ಕಸ್ತೂರಿ ಶಂಕರ್ - ಕನ್ನಡದ ಪ್ರಮುಖ ಗಾಯಕಿಯರಲ್ಲಿ ಒಬ್ಬರು. ಕನ್ನಡ ನೆಲದ ಪ್ರತಿಭೆಗಳಾದ ಬಿ.ಕೆ.ಸುಮಿತ್ರ, ಬೆಂಗಳೂರು ಲತಾ ನಂತರ ಬಂದ ಕನ್ನಡದ ಗಾಯಕಿ ಕಸ್ತೂರಿ ಶಂಕರ್ ಬೆಟ್ಟದ ಗೌರಿ ಚಿತ್ರದಿಂದ ಪರಿಚಯವಾದರು. ಭಾಗ್ಯಜ್ಯೋತಿ ಚಿತ್ರದ "ಗುಡಿ ಸೇರದ ಮುಡೆಯೇರದ" ಹಾಡು ಇವರಿಗೆ ಜನಪ್ರಿಯತೆಯನ್ನು ತಂದಿತು. ಶಾಸ್ತ್ರೀಯ ಸಂಗೀತ, ವಚನ ಸಂಗೀತ ಮತ್ತು ಸುಗಮ ಸಂಗೀತ ಕ್ಷೇತ್ರದಲ್ಲಿ ಇವರು ಕೆಲಸ ಮಾಡಿದ್ದಾರೆ. ಇವರು ಬೆಂಗಳೂರಿನಲ್ಲಿ "ನಮನ"ದಲ್ಲಿ ವಾಸವಾಗಿದ್ದಾರೆ.

ಕಸ್ತೂರಿ ಶಂಕರ್
Kasturi Shankar[]
ಅಡ್ಡಹೆಸರುಕನ್ನಡದ ಕಸ್ತೂರಿ, ನಾದಮಯ ಕಸ್ತೂರಿ
ಜನನ (1950-11-01) ೧ ನವೆಂಬರ್ ೧೯೫೦ (ವಯಸ್ಸು ೭೩)
ಮೈಸೂರು, ಕರ್ನಾಟಕ
ಸಂಗೀತ ಶೈಲಿಚಿತ್ರ ಸಂಗೀತ, ಸುಗಮ ಸಂಗೀತ, ಭಕ್ತಿಗೀತೆ, ಜನಪದ ಸಂಗೀತ
ವೃತ್ತಿಹಿನ್ನೆಲೆ ಗಾಯಕಿ
ಸಕ್ರಿಯ ವರ್ಷಗಳು1962 - 2000

ಜನನ, ಸುಗಮ ಸಂಗೀತ ಕ್ಷೇತ್ರದಲ್ಲಿ ಸಾಧನೆ

ಬದಲಾಯಿಸಿ

ಕನ್ನಡದ ಜನಪ್ರಿಯ ಗಾಯಕಿ ಕಸ್ತೂರಿ ಶಂಕರ್, ೧೯೫೦ ನವೆಂಬರ್, ೧ ರಂದು ಮೈಸೂರಿನಲ್ಲಿ ಜಿ.ಸಿ. ಶಂಕರಪ್ಪ, ತಾಯಿ ಗಿರಿಜದಂಪತಿಗಳ ಪ್ರೀತಿಯ ಪುತ್ರಿಯಾಗಿ ಜನಿಸಿದರು. ತಂದೆ , ಸ್ವಾತಂತ್ರ್ಯ ಹೋರಾಟಗಾರ ಉತ್ತಮ ಬರಹಗಾರರೂ ಅಪ್ಪಟ ಗಾಂಧಿವಾದಿಯೂ ಆಗಿದ್ದರು. 'ಕಸ್ತುರ್ ಬಾ ಗಾಂಧಿ 'ಯವರ ನೆನಪಿನಲ್ಲಿ ಮಗಳಿಗೆ ಕಸ್ತೂರಿ ಎಂದು ಹೆಸರಿಟ್ಟರು. ಕಸ್ತೂರಿಯವರು, ಬಾಲ್ಯದಲ್ಲೇ ತಂದೆಯವರು ರಚಿಸಿದ ಭಕ್ತಿಗೀತೆಗಳು, ದಾಸರ ಕೀರ್ತನೆಗಳನ್ನು ಸ್ಪಷ್ಟವಾಗಿ ಬಾಯ್ತುಂಬಾ ಮಧುರವಾಗಿ ಹಾಡುತ್ತಿದ್ದರು. ರಾಷ್ಟ್ರಕವಿ, ಡಾ. ಜಿ.ಎಸ್.ಎಸ್. ರಚಿತ ಕವಿತೆಯ ಸಾಲುಗಳು ಕಸ್ತೂರಿ ಶಂಕರ್ ರವರ ಮಧುರ ಧ್ವನಿಯಲ್ಲಿ ಬಾನಿನಿಂದ ಉದುರುವ ಹನಿಗಳಂತೆ ಭಾಸವಾಗುತ್ತವೆ. 'ಆವಾಹನೆ' ಎಂಬ ಸುಂದರ ಕವಿತೆಯ ಸಾಲುಗಳನ್ನು ಕಸ್ತೂರಿ ಶಂಕರ್ ಹಾಡುವಾಗ ತಮ್ಮ ಭಾವನೆಗಳನ್ನು ಪದಪುಂಜದಲ್ಲಿ ತುಂಬಿ ರಸವನ್ನು ಹರಿಸುತ್ತಾ ಸಾಗುತ್ತಾರೆ.

