ಮಹಿಳಾ ಪೊಲೀಸ್
ಮಹಿಳಾ ಪೊಲೀಸ್ ಪೊಲೀಸ್ ಇಲಾಖೆಯಲ್ಲಿ ಮಹಿಳೆಯರೂ ಇಂದು ಪುರುಷರಿಗೆ ಸಮನಾಗಿ ದುಡಿಯುತ್ತಿದ್ದಾರೆ. ಗಸ್ತು, ಬಂದೋಬಸ್ತ್ , ಪಾಳಿ, ರೋಲ್ ಕಾಲ್, ಎಸ್ಕಾರ್ಟ್ ಈ ಎಲ್ಲ ಕೆಲಸಗಳು ಇಂದು ಮಹಿಳೆಗೂ ಸಲೀಸು.
ಪರಿಚಯ
ಬದಲಾಯಿಸಿ- ಸಮಾಜಕ್ಕೆ ಅತ್ಯಂತ ಹತ್ತಿರವಾದ ಸಾರ್ವಜನಿಕ ಸೇವಾ ಕ್ಶೇತ್ರ ಎಂದರೆ ಅದು ಪೊಲೀಸ್ ಇಲಾಖೆ. ಆದರೆ ಜನರಿಗಾಗಿ ಎಷ್ಟೇ ದುಡಿದರೂ ಮಾನಸಿಕವಾಗಿ ಜನರಿಂದ ದೂರವೇ ಉಳಿಯಬೇಕಾದಂತಹ ಪರಿಸರ ಪೊಲೀಸರದ್ದು. ಕರ್ತವ್ಯ ಮತ್ತು ಮುಲಾಜಿಲ್ಲದೇ ನಿಭಾಯಿಸಬೇಕಾದ ಜವಾಬ್ದಾರಿಯ ಕಾರಣದಿಂದ ಎಶ್ಟೋ ಸಲ ಪೊಲ್ಲೀಸರು "ಜನಸ್ನೇಹಿ ಅಲ್ಲ' ಎನ್ನಿಸಿಕೊಳ್ಳಬೇಕಾಗುತ್ತದೆ.
- ಇಂತಹ ಸಂದರ್ಭದಲ್ಲಿ ಮಹಿಳೆಯರು ಪೊಲ್ಲೀಸರಾದರೆ ಪೊಲ್ಲೀಸ್ ಕೆಲಸಕ್ಕೆ ಅಂಟಿರುವ ಈ ಕೊಳೆನ್ನೂ ಸುಲಭವಾಗಿ ತೊಳೆಯಬಹುದು.'ಅಪರಾದ ಮುಕ್ತ ಸಮಾಜ ನಿರ್ಮಾಣ ಒಂದು ಆದರ್ಶ..' ಈ ಮಾತು ಪೊಲೀಸ್ ಇಲಾಖೆಯ ದ್ಯೇಯ ಮಂತ್ರ. ಇದನ್ನು ಸಾರ್ವಜನಿಕರೂ ಪಾಲಿಸಬೇಕಾದ್ದು ಧರ್ಮ.
- ಈ ಧರ್ಮ-ನ್ಯಾಯಗಳ ಮದ್ಯೆ ನಿಂತಿರುವ ಕೋಟಿ ಕೋಟಿ ಜನರಿಗೆ ರಕ್ಶಣೆ, ಭದ್ರತೆ ಒದಗಿಸುವ ಈ ಪೊಲ್ಲೀಸ್ ಇಲಾಖೆಯಲ್ಲಿ ಮಹಿಳೆಯರೂ ಇಂದು ಪುರುಷರಿಗೆ ಸಮನಾಗಿ ದುಡಿಯುತ್ತಿದ್ದಾರೆ. ಗಸ್ತು, ಬಂದೋಬಸ್ತ್ , ಪಾಳಿ, ರೋಲ್ ಕಾಲ್, ಎಸ್ಕಾರ್ಟ್ ಈ ಎಲ್ಲ ಕೆಲಸಗಳು ಇಂದು ಮಹಿಳೆಗೂ ಸಲೀಸು.
