ಸಮರ ಕಲೆಗಳು
ಸಮರಕಲೆ
ಸಮರ ಕಲೆಗಳು, ಕದನ ಕಲೆ ಅಥವಾ ಕಾದಾಟದ ಕಲೆಗಳು ಕಾದಾಟದ ತರಬೇತಿಯ ಕ್ರೋಢೀಕೃತ ಅಭ್ಯಾಸಗಳು ಮತ್ತು ಸಂಪ್ರದಾಯಗಳ ಪದ್ಧತಿಗಳಾಗಿವೆ. ಎಲ್ಲ ಸಮರ ಕಲೆಗಳು ಒಂದೇ ರೀತಿಯ ಉದ್ದೇಶವನ್ನು ಹೊಂದಿವೆ. ತಮ್ಮನ್ನು ತಾವೇ ಅಥವಾ ಅನ್ಯರನ್ನು ಶಾರೀರಿಕ ಆಪತ್ತಿನಿಂದ ರಕ್ಷಿಸುವುದು. ಸದ್ದೃಢರನ್ನಾಗಿಸುವುದು. ಜೊತೆಗೆ, ಕೆಲವು ಸಮರ ಕಲೆಗಳು ಹಿಂದೂಯಿಸಂ, ಬುದ್ಧಿಸಂ, ದಾವೋಯಿಸಂ, ಕನ್ಫ್ಯೂಷಿಯನಿಸಂ, ಅಥವಾ ಶಿಂಟೋ ನಂತಹ ನಂಬಿಕೆಗಳಿಗೆ ಸಂಬಂಧಿಸಿವೆ; ಹಾಗೇ ಇನ್ನು ಕೆಲವು ಒಂದು ನಿರ್ದಿಷ್ಟ ಕೋಡ್ ಆಫ್ ಆನರ್ಅನ್ನು ಪಾಲಿಸುತ್ತವೆ. ಸಮರ ಕಲೆಗಳನ್ನು ಒಂದು ಕಲೆಯಾಗಿ ಮತ್ತು ಒಂದು ವಿಜ್ಞಾನವಾಗಿ ಪರಿಗಣಿಸಲಾಗುತ್ತದೆ. ಹಲವು ಕಲೆಗಳನ್ನು ಸ್ಪರ್ಧಾತ್ಮಕವಾಗಿ ಕೂಡ ಅಭ್ಯಸಿಸಲಾಗುತ್ತದೆ, ಬಹು ಸಾಮಾನ್ಯವಾಗಿ ಕಾದಾಟದ ಆಟಗಳಾಗಿ; ಆದರೆ, ಅವು ನೃತ್ಯದ ರೂಪವನ್ನು ಪಡೆದುಕೊಳ್ಳಬಹುದು.
ಮಾರ್ಷಿಯಲ್ ಆರ್ಟ್ಸ್ ಎಂಬ ಪದ ಸಮರ ಕಲೆಗಳನ್ನು ಸೂಚಸುತ್ತದೆ (ರೋಮನ್ ಯುದ್ಧ ದೇವತೆ ಮಾರ್ಸ್ನಿಂದ ವ್ಯುತ್ಪತ್ತಿಯಾದುದು)ಮತ್ತು ಈಗ ಐತಿಹಾಸಿಕ ಯುರೋಪಿಯನ್ ಮಾರ್ಷಿಯಲ್ ಆರ್ಟ್ಸ್ಎಂದು ಕರೆಯಲ್ಪಡುವ ಸಮರ ಕಲೆಗಳನ್ನು ಸೂಚಿಸುವ ಒಂದು 15ನೇ ಶತಮಾನದ ಯೂರೋಪೀಯ ಪದದಿಂದ ಬರುತ್ತದೆ.ಆದರೆ ಸಮರಕಲೆಯ ಇತಿಹಾಸ ಭಾರತದಲ್ಲಿ ವೇದಗಳ ಕಾಲದಿಂದಲೇ ಸಮರಕಲೆಯ ಇತಿಹಾಸ ಪ್ರಾಂಭವಾಗುತ್ತದೆ,ಹಿಂದುಗಳ ಪವಿತ್ರ ಗ್ರಂಥವಾಗಿರುವ ಯಜುರ್ವೇದದಲ್ಲಿ ಯುದ್ಧಕಲೆಯ ಸಂಪೂರ್ಣ ವಿವರಣೆಯಿದೆ. ಭಾರತ ಸಮರಕಲೆಗಳ ತವರೂರು. ಭಾರತದಲ್ಲೆ ಮೂಲ ಹುಡುಕಿದರೆ ನಮ್ಮಕಣ್ಣಿಗೆ ದಕ್ಷಿಣ ಭಾರತ ಎದ್ದು ಕಾಣುತ್ತದೆ.ಶ್ರೀ ಯಲ್ಲಮ್ಮತಾಯಿಯ ಪುತ್ರನಿಂದ ಹುಟ್ಟಿದ ಕಲರಿಪಯಟ್ಟು. ಭೋಧಿಧರ್ಮರಿಂದ ಚೀನಾ,ಜಪಾನ ದೇಶಕ್ಕೆ ಪಸರಿಸಿತು. ಕರುನಾಡು ಮೂಲ ಎಂಬ ಮಾತು ನಮಗೆ ಪರುಶುರಾಮರ ಬಗ್ಗೆ ತಿಳಿದುಕೊಂಡಾಗ ತಿಳಿಯುವುದು. ಈ ನಾಡಿನಕಲೆ ಹೊಸದಾಗಿ ಆಧುನಿಕ ರೂಪವನ್ನು ಮಂಜುನಾಥ ಬೆಳ್ಳಿಕುಪ್ಪಿ ಮತ್ತು ಅವನ ಸ್ನೇಹಿತರಿಂದ ಕೀಪುಮಾ ಸಮರಕಲೆ ಎಂಬ ಹೊಸ ಕಲೆ ಕರುನಾಡಿನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಶ್ರಮಿಸುತ್ತಿದೆ .ಈ ಕಲೆಯನ್ನು ಅಭ್ಯಾಸ ಮಾಡುವವನು ಸಮರ ಕಲಾವಿದ ಮಾರ್ಷಲ್ ಆರ್ಟಿಸ್ಟ್ ಎಂಬುದಾಗಿ ಕರೆಯಲ್ಪಡುತ್ತಾನೆ.
1920 ರ ದಶಕದಲ್ಲಿ ಮೂಲತಃ ರೂಪಿಸಿದಾಗ, ಮಾರ್ಷಿಯಲ್ ಆರ್ಟ್ಸ್ ಎಂಬ ಪದ ನಿರ್ದಿಷ್ಟವಾಗಿ ಏಷಿಯನ್ ಫೈಟಿಂಗ್ ಸ್ಟೈಲ್ಸ್ ಗೇ ಸೂಚಿಸಲ್ಪಡುತ್ತಿತ್ತು, ಅದೂ ವಿಶೇಷವಾಗಿ, ಪೂರ್ವ ಏಷಿಯಾದಲ್ಲಿ ಹುಟ್ಟಿದಂಥ ಕಾದಾಟ ಪದ್ಧತಿಗಳಿಗೆ. ಆದಾಗ್ಯೂ, ಈ ಪದವನ್ನು ಅದರ ಸಾಹಿತ್ಯಕ ಅರ್ಥದಲ್ಲಿಯೂ ಹಾಗೂ ಅದರ ನಂತರದ ಬಳಕೆಯ ಆಧಾರದಲ್ಲಿಯೂ ಅದನ್ನು ಯಾವುದೇ ಒಂದು ಸಂಜ್ಞಾಕೃತ ಕಾದಾಟ ಪದ್ಧತಿಗೆ, ಅದರ ಹುಟ್ಟಿಗೆ ಸಂಬಂಧವಿಲ್ಲದಂತೆ, ಸೂಚಿಸುವುದಾಗಿ ತಿಳಿಯಬಹುದು.
ಯೂರೋಪ್ ಸಮರ ಕಲೆಗಳ ಹಲವು ವಿಸ್ತೃತ ಪದ್ಧತಿಗಳಿಗೆ ತವರೂರಾಗಿದೆ - ಜೀವಂತ ಸಂಪ್ರದಯಗಳಿಗೂ(ಉದಾಹರಣೆಗೆ, ಜೋಗೋ ದೊ ಪೌ ಮತ್ತು ಇತರ ಕೋಲು ಮತ್ತು ಕತ್ತಿ ಫೆನ್ಸಿಂಗ್ ಮತ್ತು ಹಡಗಿನವರು ಮತ್ತು ಬೀದಿ ಕಾದಾಟಗಾರರು ಬೆಳೆಸಿದ ಫ್ರೆಂಚ್ ಕಿಕ್ಂಗ್ ಶೈಲಿಯಾದ ಸವಾಟೆ) ಹಾಗೂ ಐತಿಹಾಸಿಕ ಯುರೋಪಿಯನ್ ಮಾರ್ಷಿಯಲ್ ಆರ್ಟ್ಸ್ಗಳ ಹಳೆಯ ಪದ್ಧತಿಗಳಿಗೂ (ಇವುಗಳಲ್ಲಿ ಹಲವಾರು ಈಗ ಮತ್ತೆ ಪುನರುಜ್ಜೀವಿತಗೊಳಿಸಲ್ಪಡುತ್ತಿವೆ). ಅಮೇರಿಕಾದಲ್ಲಿ, ನೇಟೀವ್ ಅಮೇರಿಕನ್ನರುವ್ರೆಸ್ಲಿಂಗ್ ಸೇರಿದಂತೆ ತೆರೆದ ಕೈಗಳ ಸಮರ ಕಲೆಗಳ ಸಂಪ್ರದಾಯಗಳನ್ನು ಹೊಂದಿದ್ದಾರೆ, ಮತ್ತು ಹವಾಯಿಯನ್ಸ್ ಚಿಕ್ಕ ಮತ್ತು ದೊಡ್ಡ ಕೀಲು ಮಾನಿಪುಲೇಷನ್ ಗಳನ್ನು ತೋರುವ ಕಲೆಗಳನ್ನು ಐತಿಹಾಸಿಕವಾಗಿ ಅಭ್ಯಸಿಸಿದ್ದಾರೆ. ಆಫ್ರಿಕನ್ ಗುಲಾಮರು ಬ್ರೆಜಿಲ್ ನಲ್ಲಿ ತಾವು ಆಫ್ರಿಕಾದಿಂದ ತಂದಿದ್ದ ಕೌಶಲ್ಯಗಳನ್ನು ಆಧರಿಸಿ ಬೆಳೆಸಿದ ಕಾಪೊಯೈರ ದ ಅಥ್ಲೆಟಿಕ್ ಚಾಲನಗಳಲ್ಲಿ ಉಗಮಸ್ಥಾನಗಳ ಒಂದು ಮಿಶ್ರಣ ಕಾಣಬರುತ್ತದೆ.
ಪ್ರತಿಯೊಂದು ಶೈಲಿಗೆ ತನ್ನದೇ ಆದ ವಿಶಿಷ್ಟ ಆಯಾಮಗಳಿದ್ದು, ಅದನ್ನು ಇತರ ಸಮರ ಕಲೆಗಳಿಗಿಂತ ಭಿನ್ನವಾಗಿಸುತ್ತವೆಯಾದರೂ, ಎಲ್ಲವಕ್ಕೂ ಸಾಮಾನ್ಯವಾದ ಒಂದು ಅಂಶವೆಂದರೆ ಕಾದಾಟದ ಕೌಶಲ್ಯಗಳ ಸಿಸ್ಟಮೈಸೇಷನ್. ತರಬೇತಿಯ ವಿಧಾನಗಳು ಬೇರೆಬೇರೆ ರೀತಿಯಾಗಿದ್ದು, ಸ್ಪಾರಿಂಗ್(ಸಿಮುಲೇಟೆಡ್ ಕಾಂಬಾಟ್)ಅಥವಾ ಸ್ವರೂಪಗಳು ಅಥವಾ ಕಟ ಎಂದು ಕರೆಯಲ್ಪಡುವ ಕೌಶಲಗಳ ಫಾರ್ಮಲ್ ಸೆಟ್ಟುಗಳು ಅಥವಾ ರುಟೀನ್ ಗಳನ್ನು ಸೇರಿರುತ್ತವೆ. ಸ್ವರೂಪಗಳು ವಿಶೇಷವಾಗಿ ಏಷಿಯನ್ ಮತ್ತು ಏಷಿಯನ್ ಸಂಜಾತ ಸಮರ ಕಲೆಗಳಲ್ಲಿ ಸಾಮಾನ್ಯವಾಗಿವೆ.[೧]
ಸಮರ ಕಲೆಗಳು, ಕದನ ಕಲೆಕಲಾವಿದರು
ಬದಲಾಯಿಸಿ• ಟೊನಿ ಜಾ
- ನೀರಜ್ ಗೋಯತ್ ಮುಂತಾದವರು.
