ಬೈನಾಕ್ಯುಲರ್ಸ್
ಬೈನಾಕ್ಯುಲರ್ ದೂರದರ್ಶಕಗಳು (ದುರ್ಬೀನು) ಎರಡೂ ಕಣ್ಣಿನ ಮೂಲಕ ದೂರದಲ್ಲಿರುವ ವಸ್ತುಗಳನ್ನು ನೋಡಲು ಬಳಸುವ ಸಾಧನಗಳು. ಇದರಲ್ಲಿ ಒಂದೇ ತರಹದ ಅಥವಾ ಸಮಪಾರ್ಶ್ವತೆ(symmetrical) ಇರುವ ಒಂದು ಜೋಡಿ ದೂರದರ್ಶಕಗಳನ್ನು ಒಂದರ ಪಕ್ಕದಲ್ಲಿ ಒಂದು ಇಟ್ಟು ಅವು ಒಂದೇ ದಿಕ್ಕಿನಲ್ಲಿ ಒಂದೇ ಕಡೆ ನೋಡಲು ಅನುವಾಗುವಂತೆ ರಚಿಸಿರಲಾಗುತ್ತದೆ. ಸಾಮಾನ್ಯವಾಗಿ ಎರಡೂ ಕೈಗಳಲ್ಲಿ ಹಿಡಿದುಕೊಳ್ಳುವ ಗಾತ್ರದಲ್ಲಿ ಇರುತ್ತವಾದರೂ ಇವು ಸಣ್ಣಗಾತ್ರದಿಂದ ಹಿಡಿದು ದೊಡ್ಡ ಪೆಡೆಸ್ಟಲ್ ಗಳ ಮೇಲೆ ಇಡುವಂತಹ ಮಿಲಿಟರಿ ಮಾಡೆಲ್ ಗಳ ಗಾತ್ರದವರೆಗೂ ಇರಬಹುದು. ಬೈನಾಕ್ಯುಲರ್ ಗಳು ಒಂದುಕೊಳವೆಯ ದೂರದರ್ಶಕ (ಟೆಲಿಸ್ಕೋಪ್)ಕ್ಕಿಂತ ಒಳ್ಳೆಯ ರೀತಿಯ ಅಂದರೆ ಮೂರು ಆಯಾಮದ ನೋಟವನ್ನು ಸಾಧ್ಯವಾಗಿಸುತ್ತವೆ. ಎರಡೂ ಕಣ್ಣಿಗೆ ಕಾಣುವಂತಹ ಕೊಂಚ ವಿಭಿನ್ನ ನೋಟಗಳು ಮಿಳಿತವಾಗಿ ಒಂದು ಆಳಪರಿಣಾಮವನ್ನು(3ಡಿ) ಒದಗಿಸುತ್ತವೆ.
ಕೇಂದ್ರಿಕರಣವನ್ನು ಸರಿದೂಗಿಸಲು ಒಂದು ತಿರುಪುಮೊಳೆಯನ್ನು (ಸ್ಕ್ರೂ) ಒದಗಿಸಿರುತ್ತಾರೆ. ಪ್ರತಿಯೊಂದು ದೂರದರ್ಶಕವೂ ಪೂರ್ಣ ಪ್ರತಿಫಲಿತ ಪಟ್ಟಕವನ್ನು ಹೊಂದಿದ್ದು ಅವುಗಳು ವಸ್ತುವಿನಿಂದ ಉಂಟಾದ ತಲೆಕೆಳಗಾದ ಪ್ರತಿಬಿಂಬವನ್ನು ಪಡೆಯಲು ಸಹಾಯ ಮಾಡುತ್ತದೆ. ಆದ್ದರಿಂದ ಕೊನೆಯಲ್ಲಿ ನೇರ ಮತ್ತು ದೊಡ್ಡದಾದ ಬಿಂಬ ದೊರೆಯುತ್ತದೆ.
