ಎಲ್. ವೈದ್ಯನಾಥನ್
(ಎಲ್.ವೈದ್ಯನಾಥನ್ ಇಂದ ಪುನರ್ನಿರ್ದೇಶಿತ)
ಕನ್ನಡ ಸಿನೆಮಾದ ಜನಪ್ರಿಯ ಸಂಗೀತ ನಿರ್ದೇಶಕ ಜೋಡಿ ಅಶ್ವಥ್-ವೈದಿ ಗಳಲ್ಲೊಬ್ಬರು ಎಲ್.ವೈದ್ಯನಾಥನ್.ಸಂಗೀತದ ಹಿನ್ನೆಲೆ ಹೊಂದಿದ ಕುಟುಂಬದಿಂದ ಬಂದ ವೈದ್ಯನಾಥನ್ ಸ್ವತಃ ಪಿಟೀಲು ವಾದಕರು.ಪ್ರಾರಂಭದಲ್ಲಿ ಕನ್ನಡದ ಪ್ರಸಿದ್ಧ ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಅವರ ಜೊತೆ ಬಂಗಾರದ ಮನುಷ್ಯ, ಬೂತಯ್ಯನ ಮಗ ಅಯ್ಯು, ಸನಾದಿ ಅಪ್ಪಣ್ಣ ಚಿತ್ರಗಳಿಗೆ ಸಹಾಯಕರಾಗಿ ದುಡಿದಿದ್ದಾರೆ.ಪ್ರಸಿದ್ಧ ನಿರ್ದೇಶಕ ಸಿದ್ಧಲಿಂಗಯ್ಯ ನಿರ್ದೇಶನದ ಹೇಮಾವತಿ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದರು.ಕಾಕನಕೋಟೆ ಚಿತ್ರದ ಸಂಗೀತ ನಿರ್ದೇಶಕ ಹಾಗೂ ಗಾಯಕ ಸಿ.ಅಶ್ವಥ್ ಜೊತೆ ಸೇರಿ, ಅಶ್ವಥ್-ವೈದಿಯಾಗಿ ಹಲವಾರು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ಈ ಜೋಡಿಯ ಸಂಗೀತ ನಿರ್ದೇಶನದ ಕೆಲವು ಚಿತ್ರಗಳುಸಂಪಾದಿಸಿ
ಇವರು ಸ್ವತಂತ್ರವಾಗಿ ಸಂಗೀತ ನಿರ್ದೇಶಿಸಿದ ಕೆಲವು ಚಿತ್ರಗಳುಸಂಪಾದಿಸಿ
- ತಬರನ ಕತೆ
- ಒಂದು ಮುತ್ತಿನ ಕತೆ
- ಕ್ರೌರ್ಯ
- ಏಳು ಸುತ್ತಿನ ಕೋಟೆ
- ಪುಷ್ಪಕ ವಿಮಾನ
- ಶಂಕರನಾಗ್ ಹಿಂದಿಯಲ್ಲಿ ನಿರ್ದೇಶಿಸಿದ ಮಾಲ್ಗುಡಿ ಡೇಸ್ ದೂರದರ್ಶನ ಧಾರಾವಾಹಿಗೆ ಸಹ ಸಂಗೀತ ನಿರ್ದೇಶನ ಮಾಡಿದ್ದರು.