ಎಸ್.ಎಲ್. ಭೈರಪ್ಪ

ಭಾರತೀಯ ಕಾದಂಬರಿಕಾರ
(ಡಾ.ಎಸ್.ಎಲ್. ಬೈರಪ್ಪ ಇಂದ ಪುನರ್ನಿರ್ದೇಶಿತ)

ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಆಧುನಿಕ ಕನ್ನಡ ಸಾಹಿತ್ಯದ ಕಾದಂಬರಿಕಾರರು ಮತ್ತು ಲೇಖಕರು. ಕನ್ನಡ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವ ಇವರ ಕೃತಿಗಳು ಇಂಗ್ಲೀಷ್ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತದ ಸಾಹಿತ್ಯವಲಯದಲ್ಲಿ ಹೆಸರಾಗಿದ್ದಾರೆ. ಇವರ ಕಾದಂಬರಿಗಳು ಹಲವಾರು ಮರುಮುದ್ರಣಗಳನ್ನು ಕಂಡು ಕನ್ನಡದ ಜನಪ್ರಿಯ ಬರಹಗಾರರಾಗಿದ್ದಾರೆ.ಇವರಿಗೆ ಭಾರತ ಸರ್ಕಾರವು ೨೦೨೩ನೇ ಸಾಲಿನಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

ಎಸ್.ಎಲ್. ಭೈರಪ್ಪ
ಶ್ರೀ ಎಸ್.ಎಲ್. ಭೈರಪ್ಪ
ಜನನ೨೬-೦೭-೧೯೩೪
ಸಂತೇಶಿವರ, ಹಾಸನ ಜಿಲ್ಲೆ, ಕರ್ನಾಟಕ, ಭಾರತ
ವೃತ್ತಿಲೇಖಕ,ವಿಮರ್ಶಕ,ಅಧ್ಯಾಪಕ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಕಥೆ, ಕಾದಂಬರಿ, ಇತಿಹಾಸ


