ಡಾ. ಲಕ್ಷ್ಮಿನಾರಾಯಣ ಸುಬ್ರಮಣ್ಯಂ (೧೯೪೭ ರ ಜುಲೈ ೨೩ ರಂದು ಜನಿಸಿದರು), ಇವರು ಖ್ಯಾತ ಭಾರತೀಯ ಪಿಟೀಲು ವಾದಕ, ಸಂಗೀತಗಾರ ಮತ್ತು ನಿರ್ದೇಶಕರಾಗಿದ್ದಾರೆ. ಅಲ್ಲದೇ ಶಾಸ್ತ್ರೀಯ ಕರ್ನಾಟಕ ಸಂಗೀತ ಮತ್ತು ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತರಾಗಿದ್ದಾರೆ. ಅಲ್ಲದೇ ವಾದ್ಯಗೋಷ್ಠಿಗಳಲ್ಲಿ ಇವರ ನುಡಿಸುವ ಕಲಾಭಿಜ್ಞ, ಕಲಾ ಕೌಶಲ್ಯದ ವಿಧಾನಗಳು ಮತ್ತು ಸಂಗೀತ ಸಂಯೋಜನೆಗಳಿಗಾಗಿ ಪ್ರಸಿದ್ಧರಾಗಿದ್ದಾರೆ.

L. Subramaniam
L. Subramaniam performing at a 2012 concert in Kollami
ಹಿನ್ನೆಲೆ ಮಾಹಿತಿ
ಜನ್ಮನಾಮSubramaniam Lakshminarayana
ಸಂಗೀತ ಶೈಲಿClassical, Carnatic, fusion, jazz, world music
ವೃತ್ತಿViolinist, composer, conductor, multi-instrumentalist, arranger, record producer, pedagogue
ವಾದ್ಯಗಳುViolin, percussion, synthesizers, vocals
ಸಕ್ರಿಯ ವರ್ಷಗಳು೧೯೭೩–present

ಆರಂಭಿಕ ವರ್ಷಗಳು

ಬದಲಾಯಿಸಿ

ಸುಬ್ರಮಣ್ಯಂ ವಿ.ಲಕ್ಷ್ಮೀನಾರಾಯಣರ ಮತ್ತು ಸೀತಾಲಕ್ಷಿಯವರ ಪುತ್ರರಾಗಿ ಜನಿಸಿದರು. ಇವರಿಬ್ಬರೂ ತಮಿಳು ತಲೆಮಾರಿನ ಪರಿಣಿತ ಸಂಗೀತಗಾರರಾಗಿದ್ದಾರೆ. ಇವರು ಕಿರಿಯ ವಯಸ್ಸಿನಲ್ಲಿ ಜಾಫ್ನಾದಲ್ಲಿದ್ದರಲ್ಲದೇ, ಐದು ವರ್ಷವಾಗುವ ಮುಂಚೆಯೇ ಸಂಗೀತ ಅಧ್ಯಯನ ಪ್ರಾರಂಭಿಸಿದ್ದರು.[] ಅವರ ತಂದೆ ಪ್ರೊಫೆಸರ್ ವಿ. ಲಕ್ಷ್ಮೀನಾರಾಯಣರ ಪೋಷಣೆ-ಮಾರ್ಗದರ್ಶನದಡಿ ಪಿಟೀಲು ಕಲಿಯಲು ಪ್ರಾರಂಭಿಸಿದರು. ಇವರ ಕುಟುಂಬದವರು ಮತ್ತು ಸಂಗೀತಗಾರರು ಇವರನ್ನು ಪ್ರೀತಿಯಿಂದ “ಮಣಿ” ಎಂದು ಕರೆಯುತ್ತಿದ್ದರು. ತಮ್ಮ ಆರನೆಯ ವಯಸ್ಸಿನಲ್ಲಿ ಸಾರ್ವಜನಿಕರೆದುರು ಮೊದಲ ಬಾರಿಗೆ ಪ್ರದರ್ಶನ ನೀಡಿದ್ದರು. ಪ್ರಸಿದ್ಧ ಪಿಟೀಲು ವಾದಕ- ಸಂಯೋಜಕ ಎಲ್. ಶಂಕರ್ ರವರನ್ನು ಒಳಗೊಂಡಂತೆ ಇವರ ಸಹೋದರರು ಕೂಡ ಖ್ಯಾತ ಸಂಗೀತಗಾರಾಗಿದ್ದಾರೆ.(ಅಲಿಯಾಸ್. ಶೆಂಕರ್), ಮತ್ತು ಎಲ್. ವೈದ್ಯನಾಥನ್. ಇವರು, ಈ ಇಬ್ಬರೊಂದಿಗೂ ಧ್ವನಿಮುದ್ರಿಕೆಗಳನ್ನು ಬಿಡುಗಡೆಮಾಡಿದ್ದಾರೆ. ಸುಬ್ರಮಣ್ಯಂ ಅವರು ತಮ್ಮ ಎಳೆಯ ವಯಸ್ಸಿನಿಂದಲೇ ಸಂಗೀತ ಮತ್ತು ವಿಜ್ಞಾನದ ಬಗ್ಗೆ ಅಧಿಕ ಆಸಕ್ತಿ ಬೆಳೆಸಿಕೊಂಡಿದ್ದರು. ಅಲ್ಲದೇ ಔಷಧ ವಿಜ್ಞಾನದಲ್ಲಿ ಅಧ್ಯಯನ ಮಾಡಿದರು. ಅದರಂತೆ ಮದ್ರಾಸ್ ವೈದ್ಯಕೀಯ ಕಾಲೇಜ್ ನಲ್ಲಿ ಅವರು M.B.B.S. ಪದವಿಯನ್ನೂ ಪಡೆದುಕೊಂಡರು. ಸಂಗೀತವನ್ನು ಪೂರ್ಣಾವಧಿಯ ವೃತ್ತಿಯಾಗಿಟ್ಟುಕೊಳ್ಳುವ ಬಗ್ಗೆ ನಿರ್ಧರಿಸುವ ಮೊದಲು ಅವರು ಸಾಮಾನ್ಯ ವೃತ್ತಿ ನಿರತ ವೈದ್ಯನೆಂದು ನೊಂದಾಯಿಸಿಕೊಂಡಿದ್ದರು.[] ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದಲ್ಲಿ ಕ್ಯಾಲಿಫೋರ್ನಿಯಾ ಕಲಾ ಸಂಸ್ಥೆಯಿಂದ ವಿಶ್ವವಿದ್ಯಾನಿಲಯದ ಪದವಿ ಪಡೆದುಕೊಂಡರು.[]