ವ್ಯತ್ಯಾಸಗಳು ಮತ್ತು ವ್ಯಾಪ್ತಿ
ಬದಲಾಯಿಸಿಸಮರ ಕಲೆಗಳು ಬಹಳ ಭಿನ್ನವಾಗಿರುತ್ತವೆ ಮತ್ತು ಒಂದು ನಿರ್ದಿಷ್ಡ ಕ್ಷೇತ್ರ ಅಥವಾ ಕ್ಷೇತ್ರಗಳ ಕಾಂಬಿನೇಷನ್ನ ಮೇಲೆ ಹೆಚ್ಚಿನ ಒತ್ತು ನೀಡಬಲ್ಲವಾಗಿವೆ. ಆದರೆ, ಸ್ಟ್ರೈಕ್ಸ್, ಗ್ರಾಪ್ಲಿಂಗ್, ಅಥವಾ ಶಸ್ತ್ರಾಸ್ತ್ರ ತರಬೇತಿಯ ಮೇಲೆ ಒತ್ತು ನೀಡುವ ಗುಂಪುಗಳಾಗಿ ಅವುಗಳನ್ನು ಸ್ಥೂಲವಾಗಿ ವಿಂಗಡಿಸಬಹುದಾಗಿದೆ. ಈ ರೀತಿಯ ಕ್ಷೇತ್ರಗಳ ವಿಸ್ತೃತ ಬಳಕೆ ಮಾಡುವಂಥವುಗಳ ಉದಾಹರಣೆಗಳ ಪಟ್ಟಿ ಈ ಕೆಳಗಿದೆ; ಇದು ಪ್ರಸ್ತುತ ಕ್ಷೇತ್ರವನ್ನು ಕವರ್ ಮಾಡುವ ಎಲ್ಲ ಕಲೆಗಳ ಸಂಪೂರ್ಣ ಪಟ್ಟಿಯೇನಲ್ಲ, ಹಾಗೇ ಇವು ಯಾವುದೇ ಒಂದು ಕಲೆಯು ಕವರ್ ಮಾಡುವ ಕ್ಷೇತ್ರಗಳು ಮಾತ್ರ ಕೂಡ ಅಲ್ಲ - ಆದರೆ ಅದರ ಕೇಂದ್ರಬಿಂದುಗಳು ಅಥವಾ ಸಂಬಂಧಪಟ್ಟ ಕ್ಷೇತ್ರದ ಉದಾಹರಣೆಗಳಾಗಿ ಚೆನ್ನಾಗಿ ತಿಳಿದಂಥ ಅಂಗ:
- ಪಂಚಿಂಗ್ (ಗುದ್ದುವುದು): ಬಾಕ್ಸಿಂಗ್ (ವೆಸ್ಟರ್ನ್),ವಿಂಗ್ ಚುನ್
- ಕಿಕ್ ಇಂಗ್(ಒದೆಯುವುದು): ಕಾಪೊಯೈರಾ, ಕಿಕ್ ಬಾಕ್ಸಿಂಗ್, ಸವಟೆ, ಟಯೇಕ್ವೋಂಡೋ
- ಇತರ ಹೊಡೆತಗಳು:
- [[ಎಸೆಯುವುದು: ಗ್ಲೈಮ, ಜೂಡೋ, ಜೂಜುತ್ಸು, ಸಾಂಬೋ|ಎಸೆಯುವುದು: ಗ್ಲೈಮ, ಜೂಡೋ, ಜೂಜುತ್ಸು, ಸಾಂಬೋ]]
- [[ಕೀಲು ಬಂಧನ/ಸಮರ್ಪಣಾ ಹಿಡಿತಗಳು: ಐಕಿಡೋ, ಬ್ರೆಜಿಲಿಯನ್ ಜಿಯು-ಜಿತ್ಸು, ಹಪ್ಕೀಡೋ|ಕೀಲು ಬಂಧನ/ಸಮರ್ಪಣಾ ಹಿಡಿತಗಳು: ಐಕಿಡೋ, ಬ್ರೆಜಿಲಿಯನ್ ಜಿಯು-ಜಿತ್ಸು, ಹಪ್ಕೀಡೋ]]
- ಪಿನ್ನಿಂಗ್ ಕೌಶಲಗಳು: ಜೂಡೋ, ವ್ರೆಸ್ಲಿಂಗ್
ಶಸ್ತ್ರಗಾರಿಕೆ
- ಸಾಂಪ್ರದಾಯಿಕ ಶಸ್ತ್ರಗಾರಿಕೆ: ಫೆನ್ಸಿಂಗ್, ಗಟ್ಕಾ, ಕೆಂಡೋ, ಕ್ಯೂಡೋ, ಎಸ್ತ್ರಿಮ ಮತ್ತು ಕಲಾರಿಪಯಟ್ಟು
- ಆಧುನಿಕ ಶಸ್ತ್ರಗಾರಿಕೆ: ಜುಕೆಂಡೊ, ಶಾಓಲಿನ್ ಕಂಗ್ ಫು, ವುಶು
ಹಲವು ಸಮರ ಕಲೆಗಳು, ವಿಶೇಷವಾಗಿ ಏಷಿಯಾದಿಂದ ಬಂದವು, ಔಷಧೀಯ ಅಭ್ಯಾಸಗಳಿಗೆ ಕುರಿತಾದ ಸೈಡ್ ಡಿಸಿಪ್ಲಿನ್ಗಳನ್ನು ಬೋಧಿಸುತ್ತವೆ. ಇದು ನಿರ್ದಿಷ್ಡವಾಗಿ ಸಾಂಪ್ರದಾಯಿಕ ಚೀನೀ ಸಮರ ಕಲೆಗಳಲ್ಲಿ ರೂಢಿಯಲ್ಲಿದೆ. ಇವುಗಳಲ್ಲಿ ಮೂಳೆ ಕೂರಿಸುವುದು, ಖಿಗೊಂಗ್, ಆಕ್ಯುಪಂಕ್ಚರ್, ಆಕ್ಯುಪ್ರೆಷರ್, ಟುಯಿ ನಾ ಮತ್ತು ಸಾಂಪ್ರದಾಯಿಕ ಚೀನೀ ವೈದ್ಯಪದ್ಧತಿಯ ಇತರ ಅಂಶಗಳನ್ನು ಹೇಳಿಕೊಡಲಾಗುತ್ತದೆ.[೨]. ಸಮರ ಕಲೆಗಳು ಧರ್ಮಗಳೊಂದಿಗೆ ಕೂಡ ಸಂಪರ್ಕ ಹೊಂದಿರಬಹುದು. ಉದಾಹರಣೆಗೆ, ಸಿಖ್ ಧರ್ಮದ ಒಂದು ಅವಿಭಾಜ್ಯ ಅಂಗ ಗಟ್ಕ; ಏಕೆಂದರೆ, ಸಿಖ್ ಇತಿಹಾಸದ ಮೂಲಕ ಅವರು ಯುದ್ಧಕ್ಕೆ ತೆರಳುಬೇಕಾಗಿದೆ. ವಿಂಗ್ ಚುಂಗ್ ಫು ಅನ್ನು ಚೀನಾದಾದ್ಯಂತ ಪಯಣಿಸುತ್ತಿದ್ದ ಸಾಧ್ವಿಗಳು ಆತ್ಮರಕ್ಷಣೆಗಾಗಿ ಕಂಡುಹಿಡಿದರು ಎನ್ನಲಾಗುತ್ತದೆ, ಮತ್ತು ಹಲವು ಜಪಾನೀ ಸಮರ ಕಲೆಗಳಂತೆ, ಉದಾಹರಣೆಗೆ ಐಕಿಡೊ ಶಕ್ತಿ ಮತ್ತು ಶಾಂತಿಯ ಹರಿವಿನ ಬಲವಾದ ಸೈದ್ಧಾಂತಿಕ ನಂಬಿಕೆಯನ್ನು ಹೊಂದಿದೆ.
ಇತಿಹಾಸ
ಬದಲಾಯಿಸಿಕುಸ್ತಿಯಾಟದ ಮತ್ತು ಅಸ್ತ್ರಸಹಿತ ಕಾದಾಟವೆರಡರ ಸಚಿತ್ರ ದಾಖಲೆಗಳೂ ಬ್ರಾಂಜ್ ಏಜ್ಪುರಾತನ ನಿಯರ್ ಈಸ್ಟ್ನಷ್ಟು ಹಿಂದಕ್ಕೆ ಹೋಗುತ್ತವೆ. ಉದಾಹರಣೆಗೆ, ಬೆನಿ ಹಸ್ಸನ್ ನಲ್ಲಿರುವ ಅಮೆನೆಮ್ಹೆಟ್ ನ ಗೋರಿಯಲ್ಲಿನ ಕ್ರಿಸ್ತಪೂರ್ವ 20ನೇ ಶತಮಾನದ ಮ್ಯೂರಲ್, ಅಥವಾ ಕ್ರಿ.ಪೂ.26ನೇ ಶತಮಾನದ ಸ್ಟಾಂಡರ್ಡ್ ಆಫ್ ಉರ್.
ಆಫ್ರಿಕಾ
ಬದಲಾಯಿಸಿಆಫ್ರಿಕಾದ ಚಾಕುಗಳನ್ನು ಆಕಾರವನ್ನು ಆಧರಿಸಿ "ಎಫ್" ಗುಂಪು ಮತ್ತು "ದುಂಡನೆಯ" ಗುಂಪುಗಳಾಗಿ ವರ್ಗೀಕರಿಸಬಹುದು ಮತ್ತು ಬಹಳ ಬಾರಿ ಅವುಗಳು ತಪ್ಪಾಗಿ ಎಸೆಯುವ ಚಾಕುಗಳಾಗಿ ವರ್ಣಿಸಲ್ಪಟ್ಟಿವೆ.[೩] 0}ಪಶ್ಚಿಮ ಆಫ್ರಿಕಾದಲ್ಲಿ ಕಂಡುಬಂದಿರುವ ಕುಸ್ತಿಯ ಮತ್ತು ಪಟ್ಟುಗಳ ಕೌಶಲಗಳು ಕೂಡ ಇವೆ. "ಕಡ್ಡಿ ಕಾದಾಟ"ವು ದಕ್ಷಿಣ ಆಫ್ರಿಕಾದಲ್ಲಿನ ಜುಲು ಸಂಸ್ಕೃತಿಯ ಪ್ರಮುಖ ಭಾಗವಾಗಿತ್ತು, ಮತ್ತು ಬೊಟ್ಸ್ವಾನದ ದಕ್ಷಿಣ ಭಾಗದಲ್ಲಿ ಮತ್ತು ದಕ್ಷಿಣ ಆಫ್ರಿಕಾದ ಉತ್ತರ ಭಾಗದಲ್ಲಿ ಅಭ್ಯಸಿಸಲ್ಪಡುವ ಒಂದು ಕಾದಾಟದ ರೂಪವಾದ ಒಬ್ನು ಬಿಲಟೆಯ ಬಹುಮುಖ್ಯ ಭಾಗವಾಗಿದೆ. ಕಡ್ಡಿ ಕಾದಾಟ(ಕಾಳಗ)ವು ಕೂಡ ಪುರಾತನ ಇಜಿಪ್ಷಿಯನ್ ಗೋರಿಗಳಲ್ಲಿ ಉಲ್ಲೇಖಿಸಲ್ಪಟ್ಟಿದ್ದು, ಅದು ಈಗಲೂ ಸಹ ಮೇಲಿನ ಇಜಿಪ್ಟ್ (ತಹತಿಬ್)[೪][೫] ನಲ್ಲಿ ಅಭ್ಯಾಸದಲ್ಲಿದೆ ಹಾಗೂ 1970 ರ ದಶಕದಲ್ಲಿ ಒಂದು ಆಧುನಿಕ ಸಂಘಟನೆಯನ್ನೂ ರೂಪಿಸಲಾಯಿತು. ರಫ್ ಅಂಡ್ ಟಂಬಲ್(ರಾಟ್) ಒಂದು ಆಧುನಿಕ ಆಫ್ರಿಕಾದ ಸಮರ ಕಲೆಯಾಗಿದ್ದು, ಇದು ಸಹ ಜುಲು ಮತ್ತು ಸೋತೋ ಕಡ್ಡಿ ಕಾದಾಟದ ಅಂಶಗಳನ್ನು ಒಳಗೊಂಡಿದೆ.
ಅಮೆರಿಕ
ಬದಲಾಯಿಸಿಉತ್ತರ ಅಮೇರಿಕ ಮತ್ತು ದಕ್ಷಿಣ ಅಮೇರಿಕದ ಸ್ಥಳೀಯ ಜನರು ಬಾಲ್ಯದಲ್ಲಿಯೇ ಆರಂಭವಾಗುವಂಥ ತಮ್ಮದೇ ಆದ ಸಮರ ತರಬೇತಿಯನ್ನು ಹೊಂದಿದ್ದರು. ಕೆಲವು ಪ್ರಥಮ ರಾಷ್ಟ್ರಗಳ ಗಂಡಸತು ಮತ್ತು ಹೆಚ್ಚು ವಿರಳವಾಗಿ ಕೆಲವು ಹೆಂಗಸರು, ಅವರು ತಮ್ಮನ್ನು ತಾವೇ ಯುದ್ಧದಲ್ಲಿ ಸಾಬೀತುಪಡಿಸಿದ ಮೇಲೇ ವಾರಿಯರ್ಸ್ ಎಂದು ಕರೆಯಲ್ಪಡುತ್ತಿದ್ದರು. ಬಹುತೇಕ ಗುಂಪುಗಳು ವ್ಯಕ್ತಿಗಳನ್ನು ಹದಿಹರೆಯದ ಆಗಮನದಲ್ಲೇ ಬಿಲ್ಲುಗಳು, ಚಾಕುಗಳು, ಊದುಕೊಳವೆಗಳು, ಭರ್ಜಿ, ಮತ್ತು ಕತ್ತಿಗಳ ಬಳಕೆಯ ತರಬೇತಿಗಾಗಿ ಆರಿಸುತ್ತದ್ದವು. ಸ್ಥಳೀಯ ಅಮೇರಿಕದ ವಾರಿಯರ್ಸ್ ತಮ್ಮ ವೈರಿಗಳನ್ನು ಏಕವ್ಯಕ್ತಿ ಕಾಳಗದಲ್ಲಿ ಮುಖಾಮುಖಿಯಾಗಿ ಕೊಲ್ಲವುದರಿಂದ ತಮ್ಮ ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಿಸಿಕೊಳ್ಳಬಹುದಾಗಿತ್ತಾದ್ದರಿಂದ, ಕತ್ತಿಗಳು ಹೆಚ್ಚು ಆಯ್ಕಗೊಳ್ಳುತ್ತಿದ್ದ ಸಮರ ಶಸ್ತ್ರವಾಗಿದ್ದವು.[ಸೂಕ್ತ ಉಲ್ಲೇಖನ ಬೇಕು] ಜೀವನಪರ್ಯಂತದ ತರಬೇತಿಯೊಂದಿಗೆ ಯೋಧರು ತಮ್ಮ ಶಸ್ತ್ರಗಳ ಕೌಶಲಗಳನ್ನು ಮತ್ತು ಬೇಟೆಯ ಕೌಶಲ್ಯಗಳನ್ನು ಹೆಚ್ಚು ನಿಪುಣಗೋಳಿಸಿಕೊಳ್ಳುತ್ತಿದ್ದರು.
