ಸಹದೇವ ಮಹಾಭಾರತದಲ್ಲಿ ಪಾಂಡವರಲ್ಲಿ ನಾಲ್ಕನೆಯವ. ಮಾದ್ರಿ ದೇವಿಗೆ ಅಶ್ವಿನಿ ದೇವತೆಗಳ ವರಪ್ರಸಾದದಲ್ಲಿ ಅವಳಿ ಮಕ್ಕಳಾಗಿ ಜನಿಸಿದವ. ನಕುಲ ಇವನ ಅಣ್ಣ.

ಜಾವಾದ ಗೊಂಬೆಯಾಟದಲ್ಲಿ ಸಹದೇವನ ಗೊಂಬೆ

ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ, ಸಹದೇವ (ಸಂಸ್ಕೃತ: सहदेव) ಐದು ಪಾಂಡವ ಸಹೋದರರಲ್ಲಿ ಕಿರಿಯವನಾಗಿದ್ದಾನೆ. ನಕುಲ ಮತ್ತು ಸಹದೇವ ಅವರು ಮಾದ್ರಿಗೆ ಜನಿಸಿದ ಅವಳಿಯಾಗಿದ್ದು, ಕುಂತಿಯಿಂದ ದೂರ್ವಾಸರ ವರವನ್ನು ಬಳಸಿಕೊಂಡು ಅಶ್ವಿನಿಕುಮಾರರನ್ನು ಆಹ್ವಾನಿಸಿ ನಕುಲ ಮತ್ತು ಸಹದೇವರನ್ನು ಮಕ್ಕಳಾಗಿ ಪಡೆದಳು.


ವ್ಯುತ್ಪತ್ತಿ ಮತ್ತು ಇತರ ಹೆಸರುಗಳು

ಬದಲಾಯಿಸಿ

ಸಹದೇವ ಎಂಬ ಪದವು ಎರಡು ಸಂಸ್ಕೃತ ಪದಗಳಾದ ಸಹ (सह) ಮತ್ತು ದೇವ (देव) ದಿಂದ ಹುಟ್ಟಿಕೊಂಡಿದೆ. ಸಹ ಎಂದರೆ ಜೊತೆ ಮತ್ತು ದೇವ ದೇವತೆಗಾಗಿ ಬಳಸುವ ಹಿಂದೂ ಪದ. ಆದ್ದರಿಂದ ಅಕ್ಷರಶಃ, ಸಹದೇವ ಅರ್ಥ ದೇವರ ಜೊತೆ. ಮತ್ತೊಂದು ಅರ್ಥವೆಂದರೆ ಸಾವಿರ ದೇವರುಗಳು. ಸಹದೇವ ಮತ್ತು ಅವನ ಸಹೋದರ ನಕುಲ ಇಬ್ಬರನ್ನೂ ಅಶ್ವಿನೇಯರು ಎಂದು ಕರೆಯಲಾಗುತ್ತದೆ ಅಂದರೆ ಅವರು ಅಶ್ವಿನಿ ದೇವತೆಗಳಿಂದ ಜನಿಸಿದವರು ಎಂದರ್ಥ.[೧]

ಜನನ ಮತ್ತು ಆರಂಭಿಕ ವರ್ಷಗಳು

ಬದಲಾಯಿಸಿ

ಮಕ್ಕಳನ್ನು ಹೊಂದುವ ಪಾಂಡುವಿನ ಅಸಮರ್ಥತೆಯಿಂದ (ಋಷಿ ಕಿಂದಮನ ಶಾಪದಿಂದಾಗಿ), ಕುಂತಿ ತನ್ನ ಮೂವರು ಮಕ್ಕಳಿಗೆ ಜನ್ಮ ನೀಡುವಂತೆ ಮಹರ್ಷಿ ದೂರ್ವಾಸ ನೀಡಿದ ವರವನ್ನು ಬಳಸಬೇಕಾಗಿತ್ತು. ಪಾಂಡುವಿನ ಎರಡನೆಯ ಹೆಂಡತಿಯಾದ ಮಾದ್ರಿ (ಮದ್ರ ರಾಜಕುಮಾರಿ) ಜೊತೆಯಲ್ಲಿ ಅವಳು ವರವನ್ನು ಹಂಚಿಕೊಂಡಳು, ಅವಳು ಅಶ್ವಿನಿ ಕುಮಾರರಿಂದ ನಕುಲ ಮತ್ತು ಸಹದೇವರನ್ನು ಪಡೆಯಬೇಕೆಂದು ಆಹ್ವಾನಿಸಿದಳು.