slbhyrappa.in/kn/
  • ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ ೨೬-೦೭-೧೯೩೪[] ರಂದು ಹುಟ್ಟಿದ ಭೈರಪ್ಪನವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪಡೆದರು. ಕಿತ್ತು ತಿನ್ನುವ ಬಡತನ, ಬೇಜವಾಬ್ದಾರಿ ತಂದೆ, ಪ್ಲೇಗ್ ಮಾರಿಯಿಂದ ತತ್ತರಗೊಂಡ ಪರಿಸರದಲ್ಲೂ ಅವರ ಸಣ್ಣ ವಯಸ್ಸಿನಲ್ಲೇ ಅವರ ತಾಯಿಯ ಧೀಮಂತಿಕೆಯನ್ನು ಮೈಗೂಡಿಸಿ ಕೊಂಡರು. ಶಾಲಾ ದಾಖಲೆಗಳ ಪ್ರಕಾರ ಅವರ ಜನ್ಮದಿನ ೨೦-೦೮-೧೯೩೧ ಎಂದು ಅವರು ತಮ್ಮ ಆತ್ಮಕಥೆ ಭಿತ್ತಿಯಲ್ಲಿ ಹೇಳಿಕೊಂಡಿದ್ದಾರೆ. (ಪುತ ೫೦ ಮೊದಲ ಮುದ್ರಣ).
  • ಅವರ ೫ನೇ ವಯಸ್ಸಿನಲ್ಲಿ ಅವರ ತಾಯಿ ಬಡತನ - ಪ್ಲೇಗ್ ಗಳಿಗೆ ಜೀವವನ್ನು ತೆತ್ತಾಗ ಬದುಕಿನ ವಿಶ್ವ ವಿಶಾಲತೆಯ ರಂಗದಲ್ಲಿ ಸಾಹಸಮಯವಾದ ಬದುಕನ್ನು ತಾವೇ ನಿರ್ಮಿಸಿ ಕೊಳ್ಳ ತೊಡಗಿ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದರು. ಗಾಂಧೀಜಿಯವರ ಮೌಲ್ಯಗಳಿಗೆ ಬೆಲೆ ಕೊಟ್ಟು ಸ್ವಾತಂತ್ರ ಚಳುವಳಿಗೆ ತೊಡಗಿಸಿಕೊಂಡಾಗ ಅವರಿಗೆ ಕೇವಲ ೧೩ ವರ್ಷ!
  • ಪ್ರೌಢ ಶಿಕ್ಷಣ ಹಾಗೂ ಕಾಲೇಜು ಓದು ಮೈಸೂರಿನಲ್ಲಿ ಮುಂದುವರೆಸಿದ ಭೈರಪ್ಪನವರು ಎಂ.ಎ.ನಲ್ಲಿ ಸುವರ್ಣ ಪದಕದೊಂದಿಗೆ ತೇರ್ಗಡೆಯಾದರು. ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ "ಸತ್ಯ ಮತ್ತು ಸೌಂದರ್ಯ", ಎಂಬ ಇಂಗ್ಲಿಷ್‌ನಲ್ಲಿ ರಚಿಸಿದ ಮಹಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ಗಳಿಸಿದರು.
  • ಹುಬ್ಬಳ್ಳಿ, ಗುಜರಾತಿನ ಸರದಾರ್ ಪಟೇಲ್ ವಿಶ್ವ ವಿದ್ಯಾಲಯ, ದೆಹಲಿಗಳಲ್ಲಿ ತಮ್ಮ ಉಪನ್ಯಾಸಕ ವೃತ್ತಿ ಕೈಗೊಂಡ ಭೈರಪ್ಪನವರು, ಶಾಸ್ತ್ರಿಯ ಶಿಸ್ತಿನ ಓದಿನ ನಡುವೆ ಮಹತ್ವದ ಕಾದಂಬರಿಗಳನ್ನು ರಚಿಸಿದ್ದಾರೆ. ೧೯೬೧ ರಲ್ಲಿ `ಧರ್ಮಶ್ರೀ' ಕಾದಂಬರಿ ಪ್ರಕಟಿಸಿ ಇದುವರೆವಿಗೆ ನಾಲ್ಕು ದಶಕಗಳಲ್ಲಿ ೨೧ ಕಾದಂಬರಿಗಳನ್ನು ಬರೆದಿದ್ದಾರೆ.