- ಹಿಂದೆಲ್ಲ ಪೊಲೀಸ್ ಕೆಲಸವೆಂದರೆ ಅದು ಪುರುಷರಿಗೆ ಮಾತ್ರ ಎನ್ನುವ ಭಾವನೆ ಇತ್ತು. ಆದರೆ ಈಗ ಹಲವು ಮಹಿಳಾ ಪೊಲೀಸ್ ಇಲಾಖೆಯಲ್ಲಿ ಮಹಿಳೆಯರಿಗೆ ಶೇಕಡಾ ೩೩ರಷ್ಟು ಮೀಸಲಾತಿಯನ್ನು ನೀಡಲೂ ಸರ್ಕಾರ ನಿರ್ದರಿಸಿದೆ. ತನ್ಮೂಲಕ ಟಾಣೆಗಳನ್ನು ಇನ್ನಶ್ಟು ಜನಸ್ನೇಹ ಆಗಿಸುವುದಲ್ಲದೆ, ಸಮಾಜದಲ್ಲಿ ಮಹಿಳೆಯರ ಮನಸ್ತ್ಯ್ ರ್ಯವನ್ನೂ ಹೆಚ್ಚಿಸಬಹುದು.
ಅಪರಾಧ ತನಿಖೆ
ಬದಲಾಯಿಸಿ- ಬೆಳಗೆ ಎದ್ದು ಪತ್ರಿಕೆ ಓದಿದರೆ ಅತ್ಯಾಚಾರ, ದೌರ್ಜನ್ಯದೇ ಸುದ್ಡಿ. ಅದರಲ್ಲೂ ಬಹುತೇಕ ಎಲ್ಲ ದೌರ್ಜನ್ಯಗಳಿಗೆ ಗುರಿಯಾಗುವವರು ಮಹಿಳೆಯರೇ. ಟೀವಿ ಆನ್ ಮಾಡಿದರೆ ಸಾಕು, ಅಪರಾದ ಸುದ್ದಿಗಳ ಸರಮಾಲೆ,ಅಲ್ಲೂ ವ್ಯವಸ್ತೆಯ ಬಲಿಪಶು ಮಹಿಳೆಯರೇ.ಮಹಿಳೆಯರ ಮೇಲಿನ ಈ ದೌರ್ಜನ್ಯಗಳನ್ನು ತಡೆಗಟ್ಟಲು ದಾರಿ ಯಾವುದು?
- ಮಹಿಳೆಯರೇ ಇರುವ ಪೊಲೀಸ್ ಠಾಣೆಗಳನ್ನು ಹೆಚ್ಚಾ ಗಿ ತೆರೆದರೆ ಏನಾದರೂ ಸುದಾರಣೆ ಆಗಬಹುದೆ? ಪೊಲೀಸ್ ಪಡೆಯಲ್ಲಿ ಮಹಿಳೆಯರೇ ಹೆಚ್ಚಾಗಿದ್ದರೆ ದೌರ್ಜನ್ಯದ ಪ್ರಕರಣಗಳು ಕಡಿಮೆ ಆಗಬಹುದು?
- ಪೊಲೀಸ್ ಇಲಾಖೆಗೆ ಪುರುಷರಷ್ಟೆ ಫಿಟ್ ಎಂಬುದು ಹಳೆಯ ಕಾಲದ ಪರಿಕಲ್ಪನೆ ಅಷ್ಟೇ .
- ಇಂದು ಸಾವಿರಾರು ಮಂದಿ ಮಹಿಳಾ ಪೊಲ್ಲೀಸರು ಇಲಾಖೆಯ ವಿವಿದ ಹಂತಗಳಲ್ಲಿ ದುಡಿಯುತ್ತಿದ್ದು ಕೊಲೆ, ದರೋಡೆ, ಅಪಘಾತ , ಅತ್ಯಾಚಾರಗಳಂತಹ ಸಮಾಜಖಘಾತುಕ ಕೃತ್ಯಗಳು ನಡೆದಾಗ ಯಾವುದೇ ಸಮಯದಲ್ಲೂ ಹಿಂದೆ ಮುಂದೆ ನೋಡದೆ ನಿಭಾಯಿಸುವ ಛಾತಿ ಹೊಂದಿದ್ದಾರೆ.