ನಂತರ, ಪಾಂಡು ಅವನ ಪತ್ನಿ ಮಾದ್ರಿಯೊಂದಿಗೆ ಸೇರಲು ಪ್ರಯತ್ನಿಸಿದಾಗ ಕಿಂದಮರ ಶಾಪದಿಂದಾಗಿ ನಿಧನನಾದನು. ಅನಂತರ ಮಾದ್ರಿ ಪತಿಯ ಚಿತೆಯಲ್ಲಿ ಸಹಗಮನ ಮಾಡಿದಳು. ಆದ್ದರಿಂದ ನಕುಲ ಮತ್ತು ಸಹದೇವ ಇಬ್ಬರೂ ತಮ್ಮ ಪೋಷಕರನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡರು. ಸಹದೇವನು ಅಸುರ ಗುರುವಾದ ಶುಕ್ರನ ಅವತಾರವೆಂದು ನಂಬಲಾಗಿದೆ.

ಸಹದೇವ ಮತ್ತು ಅವನ ಸಹೋದರರು ಹಸ್ತಿನಾಪುರಕ್ಕೆ ಹೋದರು ಮತ್ತು ಅಲ್ಲಿ ಅವರು ಶಸ್ತ್ರಾಸ್ತ್ರಗಳ ವಿದ್ಯೆಯನ್ನು ದ್ರೋಣ ಮತ್ತು ಕೃಪಾಚಾರ್ಯರಿಂದ ಪಡೆದರು. ಅವರು ಯುದ್ಧವ್ಯೂಹ ಮತ್ತು ಕತ್ತಿವರಸೆ ಹೋರಾಟದಲ್ಲಿ ತಮ್ಮ ಕೌಶಲ್ಯಗಳನ್ನು ಸಾಧಿಸಿದರು. ಅವರು ದೇವಗುರುವಾದ ಬೃಹಸ್ಪತಿಯಿಂದ ನೀತಿಶಾಸ್ತ್ರವನ್ನು ಸ್ವಾಧೀನಪಡಿಸಿಕೊಂಡರು.

ನಂತರ ಕುಂತಿ ಮತ್ತು ಐದು ಪಾಂಡವರು ಹಸ್ತಿನಾಪುರಕ್ಕೆ ತೆರಳಿದರು. ಸಹದೇವನ ಪ್ರಮುಖ ಕೌಶಲ್ಯವು ಕತ್ತಿವರಸೆಯಲ್ಲಿದೆ.[೨] ಸಹದೇವನು ಸೌಮ್ಯ, ತುಂಬಾ ನಾಚಿಕೆ, ತಾಳ್ಮೆ ಮತ್ತು ಸದ್ಗುಣಶೀಲವುಳ್ಳವನಾಗಿರುತ್ತಾನೆ.[೩]

ಎಲ್ಲಾ ಐದು ಪಾಂಡವ ಸಹೋದರರು ದ್ರೌಪದಿಯನ್ನು ಏಕಕಾಲದಲ್ಲಿ ಮದುವೆಯಾಗಿದ್ದರು, ಮತ್ತು ಪ್ರತಿಯೊಬ್ಬರೂ ಅವರಿಂದ ಮಗನನ್ನು ಹೊಂದಿದ್ದರು. ದ್ರೌಪದಿಯೊಂದಿಗೆ ಸಹದೇವನ ಮಗನು ಶ್ರುತಸೇನ. ಸಹದೇವ ತನ್ನ ತಾಯಿಯ ಸೋದರಸಂಬಂಧಿ ವಿಜಯಳನ್ನು ಮದುವೆಯಾದನು. ಈಕೆ ಮದ್ರ ರಾಜನಾದ ದ್ಯುತಿಮಾನ್ ಮಹಾರಾಜನ ಪುತ್ರಿ, ಮತ್ತು ಸುಹೋತ್ರಾ ಎಂಬ ಮಗನನ್ನು ಹೆತ್ತಳು.

