ಕನ್ನಡ ಚಿತ್ರ ಸಂಗೀತ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಕನ್ನಡ ಚಿತ್ರರಂಗದ ಸಂಗೀತ ಸಾಕಷ್ಟು ಪ್ರಕಾರಗಳನ್ನೊಳಗೊಂಡ ಸಂಗೀತಕ್ರಮ. ಚಿತ್ರದೊಂದಿಗೆ ಬರುವ ಹಿನ್ನೆಲೆ ಸಂಗೀತವಲ್ಲದೆ, ಚಿತ್ರದ ಮಧ್ಯದಲ್ಲಿ ಮೂಡಿಬರುವ ಸಂಗೀತ ಅಂದರೆ ಹಾಡುಗಳು ಕನ್ನಡ ಚಿತ್ರ ಸಂಗೀತವನ್ನು ಒಂದು ಪ್ರಕಾರವಾಗಿ ರೂಪಿಸಿವೆ. ಜನಮನದಲ್ಲಿ ಕನ್ನಡ ಚಿತ್ರಸಂಗೀತಕ್ಕೆ ವಿಶಿಷ್ಟ ಸ್ಥಾನಮಾನಗಳು ಬೆಳೆದು ಬಂದಿವೆ.
ಕನ್ನಡ ಚಿತ್ರ ಸಂಗೀತ ಹುಟ್ಟಿಬರುವುದು ಸಂಗೀತ ನಿರ್ದೇಶಕರು, ಹಿನ್ನೆಲೆ ಗಾಯಕರು, ಚಿತ್ರಸಾಹಿತಿಗಳು, ಸಂಗೀತ ವಾದ್ಯಗಾರರು, ಹಿನ್ನೆಲೆ ಸಂಗೀತ ಜೋಡಿಸುವವರು - ಇವರೆಲ್ಲರ ಸಹಯೋಗದಿಂದ. ಕಥೆಯ ಮಧ್ಯೆ, ದೃಶ್ಯಗಳ ನಡುವೆ ಪ್ರಸಂಗಕ್ಕೆ ಹೊಂದುವಂತೆ ಮೂಡಿಬರುವ ಅರ್ಥವತ್ತಾದ ಸಂಗೀತ ಇದರ ವಿಶಿಷ್ಟತೆ. ಇತ್ತೀಚಿನ ಚಿತ್ರಗಳಲ್ಲಿ ಪ್ರಾಸಂಗಿಕ ಹಾಡುಗಳ ಬಳಕೆ ಕಡಿಮೆಯಾದರೂ ಚಿತ್ರದ ಮಧ್ಯೆ ಹಾಡುಗಳು, ಸಂಗೀತ ಜೋಡಿಸುವ ಪರಂಪರೆ ನಡೆದು ಬಂದಿದೆ.
ಇತಿಹಾಸ
ಬದಲಾಯಿಸಿಭಾರತದ ಉಳಿದ ಭಾಷೆಗಳಂತೆಯೇ ಕನ್ನಡ ಚಿತ್ರರಂಗವೂ ಉದಯಿಸಿದ್ದು ರಂಗ ಭೂಮಿಯ ಹಿನ್ನೆಲೆಯಿಂದ, ನಾಟಕಗಳಿಂದ. ಮೊದ ಮೊದಲು ಹೊರಬಂದ ಚಿತ್ರಗಳ ಸಂಗೀತ, ನಾಟಕಗಳಲ್ಲಿ ಜೋಡಣೆಯಾಗುತ್ತಿದ್ದ ಸಂಗೀತದ ಮಟ್ಟು,ಹೋಲಿಕೆಗಳೊಂದಿಗೆ ಜನರನ್ನು ತಲುಪಿತ್ತು. ವರ್ಷಗಳು ಕಳೆದಂತೆ ತಂತ್ರಜ್ಞಾನದಲ್ಲಾದ ಬದಲಾವಣೆಗಳಿಂದ ನಾಟಕಗಳು ಹಾಗೂ ಚಲನಚಿತ್ರಗಳ ನಡುವಣ ಅಂತರ ಹೆಚ್ಚುತ್ತಾ ಹೋಗಿ, ಚಲನಚಿತ್ರ ಸಂಗೀತ ತನ್ನದೇ ಆದ ಛಾಪು ಮೂಡಿಸುತ್ತ ಹೊಸ ಉಪಕ್ರಮವಾಗಿ ಹೊರಹೊಮ್ಮಿತು.
ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರು
ಬದಲಾಯಿಸಿಮೊದ ಮೊದಲು ಕನ್ನಡ ಚಲನಚಿತ್ರಗಳಲ್ಲಿ ತಮಿಳು,ತೆಲುಗು ಸಂಗೀತ ನಿರ್ದೇಶಕರನ್ನೇ ಉಪಯೋಗಿಸಿಕೊಳ್ಳಲಾಗುತ್ತಿತ್ತು. ಕನ್ನಡದ ಸಂಗೀತ ನಿರ್ದೇಶಕರು ಯಾರು, ಹೊರಗಿನವರು ಯಾರು ಎಂಬ ವಿಂಗಡನೆಯನ್ನೇ ಮಾಡಲಾಗದಷ್ಟು ಹೊರಗಿನವರು ಬೆರೆತು ಕೆಲಸ ಮಾಡಿದ್ದಾರೆ. ಮೊದ ಮೊದಲು ಬಂದವರಲ್ಲಿ ಘಂಟಸಾಲ,ಸತ್ಯಂ,ಟಿ.ಜಿ.ಲಿಂಗಪ್ಪ ಪ್ರಮುಖರು. ರಾಜನ್-ನಾಗೇಂದ್ರ ಜೋಡಿ ಕೂಡ ಮೊದಲು (೧೯೫೦-೬೦ರ ದಶಕದಲ್ಲಿ) ಪೌರಾಣಿಕ ಚಿತ್ರಕ್ಕೆ ಸಂಗೀತ ನೀಡಿದ್ದರು. ಆ ನಂತದ ಅವರು ಜನಪ್ರಿಯರಾದದ್ದು ೧೯೭೦ರ ದಶಕದ ತಮ್ಮ ಹೊಸ ಅಲೆಯ ಸಂಗೀತದಿಂದ. ಎಂ.ರಂಗರಾವ್ ಅವರು ಸಾಕ್ಷಾತ್ಕಾರ ಚಿತ್ರದ ಸಂಗೀತದಿಂದ ಗಮನ ಸೆಳೆದರು.
ಇವರೆಲ್ಲರಿಗಿಂತ ಜನಪ್ರಿಯತೆಯ ಉತ್ತುಂಗದಲ್ಲಿ ಇದ್ದವರೆಂದರೆ ಜಿ.ಕೆ.ವೆಂಕಟೇಶ್ ಮತ್ತು ವಿಜಯ ಭಾಸ್ಕರ್. ಇವರಿಬ್ಬರು ಸುಮಾರು ೩ ದಶಕಗಳ ಕಾಲ ಉತ್ತುಂಗದಲ್ಲಿಯೇ ಇದ್ದರು. ಇವರಲ್ಲಿ ವಿಜಯ ಭಾಸ್ಕರ್ ಅವರ ವಿಶೇಷತೆ ಎಂದರೆ, ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿದ ಬಹುತೇಕ ಚಿತ್ರಗಳಿಗೆ ಇವರೇ ಸಂಗೀತ ನೀಡಿದ್ದು.
ನಂತರ ಹೊರಗಿನ ಸಂಗೀತ ನಿರ್ದೇಶಕರಿಗೂ ಅವಕಾಶ ನೀಡಲಾಯಿತು.ಇಳಯರಾಜ ಅವರು ಕೂಡ ಹಲವಾರು ಚಿತ್ರಗಳಿಗೆ ಸಂಗೀತ ನೀಡಿದರು. ಸಿ.ಅಶ್ವತ್ಥ್ ಮತ್ತು ಎಲ್.ವೈದ್ಯನಾಥನ್ ಅವರು ಅಶ್ವತ್ಥ್-ವೈದಿ ಹೆಸರಿನಲ್ಲಿ ಒಟ್ಟಿಗೆ ಸಂಗೀತ ನೀಡಿದರು .