ಪ್ರದರ್ಶನದ ವೃತ್ತಿಜೀವನ

ಬದಲಾಯಿಸಿ

೧೯೭೩ರಿಂದ ಸುಬ್ರಮಣ್ಯಂ ಸುಮಾರು ೨೦೦ ಧ್ವನಿಮುದ್ರಿಕೆಗಳನ್ನು ಹೊರತಂದಿದ್ದು, ಅನೇಕ ಐತಿಹಾಸಿಕ ಸೋಲೋ(ಅವರೊಬ್ಬರದೇ ಸಂಗೀತದ ಆಲ್ಬಂ) ಆಲ್ಬಂಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಸಂಗೀತಗಾರರಾದ ಯೆಹೂದಿ ಮೆನುಹಿನ್, ಸ್ಟಿಫಾನ್ ಗ್ರ್ಯಾಪೆಲ್ಲಿ, ರುಗ್ಗಿರೋ ರಿಸಿ ಮತ್ತು ಜೀನ್-ಪಿರ್ರೆ ರಾಮ್ ಪಾಲ್ ರೊಂದಿಗೆ ಸೇರಿ ಧ್ವನಿಮುದ್ರಿಕೆಗಳನ್ನು ಮಾಡಿದ್ದಾರೆ. ಮುಂದೆ ಅವರು ರುಗ್ಗಿರೋ ರಿಸಿ, ಹರ್ಬೀ ಹ್ಯಾನ್ ಕಾಕ್ , ಜೊ ಸ್ಯಾಂಪಲ್, ಜೀನ್-ಲುಕ್ ಪಾಂಟಿ , ಸ್ಟ್ಯಾನ್ ಲೆ ಕ್ಲಾರ್ಕ್ ಮತ್ತು ಅನೇಕ ಪ್ರತಿಭಾವಂತರೊಂದಿಗೆ ಪ್ರದರ್ಶನ ನೀಡಲಿದ್ದಾರೆ ಹಾಗು ಆಲ್ಬಂ ಅನ್ನೂ ತರುವ ತಯಾರಿ ನಡೆಸಿದ್ದಾರೆ.[] ಚೆಂಬೈ ವೈದ್ಯನಾಥ ಭಾಗವತರು, ಕೆ. ವಿ.ನಾರಾಯಣಸ್ವಾಮಿ, ಡಾ.ಪಿನಕಪಾಣಿ, ಸೆಮನ್ ಗುಡಿ ಶ್ರೀನಿವಾಸ ಐಯ್ಯರ್, ಎಮ್. ಬಾಲಮುರುಳಿಕೃಷ್ಣ ಮತ್ತು ಎಮ್.ಡಿ. ರಾಮನಾಥನ್ ರನ್ನು ಒಳಗೊಂಡಂತೆ ಹಲವರೊಂದಿಗೆ ತಮ್ಮ ಕಲಾ ಪ್ರದರ್ಶನ ನೀಡಿದ್ದಾರೆ. ಇವರನ್ನು ವೇದಿಕೆಗಳ ಮೇಲೆ ಕರ್ನಾಟಕ ಸಂಗೀತದಲ್ಲೆ ಅತ್ಯುತ್ತಮ ಪಿಟೀಲು ವಾದಕ ಎಂದು ಸಾಮಾನ್ಯವಾಗಿ ಎಲ್ಲರೂ ಪ್ರಶಂಸಿದ್ದಾರೆ. ಅಷ್ಟೇ ಅಲ್ಲದೇ ಇವರು ಉತ್ತರ ಭಾರತೀಯ ಹಿಂದೂಸ್ಥಾನಿ ಸಂಗೀತದ ಸಂಗೀತಗಾರರೊಂದಿಗೆ ಮತ್ತು ಸಂಗೀತ ವಾದ್ಯಗಳ ಪರಿಣಿತ ಇತರ ಕಲಾವಿದರೊಂದಿಗೆ ಜತೆಗೂಡಿ ಪ್ರದರ್ಶನ ನೀಡಿದ್ದಾರೆ. ಜೊತೆಯಲ್ಲಿ, ಮೃದಂಗದ ವಿದ್ವಾಂಸ,ಮಾನನೀಯರಾದ ಪಾಲ್ ಘಾಟ್ ಮಣಿ ಐಯ್ಯರ್ ರೊಂದಿಗೂ ಕೂಡ ಸಂಗೀತ ಕಚೇರಿಯಲ್ಲಿ ಪಾಲ್ಗೊಂಡಿದ್ದಾರೆ.[] ಸುಬ್ರಮಣ್ಯಂ ವಾದ್ಯವೃಂದಗಳಿಗೆ, ಬ್ಯಾಲೆಗಳಿಗೆ (ನೃತ್ಯ ರೂಪಕ ನಾಟಕ) ಮತ್ತು ಹಾಲಿವುಡ್ ಫಿಲ್ಮ್ ಸ್ಕೋರ್ ಗಳಿಗೆ (ಚಲನಚಿತ್ರದ ಹಿನ್ನೆಲೆ ಗಾಯನ) ಗೀತ ಸಾಹಿತ್ಯ ರಚನೆಯನ್ನು ಕೂಡ ಮಾಡಿದ್ದಾರೆ, ಅಲ್ಲದೇ ಸಿಂಫನಿ (ಸ್ವರ ಮೇಳ) ಮತ್ತು ಕಾರ್ನಾಟಕ ಸಂಗೀತದ ಕೃತಿಗಳಿಗೆ ಸ್ವರಪ್ರಸ್ತಾರ ರಚಿಸುವುದರೊಂದಿಗೆ, ಯೂಫನಿ (ಸುಸ್ವರ) ಯಂತಹ ಸಂಗೀತದ ಮೇಲೆ ಪುಸ್ತಕ ರಚಿಸಿದ್ದಾರೆ.