ರಾಜಸೂಯಕ್ಕೆ ವಿಜಯ

ಬದಲಾಯಿಸಿ

ಮಹಾಭಾರತದ ಮಹಾಕಾವ್ಯದ ಪ್ರಕಾರ ದಕ್ಷಿಣದ ಸಾಮ್ರಾಜ್ಯಗಳಿಗೆ ಸಹದೇವನ ಸೇನಾ ಕಾರ್ಯಾಚರಣೆ. ಇಂದ್ರಪ್ರಸ್ಥದ ಚಕ್ರವರ್ತಿಯಾಗಿ ರಾಜಸೂಯ ಯಾಗಕ್ಕಾಗಿ ಸಾಮ್ರಾಜ್ಯಗಳನ್ನು ವಶಪಡಿಸಿಕೊಳ್ಳಲು ಸಹದೇವನನ್ನು ಹಿರಿಯ ಪಾಂಡವ ಯುಧಿಷ್ಠಿರನು ದಕ್ಷಿಣಕ್ಕೆ ಕಳುಹಿಸಿದನು. ಕತ್ತಿವರಸೆಯಲ್ಲಿ ತನ್ನ ಪರಿಣತಿಯಿಂದಾಗಿ ಅವನು ದಕ್ಷಿಣಕ್ಕೆ ನಿರ್ದಿಷ್ಟವಾಗಿ ಆರಿಸಲ್ಪಟ್ಟನು, ಮತ್ತು ದಕ್ಷಿಣದವರು ಸಾಮಾನ್ಯವಾಗಿ ಕತ್ತಿ-ಹೋರಾಟದಲ್ಲಿ ನಿಪುಣರಾಗಿದ್ದಾರೆಂದು ಭೀಷ್ಮಾಚಾರ್ಯ ಅಭಿಪ್ರಾಯಪಟ್ಟರು.[೪]

ಚಿತ್ರ:Arishtanemi-Sahadeva.jpg
ಸಹದೇವ ವನವಾಸದಲ್ಲಿ ಗೋಪಾಲಕನಾದದ್ದು.

ಸಹದೇವನು ದೇಶಭ್ರಷ್ಟನಾಗಿ ಕೆಲಸ ಮಾಡಬೇಕಾಯಿತು. ಯುಧಿಷ್ಠಿರ ಪಗಡೆ ಆಟದಲ್ಲಿ ರಾಜ್ಯ ಕೋಶಗಳನ್ನು ಕಳೆದುಕೊಂಡ ಕಾರಣದಿಂದಾಗಿ ಪಾಂಡವರು 13 ವರ್ಷಗಳ ಕಾಲ ದೇಶಭ್ರಷ್ಟರಾಗಿ ಬದುಕಬೇಕಾಯಿತು. ಆಗ ಒಮ್ಮೆ ಜಟಾಸುರ ಎಂಬ ರಾಕ್ಷಸ ಬ್ರಾಹ್ಮಣನಾಗಿ ವೇಷ ಧರಿಸಿ, ದ್ರೌಪದಿ, ಸಹದೇವ ಮತ್ತು ಯುಧಿಷ್ಠಿರರ ಜೊತೆಗೆ ನಕುಲನನ್ನು ಅಪಹರಿಸಿದನು; ಭೀಮ ಅವರನ್ನು ಅಂತಿಮವಾಗಿ ರಕ್ಷಿಸಿದನು.

13 ನೇ ವರ್ಷದಲ್ಲಿ ಸಹೇದವನು ಸ್ವತಃ ವೈಶ್ಯ ಎಂದು ವೇಷ ಮರೆಸಿಕೊಂಡು ತಂತ್ರೀಪಾಲ ಎಂಬ ಹೆಸರನ್ನು ಪಡೆದನು. ತಮ್ಮೊಳಗೆ ಪಾಂಡವರು ಅವನನ್ನು ಜಯದ್ಬಲ ಎಂದು ಕರೆಯುತ್ತಿದ್ದರು.[೫] ವಿರಾಟನ ಸಾಮ್ರಾಜ್ಯದ ಎಲ್ಲಾ ಹಸುಗಳ ನಿರ್ವಹಣೆಯ ಮೇಲ್ವಿಚಾರಣೆ ಮಾಡುವ ಗೋವಳನಂತೆ ಅವನು ಕಾರ್ಯನಿರ್ವಹಿಸಿದನು.

