ಆಲ್ಫ್ರೆಡ್ ನೊಬೆಲ್

ಜನನ -೧೮೩೩-ಮರಣ -೧೮೯೬

ಆಲ್ಪ್ರೆಡ್ ನೊಬೆಲ್
ಜನನ(೧೮೩೩-೧೦-೨೧)೨೧ ಅಕ್ಟೋಬರ್ ೧೮೩೩
ಮರಣ10 December 1896(1896-12-10) (aged 63)
ಸಾನ್ರೇಮೊ, ಇಟಲಿ
Resting placeನೊರ್ರ ಬೆಗ್ರಾವ್ನಿನ್ ಸ್ಪ್ಲಾತ್ಸೆನ್, ಸ್ಟಾಖೋಮ್
59°21′24.52″N 18°1′9.43″E / 59.3568111°N 18.0192861°E / 59.3568111; 18.0192861
ವೃತ್ತಿ(ಗಳು)ರಸಾಯನ ಶಾಸ್ತ್ರಜ್ಞ, ಎಂಜಿನಿಯರ್, ಆವಿಷ್ಕಾರಿ, ಆಯುಧಗಳ ಉತ್ಪಾದಕ.
ಗಮನಾರ್ಹ ಕೆಲಸಗಳುಡೈನಮೈಟ್ನ ಆವಿಷ್ಕಾರ, ನೊಬೆಲ್ ಪ್ರಶಸ್ತಿ
Signature