[][] ೧೯೮೩ ರಲ್ಲಿ, ಅವರು ಪಿಟೀಲು ಮತ್ತು ಕೊಳಲಿಗೆ ಎರಡು ಏಕವಾದ್ಯಗೀತ ಬಂಧವನ್ನು ಸಂಯೋಜಿಸಿದ್ದರು. ಇದು ಪಾಶ್ಚಾತ್ಯ ಸ್ವರವನ್ನು ಸೂಕ್ಷ್ಮ ಸ್ಥಾಯಿಭೇಧದೊಂದಿಗೆ ಮಿಶ್ರಧಾಟಿಯೆನಿಸಿದೆ. ಮತ್ತೊಂದು ಧ್ವನಿಮುದ್ರಿಕೆಯಾದ, “ಸ್ಪ್ರಿಂಗ್ – ಚಾರಣ ಗೀತೆ” , ಇದು ಬ್ಯಾಕ್ ಮತ್ತು ಬರೋಕ್ ಸಂಗೀತದ ಗೌರವಾರ್ಥ ಸಂಯೋಜಿಸಲಾಗಿತ್ತು. ಅನಂತರ ಪ್ರದರ್ಶಿಸಲಾದ ವಾದ್ಯಮೇಳಗಳು ಕೆಳಕಂಡವುಗಳನ್ನು ಒಳಗೊಂಡಿದೆ: ನ್ಯೂಯಾರ್ಕ್ ಫಿಲ್ ಹಾರ್ಮೊನಿಕ್ ನೊಂದಿಗೆ ಫ್ಯಾಂಟಸಿ ಆನ್ ವೇದಿಕ್ ಚಾಂಟ್ (ವೈದಿಕ ರಾಗಗಳ ಮೇಲಿನ ಪರಿಕಲ್ಪನೆ). ಇದನ್ನು ಜುಬಿನ್ ಮೆಹ್ತಾರವರು ಏರ್ಪಡಿಸಿದ್ದರು.ದಿ ಸ್ವಿಸ್ ರೊಮ್ಯಾಂಡೆ ವಾದ್ಯಮೇಳದೊಂದಿಗೆ ಟರ್ಬ್ಯುಲೆನ್ಸ್ (ಕೋಲಾಹಲ), ಒಸ್ಲೊ ಫಿಲ್ ಹಾರ್ಮೊನಿಕ್ ನೊಂದಿಗೆ “ ದಿ ಕನಸರ್ಟ್ ಆಫ್ ಟು ವಯಲಿನ್ಸ್” (ಎರಡು ಪಿಟೀಲುಗಳ ವಾದ್ಯಗೋಷ್ಠಿ) ಹಾಗು ಉಳಿದವರಲ್ಲಿ ಬರ್ಲಿನ್ ಸ್ಟೇಟ್ ಓಪೆರಾ (೨೮ ರಾಷ್ಟ್ರಗಳಲ್ಲಿ ನೇರ ಪ್ರಸಾರ ಮಾಡಲಾಯಿತು) ದೊಂದಿಗೆ ಗ್ಲೋಬಲ್ ಸಿಂಫನಿ .[] ಇವರು ಬೀಜಿಂಗ್ ನಲ್ಲಿ ಬೀಜಿಂಗ್ ಸಿಂಫನಿ ವಾದ್ಯಮೇಳದೊಂದಿಗೆ ಚೀನಾದ ವಾದ್ಯಗೋಷ್ಠಿಯೊಂದಿಗೆ ಪ್ರವಾಸವನ್ನು ಕೂಡ ಮಾಡಿದರು. ಇವರ ಸಂಗೀತ ರಚನೆಗಳನ್ನು, ಸ್ಯಾನ್ ಜೋಸ್ ಬ್ಯಾಲೆ ಕಂಪನಿ ಮತ್ತು ಅಲ್ವಿನ್ ಏಲೆಯ್ ಅಮೇರಿಕನ್ ಡ್ಯಾನ್ಸ್ ಥಿಯೇಟರ್ ನಂತಹ ಪ್ರಮುಖ ನೃತ್ಯ ಕಂಪನಿಗಳು ವೇದಿಕೆ ಪ್ರದರ್ಶನದಲ್ಲಿ ಬಳಸುತ್ತವೆ. ಸುಬ್ರಮಣ್ಯಂ ಮ್ಯಾರಿನಿಸ್ಕಿ ಬ್ಯಾಲೆಗಾಗಿ “ಶಾಂತಿ ಪ್ರಿಯಾ” ಎಂಬ ಸಂಗೀತ ಕೃತಿಯನ್ನೂ ಸಂಯೋಜಿಸಿದ್ದಾರೆ. ೧೯೯೯ ರಲ್ಲಿ ಗ್ಲೋಬಲ್ ಫ್ಯೂಷನ್ ಅನ್ನು ಒಳಗೊಂಡಂತೆ ಅವರ ಆಲ್ಬಂಗಳ ಬಿಡುಗಡೆ, ಸುಬ್ರಮಣ್ಯಂ ಗೆ ವಿಮರ್ಶಾತ್ಮಕವಾಗಿ ಅಪಾರ ಮೆಚ್ಚುಗೆಯನ್ನು ತಂದುಕೊಟ್ಟಿತಲ್ಲದೇ, ಅವರ ಸುಧಾರಿತ ವಾದನಕ್ಕಾಗಿ ಜನಪ್ರಿಯತೆ ಕೂಡ ತಂದುಕೊಟ್ಟಿತು. ಇವರು