ಆಪ್ಟಿಕಲ್ ವಿನ್ಯಾಸ
ಬದಲಾಯಿಸಿಗೆಲಿಲಿಯನ್ ಬೈನಾಕ್ಯುಲರ್ಸ್
ಬದಲಾಯಿಸಿಹದಿನೇಳನೇ ಶತಮಾನದಲ್ಲಿ ದೂರದರ್ಶಕದ ಆವಿಷ್ಕಾರವಾದನಂತರ ಅದೇ ಕಾಲದಿಂದಲೇ ಎರಡು ದೂರದರ್ಶಕಗಳನ್ನು ಒಂದರಪಕ್ಕದಲ್ಲೊಂದು ಇಟ್ಟು ಬೈನಾಕ್ಯುಲರ್ ನೋಟದ ಸಾಧ್ಯತೆಗಳನ್ನು ಪ್ರಯತ್ನಿಸಿರಬಹುದು.[೧] ಹಿಂದಿನ ಕಾಲದ ಬೈನಾಕ್ಯುಲರುಗಳು ಗೆಲಿಲಿಯನ್ ವಿನ್ಯಾಸವನ್ನೇ ಬಳಸುತ್ತಿದ್ದವು. ಗೆಲಿಲಿಯನ್ ವಿನ್ಯಾಸವು ಒಂದು ನೇರ ಚಿತ್ರವನ್ನು ಒದಗಿಸುವುದನ್ನು ಸಾಧ್ಯವಾಗಿಸಿದರೂ ಸಹ ಅದರ ನೋಟದ ಕ್ಷೇತ್ರ ಕಿರಿದಾಗಿರುತ್ತದೆ ಮತ್ತು ಅದರಲ್ಲಿ ಹೆಚ್ಚಿನ ಹಿಗ್ಗಿಸುವಿಕೆ (magnification) ಸಾಧ್ಯವಿರುವುದಿಲ್ಲ. ಈತರಹದ ವಿನ್ಯಾಸ ಈಗಲೂ ಸಹ ಅಗ್ಗದ ಮಾಡೆಲ್ ಗಳಲ್ಲಿ ಬಳಸಲಾಗುತ್ತದೆ. ಗೆಲಿಲಿಯನ್ ವಿನ್ಯಾಸವು ಕಡಿಮೆ ಹಿಗ್ಗಿಸುವಿಕೆಯ ಸರ್ಜಿಕಲ್ (ಶಸ್ತ್ರಚಿಕಿತ್ಸೆ) ಮತ್ತು ಆಭರಣ ತಯಾರಿಕೆಯ ಬೈನಾಕ್ಯುಲರುಗಳಲ್ಲಿ ಬಳಸಲಾಗುತ್ತದೆ. ಇವು ನೇರವಾದ ವಸ್ತುಚಿತ್ರವನ್ನು ತೋರಿಸುವುದರ ಜೊತೆಗೆ ಸಣ್ಣಗಾತ್ರ ಮತ್ತು ಕಡಿಮೆ ತೂಕವನ್ನು ಹೊಂದಿದ್ದು ಕಡಿಮೆ ವೆಚ್ಚದಲ್ಲಿ ತಯಾರಿಸಬಹುದಾಗಿದೆ. ಸಾಮಾನ್ಯವಾಗಿ ಅವುಗಳನ್ನು ಕಣ್ಣಿಗೆ ತೊಟ್ಟುಕೊಳ್ಳುವಂತ ಚೌಕಟ್ಟುಗಳಿಗೆ ಕೂಡ್ರಿಸಲಾಗುತ್ತದೆ.
ಕೆಪ್ಲೇರಿಯನ್ ವಿನ್ಯಾಸ
ಬದಲಾಯಿಸಿಕೆಪ್ಲೆರಿಯನ್ನನ ಆಪ್ಟಿಕ್ಸ್ ಬಳಸುದರ ಮೂಲಕ ಇನ್ನೂ ಸುಧಾರಿತ ಚಿತ್ರಣ ಹಾಗೂ ಹಿಗ್ಗಿಸುವಿಕೆ ಪಡೆಯಲು ಸಾಧ್ಯ. ಇದರಲ್ಲಿ ಆಬ್ಜೆಕ್ಟಿವ್ ಮಸೂರದಲ್ಲಿ ಮೂಡಿದ ಚಿತ್ರವನ್ನು ಪಾಸಿಟಿವ್ ಐಪೀಸ್ ಮಸೂರದ ಮೂಲಕ ನೋಡಲಾಗುತ್ತದೆ. ಆದರೆ ಇದು ವಸ್ತುವನ್ನು ತಲೆಕೆಳಗಾಗಿ ತೋರಿಸುವುದರಿಂದ ಅದನ್ನು ನೇರವಾಗಿಸಲು ಅನೇಕ ವಿಧಾನಗಳನ್ನು ಬಳಸಲಾಗುತ್ತದೆ.