ಹಂಸಲೇಖ ಯುಗ
ಬದಲಾಯಿಸಿಇವರೆಲ್ಲರ ನಡುವೆ ಭಾರೀ ಹೊಸ ಅಲೆಯನ್ನು ತಂದ ಸಂಗೀತ ನಿರ್ದೇಶಕರು ಎಂದರೆ ಹಂಸಲೇಖ ಅವರು. ಬಂಡಾಯ ಕವಿ ಗಂಗರಾಜು ಕನ್ನಡಿಗರಿಗೆ ಹಂಸಲೇಖ ಎಂದು ಪರಿಚಯವಾಗಿದ್ದಾರೆ. ವಿ.ರವಿಚಂದ್ರನ್ ಅವರ ಚಿತ್ರಗಳು ಗೆಲ್ಲಲು ಅರ್ಧ ಪಾಲು ಹಂಸಲೇಖ ಅವರ ಸಾಹಿತ್ಯ ಸಂಗೀತವೇ ಕಾರಣ ಎಂಬ ಜನಾಭಿಪ್ರಾಯವಿತ್ತು.. ಹಾಡುಗಳಲ್ಲೆ ಒಂದು ಕಥೆ ಮತ್ತು ಸಂಭಾಷಣೆ ಇರುವಂಥ ಹೊಸ ರೀತಿಯ ಹಾಡುಗಳನ್ನು ಜನರಿಗೆ ನೀಡಿದರು. ಅದಕ್ಕೆ ಉದಾಹರಣೆ ಎಂದರೆ, [[ಪ್ರೇಮಲೋ ಕ]] ಚಿತ್ರದ "ನೋಡಮ್ಮ ಹುಡುಗಿ ಕೇಳಮ್ಮ ಸರಿಯಾಗಿ", [[ರಣಧೀ ರ]] - ಚಿತ್ರದ "ಪ್ರೀತಿ ಮಾಡಬಾರದು", ಮತ್ತು ಶಾಂತಿ ಕ್ರಾಂತಿ ಚಿತ್ರದ "ಮಧ್ಯ ರಾತ್ರೀಲಿ" ಹಾಡುಗಳು. ಈ ಹಾಡುಗಳಲ್ಲೆ ನೀವು ಒಂದು ಕಥೆಯನ್ನೂ ಗಮನಿಸಬಹುದು. ಇಂತಹ ಪ್ರಯೋಗ ಹಿಂದೆಯೂ ನಡೆದಿತ್ತು. ನಾಗರಹಾವು ಚಿತ್ರದ ಓಬವ್ವನ ಹಾಡು ಒಂದು ಉದಾಹರಣೆ.೧೯೯೦ರ ದಶಕದಲ್ಲಿ ಬಂದ ಬಹಳ ಚಿತ್ರಗಳಿಗೆ ಹಂಸಲೇಖ ಅವರೇ ಸಾಹಿತ್ಯ ಸಂಗೀತ ಒದಗಿಸುತ್ತಿದ್ದರು.