ಆಫ್ರಿಕಾದಲ್ಲಿ ದೊಡ್ಡ ಬೇರುಗಳನ್ನು ಹೊಂದಿರುವ ಕಾಪೊಯೈರಾ, ಅಧಿಕ ಅಂಶದ ನಮನೀಯತೆ ಮತ್ತು ಸಹನೆಗಳನ್ನು ಒಳಗೊಂಡ ಬ್ರೆಜಿಲ್ ನಲ್ಲಿ ಹುಟ್ಟಿದ ಒಂದು ಆಪ್ಫ್ರೋ-ಬ್ರೆಜಿಲಿಯನ್ ಅಥವಾ ಆಫ್ರೋ ಅಮೇರಿಕನ್ ಸಮರ ಕಲೆಯಾಗಿದೆ. ಅದು ಒದೆತ, ಮೊಣಕೈ ಹೊಡೆತ, ಕೈ ಹೊಡೆತ, ತಲೆಯಿಂದ ಗುದ್ದುವುದು, ಕಾರ್ಟ್ ವೀಲ್ ಮತ್ತು ಬೀಸುಗಳನ್ನು ಒಳಗೊಂಡಿರುತ್ತದೆ. ಜೀತ್ ಕುಣೆ ದೊ, ಸಮರ ಕಲಾವಿದ ಮತ್ತು ನಟ ಬ್ರೂಸ್ ಲೀಯಿಂದ ಬೆಳೆಸಲ್ಪಟ್ಟ ೊಂದು ಸಮರ ಕಲೆಗಳ ಪದ್ಧತಿ. ಇದರ ಬೇರುಗಳು ಉಪಯೋಗವಿಲ್ಲದ್ದನ್ನು ತೆಗೆದುಹಾಕುವ ಮತ್ತು ಯಾವ ಮಾರ್ಗವನ್ನೂ ಮಾರ್ಗವನ್ನಾಗಿ ಬಳಸದ ಸಿದ್ಧಾಂತದೊಂದಿಗೆ ಪಾಶ್ಚಿಮಾತ್ಯ ಬಾಕ್ಸಿಂಗ್ ಮತ್ತು ಫೆನ್ಸಿಂಗ್, ವಿಂಗ್ ಚುನ್ ನಲ್ಲಿವೆ. ಬ್ರೆಜಿಲಿಯನ್ ಜಿಯು ಜಿಟ್ಸು ಕಾರ್ಲೋಸ್ ಮತ್ತು ಹೀಲಿಯೋ ಗ್ರೇಸಿ ಸೋದರರಿಂದ ಬೆಳೆಸಲ್ಪಟ್ಟ ಎರಡನೇ ಮಹಾಯುದ್ಧದ ಪೂರ್ವಕಾಲದ ಜೂಡೋವಿನ ಒಂದು ಪರಿವರ್ತಿತ ರೂಪವಾಗಿದ್ದು, ಇದನ್ನು ನೆಲಸ್ತರದ ಕೆಲಸದ ಮೇಲೆ ತುಂಬ ಒತ್ತು ನೀಡಿ ಪುನರ್ರಚಿಸಲಾಯಿತು. ಈ ಪದ್ಧತಿಯು ಒಂದು ಜನಪ್ರಿಯ ಸಮರ ಕಲೆಯಾಗಿ ಬೆಳೆದಿದ್ದು, ಯುಎಫ್ ಸಿ ಮತ್ತು ಪ್ರೈಡ್ ನಂತಹ ಮಿಶ್ರ ಸಮರ ಕಲೆಗಳ ಸ್ಪರ್ಧೆಗಳಲ್ಲಿ ಪರಿಣಾಮಕಾರಿಯೆಂದು ಸಾಬೀತಾಗಿದೆ.[೬]
ಏಷ್ಯಾ
ಬದಲಾಯಿಸಿಪೂರ್ವ ಇತಿಹಾಸ
ಬದಲಾಯಿಸಿಏಷಿಯನ್ ಸಮರ ಕಲೆಗಳ ಅಡಿಪಾಯವು ಬಹುವಾಗಿ ಪೂರ್ವ ಚೀನೀಯ ಮತ್ತು ಭಾರತೀಯ ಸಮರ ಕಲೆಗಳ ಮಿಶ್ರಣವಾಗಿದೆ. ಈ ರಾಷ್ಟ್ರಗಳ ನಡುವೆ, ಕ್ರಿ.ಪೂ. ೬೦೦ ರ ಸುಮಾರಿಗೆ ಶುರುವಾಗಿ, ವಿಸ್ತೃತ ವಾಣಿಜ್ಯ ವ್ವವಹಾರವು ನಡೆಯುತ್ತಿದ್ದು, ರಾಜದೂತರು, ವ್ಯಾಪಾರಿಗಳು ಮತ್ತು ಸಂತರು ರೇಷ್ಮೆ ರಸ್ತೆಯನ್ನು ಪ್ರಯಾಣಿಸುತ್ತಿದ್ದರು. .ದಿ ಆರ್ಟ್ ಆಫ್ ವಾರ್ ನಲ್ಲಿ ಸನ್ ಟ್ಸು ವರ್ಣಿಸಿರುವಂತೆ, ಸಮರ ಸಿದ್ಧಾಂತ ಮತ್ತು ರಣನೀತಿಯಲ್ಲಿ ಚೀನೀ ಇತಿಹಾಸದ ವಾರಿಂಗ್ ಸ್ಟೇಟ್ಸ್ ಅವಧಿಯಲ್ಲಿ (ಕ್ರಿ.ಪೂ.480 -221) ವಿಸ್ತಾರವಾದ ಬೆಳವಣಿಗೆಯು ಹೊಮ್ಮಿಬಂತು.(ಸಿ. ಕ್ರಿ.ಪೂ.350).[೭]
ಸಮರ ಕಲೆಗಳ ಮುಂಚಿನ ಪುರಾಣವೊಂದು ಕ್ರಿಸ್ತ ಶಕ ೫೫೦ ರ ಕಾಲದಲ್ಲಿ ಬದುಕಿದ್ದನೆಂದು ನಂಬಲಾಗಿರುವ ಬೋಧಿಧರ್ಮ (ದರುಮ ಎಂದು ಕರೆಯಲಾಗುತ್ತದೆ) ಎಂಬ ಹೆಸರಿನ ಸಾಧುವಾಗಿಬಿಟ್ಟಿದ್ದ ಒಬ್ಬ ದಕ್ಷಿಣ ಭಾರತೀಯ ಪಲ್ಲವ ರಾಜಕುಮಾರನ ಕಥೆ ಹೇಳುತ್ತದೆ.ಸಮರ ಗುಣಗಳಾದ ಶಿಸ್ತು, ವಿಧೇಯತೆ, ಸಂಯಮ ಮತ್ತು ಗೌರವಗಳನ್ನು ಈ ಸಿದ್ಧಾಂತಕ್ಕೆ ಹೋಲಿಸಲಾಗುತ್ತದೆ.[೮] ದರುಮನನ್ನು ಚೀನಾದಲ್ಲಿ ಜೆನ್ ಬೌದ್ಧಧರ್ಮದ ಸ್ಥಾಪಕನೆಂದೂ ಗುರುತಿಸಲಾಗುತ್ತದೆ. ಹೀಗೆ ನೈತಿಕ ವ್ಯವಹಾರ ಮತ್ತು ಆತ್ಮ ಶಿಸ್ತಿನ ಮೌಲ್ಯಗಳನ್ನು ಸಮರ ಅಭ್ಯಾಸದೊಂದಿಗೆ ಅತ್ಯಂತ ಮುಂಚಿನ ಕಾಲದಿಂದಲೇ ಹೆಣೆಯಲಾಗಿದೆ.[೯] ಚೀನಾದ (ಮಾಂಡರಿನ್ ನಲ್ಲಿ ಬಟುವೋ ಎಂದು ಕರೆಯಲಾಗುವ)ಬುದ್ಧಭದ್ರದಲ್ಲಿ ಕೂಡ ೊಬ್ಬ ಭಾರತೀಯಧ್ಯಾನ ಗುರುವು ಶಾವೋಲಿನ್ ದೇವಸ್ಥಾನದ ಮೊದಲ ಮಠಾಧಿಕಾರಿಯಾಗುತ್ತಾನೆ.[೧೦] ಶಾವೊಲಿನ್ ಮಠವು ಉತ್ತರದ ವೈ ವಂಶದಚಕ್ರವರ್ತಿ ಗ್ಸಿಯಾವೊವೆನ್ನಿಂದ ಕ್ರಿ.ಶ. 477 ರಲ್ಲಿ ಕಟ್ಟಲ್ಪಟ್ಟಿತು.
ಏಷಿಯಾದಲ್ಲಿ ಸಮರ ಕಲೆಗಳ ಬೋಧನೆಯು ಐತಿಹಾಸಿಕವಾಗಿ ಗುರು-ಶಿಷ್ಯ ವೃತ್ತಿಯ ಸಾಂಸ್ಕೃತಿಕ ಪರಂಪರೆಗಳನ್ನು ಅನುಸರಿಸಿದೆ. ವಿದ್ಯಾರ್ಥಿಗಳು ಒಂದು ಕಠಿಣ ಕ್ರಮಾನುಗತ ಪದ್ಧತಿಯಲ್ಲಿ ಒಬ್ಬ ತಜ್ಙ ತರಬೇತುದಾರನಿಂದ ತರಬೇತಿ ಪಡೆಯುತ್ತಾರೆ:ಕ್ಯಾಂಟೊನೀಸ್ ನಲ್ಲಿ ಸಿಫು ಅಥವಾ ಮಂಡರಿನ್ ವಲ್ಲಿ ಶಿಫು ; ಜಪಾನೀ ಭಾಷೆಯಲ್ಲಿ ಸೆನ್ಸೈ ;ಕೊರಿಯ ಭಾಷೆಯಲ್ಲಿ ಸಬೆಯೊಮ್-ನಿಮ್ ; ಸಂಸ್ಕೃತ, ಹಿಂದಿ, ತೆಲುಗು ಮತ್ತು ಮಲಯ ಭಾಷೆಗಳಲ್ಲಿ ಗುರು ;ಖೆಮರ್ ನಲ್ಲಿ ಕ್ರೂ ; ತಗಲೊಗ್ ನಲ್ಲಿ ಗುರೋ ; ಮಲಯಾಳಂನಲ್ಲಿ ಕಲರಿ ಗುರುಕ್ಕಲ್ ; ಅಥವಾ ಕಲರಿ ಆಸಾನ್ ; ತಮಿಳಿನಲ್ಲಿ ಆಸಾನ್ ; ಥಾಯಿಯಲ್ಲಿ ಆಚನ್ ಅಥವಾ ಖ್ರೂ ; ಮತ್ತು ಮೈನಲ್ಲಿ ಸಾಯಾ . ಈ ಎಲ್ಲ ಶಬ್ದಗಳನ್ನು ತಜ್ಙ, ಶಿಕ್ಷಕ ಅಥವಾ ಮೆಂಟರ್ ಎಂದು ಅನುವಾದಿಸಬಹುದು.[೧೧]
ಇತ್ತೀಚಿನ ಇತಿಹಾಸ
ಬದಲಾಯಿಸಿಯುರೋಪಿನ ಏಷಿಯಾ ದೇಶಗಳ ಕಾಲೋನೀಕರಣ ಕೂಡ, ವಿಶೇಷವಾಗಿ ಮದ್ದುಗುಂಡು ಅಸ್ತ್ರಗಳ ಪರಿಚಯದೊಂದಿರೆ, ಸ್ಥಳೀಯ ಸಮರ ಕಲೆಗಳಲ್ಲಿ ಹಿನ್ನಡೆ ತಂದಿತು. ಈ ಅಂಶವನ್ನು ಭಾರತದಲ್ಲಿ, ೧೯ ನೇ ಶತಮಾನದಲ್ಲಿ ಆಂಗ್ಲ ರಾಜ್ಯ (ಬ್ರಿಟಿಷ್ ರಾಜ್)ನ ಪೂರ್ಣ ಸ್ಥಾಪನೆಯಾದ ಮೇಲೆ, ಸ್ಪಷ್ಟವಾಗಿ ಕಾಣಬಹುದು.[೧೨] ಪೋಲೀಸು, ಸೈನ್ಯಗಳು ಮತ್ತು ಸರಕಾರಿ ಸಂಸ್ಥೆಗಳನ್ನು ಒಟ್ಟುಗೂಡಿಸುವ ಹೆಚ್ಚು ಯುರೋಪೀಯ ವಿಧಾನಗಳು ಮತ್ತು ಮದ್ದುಗುಂಡಿನ ಹೆಚ್ಚಿದ ಬಳಕೆಗಳು ಜಾತಿ-ನಿರ್ದಿಷ್ಟವಾದ ಕರ್ತವ್ಯಗಳನ್ನು ಜೊತೆಗೂಡಿದ ಪಾರಂಪರಿಕ ಕಾದಾಟ ತರಬೇತಿಯ ಅಗತ್ಯವನ್ನು ಕ್ಷೀಣಗೊಳಿಸಿತು.[೧೨] ಹಾಗೂ 1804 ರಲ್ಲಿ ಆಂಗ್ಲ ವಸಾಹತುಶಾಹಿ ಸರಕಾರವು ಕ್ರಂತಿಗಳ ಸರಣಿಯೊಂದಕ್ಕೆ ಪ್ರತಿಕ್ರಿಯೆಯಾಗಿ ಕಲರಿಪಯಟ್ ಅನ್ನು ನಿಷೇಧಿಸಿತು.[೧೩] ಕಲರಿಪಯಟ್ ಮತ್ತು ಇತರ ಪಾರಂಪರಿಕ ಕಲೆಗಳು 1920 ರ ದಶಕದಲ್ಲಿ ಟೆಲ್ಲಿಚೆರ್ರಿಯಲ್ಲಿ ಏರಿಕೆಯನ್ನು ಅನುಭವಿಸಿದವು ಮತ್ತು ದಕ್ಷಿಣ ಭಾರತದಾದ್ಯಂತ ಹರಡಿದವು.[೧೨] ಮಲೇಷಿಯ, ಇಂಟೋನೇಷಿಯ, ವಿಯಟ್ನಾಮ್ ಮತ್ತು ಫಿಲಿಪ್ಪೀನ್ಸ್ ನಂತಹ ದಕ್ಷಿಣ-ಪೂರ್ವ ಏಷಿಯಾದ ವಸಾಹತುಗಳಲ್ಲಿ ಇದೇ ತೆರನ ಪ್ರಕ್ರಿಯೆಯು ನಡೆಯಿತು. ಇತರ ಭಾರತೀಯ ಸಮರ ಕಲೆಗಳೂ ಕೂಡ, ತಂಗ್-ಟ ದಂತೆ, 1950ರ ದಶಕದಲ್ಲಿ ಏರಿಕೆಯನ್ನು ಕಂಡವು.[೧೪]
ಯುನೈಟೆಡ್ ಸ್ಟೇಟ್ಸ್ ಹಾಗೂ ಚೀನಾ ಮತ್ತು ಜಪಾನ್ ಗಳ ನಡುವಣ ವಾಣಿಜ್ಯದ ಏರಿಕೆಯಿಂದಾಗಿ, ಏಷಿಯಾದ ಸಮರ ಕಲೆಗಳಲ್ಲಿ ಪಾಶ್ಚಿಮಾತ್ಯ ಆಸಕ್ತಿಯು 19ನೇ ಶತಮಾನದ ಅಂತ್ಯದವರೆಗೆ ಹಿಂದಕ್ಕೆ ಹೋಗುತ್ತದೆ. ಈ ಕಲೆಗಳನ್ನು ಪ್ರದರ್ಶನ ಮಾತ್ರವೆಂದು ಪರಿಗಣಿಸಿ, ಕೆಲವೇ ಕೆಲವು ಪಾಶ್ಚಿಮಾತ್ಯರು ಇವನ್ನು ಅಭ್ಯಸಿಸಿದರು. 1894 -97ರ ನಡುವೆ ಜಪಾನಿನಲ್ಲಿ ಕಾರ್ಯನಿರ್ವಹಿಸುವಾಗ ಜುಜುಟ್ಸು ವನ್ನು ಅಧ್ಯಯನ ಮಾಡಿದ ಓರ್ವ ರೈಲ್ವೇ ಇಂಜಿನಿಯರ್, ಎಡ್ವರ್ಡ್ ವಿಲಿಯಮ್ ಬಾರ್ಟನ್-ವ್ರೈಟ್ನು ಯುರೋಪಿನಲ್ಲಿ ಏಷಿಯಾದ ಸಮರ ಕಲೆಗಳನ್ನು ಹೇಳಿಕೊಟ್ಟ ಮೊದಲನೇ ವ್ಯಕ್ತಿಯಾಗಿ ಜುಜುಟ್ಸು, ಜೂಡೋ, ಬಾಕ್ಸಿಂಗ್, ಸವಟೆ ಮತ್ತು ಕಡ್ಡಿ ಕಾಳಗಗಳನ್ನು ಒಟ್ಟುಗೂಡಿಸಿದ ಬಾರ್ಟಿಟ್ಸು ಎಂಬ ಹೆಸರುಳ್ಳ ಒಂದು ಸಾರಸಂಗ್ರಹಿ ಸಮರ ಕಲಾ ಶೈಲಿಯನ್ನು ಕೂಡ ಇವನು ಕಂಡುಹಿಡಿದನು.
