ವಿಕಿಪೀಡಿಯ:ಸಂಪಾದನೋತ್ಸವಗಳು/ವಿಜ್ಞಾನ, ತಂತ್ರಜ್ಞಾನ ಲೇಖನಗಳ ಎರಡನೇ ಸಂಪಾದನೋತ್ಸವ ೨೦೧೬

ಕನ್ನಡ ವಿಕಿಪೀಡಿಯದ ಹದಿಮೂರನೇ ವರ್ಷಾಚರಣೆಯ ಅಂಗವಾಗಿ ವಿಜ್ಞಾನ, ತಂತ್ರಜ್ಞಾನ ಲೇಖನಗಳಿಗೆ ಸಂಬಂಧಿಸಿದಂತೆ ಸಂಪಾದನೋತ್ಸವ ಒಂದನ್ನು ಬೆಂಗಳೂರಿನ ಟೆಕ್ಸಾಸ್ ಇನ್ಸ್‍ಸ್ಟ್ರುಮೆಂಟ್‍ನಲ್ಲಿ ನಡೆಸಲಾಗಿತ್ತು. ಈಗ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಎರಡನೇ ಸಂಪಾದನೋತ್ಸವನ್ನು ೨೦೧೬ ಏಪ್ರಿಲ್ ೯, ೧೦ ದಿನಾಂಕಗಳಂದು ನಡೆಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ವಿಜ್ಞಾನ ಪಠ್ಯ ಲೇಖನಗಳ ಯೋಜನೆ ಪಟ್ಟಿಯಲ್ಲಿರುವ ವಿಷಯಗಳನ್ನು ತೆಗೆದುಕೊಂಡು ಹೊಸಪುಟಗಳನ್ನು ರಚಿಸಬಹುದು, ಈಗಿರುವ ಲೇಖನಗಳನ್ನು ಉತ್ತಮಪಡಿಸಬಹುದು ಮತ್ತು ಇಂಗ್ಲೀಷ್ ವಿಕಿಯಿಂದ ಅನುವಾದ ಮಾಡಬಹುದು. ಇದಲ್ಲದೇ ವಿಜ್ಞಾನ, ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯವನ್ನಾದರೂ ಸಹ ತೆಗೆದುಕೊಳ್ಳಬಹುದು. ಇದು ಬೆಂಗಳೂರಿನ ಸಿ.ಐ.ಎಸ್. ಕಛೇರಿಯಲ್ಲಿ ನಡೆಯಲಿದೆ. ಅಲ್ಲಿಗೆ ಬರಲು ಸಾಧ್ಯವಾಗದ ವಿಕಿಪಿಡಿಯನ್ನರು ತಾವಿರುವ ಸ್ಥಳದಿಂದಲೇ ಆನ್ಲೈನ್ ಮೂಲಕ ಭಾಗವಹಿಸಬಹುದು.

ದಿನಾಂಕಗಳು ಮತ್ತು ಸ್ಥಳ

ಬದಲಾಯಿಸಿ
  • ದಿನಾಂಕ: 09, 10 ಏಪ್ರಿಲ್ 2016 (ಶನಿವಾರ, ಭಾನುವಾರ)
  • ಸಮಯ: ಬೆಳಗ್ಗೆ ೧೦ರಿಂದ ಸಂಜೆ ೫ (ಆನ್ ಲೈನ್ ಭಾಗವಹಿಸುವವರಿಗೆ ಸಮಯ ಮಿತಿ ಇಲ್ಲ)
  • ಸ್ಥಳ: ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿ, ದೊಮ್ಮಲೂರು, ಬೆಂಗಳೂರು
  • ವಿಳಾಸ: No. 194, 2nd ‘C’ Cross, Domlur, 2nd Stage, Bengaluru, 560071 (ಗೂಗಲ್ ನಕ್ಷೆ ಕೊಂಡಿ)