ವಿ.ಮನೋಹರ್ ಪ್ರವೇಶ
ಬದಲಾಯಿಸಿನಂತರ ಬಂದವರು ವಿ. ಮನೋಹರ್. ಇವರು ಕಾಶೀನಾಥ್ ಕ್ಯಾಂಪ್ ನಿಂದ ಗುರುತಿಸಿಕೊಂಡರೂ ಸಹ ಹತ್ತು ಹಲವಾರು ನಿರ್ದೇಶಕರ ಬಳಿ ದುಡಿದು ತಮ್ಮ ಸಾಮರ್ಥ್ಯವನ್ನು ತೋರಿಸಿದರು. ಕನ್ನಡದಲ್ಲಿ ಮೊದಲಿನಂತೆ ಒಳ್ಳೆಯ ಸಂಗೀತ ನೀಡುವ ಸಂಗೀತ ನಿರ್ದೇಶಕರ ಸಾಲಿಗೆ ಸೇರಿದರು. ಮುಂದಿನ ದಿನಗಳಲ್ಲಿ ಓ ಮಲ್ಲಿಗೆ ಎಂಬ ಚಿತ್ರವನ್ನು ನಿರ್ದೇಶಿಸಿ ಅಲ್ಲೂ 'ಸೈ' ಎನಿಸಿಕೊಂಡರು. ಓ ಮಲ್ಲಿಗೆ ಚಿತ್ರದ "ಮಲಗು ಮಲಗು ಚಾರುಲತೆ" ಹಾಡಿನಲ್ಲಿ ಹೊಸ ಗಾಯಕ ರಮೇಶ್‌ಚಂದ್ರ ಅವರನ್ನು ಪರಿಚಯಿಸಿದರು.
ಸಾಧು ಕೋಕಿಲ ಮತ್ತು ರಾಜೇಶ್ ರಾಮನಾಥ್
ಬದಲಾಯಿಸಿನಂತರದ ದಿನಗಳಲ್ಲಿ ಸಾಧು ಕೋಕಿಲ ಮತ್ತು ರಾಜೇಶ್ ರಾಮನಾಥ್ ಅವರು ಹೊಸ ಸಂಗೀತ ನಿರ್ದೇಶಕರಾಗಿ ಪರಿಚಯಗೊಂಡರು.
ಗುರುಕಿರಣ್
ಬದಲಾಯಿಸಿಚಲನಚಿತ್ರ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಅಲೆಯನ್ನು ಎಬ್ಬಿಸಿದವರು ಎಂದರೆ ಗುರುಕಿರಣ್ಸಂಗೀತ . ಇಂದಿನ ಯುವಜನತೆಗೆ ಅವರ ಹಾಡುಗಳು ಮೆಚ್ಚಿಗೆಯಾದವು.. ನಂತರದ ದಿನಗಳಲ್ಲಿ ಪ್ರೇಮಿ ನಂಬರ್ ಒನ್, ಮಜ್ನು ಚಿತ್ರಗಳಿಗೆ ಸಂಗೀತ ನೀಡಿದರೂ ಅವರನ್ನು ಚಿತ್ರರಂಗದ ಜನತೆ ಗಮನಿಸಲಿಲ್ಲ. ದಿನೇಶ್ ಬಾಬು ನಿರ್ದೇಶನದ "ಚಿತ್ರ" ಎಂಬ ಯುವಜನರ ಚಿತ್ರದಲ್ಲಿ ನೀಡಿದ "ಜಿಂಬೋಲೆ" ಹಾಗು "ಜಿಂಕೆ ಮರಿ ಓಡ್ತಾಯ್ತೆ ನೋಡ್ಲಾ ಮಗಾ" ಹಾಡುಗಳು ಯುವಜನರನ್ನು ಆಕರ್ಷಿಸಿದವು. ಚಿತ್ರರಂಗದ ಜನತೆ ಅವರಲ್ಲಿ ಇದ್ದ ಪ್ರತಿಭೆಯನ್ನು ಗಮನಿಸಿತು. ನಂತರದ ದಿನಗಳಲ್ಲಿ ಚಂದು ತುಂಟಾಟ ಮತ್ತು ಹಲವಾರು ಚಿತ್ರಗಳಿಗೆ ಸಂಗೀತ ನೀಡಿ ಮತ್ತಷ್ಟು ಜನಪ್ರಿಯರಾದರು.