ಕುರುಕ್ಷೇತ್ರ ಯುದ್ಧದಲ್ಲಿ ಪಾತ್ರ

ಬದಲಾಯಿಸಿ

ಜ್ಯೋತಿಷ್ಯದಲ್ಲಿ ಸಹದೇವನು ತುಂಬಾ ಜ್ಞಾನಿಯಾಗಿದ್ದನು. ಮಹಾಭಾರತದ ಯುದ್ಧವನ್ನು ಪ್ರಾರಂಭಿಸಲು ಕೌರವರು ಗೆಲ್ಲುವಂತಹ ಸರಿಯಾದ ಸಮಯ(ಮುಹೂರ್ತ)ವನ್ನು ಹುಡುಕುವುದಕ್ಕಾಗಿ ಶಕುನಿಯ ಸಲಹೆಯ ಮೇರೆಗೆ ದುರ್ಯೋಧನನು ಸಹದೇವನನ್ನು ಸಮೀಪಿಸುತ್ತಾನೆ. ಸಹದೇವನು ಕೌರವರು ತಮ್ಮ ಶತ್ರು ಎಂದು ತಿಳಿದಿದ್ದರೂ ಸಹ ಯೋಗ್ಯವಾದ ಮುಹೂರ್ತವನ್ನು ಸೂಚಿಸಿದನು. ಅನಂತರ ಕೃಷ್ಣನು ಯುದ್ಧ ಪ್ರಾರಂಭವಾಗುವ ಮೊದಲು ಗ್ರಹಣವನ್ನು ಸೃಷ್ಟಿಸಲು ಯೋಜಿಸಿದ್ದನು. ಅದೇ ಸಮಯದಲ್ಲಿ, ಸೂರ್ಯ ಮತ್ತು ಚಂದ್ರ ಇಬ್ಬರೂ ಕೃಷ್ಣನ ಚಿಂತನೆಯಿಂದ ಗಾಬರಿಗೊಂಡರು ಮತ್ತು ಕೃಷ್ಣನ ಎದುರು ಬಂದು ಕೃಷ್ಣನು ಇಡೀ ವಿಶ್ವದಲ್ಲಿ ಭಾರಿ ಅಸಮತೋಲನವನ್ನು ಸೃಷ್ಟಿಸುತ್ತಾನೆಂದು ಹೇಳಿದರು. ಆಗ ಕೃಷ್ಣನು ಭೂಮಿ, ಚಂದ್ರ ಮತ್ತು ಸೂರ್ಯ ಒಂದೇ ಸ್ಥಳದಲ್ಲಿ ಒಟ್ಟಾಗಿರುವುದನ್ನು ಘೋಷಿಸಿದನು, ಇದು ಸ್ವತಃ ಒಂದು ಗ್ರಹಣವಾಗಿತ್ತು.


ಸಹೇದವನು ವಿರಾಟನನ್ನು ಪಾಂಡವ ಸೈನ್ಯದ ನಾಯಕನಾಗಬೇಕೆಂದು ಬಯಸಿದ್ದನು. ಆದರೆ ಯುಧಿಷ್ಠಿರ ಮತ್ತು ಅರ್ಜುನ ಧೃಷ್ಟದ್ಯುಮ್ನನನ್ನು ಆಯ್ಕೆ ಮಾಡಿದರು.[೬] ಅವನ ಶಂಖವನ್ನು ಮಣಿಪುಷ್ಪಕಾ ಎಂದು ಕರೆಯಲಾಗಿದೆ.

