ಮಾದ್ರಿ ದ್ವಾಪರ ಯುಗದಲ್ಲಿ ಇದ್ದ ಮಹಾಭಾರತದ ಒಂದು ಪಾತ್ರ. ಮದ್ರ ದೇಶದ ರಾಜ ಋತಾಯನನ ಮಗಳು ಮತ್ತು ಶಲ್ಯನ ತಂಗಿ. ಪಾಂಡು ಮಹಾರಾಜನ ಎರಡನೆಯ ಹೆಂಡತಿ. ಪಂಚ ಪಾಂಡವರಲ್ಲಿಬ್ಬರಾದ ನಕುಲ ಮತ್ತು ಸಹದೇವರೆಂಬ ಅವಳಿ ಮಕ್ಕಳ ತಾಯಿ. ಮಾದ್ರಿ ಕುಂತಿ ನೀಡಿದ ಮಂತ್ರದ ಸಹಾಯದಿಂದ ಅಶ್ವಿನಿ ದೇವತೆಗಳನ್ನು ಆಹ್ವಾನಿಸಿ, ಅವರ ಅನುಗ್ರಹದಿಂದ ಈ ಮಕ್ಕಳನ್ನು ಪಡೆಯುತ್ತಾಳೆ.


"https://kn.wikipedia.org/w/index.php?title=ಮಾದ್ರಿ&oldid=317653" ಇಂದ ಪಡೆಯಲ್ಪಟ್ಟಿದೆ