ಏಷಿಯಾದಲ್ಲಿ ಪಾಶ್ಚಿಮಾತ್ಯ ಪ್ರಭಾವವು ಬೆಳೆದಂತೆ, ಹೆಚ್ಚಿನ ಸಂಖ್ಯೆಯ ಸೇನಾ ಸದಸ್ಯರು ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾಗಳಲ್ಲಿ ಕಾಲ ಕಳೆದರು. ಕೊರಿಯಾದ ಯುದ್ಧದ ಸಂದರ್ಭದಲ್ಲಿ ಸಮರ ಕಲೆಗಳಿಗೆ ಗಮನಾರ್ಹವಾದ ಕೂಡ ಮಹತ್ವಪೂರ್ಣವಾಗಿತ್ತು. ಪಾಶ್ಚಿಮಾತ್ಯ ಮತ್ತು ಜಗತ್ತಿನ ಇತರ ಪ್ರದೇಶಗಳಿಗೆ ಸಮರ ಕಲೆಗಳನ್ನ ಪರಿಚಯಿಸಿದ ಶ್ರೇಯವು ಬಹಳವಾಗಿ ದಿವಂಗತ ಬ್ರೂಸ್ ಲೀ ಗೆ ಸಲ್ಲುತ್ತದೆ. ಸಮರ ಕಲಾವಿದ ಮತ್ತುಹಾಲಿವುಡ್ ನಟ ಬ್ರೂಸ್ ಲೀಯಿಂದ ಪ್ರಭಾವಿತವಾಗಿ, ೧೯೬೦ ಮತ್ತು 1970ರ ದಶಕಗಳು ಸಮರ ಕಲೆಗಳ ಕಡೆಗೆ ಮಾಧ್ಯಮಗಳ ಹೆಚ್ಚಿದ ಆಸಕ್ತಿಯನ್ನು ಕಂಡವು. ಏಷಿಯನ್ ಮತ್ತು ಹಾಲಿವುಡ್ ನ ಸಮರ ಕಲೆಗಳ ಚಲನಚಿತ್ರಗಳಿಗೆ ಭಾಗಶಃ ಧನ್ಯವಾದಗಳು ಸಂದರೆ, ಇತ್ತೀಚಿನ ವರ್ಷಗಳಲ್ಲಿ, ಪ್ರಮುಖ ಚಿತ್ರರಂಗದ ವ್ಯಕ್ತಿಗಳಾದ ಜಾಕಿ ಚಾನ್ ಮತ್ತು ಜೆಟ್ ಲೀ ಚೀನೀ ಸಮರ ಕಲೆಗಳನ್ನು ಪೋಷಿಸುವಲ್ಲಿ ಜವಾಬ್ದಾರರಾಗಿದ್ದಾರೆ.
ಯುರೋಪ್
ಬದಲಾಯಿಸಿಸಮರ ಕಲೆಗಳು ಶಾಸ್ತ್ರೀಯ(ಅಭಿಜಾತ) ಯುರೋಪಿಯನ್ ನಾಗರೀಕತೆಗಳಲ್ಲಿ ಅಸ್ತಿತ್ವದಲ್ಲಿದ್ದವು, ಕ್ರೀಡೆಗಳು ಜೀವನ ಮಾರ್ಗಕ್ಕೆ ಅವಿಭಾಜ್ಯವಾಗಿರುತ್ತಿದ್ದ ಗ್ರೀಸ್ ನಲ್ಲಿ ಬಹು ಹೆಚ್ಚಾಗಿ ಗುರುತಿಸಬಹುದು. ಬಾಕ್ಸಿಂಗ್, ಪೈಗ್ಮೆ , ಪಿಕ್ಸ್ , ವ್ರೆಸ್ಲಿಂಗ್ ಪಾಲೆ ಮತ್ತು ಪಾನ್ ಕ್ರಷನ್(ಪಾನ್ ಎಂದರೆ ಎಲ್ಲಾ ಎಂದು ಮತ್ತು ಕ್ರಷೋಸ್ ಎಂದರೆ ಅಧಿಕಾರ ಅಥವಾ ಶಕ್ತಿ - ಇದರಿಂದ) ಗಳು ಪುರಾತನ ಒಲಂಪಿಕ್ ಕ್ರೀಡಾಸ್ಪರ್ಧೆಗಳಲ್ಲಿ ಪ್ರತಿನಿಧಿಸಲ್ಪಡುತ್ತಿದ್ದವು. ರೋಮನ್ನರುಗ್ಲಾಡಿಯೇಟರಲ್ ಕಾಳಗವನ್ನು ಸಾರ್ವಜನಿಕ ವೀಕ್ಷಣೆಯ ಆಕರ್ಷಣೆಯಾರಿ ಹೊಮ್ಮಿಸಿದರು.
ಎಷ್ಟೊಂದು ಸಂಖ್ಯೆಯಲ್ಲಿಐತಿಹಾಸಿಕ ಫೆನ್ಸಿಂಗ್ ಸ್ವರೂಪಗಳು ಮತ್ತು ಕೈಪಿಡಿಗಳು ಉಳಿದಿದ್ದು,ಹಳೆಯ ಯುರೋಪೀಯ ಸಮರ ಕಲೆಗಳನ್ನು ಪುನರ್ನಿರ್ಮಿಸಲು ಬಹಳ ಗುಂಪುಗಳು ಕೆಲಸ ಮಾಡುತ್ತಿವೆ. ಪುನರ್ನಿರ್ಮಾಣದ ಪ್ರಕ್ರಿಯೆಯು ಕ್ರಿ.ಶ.1400 -1900 ರ ಅವಧಿಯಲ್ಲಿ ತಯಾರಿಸಿದ ಕಾದಾಟದ ಬಗೆಗಿನ ವಿವರಪೂರ್ಣ ದಾಖಲೆಗಳ ಆಳವಾದ ಅಧ್ಯಯನ ಮತ್ತು ವಿವಿಧ ಕೌಶಲ್ಯಗಳು ಮತ್ತು ಯುಕ್ತಿಗಳ ಪ್ರಯೋಗಿಕ ತರಬೇತಿ ಅಥವಾ "ಒತ್ತಡ ಪರೀಕ್ಷೆ"ಗಳನ್ನು ಒಟ್ಟಾಗಿಸುತ್ತದೆ. ಇದು ಕತ್ತಿ ಮತ್ತು ಗುರಾಣಿ, ಎರಡು-ಕೈಗಳ ಕತ್ತಿ ಕಾದಾಟ, ಹಾಲ್ಬರ್ಡ್ ಕಾದಾಟ, ತಳ್ಳುವಿಕೆ ಮತ್ತು ಇತರ ವಿಧಗಳ ಕೈಜಗಳದ ಶಸ್ತ್ರಸಹಿತ ಕಾದಾಟಗಳಂತಹ ಶೈಲಿಗಳನ್ನು ಒಳಗೊಂಡಿದೆ. ಈ ಪುನರ್ನಿರ್ಮಾಣದ ಪ್ರಯತ್ನ ಮತ್ತು ಐತಿಹಾಸಿಕ ವಿಧಾನಗಳ ಆಧುನಿಕ ಶಾಖೆಗಳನ್ನು ಸಾಮಾನ್ಯವಾಗಿ ಪಾಶ್ಚಿಮಾತ್ಯ ಸಮರ ಕಲೆಗಳು ಎಂದು ಕರೆಯಲಾಗುತ್ತದೆ. ಹಲವು ಮಧ್ಯಕಾಲೀನ ಸಮರ ಕಲೆಗಳ ಕೈಪಿಡಿಗಳು ಉಳಿದುಕೊಂಡಿದ್ದು, 14 ನೇ ಶತಮಾನದ ಜೊಹಾನ್ನೆಸ್ ಲಿಚ್ಚೆನ್ಯುರ್ ನ ಫೆಚ್ ಬುಚ್ (ಫೆನ್ಸಿಂಗ್ ಪುಸ್ತಕ)ಬಹು ಖ್ಯಾತವಾದುದಾಗಿದೆ. ಇಂದು ಲಿಚ್ಚೆನ್ಯುರ್ ನ ಉದ್ಗ್ರಂಥವು ಕತ್ತಿವರಸೆಯ ಜರ್ಮನ್ ಶಾಲೆಯ ಆಧಾರವಾಗಿದೆ.
ಯುರೋಪಿನಲ್ಲಿ ಮದ್ದುಗುಂಡುಗಳ ಉತ್ಧಾನದೊಂದಿಗೆ ಸಮರ ಕಲೆಗಳು ಕ್ಷೀಣಿಸುತ್ತಾ ಬಂದವು. ಪರಿಣಾಮವಾಗಿ, ಯುರೋಪಿನಲ್ಲಿ ಐತಿಹಾಸಿಕ ಬೇರುಗಳುಳ್ಳ ಸಮರ ಕಲೆಗಳು ಏಷಿಯಾದಲ್ಲಿರುವಷ್ಟು ಪ್ರಮಾಣದಲ್ಲಿ ಅಸ್ತಿತ್ವದಲ್ಲಿಲ್ಲ. ಏಕೆಂದರೆ, ಅಲ್ಲಿನ ಪಾರಂಪರಿಕ ಸಮರ ಕಲೆಗಳು ಸತ್ತುಹೋದವು ಇಲ್ಲವೇ ಕ್ರೀಡೆಗಳಾಗಿ ಬೆಳೆದವು. ಕತ್ತಿವರಸೆಯು ಫೆನ್ಸಿಂಗ್ ಆಗಿ ಬೆಳೆಯಿತು. ಬಾಕ್ಸಿಂಗ್ ಮತ್ತು ಕುಸ್ತಿಯ ಸ್ವರೂಪಗಳು ಉಳಿದುಕೊಂಡಿವೆ. [[ಯುರೋಪೀಯ ಸಮರ ಕಲೆಗಳು ಬಹುತೇಕ ಬದಲಾಗುತ್ತಿರುವ ತಂತ್ರಜ್ಙಾನಕ್ಕೆ ಹೊಂದಿಕೊಡಿವೆ. ಹೀಗಾಗಿ ಕೆಲವು ಪಾರಂಪರಿಕ ಕಲೆಗಳು ಇನ್ನೂ ಅಸ್ತಿತ್ವದಲ್ಲಿದ್ದರೆ, ಸೇನಾ ಸದಸ್ಯರನ್ನು ಬಾಯೊನೆಟ್|ಯುರೋಪೀಯ ಸಮರ ಕಲೆಗಳು[[ಬಹುತೇಕ ಬದಲಾಗುತ್ತಿರುವ ತಂತ್ರಜ್ಙಾನಕ್ಕೆ ಹೊಂದಿಕೊಡಿವೆ. ಹೀಗಾಗಿ ಕೆಲವು ಪಾರಂಪರಿಕ ಕಲೆಗಳು ಇನ್ನೂ ಅಸ್ತಿತ್ವದಲ್ಲಿದ್ದರೆ, ಸೇನಾ ಸದಸ್ಯರನ್ನು ಬಾಯೊನೆಟ್]]]] ಕಾದಾಟ ಮತ್ತು ಮಾರ್ಕ್ಸ್ ಮನ್ ಶಿಪ್ ನಂತಹ ಕೌಶಲಗಳಲ್ಲಿ ತರಬೇತುಗೊಳಿಸಲಾಗುತ್ತದೆ. ಕೆಲವು ಯುರೋಪೀಯ ಶಸ್ತ್ರಗಾರಿಕೆ ಪದ್ಧತಿಗಳು ಕೂಡ ಜಾನಪದ ಕ್ರೀಡೆಗಳಾಗಿ ಮತ್ತು ಆತ್ಮರಕ್ಷಣೆಯ ವಿಧಾನಗಳಾಗಿ ಉಳಿದುಕೊಂಡಿವೆ. ಇಂಗ್ಲೆಂಡಿನ ಖ್ವಾರ್ಟರ್ಸ್ಟಾಫ್, ಐರ್ಲೆಂಡಿನ ಬಟಾಯಿರೆಚ್, ಪೋರ್ಚುಗಲ್ ನ ಜೋಗೋ ದೊ ಪೌ ಮತ್ತು ಕೆನರಿ ದ್ವೀಪಗಳಜುಯೆಗೊ ದೆಲ್ ಪಾಲೊ ಶೈಲಿಗಳಂತಹ ಕಡ್ಡಿ ಕಾದಾಟ ಪದ್ಧತಿಗಳನ್ನು ಇವು ಒಳಗೊಂಡಿವೆ.
ಇತರ ಸಮರ ಕಲೆಗಳು ಈಗೇನು ಕಾದಾಟಕಾರಿ ಎಂದು ಗುರುತಿಸಲ್ಪಡುತ್ತಿಲ್ಲದ ಕ್ರೀಡೆಗಳಾಗಿ ವಿಕಾಸ ಹೊಂದಿದವು. ಒಂದು ಉದಾಹರಣೆಯೆಂದರೆ ಪುರುಷರ ಜಿಮ್ನ್ಯಾಸ್ಟಿಕ್ಸ್ ನಲ್ಲಿ ಪೊಮ್ಮೆಲ್ ಹಾರ್ಸ್ ಪ್ರಸಂಗ. ಇದು ಈಖ್ವೆಸ್ಟ್ರಿಯನ್ ವಾಲ್ಟಿಂಗ್ ನ ಕ್ರೀಡೆಯಿಂದ ಮೂಡಿಬಂದ ಒಂದು ವ್ಯಾಯಾಮ. ಅಶ್ವದಳ ಸವಾರರು ತಮ್ಮ ಕುದುರೆಗಳ ಮೇಲೆ ಬೇಗನೇ ಸ್ಥಾನಗಳನ್ನು ಬದಲಾಯಿಸಲು, ಬಿದ್ದ ಸಹಚರರನ್ನು ಕಾಪಾಡಲು, ಕುದುರೆಯ ಬೆನ್ನ ಮೇಲೆ ಪರಿಣಾಮಕಾರಿಯಾಗಿ ಕಾದಾಡಲು ಮತ್ತು ಒಂದೇ ನೆಗೆತಕ್ಕೆ ಕೆಳಗಿಳಿಯಲು ಸಮರ್ಥರಾಗಿರಬೇಕಾಗಿತ್ತು. ಈ ಕೌಶಲ್ಯಗಳನ್ನು ಒಂದು ಸ್ಥಿರ ಪೀಪಾಯಿಯ ಮೇಲೆ ತರಬೇತಿ ಕೊಡುವುದು ಜಿಮ್ನ್ಯಾಸ್ಟಿಕ್ಸ್ ನ ಪೊಮ್ಮೆಲ್ ಹಾರ್ಸ್ ವ್ಯಾಯಾಮದ ಕ್ರೀಡೆಯಾಗಿ ವಿಕಾಸಗೊಂಡಿತು. ಗುಂಡು ಮತ್ತು ಭರ್ಜಿಗಳು ರೋಮನ್ನರಿಂದ ಅತಿಯಾಗಿ ಬಳಸಲಾಗುತ್ತಿದ್ದ ಶಸ್ತ್ರಗಳಾಗಿದ್ದು, ಗುಂಡು ಎಸೆತ ಮತ್ತು ಭರ್ಜಿ ಎಸೆತಗಳಿಗೆ ಹೆಚ್ಚಿನ ಪುರಾತನ ಮೂಲಗಳಿವೆ.
ಆಧುನಿಕ ಚರಿತ್ರೆ
ಬದಲಾಯಿಸಿಕುಸ್ತಿ, ಭಲ್ಲೆ, ಫೆನ್ಸಿಂಗ್(1896ರ ಬೇಸಿಗೆ ಒಲಂಪಿಕ್ಸ್), ಬಿಲ್ಲಗಾರಿಕೆ, ಬಾಕ್ಸಿಂಗ್ (1904 ) ಮತ್ತು ಹೆಚ್ಚು ಈಚೆಗೆ ಜೂಡೊ (1964 ) ಮತ್ತು ಟಾಯಿ ಕ್ವೋನ್ ದೊ (2000 ) ಆಧುನಿಕ ಬೇಸಿಗೆ ಒಲಂಪಿಕ್ ಕ್ರೀಡೆಗಳಲ್ಲಿ ಪ್ರಸಂಗಗಳಾಗಿ ಸೇರಿಸಲ್ಪಟ್ಟಿವೆ.