  • ಆಯಾ ಕಾಲದಲ್ಲಿ ಬಂದ ಅವರ ಕಾದಂಬರಿಗಳೆಲ್ಲಾ ಚರ್ಚೆಗೆ ಒಳಗಾಗಿವೆ. ಇಂಗ್ಲಿಷ್ ಭಾಷೆಯೂ ಸೇರಿದಂತೆ ಭಾರತೀಯ ಹಲವು ಭಾಷೆಗಳಿಗೆ ಭೈರಪ್ಪನವರ ಕಾದಂಬರಿಗಳು ಅನುವಾದ ಗೊಂಡಿವೆ. ಗೃಹಭಂಗ ,ವಂಶವೃಕ್ಷ, ನೆಲೆ, ಸಾಕ್ಷಿ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ, ದಾಟು, ಧರ್ಮಶ್ರೀ, ಪರ್ವ, ಭಿತ್ತಿ ಮುಂತಾದವು ಹಿಂದಿ, ಮರಾಠಿಯಲ್ಲಿ ಜನಪ್ರಿಯವಾಗಿವೆ.
  • ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ ಕಾದಂಬರಿಗಳು ಚಲನಚಿತ್ರವಾಗಿ ಪ್ರಶಸ್ತಿ ಗಳಿಸಿವೆ. ವಂಶವೃಕ್ಷಕ್ಕೆ ೧೯೬೬ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೭೫ ರಲ್ಲಿ ದಾಟು ಕಾದಂಬರಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
  • `ಪರ್ವ' ಭೈರಪ್ಪನವರು ರಚಿಸಿದ ಕಾದಂಬರಿಗಳಲ್ಲೇ ಭಾರೀ ಚರ್ಚೆಗೆ ಒಳಗಾದದ್ದು. ಮಹಾಭಾರತ ಕಾಲದ ಭಾರತೀಯ ಸಮಾಜದ ರೀತಿ ನೀತಿಗಳನ್ನೂ, ಆ ಕಾಲದ ಜೀವನ ಮೌಲ್ಯಗಳನ್ನು, ಮೃತ್ಯುವಿನ ರಹಸ್ಯಾತ್ಮಕತೆಯನ್ನು ಕಾದಂಬರಿಯಲ್ಲಿ ಅರ್ಥಪೂರ್ಣವಾಗಿ ಬಿಂಬಿಸಲಾಗಿದೆ. ಲೈಂಗಿಕತೆ ಮತ್ತು ಸಾವುಗಳ ನೆಲೆಯಲ್ಲಿ ದ್ರೌಪದಿ, ಕುಂತಿ, ಮಾದ್ರಿ, ಗಾಂಧಾರಿ ಪಾತ್ರಗಳನ್ನು ವಿಶಿಷ್ಟವಾಗಿ ಮೂಡಿಸಿದ್ದಾರೆ.
  • ಕಾದಂಬರಿಗಳಲ್ಲದೆ ಸಾಹಿತ್ಯ ಮೀಮಾಂಸೆಗೆ ಸಂಬಂಧಿಸಿದ `ಸಾಹಿತ್ಯ ಮತ್ತು ಪ್ರತೀಕ', `ಕಥೆ ಮತ್ತು ಕಥಾವಸ್ತು', `ನಾನೇಕೆ ಬರೆಯುತ್ತೇನೆ' ಎಂಬ ಕೃತಿಗಳನ್ನೂ ಭೈರಪ್ಪ ರಚಿಸಿದ್ದಾರೆ. ಪ್ರಸ್ತುತ ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿದ್ದಾರೆ. ೧೯೯೯ರಲ್ಲಿ ಕನಕಪುರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಭೈರಪ್ಪ ಆಯ್ಕೆಯಾಗಿದ್ದರು.

