ಆಲ್ಫ್ರೆಡ್ ಬರ್ನ್ಹಾರ್ಡ್ ನೊಬೆಲ್

ಸ್ವೀಡನ್ನಿನ ಕೈಗಾರಿಕಾ ರಸಾಯನವಿಜ್ಞಾನಿಯಾಗಿದ್ದ ಆಲ್ಫ್ರೆಡ್ ಬರ್ನ್ಹಾರ್ಡ್ ನೊಬೆಲ್ರವರು 1833ರ ಅಕ್ಪೋಬರ್ 21ರಂದು ಸ್ವೀಡನ್ನಿನ ಸ್ಟಾಕ್ಹೋಮ್ನಲ್ಲಿ ಜನಿಸಿದರು. ಕೋವಿಮದ್ದಿಗಿಂತ (gunpowder) ಶಕ್ತಿಯುತ ಸ್ಪೋಟಕವಾದ ಸಿಡಿಹತ್ತಿಯನ್ನು (guncotton) ಜರ್ಮನಿಯ ರಸಾಯನವಿಜ್ಞಾನಿ ಕ್ರಿಶ್ಚಿಯನ್ ಷೋನ್ಬೈನ್ರವರು (1799-1868) 1846ರಲ್ಲಿ ಕಂಡುಹಿಡಿದರು. ಒಂದು ವರುಷದ ನಂತರ ಇಟಲಿಯ ಅಸ್ಸೇನಿಯೋ ಸೊಬ್ರೆರೋರವರು (1812-1888) ನೈಟ್ರೋಗ್ಲಿಸರಿನ್ ಸಂಶೋಧಿಸಿದರು. ನೈಟ್ರೋಗ್ಲಿಸರಿನ್ ಎಷ್ಟು ಶಕ್ತಿಯುತ ಸ್ಪೋಟಕವೆಂದರೆ ಅದು ಸ್ಪೋಟಗೊಂಡಾಗ ತನ್ನ ಗಾತ್ರಕ್ಕಿಂತ 1200ಪಟ್ಟು ಹೆಚ್ಚಿನ ಅನಿಲವನ್ನು ಬಿಡುಗಡೆ ಮಾಡುತ್ತದೆ. ಅದನ್ನು ಅಲ್ಲಾಡಿಸಿದರೆ ಕೂಡ ಸಿಡಿಯುತ್ತಿತ್ತು. ಆಲ್ಪ್ರೆಡ್ ನೊಬೆಲ್ ಮತ್ತು ಅವರ ತಂದೆ ಇಮ್ಮ್ಯಾನುಯಲ್ ನೊಬೆಲ್ರವರು ಸಿಡಿಹತ್ತಿ ಮತ್ತು ನೈಟ್ರೋಗ್ಲಿಸರಿನ್ಗಳ ಬಗ್ಗೆ ಸ್ವತಂತ್ರವಾಗಿ ಪ್ರಯೋಗಗಳನ್ನು ನಡೆಸಿದರು. ಕಾರ್ಖಾನೆಯಲ್ಲಿ ಸುಲಭವಾಗಿ ತಯಾರಿಸುವ ವಿಧಾನವನ್ನು ಇಮ್ಮ್ಯಾನುಯಲ್ರವರು 1862ರಲ್ಲಿ ರೂಪಿಸಿದರು. ಆಲ್ಫ್ರೆಡ್ ನೊಬೆಲ್ರವರು ನೈಟ್ರೋಗ್ಲಿಸರಿನ್ ಸ್ಪೋಟದ ಸಮಯದಲ್ಲಿ ಆಸ್ಪೋಟಕವಾಗಿ ಬಳಸಬಹುದಾದ ಮಕ್ರ್ಯುರಿ ಫುಲ್ಮಿನೇಟ್ನನ್ನು 1863ರಲ್ಲಿ ಕಂಡುಹಿಡಿದರು.[][]

ಆಲ್ಫ್ರೆಡ್ ನೊಬೆಲ್
ಆಲ್ಫ್ರೆಡ್ ನೊಬೆಲ್
Born
ಆಲ್ಫ್ರೆಡ್ ಬರ್ನ್ಹಾರ್ಡ್ ನೊಬೆಲ್

೨೧-೧೦-೧೮೩೩
ಸ್ಟಾಕ್ಹೋಮ್ನ, ಸ್ವೀಡನ್ನಿ
Died೧೦-೧೨-೧೮೯೬
Sanremo, Italy
Resting placeಸ್ಟಾಕ್ಹೋಮ್ನ
59°21′24.52″N 18°1′9.43″E / 59.3568111°N 18.0192861°E / 59.3568111; 18.0192861
Occupationರಸಾಯನವಿಜ್ಞಾನಿ
Known forInvention of dynamite, Nobel Prize
Signature