ಸಮರ ಕಲೆಗಳು, ಬಂಧನದ ಮತ್ತು ಆತ್ಮರಕ್ಷಣೆಯ ವಿಧಾನಗಳಾಗಿ ಬಳಸುವುದಕ್ಕಾಗಿ, ಸೇನೆಯ ಮತ್ತು ಪೋಲೀಸು ಪಡೆಗಳ ಮಧ್ಯೆ ಕೂಡ,ಬೆಳೆದವು. ಇವುಗಳಲ್ಲಿ ಇಸ್ರೇಲ್ ನ ಆತ್ಮರಕ್ಷಣೆಯ ಪಡೆಗಳಲ್ಲಿ ಬೆಳೆದ ಯೂನಿಫೈಟ್ , ಕಪಪ್ ಮತ್ತು ಕ್ರವ್ ಮಗ ; ಚೀನಾದ ಸಾನ್ ಶೌ ; ರಷ್ಯಾದ ಸೇನಾ ಪಡೆಗಳಿಗಾಗಿ ಬೆಳೆಸಲ್ಪಟ್ಟ ಸಿಸ್ಟೆಮಾ ಮತ್ತು ರಫ್ ಅಂಡ್ ಟಂಬಲ್ (ರಾಟ್): ಮೂಲತಃ ದಕ್ಷಿಣ ಆಫ್ರಿಕಾದ ರೆಕನ್ಠಾಯ್ಸೆನ್ಸ್ ಕಮಾಂಡೋಸ್ ವಿಶೇಷ ಪಡೆಗಳಿಗಾಗಿ ಬೆಳೆಸಲ್ಪಟ್ಟದ್ದು (ಈಗ ನಾಗರೀಕ ಸಾಮರ್ಥ್ಯದಲ್ಲಿ ಕಲಿಸಲಾಗುತ್ತಿದೆ.) ಹತ್ತಿರದ ಕಾದಾಟದ ಯುದ್ಧಗಳಲ್ಲಿನ ಬಳಕೆಗೆ ಯುಕ್ತಿಯುತ ಕಲೆಗಳು ಅಂದರೆ ಸೇನಾ ಸಮರ ಕಲೆಗಳು ಉದಾಹರಣೆಗೆ ಯುಎಸಿ(ಬ್ರಿಟಿಷ್) ಲೈನ್ (ಯುಎಸ್ಎ). ಆಧುನಿಕ ಸೇನೆಯಲ್ಲಿ ತನ್ನ ಮೂಲಗಳನ್ನು ಹೊಂದಿದ ಇತರ ಕಾದಾಟದ ಪದ್ಧತಿಗಳಲ್ಲಿ ಸೋವಿಯತ್ ಬೋಜೆವೊಜೆ (ಕಾದಾಟ)ಸಾಂಬೋ ಸೇರಿದೆ. ಪಾರ್ಸ್ ಟ್ಯಾಕ್ಟಿಕಲ್ ಡಿಫೆನ್ಸ್ (ಟರ್ಕಿಯ ಸಂರಕ್ಷಕ ಸದಸ್ಯರ ಆತ್ಮರಕ್ಷಣಾ ಪದ್ಧತಿ)
ಅಂತರ್ಕಲಾ ಸ್ಪರ್ಧೆಗಳು ಮತ್ತೆ ಮುಂಚೂಣಿಗೆ ಬಂದಿದ್ದು 1993 ರಲ್ಲಿ, ಮೊದಲನೇಅಲ್ಟಿಮೇಟ್ ಫೈಟಿಂಗ್ ಮಾಂಪಿಯನ್ ಶಿಪ್ ನೊಂದಿಗೆ. ಅಲ್ಲಿಂ ಇದು ಮಿಶ್ರ ಸಮರ ಕಲೆಗಳ ಆಧುನಿಕ ಕ್ರೀಡೆಯಾಗಿ ವಿಕಾಸಗೊಂಡಿತು.
ಆಧುನಿಕ ರಣಭೂಮಿಯ ಮೇಲೆ
ಬದಲಾಯಿಸಿಕೆಲವು ಪಾರಂಪರಿಕ ಸಮರ ಪರಿಕಲ್ಪನೆಗಳು ಆಧುನಿಕ ಸೇನಾ ತರಬೇತಿಯ ಒಳಗೇ ಹೊಸ ಉಪಯೋಗವನ್ನು ಕಂಡಿವೆ. ಬಹುಶಃ ಇದರ ಬಹಳ ಇತ್ತೀಚಿನ ಉದಾಹರಣೆ ಎಂದರೆ, ವಿವಿಧ ರೀತಿಯ ವಿಚಿತ್ರ ಸನ್ನಿವೇಶಗಳಲ್ಲಿ ಮದ್ದುಗುಂಡಿನ ಅಸ್ತ್ರವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮಾಂಸಖಂಡಗಳ ನೆನಪಿನ ಮೇಲೆ ಅವಲಂಬಿಸುವ ಪಾಯಿಂಟ್ ಶೂಟಿಂಗ್; ಬಹಳವಾಗಿ, ಒಬ್ಬ ಐಡೊ ಕಾ ಚಲನೆಗಳ ಮೇಲೆ ತಮ್ಮ ಕತ್ತಿಯಿಂದ ಹತೋಟಿ ಸಾಧಿಸುವ ರೀತಿಯಲ್ಲಿಯೇ.
ಎರಡನೇ ಮಹಾಯುದ್ದದ ಸಂದರ್ಭದಲ್ಲಿ ಒಬ್ಬ ಶಾಂಘೈ ಆರಕ್ಷಕ ಮತ್ತು ಏಷಿಯಾದ ಕಾದಾಟದ ತಂತ್ರಗಳ ಮೇಲಿನ ಒಬ್ಬ ಮುಂದಾಳು ಪಾಶ್ಚಿಮಾತ್ಯ ತಜ್ಞ ವಿಲಿಯಮ್ ಈ. ಫೇರ್ಬೈರ್ನ್ ವಿಶೇಷ ಕಾರ್ಯಾಚರಣಾ ನಿರ್ವಹಣಾಧಿಕಾರಿ(ಎಸ್.ಒ.ಈ.)ಯಿಂದ ಯು.ಕೆ.,ಯು.ಎಸ್. ಮತ್ತು ಕೆನಡಾದ ವಿಶೇಷ ಪಡೆಗಳಿಗೆ ಜುಜುಟ್ಸುವನ್ನು ಹೇಳಿಕಪಡಲು ನಿಯುಕ್ತನಾದನು. ಕರ್ನಲ್ ರೆಕ್ಸ್ ಆಪಲ್ಗೇಟ್ ಬರೆದಿರುವ ಕಿಲ್ ಆರ್ ಗೆಟ್ ಕಿಲ್ಡ್ ಪುಸ್ತಕವು ಕೈಯಿಂದ ಕೈ ಕಾದಾಟದ ಬಗ್ಗೆ ಒಂದು ಉತ್ಕೃಷ್ಟ ಸೇನಾ ಮೀಮಾಂಸೆಯಾಯಿತು. ಈ ಕಾದಾಟದ ವಿಧಾನವು ಡಿಫೆಂಡು ಎಂದು ಕರೆಯಲ್ಪಟ್ಟಿತು.
ಪಾರಂಪರಿಕ ಕೈ-ಕೈಜಗಳ, ಚಾಕು ಮತ್ತು ಭರ್ಜಿಯ ತಂತ್ರಗಳು ಇಂದಿನ ಯುದ್ಧಗಳಿಗಾಗಿ ಬೆಳೆಸಲಾದ ಸಮ್ಮಿಶ್ರ ಪದ್ಧತಿಗಳಲ್ಲಿ ಬಳಕೆಯನ್ನು ಕಾಣವುದನ್ನು ಮುಂದುವರರೆಸಿವೆ. ಇದರ ಉದಾಹರಣೆಗಳಲ್ಲಿ ಯೂರೋಪಿನ ಯೂನಿಫೈಟ್, ಮ್ಯಾಟ್ ಲಾರ್ಸನ್ ಬೆಳೆಸಿದ ಅಮೇರಿಕಾ ಸೈನ್ಯದಕಾಂಬಾಟೀವ್ಸ್ ಪದ್ಧತಿ, ಇಸ್ರೇಲಿನ ಸೇನೆ ತನ್ನ ಸಿಪಾಯಿಗಳನ್ನು ಕಪಾಪ್ ಮತ್ತು ಕ್ರವ್ ಮಗಗಳಲ್ಲಿ ತರಬೇತುಗೊಳಿಸುತ್ತದೆ, ಮತ್ತು ಅಮೇರಿಕಾದ ನೌಕಾ ದಳವುಮರೈನ್ ಕಾರ್ಪ್ಸ್ ಮಾರ್ಷಿಯಲ್ ಆರ್ಟ್ಸ್ ಪ್ರೋಗ್ರಾಂ (ಎಂಸಿಎಂಎಪಿ)ಯನ್ನು ಹೊಂದಿದೆ.
ಫಿಯೋರೆ ಡೈ ಲಿಬೆರಿಯ ಕೈಪಿಡಿಯಲ್ಲಿ ಲಭ್ಯವಾಗುವಂಥುದಕ್ಕೆ ಹೋಲುವ ಶಸ್ತ್ರರಹಿತ ಬಾಕು ರಕ್ಷಣೆಗಳು ಮತ್ತು ಕೋದೆಕ್ಸ್ ವಾಲ್ಲೆರ್ಸ್ಟೈನ್ ಗಳು ಅಮೇರಿಕಾದ ಸೇನೆಯ ತರಬೇತಿ ಕೈಪಿಡಿಗೆ 1942[೧೫] ರಲ್ಲಿ ಸೇರಿಸಲ್ಪಟ್ಟವು ಮತ್ತು ಎಸ್ಕ್ರಿಮಾದಂತಹ ಇತರ ಪಾರಂಪರಿಕ ಪದ್ಧತಿಗಳೊಂದಿಗೆ ಇಂದಿನ ಪದ್ಧತಿಗಳನ್ನು ಪ್ರಭಾವಿತಗೊಳಿಸುತ್ತಾ ಇವೆ.
ಭರ್ಜಿಯಲ್ಲಿ ತನ್ನ ಮೂಲವನ್ನು ಹೊಂದಿದ ರೈಫಲ್-ಏರಿಸಿದ ಬಯೊನೆಟ್, ಆಮೇರಿಕಾದ ಸೇನೆ. ಅಮೇರಿಕದ ಸಮುದ್ರ ದಳ ಮತ್ತು ಬ್ರಿಟೀಷ ಸೇನೆಗಳಿಂದ ಇರಾಖ್ ಯುದ್ಧದಷ್ಟು ಈಚೆಗೂ ಬಳಕೆಯನ್ನು ಕಂಡಿದೆ.[೧೬]
ಪರೀಕ್ಷೆ ಮತ್ತು ಸ್ಪರ್ಧೆ
ಬದಲಾಯಿಸಿಪರೀಕ್ಷೆ ಅಥವಾ ಮೌಲ್ಯಮಾಪನವು ತಮ್ಮ ಏಳಿಗೆಯನ್ನು ಅಥವಾ ನಿರ್ದಿಷ್ಟ ಸಂದರ್ಭಗಳಲ್ಲಿ ಕೌಶಲ್ಯದ ಸ್ವಂತ ಮಟ್ಟವನ್ನು ಅರಿಯಬಯಸುವ ಹಲವು ಶಾಖೆಗಳ ಸಮರ ಕಲಾ ಅಔ್ಯಾಸಿಗಳಿಗೆ ಮುಖ್ಯವಾದುದು. ವೈಯಕ್ತಿಕ ಸಮರ ಕಲಾ ಪದ್ಧತಿಗಳೊಳಗಿನ ವಿದ್ಯಾರ್ಥಿಗಳು ಬಹಳ ಬಾರಿ ನಿಗದಿತ ಅವಧಿಗಳಲ್ಲಿ ಬೇರೆ ಬೆಲ್ಟ್, ಬಣ್ಣ ಅಥವಾ ಬಿರುದುಗಳಂತಹ ಗುರುತಿಸಲ್ಪಟ್ಟ ಸಾಧನೆಯ ಮೇಲಿನ ಮಟ್ಟಕ್ಕೆ ಮುಂದುವರಿಯುವುದಕ್ಕೋಸ್ಕರ, ಪರೀಕ್ಷೆಗೆ ಮತ್ತು ಸ್ಥಾನನಿರ್ಧರಣೆಗೆ ಒಳಪಡುತ್ತಾರೆ. ಪರೀಕ್ಷೆಯ ವಿಧಾನವು ಒಂದು ಪದ್ಧತಿಯಿಂದ ಿನ್ನೊಂದು ಪದ್ಧತಿಗೆ ಭಿನ್ನವಾಗಿದ್ದು, ಸ್ಪಾರಿಂಗ್ ನಣತಹ ಪ್ರಕಾರಗಳನ್ನು ಸೇರಿವೆ.
ಸ್ಪಾರಿಂಗ್ ನ ವಿವಿಧ ಪ್ರಕಾರಗಳನ್ನು ಸಮರ ಕಲೆಯ ಪ್ರದರ್ಶನಗಳು ಮತ್ತು ಪಂದ್ಯಾವಳಿಗಳಲ್ಲಿ ಸಾಮಾನ್ಯವಾಗಿ ಬಳಸುತ್ತಾರೆ. ಕೆಲವು ಸ್ಪರ್ಧೆಗಳು ನಿಯಮಗಳ ಒಂದು ಸಾಮಾನ್ಯ ಕಂತನ್ನು ಬಳಸಿಕೊಳ್ಳುತ್ತಾ ಬೇರೆ ಬೇರೆ ಪ್ರಕಾರಗಳ ಅಭ್ಯಾಸಿಗಳನ್ನು ಒಬ್ಬರೆದುರು ಇನ್ನೊಬ್ಬರನ್ನು ಪಣಕ್ಕಿಳಿಸುತ್ತವೆ. ಇವುಗಳನ್ನು ಮಿಶ್ರ ಸಮರ ಕಲೆಗಳ ಸ್ಪರ್ಧೆಗಳೆಂದು ಕರೆಯಲಾಗುತ್ತದೆ. ಸ್ಪಾರಿಂಗ್ ನ ನಿಯಮಗಳು ಒಂದು ಕಲೆಮತ್ತು ಒಂದು ಸಂಸ್ಥೆಯಿಂದ ಇನ್ನೊಂದಕ್ಕೆ ವ್ಯತ್ಯಾಸವಾಗುತ್ತವೆ. ಆದರೆ, ಅವನ್ನು ಎದುರಾಳಯ ಮೇಲೆ ಬಳಸಬೇಕಾದಂತಹ ಬಲದ ಪ್ರಮಾಣವನ್ನು ಬಿಂಬಿಸುವಂತೆ ಸಾಮಾನ್ಯವಾಗಿ ಲಘು-ಸಂಪರ್ಕ ,ಮಧ್ಯಮ-ಸಂಪರ್ಕ ಮತ್ತು ಪೂರ್ಣ-ಸಂಪರ್ಕ ಭೇದಗಳಾಗಿ ವಿಭಜಿಸಬಹುದು.