(ಹೆಚ್ಚಿನ ಓದು : ಭೈರಪ್ಪನವರ ಬಾಲ್ಯ ಕಾಲದ ಹೃದಯಸ್ಪರ್ಶಿ ಚಿತ್ರಣಕ್ಕಾಗಿ ಬೆಳಗೆರೆ ಕೃಷ್ಣಶಾಸ್ತ್ರಿಗಳ "ಮರೆಯಲಾದೀತೇ" ವ್ಯಕ್ತಿ ಚಿತ್ರ ಸಂಗ್ರಹದಲ್ಲಿ ಭೈರಪ್ಪನವರ ಬಗೆಗಿನ ಅಧ್ಯಾಯವನ್ನು ಓದಿ. ಭೈರಪ್ಪನವರ ಜೀವನದ ಹೆಚ್ಚಿನ ಮಾಹಿತಿಗಾಗಿ ಅವರ ಆತ್ಮಚರಿತ್ರೆ ಭಿತ್ತಿಯನ್ನೂ ಓದಬಹುದಾಗಿದೆ.)

ಕೃತಿಗಳು

ಬದಲಾಯಿಸಿ

ಕಾದಂಬರಿಗಳು

ಬದಲಾಯಿಸಿ
  1. ಭೀಮಕಾಯ
  2. ಬೆಳಕು ಮೂಡಿತು
  3. ಧರ್ಮಶ್ರೀ - (೧೯೬೧)
  4. ದೂರ ಸರಿದರು- (೧೯೬೨)
  5. ಮತದಾನ - (೧೯೬೫)
  6. ವಂಶವೃಕ್ಷ- (೧೯೬೫)
  7. ಜಲಪಾತ (ಕಾದಂಬರಿ)- (೧೯೬೭)
  8. ನಾಯಿ ನೆರಳು- (೧೯೬೮)
  9. ತಬ್ಬಲಿಯು ನೀನಾದೆ ಮಗನೆ-(೧೯೬೮)
  10. ಗೃಹಭಂಗ-(೧೯೭೦)
  11. ನಿರಾಕರಣ-(೧೯೭೧)
  12. ಗ್ರಹಣ-(೧೯೭೨)
  13. ದಾಟು -(೧೯೭೩)
  14. ಅನ್ವೇಷಣ-(೧೯೭೬)
  15. ಪರ್ವ-(೧೯೭೯)
  16. ನೆಲೆ -(೧೯೮೩)
  17. ಸಾಕ್ಷಿ -(೧೯೮೬)
  18. ಅಂಚು-(೧೯೯೦)
  19. ತಂತು -(೧೯೯೩)
  20. ಸಾರ್ಥ-(೧೯೯೮)
  21. ಮಂದ್ರ-(೨೦೦೧)
  22. ಆವರಣ-(೨೦೦೭)
  23. ಕವಲು - (೨೦೧೦)
  24. ಯಾನ - (೨೦೧೪)
  25. ಉತ್ತರಕಾಂಡ-(೨೦೧೭)

ಆತ್ಮ ಚರಿತ್ರೆ

ಬದಲಾಯಿಸಿ

ತತ್ತ್ವಶಾಸ್ತ್ರ

ಬದಲಾಯಿಸಿ
  1. ಸತ್ಯ ಮತ್ತು ಸೌಂದರ್ಯ (೧೯೬೬) - ಪಿ.ಎಚ್.ಡಿ ಪ್ರಬಂಧ
  2. ಸಾಹಿತ್ಯ ಮತ್ತು ಪ್ರತೀಕ (೧೯೬೭)
  3. ಕಥೆ ಮತ್ತು ಕಥಾವಸ್ತು (೧೯೬೯)
  4. ಸಂದರ್ಭ:ಸಂವಾದ (೨೦೧೧)
  • ನಾನೇಕೆ ಬರೆಯುತ್ತೇನೆ? (೧೯೮೦)

ಇತರ ಭಾಷೆಗಳಿಗೆ ಅನುವಾದವಾಗಿರುವ ಕಾದಂಬರಿಗಳು

ಬದಲಾಯಿಸಿ
  1. ಧರ್ಮಶ್ರೀ - ಸಂಸ್ಕೃತ, ಮರಾಠಿ
  2. ವಂಶವೃಕ್ಷ - ತೆಲುಗು, ಮರಾಠಿ, ಹಿಂದಿ, ಉರ್ದು, ಇಂಗ್ಲೀಷ್
  3. ನಾಯಿ ನೆರಳು - ಗುಜರಾತಿ, ಹಿಂದಿ
  4. ತಬ್ಬಲಿಯು ನೀನಾದೆ ಮಗನೆ - ಹಿಂದಿ
  5. ಗೃಹಭಂಗ - ಭಾರತದ ಹದಿನಾಲ್ಕು ಭಾಷೆಗಳಿಗೆ ಅನುವಾದವಾಗಿದೆ
  6. ನಿರಾಕರಣ -ಹಿಂದಿ
  7. ದಾಟು - ಇಂಗ್ಲೀಷ್, ಭಾರತದ ಹದಿನಾಲ್ಕು ಭಾಷೆಗಳಿಗೆ ಅನುವಾದವಾಗಿದೆ
  8. ಅನ್ವೇಷಣ -ಹಿಂದಿ,ಮರಾಠಿ
  9. ಪರ್ವ -ಹಿಂದಿ, ಮರಾಠಿ, ಇಂಗ್ಲೀಷ್, ತೆಲುಗು, ಬೆಂಗಾಲಿ, ತಮಿಳು
  10. ನೆಲೆ -ಹಿಂದಿ
  11. ಸಾಕ್ಷಿ - ಹಿಂದಿ, ಇಂಗ್ಲೀಷ್
  12. ಅಂಚು -ಹಿಂದಿ, ಮರಾಠಿ
  13. ತಂತು -ಹಿಂದಿ, ಮರಾಠಿ
  14. ಸಾರ್ಥ -ಹಿಂದಿ, ಮರಾಠಿ, ಇಂಗ್ಲೀಷ್, ಸಂಸ್ಕೃತ
  15. ನಾನೇಕೆ ಬರೆಯುತ್ತೇನೆ -ಮರಾಠಿ
  16. ಸತ್ಯ ಮತ್ತು ಸೌಂದರ್ಯ -ಇಂಗ್ಲೀಷ್
  17. ಭಿತ್ತಿ -ಹಿಂದಿ, ಮರಾಠಿ

