ಮಾಲಿ
ಮಾಲಿ (ಅಧಿಕೃತ ಹೆಸರು - ಮಾಲಿ ಗಣರಾಜ್ಯ) ಪಶ್ಚಿಮ ಆಫ್ರಿಕಾದಲ್ಲಿ ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿರುವ ಒಂದು ರಾಷ್ಟ್ರ. ಆಫ್ರಿಕಾ ಖಂಡದಲ್ಲಿ ಮಾಲಿ ೭ನೆಯ ಅತಿ ದೊಡ್ಡ ರಾಷ್ಟ್ರ. ಮಾಲಿ ಉತ್ತರಕ್ಕೆ ಅಲ್ಜೀರಿಯ, ಪೂರ್ವಕ್ಕೆ ನೈಜರ್, ದಕ್ಷಿಣದಲ್ಲಿ ಬುರ್ಕಿನಾ ಫಾಸೊ ಮತ್ತು ಕೋತ್ ದ ಐವರಿ, ನೈಋತ್ಯದಲ್ಲಿ ಗಿನಿ ಹಾಗೂ ಪಶ್ಚಿಮಕ್ಕೆ ಸೆನೆಗಾಲ್ ಮತ್ತು ಮಾರಿಟಾನಿಯ ದೇಶಗಳಿವೆ. ಮಾಲಿಯ ಉತ್ತರ ಭಾಗವು ಸಹಾರಾ ಮರುಭೂಮಿಯ ಅಂಗವಾಗಿದೆ. ಹೆಚ್ಚಿನ ಜನವಸತಿಯುಳ್ಳ ದಕ್ಷಿಣದ ಭಾಗವು ನೈಜರ್ ಮತ್ತು ಸೆನೆಗಾಲ್ ನದಿಗಳ ಬಯಲು ಪ್ರದೇಶವಾಗಿದೆ. ಹಿಂದೆ ಫ್ರೆಂಚ್ ಸುಡಾನ್ ಎಂದು ಕರೆಯಲ್ಪಡುತ್ತಿದ್ದ ಈ ದೇಶದ ಹೆಸರು ಈಗ ಮಾಲಿ ಸಾಮ್ರಾಜ್ಯದ ನೆನಪಿಗಾಗಿ ಮಾಲಿ ಎಂದಾಗಿದೆ. ಸ್ಥಳೀಯ ಬಂಬಾರಾ ಭಾಷೆಯಲ್ಲಿ ಮಾಲಿ ಪದದ ಅರ್ಥ ನೀರುಕುದುರೆ.
ಮಾಲಿ ಗಣರಾಜ್ಯ République du Mali | |
---|---|
Motto: "Un peuple, un but, une foi" "ಒಂದು ಜನತೆ ಒಂದು ಗುರಿ ಒಂದು ಧರ್ಮ" | |
Anthem: Pour l'Afrique et pour toi, Mali "ಆಫ್ರಿಕಕ್ಕಾಗಿ ಮತ್ತು ಮಾಲಿ ನಿನಗಾಗಿi" | |
Capital and largest city | ಬಮಾಕೊ |
Official languages | ಫ್ರೆಂಚ್ |
Demonym(s) | Malian |
Government | ಅರೆ ಅಧ್ಯಕ್ಷೀಯ ಗಣರಾಜ್ಯ |
ಅಮದೌ ತೌಮಾನಿ ತೌರೆ | |
• ಪ್ರಧಾನಿ | ಮೊದಿಬೊ ಸಿದಿಬೆ |
ಸ್ವಾತಂತ್ರ್ಯ ಫ್ರಾನ್ಸ್ ನಿಂದ | |
• ಘೋಷಿತ ದಿನಾಂಕ | ಸೆಪ್ಟೆಂಬರ್ 22 1960 |
• Water (%) | 1.6 |
Population | |
• ಜುಲೈ 2007 estimate | 11,995,402 (73ನೆಯದು) |
GDP (PPP) | 2005 estimate |
• Total | $14.400 ಬಿಲಿಯನ್ (125ನೆಯದು) |
• Per capita | $1,154 (166ನೆಯದು) |
HDI (2004) | 0.338 Error: Invalid HDI value · 175ನೆಯದು |
Currency | ಸಿ.ಎಫ್.ಎ. ಫ್ರಾಂಕ್ (XOF) |
Calling code | 223 |
Internet TLD | .ml |