ಲಘು- ಮತ್ತು ಮಧ್ಯಮ-ಸಂಪರ್ಕ
ಬದಲಾಯಿಸಿಈ ವಿಧಗಳ ಸ್ಪಾರಿಂಗ್, ಎದುರಾಳಯನ್ನು ಹೊಡೆಯಲು ಬಳಸಬಹುದಾದಂಥ ಬಲದ ಪ್ರಮಾಣವನ್ನು ನಿರ್ಬಂಧಿಸುತ್ತದೆ. ಲಘು ಸ್ಪಾರಿಂಗ ನಲ್ಲಿ ಇದು 'ಸ್ಪರ್ಶ' ಸಂಪರ್ಕಕ್ಕೆ ಉಪಯೋಗಿಸುತ್ತಾರೆ - ಉದಾಹರಣೆಗೆ ಸ್ಪರ್ಶವನ್ನು ಮಾಡಿದ ತಕ್ಷಣ ಅಥವಾ ಸ್ಪರ್ಶವನ್ನು ಮಾಡುವ ಮೊದಲು ಒಂದು ಗುದ್ದನ್ನು 'ಹಿಂದಕ್ಕೆಳೆಯಬೇಕು'. ಮಧ್ಯಮ-ಸಂಪರ್ಕದಲ್ಲಿ (ಇದನ್ನು ಕೆಲವೊಮ್ಮೆ ಅರ್ಧ-ಸಂಪರ್ಕ ಎಂದು ಕರೆಯುವುದುಂಟು), ಗುದ್ದನ್ನು ಹಿಂದಕ್ಕೆಳೆಯುವುದಿಲ್ಲ, ಆದರೆ ಅದನ್ನು ಪೂರ್ಣ ಬಲದಿಂದ ಹೊಡೆಯಲಾಗುವುದಿಲ್ಲ. ಬಳಸಬಹುದಾದ ಬಲದ ಪ್ರಮಾಣವು ನಿರ್ಬಂಧಿಸಲ್ಪಟ್ಟಿರುವುದರಿಂದ ಈ ವಿಧಗಳ ಸ್ಪಾರಿಂಗ್ ನ ಗುರಿಯು ಎದುರಾಳಿಯನ್ನು ನಾಕ್ ಔಟ್ ಮಾಡುವುದಲ್ಲ; ಸ್ಪರ್ಧೆಗಳಲ್ಲಿ ಒಂದು ಅಂಕಿಗಳ ಪದ್ಧತಿಯನ್ನು ಬಳಸುತ್ತಾರೆ.
ತೀರ್ಪುಗಾರರು ಅಂಕಗಳನ್ನು ಬರೆದುಕೊಳ್ಳುತ್ತಿದ್ದರೆ, ಫೌಲ್ ಗಳನ್ನು ನೋಡಿಕೊಳ್ಳಲು ಮತ್ತು ಪಂದ್ಯವನ್ನು ನಿಯಂತ್ರಿಸಲು ಒಬ್ಬ ನಿರ್ಣಯಕರ್ತನು ಕಾರ್ಯನಿರ್ವಹಿಸುತ್ತಾನೆ. ಕೆಲವು ನಿರ್ದಿಷ್ಟ ಗುರಿಗಳನ್ನು ನಿಷೇಧಿಸಬಹುದು (ತಲೆಗೆ ಹೊಡೆಯುವುದು ಅಧವಾ ತೊಡೆಸಂದುಗಳಿಗೆ ಹೊಡೆತಗಳಂತಹವು), ಕೆಲವು ತಂತ್ರಗಳನ್ನು ನಿಷಿದ್ಧಗೊಳಿಸಬಹುದು, ಮತ್ತು ಕಾದಾಟ ಮಾಡುವವರು ತಮ್ಮ ತಲೆ, ಕೈಗಳಿಗೆ, ಎದೆ, ತೊಡೆಸಂದು, ಗಲ್ಲ ಅಥವಾ ಪಾದಕ್ಕೆ ಸಂರಕ್ಷಕ ಯಂತ್ರವನ್ನು ಹಾಕಿಕೊಳ್ಳಬೇಕೆಂದು ವಿಧಿಸಬಹುದು. ಪಟ್ಟುಗಳ ಕಲೆಗಳಲ್ಲಿ, ಐಕಿಡೊ, ಲಘು ಅಥವಾ ಮಧ್ಯಮ ಸಂಪರ್ಕಕ್ಕೆ ಸಮನಾದ ಇದೇ ವಿಧಾನದ ಶಿಸ್ತಿನ ತರಬೇತಿಯನ್ನು ಬಳಸುತ್ತದೆ.
ಕೆಲವು ಶೈಲಿಗಳಲ್ಲಿ (ಫೆನ್ಸಿಂಗ್ ಮತ್ತು ಟಯೇಕ್ವೋಡೋ ಸ್ಪಾರಿಂಗ್ ನ ಕೆಲವು ಶೈಲಿಗಳಂಥವು), ನಿರ್ಣಯಕರ್ತನು ತೀರ್ಪು ನೀಡಿದಂತೆ ಒಂದೇ ತಂತ್ರ ಅಥವಾ ಹೊಡೆತವನ್ನು ಇಳಿಸುವ ಆಧಾರದ ಮೇಲೆ ಸ್ಪರ್ಧಿಗಳು ಅಂಕಗಳನ್ನು ಗಳಿಸುತ್ತಾರೆ. ಹೀಗಿರುವಾಗ, ನಿರ್ಣಯಕರ್ತನು ಪಂದ್ಯವನ್ನು ಸಂಕ್ಷಿಪ್ತವಾಗಿ ನಿಲ್ಲಿಸಿ, ಅಂಕವನ್ನು ಪ್ರದಾನಿಸಿ, ಮತ್ತೆ ಪಂದ್ಯವನ್ನು ಆರಂಭಿಸುತ್ತಾನೆ. ಪರ್ಯಾಯವಾಗಿ, ತೀರ್ಪುಗಾರರು ಅಂಕಗಳನ್ನು ಗುರುತುಮಾಡಿಕೊಂಡರೆ, ಸ್ಪಾರಿಂಗ್ ಮುಂದುವರಿಯಬಹುದು. ಅಂಕಗಳ ಸ್ಪಾರಿಂಗ್ ನ ಕೆಲವು ವಿಮರ್ಶಕರು ಈ ವಿಧಾನದ ತರಬೇತಿಯು ಕಾದಾಟದ ಪರಿಣಾಮಶೀಲತನವನ್ನು ಕಡಿಮೆಯಾಗುವಂತೆ ಮಾಡುವ ಅಭ್ಯಾಸಗಳನ್ನು ಕಲಿಸುತ್ತದೆ ಎಂದು ಭಾವಿಸುತ್ತಾರೆ. ಲಘು-ಸಂಪರ್ಕ ಸ್ಪಾರಿಂಗನ್ನು ಪ್ರತ್ಯೇಕವಾಗಿ ಮಕ್ಕಳಿಗಾಗಿ ಅಥವಾ ಭಾರೀ ಸಂಪರ್ಕವು ಸೂಕ್ತವಾಗದಂತಹ ಅನ್ಯ ಸನ್ನಿವೇಶಗಳಲ್ಲಿ (ಆರಂಭಿಕರ ಪ್ರಸಂಗದಲ್ಲಿ) ಬಳಸಬಹುದು, ಮಧ್ಯಮ-ಸಂಪರ್ಕ ಸ್ಪಾರಿಂಗನ್ನು ಹೆಚ್ಚಾಗಿ ಪೂರ್ಣ-ಸಂಪರ್ಕದ ತರಬೇತಿಗಾಗಿ ಬಳಸಲಾಗುತ್ತದೆ.
ಪೂರ್ಣ-ಸಂಪರ್ಕ
ಬದಲಾಯಿಸಿಪೂರ್ಣ-ಸಂಪರ್ಕ ಸ್ಪಾರಿಂಗ್ ಅಥವಾ ಕಾದಾಟವನ್ನು ನೈಜತನವುಳ್ಳ ಶಸ್ತ್ರರಹಿತ ಕಾದಾಟದ ಕಲಿಕೆಯಲ್ಲಿ ಅಗತ್ಯ ಅಂಶವೆಂದು ಕೆಲವರು ಪರಿಗಣಿಸುತ್ತಾರೆ.[೧೭] ಪೂರ್ಣ-ಸಂಪರ್ಕ ಸ್ಪಾರಿಂಗ್, ಹೆಸರೇ ಸೂಚಿಸುವಂತೆ ಹೊಡೆತಗಳನ್ನು ಹಿಂತೆಗೆಯದೆ, ಪೂರ್ಣ ಬಲದೊಂದಿಗೆ ಎಸೆಯಲಾಗುವುದೂ ಸೇರಿದಂತೆ, ಬಹಳ ರೀತಿಗಳಲ್ಲಿ ಲಘು ಮತ್ತು ಮಧ್ಯಮ ಸಂಪರ್ಕ ಸ್ಪಾರಿಂಗ್ ಗಳಿಗಿಂತ ಭಿನ್ನವಾಗಿದೆ. ಪೂರ್ಣ-ಸಂಪರ್ಕ ಸ್ಪಾರಿಂಗ್ ನಲ್ಲಿ, ಒಂದು ಸ್ಪರ್ಧಾತ್ಮಕ ಪಂದ್ಯದ ಗುರಿಯು ಎದುರಾಳಿಯನ್ನು ಸದೆಬಡಿಯುವುದು ಅಥವಾ ಎದುರಾಳಿಯನ್ನು ಶರಣಾಗುವಂತೆ ಮಾಡುವುದಾಗಿರುತ್ತದೆ. ಪೂರ್ಣ-ಸಂಪರ್ಕ ಸ್ಪಾರಿಂಗ್ನಲ್ಲಿ ಹೆಚ್ಚು ವಿಸ್ತಾರವಾದ ವಗೆಗಳ ಸಮ್ಮತವಾದ ಹಲ್ಲೆಗಳು ಮತ್ತು ದೇಹದ ಮೇಲಿನ ಸಂಪರ್ಕ ವಲಯಗಳು ಸೇರಿರಬಹುದು.
ಅಂಕಗಳನ್ನ ದಾಖಲಿಸುತ್ತಿದ್ದರೆ, ಅದು ಒಂದು ರೀತಿಯ ಸ್ಪಷ್ಟ ವಿಜೇತನ್ಯಾರು ಎಂದು ಅನ್ಯ ವಿಧಾನದಲ್ಲಿ ನಿರ್ಧಾರಗೊಳ್ಳದಿದ್ದರೆ ಮಾತ್ರ ಬಳಸುವಂತಹ ಉಪವಿಧಿ; ಈಗ ಬಹುತೇಕವಾಗಿ ಯಾವುದಾದರೂ ಬಗೆಯ ತೀರ್ಪುಗಾರಿಕೆಯನ್ನು ಬೆಂಬಲವಾಗಿ ಬಳಸಿದಾಗ್ಯೂ, ಉಎಫ್ ಸಿ ೧ ನಂತಹ ಕೆಲವು ಸ್ಪರ್ಧೆಗಳಲ್ಲಿ ಅಂಕದಾಖಲೆಯೇ ಇರಲಿಲ್ಲ.[೧೮] ಈ ಕಾರಣಗಳಿಂದಾಗಿ ಪೂರ್ಣ-ಸಂಪರ್ಕ ಪಂದ್ಯಗಳು ಹೆಚ್ಚು ಆಕ್ರಮಣಕಾರಿ ಸ್ವಭಾವನ್ನು ಹೊಂದಿರುತ್ತವೆ. ಆದಾಗ್ಯೂ, ನಿಯಮಾವಳಿಗಳು ಸಂರಕ್ಷಕ ಕೈಗವಸುಗಳ ಬಳಕೆಯನ್ನು ವಿಧಿಸಬಹುದು ಮತ್ತು ತಲೆಯ ಹಿಂಬದಿಗೆ ಹೊಡೆಯುವಂತಹ ಕೆಲವು ರೀತಿಯ ತಂತ್ರಗಳನ್ನು ಅಥವಾ ಪಟ್ಟುಗಳನ್ನು ಪಂದ್ಯವೊಂದರಲ್ಲಿ ನಿಷಿದ್ಧಗೊಳಿಸಬಹುದು.
ಯುಎಫ್ ಸಿ,ಪಾನ್ಕ್ರೇಸ್, ಶೂಟೋಗಳಂತಹ ಬಹುತೇಕ ಎಲ್ಲ ಮಿಶ್ರ ಸಮರ ಕಲೆಗಳ ಪಂದ್ಯಾವಳಿಗಳು, ಹಾಗೇ ವೃತ್ತಿಪರ ಬಾಕ್ಸಿಂಗ್ ಸಂಸ್ಥೆಗಳು ಮತ್ತು ಕೆ-1, ಒಂದು ಪ್ರಕಾರದ ಪೂರ್ಣ-ಸಂಪರ್ಕ ನಿಯಮಗಳನ್ನು ಬಳಸುತ್ತವೆ. ಕ್ಯೋಕುಶಿನ್ ಕರಾಟೆಯಲ್ಲಿ ನುರಿತ ಅಭ್ಯಾಸಿಗಳು ಕೇವಲ ಒಂದು ಕರಾಟೆ ಗಿ ಮತ್ತು ಗ್ರಾಯಿನ್ ಸಂರಕ್ಷಕಗಳನ್ನು ಮಾತ್ರ ತೊಟ್ಟು, ಬೆರಳುಗಳ ಗಣಿಕೆಗೆ ಏನೂ ತೊಡದೆ (ಬರಿಗೈನಲ್ಲಿ), ಪೂರ್ಣ-ಸಂಪರ್ಕ ಸ್ಪಾರಿಂಗ್ ಮಾಡಬೇಕಿರುತ್ತದೆ. ಆದರೆ ಮುಖಕ್ಕೆ ಗುದ್ದು ನೀಡುವ ಹಾಗಿಲ್ಲ, ಕೇವಲ ಒದೆತಗಳು ಮತ್ತು ಮಂಡಿಯಿಂದ ಹೊಡೆತಗಳು. ಬ್ರೆಜಿಲ್ ನ ಜಿಯು-ಜಿಟ್ಸು ಮತ್ತು ಜೂಡೊ ಪಂದ್ಯಗಳು ಹೊಡೆತವನ್ನು ಬಿಡುವುದಿಲ್ಲ, ಆದರೆ ಅವುಗಳಲ್ಲಿ ಪಟ್ಟು ಹಾಕುವಾಗ ಮತ್ತು ಶರಣಾಗಿಸುವ ತಂತ್ರಗಳಲ್ಲಿ ಪೂರ್ಣ ಬಲವನ್ನು ಹಾಕುವ ದೃಷ್ಟಿಯಿಂದ, ಅವು ಪೂರ್ಣ ಸಂಪರ್ಕವೇ.
