ಡೈನಮೈಟ್

ಸ್ಪೋಟಕಗಳ ಆಧುನಿಕ ಬಳಕೆಯನ್ನು ಪ್ರೇರೇಪಿಸಿದ, 'ಬ್ಲಾಸ್ಟಿಂಗ್ ಕ್ಯಾಪ್'ಎಂದೇ ಪ್ರಸಿದ್ಧವಾಗಿರುವ; ಆಲ್ಫ್ರೆಡ್ ನೊ

ಡೈನಮೈಟ್ ನೈಟ್ರೊಗ್ಲಿಸರಿನ್, (ಪುಡಿಮಾಡಿದ ಚಿಪ್ಪುಗಳು ಅಥವಾ ಜೇಡಿಮಣ್ಣಿನಂತಹ) ಅವಚೂಷಕಗಳು ಹಾಗೂ ಸ್ಥಿರೀಕಾರಕಗಳಿಂದ ತಯಾರಿಸಿದ ಒಂದು ಸ್ಫೋಟವ ವಸ್ತು. ಇದನ್ನು ಸ್ವೀಡಿಷ್ ರಸಾಯನಶಾಸ್ತ್ರಜ್ಞ ಹಾಗೂ ಇಂಜಿನಿಯರಾಗಿದ್ದ ಆಲ್ಫ್ರೆಡ್ ನೊಬೆಲ್ ಆವಿಷ್ಕರಿಸಿದರು ಮತ್ತು ೧೮೬೭ರಲ್ಲಿ ಸ್ವಾಮ್ಯದ ಸನ್ನದು ಪಡೆದರು. ಇದು ಕ್ಷಿಪ್ರವಾಗಿ ಕೋವಿಮದ್ದಿನ ಹೆಚ್ಚು ಶಕ್ತಿಶಾಲಿ ಪರ್ಯಾಯವಾಗಿ ವ್ಯಾಪಕ ಬಳಕೆಯನ್ನು ಪಡೆಯಿತು.

Dynamite Diagram.svg

ಇಂದು, ಡೈನಮೈಟ್‍ನ್ನು ಮುಖ್ಯವಾಗಿ ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ನಿರ್ಮಾಣ, ಹಾಗೂ ಕೆಡಹುವಿಕೆ ಉದ್ಯಮಗಳಲ್ಲಿ ಬಳಸಲಾಗುತ್ತದೆ. ಡೈನಮೈಟ್ ಈಗಲೂ ಕಂದಕ ಅಗೆತದ ಪ್ರಯತ್ನಗಳಲ್ಲಿ, ಮತ್ತು ಸ್ಫೋಟಕ ವರ್ಧಕಗಳಿಗೆ ಮಿತವ್ಯಯದ ಪರ್ಯಾಯವಾಗಿ ಆಯ್ಕೆಯ ಉತ್ಪನ್ನವಾಗಿದೆ. ಡೈನಮೈಟ್‌ನ್ನು ಸಾಂದರ್ಭಿಕವಾಗಿ ಎಎನ್ ಹಾಗೂ ಎಎನ್ಎಫ್ಒ ಸಿಡಿಮದ್ದುಗಳಿಗೆ ಆರಂಭಕ ಅಥವಾ ವರ್ಧಕವಾಗಿ ಬಳಸಲಾಗುತ್ತದೆ.

ಬಾಹ್ಯ ಸಂಪರ್ಕಗಳುಸಂಪಾದಿಸಿ

"https://kn.wikipedia.org/w/index.php?title=ಡೈನಮೈಟ್&oldid=919316" ಇಂದ ಪಡೆಯಲ್ಪಟ್ಟಿದೆ