ಒಬ್ಬ ಯೋಧನಾಗಿ, ಸಹದೇವನು ಶತ್ರು ಸೇನೆಯ ಪ್ರಮುಖ ಯುದ್ಧ-ವೀರರನ್ನು ಕೊಂದನು. ಸಹದೇವನ ರಥದ ಧ್ವಜವು ಬೆಳ್ಳಿ ಹಂಸದ ಚಿತ್ರವನ್ನು ಹೊಂದಿತ್ತು. ಅವನು ದುರ್ಯೋಧನನ 40 ಸಹೋದರರನ್ನು ಒಮ್ಮೆಲೇ ಹೋರಾಡಿ ಸೋಲಿಸಿದನು.[೭][೮] ಜೂಜಿನ ಸೋಲಿನ ಸಮಯದಲ್ಲಿ, ಅವನು ಶಕುನಿಯನ್ನು ಕೊಲ್ಲುವ ಪ್ರಮಾಣ ವಚನ ಸ್ವೀಕರಿಸಿದನು. ಯುದ್ಧದ 18 ನೇ ದಿನದಂದು ಅವನು ಯಶಸ್ವಿಯಾಗಿ ಈ ಕಾರ್ಯವನ್ನು ಸಾಧಿಸಿದನು. ಸಹದೇವನಿಂದ ಕೊಲ್ಲಲ್ಪಟ್ಟ ಇತರ ಪ್ರಮುಖ ಯುದ್ಧ ವೀರರ ಪೈಕಿ 18 ನೇ ದಿನದಂದು ಶಕುನಿ ಮತ್ತು ಅದೇ ದಿನದಂದು ಶಲ್ಯನ ಮಗ ಹಾಗೂ 14 ನೇ ದಿನದಂದು ತ್ರಿಗರ್ತ ದೇಶದ ರಾಜಕುಮಾರನಾದ ನಿರಾಮಿತ್ರರು.

ಯುದ್ಧದ ನಂತರ

ಬದಲಾಯಿಸಿ

ಯುದ್ಧದ ನಂತರ, ಯುಧಿಷ್ಠಿರನು ನಕುಲ ಮತ್ತು ಸಹದೇವರನ್ನು ಮದ್ರ ಪ್ರದೇಶದ ರಾಜರನ್ನಾಗಿ ನೇಮಿಸಲಾಯಿತು.[೯]

ಕಲಿ ಯುಗದ ಪ್ರಾರಂಭ ಮತ್ತು ಕೃಷ್ಣನ ನಿರ್ಗಮನದ ನಂತರ ಪಾಂಡವರು ನಿವೃತ್ತರಾದರು. ತಮ್ಮ ಎಲ್ಲ ಸ್ವತ್ತುಗಳನ್ನು ಮತ್ತು ಸಂಬಂಧಗಳನ್ನು ಬಿಟ್ಟು, ಪಾಂಡವರು ನಾಯಿಯೊಡನೆ ಹಿಮಾಲಯಕ್ಕೆ ತಮ್ಮ ಕೊನೆಯ ಯಾತ್ರೆಯನ್ನು ಮಾಡಿದರು.

ಯುಧಿಷ್ಠಿರನೊಬ್ಬನನ್ನು ಹೊರತುಪಡಿಸಿ, ಪಾಂಡವರಲ್ಲಿ ಎಲ್ಲರೂ ದುರ್ಬಲರಾಗಿದ್ದರು ಮತ್ತು ಸ್ವರ್ಗವನ್ನು ತಲುಪುವ ಮೊದಲು ಸತ್ತುಹೋದರು. ದ್ರೌಪದಿ ಬಳಿಕ ಸಹೇದೇವನು ಎರಡನೆಯವನು. ಸಹದೇವನು ಸ್ವರ್ಗದವರೆಗೂ ಬರಲು ಸಾಧ್ಯವಾಗದ ಕುರಿತು ಭೀಮ ಯುಧಿಷ್ಠಿರನನ್ನು ಕೇಳಿದಾಗ ಅವನು ಕೊಟ್ಟ ಉತ್ತರ ಸಹದೇವನ ಬುದ್ಧಿವಂತಿಕೆಯಲ್ಲಿ ಅವನಿಗಿದ್ದ ಅಹಂಕಾರವೇ ಕಾರಣ ಎಂದಾಗಿತ್ತು.[೧೦]