ಲಕ್ಷ್ಮೀನಾರಾಯಣ ಜಾಗತಿಕ ಸಂಗೀತ ಉತ್ಸವವನ್ನು ಆರಂಭಿಸಿದರಲ್ಲದೇ, ಇದನ್ನು ಅವರೇ ನಿರ್ದೇಶಿಸುತ್ತಾರೆ. ಇದು ಭಾರತದಲ್ಲಿ ನಡೆಯುವ ಉತ್ಸವವಾಗಿದೆ. ಆಗ ೨೦೦೪ ರಲ್ಲಿ US (ನ್ಯೂಯಾರ್ಕ್ ನ ಲಿಂಕನ್ ಸೆಂಟರ್ ), ಆಸ್ಟ್ರೇಲಿಯಾದ ಪರ್ಥ್ ಏಷ್ಯನ್ ಫೆಸಿಫಿಕ್ ರೀಜನ್ ,ಸಿಂಗಾಪುರ್ ನ ಐಸ್ಪ್ಲ್ಯಾನೆಡ್, ಪೆನ್ಯಾಂಗ್ ನಲ್ಲಿನ ಶ್ರೀ ದಿವಾನ್ ಪೆನ್ಯಾಂಗ್ ಹಾಲ್ ಹಾಗು ಮಲೇಷ್ಯಾದ ಕೌಲಾ ಲುಂಪುರ್ ನ ಪುತ್ರ ವರ್ಲ್ಡ್ ಟ್ರೇಡ್ ಸೆಂಟರ್ ನಲ್ಲಿ ವಾದ್ಯಗೋಷ್ಠಿಗಳನ್ನು ನಡೆಸಿದರು.ಇವೆಲ್ಲವೂ ಒಳಗೊಂಡಂತೆ ಸಂಗೀತದ ಉತ್ಸವದೊಂದಿಗೆ ವಿಶ್ವ ಪ್ರವಾಸವನ್ನೂ ಪೂರ್ಣಗೊಳಿಸಿದರು. ನಂತರ ೨೦೦೫ ರ ಜನವರಿ ಉತ್ಸವದಲ್ಲಿ, ಶ್ರೇಷ್ಠ ಪಿಟೀಲು ವಾದಕರಾದ ಆರ್ವೆ ಟೆಲೆಫ್ಸೆನ್, ಓಸೋಲೋ ಕ್ಯಾಮೆರೆಟಾ, ಜ್ಯಾಜ್ ನ ಪರಿಣಿತರಾದ ಸ್ಟ್ಯಾನ್ಲೆ ಕ್ಲಾರ್ಕ್, ಜಾರ್ಜ್ ಡ್ಯೂಕ್, ಅಲ್ ಜ್ಯಾರೆಯೊ, ಎರ್ಲ್ ಕ್ಲುಗ್ ಮತ್ತು ರವಿ ಕೊಲ್ಟ್ರೇನ್ ಸುಬ್ರಮಣ್ಯಂರೊಂದಿಗೆ ಜೊತೆಯಾಗಿ ಪ್ರದರ್ಶನ ನೀಡಿದರು. ಇತ್ತೀಚೆಗಷ್ಟೇ ೨೦೦೭ ರ ಸೆಪ್ಟೆಂಬರ್ ನಲ್ಲಿ ಸುಬ್ರಮಣ್ಯಂ, ಫೇಯರ್ ಫ್ಯಾಕ್ಸ್ ಸಿಂಫನಿ, ವಾರೆಂಟನ್ ಚಾರ್ಲೆ ಮತ್ತು ಕಾರ್ನಾಟಿಕ್ ತಾಳವಾದ್ಯಗಾರರೊಂದಿಗೆ, “ದಿ ಫ್ರೀಡಂ ಸಿಂಫನಿ”ಯನ್ನು ಅನ್ನು ನಡೆಸಿ ಪ್ರಥಮ ಪ್ರದರ್ಶನ ನೀಡಿದರು. ಇದು ಮೆಚ್ಚುಗೆಯ ಸುದೀರ್ಘ ಜಯ ಘೋಷಕ್ಕೆ ಕಾರಣವಾಯಿತಲ್ಲದೇ, “ಫ್ಲೈಟ್ ಆಫ್ ದಿ ಹಂಬಲ್ ಬೀ” ಯನ್ನು ಮತ್ತೊಮ್ಮೆ ನುಡಿಸುವಂತೆ ಮಾಡಿತು. ಮಸ್ಕಟ್ ಖಂಡಾಂತರದಲ್ಲಿ ಪ್ರಮುಖ ಸಂಗೀತಗಾರರೊಂದಿಗೆ ಫೆಬ್ರವರಿ ೭ ರಂದು, ಪಿಟೀಲು ವಾದನಕ್ಕಾಗಿ ಮೊದಲ ಬಾರಿಗೆ ಮಸ್ಕಟ್ ಗೆ ಹೋಗಿದ್ದರು. ಸುಬ್ರಮಣ್ಯಂ, ಚೆನ್ನೈನ ಕೊಡಂಬಾಕ್ಕಂ ನಲ್ಲಿರುವ ಸಂಗೀತ ಸಂಯೋಜಕ ಎ.ಆರ್.ರಹಮಾನ್ ರ, KM ಮ್ಯೂಸಿಕ್ ಕನ್ ಸರ್ವೇಟ್ರಿ ಎಂಬ ಸಲಹಾ ಮಂಡಳಿಯಲ್ಲಿಯೂ ಇದ್ದಾರೆ. ಖ್ಯಾತ ಪಿಟೀಲು ವಾದಕ ಯೆಹೂದಿ ಮೆನುಹಿನ್ ಸುಬ್ರಮಣ್ಯಂರವರನ್ನು ಕುರಿತು ಕೆಳಕಂಡಂತೆ ಹೇಳಿದ್ದಾರೆ:

I find nothing more inspiring than the music making of my very great colleague Subramaniam. Each time I listen to him, I am carried away in wonderment.”[]

ಚಲನಚಿತ್ರ ಕ್ಷೇತ್ರದಲ್ಲಿನ ವೃತ್ತಿಜೀವನ

ಬದಲಾಯಿಸಿ

ಇವರು ಮೀರಾ ನಾಯರ್ ನಿರ್ದೇಶನದ ಸಲಾಮ್ ಬಾಂಬೆ (೧೯೮೮) ಮತ್ತು ಮಿಸ್ಸಿಸ್ಸಿಪ್ಪಿ ಮಸಾಲಾ (೧೯೯೧) ಚಿತ್ರಗಳಿಗೆ ಫಿಲ್ಮ್ ಸ್ಕೋರ(ಚಿತ್ರದ ಹಿನ್ನೆಲೆ ಸಂಗೀತ) ಸಂಯೋಜಿಸಿದ್ದಾರೆ. ಇದರ ಜೊತೆ ಬರ್ನಾರ್ಡೊ ಬೆರ್ಟೊಲುಸ್ಸಿಯ ಲಿಟ್ಟಲ್ ಬುದ್ಧ (೧೯೯೩) ಮತ್ತು ಮರ್ಚೆಂಟ್-ಐವರಿ ಪ್ರೋಡಕ್ಷನ್ಸ್ ನ ಕಾಟನ್ ಮೇರಿ (೧೯೯೯) ಚಲನಚಿತ್ರದಲ್ಲಿ ಇವರನ್ನು ಪಿಟೀಲು ಏಕಾಕಿ ವಾದಕನಾಗಿ ಚಿತ್ರಿಸಲಾಗಿದೆ.[]

