ಅಲ್ಜೀರಿಯ

ಉತ್ತರ ಆಫ್ರಿಕಾದಲ್ಲಿ ವಾಸಿಸುತ್ತಿರುವ ದೇಶ

ಅಲ್ಜೀರಿಯ (الجزائر, ಅಲ್ ಜಜಾ'ಇರ್ ಬೆರ್ಬೆರ್‍ನಲ್ಲಿ: , ದ್ಜಾಯೆರ್, ಅಧಿಕೃತವಾಗಿ ಅಲ್ಜೀರಿಯ ಜನ ಪ್ರಜಾತಾಂತ್ರಿಕ ಗಣರಾಜ್ಯ), ಆಫ್ರಿಕಾ ಖಂಡದ ಎರಡನೇ ದೊಡ್ಡ ದೇಶ.[] ಈಶಾನ್ಯಕ್ಕೆ ಟುನಿಸಿಯ, ಪೂರ್ವಕ್ಕೆ ಲಿಬ್ಯಾ, ಆಗ್ನೇಯಕ್ಕೆ ನೈಜರ್, ನೈರುತ್ಯಕ್ಕೆ ಮಾಲಿ ಮತ್ತು ಮೌರಿಟಾನಿಯ, ಹಾಗು ಪಶ್ಚಿಮಕ್ಕೆ ಮೊರಾಕೊಗಳೊಂದಿಗೆ ಅಲ್ಜೀರಿಯ ಗಡಿಯನ್ನು ಹೊಂದಿದೆ. ರಾಜಧಾನಿ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಅಲ್ಜಿಯರ್ಸ್, ಇದು ಮೆಡಿಟರೇನಿಯನ್ ಕರಾವಳಿಯಲ್ಲಿ ದೇಶದ ದೂರದ ಉತ್ತರದಲ್ಲಿದೆ. 2,381,741 ಚದರ ಕಿಲೋಮೀಟರ್ (919,595 ಚದರ ಮೈಲಿ) ವಿಸ್ತೀರ್ಣವನ್ನು ಹೊಂದಿರುವ ಅಲ್ಜೀರಿಯಾ ವಿಶ್ವದ ಹತ್ತನೇ ಅತಿದೊಡ್ಡ ಮತ್ತು ಆಫ್ರಿಕನ್ ಯೂನಿಯನ್ ಮತ್ತು ಅರಬ್ ಜಗತ್ತಿನಲ್ಲಿ ವಿಸ್ತೀರ್ಣದಲ್ಲಿ ಅತಿ ದೊಡ್ಡ ದೇಶವಾಗಿದೆ..[] 44 ದಶಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯೊಂದಿಗೆ, ಇದು ಆಫ್ರಿಕಾದಲ್ಲಿ ಒಂಬತ್ತನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ.

ಅಲ್ಜೀರಿಯ ಜನ ಪ್ರಜಾತಾಂತ್ರಿಕ ಗಣರಾಜ್ಯ
الجمهورية الجزائرية الديمقراطية الشعبية
ಅಲ್-ಜುಮ್ಹುರಿಯಾ ಅಲ್-ಜಜಾ'ಇರೀಯ
ಅದ್-ದೀಮುಕ್ರಾಟಿಯಾ ಅಶ್-ಶ'ಬೀಯಾ

ⵟⴰⴳⴷⵓⴷⴰ ⵜⴰⵎⴻⴳⴷⴰⵢⵜ ⵜⴰⵖⴻⵔⴼⴰⵏⵜ ⵜⴰⵣⵣⴰⵢⵔⵉⵜ
Flag of ಅಲ್ಜೀರಿಯ
Flag
ಚಿಹ್ನೆ of ಅಲ್ಜೀರಿಯ
ಚಿಹ್ನೆ
Motto:  من الشعب و للشعب (ಅರಬಿಕ್‍ನಲ್ಲಿ)
"ಜನರಿಂದ ಮತ್ತು ಜನರಿಗಾಗಿ"
Anthem: Kassaman(Arabic)
The Pledge
Location of ಅಲ್ಜೀರಿಯ
Capitalಅಲ್ಜಿಯರ್ಸ್
Largest cityರಾಜಧಾನಿ
Official languagesಅರಬಿಕ್1
ಬೆರ್ಬೆರ್‍ನಲ್ಲಿ
Demonym(s)Algerian
Governmentಅರೆ-ರಾಷ್ಟ್ರಪತಿ ಆಡಳಿತ ಗಣರಾಜ್ಯ
• ರಾಷ್ಟ್ರಪತಿ
ಅಬ್ದೆಲಜೀಜ್ ಬೊಟೆಫ್ಲಿಕ
• ಪ್ರಧಾನ ಮಂತ್ರಿ
ಅಬೆಲಜೀಜ್ ಬೆಲ್ಖಾದೆಮ್
ಸ್ಥಾಪನೆ
೧೦೧೪ರಿಂದ
೧೫೧೬ರಿಂದ
೧೮೩೦ರಿಂದ
ಜುಲೈ ೫, ೧೯೬೨
• Water (%)
negligible
Population
• ೨೦೦೭ estimate
33,333,216 (35th)
• 1998 census
29,100,867
GDP (PPP)೨೦೦೬ estimate
• Total
$253.4 billion (38th)
• Per capita
$7,700 (88th)
GDP (nominal)೨೦೦೫ estimate
• Total
$102.026 billion (48th)
• Per capita
$3,086 (84th)
Gini (೧೯೯೫)35.3
medium
HDI (೨೦೦೪)0.728
high · 102nd
Currencyಅಲ್ಜೀರಿಯದ ದಿನಾರ್ (DZD)
Time zoneUTC+1 (CET)
• Summer (DST)
not observed
Calling code213
Internet TLD.dz
  1. French is also widely spoken.