ವಿಶೇಷ ಕೌಶಲಗಳು

ಬದಲಾಯಿಸಿ
 • ಬುದ್ಧಿವಂತಿಕೆ: ಸಹದೇವ ಅವನ ಸಹೋದರರಲ್ಲಿ ಹಿಂದಿನ, ಪ್ರಸ್ತುತ ಮತ್ತು ಭವಿಷ್ಯದ ಜ್ಞಾನವನ್ನು ಹೆಚ್ಚಾಗಿಯೇ ಹೊಂದಿದ್ದನು. ವಾಸ್ತವವಾಗಿ, ಯುಧಿಷ್ಠಿರನ ಪ್ರಕಾರ ಅವನು ದೇವರುಗಳ ಗುರುವಾದ ಬೃಹಸ್ಪತಿಯಂತೆ ಬುದ್ಧಿವಂತನಾಗಿರುತ್ತಾನೆ. ಇವನು ಔಷಧ, ಅಶ್ವಶಾಸ್ತ್ರದ ಕೌಶಲಗಳು, ಗೋವಿನ ಪಶುವೈದ್ಯ, ರಾಜಕೀಯ ಮತ್ತು ಮಾನವಿಕತೆಗಳಲ್ಲಿ ನಿಷ್ಣಾತನಾಗಿದ್ದನು. ಅವನು ರಾಜ ಯುಧಿಷ್ಠರನ ಖಾಸಗಿ ಸಲಹೆಗಾರರಾಗಿದ್ದನು.
 • ಜ್ಯೋತಿಷ್ಯಶಾಸ್ತ್ರ: ಅವನು ತನ್ನ ಸಹೋದರ ನಕುಲನಂತೆ ಶ್ರೇಷ್ಠ ಜ್ಯೋತಿಷಿಯಾಗಿದ್ದಾನೆ ಎಂದು ಹೇಳಲಾಗುತ್ತದೆ ಮತ್ತು ಮಹಾಭಾರತ ಯುದ್ಧವನ್ನು ಸೇರಿದಂತೆ ಎಲ್ಲವನ್ನೂ ಸಹ ಅವನು ಮೊದಲೇ ತಿಳಿದಿದ್ದನು. ಆದರೆ ಈ ಘಟನೆಗಳನ್ನು ಯಾರಿಗಾದರೂ ಬಹಿರಂಗಪಡಿಸಿದರೆ ಅವನ ತಲೆಯು ತುಂಡುಗಳಾಗಿ ವಿಭಜನೆಯಾಗುತ್ತದೆ ಎಂದು ಶಾಪಗ್ರಸ್ತನಾಗಿದ್ದನು.
 • ಕತ್ತಿವರಸೆ: ಸಹದೇವನು ತನ್ನ ಸಹೋದರನಾದ ನಕುಲನಂತೆ ಕತ್ತಿವರಸೆಯಲ್ಲಿ ನಿಪುಣನಾಗಿದ್ದನು.

ಉಲ್ಲೇಖಗಳು

ಬದಲಾಯಿಸಿ
 1. Gopal, Madan (1990). K.S. Gautam (ed.). India through the ages. Publication Division, Ministry of Information and Broadcasting, Government of India. p. 73.
 2. A. van Nooten, Barend. The Mahābhārata; attributed to Kṛṣṇa Dvaipāyana Vyāsa Volume 131 of Twayne's world authors series: India.
 3. "Mahabharata Text".
 4. "Mahabharata Text".
 5. Subodh Kapoor, ed. (2002). The Indian encyclopaedia : biographical, historical, religious, administrative, ethnological, commercial and scientific (1st ed.). New Delhi: Cosmo Publications. p. 4462. ISBN 9788177552713.
 6. Menon, [translated by] Ramesh (2006). The Mahabharata : a modern rendering. New York: iUniverse, Inc. p. 88. ISBN 9780595401888.
 7. "Mahabharata Text".
 8. Subodh Kapoor, ed. (2002). The Indian encyclopaedia : biographical, historical, religious, administrative, ethnological, commercial and scientific (1st ed.). New Delhi: Cosmo Publications. p. 4462. ISBN 9788177552713.
 9. "Mahabharata Text".
 10. Mahabharata Text
"https://kn.wikipedia.org/w/index.php?title=ಸಹದೇವ&oldid=1011800" ಇಂದ ಪಡೆಯಲ್ಪಟ್ಟಿದೆ