- 'ಯುನಿಫಾರ್ಮ್ ಬಲವೇ ನಮಗೆ ದೈರ್ಯ ತರುತ್ತದೆ..' ಎಂಬ ಹಿರಿಯ ಮಹಿಳಾ ಪೊಲ್ಲೀಸ್ ಅಧಿಕಾರಿಯೊಬ್ಬರು ಹೇಳಿದ್ದು , ಎಂತಹ ಸಂದರ್ಭಗಳಲ್ಲೂ ಎದೆಗುಂದದೆ 'ಪರಿಸ್ತಿತಿಯನ್ನು ನಿಯಂತ್ರಿಸುವ ಚಾಕಚಕ್ಯತೆ ಇಂದು ಪೊಲ್ಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳೆಗಿದೆ ಎಂವುದನ್ನು ದ್ವನಿಸುತ್ತದೆ.
- ಕೆಲವು ಸಂದರ್ಭಗಳಲ್ಲಿ ಮಹಿಳೆಯರ ಸಂಕೋಚ ಸ್ವಭಾವ ಮತ್ತು ದೂರು ನೀಡಿದರೆ ಎಲ್ಲಿ ಮಾನ ಹರಾಜು ಆಗಬಹುದೋ ಎಂಬ ಭಯದಿಂದ ಇಂದು ಅನೇಕ ಪ್ರಕರಣಗಳಲ್ಲಿ ಮಹಿಳೆಯರು ಪೊಲ್ಲೀಸ್ ಠಾಣೆವರೆಗೆ ಹೋಗುವುದೇ ಇಲ್ಲ. ಲೈಂಗಿಕ ದೌರ್ಜನ್ಯ ಮತ್ತು ಹಿಂಸೆಗೊಳಗಾದರೂ ಮಹಿಳೆಯರು ಅದನ್ನು ಮೌನವಾಗಿ ನುಂಗಿಕೊಂಡು ಜೀವನ ನಡೆಸುತ್ತಿರುವುದು ಸತ್ಯ..
- ಮಹಿಳೆಯರ ಇಂತಹ ಮನೋಭಾವವನ್ನು ಬದಲಾಯಿಸಲೆಂದೇ ಇಂದು ಮಹಿಳಾ ಪೊಲ್ಲೀಸರೂ ಪಣ ತೊಡುತ್ತಿದ್ದಾರೆ. ರಾಜ್ಯದಲ್ಲಿ ಸದ್ಯಕ್ಕೆ ಇರುವ ಪೊಲ್ಲೀಸ್ ಪಡೆಯಲ್ಲಿ ಮಹಿಳೆಯರ ಸಂಖ್ಯೆ ಏನೇನು ಸಾಲದು. ನೆರೆಯ ರಾಜ್ಯಗಳಲ್ಲಿ ನಮಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲ್ಲೀಸರಿದ್ದಾರೆ. ೩೦೦೦ ಮಹಿಳಾ ಪೊಲ್ಲೀಸರನ್ನು ನೇಮಿಸಲು ಇತ್ತೀಚಿಗೆ ರಾಜ್ಯ ಸರ್ಕಾರ ನಿರ್ದರಿಸಿದೆ.