ಹವಾಮಾನ

ಬದಲಾಯಿಸಿ

ದೇಶವು ಅರೆ-ಶುಷ್ಕ ಭೌಗೋಳಿಕತೆಯನ್ನು ಹೊಂದಿದೆ, ಹೆಚ್ಚಿನ ಜನರು ಫಲವತ್ತಾದ ಉತ್ತರದಲ್ಲಿ ವಾಸಿಸುತ್ತಿದ್ದಾರೆ ಮತ್ತು ದಕ್ಷಿಣದಲ್ಲಿ ಸಹಾರಾ ಮರುಭೂಮಿ ಪ್ರಾಬಲ್ಯ ಹೊಂದಿದೆ. ಈ ಶುಷ್ಕ ಭೌಗೋಳಿಕತೆಯು ಹವಾಮಾನ ಬದಲಾವಣೆಯ ದುಷ್ಪರಿಣಾಮಕ್ಕೆ ದೇಶವು ತುತ್ತಾಗಿ ದುರ್ಬಲಗೊಳ್ಳುವಂತೆ ಮಾಡಿದೆ.[]

ಇತಿಹಾಸ

ಬದಲಾಯಿಸಿ

1962 ರ ಪೂರ್ವದಲ್ಲಿ ಅಲ್ಜೀರಿಯಾವು ಅನೇಕ ಸಾಮ್ರಾಜ್ಯಗಳು ಮತ್ತು ರಾಜವಂಶಗಳನ್ನು ಕಂಡಿದೆ. ಇದರಲ್ಲಿ ಪ್ರಾಚೀನ ನುಮಿಡಿಯನ್ನರು, ಫೀನಿಷಿಯನ್ನರು, ಕಾರ್ತಜೀನಿಯನ್ನರು, ರೋಮನ್ನರು, ವಂಡಲ್ಗಳು, ಬೈಜಾಂಟೈನ್‌ಗಳು, ಉಮಾಯಾದ್ಗಳು, ಅಬ್ಬಾಸಿಡ್ಸ್, ರುಸ್ಟಾಮಿಡ್, ಇಡ್ರಿಸಿಡ್, ಅಗ್ಲಾಬಿಡ್ಸ್, ಫಾತಿಮಿಡ್ಸ್, ಜಿರಿಡ್, ಹಮ್ಮಾಡಿಡ್ಸ್, ಅಲ್ಮೋರಾವಿಡ್ಸ್, ಅಲ್ಮೋರಾಡ್ಸ್ ಸ್ಪ್ಯಾಮ್ ಮತ್ತು ಅಂತಿಮವಾಗಿ ಫ್ರೆಂಚ್ ವಸಾಹತುಶಾಹಿ ಸಾಮ್ರಾಜ್ಯ ಈ ಪ್ರದೇಸವನ್ನು ಆಳಿವೆ.

ಭಾಷೆ ಮತ್ತು ಧರ್ಮ

ಬದಲಾಯಿಸಿ

ಹೆಚ್ಚಿನ ಜನಸಂಖ್ಯೆಯು ಅರಬ್-ಬರ್ಬರ್ ಜನಾಂಗವಾಗಿದ್ದು, ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದ್ದಾರೆ ಮತ್ತು ಅರೇಬಿಕ್ ಮತ್ತು ಬರ್ಬರ್‌ನ ಅಧಿಕೃತ ಭಾಷೆಗಳನ್ನು ಬಳಸುತ್ತಿದ್ದಾರೆ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ ಫ್ರೆಂಚ್ ಭಾಷೆ ಆಡಳಿತ ಮತ್ತು ಶಿಕ್ಷಣ ಭಾಷೆಯಾಗಿ ಕಾರ್ಯನಿರ್ವಹಿಸುತ್ತದೆ.ಅಲ್ಜೀರಿಯನ್ ಅರೇಬಿಕ್ ಮುಖ್ಯ ಮಾತನಾಡುವ ಭಾಷೆಯಾಗಿದೆ.