ಪ್ರಶಸ್ತಿಗಳು ಮತ್ತು ಮಾನ್ಯತೆ

ಬದಲಾಯಿಸಿ

ಅವರ ವೃತ್ತಿಜೀವನದುದ್ದಕ್ಕೂ ಎಲ್. ಸುಬ್ರಮಣ್ಯಂ ಅನೇಕ ಪ್ರಶಸ್ತಿ ಮತ್ತು ಅತ್ಯುನ್ನತ ಪುರಸ್ಕಾರಗಳನ್ನು ಗಳಿಸಿದ್ದಾರೆ. ಮದ್ರಾಸ್‌ನ ರಾಜ್ಯಪಾಲರಿಂದ ಇವರು "ಪಿಟೀಲು ವಾದನದ ಚಕ್ರವರ್ತಿ"- ಪಿಟೀಲು ಸಾಮ್ರಾಟ ಎಂಬ ಬಿರುದು ಸ್ವೀಕರಿಸಿದ್ದಾರೆ,[] ೧೯೮೧ ರಲ್ಲಿ ಅವರು ಗ್ರ್ಯಾಮಿ ಗಾಗಿ ನಾಮನಿರ್ದೇಶನ ಪಡೆದರು. ಆಗ ೧೯೯೬ರಲ್ಲಿ ಅವರು ನಾರ್ವೆ ಬ್ರಾಡ್ ಕ್ಯಾಸ್ಟಿಂಗ್ ಕಾರ್ಪೊರೇಷನ್ ನ NRK P೨ ರೇಡಿಯೋ ಚಾನೆಲ್ ನಿಂದ, "ಅತ್ಯುತ್ತಮ ರಚನಕಾರ ಪ್ರಶಸ್ತಿ /ಕಮಿಷನ್" ಅನ್ನು ಪಡೆದುಕೊಂಡರು. ಸುಬ್ರಮಣ್ಯಂ ಅವರು ೧೯೯೭ ರಲ್ಲಿ (ಹೀಸ್ ಹೋಲಿನೆಸ್) ಘನತೆವೆತ್ತ ನೇಪಾಳದ ದೊರೆ ಬೀರೇಂದ್ರ ಅರವರಿಂದ ಗೌರವ ಪದಕ ಪಡೆದುಕೊಂಡರು. ರಾಜನ ಆಳ್ವಿಕೆಯ ೨೫ನೇ ವರ್ಷಾಚರಣೆಯಲ್ಲಿ ನೀಡಿದ್ದ ಪ್ರದರ್ಶನಕ್ಕಾಗಿ ಇವರಿಗೆ ಈ ಗೌರವ ನೀಡಲಾಗಿತ್ತು. ಇವರಿಗೆ ೧೯೮೮ ರಲ್ಲಿ ಪದ್ಮಶ್ರೀ ಮತ್ತು ೨೦೦೧ ರಲ್ಲಿ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಗೀತ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ೨೦೦೪ ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯ, ೨೦೦೩ ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯ ಮತ್ತು ೨೦೦೮ ರಲ್ಲಿ ಶೆಫ್ ಫಿಲ್ಡ್ ವಿಶ್ವವಿದ್ಯಾನಿಲಯಗಳು ಇವರಿಗೆ ಗೌರವ ಡಾಕ್ಟರೇಟ್ ನೀಡಿದವು.

ವೈಯಕ್ತಿಕ ಜೀವನ

ಬದಲಾಯಿಸಿ

ಸುಬ್ರಮಣ್ಯಂ ವಿಜಿ ಸುಬ್ರಮಣಿಯನ್ ರವರನ್ನು ವಿವಾಹವಾದರು. ಆದರೆ ಇವರ ಪತ್ನಿ ೧೯೯೫ ರ ಫೆಬ್ರವರಿ ೯ ರಂದು ಮರಣಹೊಂದಿದರು. ಅನಂತರ ೧೯೯೯ ರ ನವೆಂಬರ್ ತಿಂಗಳಿನಲ್ಲಿ ಭಾರತೀಯ ಹಿನ್ನೆಲೆ ಗಾಯಕಿ ಕವಿತಾ ಕೃಷ್ಣಮೂರ್ತಿಯವರನ್ನು ವಿವಾಹವಾದರು. ಅವರ ಪುತ್ರಿ ಸೀತಾ ಸುಬ್ರಮಣ್ಯಂ ರೊಂದಿಗೆ ಸಂಗೀತ ಕೃತಿ ತುಣುಕು ಪ್ರದರ್ಶನಗಳನ್ನು ಮತ್ತು ಪುತ್ರ ಅಂಬಿ ಸುಬ್ರಮಣ್ಯಂ ರೊಂದಿಗೆ ಪಿಟೀಲು ಸಂಗೀತ ಕಚೇರಿಯನ್ನು ಮುಂದುವರೆಸಿದ್ದಾರೆ. ಇವರು “ಆಸ್ಟ್ರಾಲ್ ಸಿಂಫನಿ ”ಯಲ್ಲಿ ತನಿ ವಾದಕರಾಗಿದ್ದಾರೆ. ಅಲ್ಲದೇ ಮುಂದೆ ಕೃಷ್ಣಮೂರ್ತಿಯವರೊಂದಿಗೆ ಅನೇಕ ವಾದ್ಯಗೋಷ್ಠಿಗಳನ್ನು ನೀಡಿ, ಅದನ್ನು ಧ್ವನಿಮುದ್ರಿಸಿದ್ದಾರೆ. ಕುಟುಂಬದಿಂದ ದೂರವಿರುವ ಇವರ ಹಿರಿಯ ಪುತ್ರಿ ಜಿಂಜರ್ ಶಂಕರ್, ಲಾಸ್ ಏಂಜಲೀಸ್ ಮೂಲದ ಪ್ರಸಿದ್ಧ ಯುವ ಸಂಯೋಜಕಿ,ಸಂಗೀತಗಾರ್ತಿಯಾಗಿದ್ದಾರೆ. ಅಲ್ಲದೇ ಇವರ ಚಿಕ್ಕಪ್ಪ ಎಲ್. ಶಂಕರ್ ರೊಂದಿಗೆ ಶಂಕರ್ ಮತ್ತು ಜಿಂಜರ್ ಎಂಬ ಹೆಸರಲ್ಲಿ ಪ್ರದರ್ಶನ ನೀಡುತ್ತಾರೆ.ಇವರ ಪುತ್ರಿ ಬಿಂದು ಸೀತಾ ಸುಬ್ರಮಣ್ಯಂ ಇತ್ತೀಚೆಗಷ್ಟೇ ಕೇರಳದಲ್ಲಿ [ಪಲಕ್ಕಾಡ್] ಸಾಫ್ಟ್ ವೇರ್ ವೃತ್ತಿಪರರಾದ ಮಿಸ್ಟರ್.ಪ್ರೇಮ್ ಸಾಯಿ ಅವರನ್ನು ವಿವಾಹವಾದರು.