ಎಲ್ಲೋ ದೂರದಿ ಜಿನುಗುವ ಹನಿಗಳೆ

ಬನ್ನಿ ಬನ್ನಿ ಬಿರುಮಳೆಯಾಗಿ,

ತುಂಬಲಿ ತುಳುಕಲಿ ಬತ್ತಿದ ಹೊಳೆ ಕೆರೆ

ಹೊಸ ಹಸುರೇಳಲಿ ನವುರಾಗಿ !

ಎಲ್ಲೋ ದೂರದಿ ಜಿನುಗುವ ದನಿಗಳೆ

ಬನ್ನಿ ಬನ್ನಿ ರಸಗೀತೆಗಳಾಗಿ,

ಮೌನದಿ ಮಲಗಿದ ವಾದ್ಯವೃಂದಗಳ

ಮೇಲಾಡಿರಿ ಚೆಲು ಬೆರಳಾಗಿ !

ಎಲ್ಲೋ ದೂರದಿ ಮಿನುಗುವ ಕಿಡಿಗಳೆ

ಬನ್ನಿ ಬನ್ನಿ ಹೊಂಬೊಗರಾಗಿ,

ಹಣತೆ ಹಣತೆಗಳ ತುಟಿಯೊಳು ಕುಡಿನಗೆ

ಮಿಂಚಿಸಿ ಒಳ ಹೊರಗನು ಬೆಳಗಿ.

ಎಲ್ಲೋ ದೂರದಿ ಚಿಕ್ಕೆಗೆಜ್ಜೆಗಳ

ಕಟ್ಟಿ ನರ್ತಿಸುವ ಹೆಜ್ಜೆಗಳೇ

ಬನ್ನಿ ನನ್ನೆದೆಗೆ, ಲಾಸ್ಯವನಾಡಿರಿ

ಚಿಮ್ಮಲಿ ನಲವಿನ ಬುಗ್ಗೆಗಳೇ.