ಯಾಂತ್ರಿಕ ವಿನ್ಯಾಸ
ಬದಲಾಯಿಸಿಬೈನಾಕ್ಯುಲರುಗಳು ಕಣ್ಣಿನ ಮತ್ತು ಗುರಿಮಸೂರಗಳ (eye lens & objective lens) ನಡುವೆ ದೂರವನ್ನು ಬದಲಾಯಿಸುವಂತಹ ಫೋಕಸಿಂಗ್ ವ್ಯವಸ್ಥೆಯನ್ನು ಹೊಂದಿರುತ್ತವೆ.
ಉಪಯೋಗ/ಬಳಕೆಗಳು
ಬದಲಾಯಿಸಿಸಾಮಾನ್ಯ ಬಳಕೆ
ಬದಲಾಯಿಸಿಕೈಯಲ್ಲಿ ಹಿಡಿದುಕೊಳ್ಳುವಂತಹ ಸಣ್ಣಗಾತ್ರದ ದುರ್ಬೀನುಗಳು. ಅನೇಕ ಪ್ರವಾಸಿ ಸ್ಥಳಗಳಲ್ಲಿ ನಾಣ್ಯಗಳನ್ನು ಹಾಕಿ ಪಾವತಿಸಿ ಬಳಸಬಹುದಾದಂತಹ ಸ್ಟ್ಯಾಂಡ್ ಮೇಲೆ ಇಡುವಂತಹ ದುರ್ಬೀನುಗಳನ್ನು ಇಟ್ಟಿರಲಾಗುತ್ತದೆ.
ಭೂಮಾಪನ(Land Surveys) ಮತ್ತು ಭೌಗೋಳಿಕ ಮಾಹಿತಿ ಸಂಗ್ರಹಣೆ (Geographic Data Collection)
ಬದಲಾಯಿಸಿಈಗ ಭೌಗೋಳಿಕ ಮಾಹಿತಿ ಸಂಗ್ರಹಣೆಗಾಗಿ ಉನ್ನತ ತಂತ್ರಜ್ಞಾನಗಳು ಬಂದಿದ್ದರೂ ಸಹ, ಹಿಂದಿನ ಕಾಲದಲ್ಲಿ ಭೌಗೋಳಿಕೆ ಶಾಸ್ತ್ರಜ್ಞರಿಂದ ಬೈನಾಕ್ಯುಲರುಗಳು ಬಳಕಯಾಗುತ್ತಿದ್ದವು. ಈಗಲೂ ಸಹ ವಿಶಾಲವಾದ ಕ್ಷೇತ್ರಗಳ ಭೂಮಾಪನದಲ್ಲಿ ಇವು ಸಹಾಯಕಾರಿ.
ಪಕ್ಷಿವೀಕ್ಷಣೆ
ಬದಲಾಯಿಸಿಪಕ್ಷಿವೀಕ್ಷಣೆಯು ಜನಪ್ರಿಯ ಹವ್ಯಾಸವಾಗಿದ್ದು ಅದರಲ್ಲಿ ಬೈನಾಕ್ಯುಲರ್ಸ್ ನಿಸರ್ಗ ಮತ್ತು ಪ್ರಾಣಿಪ್ರಿಯರ ಒಂದು ಮೂಲಭೂತ ಸಾಧನವಾಗಿದೆ.[೨] ಇದರಲ್ಲಿ ಸಾಮಾನ್ಯವಾಗಿ 7x ಇಂದ 9x ವರೆಗಿನ ಹಿಗ್ಗಿಸುವಿಕೆ ಸಾಮರ್ಥ್ಯದ ದುರ್ಬೀನುಗಳು ಬಳಕೆಯಾಗುತ್ತವೆ.