ಸ್ಪಾರಿಂಗ್ ಚರ್ಚೆಗಳು
ಬದಲಾಯಿಸಿನಿಯಮಗಳೊಂದಿಗಿನ ಕ್ರೀಡಾ ಪಂದ್ಯಗಳನ್ನು ಕೈ-ಕೈ ಕಾದಾಟದ ಸಾಮರ್ಥ್ಯ ಮತ್ತು ತರಬೇತಿಯ ಉತ್ತಮ ಅಳತೆಗೋಲಲ್ಲ ಎಂದು ಕೆಲವು ಅಭ್ಯಾಸಿಗಳು ನಂಬುತ್ತಾರೆ - ಈ ನಿರ್ಬಂಧಗಳು ನಿಜಜೀವನದ ಆತ್ಮರಕ್ಷಣಾ ಸನ್ನಿವೇಶಗಳಲ್ಲಿ ಪರಿಣಾಮಶೀಲತೆಯನ್ನು ತಡೆಯಬಹುದು ಎಂಬ ಕಾರಣದಿಂದ. ಈ ಅಭ್ಯಾಸಿಗಳು ಬಹುತೇಕ ವಿಧಗಳ ನಿಯಮಾಧಾರಿತ ಸಮರ ಕಲಾ ಸ್ಪರ್ಧೆಗಳಲ್ಲಿ (ಅತಿಕಡಿಚೆ ನಿಯಮಗಳನ್ನು ಹೊಂದಿದ ವಾಲೆ ಟೂಡೋನಂತಹದರಲ್ಲಿ ಕೂಡ) ಭಾಗವಹಿಸಲು ಇಚ್ಛಿಸದಿರಬಹುದು. ಬದಲಿಗೆ, ಕಾದಾಟದ ತಂತ್ರಗಳನ್ನು ಸ್ಪರ್ಧಾತ್ಮಕ ನಿಯಮಗಳಿಗೆ ಅಥವಾ ಬಹುಶಃ ನೈತಿಕ ಕಾಳಜಿಗಳಿಗೆ ಮತ್ತು ಕಾನೂನಿಗೆ (ಅಭ್ಯಾಸ ಮಾಡುವ ತಂತ್ರಗಳು ಎದುರಾಳಿಯನ್ನು ಕೊಲ್ಲುವ ಅಥವಾ ಅಪಾಂಗಗೊಳಿಸುವ ಗುರಿ ಹೊಂದಿರಬಹುದು) ಯಾವುದೇ ಗಮನ ಕೊಡದೆ ಅಥವಾ ಸ್ವಲ್ಪ ಗಮನ ಮಾತ್ರ ಕೊಟ್ಟು ಅಧ್ಯಯನ ಮಾಡಲು ಆಯ್ಕೆ ಮಾಡಿಕೊಳ್ಳಬಹುದು. ಮತ್ತಿತರರು - ನಿರ್ಣಯಕರ್ತ ಮತ್ತು ಪಣದಲ್ಲಿ ಒಬ್ಬ ವೈದ್ಯನಂತಹ ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ಸ್ಪಾರಿಂಗ್, ನಿರ್ದಿಷ್ಟವಾಗಿ ಮೂಲಭೂತ ನಿಯಮಗಳೊಂದಿ ಪೂರ್ಣ-ಸಂಪರ್ಕ ಪಂದ್ಯಗಳು ಒಬ್ಬ ವ್ಯಕ್ತಿಯ ಒಟ್ಟು ಕಾದಾಟದ ಸಾಮರ್ಥ್ಯದ ಒಂದು ಉಪಯುಕ್ತ ಅಳತೆಗೋಲಾಗಿ ಕೆಲಸಕ್ಕೆ ಬರುತ್ತದೆ ಎಂದೂ, ತಡೆಯೊಡ್ಡುವ ಓರ್ವ ಎದುರಾಳಿಯ ವಿರುದ್ಧ ತಮ್ಮ ತಂತ್ರಗಳನ್ನು ಪರೀಕ್ಷಿಸುವಲ್ಲಿ ವಿಫಲವಾಗುವುದು ಆತ್ಮರಕ್ಷಣೆಯ ಸನ್ನವೇಶಗಳಲ್ಲಿನ ಸಾಮರ್ಥ್ಯವನ್ನು ಮೊಟುಕುಗೊಳಿಸುವ ಸಾಧ್ಯತೆ ಹೆಚ್ಚು ಎಂದೂ ಅಭಿಪ್ರಾಯಪಡುತ್ತಾರೆ.
ಸಮರ ಕ್ರೀಡೆ
ಬದಲಾಯಿಸಿಸ್ಪಾರಿಂಗ್ ನ ಪ್ರಕಾರಗಳು ಸ್ಪರ್ಧಾತ್ಮಕಗೊಂಡಾಗ - ಪಾಶ್ಚಿಮಾತ್ಯ ಫೆನ್ಸಿಂಗ್ ನಲ್ಲಾಗಿರುವಂತೆ, ತನ್ನದೇ ಹಕ್ಕಿನಲ್ಲಿ ತನ್ನ ಮೂಲ ಕಾದಾಟದ ಮೂಲದಿಂದ ನಂಟುಕಡೆದುಕೊಂಡು ಒಂದು ಕ್ರೀಡೆಯಾಗಿದಾಗ - ಸಮರ ಕಲೆಗಳು ಕ್ರೀಡೆಗಳೊಳಕ್ಕೆ ಸೇರಿದವು. ಬೇಸಿಗೆ ಒಲಂಪಿಕ್ ಕ್ರೀಡೆಗಳಲ್ಲಿ ಜೂಡೊ, ಟಯೆಕ್ವೋಡೊ, ಪಾಶ್ಚಿಮಾತ್ಯ ಬಿಲ್ಲುಗಾರಿಕೆ, ಬಾಕ್ಸಿಂಗ್, ಜಾವೆಲಿನ್, ಕುಸ್ತಿ ಮತ್ತು ಫೆನ್ಸಿಂಗ್ ಗಳು ಆಟದ ವಿಭಾಗಳಾಗಿ ಸೇರಿವೆ. ಹಾಗೇ ಚೀನಾದ ವುಶು, ಇವುಗಳೊಂದಿಗೆ ಸೇರುವ ತನ್ನ ಪ್ರಯತ್ನದಲ್ಲಿ ಇತ್ತೀಚೆಗೆ ಸೋತಿತಾದರೂ ಜಗತ್ತಿನಾದ್ಯಂತ ಪಂದ್ಯಾವಳಿಗಳ್ಲಿ ಇನ್ನೂ ಕ್ರಿಯಾಶೀಲವಾಗಿ ಪ್ರದರ್ಶಿಸಲ್ಪಡುತ್ತದೆ. ಕಿಕ್ ಬಾಕ್ಸಿಂಗ್ ಮತ್ತು ಬ್ರೆಜಿಲ್ ನ ಜಿಯು-ಜಿಟ್ಸುದಂತಹ ಕೆಲವು ಕಲೆಗಳ ಅಭ್ಯಾಸಿಗಳು ಬಹು ಬಾರಿ ಕ್ರೀಡಾಪಂದ್ಯಗಳಿಗೆ ತರಬೇತಿ ಪಡೆಯುತ್ತಾರೆ, ಅದೇ ಐಕೀಡೊಮತ್ತು ವಿಂಗ್ ಚುನ್ನಂತಹ ಇತರ ಕಲೆಗಳ ಅಭ್ಯಾಸಿಗಳು ಸಾಮಾನ್ಯವಾಗಿ ಈ ತೆರನ ಸ್ಪರ್ಧೆಗಳನ್ನು ಧಿಕ್ಕರಿಸುತ್ತಾರೆ. ಕೆಲವು ಶಾಲೆಗಳು, ಸ್ಪರ್ಧೆಯು ಹೆಚ್ಚು ಉತ್ತಮ ಮತ್ತು ದಕ್ಷ ಅಭ್ಯಾಸಿಗಳನ್ನು ಸೃಷ್ಟಿಸುತ್ತದೆ, ಮತ್ತು ಎಂದು ಉತ್ತಮ ಕ್ರೀಡಾ ಮನೋಭಾವವನ್ನು ಕೊಡುತ್ತದೆ ಎಂದು ನಂಬುತ್ತಾರೆ. ಯಾವ ನಿಯಮಗಳಡಿ ಸ್ಪರ್ಧೆ ನಡೆಯುತ್ತದೆಯೋ ಅವು ಸಮರ ಕಲೆಗಳ ಕಾದಾಟದ ಪರಿಣಾಮಶೀಲತೆಯನ್ನು ಕಡಿಮೆ ಮಾಡಿವೆ ಅಥವಾ ನಿರ್ದಿಷ್ಟ ನೈತಿಕ ಸ್ವಭಾವವನ್ನು ಬೆಳೆಸುವುದರ ಬಗ್ಗೆ ಗಮನವಿರಿಸುವುದಕ್ಕಿಂತ ಫಲಕಗಳನ್ನು ಗೆಲ್ಲುವ ಬಗ್ಗೆ ಗಮನ ನೀಡುವ ರೀತಿಯ ಒಂದು ಅಭ್ಯಾಸವನ್ನು ಪೋಷಿಸುತ್ತದೆ ಎಂದು ಮತ್ತೆ ಕೆಲವರು ನಂಬುತ್ತಾರೆ.
"ಯಾವುದು ಸರ್ವೋತ್ತಮ ಸಮರ ಕಲೆ"ಎಂಬ ಪ್ರಶ್ನೆಯು ಹೊಸ ಪ್ರಕಾರಗಳ ಸ್ಪರ್ಧೆಗೆ ಕಾರಣವಾಗಿದೆ; ಅಮೇರಿಕಾದಲ್ಲಿನ ಮೂಲ ಅಲ್ಟಿಮೇಟ್ ಫೈಟಿಂಗ್ ಚಾಂಪಿಯನ್ ಶಿಪ್, ಎಲ್ಲ ಸಮರ ಕಲೆಗಳ ಶೈಲಿಗಳಿಗೆ ಪ್ರವೇಶಿಸಲು ಅನುವು ಮಾಡಿಕೊಟ್ಟ ಮತ್ತು ನಿಯಮಗಳ ಕಂತಿನಿಂದ ನಿಯಮಿತಗೊಳ್ಳದಿರಲೆಂದು ಕೆಲವೇ ಕೆಲವು ನಿಯಮಗಳಡಿ ಹೋರಾಡಲ್ಪಟ್ಟಿತು. ಇದು ಈಗ ಮಿಶ್ರ ಸಮರ ಕಲೆಗಳು(ಎಂಎಂಎ) ಎಂದು ಕರೆಯಲ್ಪಡುವ ಪ್ರತ್ಯೇಕ ಕಾದಾಟದ ಕ್ರೀಡೆಯಾಗಿದೆ. 0}ಪಾನ್ಕ್ರೇಸ್, ಡ್ರೀಮ್ ಮತ್ತು ಶೂಟೋ ನಂತಹ ಅದೇ ರೀತಿಯ ಸ್ಪರ್ಧೆಗಳು ಕೂಡ ಜಪಾನಿನಲ್ಲಿ ನಡೆದಿವೆ.
ಕೆಲವು ಸಮರ ಕಲಾವಿದರು ಬ್ರೇಕಿಂಗ್ ನಂತಹ ಸ್ಪಾರಿಂಗ್ ಅಲ್ಲದ ಸ್ಪರ್ಧೆಗಳಲ್ಲಿ ಅಥವಾ ಪೂಮ್ಸೆ, ಕಟ ಅಥವಾ ಅಕ ದಂತಹ ತಂತ್ರಗಳ ನೃತ್ಯಸಂಯೋಜಿತ ಸರಣಿಗಳಲ್ಲಿ ಅಥವಾ ಟ್ರಿಕ್ಕಿಂಗ್ ನಂತಹ ನೃತ್ಯಪ್ರಭಾವಿತ ಸ್ಪರ್ಧೆಗಳು ಸೇರುವ ಸಮರ ಕಲೆಗಳ ಆಧುನಿಕ ಪ್ರಭೇದಗಳಲ್ಲಿ ಸ್ಪರ್ಧಿಸುತ್ತಾರೆ. ರಾಜಕೀಯ ಉದ್ದೇಶಗಳಿಗಾಗಿ ಸಮರ ಪರಂಪರೆಗಳು ಹೆಚ್ಚು ಕ್ರೀಡೆಗಳಂತೆ ಆಗಲು ಸರ್ಕಾರಗಳಿಂದ ಪ್ರಭಾವಿತಗೊಂಡಿವೆ; ಚೀನೀ ಸಮರ ಕಲೆಗಳನ್ನು ಸಮಿತಿ-ನಿಯಂತ್ರಿತ ಕ್ರೀಡೆ, ವುಶು ಆಗಿ ಮಾರ್ಪಡಿಸುವ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾದ ಪ್ರಯತ್ನದ ಮುಖ್ಯ ಕಾರಣವೆಂದರೆ - ಅವರು ಕ್ರಾಂತಿಕಾರಿ ಬಲವುಳ್ಳದ್ದೆಂದು ಕಂಡ ಸಮರ ತರಬೇತಿಯ ಕೆಲವು ಆಯಾಮಗಳನ್ನು, ವಿಶೇಷವಾಗಿ ಕೌಟುಂಬಿಕ ಪೀಳಿಗೆಗಳ ಪಾರಂಪರಿಕ ಪದ್ಧತಿಯಡಿ, ಸದೆಬಡಿಯುವುದಾಗಿತ್ತು.[೧೯]
ನೃತ್ಯ
ಬದಲಾಯಿಸಿಮೇಲೆ ಹೇಳಿದಂತೆ, ಕೆಲವು ಸಮರ ಕಲೆಗಳು ಬೇರೆ ಬೇರೆ ಸಂಸ್ಕೃತಿಗಳಲ್ಲಿ ಬೇರೆ ಬೇರೆ ಕಾರಣಗಳಿಗಾಗಿ - ಉದಾಹರಣೆಗೆ ಯುದ್ಧಕ್ಕೆ ಸಜ್ಜಾಗುವುದರಲ್ಲಿ ಕಿಚ್ಚನ್ನು ಹತ್ತಿಸಲು ಅಥವಾ ಹೆಚ್ಚು ಶೈಲೀಕೃತ ರೀತಿಯಲ್ಲಿ ಕೌಶಲ್ಯವನ್ನು ತೋರಿಸಿಕೊಳ್ಳುವುದಕ್ಕಾಗಿ - ನೃತ್ಯದಂತಹ ಸಚ್ಚಿಕೆಗಳಲ್ಲಿ ಪ್ರದರ್ಶಿಸಲ್ಪಡಬಹುದು. ಆ ರೀತಿಯ ಎಷ್ಟೋ ಸಮರ ಕಲೆಗಳು ಸಂಗೀತವನ್ನು, ವಿಶೇಷವಾಗಿ ಚರ್ಮವಾದ್ಯಗಳ ರಾಗಗಳನ್ನು ಅಳವಡಿಸಿಕೊಳ್ಳುತ್ತವೆ.
ಆ ರೀತಿಯ ಯುದ್ಧ ನೃತ್ಯಗಳ ಉದಾಹರಣೆಗಳಲ್ಲಿ ಇವು ಸೇರಿವೆ:
-
- ಆರ್ದಾ - ಕುವೈತ್ ನಲ್ಲಿ
- ತಹ್ತೀಬ್ ಈಜಿಪ್ಟ್ ನ ಮೇಲ್ಭಾಗದಲ್ಲಿ
- ಬೂಜಾ - ರಷ್ಯಾದಿಂದ
- ಪ್ಯಾಂಥರ್ ನೃತ್ಯ - ಬರ್ಮೀಯ ಬ್ಯಾಂಡೊ ಕತ್ತಿಗಳ ಧ ದೊಂದಿಗೆ
- ಜಿಮ್ನೋಪಾಯಿಡಿಯಾಯಿ - ಪುರಾತನ ಕಾಲದ ಸ್ಪಾರ್ಟ
- ಯುರೋಪೀಯ ಕತ್ತಿ ನೃತ್ಯ ಅಥವಾ ಬೇರೆ ಬೇರೆ ರೀತಿಯ ಆಯುಧ ನೃತ್ಯ
- ಹಕ - ನ್ಯೂಜಿಲೆಂಡ್
- ಸಬ್ರೆ ನೃತ್ಯ -ಖಚಾತೂರಿಯನ್ ನ ಬ್ಯಾಲೆ ಗಯನೆ ಯಲ್ಲಿ ಚಿತ್ರಿಸಲಾದುದು
- ಮಾಸಾಯಿ ಮೊರಾನ್ (ಯೋಧನ ವಯಸ್ಸು-ಜೋಡಿ) ನೃತ್ಯಗಳು
- ಅಡುಕ್-ಅಡುಕ್ - ಬ್ರೂನೈ
- ಆ'ರ್ದಾ - ಖತಾರ್
- ಖಟ್ಟಕ್ ನೃತ್ಯ - ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ
- ಬ್ರೆಜಿಲ್ ನ ಕಾಪೊಯೈರ ಹಾಗೇ ಸ್ವಲ್ಪ ಹೋಲುವ ಆಫ್ರೊ-ಕರಿಬ್ಬಿಯನ್ ಕಲೆಗಳು
- ದನ್ನ್ಸ ಬಯೊದಗ್- ಸ್ಕಾಟ್ ಲ್ಯಾಂಡ್ ಮತ್ತು ಸ್ಕಾಟಿಷ್ ಕತ್ತಿ ನೃತ್ಯಗಳು
- ಹುಲ ಮತ್ತು ಲುವ- ಹವಾಯಿಯ ಸ್ವದೇಶೀ ಪರಂಪರೆಗಳಿಂದ
- ಕಾಂಬಾಟ್ ಹೊಪಕ್ - ಯುಕ್ರೈನ್ ನಿಂದ
- ಮಚೆತೆರೊ ಕೊಲೊಂಬಿಯಾ.
