥ ವ್ಯವಸ್ಥೆಗೆ ಮಾತ್ರ ಸಂಬಂಧಿಸಿದ ಲಿಂಗ ಸಮಾನತೆಯ ಪಟ್ಟಿಯಲ್ಲಿ ದೇಶ 136ನೇ ಸ್ಥಾನ ಪಡೆದಿದೆ. ರಾಜಕೀಯ ಪ್ರಾತಿನಿಧ್ಯ ಕ್ಷೇತ್ರದಲ್ಲಿ ಭಾರತ ಮೊದಲ 10 ದೇಶಗಳ ಸಾಲಿನಲ್ಲಿ ಸ್ಥಾನ ಪಡೆದಿದೆ. ಅರ್ಥ ವ್ಯವಸ್ಥೆಯಲ್ಲಿನ ಲಿಂಗ ಅಸಮಾನತೆ 2133ರ ವೇಳೆಗೆ ನಿವಾರಣೆಯಾಗುತ್ತದೆ ಎಂದು 2015ರ ವರದಿ ಹೇಳಿದೆ. ಕೆಲಸದ ಸ್ಥಳಗಳಲ್ಲಿ ಲಿಂಗ ಆಧರಿತ ಅಸಮಾನತೆ ನಿವಾರಣೆ 2186ರ ಮುನ್ನ ಸಾಧ್ಯವಿಲ್ಲ ಎಂದು ಈ ಬಾರಿಯ ವರದಿ ಹೇಳಿದೆ.[೬]

ಲಿಂಗ ಸಮಾನತೆಯಲ್ಲಿ ಮೊದಲ ಹತ್ತುಸ್ಥಾನ ಪಡೆದ ದೇಶಗಳು ಬದಲಾಯಿಸಿ

ಅಮೇರಿಕಾದಲ್ಲಿ ಭಾರತದ ಮಹಿಳೆ ಬದಲಾಯಿಸಿ

  • ಬೇರೆ ದೇಶಗಳಿಂದ ಅಮೆರಿಕಕ್ಕೆ ವಲಸೆ ಬಂದು, ಮಕ್ಕಳನ್ನು ಹೆತ್ತ ಅಮ್ಮಂದಿರಲ್ಲಿ ಭಾರತದವರೇ ಹೆಚ್ಚು ಸುಶಿಕ್ಷಿತರು ಎಂದು ಅಧ್ಯಯನವೊಂದು ತಿಳಿಸಿದೆ. ಭಾರತ ಮೂಲದ ಅಮ್ಮಂದಿರ ಕುಟುಂಬದ ಆದಾಯವೂ ಇತರರಿಗಿಂತ ಹೆಚ್ಚಿದೆ ಎಂದು ಅದು ಹೇಳಿದೆ. ಅಮೆರಿಕದಲ್ಲಿಯೇ ಮಗುವಿಗೆ ಜನ್ಮ ನೀಡುವ ವಿದೇಶಿಯರ ಪೈಕಿ ಭಾರತೀಯ ಅಮ್ಮಂದಿರು ಮೂರನೇ ಸ್ಥಾನದಲ್ಲಿದ್ದಾರೆ. ಮೆಕ್ಸಿಕೊ ಮೂಲದ ಮಹಿಳೆಯರು ಮೊದಲ ಸ್ಥಾನದಲ್ಲಿದ್ದರೆ, ಚೀನಾದವರು ಎರಡನೇ ಸ್ಥಾನದಲ್ಲಿದ್ದಾರೆ. ಈ ವಿವರಗಳನ್ನು ಪ್ಯೂ ಅಧ್ಯಯನ ಕೇಂದ್ರವು ಬುಧವಾರ ನೀಡಿದೆ.
  • ಅಮೆರಿಕದ ಜನಸಂಖ್ಯೆಯಲ್ಲಿ ಏಷ್ಯಾ ಮೂಲದವರ ಪಾಲು (ಮುಖ್ಯವಾಗಿ ಚೀನಾ ಮತ್ತು ಭಾರತ) ಹೆಚ್ಚಾಗುತ್ತಿರುವುದನ್ನೂ ಅಧ್ಯಯನ ಉಲ್ಲೇಖಿಸಿದೆ.
  • ವಿದ್ಯೆ : -ಪದವಿ ಮತ್ತು ಹೆಚ್ಚು :
  • ಭಾರತದ ತಾಯಂದಿರು -87%
  • ಚೀನಾ : ತಾಯಂದಿರು -ಪದವಿ ಮತ್ತು ಹೆಚ್ಚು - 60%
  • ಫಲಿಪೈನಸ್ 52%
  • ಆದಾಯ
  • ಭಾರತದ ತಾಯಂದಿರ ಕುಟುಂಬದ ಆದಾಯ : 1 ಲಕ್ಷ ಡಾಲರ್ ಮತ್ತು ಹೆಚ್ಚು /ವಾರ್ಷಿಕ;(68 ಲಕ್ಷ ರೂ.)
  • ಪಡೆದ ಮಕ್ಕಳು - 2014 ರಲ್ಲಿ :
  • ಭಾರತದವರು :43,394;
  • ಚೀನಾ : 44,829
  • ಮೆಕ್ಸಿಕೊ :2,87,052
  • ವಿದೇಶೀ ಮಹಿಳೆಯರು ಪಡೆದ ಮಕ್ಕಳು ಒಟ್ಟು: 9,01,245
  • ಅವಿವಾತರು ಮಕ್ಕಳನ್ನು ಪಡೆದವರು :
  • ಭಾರತ : 1%
  • ಹಾಂಡುರಾಸ್ ಮೂಲದವರು : 66% ;
  • ಬಡ ತಾಯಂದಿರು
  • ಹಾಂಡುರಾಸ್ ಮೂಲದವರು 49%
  • ಭಾರತದವರು : 4%
  • ಅಮೇರಿಕಾದವರು : 26%