ಬೇಟೆ
ಬದಲಾಯಿಸಿಬೇಟೆಗಾರರು ಬೇಟೆಯಾಡುವಾಗ ಬರಿಗಣ್ಣಿನಿಂದ ಕಾಣಲು ಸಾಧ್ಯವಾಗದಂತಹ ಪ್ರಾಣಿಗಳನ್ನು ಕಂಡುಹಿಡಿಯಲು ದುರ್ಬೀನುಗಳನ್ನು ಬಳಸುತ್ತಾರೆ. ಸಾಮಾನ್ಯವಾಗಿ 8x ಸಾರ್ಮರ್ಥ್ಯದ, ಕಡಿಮೆ ಬೆಳಕಿನ ಪರಿಸರದಲ್ಲಿ ಬಳಕೆಮಾಡಬಹುದಾದ ದೊಡ್ಡ ಗುರಿಮಸೂರ (objective) ದುರ್ಬೀನುಗಳು ಬಳಕೆಯಾಗುತ್ತವೆ.
ದೂರ ಅಳತೆ
ಬದಲಾಯಿಸಿಕೆಲವು ದುರ್ಬೀನುಗಳಲ್ಲಿ ದೂರ ಅಳತೆಯ ಸ್ಕೇಲ್ ಗುರುತುಗಳು ಮಾಡಲ್ಪಟ್ಟಿರುತ್ತವೆ. ಅದರ ಮೂಲಕ ನೋಡುತ್ತಿರುವ ವಸ್ತು ಎಷ್ಟು ದೂರದಲ್ಲಿದೆ ಎಂದು ಲೆಕ್ಕ ಮಾಡಿ ಅಂದಾಜಿಸಬಹುದು. ಸಾಗರಯಾನದಲ್ಲಿ ಸಾಮಾನ್ಯವಾಗಿ ಬಳಕೆಯಾಗುತ್ತದೆ.
ಮಿಲಿಟರಿ
ಬದಲಾಯಿಸಿಮಿಲಿಟರಿಯಲ್ಲಿ ದುರ್ಬೀನುಗಳ ಬಳಕೆಗೆ ಬಹಳ ಇತಿಹಾಸವಿದೆ. ಹತ್ತೊಂಭತ್ತನೆಯ ಶತಮಾನದ ಕೊನೆಯವರೆಗೆ ಗೆಲಿಲಿಯನ್ ವಿನ್ಯಾಸದ ದುರ್ಬೀನುಗಳು ಬಳಕೆಯಾಗುತ್ತಿದ್ದವು. ಆನಂತರ ಪಟ್ಟಕದ ವಿಧದ ದುರ್ಬೀನುಗಳು ತಯಾರಾದವು. ಮಿಲಿಟರಿಗೆ ಬಳಸುವ ದುರ್ಬೀನುಗಳು ಸಾಮಾನ್ಯ ದುರ್ಬೀನುಗಳಿಗಿಂದ ಗಟ್ಟಿಮುಟ್ಟಾಗಿರುತ್ತವೆ.
ಖಗೋಳ ವಿಜ್ಞಾನ
ಬದಲಾಯಿಸಿ25 × 150 ದುರ್ಬೀನುಗಳು ಖಗೋಳ ವಿಜ್ಞಾನದ ಕೆಲಸಗಳಲ್ಲಿ ಬಳಕೆಯಾಗುತ್ತದೆ. ಪ್ರಾರಂಭಿಕ ಹಂತದ ಖಗೋಳ ವಿಜ್ಞಾನಿಗಳಿಂದ ಧೂಮಕೇತು ಮತ್ತು ಸುಪರ್ನೋವಾ ವೀಕ್ಷಣೆ ಮತ್ತು ಸಾಮಾನ್ಯ ಬಳಕೆಗಾಗಿ ಬಳಸಲ್ಪಡುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ The Early History of the Binocular Archived 2011-06-13 ವೇಬ್ಯಾಕ್ ಮೆಷಿನ್ ನಲ್ಲಿ., Europa.com
- ↑ ಕೊಡಗಿನ ಖಗರತ್ನಗಳು: ಲೇ: ಡಾ. ಎಸ್ ವಿ ನರಸಿಂಹನ್:3: ಪಕ್ಷಿವೀಕ್ಷಣೆ ಕಣಜ ಮಾಹಿತಿಕೋಶ
ಇವನ್ನೂ ನೋಡಿ
ಬದಲಾಯಿಸಿಹೊರಕೊಂಡಿಗಳು
ಬದಲಾಯಿಸಿ- Binoculars, Explainthatstuff
- How Binoculars Work Archived 2016-04-10 ವೇಬ್ಯಾಕ್ ಮೆಷಿನ್ ನಲ್ಲಿ., BirdWatching.com
- Binoculars - How Binoculars Work?, Azooptics