ಎಂದು ಕೊನೆಗೊಳ್ಳುವ ಆ ಸುಂದರ ಸಾಲುಗಳನ್ನು ಒಳಗೊಂಡ ಹಾಡಿನ ಕೊನೆಯ ಚರಣದ ಮಾಧುರ್ಯವನ್ನು ಕಸ್ತೂರಿಯವರ ಸಿರಿ ಮಧುರ ಕಂಠದಲ್ಲಿ ಆಲಿಸುವುದು ಪರಮ ಪ್ರಿಯವಾದ ಸಂಗತಿ. ಚಲನಚಿತ್ರ ವಿಶ್ಲೇಶಕ, ಎ. ಆರ್ ಮಣಿಕಾಂತ್, ಮೊದಲಿನಿಂದ ಹಾಡುಗಳನ್ನು ಹಾಡುತ್ತಾ ಬಂದಿರುವ ಸುಶೀಲಾ, ಜಾನಕಿ, ವಾಣಿಜಯರಾಂ ರವರ ಸಾಲಿನಲ್ಲಿ ಕಸ್ತೂರಿ ಶಂಕರ್, ಒಂದಾಗಿ ಸಿರಿ ಮೋಹನ ರಾಗದ ನೆನಪನ್ನು ಕೊಡುವ ಮಟ್ಟದಲ್ಲಿ ಬೆಳೆದರು. ಹಿನ್ನೆಲೆ ಗಾಯಕಿಯರಾದ. ಕಸ್ತ್ತೂರಿ ಶಂಕರ್ 'ಬೆಟ್ಟದ ಗೌರಿ' ಎಂಬ ಕನ್ನಡ ಚಲನಚಿತ್ರಕ್ಕೆ ಹಾಡಲು ಆಹ್ವಾನಿಸಿದವರು ಕಣಗಾಲ್ ಪ್ರಭಾಕರ್ ಶಾಸ್ತ್ರಿಗಳು. ಆದರೆ ಚಿತ್ರ ಬಿಡುಗಡೆಯಾಗಲಿಲ್ಲ. ಮುಂದೆ ಬಿಡುಗಡೆಯಾದ 'ಭಾಗ್ಯಜೋತಿ' ಚಿತ್ರದ 'ಗುಡಿ ಸೇರದ, ಮುಡಿ ಏರದ, ಕಡೆಗಾಣಿಸೊ ಹೂವಲ್ಲ,' ಅತ್ಯಂತ ಪರಿಣಾಮಕಾರಿಯಾಗಿತ್ತು. ಅವರ ಹಾಡುಗಾರಿಕೆ ಕೇವಲ ಚಿತ್ರರಂಗಕ್ಕೆ ಸೀಮಿತವಲ್ಲ. ಭಕ್ತಿಗೀತೆ, ಜಾನಪದ ಗೀತೆ, ರೇಡಿಯೊ ಸಂಗೀತಗಳಲ್ಲೆಲ್ಲಾ ಅವರು ತಮ್ಮ ಕೈಯ್ಯಾಡಿಸಿದ್ದಾರೆ.

ತ್ವಮೇವ ಮಾತಾ ಚ ಪಿತಾ ತ್ವಮೇವ

ತ್ವಮೇವ ಬಂಧು ಶ್ಚ ಸಖಾ ತ್ವಮೇವ

ತ್ವಮೇವ ವಿದ್ಯಾ ದ್ರವಿಣಂ ತ್ವಮೇವ

ತ್ವಮೇವ ಸರ್ವಂ ಮಮ ದೇವ ದೇವ

ಶ್ಲೋಕದಿಂದ ಆರಂಭವಾಗಿ 'ಸದಾ ಎನ್ನ ಹೃದಯದಲ್ಲಿ ವಾಸಮಾಡೊ ಶ್ರಿಹರಿ', ಎನ್ನುವ ವಿಜಯ ದಾಸರ ಕೃತಿಯ ವರೆಗೆ ಎಲ್ಲಾ ಸುಮಧುರ. ಮೈಸೂರು ಅನಂತ ಸ್ವಾಮಿ ಸುಗಮಸಂಗೀತದಲ್ಲಿ ರಾಗಸಂಯೋಜನೆ ಮಾಡಿದ, ದ.ರಾ ಬೇಂದ್ರೆಯವರ 'ನಾನು ಬಡವಿ, ಆತ ಬಡವ, ಒಲವೆ ನಮ್ಮ ಬದುಕು; ಗೀತೆಗೆ ಸುಂದರ ಧ್ವನಿಯಾದರು.