- ಯೋಲಾಹ್ - ಓಮನ್/ ಯುಎಇಯಿಂದ
- ತಮುನನ್ಗ್ಯು - ವೆನೆಜುಯೆಲಾದ ಪಾರಂಪರಿಕ ಹೊಡೆದಾಟದ ಶೈಲಿ ಎಲ್ ಜ್ಯೂಗೊದೆಲ್ ಗರ್ರೋಟೆದ ಮೇಲೆ ಆಧಾರಿತ, ಅಮೇರಿಕಾದ ಸ್ನಾನಿಷ್ ವಸಾಹತತೀಕರಣದ ಕಾಲದಲ್ಲಿ ಯುರೋಪೀಯ ಫೆನ್ಸಿಂಗ್ ನಿಂದ ಪ್ರಭಾವಿತವಾದುದು
ಉಪಯೋಗಗಳು ಮತ್ತು ಫಲಗಳು
ಬದಲಾಯಿಸಿಪ್ರಾರಂಭದಲ್ಲಿ, ಸಮರ ಕಲೆಗಳ ಉದ್ದೇಶವು ಆತ್ಮ-ರಕ್ಷಣೆ ಮತ್ತು ಜೀವವನ್ನು ಕಾಪಾಡಿಕೊಳ್ಳುವುದಾಗಿತ್ತು. ಇಂದು , ಈ ಅಗತ್ಯಗಳು ಅಸ್ತಿತ್ವದಲ್ಲಿ ಮುಂದುವರೆದಿವೆ ಆದರೆ, ಈಗ ಓರ್ವ ವ್ಯಕ್ತಿಯು ಅದರಲ್ಲೇ ತೊಡಗಿಕೊಳ್ಳುವುದಕ್ಕೆ ಪ್ರಾಥಮಿಕ ಕಾರಣವಾಗಿ ಉಳಿದಿಲ್ಲ. ಸಮರ ಕಲೆಗಳಲ್ಲಿನ ತರಬೇತಿಯು ತರಬೇತಿಹೊಂದುವವನಿಗೆ ಅನೇಕ ಫಲಗಳನ್ನು - ದೈಹಿಕ ಮತ್ತು ಆಧ್ಯಾತ್ಮಿಕ - ನೀಡುತ್ತದೆ ಸಮರ ಕಲೆಗಳ ವ್ಯವಸ್ಥಿತ ಅಭ್ಯಾಸದ ಮೂಲಕ, ಒಬ್ಬ ವ್ಯಕ್ತಿಯ ಶಾರೀರಿಕ ಆರೋಗ್ಯವು ಹೆಚ್ಚುತ್ತದೆ (ಶಕ್ತಿ,ಕಸುವು ,ಚಟುಲತೆ, ಚಲನವಲನಗಳ ಮೇಳೈಸುವಿಕೆ ಇತ್ಯಾದಿ), ಏಕೆಂದರೆ ಇಡೀ ದೇಹವು ವ್ಯಾಯಾಮಕ್ಕೊಳಪಡುತ್ತದೆ ಮತ್ತು ಇಡೀ ಮಾಂಸ ಖಂಡವನ್ನೇ ಉದ್ದೀಪನಗೊಳಿಸಲಾಗುತ್ತದೆ. ಸರಿಯಾದ ಉಸಿರಾಟದ ತಂತ್ರಗಳ ಕಲಿಕೆ ಮತ್ತು ಒಂದು ಉತ್ತಮಗೊಂಡ ಮತ್ತು ಪರಿಪೂರ್ಣ ಆಹಾರಕ್ರಮಗಳನ್ನು ಸಂಬಂಧಿಸಿದಂತೆ, ಪ್ರಸ್ತುತ ಸಮಾಜದ ಮತ್ತು ಜಡ ಜೀವನದ, ಮತ್ತು ಸಾಮಾನ್ಯವಾಗಿ, ಒಂದು ದುರ್ಬಲಗೊಂಡ ರೋಗನಿರೋಧಕ ವ್ಯವಸ್ಥೆಯ ಹಲವಾರು ಸಮಸ್ಯೆಗಳನ್ನು ಮತ್ತು ರೋಗಗಳನ್ನು ಎದುರಿಸಲು ಸಮರ ಕಲೆಗಳು ಒಂದು ಪರಿಣಾಮಕಾರಿ ಮಾರ್ಗ.
ಆತ್ಮ-ನಿಯಂತ್ರಣ, ಬದ್ಧತೆ ಮತ್ತು ಏಕಾಗ್ರತೆಗಳು ತರಬೇತಿ ಹೊಂದುವವನ ಗುಣಗಳಾಗಿರುತ್ತವೆ ಮತ್ತು ಈತ ಯಾವಾಗಲೂ ದಚನಾತ್ಮಕವಾಗಿ ಮತ್ತು ಪರಿಸ್ಥಿತಿಗಳು ಅಗತ್ಯವೊಡ್ಡಿದಾಗ ಒತ್ತಡವಿಲ್ಲದೆ ಪ್ರತಿಕ್ರಿಯಿಸುತ್ತಾನೆ. ಆತ್ಮರಕ್ಷಣೆ ,ಮತ್ತು ಬಲಿಷ್ಠ ಆತ್ಮ-ನಿಯಂತ್ರಣವು ಗಂಭೀರ ತರಬೇತಿಯಿಂದ ಫಲಿಸುತ್ತವೆ, ಪ್ರತಿ ವ್ಯಕ್ತಿಯೂ ತಮ್ಮ ಬಗ್ಗೆಯೇ ಕಲಿತುಕೊಳಳ್ಳುತ್ತಾನೆ, ಮತ್ತು ಕೇವಲ ಅವರ ಸಾಮರ್ಥ್ಯಗಳಷ್ಟೇ ಉತ್ತಮಗೊಳ್ಳುವುದಿಲ್ಲ, ಬದಲಿಗೆ ಅವರ ಗೌರವ ಮತ್ತು ನ್ಯಾಯದ ಭಾವನೆಯೂ ಬೆಳೆಯುತ್ತದೆ.
ಬ್ರೂಸ್ ಲೀಯ ಪ್ರಕಾರ, ಭಾವನಾತ್ಮಕ ಸಂಪರ್ಕ ಮತ್ತು ಸಂಪೂರ್ಣ ಭಾವನಾತ್ಮಕ ಪ್ರಕಟಣೆ ಹೊಂದಿರುವುದರಿಂದ ಸಮರ ಕಲೆಗಳು ಕೂಡ ಒಂದು ಕಲೆಯ ಸ್ವಭಾವವನ್ನು ಹೊಂದಿವೆ. ಸಮರ ಕಲೆಗಳನ್ನು ಒಬ್ಬ ವ್ಯಕ್ತಿಯು ತನ್ನು ಮತ್ತು ತನ್ನ ಪರಿಸರವನ್ನು ಅರಿತುಕೊಳ್ಳಲು ಒಂದು ಮಾರ್ಗ ಎಂದೂ ಬಣ್ಣಿಸಬಹುದು.
ಇವನ್ನೂ ನೋಡಿ
ಬದಲಾಯಿಸಿ- ಸಮರ ಕಲೆಗಳ ಐತಿಹಾಸಿಕ ಮೈಲಿಗಲ್ಲುಗಳ ಕಾಲರೇಖೆಗಾಗಿ , ಸಮರ ಕಲೆಗಳ ಕಾಲರೇಖೆಯನ್ನು ನೋಡಿ.
- ಸಮರ ಕಲೆಗಳ ಆಯುಧಗಳ ವಿವರವಾದ ಪಟ್ಟಿಗಾಗಿ, ಸಮರ ಕಲೆಗಳ ಆಯುಧಗಳ ಪಟ್ಟಿಯನ್ನು ನೋಡಿ
ಶೈಲಿಗಳು
ಬದಲಾಯಿಸಿಕಾಲ ಕಳೆದಂತೆ, ಸಮರ ಕಲೆಗಳ ಸಂಖ್ಯೆಯು ಬೆಳೆದಿವೆ, ಮತ್ತು ಪ್ರಸ್ತುತ ಜಗತ್ತಿನಾದ್ಯಂತ ನೂರಾರು ಶಾಲೆಗಳು ಮತ್ತು ಸಂಸ್ಥೆಗಳು ಅಸಂಖ್ಯಾತ ಗುರಿಗಳೆಡೆಗೆ ದುಡಿಯುತ್ತಾ ಮತ್ತು ಬೃಹತ್ ವೈವಿಧ್ಯಗಳ ಶೈಲಿಗಳನ್ನು ಆಭ್ಯಸಿಸುತ್ತಾ, ಸಮರ ಕಲೆಗಳು ಬಹುಗುಣಗೊಂಡಿವೆ.
- ಸಮರ ಕಲೆಗಳ ಶೈಲಿಗಳ ವಿವರವಾದ ಪಟ್ಟಿಗಾಗಿ, ನೋಡಿ: ಸಮರ ಕಲೆಗಳ ಪಟ್ಟಿ
- ಕಾಲ್ಪನಿಕ ಸಮರ ಕಲೆಗಳ ವಿವರವಾದ ಪಟ್ಟಿಗಾಗಿ, ನೋಡಿ ಕಾಲ್ಪನಿಕ ಸಮರ ಕಲೆಗಳ ಪಟ್ಟಿ
ಬಾಹ್ಯ ಕೊಂಡಿಗಳು
ಬದಲಾಯಿಸಿ- Martial arts ಓಪನ್ ಡೈರೆಕ್ಟರಿ ಪ್ರಾಜೆಕ್ಟ್
ಆಕರಗಳು
ಬದಲಾಯಿಸಿ- ↑ "ಬೇರೆ ಬೇರೆ ಕಲೆಗಳಿಂದ ಪ್ರಕಾರಗಳ ತುಣುಕುಗಳು". Archived from the original on 2008-10-20. Retrieved 2010-05-13.
- ↑ ಆಂತರಿಕ ಕುಂಗ್ ಫು
- ↑ Spring, Christopher (1989). Swords and Hilt Weapons. London: Weidenfeld and Nicolson. pp. 204–217. ISBN ????.
{{cite book}}
: Check|isbn=
value: invalid character (help); Cite has empty unknown parameter:|coauthors=
(help) - ↑ Brewer, Douglas J. (2007). Egypt and the Egyptians (2nd ed. ed.). Cambridge: Cambridge University Press. ISBN 0521851505.
{{cite book}}
:|edition=
has extra text (help)ಪುಟ 120 - ↑ Shaw, Ian (1999). Egyptian Warfare and Weapons. Oxford: Shire Publications. ISBN 0747801428., ಅಧ್ಯಾಯ, 5
- ↑ ಯುಎಫ್ ಸಿ ಯಲ್ಲಿ ಬಳಸುವ ಕಾದಾಟ ಕಲೆ
- ↑ http://www.sonshi.com/why.html
- ↑ ರೀಡ್, ಹೊವರ್ಡ್ ಮತ್ತು ಕ್ರೌಚರ್, ಮೈಕೆಲ್. ದ ವೇ ಆಫ್ ದ ವಾರಿಯರ್ - ದ ಪಾರಡಾಕ್ಸ್ ಆಫ್ ದ ಮಾರ್ಷಿಯಲ್ ಆರ್ಟ್ಸ್" ನ್ಯೂಯಾರ್ಕ್. Overlook Press: 1983.ಓವರ್ ಲುಕ್ ಪ್ರೆಸ್: 1983
- ↑ "ಆರ್ಕೈವ್ ನಕಲು". Archived from the original on 2009-08-18. Retrieved 2010-05-13.
- ↑ ಆರ್ಡರ್ ಆಫ್ ದ ಶಾವೊಲಿನ್ ಚಾ'ನ್ (2004, 2006). ದ ಶಾವೊಲಿನ್ ಗ್ರಾಂಡ್ ಮಾಸ್ಟರ್ಸ್ ಟೆಕ್ಸ್ಟ್: ಹಿಸ್ಟರಿ, ಫಿಲಾಸಫಿ ಅಂಡ್ ಗುಂಗ್ ಫು ಆಫ್ ಶಾವೊಲಿನ್ ಚಾ'ನ್' ಒರೆಗಾನ್
- ↑ http://www.thefreedictionary.com/Asia
- ↑ ೧೨.೦ ೧೨.೧ ೧೨.೨ ಜರ್ರಿಲ್ಲಿ, ಫಿಲಿಪ್ ಬಿ.1998). ವೆನ್ ದ ಬಾಡಿ ಬಿಕಮ್ಸ್ ಆಲ್ ಐಸ್: ಪಾರಡಿಗ್ಮ್ಸ್, ಡಿಸ್ಕೋರ್ಸಸ್ ಅಂಡ್ ಪ್ರಾಕ್ಟೀಸಸ್ ಆಫ್ ಪವರ್ ಇನ್ ಕಲರಿಪ್ಪಯಟ್ಟು, ಎ ಸೌತ್ ಇಂಡಿಯನ್ ಮಾರ್ಷಿಯಲ್ ಆರ್ಟ್. ಆಕ್ಸ್ ಫರ್ಡ್: ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ, ಭಾರತ. ISBN 0486200701
- ↑ Luijendijk, D.H. (2005). Kalarippayat: India's Ancient Martial Art. Boulder: Paladin Press. ISBN 1581604807. Archived from the original on 2009-08-18. Retrieved 2010-05-13.
- ↑ http://sports.indiapress.org/thang_ta.php
- ↑ Vail, Jason (2006). Medieval and Renaissance Dagger Combat. Paladin Press. pp. 91–95.
{{cite book}}
: Cite has empty unknown parameter:|coauthors=
(help) - ↑ Sean Rayment (12/06/2004). "British battalion 'attacked every day for six weeks'". The Daily Telegraph. Telegraph Media Group Limited. Archived from the original on 3 ಜನವರಿ 2008. Retrieved 11 December 2008.
{{cite web}}
: Check date values in:|date=
(help) - ↑ "Aliveness 101". Straight Blast gym. Archived from the original on 2009-01-07. Retrieved 2008-11-03. - ತರಬೇತಿಯಲ್ಲಿ ಸಂಪರ್ಕ ಮಟ್ಟಗಳ ಬಗೆಗಿನ ಒಂದು ಪ್ರಬಂಧ
- ↑ Dave Meltzer, (November 12, 2007). "First UFC forever altered combat sports". Yahoo! Sports. Retrieved 2008-11-03.
{{cite web}}
: CS1 maint: extra punctuation (link) - ↑ Fu, Zhongwen (1996, 2006). Mastering Yang Style Taijiquan. Translated by Louis Swaine. Berkeley, California: Blue Snake Books. ISBN (trade paper).
{{cite book}}
: Check|isbn=
value: invalid character (help); Check date values in:|year=
(help)CS1 maint: year (link)