ಧ್ವನಿಮುದ್ರಿಕೆ ಪಟ್ಟಿ

ಬದಲಾಯಿಸಿ
  • ಗಾರ್ಲ್ಯಾಂಡ್ (೧೯೭೮) (ಸ್ವೆಂಡ್ ಅಸ್ಮ್ಯೂಸಿನ್ ಅನ್ನು ಒಳಗೊಂಡು, ಎಲ್. ಸುಬ್ರಮಣ್ಯಂ)
  • ಫ್ಯಾಂಟಸಿ ವಿದೌಟ್ ಲಿಮಿಟ್ಸ್ (೧೯೮೦)
  • ಬ್ಲಾಸಮ್ (೧೯೮೧) , ಹರ್ಬೀ ಹ್ಯಾನ್ ಕಾಕ್ ಮತ್ತು ಲ್ಯಾರಿ ಕಾರ್ ಯೆಲ್ (ಕ್ರೂಸಡರ್/MCA ರೆಕಾರ್ಡ್ಸ್)
  • ಸ್ಪ್ಯಾನಿಷ್ ವೇವ್ (೧೯೮೩ಮತ್ತು ೧೯೯೧, ಮೈಲ್ ಸ್ಟೋನ್ ರೆಕಾರ್ಡ್ಸ್)
  • ಇಂಡಿಯನ್ ಕ್ಲಾಸಿಕಲ್ ಮಾಸ್ಟರ್ಸ್: ತ್ರೀ ರಾಗಾಸ್ ಫಾರ್ ಸೋಲೋ ವಯಲಿನ್ (೧೯೯೧ ಮತ್ತು ೧೯೯೨,ನಿಂಬಸ್ ರೇಕಾರ್ಡ್ಸ್)
  • ಕಲ್ಯಾಣಿ (೧೯೯೬, ವಾಟರ್ ಲಿಲೀ ಆಕಾಸ್ಟಿಕ್ಸ್)
  • ರಾಗ ಹೇಮಾವತಿ (ನಿಂಬಸ್ ರೆಕಾರ್ಡ್ಸ್)
  • ಡಿಸ್ಟಂಟ್ ವಿಷನ್ಸ್
  • ಫೆಸಿಫಿಕ್ ರಾಂಡೆವೋಸ್ (೧೯೯೬, ಮನು)
  • ಇಂಡಿಯನ್ ಎಕ್ಸ್ ಪ್ರೆಸ್ / ಮಣಿ ಅಂಡ್ ಕೋ. ಮೆನಾರ್ಡ್ ಫರ್ಗ್ಯೂಸನ್ (೧೯೯೯, ಮೈಲ್ ಸ್ಟೋನ್) ಅನ್ನು ಒಳಗೊಂಡಿದೆ
  • ಗ್ಲೋಬಲ್ ಫ್ಯೂಷನ್ (೧೯೯೯, ಎಲೆಕ್ಟ್ರಾ ರೆಕಾರ್ಡ್ಸ್)
  • ಎಲೆಕ್ಟ್ರಾನಿಕ್ ಮೋಡ್ಸ್ ವಾಲ್ಯೂಮ್ಸ್ ೧ ಅಂಡ್ ೨ (ವಾಟರ್ ಲಿಲ್ಲೀ ಆಕಾಸ್ಟಿಕ್ಸ್)

ಇತರ ಕಲಾವಿದರೊಂದಿಗೆ ಜತೆಗೂಡಿ

ಬದಲಾಯಿಸಿ
  • ಸ್ಟಿಫಾನೆ ಗ್ರ್ಯಾಪೆಲ್ಲಿಯೊಂದಿಗೆ ಎಲ್. ಸುಬ್ರಮಣ್ಯಂ : ಕಾನ್ ವರ್ಸೇಷನ್ಸ್ (೧೯೯೨, ಮೈಲ್ ಸ್ಟೋನ್)
  • ಎಲ್. ಸುಬ್ರಮಣ್ಯಂ ಮತ್ತು ಯೆಹೂದಿ ಮೆನುಹಿಯಿನ್: ನ್ಯೂಯಾರ್ಕ್ ನಲ್ಲಿ ಎಲ್. ಸುಬ್ರಮಣ್ಯಂ ಮತ್ತು ಯೆಹೂದಿ ಮೆನುಹಿಯಿನ್
  • ಎಲ್. ಸುಬ್ರಮಣ್ಯಂ ಮತ್ತು ಲ್ಯಾರಿ ಕೊರಿಯೆಲ್: ಫ್ರಮ್ ದಿ ಆಷಸ್ (೧೯೯೯, ವಾಟರ್ ಲಿಲೀ ಅಕಾಸ್ಟಿಕ್ಸ್)
  • ಎಲ್. ಸುಬ್ರಮಣ್ಯಂ ಮತ್ತು ಅಲಿ ಅಕ್ಬರ್ ಖಾನ್: ಡ್ಯೂಯಟ್ (೧೯೯೬, ಡೆಲಾಸ್ ರೆಕಾಡ್ಸ್)
  • ಎಲ್. ಸುಬ್ರಮಣ್ಯಂ, ಯೆಹೂದಿ ಮೆನುಹಿನ್ ಮತ್ತು ಸ್ಟಿಫಾನ್ ಗ್ರ್ಯಾಪ್ಪೆಲ್ಲಿಯೊಂದಿಗೆ: ಆಲ್ ದಿ ವಲ್ಡ್ಸ್ ವಯಲಿನ್ಸ್ (೧೯೯೩)
  • ಲಕ್ಷ್ಮೀನಾರಾಯಣ ಗ್ಲೋಬಲ್ ಮ್ಯೂಸಿಕ್ ಫೆಸ್ಟಿವಲ್ (ಡಬಲ್ CD) (ಸೋನಿ ಮ್ಯೂಸಿಕ್)
  • ಎಲ್. ಸುಬ್ರಮಣ್ಯಂ, ಕ್ಯಾರ್ಸ್ಟೆನ್ : ಮೀಟಿಂಗ್ಸ್ (೨೦೦೭, ಕ್ಯಾಲಿಬ್ರೇಟೆಡ್)