ಚಲನಚಿತ್ರವಾಗಿರುವ ಕಾದಂಬರಿಗಳು

ಬದಲಾಯಿಸಿ
  1. ವಂಶವೃಕ್ಷ - ೧೯೭೨
  2. ತಬ್ಬಲಿಯು ನೀನಾದೆ ಮಗನೆ - ೧೯೭೭
  3. ಮತದಾನ - ೨೦೦೧
  4. ನಾಯಿ ನೆರಳು - ೨೦೦೬

ಟಿ.ವಿ. ಧಾರಾವಾಹಿಯಾಗಿರುವ ಕಾದಂಬರಿಗಳು

ಬದಲಾಯಿಸಿ
  1. ಗೃಹಭಂಗ
  2. ದಾಟು (ಹಿಂದಿ)

ಪ್ರಶಸ್ತಿ/ಗೌರವಗಳು

ಬದಲಾಯಿಸಿ

ಚಿತ್ರಸಂಪುಟ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. ಸಾಲುದೀಪಗಳು (2 ed.). ಕರ್ನಾಟಕ ಸಾಹಿತ್ಯ ಅಕಾಡೆಮಿ. 2001. p. 572.
  2. "ಎಸ್ ಎಲ್ ಭೈರಪ್ಪನವರಿಗೆ ೨೦೨೩ ಸಾಲಿನ ಪದ್ಮಭೂಷಣ ಪ್ರಶಸ್ತಿ". Archived from the original on 2023-01-26. Retrieved 2023-01-26.
  3. ಭೈರಪ್ಪಗೆ-ಬೆಟಗೇರಿ-ಕೃಷ್ಣಶರ್ಮ-ಪ್ರಶಸ್ತಿ Archived 2016-03-28 ವೇಬ್ಯಾಕ್ ಮೆಷಿನ್ ನಲ್ಲಿ., ಕನ್ನಡಪ್ರಭ, ೨೩ಜುಲೈ೨೦೧೪
  4. ಎಸ್ ಎಲ್ ಭೈರಪ್ಪನವರಿಗೆ ೨೦೦೫ ಸಾಲಿನ ಪಂಪ ಪ್ರಶಸ್ತಿ, ಪ್ರಜಾವಾಣಿ, ೧೧ಜವನರಿ೨೦೦೬
  5. ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ Archived 2012-06-25 ವೇಬ್ಯಾಕ್ ಮೆಷಿನ್ ನಲ್ಲಿ., ದಿ ಹಿಂದೂ, ೨೧ಏಪ್ರಿಲ್೨೦೦೭
  6. ಖ್ಯಾತ ಕಾದಂಬರಿಕಾರ ಎಸ್.ಎಲ್ ಭೈರಪ್ಪ 'ರಾಷ್ಟ್ರೀಯ ಪ್ರಾಧ್ಯಾಪಕ' Archived 2014-12-16 ವೇಬ್ಯಾಕ್ ಮೆಷಿನ್ ನಲ್ಲಿ., ಕನ್ನಡಪ್ರಭ, ೧೧ಡಿಸೆಂಬರ್೨೦೧೪
  7. 'ಭೈರಪ್ಪಗೆ ಸಾಹಿತ್ಯ ಅಕಾಡೆಮಿ ಫೆಲೋ ಗೌರವ' Archived 2016-03-04 ವೇಬ್ಯಾಕ್ ಮೆಷಿನ್ ನಲ್ಲಿ., ಪ್ರಜಾವಾಣಿ, 03/11/2015, ಬೆಂಗಳೂರು,

ಬಾಹ್ಯ ಸಂಪರ್ಕಗಳು

ಬದಲಾಯಿಸಿ