ಇಂದು ಆಲ್ಪ್ರೆಡ್ ನೊಬೆಲ್ ರ ಹೆಸರನ್ನು ಅರಿಯದವರು ಜಗತ್ತಿನಲ್ಲಿ ಇಲ್ಲವೇ ಇಲ್ಲ. ಅವರ ಹೆಸರು ಅಷ್ಟು ಸುಪರಿಚಿತವಾಗಿದೆ. ಅವರು ಇಷ್ಟು ಸುಪರಿಚಿತನಾಗಲು ಕಾರಣವೆಂದರೆ ಮಾನವಕುಲದ ಕ್ಷೇಮಾಭಿವೃದ್ಧಿಗೆ ಸೇವೆ ಸಲ್ಲಿಸುವವರಿಗೆ ಪಾರಿತೋಷಕಗಳನ್ನು ನೀಡಲು ತನ್ನ ಅಪಾರ ಸಂಪತ್ತನ್ನೆಲ್ಲ ಅವರು ಮುಡಿಪಾಗಿಟ್ಟದ್ದು. ಆಲ್ಪ್ರೆಡ್ ನೊಬೆಲ್ ಸ್ವೀಡನ್ ದೇಶದವರು. ಅವರು ೧೮೩೩ ರಲ್ಲಿ ಜನಿಸಿದರು. ಸುರಕ್ಷಿತವಾದ ಸ್ಫೋಟಕಗಳನ್ನು ಕಂಡು ಹಿಡಿಯುವುದರಲ್ಲಿ ಅವರಿಗೆ ಆಸಕ್ತಿ ಇತ್ತು. ೧೮೬೩ರಲ್ಲಿ ಅವರ ಕುಟುಂಬದ ನೈಟ್ರೊಗ್ಲಿಸರಿನ್ ಕಾರ್ಖಾನೆ ಸ್ಫೋಟಕ ವಸ್ತು ಸಿಡಿದು ನಾಶವಾದಾಗ ಆಲ್ಪ್ರೆಡ್ ನೊಬೆಲ್ ತಮ್ಮ ಪ್ರಯೋಗಗಳನ್ನು ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಮುಂದುವರಿಸಬೇಕಾಯಿತು. ಮೂಲತಃ ವಿಲಕ್ಷಣ ಸ್ವಭಾವದವರಾಗಿದ್ದ ಅವರು ದುಂದು ವೆಚ್ಚಗಾರರಾಗಿದ್ದರು. ಬೇಕೆಂದಲ್ಲಿಗೆ ಹೋಗಿ ಬರುತ್ತಿದ್ದರು. ಅವರ ಬ್ರಹ್ಮಚರ್ಯ ಬದುಕೂ ಅವರ ಈ ವಿಲಕ್ಷಣ ಸ್ವಭಾವಕ್ಕೆ ಇಂಬಾಗಿತ್ತು. ಪಟ್ಟು ಬಿಡದೆ ಮಾಡಿದ ಪ್ರಯೋಗಗಳ ಫಲವಾಗಿ ಆಲ್ಪ್ರೆಡ್ ನೊಬೆಲ್ ಕೊನೆಗೂ ಮೊತ್ತ ಮೊದಲನೆಯ, ಪರಿಣಾಮಕಾರಿಯಾದ ಸುರಕ್ಷಿತ ಸ್ಫೋಟಕ ವಸ್ತು ಡೈನಾಮೈಟ್ ಅನ್ನು ಕಂಡು ಹಿಡಿಯುವುದರಲ್ಲಿ ಸಫಲರಾದರು. ತಾವು ಕಂಡು ಹಿಡಿದ ಡೈನಾಮೈಟ್ ಗೆ ೧೮೬೬ರಲ್ಲಿ ಗ್ರೇಟ್ ಬ್ರಿಟನ್ ನಲ್ಲೂ, ೧೮೬೭ರಲ್ಲಿ ಸಂ. ರಾ. ಅಮೆರಿಕದಲ್ಲೂ ಪೇಟೆಂಟ್ (ಸ್ವಾಮ್ಯದ ಹಕ್ಕು) ಪಡೆದರು. ೧೮೮೮ರಲ್ಲಿ ಅವರು ಮೊತ್ತ ಮೊದಲನೆಯ ಹೊಗೆರಹಿತ ನೈಟ್ರೊಗ್ಲಿಸರಿನ್ ಪೌಡರ್ ಗಳಲ್ಲೊಂದಾದ ಬಾಲಿಸ್ಟೈಟ್ ಅನ್ನು ಉತ್ಪಾದಿಸಿದರು. ಸ್ಫೋಟಕಗಳ ಉತ್ಪಾದನೆಯಿಂದ ಮತ್ತು ರಶಿಯದ ಬಕು ತೈಲ ಕ್ಷೇತ್ರಗಳಿಂದ ಲಭ್ಯವಾದ ಸಂಪಾದನೆಯಿಂದ ಅವರು ಅಪಾರ ಸಂಪತ್ತು ಗಳಿಸಿದರು. ಉತ್ತರಾಧಿಕಾರಿಗಳಿಗೆ ಆಸ್ತಿಯನ್ನು ಬಿಟ್ಟು ಹೋಗುವ ಪದ್ಧತಿಯನ್ನು ಆಲ್ಪ್ರೆಡ್ ನೊಬೆಲ್ ವಿರೋಧಿಸಿದರು. ಅಂತಲೇ ಅವರು ತಮ್ಮ ಆಸ್ತಿಯನ್ನೆಲ್ಲ ಮಾನವಕುಲದ ಹಿತಕ್ಕಾಗಿ ಶ್ರಮಿಸುವ, ಸೇವೆ ಸಲ್ಲಿಸುವ ವ್ಯಕ್ತಿಗಳಿಗೆ ಪಾರಿತೋಷಕ ನೀಡಲು ಕೊಡಮಾಡಿದರು. ಆಲ್ಫ್ರೆಡ್ ನೊಬೆಲ್ ೧೮೯೬ರಲ್ಲಿ ನಿಧನ ಹೊಂದಿದರು. ವಿಜ್ಞಾನ (ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯಶಾಸ್ತ್ರ), ಅರ್ಥಶಾಸ್ತ್ರ, ಸಾಹಿತ್ಯ ಹಾಗೂ ವಿಶ್ವಶಾಂತಿಯ ಕ್ಷೇತ್ರಗಳಲ್ಲಿ ದುಡಿದವರಿಗೋಸ್ಕರ ಪ್ರತಿವರ್ಷ ನೀಡಲಾಗುವ ನೊಬೆಲ್ ಪಾರಿತೋಷಕ ಆಲ್ಫ್ರೆಡ್ ನೊಬೆಲ್ ರ ಕೊಡುಗೆ. ಗಣಿತಶಾಸ್ತ್ರಕ್ಕೆ ನೋಬೆಲ್ ಏಕಿಲ್ಲ?[] ಪ್ರಪಂಚದ ಪ್ರಸಿದ್ದ ಪ್ರಶಸ್ತಿಯಾದ ನೋಬೆಲ್ ಪಾರಿತೋಷಕ ಗಣಿತ ವಿಭಾಗಕ್ಕೆ ಮಾತ್ರ ನೀಡಲಾಗುವುದಿಲ್ಲ. ಇದಕ್ಕೊಂದು ಸ್ವಾರಸ್ಯಕರವಾದ ಇತಿಹಾಸವಿದೆ, ನೋಬೆಲ್ ಪಾರಿತೋಷಕನಾದ ಆಲ್ಫ್ರೆಡ್ ನೋಬೆಲ್ ಅವರ ಪ್ರೇಯಸಿ ಅವರನ್ನು ಬಿಟ್ಟು ಒಬ್ಬ ಗಣಿತಜ್ಞನ ಜೊತೆ ಹೋಗಿದ್ದರು ಎಂಬ ಕಾರಣವಿದೆ. (ಅನೇಕರು ಹೇಳುವ ಪ್ರಕಾರ ಅವರ ಪ್ರೇಯಸಿ ಮೆಚ್ಚಿದ ಗಣಿತಜ್ಞ ಸ್ವೀಡಿಶ್ ಮೂಲದ ಗೋಸ್ಟಾ ಮಿಟ್ಟ್ಯಾಗ್ ಲೆಫ್ಟ್ಲರ್). ಈ ಕಾರಣಕ್ಕಾಗಿಯೇ ಗಣಿತಜ್ಞರ ಮೇಲಿನ ಕೋಪದಿಂದ ನೋಬೆಲ್ ಅವರು ಗಣಿತ ವಿಭಾಗಕ್ಕೆ ಪಾರಿತೋಷಕವನ್ನು ನೀಡಕೂಡದೆಂದು ತಮ್ಮ ಉಯಿಲಿನಲ್ಲಿಯೂ ಸೇರಿಸಿದ್ದಾರೆ. ಆಲ್ಫ್ರೆಡ್ ಅವರ ವಿಚಿತ್ರ ಸ್ವಭಾವವು ಸಹ ಈ ಕಾರಣಕ್ಕೆ ಪೂರಕವಾಗಿದೆ.

  1. ಟುಡೆ ಐ ಫೌಂಡ್ ಔಟ್http://www.todayifoundout.com