ರಾಜಕೀಯ

ಬದಲಾಯಿಸಿ

ಅಲ್ಜೀರಿಯಾ ಅರೆ-ಅಧ್ಯಕ್ಷೀಯ ಗಣರಾಜ್ಯವನ್ನು ಹೊಂದಿದೆ, ಸ್ಥಳೀಯ ಕ್ಷೇತ್ರಗಳು 58 ಪ್ರಾಂತ್ಯಗಳು ಮತ್ತು 1,541 ಕೋಮುಗಳನ್ನು ಒಳಗೊಂಡಿವೆ. ಅಲ್ಜೀರಿಯಾ ಪ್ರಾದೇಶಿಕ ಮತ್ತು ಮಧ್ಯಮ ಶಕ್ತಿ. ಇದು ದ್ವೀಪೇತರ ಆಫ್ರಿಕನ್ ರಾಷ್ಟ್ರಗಳ ಅತ್ಯುನ್ನತ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಹೊಂದಿದೆ.ಅಲ್ಜೀರಿಯಾದ ಸೇನೆ ಆಫ್ರಿಕಾದ ಅತಿದೊಡ್ಡ ಸೇನಾಪಡೆಗಳಲ್ಲಿ ಒಂದಾಗಿದೆ ಮತ್ತು ಅತಿದೊಡ್ಡ ರಕ್ಷಣಾ ಬಜೆಟ್ ಹೊಂದಿದೆ. ಇದು ಆಫ್ರಿಕನ್ ಯೂನಿಯನ್, ಅರಬ್ ಲೀಗ್, ಒಪೆಕ್, ವಿಶ್ವಸಂಸ್ಥೆ ಮತ್ತು ಅರಬ್ ಮಾಘ್ರೆಬ್ ಯೂನಿಯನ್ ಸದಸ್ಯರಾಗಿದ್ದು, ಅದರಲ್ಲಿ ಇದು ಸಂಸ್ಥಾಪಕ ಸದಸ್ಯ.

ಆರ್ಥಿಕತೆ

ಬದಲಾಯಿಸಿ

ಅಲ್ಜೀರಿಯವು ಆಫ್ರಿಕ ಖಂಡದ ಅತಿದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿದೆ, ಇದು ಹೆಚ್ಚಾಗಿ ಇಂಧನ ರಫ್ತು ಆಧರಿಸಿದೆ. ಅಲ್ಜೀರಿಯಾ ವಿಶ್ವದ 16 ನೇ ಅತಿದೊಡ್ಡ ತೈಲ ನಿಕ್ಷೇಪವನ್ನು ಹೊಂದಿದೆ ಮತ್ತು ಆಫ್ರಿಕಾದಲ್ಲಿ ಎರಡನೇ ಅತಿದೊಡ್ಡ ತೈಲ ಸಂಗ್ರಹವನ್ನು ಹೊಂದಿದೆ, ಆದರೆ ಇದು ನೈಸರ್ಗಿಕ ಅನಿಲದ ಒಂಬತ್ತನೇ ಅತಿದೊಡ್ಡ ಸಂಗ್ರಹವನ್ನು ಹೊಂದಿದೆ. ರಾಷ್ಟ್ರೀಯ ತೈಲ ಕಂಪನಿಯಾದ ಸೋನಾಟ್ರಾಚ್ ಆಫ್ರಿಕಾದ ಅತಿದೊಡ್ಡ ಕಂಪನಿಯಾಗಿದ್ದು, ಯುರೋಪಿಗೆ ಹೆಚ್ಚಿನ ಪ್ರಮಾಣದಲ್ಲಿ ನೈಸರ್ಗಿಕ ಅನಿಲವನ್ನು ಪೂರೈಸುತ್ತಿದೆ.

ಉಲ್ಲೇಖಗಳು

ಬದಲಾಯಿಸಿ
  1. "CIA Factbook". Archived from the original on 2012-09-30. Retrieved 2007-09-14.
  2. "Country Comparison: Area". CIA World Factbook. Archived from the original on 9 February 2014. Retrieved 17 January 2013.
  3. "Algeria | Facts, History, & Geography". Encyclopedia Britannica (in ಇಂಗ್ಲಿಷ್). Retrieved 2020-05-27.


ಬಾಹ್ಯ ಸಂಪರ್ಕಗಳು

ಬದಲಾಯಿಸಿ