[೮]

ಕರ್ನಾಟಕದಲ್ಲಿ ಬಾಲ್ಯ ವಿವಾಹ ಮತ್ತು ಪರಿಣಾಮ ಬದಲಾಯಿಸಿ

  • ರಾಜ್ಯದಲ್ಲಿ ಕಳೆದ ಏಪ್ರಿಲ್‌ನಿಂದ ಈವರೆಗೆ 6,807 ಬಾಲಕಿಯರು ಗರ್ಭಿಣಿಯರಾಗಿದ್ದಾರೆ. ವಿಶೇಷವೆಂದರೆ, ಈ ಪೈಕಿ ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಮಂದಿ (972) ಇದ್ದಾರೆ. ಎರಡನೇ ಸ್ಥಾನದಲ್ಲಿ ಬೆಳಗಾವಿ ಜಿಲ್ಲೆ (700) ಇದೆ! ಉಡುಪಿ ಜಿಲ್ಲೆಯಲ್ಲಿ (44) ಇದ್ದು, ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ಶೂನ್ಯವಾಗಿದೆ. ಉಳಿದ ಎಲ್ಲ ಜಿಲ್ಲೆಗಳಲ್ಲೂ ಹದಿನೆಂಟು ವರ್ಷ ತುಂಬುವ ಮೊದಲೇ ಗರ್ಭ ಧರಿಸಿದ ಹದಿಹರೆಯದವರ ಹೆಸರು ಆರೋಗ್ಯ ಇಲಾಖೆಯ ಎಂಸಿಟಿಎಸ್‌ (ಮದರ್ ಚೈಲ್ಡ್‌ ಟ್ರ್ಯಾಕಿಂಗ್‌ ಸಿಸ್ಟಂ) ದಾಖಲೆಗಳಲ್ಲಿ ನೋಂದಣಿ ಆಗಿದೆ.
  • ‘ಹೈ ರಿಸ್ಕ್‌ ಪ್ರೆಗ್ನೆನ್ಸಿ’ (ತೊಡಕಿನಲ್ಲಿರುವ ಗರ್ಭಧಾರಣೆ ಅಥವಾ ಗರ್ಭದಲ್ಲಿರುವ ಶಿಶು ಅಪಾಯದಲ್ಲಿರುವ ಸ್ಥಿತಿ) ಪ್ರಕರಣಗಳಿಗೆ ಸಂಬಂಧಿಸಿ ಮಾಹಿತಿ ಸಂಗ್ರಹಿಸುವ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಹದಿಹರೆಯದಲ್ಲಿ ಗರ್ಭ ಧರಿಸಿದವರನ್ನು ಗುರುತಿಸಿದೆ.
  • 2016 ಏಪ್ರಿಲ್‌ನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ 464 ತಾಯಂದಿರು ಪ್ರಸವ ಸಂದರ್ಭದಲ್ಲೇ ಸಾವಿಗೆ ಶರಣಾಗಿದ್ದಾರೆ. ಈ ಪೈಕಿ ಶೇ 44ರಷ್ಟು (205) ತಾಯಂದಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾವಿಗೀಡಾದರೆ, ಶೇ 27ರಷ್ಟು (125) ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಕೊನೆಯುಸಿರೆಳೆದಿದ್ದಾರೆ. ಶೇ 20ರಷ್ಟು (95) ಮಂದಿ ಚಿಕಿತ್ಸೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಉಳಿದ 39 (ಶೇ 8) ತಾಯಂದಿರ ಸಾವು ಮನೆಯಲ್ಲಿ ಸಂಭವಿಸಿದೆ.[೯]