ಸಂಗೀತ ನಿರ್ದೇಶನದತ್ತ ನಾಯಕ ನಟ ರವಿಚಂದ್ರನ್
ಬದಲಾಯಿಸಿಈ ಮಧ್ಯೆ ಹಂಸಲೇಖ ಮತ್ತು ರವಿಚಂದ್ರನ್ ಜೋಡಿ ಮುರಿದು ಬಿದ್ದಿತು. ಇದರ ಪರಿಣಾಮವಾಗಿ "ಪ್ರೀತ್ಸೋದ್ ತಪ್ಪಾ?" ಚಿತ್ರದ ನಂತರ "ಮಾಂಗಲ್ಯಂ ತಂತುನಾನೇನಾ" ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡಿದರು. ನಂತರ ರವಿಚಂದ್ರನ್ ಅವರೇ ಸಂಗೀತ ನಿರ್ದೇಶನ ಮತ್ತು ಸಾಹಿತ್ಯ ರಚನೆಗೆ ಇಳಿದರು. ಮಲ್ಲ,ಅಹಂ ಪ್ರೇಮಾಸ್ಮಿ,ಅಯ್ಯ,ನೀಲಕಂಠ ಮುಂತಾದ ಚಿತ್ರಗಳಿಗೆ ರವಿಚಂದ್ರನ್ ಸಂಗೀತ ಮತ್ತು ಸಾಹಿತ್ಯ ನೀಡಿದ್ದಾರೆ.
ಅನಿವಾಸಿ ಸಂಗೀತ ನಿರ್ದೇಶಕ ಮನೋ ಮೂರ್ತಿ
ಬದಲಾಯಿಸಿನಾಗತಿಹಳ್ಳಿ ಚಂದ್ರಶೇಖರ್ ಅವರ ಅಮೆರಿಕ ಅಮೆರಿಕಾ ಚಿತ್ರದ ಮೂಲಕ ಅನಿವಾಸಿ ಭಾರತೀಯ ಮನೋಹರ ಮೂರ್ತಿ ಅವರುಮನೋ ಮೂರ್ತಿಯಾಗಿ ಕನ್ನಡಿಗರಿಗೆ ಪರಿಚಯವಾದರು. ನಂತರದ ದಿನಗಳಲ್ಲಿ ಹಂಸಲೇಖರ ಬಳಿ ಆರ್ಕೆಸ್ಟ್ರಾ ತಂತ್ರಜ್ಞ ಆಗಿದ್ದ ಸ್ಟೀಫನ್ ಅವರನ್ನು ನಾಗತಿಹಳ್ಳಿ ಅವರು ತಮ್ಮ ಪ್ಯಾರಿಸ್ ಪ್ರಣಯ ಚಿತ್ರದ ಮೂಲಕ ಪ್ರಯೋಗ್ ಎಂಬ ಹೆಸರಿನಿಂದ ಪರಿಚಯಿಸಿದರು. ನಂತರ ಗುರುಕಿರಣ್ ಅವರ ಬಳಿ ಗಿಟಾರ್ ವಾದಕರಾಗಿದ್ದ ಆಲ್ವಿನ್ ಫರ್ನಾಂಡಿಸ್ ಅವರು ಕೂಡ ಪ್ರಾಣ ಎಂಬ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರು.
ಇತರ ಸಂಗೀತ ನಿರ್ದೇಶಕರು
ಬದಲಾಯಿಸಿಇತ್ತೀಚಿಗೆ ಪರಿಚಿತರಾದ ಸಂಗೀತ ನಿರ್ದೇಶಕರು ಎಂದರೆ -
.
