ಯಾನ (ಪುಸ್ತಕ)

ಪ್ರಯಾಣ

ಯಾನ ಕನ್ನಡದ ಪ್ರಮುಖ ಕಾದಂಬರಿಕಾರರಲ್ಲಿ ಒಬ್ಬರಾದ ಎಸ್.ಎಲ್.ಭೈರಪ್ಪನವರ ೨೦೧೪ಸಾಲಿನ ಕಾದಂಬರಿ.

ಯಾನ
ಯಾನ
ಲೇಖಕರುಎಸ್. ಎಲ್. ಭೈರಪ್ಪ
ದೇಶಭಾರತ
ಭಾಷೆಕನ್ನಡ
ಪ್ರಕಾಶಕರುಸಾಹಿತ್ಯ ಭಂಡಾರ
ಪ್ರಕಟವಾದ ದಿನಾಂಕ
೨೦೧೪
ಪುಟಗಳು೨೧೦


'ಯಾನ'ಎರಡು ದೋಣಿಯ ಮೇಲೆ ಕಾಲಿಟ್ಟ ಮುಗ್ಧ ಮನುಷ್ಯನಂತೇ ಗೋಚರಿಸುತ್ತದೆ.ವೈಜ್ಞಾನಿಕತೆ ಮತ್ತು ತತ್ವಗಳು ಸಹಜವಾಗಿ ಏಕಮುಖವಾಗಿ ಚಲಿಸಿ ಭೇಟಿಯಾದಂತೆ ಭಾಸವಾಗುತ್ತದೆ.ದಿನೇದಿನೇ ಬದಲಾಗುತ್ತಿರುವ ಸಾಮಾಜಿಕ ಕಟ್ಟುಪಾಡು,ಧೋರಣೆಗಳು ಭವಿಷ್ಯದ ಜನಾಂಗದ ಮೇಲೆ ಬೀರುವ ಪ್ರಭಾವ,ಪರಿಣಾಮಗಳ ಕುರಿತು 'ಯಾನ' ಒಂದು ಯಶಸ್ವಿಯಾದ ಸವಿವರ ವರದಿ. ಸೌರಮಂಡಲದಿಂದಾಚೆಗೆ ಪಯಣ ಮಾಡುವಾಗ ಮಾನವನ ನೈತಿಕ ಚೌಕಟ್ಟುಗಳಲ್ಲೂ ಆಗುವ ಪಲ್ಲಟವೇ ಈ ಕಾದಂಬರಿಯ ವಸ್ತು.

ಕಾದಂಬರಿಯು ಸೀಮಿತ ಪಾತ್ರಧಾರಿಗಳ ನಡುವೆ ಮಾನವೀಯ ಸಂಬಂಧಗಳು ಮತ್ತು ಮೌಲ್ಯಗಳ ಅರಿತ, ನಿರೂಪಣೆ ಹಾಗೂ ಸೀಮಿತತೆ ಬಗ್ಗೆ ಬಹು ವೈಚಾರಿಕವಾಗಿ ಚರ್ಚಿಸುತ್ತ ಅಂತಃಕರಣ ಸ್ಪರ್ಶಮಾಡುತ್ತದೆ. ಕಾದಂಬರಿಯ ನಿರೂಪಣೆ ತಂತ್ರಗಾರಿಕೆಯು ಕೂಡಾ ಅನುಭವದ ಸರಣಿಯ ರೀತಿ ಅನಿಸುತ್ತದೆ.

ಕಾದಂಬರಿಯ ಮುಖ್ಯಪಾತ್ರಗಳು ಉತ್ತರೆ,ಸುದರ್ಶನ,ಮೇದಿನಿ,ಆಕಾಶ್ ಮತ್ತು ಯಾದವ್. ಎಂದಿನಂತೆ ಭೈರಪ್ಪನವರ ಈ ಕಾದಂಬರಿ ಪುರುಷ ಸ್ತ್ರೀ ಸಹಜ ಸಂಬಂಧದ ನಿಲುವಿಗಾಗಿ ತಹತಹಿಸುತ್ತದೆ.ಸ್ತ್ರೀ ಪುರುಷರ ಅವಶ್ಯ ಲೈಂಗಿಕ ಸಂಬಂಧದ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಮಜಲನ್ನು ಕಾದಂಬರಿ ವಿವರಿಸುತ್ತದೆ.ಕಾದಂಬರಿ ನಡುವಲ್ಲಿ ಶರೀರ ಸಂಬಂಧಕ್ಕೆ ಪಂಥಾಹ್ವಾನವೊಡ್ಡಿ ನಗ್ನವಾಗಿ ನಿಲ್ಲುವ ಧೀರೆ ಉತ್ತರೆಯ ರೋಮಾಚ್ಛಾದಿತ ಯೋನಿಯೇ ಸುದರ್ಶನನಿಗೆ ಕಪ್ಪುಕುಳಿಯೆಂದೆನಿಸಿ, ಪ್ರಪಂಚದ ಪುರುಷಶಕ್ತಿಯನ್ನೇ ಸೆಳೆಯುವ ಗುರುತ್ವವಲಯ ರೂಪಕ ಪ್ರಚಂಡವೆನಿಸಿದರೂ ವೈಜ್ಞಾನಿಕವಾಗಿ ಮತ್ತು ಆಧ್ಯಾತ್ಮಿಕ ಸತ್ಯದರ್ಶನದಂತೆ ಕಾಣಿಸುತ್ತದೆ.ಭಾರತೀಯ ಪರಂಪರೆ, ಸಂಸ್ಕೃತಿ ಮತ್ತು ಪಾಶ್ಚಾತ್ಯ ವಿಚಾರಗಳ ಅನುಸಂಧಾನವೇ ಕೃತಿಯ ಒಳನಿಲುವು.