- ಈ ನೇಮಕಾತಿ ಶೀಘ್ರ ನಡೆಯಬೇಕು. ನೆರೆಯ ರಾಜ್ಯಗಳು ಮಹಿಳಾ ಪೊಲ್ಲೀಸರ ನೇಮಕಾತಿಯಲ್ಲಿ ನಮಗಿಂತ ಮುಂದಿದೆ. ಕರ್ನಾಟಕದಲ್ಲಿ ಸದ್ಯಕ್ಕೆ ಒಟ್ಟು ೮೯೪೫ ಮಹಿಳಾ ಪೊಲ್ಲೀರಸರಿದ್ದಾರೆ. ಆದರೆ ತಮಿಳುನಾಡಿನಲ್ಲಿ ಮಹಿಳಾ ಪೊಲ್ಲೀಸರ ಸಂಖ್ಯೆ ೧೧೫೯೦ ದಾಟಿದೆ. ದೆಹಲಿಯಂತಹ ಪುಟ್ಟ ರಾಜ್ಯದಲ್ಲೂ ಒಟ್ಟು ೫೨೮೫ ಮಹಿಳಾ ಪೊಲ್ಲೀಸರಿದ್ದಾರೆ.
- ಮಹಾರಾಶ್ಟ್ರ ದಲ್ಲಿ ಮಹಿಳಾ ಪೊಲ್ಲೀಸರ ಸಂಖ್ಯೆ ೧೦೮೦೯ ಎನ್ನುತ್ತದೆ ಅಂಕಿ ಅಂಶ. ಹಾಗಾಗಿ ಕರ್ನಾಟಕ ದಲ್ಲೂ ಮಹಿಳಾ ಪೊಲ್ಲೀಸರ ಸಂಖ್ಯೆ ಯನ್ನು ಹೆಚ್ಚಿಸಬೇಕಿದೆ. ಆದರೆ ಉತ್ತರದ ಕೆಲವು ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮಹಿಳಾ ಪೊಲ್ಲೀಸರ ಸಂಖ್ಯೆ ಹೆಚ್ಚಿದೆ.
ಮಹಿಳೆಯರ ಮೇಲೆ ದೌರ್ಜನ್ಯ
ಬದಲಾಯಿಸಿ- ಮಹಿಳೆಯರ ಮೇಲೆ ದೌರ್ಜನ್ಯ ದ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವ ಬೆಂಗಳೂರು ಮಹಾನಗರದಲ್ಲೂ ಮಹಿಳಾ ಪೊಲ್ಲೀಸರ ಪ್ರಾತಿನಿದ್ಯ ಈಗ ಕಡಿಮೆಯೇ ಇದೆ. ಬೆಂಗಳೂರಿನಲ್ಲಿ ಈಗ ಒಟ್ಟು ೬೯೯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಇದ್ದಾರೆ, ಮಹಿಳಾ ಎಸ್ ಐಗಳ ಸಂಖ್ಯೆ ಕೇವಲ ೩೪ ಮಾತ್ರ. ೩೩೮೦ ಫುರುಶ ಪೊಲ್ಲೀಸ್ ಹೆಡ್ ಕಾನ್ಸ್ ಟೇಬಲ್ ಗಳು ಇದ್ದರೆ ಮಹಿಳಾ ಹೆಡ್ ಕಾನ್ಸ್ ಟೇಬಲ್ ಗಳ ಸಂಖ್ಯೆ ೨೧೦ ಮಾತ್ರ. * ೮೯೪೨ ಪುರುಷ ಕಾನ್ಸ್ ಟೇಬಲ್ ಗಳಿದ್ದ ರೆ , ಮಹಿಳಾ ಪೊಲ್ಲೀಸರ ಸಂಖ್ಯೆ ೭೫೫ ಮಾತ್ರ. ಈ ಸಂಖ್ಯೆ ಶೀಘ್ರವೇ ಹೆಚ್ಚಾದಲ್ಲಿ ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಗಳ ಸಂಖ್ಯೆ ಕಡಿಮೆ ಯಾಗಬಹುದು. ಠಾಣೆಗಳಿಗೆ ಹೆಣ್ಣು ಮಕ್ಕಳು ಹೆಚ್ಚು ದೈರ್ಯದಿಂದ, ದೂರು ನೀಡಲು ಬರಬಹುದು.