ಕಾರ್ಯಕ್ರಮ ವಿವರ

ಬದಲಾಯಿಸಿ
  • ವಿಜ್ಞಾನ ಪಠ್ಯ ಲೇಖನಗಳ ಯೋಜನೆ ಪಟ್ಟಿಯಲ್ಲಿರುವ ವಿಷಯಗಳ ಪುಟ ರಚನೆ, ಉತ್ತಮಗೊಳಿಸುವಿಕೆ, ವಿಸ್ತರಣೆ.
  • ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದ ಸಂಬಂಧಿತ ವಿಷಯಗಳ ಪುಟಗಳ ರಚನೆ.
  • ಹಿಂದಿನ ಸಂಪಾದನೋತ್ಸವದಲ್ಲಿ ರಚಿಸಿದ ಪುಟಗಳ ವಿಸ್ತರಣೆ/ತಿದ್ದುವಿಕೆ/ಉತ್ತಮಗೊಳಿಸುವಿಕೆ.
  • ಈಗಾಗಲೇ ವಿಕಿಪೀಡಿಯದಲ್ಲಿರುವ ವಿಜ್ಞಾನ, ತಂತ್ರಜ್ಞಾನ ವಿಷಯದ ಪುಟಗಳ ಉತ್ತಮಗೊಳಿಸುವಿಕೆ.
  • ಸಿ.ಐ.ಎಸ್.ಕಛೇರಿಗೆ ಬರುವವರು ತಮ್ಮ ಲ್ಯಾಪ್-ಟಾಪ್ ತಂದರೆ ಅಂತರಜಾಲ ಸಂಪರ್ಕ ಸೌಲಭ್ಯವಿದೆ.
  • ಲ್ಯಾಪ್ ಟಾಪ್ ತರಲು ಆಗದಿದ್ದವರಿಗೆ ಗಣಕಗಳ ವ್ಯವಸ್ಥೆ ಮಾಡಬಹುದು. (ನೊಂದಾವಣೆಯಲ್ಲಿ ಉಲ್ಲೇಖಿಸಿ)
  • ಊಟ, ತಿನಿಸು ವ್ಯವಸ್ಥೆ ಇರುತ್ತದೆ.

ಸಂಪನ್ಮೂಲ ವ್ಯಕ್ತಿ

ಬದಲಾಯಿಸಿ

ಭಾಗವಹಿಸಲು ಬಯಸುವವರು

ಬದಲಾಯಿಸಿ

ಸಿ.ಐ.ಎಸ್. ಕಛೇರಿಗೆ ಬಂದು ಭಾಗವಹಿಸುವವರು ಈ ಕೆಳಗೆ ನೋಂದಾಯಿಸಿ

ಆನ್ ಲೈನ್ ಭಾಗವಹಿಸಲು ಬಯಸುವವರು

ಬದಲಾಯಿಸಿ

ಸಿ.ಐ.ಎಸ್. ಕಛೇರಿಗೆ ಬರದೇ ತಾವಿರುವಲ್ಲಿಂದಲೇ ಭಾಗವಹಿಸಲು ಬಯಸುವವರು ಈ ಕೆಳಗೆ ನೋಂದಾಯಿಸಿ.

ಪ್ರಶ್ನೆ/ಚರ್ಚೆ/ಸ್ಪಷ್ಟೀಕರಣಗಳು

ಬದಲಾಯಿಸಿ

ಇಂಗ್ಲೀಶ್ ಪದಗಳಿಗೆ ಸೂಕ್ತ ಪದಗಳನ್ನು, ಪಾರಿಭಾಷಿಕ ಪದಗಳನ್ನು ಹುಡುಕಲು ಈ ಶಬ್ದಕೋಶಗಳ ಸಹಾಯ ಪಡೆಯಬಹುದು.