l.ಸುಬ್ರಮಣ್ಯಂ ,ಮಣಿ ಮತ್ತು ಸಹ \ಮೈಲ್ ಸ್ಟೋನ್,೧೯೮೬\

ಲೈವ್ ಆಲ್ಬಂಗಳು

ಬದಲಾಯಿಸಿ
  • ಎಲ್. ಸುಬ್ರಮಣ್ಯಂ: ಲೈವ್ ಇನ್ ಮಾಸ್ಕೊ (೧೯೮೮ ಮತ್ತು ೨೦೦೦, BMG / ವಿಜಿ ರೆಕಾರ್ಡ್ಸ್)
  • ಎಲ್. ಸುಬ್ರಮಣ್ಯಂ ಎನ್ ಕನ್ಸರ್ಟ್ (೧೯೯೫, ಒಕೊರಾ)
  • ಎಲ್. ಸುಬ್ರಮಣ್ಯಂ: ಲೈವ್ ಇನ್ ಫ್ರಾನ್ಸ್
  • ಎಲ್. ಸುಬ್ರಮಣ್ಯಂ: ಲೈವ್ ಇನ್ ಜಿನೀವಾ

ಚಲನಚಿತ್ರಗಳ ಪಟ್ಟಿ

ಬದಲಾಯಿಸಿ

ಸಂಯೋಜಕ

ಬದಲಾಯಿಸಿ
  • ಸಲಾಮ್ ಬಾಂಬೆ! (೧೯೮೮) (ಸಂಯೋಜಕ, ಸಂಗೀತ ವ್ಯವಸ್ಥಾಪಕ, ಸಂಗೀತಗಾರ: ಪಿಟೀಲು ವಾದಕ)
  • ಮಿಸ್ಸಿಸಿಪ್ಪಿ ಮಸಾಲಾ (೧೯೯೧) (ಸಂಯೋಜಕ, ಸಂಗೀತಕಾರ: ಪಿಟೀಲು, ಪಿಟೀಲು ಸಂಯೋಜಕ, ತಾಳವಾದ್ಯ)

ತನಿ(ಸ್ವಯಂ) ವಾದಕ

ಬದಲಾಯಿಸಿ
  • ಲಿಟ್ಟಲ್ ಬುದ್ಧ (೧೯೯೩) (ಪಿಟೀಲು ವಾದಕ)
  • Kama Sutra: A Tale of Love (೧೯೯೬) (ಪಿಟೀಲು ವಾದಕ)
  • ಕಾಟನ್ ಮೇರಿ (೧೯೯೯) (ಪಿಟೀಲು ವಾದಕ)

ಹೆಚ್ಚುವರಿ ಧ್ವನಿಮುದ್ರಿಕೆಗಳು

ಬದಲಾಯಿಸಿ
  • ಪೀಸ್ ಒನ್ ಡೇ (೨೦೦೪) (ಸಂಯೋಜಕ, ಪ್ರದರ್ಶಕ: "ಜಿಪ್ಸಿ ಟ್ರೈಲ್")
  • ಬರಾಕಾ (೧೯೯೨) (ಪ್ರದರ್ಶಕ: "ವಂಡರಿಂಗ್ ಸೇಂಟ್")

ಸುಬ್ರಮಣ್ಯಂ ರವರ ಕುರಿತು

ಬದಲಾಯಿಸಿ
  • ಎಲ್. ಸುಬ್ರಮಣ್ಯಂ: ವಯಲಿನ್ ಫ್ರಮ್ ದಿ ಹಾರ್ಟ್ (೧೯೯೯). ಜೀನ್ ಹೆನ್ರಿ ಮೆನ್ಯೂರ್ ನಿರ್ದೇಶಿಸಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ ೧.೩ "Artist: L. Subramaniam". Concord Music Group. 1986. Retrieved 1 December 2007. {{cite web}}: Unknown parameter |month= ignored (help)
  2. ೨.೦ ೨.೧ ೨.೨ ೨.೩ ೨.೪ "L. Subramaniam: Short Biography". Sampad. 2005. Archived from the original on 27 September 2007. Retrieved 20 February 2007. {{cite web}}: Unknown parameter |month= ignored (help)
  3. ೩.೦ ೩.೧ "L. Subramaniam: Official Site". Official Site. Retrieved 20 February 2007.


ಹೊರಗಿನ ಕೊಂಡಿಗಳು

ಬದಲಾಯಿಸಿ