ಹೆರ್ಮನ್ ವಾಲ್ದರ್ ನೆರ್ನ್ಸ್ಟ್
ಜರ್ಮನಿಯ ಭೌತರಸಾಯನವಿಜ್ಞಾನಿಯಾಗಿದ್ದ ಹೆರ್ಮನ್ ವಾಲ್ದರ್ ನೆರ್ನ್ಸ್ಟ್ರವರು 1864ರ ಜೂನ್ 25ರಂದು (ಈಗ ಪೋಲೆಂಡಿನಲ್ಲಿರುವ) ಪೂರ್ವ ಪ್ರಷ್ಯಾದ ಬ್ರೀಸ್ಸೆನ್ನಲ್ಲಿ ಜನಿಸಿದರು. ನೆರ್ನ್ಸ್ಟ್ರವರು ಎಟ್ಟಿಂಗ್ಹೌಸೆನ್ರವರ ಜೊತೆ ಸೇರಿ ತಮ್ಮ ಸಿದ್ಧಾಂತವನ್ನು 1886ರಲ್ಲಿ ಮಂಡಿಸಿದರು.[೧][೨] ಅದಕ್ಕೆ ಕಎಟ್ಟಿಂಗ್ಹೌಸೆನ್-ನೆರ್ನ್ಸ್ಟ್ ಪರಿಣಾಮಕಿ ಎಂಬುದಾಗಿ ಕರೆಯಲಾಗಿದೆ. ಈ ಸಿದ್ಧಾಂತ ಲೋಹಗಳಲ್ಲಿನ ಉಷ್ಣೀಯ ಮತ್ತು ವಿದ್ಯುತ್ ಪ್ರವಹನಗಳಿಗೆ ಇಲೆಕ್ಟ್ರಾನ್ಗಳ ಚಲನೆ ಕಾರಣವಾಗಿದೆ ಎಂದು ಸಾರುವ ಕಲೋಹಗಳ ವಿದ್ಯುನ್ಮಾನ ಸಿದ್ಧಾಂತಕಿಗಳಿಗೆ (electronic theory of metals) ನಾಂದಿಯಾಯಿತು. ದ್ರವಗಳ ಜೊತೆ ಸಂಪರ್ಕದಲ್ಲಿರುವ ನಪದಾರ್ಥಗಳ ಬಗ್ಗೆ ನೆರ್ನ್ಸ್ಟ್ರವರು ಸಿದ್ಧಾಂತಗಳನ್ನು ಮಂಡಿಸಿದರು. ಆ ಸಿದ್ಧಾಂತ ಮುಂದೆ ಓಸ್ವಾಲ್ಡ್ರವರು (1853-1932) 1890ರಲ್ಲಿ ಪ್ರತಿಪಾದಿಸಿದ್ದ ಕದ್ರಾವ್ಯತಾ ಸಿದ್ಧಾಂತಕಿದ (theory of solubility) ಚಾಲನೆಗೆ ನಾಂದಿಯಾಯಿತು. ನೆರ್ನ್ಸ್ಟ್ರವರು 1905 ಮತ್ತು 1906ರ ನಡುವೆ ಬರ್ಲಿನ್ನಲ್ಲಿದ್ದಾಗ ಉಷ್ಣಬಲವಿಜ್ಞಾನದ (thermodynamics) ಬಗ್ಗೆ ತಮ್ಮ ಅಧ್ಯಯನ ನಡೆಸಿದರು. ಯಾವುದೇ ವ್ಯವಸ್ಥೆಯಲ್ಲಿನ ಉಷ್ಣ ಕಡಿಮೆಯಾಗುತ್ತಾ ನಿರಪೇಕ್ಷ ಶೂನ್ಯದ (absolute zero) ಕಡೆ ಹರಿದಾಗ, ಆ ವ್ಯವಸ್ಥೆಯ ಜಡೋಷ್ಣ (entropy) ಕೂಡ ಶೂನ್ಯವಾಗುತ್ತದೆ ಎಂಬ ಸಿದ್ಧಾಂತವನ್ನು ನೆರ್ನ್ಸ್ಟ್ರವರು ಮಂಡಿಸಿದರು. ನಂತರ ಹೆಲ್ಮ್ಹೋಲ್ಟ್ಝ್ರವರು (1821-1894) ಮಂಡಿಸಿದ್ದ ನಿಯಮಗಳನ್ನು ಅಭಿವೃದ್ಧಿಪಡಿಸಿದ ನೆರ್ನ್ಸ್ಟ್ರವರು ಉಷ್ಣಬಲವಿಜ್ಞಾನದ ಮೂರನೆಯ ನಿಯಮವನ್ನು ರೂಪಿಸಿದರು. ಅವರ ಆ ಸಂಶೋಧನೆಗೆ 1920ರ ರಸಾಯನವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ನೆರ್ನ್ಸ್ಟ್ರವರು ಫ್ರೆಡರಿಕ್ ಲಿಂಡರ್ಮನ್ರವರ (1886-1957) ಜೊತೆ ಸೇರಿಕೊಂಡು, ನಿಮ್ನ ಉಷ್ಣತೆಯಲ್ಲಿ ವಿಶಿಷ್ಟ ಉಷ್ಣವನ್ನು (specific heat) ಅಳೆಯಲು ವಿಶೇಷವಾದ ಕ್ಯಾಲರಿಮಾಪಕವನ್ನು 1911ರಲ್ಲಿ ತಯಾರಿಸಿದರು. ನೆರ್ನ್ಸ್ಟ್ರವರು 1897ರಲ್ಲಿ ವಿದ್ಯುದ್ದೀಪವನ್ನು ಸಂಶೋಧಿಸಿದರು. ಅದರಲ್ಲಿ ಕಾರ್ಬನ್ ತಂತುವಿನ ಬದಲು ಝಿರ್ಕೋನಿಯಂ ಆಕ್ಸೈಡ್ ಮತ್ತು ಕೆಲವು ವಿರಳವಾದ ಭೂ-ಆಕ್ಸೈಡ್ಗಳ (earth oxides) ಸಂಯೋಜಿತ ತಂತುವನ್ನು ಉಪಯೋಗಿಸಲಾಗಿತ್ತು. ಆ ವಿದ್ಯುದ್ದೀಪ ಅವಕೆಂಪು ಬೆಳಕಿಗೆ ಒಳ್ಳೆಯ ಆಕರವಾಗಿದ್ದಿತು. ಹತ್ತು ವರುಷಗಳ ನಂತರ ವಿದ್ಯುದ್ದೀಪದಲ್ಲಿ ಟಂಗ್ಸ್ಟನ್ ತಂತುವನ್ನು ಬಳಸಲಾಯಿತು. ಆ ಸಂಶೋಧನೆಯ ಪೇಟೆಂಟ್ ಗಳಿಸಿದ ನೆರ್ನ್ಸ್ಟ್ರವರು ಅದನ್ನು ಮೋಟಾರು ವಾಹನಗಳ ಬಗ್ಗೆ ಸಂಶೋಧನೆಗಳನ್ನು ನಡೆಸಲು ಉಪಯೋಗಿಸಿದರು. ಅನೇಕ ಮೋಟಾರು ವಾಹನಗಳಿಗೆ ಗುಡ್ಡಗಳನ್ನು ಹತ್ತಲು ಕಷ್ಟವಾಗುತ್ತಿತ್ತು. ಅದನ್ನು ಗಮನಿಸಿದ ನೆರ್ನ್ಸ್ಟ್ರವರು ವಾಹನಗಳ ಇಂಜಿನ್ಗಳಿಗೆ ಅಂತಹ ತೊಂದರೆಯಾದಲ್ಲಿ ನೈಟ್ರಸ್ ಆಕ್ಸೈಡ್ನನ್ನು (ಡೈನೈಟ್ರೋಜನ್ ಮಾನಾಕ್ಸೈಡ್) ಸಿಲಿಂಡರ್ಗಳ ಒಳಗೆ ಕಳುಹಿಸುವ ವಿಧಾನವನ್ನು ರೂಪಿಸಿದರು. ನೆರ್ನ್ಸ್ಟ್ರವರು 1920ರಲ್ಲಿ ಕನಿಯೋ-ಬೆಕ್ಸ್ಟೈನ್ಕಿ ಎಂಬ ಪಿಯಾನೋವನ್ನು ತಯಾರಿಸಿದರು. ಅದು ಕಡಿಮೆ ಪಾರದಲ್ಲಿ (amplitude) ಉತ್ಪತ್ತಿಯಾದ ಧ್ವನಿಯನ್ನು ವರ್ಧಿಸುತ್ತಿದ್ದಿತು. ಆ ಪಿಯಾನೋ ಜನಪ್ರಿಯತೆ ಗಳಿಸಲಿಲ್ಲ. ನೆರ್ನ್ಸ್ಟ್ರವರು 1941ರ ನವೆಂಬರ್ 18ರಂದು ಬರ್ಲಿನ್ ಹತ್ತಿರದ ಮುಸ್ಕಾನ್ ಪ್ರದೇಶದಲ್ಲಿ ಹೃದಯಾಾತದಿಂದ ನಿಧನರಾದರು.
ಉಲ್ಲೇಖಗಳು
ಬದಲಾಯಿಸಿ- ↑ Barkan, Diana (1999). Walther Nernst and the transition to modern physical science. Cambridge: Cambridge University Press. ISBN 052144456X.
- ↑ Bartel, Hans-Georg, (1999) "Nernst, Walther", pp. 66–68 in Neue Deutsche Biographie, Vol. 19