ಭಾಗವಹಿಸಿದವರು ಮತ್ತು ಅವರ ಲೇಖನಗಳು

ಬದಲಾಯಿಸಿ
  1. Pavanaja (ಚರ್ಚೆ) ೦೪:೩೩, ೯ ಏಪ್ರಿಲ್ ೨೦೧೬ (UTC)- ಕ್ಯಾಮರ (ಸುಧಾರಿಸಿದ್ದು ಮತ್ತು ವಿಸ್ತರಿಸಿದ್ದು)
  2. Swathipv (ಚರ್ಚೆ) ೧೨:೧೧, ೯ ಏಪ್ರಿಲ್ ೨೦೧೬ (UTC)- ಹೆರ್ಮನ್ ವಾಲ್ದರ್ ನೆರ್ನ್ಸ್ಟ್, ಅಟ್ಟೊ ರಿಚರ್ಡ್ ಲುಮ್ಮರ್, ವಿಲಿಯಂ ವಿಥರಿಂಗ್, ಯೋಹನ್ ಕೆಪ್ಲರ್, ಆಲ್ಪ್ರೆಡ್ ಸ್ಟಾಕ್, ಆಲ್ಫ್ರೆಡ್ ಬರ್ನ್ಹಾರ್ಡ್ ನೊಬೆಲ್
  3. Vikas Hegde (ಚರ್ಚೆ) - ಬೈನಾಕ್ಯುಲರ್ಸ್, ಲೋಹಗಳ ಗುಣಲಕ್ಷಣಗಳು
  4. ಪ್ರಶಸ್ತಿ (ಚರ್ಚೆ) ೧೦:೦೬, ೯ ಏಪ್ರಿಲ್ ೨೦೧೬ (UTC)-ಆಮ್ಲಜನಕ ಚಕ್ರ
  5. ಟಿ. ಜಿ. ಶ್ರೀನಿಧಿ (ಚರ್ಚೆ)-ಕ್ಯಾಪ್ಚಾ, ಕಂಪ್ಯೂಟರ್ (ವಿಸ್ತರಣೆ ಮತ್ತು ಉತ್ತಮಗೊಳಿಸುವಿಕೆ)
  6. ವಿಶ್ವನಾಥ/Vishwanatha (ಚರ್ಚೆ) ೧೧:೪೨, ೯ ಏಪ್ರಿಲ್ ೨೦೧೬ (UTC)-ಘನ (ಸಂಪೂರ್ಣ ಪುನರ್ರಚಿಸಿದೆ)
  7. ಅನಂತ್ (ಚರ್ಚೆ) ೧೧:೪೩, ೯ ಏಪ್ರಿಲ್ ೨೦೧೬ (UTC)
  8. ನಿತಿನ್ ಹೆಗ್ಡೆ (ಚರ್ಚೆ) ೧೮:೫೩, ೯ ಏಪ್ರಿಲ್ ೨೦೧೬ (UTC)- ಮೇಲ್ಮೈ ಎಳೆತ
  9. ಸಿ ಪಿ ರವಿಕುಮಾರ್ (ಚರ್ಚೆ) ೧೬:೪೦, ೧೦ ಏಪ್ರಿಲ್ ೨೦೧೬ (UTC)- ಕ್ರಿಸ್ಟಿಯಾನ್ ಹೈಜೆನ್ಸ್ (ಹೊಸಲೇಖನ)
  • ೦೯/೦೪/೨೦೧೬- ಬೆಳಗ್ಗೆ ೧೦:೦೦ಗೆ ಸಂಪಾದನೋತ್ಸವ ಆರಂಭಗೊಂಡು ಸಂಜೆ ೫ ಗಂಟೆಗೆ ಮುಕ್ತಾಯವಾಯಿತು. ಸಿಐಎಸ್ ಕಛೇರಿಯಲ್ಲಿ ೫ ಜನ ಭಾಗವಹಿಸಿ ಲೇಖನಗಳನ್ನು ರಚಿಸಿದರು/ವಿಸ್ತರಿಸಿದರು. ಇನ್ನು ಇಬ್ಬರು ಆನ್ ಲೈನ್ ಮೂಲಕ ಭಾಗವಹಿಸಿ ಲೇಖನಗಳನ್ನು ರಚಿಸಿದರು.
  • ೧೦/೦೪/೨೦೧೬ - ಆನ್ ಲೈನ್ ಸಂಪಾದನೋತ್ಸವ.
  • ಎರಡು ದಿನಗಳಲ್ಲಿ ಒಟ್ಟು ೧೨ ಹೊಸ ಪುಟಗಳು ರಚಿಸಲ್ಪಟ್ಟವು, ೩ ಲೇಖನಗಳು ವಿಸ್ತರಣೆ ಮತ್ತು ಸುಧಾರಣೆಗೊಂಡವು.


ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು.

ಛಾಯಾಚಿತ್ರಗಳು

ಬದಲಾಯಿಸಿ