ಭಾರತೀಯ ಮಹಿಳೆಗೆ ವೇತನ ಕಮ್ಮಿ

  • ಐಎಎನ್‌ಎಸ್‌;7 Mar, 2017;
  • ಭಾರತದಲ್ಲಿ ವಿವಿಧ ಕ್ಷೇತ್ರಗಳಲ್ಲಿರುವ ಲಿಂಗ ತಾರತಮ್ಯ ವೇತನದಲ್ಲೂ ಇದೆ. ಪುರುಷರಿಗೆ ಹೋಲಿಸಿದರೆ ದೇಶದ ಉದ್ಯಮ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವ ಮಹಿಳೆಯರು ಶೇ 25ರಷ್ಟು ಕಡಿಮೆ ವೇತನ ಪಡೆಯುತ್ತಿದ್ದಾರೆ.
  • ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡುವ ಆನ್‌ಲೈನ್‌ ಕಂಪೆನಿ ‘ಮಾನ್‌ಸ್ಟರ್‌’ ನಡೆಸಿರುವ ಸಮೀಕ್ಷೆಯಲ್ಲಿ ಈ ಮಾಹಿತಿ ತಿಳಿದು ಬಂದಿದೆ.

‘ಭಾರತದ ಉದ್ಯಮಗಳಲ್ಲಿ ಮಹಿಳೆಯರು’ ಎಂಬ ಶೀರ್ಷಿಕೆ ಅಡಿಯಲ್ಲಿ ಕಂಪೆನಿ ಸಮೀಕ್ಷೆ ನಡೆಸಿದೆ.[೧೦]

ನೋಡಿ ಬದಲಾಯಿಸಿ

ಹೆಚ್ಚಿನ ಓದಿಗೆ ಬದಲಾಯಿಸಿ

ಉಲ್ಲೇಖ ಬದಲಾಯಿಸಿ

  1. [www:.prajavani.net/article/ಸ್ತ್ರೀ-ಜಗದಲಿ;08/03/2016:ಪ್ರಜಾವಾಣಿ :]
  2. [೧]
  3. ಶೇಕಡಾವಾರು ಲೆಕ್ಕದಲ್ಲಿ:
  4. "ಮುಚ್ಚಳಿಕೆ ಬರೆದುಕೊಟ್ಟರೂ ಮದುವೆ!". Archived from the original on 2016-12-01. Retrieved 2016-12-01.
  5. "ಲಿಂಗ ತಾರತಮ್ಯ:". Archived from the original on 2016-10-10. Retrieved 2016-10-10.
  6. "ಲಿಂಗ ಸಮಾನತೆಯಲ್ಲಿ ಭಾರತಕ್ಕೆ 87ನೇ ಸ್ಥಾನ;27 Oct, 2016". Archived from the original on 2016-10-27. Retrieved 2016-10-27.
  7. "ಲಿಂಗ ಸಮಾನತೆಯಲ್ಲಿ ಭಾರತಕ್ಕೆ 87ನೇ ಸ್ಥಾನ". Archived from the original on 2016-10-27. Retrieved 2016-10-27.
  8. "ಅಮೆರಿಕದಲ್ಲೂ ಭಾರತದ ಅಮ್ಮಂದಿರೇ ಸುಶಿಕ್ಷಿತರು!". Archived from the original on 2016-10-29. Retrieved 2016-10-30.
  9. ಗರ್ಭವತಿಯರಾದ 6,807 ಬಾಲಕಿಯರು!;5 Feb, 2017
  10. "ಭಾರತೀಯ ಮಹಿಳೆಗೆ ವೇತನ ಕಮ್ಮಿ". Archived from the original on 2017-03-07. Retrieved 2017-03-07.