ಈ ಪುಟಗಳನ್ನೂ ನೋಡಿ
ಬದಲಾಯಿಸಿಪಿ.ಶ್ಯಾಮಣ್ಣ | ಪಿ.ಕಾಳಿಂಗರಾಯ | ಜಿ.ಕೆ.ವೆಂಕಟೇಶ್ | ವಿಜಯಭಾಸ್ಕರ್ | ಟಿ.ಜಿ.ಲಿಂಗಪ್ಪ | ಘಂಟಸಾಲ | ರಾಜನ್-ನಾಗೇಂದ್ರ | ಎಂ.ರಂಗರಾವ್ | ಸತ್ಯಂ | ಸಿಂಗೀತಂ ಶ್ರೀನಿವಾಸರಾವ್ | ಉಪೇಂದ್ರಕುಮಾರ್ | ಇಳಯರಾಜ ಮದನ್ ಮಲ್ಲು| ಅಶ್ವಥ್-ವೈದಿ | ಸಿ.ಅಶ್ವಥ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಎಲ್.ವೈದ್ಯನಾಧನ್ | ಶಂಕರ್ ಗಣೇಶ್ | ಹಂಸಲೇಖ | ವಿ. ಮನೋಹರ್ | ಎಂ. ಎಂ. ಕೀರವಾಣಿ | ಮಹೇಶ್ ಪಟೇಲ್| ರಾಜ್-ಕೋಟಿ | ಸಾಧು ಕೋಕಿಲ | ರಾಜೇಶ್ ರಾಮನಾಥ್ | ವಿ.ಹರಿಕೃಷ್ಣ | ಕೆ. ಕಲ್ಯಾಣ್ | ಎಲ್.ಎನ್.ಶಾಸ್ತ್ರಿ | ಗುರುಕಿರಣ್ | ದೇವಾ | ರವಿಚಂದ್ರನ್ | ಎಸ್.ಎ.ರಾಜಕುಮಾರ್ | ಕಾರ್ತಿಕ್ ರಾಜ | ವೆಂಕಟ್-ನಾರಾಯಣ್ | ಮಣಿ ಶರ್ಮ | ಆರ್. ಪಿ. ಪಟ್ನಾಯಕ್ | ಆಲ್ವಿನ್ | ಅರ್ಜುನ್ ಜನ್ಯ | ಎಂ.ಎನ್.ಕೃಪಾಕರ್ | ಭವತಾರಿಣಿ | ಮನೋ ಮೂರ್ತಿ | ರವಿ ದತ್ತಾತ್ರೇಯ | ಎಂ.ವೆಂಕಟರಾಜು|ಉಪಾಸನ ಮೊಹನ |ಯೋಗೀಶ್ ಕುಮಾರ್ ಸಿ
ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕಿಯರು
ತ್ರಿಪುರಾಂಬ | ಕಮಲಾ ಬಾಯಿ | ಎಸ್.ಡಿ.ಸುಬ್ಬುಲಕ್ಷ್ಮಿ | ಲಕ್ಷ್ಮಿ ಬಾಯಿ | ಎಂ.ವಿ.ರಾಜಮ್ಮ | ಅಮೀರ್‍ಬಾಯಿ ಕರ್ನಾಟಕಿ | ಬಿ.ಜಯಮ್ಮ | ಪಿ. ಲೀಲಾ | ಪಿ.ಸುಶೀಲ | ಎಸ್.ಜಾನಕಿ | ಪ್ರಿಯದರ್ಶಿನಿ | ಎಲ್.ಆರ್. ಈಶ್ವರಿ | ಬಿ.ಕೆ.ಸುಮಿತ್ರಾ | ವಾಣಿ ಜಯರಾಂ | ಕಸ್ತೂರಿ ಶಂಕರ್ | ಬೆಂಗಳೂರು ಲತಾ | ಸುಲೋಚನ | ಎಸ್.ಪಿ.ಶೈಲಜಾ | ಬಿ.ಆರ್. ಛಾಯಾ | ರತ್ನಮಾಲ ಪ್ರಕಾಶ್ | ಮಂಜುಳಾ ಗುರುರಾಜ್ | ಸುಜಾತ ದತ್ | ಕವಿತಾ ಕೃಷ್ಣಮೂರ್ತಿ | ಚಿತ್ರಾ | ಚಂದ್ರಿಕಾ ಗುರುರಾಜ್ | ಲತಾ ಹಂಸಲೇಖ | ಸೌಮ್ಯ ರಾವ್ | ಅನುರಾಧ ಶ್ರೀರಾಮ್ | ನಂದಿತಾ | ಪಲ್ಲವಿ ಎಂ.ಡಿ | ಶಮಿತಾ ಮಲ್ನಾಡ್ | ಚೈತ್ರ | ಸುಮಾ ಶಾಸ್ತ್ರಿ | ಸುಪ್ರಿಯ ಆಚಾರ್ಯ | ಭವತಾರಿಣಿ