ದುರಂತ ಸಂಗತಿಯೆಂದರೆ 1864ರಲ್ಲಿ ನೊಬೆಲ್ ಕುಟುಂಬದವರ ನೈಟ್ರೋಗ್ಲಿಸರಿನ್ ತಯಾರಿಸುತ್ತಿದ್ದ ಕಾರ್ಖಾನೆ ಸಿಡಿದು, ನೊಬೆಲ್ರವರ ಕಿರಿಯ ಸಹೋದರ ಮತ್ತು ಇತರ ನಾಲ್ಕು ಮಂದಿ ಕಾರ್ಮಿಕರನ್ನು ಬಲಿ ತೆಗೆದುಕೊಂಡಿತು. ಹಾಗಾಗಿ ಅತಿ ಸೂಕ್ಷ್ಮವಾದ ದ್ರವರೂಪದ ನೈಟ್ರೋಗ್ಲಿಸರಿನ್ನನ್ನು ಸುರಕ್ಷಿತವಾಗಿ ಉಪಯೋಗಿಸುವ ವಿಧಾನವನ್ನು ಕಂಡುಹಿಡಿಯಲು ನೊಬೆಲ್ ಶ್ರಮಿಸಿದರು. ಅವರ ಶ್ರಮದ ಫಲವಾಗಿ ಡೈನಮೈಟ್ನ ಸಂಶೋಧನೆಯಾಯಿತು. ನೊಬೆಲ್ರವರು ಡೈನಮೈಟ್ನ ಸಂಶೋಧನೆಯ ಪೇಟೆಂಟನ್ನು ಸ್ವೀಡನ್, ಬ್ರಿಟನ್ ಮತ್ತು ಅಮೇರಿಕದಲ್ಲಿ 1867ರಲ್ಲಿ ಗಳಿಸಿದರು. ನೊಬೆಲ್ರವರು 1875ರಲ್ಲಿ ನೈಟ್ರೋಸೆಲ್ಯುಲೋಸ್ನ ಕಲಿಲ ದ್ರಾವಣ (colloidal solution) ಅಥವಾ ಸ್ಪೋಟಿಸುವ ಜಿಲೆಟಿನ್ (gelatin) ಅಂದರೆ ಜಿಲಿಗ್ನೈಟ್ನನ್ನು (gelignite) ಸಂಶೋಧಿಸಿದರು. ಅದರ ಶಕ್ತಿ ಶುದ್ಧ ನೈಟೋಗ್ಲಿಸರಿನ್ಗಿಂತ ಹೆಚ್ಚಾಗಿತ್ತಲ್ಲದೆ, ಆಾತಕ್ಕೆ (shock) ಅದು ಕಡಿಮೆ ಸಂವೇದನೆಯನ್ನು ತೋರುತ್ತಿತ್ತು ಮತ್ತು ಅದು ತೇವ-ನಿರೋಧಕವಾಗಿತ್ತು. ನಂತರ ನೊಬೆಲ್ರವರು ನೈಟ್ರೋಗ್ಲಿಸರಿನ್ ಮತ್ತು ನೈಟ್ರೋಸೆಲ್ಯುಲೋಸ್ ಮತ್ತು ಇತರ ಪದಾರ್ಥಗಳ ಮಿಶ್ರಣವಾಗಿದ್ದ ಹೊಗೆ-ರಹಿತ ಸ್ಪೋಟಕ ಪುಡಿಯಾದ ಬಲ್ಲಿಸ್ಟೈಟ್ನನ್ನು (ballistite) ಸಂಶೋಧಿಸಿದರು. ಇವೆಲ್ಲ ಸಂಶೋಧನೆಗಳಿಂದ ಅತ್ಯಂತ ಶ್ರೀಮಂತರಾದ ನೊಬೆಲ್ರವರು 1901ರಿಂದ ಅನೇಕ ವರ್ಗಗಳಲ್ಲಿ ನೊಬೆಲ್ ಪ್ರಶಸ್ತಿ ನೀಡಲು ಕಾರಣರಾದರು. ನೊಬೆಲ್ರವರ ಸಾಧನೆಯನ್ನು ಗುರುತಿಸಲು, 1958ರಲ್ಲಿ ಕಂಡುಹಿಡಿಯಲಾದ 102ನೆಯ ಧಾತುವಿಗೆ ಕನೊಬೆಲಿಯಮ್ಕಿ (nobelium) ಎಂಬುದಾಗಿ ಕರೆಯಲಾಗಿದೆ. ನೊಬೆಲ್ರವರು 1896ರ ಡಿಸೆಂಬರ್ 10ರಂದು ಸಾನ್ ರೆಮೋನಲ್ಲಿ ನಿಧನರಾದರು

ಉಲ್ಲೇಖಗಳು

ಬದಲಾಯಿಸಿ
  1. "Alfred Nobel's Fortune". The Norwegian Nobel Committee. Archived from the original on 6 ಜನವರಿ 2017. Retrieved 26 February 2016.
  2. "Alfred Nobel's Will". The Norwegian Nobel Committee. Archived from the original on 31 ಡಿಸೆಂಬರ್ 2016. Retrieved 26 February 2016.