ಡಾ.ಜಿ.ಎಸ್. ಎಸ್. ರವರ ಗೀತೆ

ಬದಲಾಯಿಸಿ

ನವೋದಯದ ಕಿರಣ ಲೀಲೆ ಕನ್ನಡದೀ ನೆಲದ ಮೇಲೆ ಶುಭೋದಯವ ತೆರೆದಿದೆ - ಚಿಲುಮೆ ಚಿಮ್ಮುವುವೆದೆಗಳಲ್ಲಿ -

  • ಶೃತಿ ಸುಖ ನಿನದೆ ಈ ಕಂಗಳೇನೋ ನನ್ನವು , ಗೀತೆಗಳು, ಕಸ್ತೂರಿ ಶಂಕರ್ ರವರ ಮರೆಯಲಾರದ ಹಾಡುಗಳು. ಅವರಿಗೆ ಕನ್ನಡ ಸುಗಮ ಸಂಗೀತದ ಬಗ್ಗೆ ಒಲವು ಮೂಡಿದ್ದು, ಕಾಳಿಂಗರಾಯರ ಗೀತೆಗಳಿಂದ. ಆದರೆ ಅನಂತ ಸ್ವಾಮಿಯವರು ಕನ್ನಡದಲ್ಲಿ 'ಸುಗಮ ಸಂಗೀತ' ಹಾಡಲು ಪ್ರೇರಣೆಯಾದರು. ಕೆಳಗಿನ ಹಾಡುಗಳು ಕಸ್ತೂರಿ ಶಂಕರ್ ರವರ ಚಿತ್ರಗೀತೆಗಳ ಹಾಡುಗಾರಿಕೆಯ ಜೀವನದ ಯಶಸ್ಸಿನ ಹಾದಿಯನ್ನು ಸುಗಮಗೊಳಿಸಿದವು.
  • ರಂಗೇನ ಹಳ್ಳಿ'ಯಾಗೆ
  • 'ಬಿಳಿ ಹೆಂಡ್ತಿ ಚಿತ್ರದ ಯಾವ ತಾಯಿಯು ಹಡೆದ ಮಗಳಾದರೇನು,
  • ಓ ದ್ಯಾವ್ರೆ
  • ಡಾ. ರಾಜ್ ಕುಮಾರ್ ಜೊತೆ ಹಾಡಿದ, ಸೂರ್ಯನ ಕಾಂತಿಗೆ ಸೂರ್ಯನೇ ಸಾಟಿ,
  • ಇದು ರಾಮ ಮಂದಿರ ನೀ ರಾಮ ಚಂದಿರ,
  • ಭಾಗ್ಯ ಜ್ಯೋತಿ ಚಿತ್ರದ 'ಗುಡಿಯೇರದ ಮುಡಿ ಸೇರದ ಹೂವು', ಗೀತೆಗಳು ಅವಿಸ್ಮರಣೀಯ.

ಧ್ವನಿ ಸುರಳಿಗಳು

ಬದಲಾಯಿಸಿ
  • ನವೋದಯ ನಾಕು ತಂತಿ,
  • ಗೀತ ಮಾಧುರಿ,
  • ಕಾವ್ಯ ಕಸ್ತೂರಿ ದೀಪಿಕಾ
  • ಕೆಂದಾವರೆ ಸೌಗಂಧ

ಮೊದಲಾದ ಧ್ವನಿ ಸುರಳಿ ಜನಪ್ರಿಯವಾಗಿವೆ. ಕಸ್ತೂರಿ ಶಂಕರ್ ತಮ್ಮದೇ ಆದ ವಾದ್ಯವೃಂದದ ಮೂಲಕ, ನಾಡಿನಾದ್ಯಂತ ಕಾರ್ಯಕ್ರಮಗಳನ್ನು ಹಲವು ಬಾರಿ ಕೊಟ್ಟಿದ್ದಾರೆ. ಹಿಂದಿ ಭಾಷೆಯಲ್ಲದೆ ಇತರ ೮ ಭಾಷೆಗಳಲ್ಲಿ ಹಾಡಿದ್ದಾರೆ. ಗೌರವಪೂರ್ಣ್ಯ ವ್ಯಕ್ತಿತ್ವ., ಸಹಜ ನಗೆ, ಗಾಂಭೀರ್ಯ, ಎಲ್ಲರಜೊತೆ ಬೆರೆಯುವ ಮನೋಭಾವ, ಅವರು ಪ್ರೇಕ್ಷಕರಲ್ಲಿ ಒಂದಾಗುವ ಗುಣಗಳನ್ನು ವೃದ್ಧಿಸುತ್ತವೆ.

  1. ಉಲ್ಲೇಖ ದೋಷ: Invalid <ref> tag; no text was provided for refs named gaana1